Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಕಾರಂತ ಟ್ರಸ್ಟ್ ಉಡುಪಿ, ಯು – ಚಾನೆಲ್ ಸಹಯೋಗದಲ್ಲಿ ನಡೆಯುತ್ತಿರುವ ಡಾ. ಶಿವರಾಮ ಕಾರಂತ ಜನ್ಮ ದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ 16ನೇ ವರ್ಷದ ಸಂಭ್ರಮದ ಅಂಗವಾಗಿ ನಡೆಯುತ್ತಿರುವ ಸಾಹಿತ್ಯಿಕ – ಸಾಂಸ್ಕೃತಿಕ ಸುಗ್ಗಿ ಆಲ್ಮೋರ – 2020 ಮರೆಯಲಾಗದ ಶಬ್ಧತೀರ ಕಾರ್ಯಕ್ರಮದಲ್ಲಿ ಹತ್ತನೇ ದಿನದ ಕಾರಂತ ಚಿಂತನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಡಾ. ಸುಧಾಕರ ದೇವಾಡಿಗ ಮಾತನಾಡಿ, ಕಾರಂತರಿಗೆ ಕಾರಂತರೇ ಸಾಟಿ ಎನ್ನುವ ಮಾತಿನಂತೆ, ಕಾರಂತರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅನನ್ಯವಾದುದು, ಅವರ ಕಾದಂಬರಿಗಳು ಕೇವಲ ಮನೋರಂಜನೆಗೆ ಸೀಮಿತವಾಗಿರದೇ ಸಮಾಜವನ್ನು ತಿದ್ದಿ ತೀಡುವ ಪ್ರಯತ್ನವಿದೆ, ಕಾರಂತರು ಇನ್ನೊಮ್ಮೆ ಹುಟ್ಟಿ ಕನ್ನಡ ಸಾಹಿತ್ಯ ಪ್ರಪಂಚ ಇನ್ನಷ್ಟು ಬೆಳಗಲಿ ಎಂದು ನುಡಿದರು. ಕಾರಂತ ಚಿಂತನ ಕಾರ್ಯಕ್ರಮದ ಬಳಿಕ ನೆನಪು ಫೌಂಡೇಶನ್ ಸಾಸ್ತಾನ ಇವರಿಂದ ಸಂಗೀತ ಮಾಧುರ್ಯ ಕಾರ್ಯಕ್ರಮ ನಡೆಯಿತು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ದೇವತೆಗಳು ಮದ್ಯ ಮಾಂಸ ತಿನ್ನುವುದಿಲ್ಲ ಅಪೇಕ್ಷಿಸುವುದೂ ಇಲ್ಲ ಪ್ರಾಣಿಗಳನ್ನು ಬಲಿ ನೀಡುವುದರಿಂದ ಮದ್ಯ ಮಾಂಸಗಳ ನೈವೇದ್ಯ ಅರ್ಪಿಸುದರಿಂದ ದೇವಿ ಪ್ರಸನ್ನಳಾಗುತ್ತಾಳೆ ಎನ್ನುವುದು ಅಜ್ಞಾನದ ನಂಬಿಕೆ ಎಂದು ಅಧ್ಯಾತ್ಮಿಕ ಚಿಂತಕ ಕಾಳಿ ಚರಣ್ ಮಹಾರಾಜ್ ಹೇಳಿದರು. ಕೊಲ್ಲುರಿನ ಮುಕಾಂಬಿಕ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ ಬಳಿಕ ಅವರು ಸುದ್ದಿಗಾರೊಂದಿಗೆ ಮಾತನಾಡಿದರು, ಯಾವುದೇ ರೀತಿಯ ಜಾತಿ ಹಾಗೂ ಭಾಷಾ ವಾದಗಳು ಸರಿಯಲ್ಲ ಸಮಸ್ತ ಹಿಂದೂ ಒಂದೇ ಎನ್ನುವಭಾವನೆಗಳು ಇರಬೇಕು ಜಾತಿವಾದದಿಂದಲೇ ಅತ್ಯಾಚಾರದಂತಹ ದುಷ್ಕೃತ್ಯಗಳು ನಡೆಯುತ್ತದೆ ಎಂದರು. ಕೃಷಿ ಆಧಾರಿತ ಭಾರತದಲ್ಲಿ ಗೋವುಗಳಿಗೆ ಗೋವಿನ ಉತ್ಪನ್ನಗಳಿಗೂ ಅಂತ್ಯಂತ ಮಹತ್ವವಿದೆ ಭಾವನಾತ್ಮಕ ಸಂಬಂಧಗಳನ್ನು ಇರಿಸಿಕೊಂಡಿರಿರುವ ಗೋವುಗಳನ್ನು ರಕ್ಷಿಸುವ ಅನಿವಾರ್ಯತೆ ಇದೆ. ಭಾರತಿಯ ತಳಿಯ ಗೋವುಗಳನ್ನು ರಕ್ಷಣೆ ಮಾಡುವ ಕಾರ್ಯಗಳು ದೇಶದಲ್ಲಿ ಹೆಚ್ಚಾಗಬೇಕು ದೇಶಿಯ ಗೋವುಗಳಲ್ಲಿ ಔಷದ ಗುಣಗಳ ಮಹತ್ವವಿದೆ ಗೋವುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅಗತ್ಯ ಕಾನೂನು ಜಾರಿಯಾಗಬೇಕು ಎಂದು ಕಾಳಿ ಚರಣ್ ಮಹಾರಾಜ್ ಹೇಳಿದರು. ಉದ್ಯಮಿ ಗುರ್ಮೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಂಡ್ಸೆಯಲ್ಲಿ ಮಹಿಳೆಯರ ಸ್ವಾವಲಂಬನಾ ಹೊಲಿಗೆ ವೃತ್ತಿ ತರಬೇತಿ ಕೇಂದ್ರ ವನ್ನು ರಾತ್ರಿ ಕಾಲದಲ್ಲಿ ಸ್ಥಳಾಂತರ ನೆಪದಲ್ಲಿ ಮುಚ್ಚಿಸಿರುವುದು ಖಂಡನೀಯ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಗೆ ಸಮೀಪದ ಕಟ್‌ಬೇಲ್ತೂರು ಗ್ರಾಮ ಪಂಚಾಯಿತಿ ಬಳಿಯಲ್ಲಿ ತಾಲೂಕು ಪಂಚಾಯತ್ ರಾಜ್ ಒಕ್ಕೂಟ, ರಾಜ್ಯ ದಲಿತ ಸಂಘರ್ಷ ಸಮಿತಿ, ತಾಲೂಕು ಸಮಿತಿ ಕುಂದಾಪುರ ಹಾಗೂ ಇತರ ಸಂಘಟನೆಗಳ ಆಶ್ರಯದಲ್ಲಿ ವಂಡ್ಸೆಯ ಸ್ವಾವಲಂಬನಾ ಹೋಲಿಗೆ ತರಬೇತಿ ಕೇಂದ್ರವನ್ನು ಮುಚ್ಚಿಸಿರುದನ್ನು ಖಂಡಿಸಿ ಸರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು ಶೀರ್ಘ ಗ್ರಾಮ ಪಂಚಾಯಿತಿ ಹಾಗೂ ಅಧಿಕಾರಿಗಳ ಸಭೆ ನೆಡೆಸಿ ಬದುಕು ಕಟ್ಟಿಕೊಂಡಿದ್ದ ಮಹಿಳೆಯರಿಗೆ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಉದಯ್ ಕುಮಾರ ತಲ್ಲೂರು ಮಾತನಾಡಿ ಮಹಿಳೆಯರಿಗೆ ಹಾಗೂ ಶೋಷಿತ ಜನರಿಗೆ ಅನ್ಯಾಯವಾದರೆ ನಮ್ಮ ಸಮಿತಿಯ ಮೂಲಕ ರಾಜ್ಯಾದ್ಯಂತ ಹೋರಾಟ ಸಂಘಟಿಸುತ್ತೇವೆ ಎಂದು ಎಚ್ಚರಿಸಿದರು. ಜಿಲ್ಲಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾರ್ಯಕರ್ತರ ಶ್ರಮದಿಂದ ವಿಸ್ತಾರವಾಗಿ ಬೆಳೆದಿರುವ ಬಿಜೆಪಿ ಪಕ್ಷದ ಕಾರ್ಯಕರ್ತರಲ್ಲಿ ಮೇಲೆ ಕೆಳಗೆ ಎನ್ನುವ ಭೇದಭಾವ ವಿಲ್ಲ ಎಲ್ಲರಿಗೂ ಸಮಾನ ಅವಕಾಶ ಗಳಿರುದರಿಂದಲೇ ಸಾಮಾನ್ಯ ಕಾರ್ಯಕರ್ತನಾಗಿದ್ದ ನಾನು ಇಂದು ಶಾಸಕನಾಗಿದ್ದೆನೆ ಎಂದು ಮೂಲ್ಕಿ ಪಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಇಲ್ಲಿಗೆ ಸಮೀಪದ ಕೋಟೇಶ್ವರದಲ್ಲಿ ಮಂಗಳವಾರ ಕುಂದಾಪುರ ಬಿಜೆಪಿ ಮಂಡಲದ ವಿಶೇಷ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಿಷ್ಠಾವಂತ ಕಾರ್ಯಕರ್ತರ ಶ್ರಮದಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಪ್ರಬಲವಾಗಿ ಬೆಳೆದಿದೆ ಕುಟುಂಬ ರಾಜಕಾರಣ ಬೆಂಬಲ ಇಲ್ಲಲದ ವ್ಯಕ್ತಿಗಳು ದೇಶದ ಪ್ರಧಾನಿ ಹಾಗೂ ರಾಷ್ಟ್ರಾಧ್ಯಕ್ಷರ ಸ್ಥಾನವನ್ನು ಅಲಂಕರಿಸಲು ಬಿಜೆಪಿಯಲ್ಲಿ ಮಾತ್ರ ಸಾಧ್ಯವಾಗುತ್ತದೆ ಪಕ್ಷ ವಿಶ್ವಾಸ