ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದರೆ: ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಗೆ ಸೀಮಿತರಾಗದೇ ಹೆಚ್ಚಿನ ಜ್ಞಾನವನ್ನು ಪಡೆಯಲು ಉತ್ಸುಕರಾಗಿರಬೇಕು. ಕಲಿಕೆಯಲ್ಲಿ ಯಾವುದೇ ವಿಷಯದ ಬಗ್ಗೆ ಆಳವಾದ ಅಧ್ಯಯನ ಮತ್ತು ಅದರ ಸೃಜನಶೀಲ ಪ್ರಸ್ತುತಿ ಮುಖ್ಯವಾದದ್ದು. ಬದಲಾಗುತ್ತಿರುವ ಜಗತ್ತಿಗೆ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್‌ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಆಯೋಜಿಸಲಾದ ‘ಸವ್ಯಸಾಚಿ-2021’ ರಸಪ್ರಶ್ನೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಹೆಚ್ಚಿನ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪಿಯು ಹಂತವನ್ನು ಸರಿಯಾಗಿ ಗ್ರಹಿಸುವಲ್ಲಿ ಎಡವುತ್ತಾರೆ. ಮುಂದಿನ ಶಿಕ್ಷಣದ ಹಾದಿಗಳ ಬಗ್ಗೆ ಅವರಿಗೆ ಹೆಚ್ಚಿನ ಮಾಹಿತಿಯಿರುವುದಿಲ್ಲ. ಇದು ಭವಿಷ್ಯದಲ್ಲಿ ಅವರಿಗೆ ಸವಾಲಾಗಬಹುದು. ಆದ್ದರಿಂದ ಪಿಯು ಹಂತದಲ್ಲಿ ಕೌಶಲ್ಯಾಧಾರಿತ ಶಿಕ್ಷಣವನ್ನು ನೀಡಬೇಕು’ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಚಿಕ್ಕಂದಿನಿಂದಲು ಹೆತ್ತವರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ, ಆದರೆ ಪ್ರತೀ ವಿದ್ಯಾರ್ಥಿಯು 18 ವಯಸ್ಸಿನ ನಂತರ ತಾವೇನಾಗಬೇಕೆಂಬ ನಿರ್ಧಾರವನ್ನು ತಾವೇ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬ್ರಾಹ್ಮಣರು ಪ್ರತಿನಿತ್ಯವು ನಿತ್ಯನೇಮಿತ್ತಿಕ ಕರ್ಮಗಳನ್ನು ಮಾಡುವುದರಿಂದ ಮಾತ್ರ ಬ್ರಾಹ್ಮಣ್ಯ ಉಳಿಸಲು ಸಾದ್ಯ, ಬ್ರಾಹ್ಮಣರು ಧಾರ್ಮಿಕ ಆಚರಣೆಯಲ್ಲಿ ಆಶೃಧ್ಯೆ ಮತ್ತು ಉದಾಸಿನತೆ ಮಾಡಿದರೆ ರಾಕ್ಷಸಿ ಪ್ರವೃತ್ತಿಯವರು ಹಾಗೂ ವಿದ್ವಂಸಕಾರರು ಪ್ರಬಲರಾಗುತ್ತ ಹೋಗುತ್ತಾರೆ, ಇದಕ್ಕಾಗಿಯೇ ಬ್ರಾಹ್ಮಣರು ಸುಸ್ಕೃಂತ ಹಾಗೂ ಸಾತ್ವಿಕ ಸಮಾಜ ರೂಪಿಸುವ ದೊಡ್ಡ ಜವಬ್ದಾರಿಯಿದ್ದು ಸಮರ್ಪಣಾ ಮನೋಭಾವವನ್ನು ಹೊಂದಿರಬೇಕು ಎಂದು ಕುಂದಾಪುರ ತಾಲೂಕು ಹಾಲಾಡಿ ಪಿ.ಯು ಕಾಲೇಜು ಉಪನ್ಯಾಸಕ ಗಣಪತಿ ಹೆಗ್ಡೆ ಹೇಳಿದರು. ಅವರು ಉಪ್ಪುಂದ ಅರೆಹಾಡಿ ಶ್ರೀ ಜಟ್ಟಿಗೇಶ್ವರ ದೇವಸ್ಥಾನದಲ್ಲಿ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯದ 26ನೇ ವಾರ್ಷಿಕ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಪ್ರಧಾನ ಉಪನ್ಯಾಸ ನೀಡುತ್ತಾ ಪ್ರಸಕ್ತ ಸಮಾಜ ಆಧುನಿಕ ಜೀವನ ಶೈಲಿ ಮತ್ತು ಅತಿಯಾದ ಮೊಬೈಲ್ ಮತ್ತು ಟಿ.ವಿ ಬಳಕೆಯಿಂದ ಪಾರಂಪರಿಕ ಜೀವನ ಪದ್ಧತಿ ಮರೆಯಾಗುತ್ತಿದ್ದು ಯುವ ಜನಾಂಗಕ್ಕೆ ಸಂಸ್ಕ್ರತಿಕ ಮತ್ತು ಸಂಸ್ಕಾರಯುತ ಜೀವನ ಶೈಲಿಯನ್ನು ಪರಿಚಯಿಸುವ ಮಹತ್ವದ ಕಾರ್ಯ ಸಮಾಜದ ಹಿರಿಯರು ಹಾಗೂ ಸಂಘಟನೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಖ್ಯಾತ ಆಶು ಕವಯಿತ್ರಿ ಉಳ್ಳೂರು ಮೂಕಾಂಬಿಕಾ ಐತಾಳ್ ಅವರ ಬದುಕು ಮತ್ತು ಸಮಗ್ರ ಸಾಹಿತ್ಯ ‘ಮೂಕಜ್ಜಿ’ ಹೊತ್ತಗೆ ಅನಾವರಣ 14ರ ಸಂಜೆ 3.30ಕ್ಕೆ ನಾಗೂರಿನ ರಾಮಕೃಷ್ಣ ಐತಾಳ್ ಕಾಂಪೌಂಡ್‌ನ ‘ಸುಧಾಮ’ದಲ್ಲಿ ನಡೆಯುವುದು. ಯು. ಸುಬ್ರಹ್ಮಣ್ಯ ಐತಾಳ್ ಸಂಪಾದಿಸಿ, ಉಳ್ಳೂರು ಮೂಕಜ್ಜಿ ಪ್ರತಿಷ್ಠಾನ ಪ್ರಕಟಿಸಿರುವ ಈ ಕೃತಿಯನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರ ಅಧ್ಯಕ್ಷತೆಯಲ್ಲಿ ಕುಂದಾಪುರದ ಹಿರಿಯ ನ್ಯಾಯವಾದಿ ಹಾಗೂ ಸಾಹಿತಿ ಎ. ಎಸ್. ಎನ್. ಹೆಬ್ಬಾರ್ ಬಿಡುಗಡೆಗೊಳಿಸಿ, ’ಕುಂದಗನ್ನಡ ಸಾಹಿತ್ಯಕ್ಕೆ ಮೂಕಜ್ಜಿಯ ಕೊಡುಗೆ’ ಕುರಿತು ಉಪನ್ಯಾಸ ಮಾಡುವರು. ನಿವೃತ್ತ ಪ್ರಾಧ್ಯಾಪಕಿ, ಹಿರಿಯ ಲೇಖಕಿ ಡಾ. ಪಾರ್ವತಿ ಜಿ. ಐತಾಳ್ ಮೂಕಜ್ಜಿ ಸಮಗ್ರ ಸಾಹಿತ್ಯ ವಿಮರ್ಶೆ ನಡೆಸುವರು. ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಪುಸ್ತಕವನ್ನು ಪರಿಚಯಿಸುವರು. ಅಶ್ವಿನಿ ಐತಾಳ್ ಮತ್ತು ರಾಕೇಶ್ ಹೊಸಬೆಟ್ಟು ಅವರಿಂದ ಮೂಕಜ್ಜಿ ಹಾಡುಗಳ ರಸಧಾರೆ ಕಾರ್ಯಕ್ರಮ ನಡೆಯುವುದು ಎಂದು ಪ್ರತಿಷ್ಠಾನ ಪ್ರಕಟಿಸಿದೆ.…
ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿ ಬೈಂದೂರು: ತಾಲೂಕಿನ ಗೋಳಿಹೊಳೆ ಗ್ರಾಮದ ತಾಯ್ನಾಡು ಎಂಬಲ್ಲಿ ಕಾನನದ ನಡುವೆ ಕಿರು ನದಿಯ ತಟದಲ್ಲಿನ ಗುಹೆಯೊಳಕ್ಕೆ ನೆಲೆನಿಂತಿರುವ ಶ್ರೀ ಅಮೃತೇಶ್ವರಿ ಹಾಗೂ ಶ್ರೀ ಸಿದ್ದಲಿಂಗೇಶ್ವರ ಸನ್ನಿಧಿಯಲ್ಲಿ ಶಿವರಾತ್ರಿಯ ಸಂಭ್ರಮ ಮನೆಮಾಡಿತ್ತು. ಸಿದ್ಧಿ ಪುರುಷರು ಆರಾಧಿಸಲ್ಪಟ್ಟ ತಪೋಭೂಮಿ ಎಂಬ ಐತಿಹ್ಯವುಳ್ಳ ಕ್ಷೇತ್ರವು ಇತ್ತಿಚಿನ ದಿನಗಳಲ್ಲಿ ಪ್ರಸಿದ್ದಿಗೆ ಬರುತ್ತಿದ್ದು, ಶಿವರಾತ್ರಿಯಂದು ಸುತ್ತಲಿನ ಊರುಗಳ ಜನರು ದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ಶಿವರಾತ್ರಿಯ ಅಂಗವಾಗಿ ದೇವಳದಲ್ಲಿ ಗಣಹೋಮ, ದುರ್ಗಾಹೋಮ, ರುದ್ರಾಭಿಷೇಕ, ಪರಿವಾರ ದೇವರುಗಳ ಪೂಜೆ, ಭಜನಾ ಕಾರ್ಯಕ್ರ ಹಾಗೂ ಅನ್ನಸಂತರ್ಪಣೆ ವಿಶೇಷವಾಗಿ ಜರುಗಿದವು. ಶಿವರಾತ್ರಿಯ ಮುನ್ನಾದಿನ ನಾಗಸರ್ಪವೊಂದು ಭಕ್ತರಿಗೆ ಗೋಚರಿಸಿ ಮತ್ತೆ ಅದೇ ಗುಹೆಯೊಳ್ಳಕ್ಕೆ ತೆರಳಿದ್ದು ದೇವರ ಪವಾಡವೇ ಸರಿ ಎನ್ನಲಾಗುತ್ತಿದೆ. ದೇವರ ಸಾನಿಧ್ಯದಲ್ಲಿಯೇ ಸರ್ಪ ಕಾಣಿಸಿಕೊಂಡಿರುವುದು ಸ್ಥಳದ ಮಹಿಮೆ ಎನ್ನಲಾಗುತ್ತಿದೆ. ಐತಿಹ್ಯ: ಗೊಳಿಹೊಳೆ ಗ್ರಾಮದ ತಾಯ್ನಾಡು ಶ್ರೀ ಅಮೃತೇಶ್ವರಿ ಹಾಗೂ ಶ್ರೀ ಸಿದ್ದಲಿಂಗೇಶ್ವರ ಸನ್ನಿಧಿಯು ಸಹಸ್ರ ವರ್ಷಗಳಿಂದ ಸಿದ್ಧರು, ಯೋಗಿಗಳು ಹಾಗೂ ತಪಸ್ವಿಗಳಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷದಲ್ಲಿ ಶಿವರಾತ್ರಿ ಸಂಭ್ರಮ ವಿಶೇಷವಾಗಿತ್ತು. ಮುಂಜಾನೆ ನವಗ್ರಹಯುಕ್ತ ರುದ್ರಹೋಮ, ಮಹಾಮಂಗಳಾರತಿ, ಪನಿವಾರ ವಿತರಣೆ ನಡೆದವು. ರಾತ್ರಿ ನಗರೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಶಿವರಾತ್ರಿಯ ಅಂಗವಾಗಿ ಜರುಗುತ್ತದೆ. ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿದರು. ಇದನ್ನೂ ಓದಿ ► ಕೊಡಪಾಡಿ ಶ್ರೀ ಗುಹೇಶ್ವರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ – https://kundapraa.com/?p=45936 . ► ಕುಂದಾಪುರ: ಶ್ರೀ ಕುಂದೇಶ್ವರನ ಸ್ಮರಿಸಿ ಕೃತಾರ್ಥರಾದ ಭಕ್ತರು – https://kundapraa.com/?p=45940 . ► ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ – https://kundapraa.com/?p=45932 . ► ವಣಕೊಡ್ಲುವಿನಲ್ಲಿ ಶಿವಲಿಂಗ ಸ್ವರ್ಶಿಸಿ ಪುನೀತರಾದ ಭಕ್ತರು – https://kundapraa.com/?p=45943 .
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟೇಶ್ವರ: ಪರಶುರಾಮ ಸೃಷ್ಟಿಯ ಸಪ್ತ ಮೊಕ್ಷದಾಯಕ ಕ್ಷೇತ್ರಗಳ ಪೈಕಿ ಒಂದಾದ ಧ್ವಜಪುರ ಖ್ಯಾತಿಯ ಶ್ರೀ ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ದೇವರಿಗೆ ಪೂಜೆ, ಶಿವನಾಮ ಸ್ಮರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು. ದೇವರಿಗೆ ರುದ್ರಾಭಿಷೇಕ – ಜಲಾಭಿಷೇಕ – ಕ್ಷೀರಾಭಿಷೇಕ – ಬಿಲ್ವಾರ್ಚನೆ-ನಂದಾದೀಪ, ಶಿವರಾತ್ರಿಯ ಅರ್ಘ್ಯಪ್ರದಾನ – ಇತ್ಯಾದಿ ಪೂಜೆಗಳನ್ನು ನಡೆದವು. ► ಕೋಟೇಶ್ವರ ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಐತಿಹ್ಯ – https://kundapraa.com/?p=1512 .
ಕುಂದಾಪ್ರ ಡಾಟ್ ಕಾಂ ವರದಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶಿವದೇವಾಲಯಗಳಲ್ಲಿ ಶಿವಲಿಂಗ ಸ್ಪರ್ಶಪೂಜೆಯ ಏಕೈಕ ಶಿವದೇಗುಲ ಎಂಬ ಪ್ರಸಿದ್ಧಿಗೆ ಪಾತ್ರವಾದ ಬೈಂದೂರು ತಾಲೂಕಿನ ಗಂಗಾನಾಡು ಗ್ರಾಮದ ವಣಕೊಡ್ಲುವಿನ ಪುರಾತನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವದಂದು ಭಕ್ತರು ಭಕ್ತಿ-ಭಾವದೊಂದಿಗೆ ಶಿವಲಿಂಗ ಸ್ವರ್ಶಿಸಿ ಪುನೀತರಾದರು. ಬೆಳಿಗ್ಗೆ 7 ಗಂಟೆಯಿಂದಲೇ ಭಕ್ತಾದಿಗಳಿಗೆ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಮತ್ತು ಸ್ಪರ್ಶಪೂಜೆ ಆರಂಭಗೊಂಡಿದ್ದು ರಾತ್ರಿ 10 ಗಂಟೆಗೆ ದೇವರ ಸುತ್ತು ಉತ್ಸವ, ಕಟ್ಟೆಪೂಜೆ ಹಾಗೂ ಪ್ರಸಾದ ವಿತರಣೆ, ಮರುದಿನ ಶುದ್ಧಕಳಶ, ಕಲಾವೃದ್ಧಿಹೋಮ, ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ಮುಂತಾದ ಕಾರ್ಯಕ್ರಮಗಳು ನಡೆಯುತ್ತದೆ. ಈ ಭಾರಿ ಅಷ್ಟಮಂಗಲ ಪ್ರಶ್ನೆಯಂತೆ ಗರ್ಭಗುಡಿ ಸ್ವರ್ಶಿಸುವ ಭಕ್ತರಿಗೆ ದೇವಳದ ಕೆರೆಯಲ್ಲಿ ಸ್ನಾನ ಮಾಡುವುದು ಕಡ್ಡಾಯವಾಗಿತ್ತು. ಮಹಿಳೆಯರಿಗೆ ಪ್ರತ್ಯೇಕ ಸ್ನಾಹಗೃಹ ನಿರ್ಮಿಸಲಾಗಿತ್ತು. ಗರ್ಭಗುಡಿ ಪ್ರವೇಶಿಸದ ಭಕ್ತರು ದೇವರ ಉತ್ಸವ ಮೂರ್ತಿ ಸ್ಪರ್ಶಿಸಿ ಪುನೀತರಾದರು. ಭಕ್ತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದ್ದು, ನುಕುನುಗ್ಗಲು ಇರಲಿಲ್ಲ.ಕುಂದಾಪ್ರ ಡಾಟ್ ಕಾಂ ಲೇಖನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಗುಜ್ಜಾಡಿ ಗ್ರಾಮದ ಕೊಡಪಾಡಿಯ ಐತಿಹಾಸಿಕ ಶ್ರೀ ಗುಹೇಶ್ವರ ದೇವಾಲಯದಲ್ಲಿ ಶಿವರಾತ್ರಿಯ ಅಂಗವಾಗಿ ವಿಶೇಷ ಪೂಜೆ, ಶಿವನಾಮ ಸ್ಮರಣೆ ನಡೆದವು. ಐತಿಹ್ಯ: ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಕೊಡಪಾಡಿಯಲ್ಲಿನ ಈ ಐತಿಹಾಸಿಕ ಗುಹೇಶ್ವರ ದೇವಾಲಯದಲ್ಲಿ ಶಿವನ ಮೂಲ ಸಾನಿಧ್ಯಕ್ಕೊಂದು ಮೆರಗಿದೆ. 20 ಅಡಿ ಉದ್ದದ ಕಲ್ಲಿನ ಪೊಟರೆಯ ಅಂತ್ಯದಲ್ಲಿ ಉದ್ಘವಿಸಿರುವ ಈ ಶಿವಲಿಂಗದಲ್ಲೊಂದು ಬೆರಗಿದೆ. ಈಶ್ವರನೊಂದಿಗೆ ಸ್ಕಂದ ದೇವರ ಉದ್ಭವ ಸನ್ನಿಧಿಯೂ ಇದೆ. ಈ ಮೊದಲು ಶಿವರಾತ್ರಿಯಂದು ಗುಹೆಯೋಳಗಿನ ಉದ್ಭವರೂಪಿ ಗುಹೇಶ್ವರ ದರ್ಶನಕ್ಕೆ ವಿಶೇಷ ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ ಕಳೆದೆರಡು ವರ್ಷದಿಂದ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಅರ್ಚಕರು ಪೂಜೆ ಸಲ್ಲಿಸುತ್ತಾರೆ. ಪ್ರಾಚಿನ ದೇವಾಲಯಗಳಲ್ಲೊಂದಾಗ ಶ್ರೀ ಗುಹೇಶ್ವರ ದೇವಾಲಯದ ಈಶ್ವರ, ಸ್ಕಂದ, ಗಣಪತಿ ಹಾಗೂ ಅಮ್ಮನವರ ಸಾನಿಧ್ಯವಿದ್ದು ಪ್ರತಿನಿತ್ಯವೂ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಸ್ವಯಂ ಸೇವಕರು, ಗುಜ್ಜಾಡಿಯ ಯುವಕರು ಶಿವರಾತ್ರಿಯಂದು ಒಂದಾಗಿ ದೇವರ ಕಾರ್ಯದಲ್ಲಿ ಭಾಗವಹಿಸಿ ಭಕ್ತರಿಗೆ ಮಾರ್ಗದರ್ಶನ ನೀಡುತ್ತಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಪ್ರಾಚೀನ ದೇವಾಲಯಗಳಲ್ಲಿ ಒಂದೆನಿಸಿರುವ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ದೇವರಿಗೆ ಪೂಜೆ, ಶಿವನಾಮ ಸ್ಮರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು. ದೇವರಿಗೆ ರುದ್ರಾಭಿಷೇಕ – ಜಲಾಭಿಷೇಕ – ಕ್ಷೀರಾಭಿಷೇಕ – ಬಿಲ್ವಾರ್ಚನೆ-ನಂದಾದೀಪ, ಶಿವರಾತ್ರಿಯ ಅರ್ಘ್ಯಪ್ರದಾನ – ಇತ್ಯಾದಿ ಪೂಜೆಗಳನ್ನು ನಡೆದವು. ದೇವರ ದೀಪಕ್ಕೆ ಎಣ್ಣೆ ತಂದವರು ಅದನ್ನು ಉರಿಯುತ್ತಿರುವ ದೀಪದ ಸುರಿದು ದೇವರಿಗೆ ನಮಿಸುವುದು ಕಂಡುಬಂತು. ದೇವಾಲಯದ ಬಯಲು ರಂಗಮಂಟಪದಲ್ಲಿ ಭಜನಾ ಕಾರ್ಯಕ್ರಮ ಜರುಗಿತು. ರಾತ್ರಿ ಕಾಲದಲ್ಲಿ ಕುಂದೇಶ್ವರನ ಸನ್ನಿಧಿಯಲ್ಲಿ ನಡೆಯುವ ರಂಗಪೂಜೆ ಮತ್ತು ಮಹಾಮಂಗಳಾರತಿಯಲ್ಲಿ ಭಕ್ತಾದಿಗಳೆಲ್ಲ ಭಾಗವಹಿಸಿ, ಮಂತ್ರ ಪುಷ್ಪ ಸಮರ್ಪಿಸಿ, ಪ್ರಾರ್ಥನೆ ಸಲ್ಲಿಸುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಕೋಟತಟ್ಟು ಪಡುಕೆರೆಯ ಶಿರಸಿ ಮಾರಿಕಾಂಬಾ ದೇವಸ್ಥಾನದ ಬಾವಿಗೆ ವ್ಯಕ್ತಿ ಒಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಕೋಟತಟ್ಟು ಪಡುಕೆರೆಯ ಚೆನ್ನಿ ಪೂಜಾರಿ(50) ಎಂದು ಗುರುತಿಸಲಾಗಿದೆ. ಇವರು ಮಣೂರು ಪಡುಕೆರೆಯಲ್ಲಿ ಬೀಡಾ ಅಂಗಡಿ ನಡೆಸುತ್ತಿದ್ದು ಮದುವೆಯಾಗಿ ಎರಡು ಮಕ್ಕಳಿದ್ದು ಹತ್ತು ವರ್ಷ ಹಿಂದೆ ವಿಚ್ಚೆದನ ಪಡೆದಿದ್ದು ಇದರಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ದೇವಸ್ಥಾನದ ಬಾವಿಯ ಹಗ್ಗವನ್ನು ಉಪಯೋಗಿಸಿ ಬಾವಿಯೊಳಗೆ ಚೆನ್ನಿ ಪೂಜಾರಿ ಆತ್ಮಹತ್ಯೆಗೆ ಶರಣಾಗಿದ್ದರು. ಬೆಳಿಗ್ಗೆ 5.30 ಗಂಟೆಗೆ ದೇವಸ್ಥಾನದ ಭಟ್ಟರು ಪೂಜೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿಯಬೇಕಾಗಿದೆ. ಕೋಟ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
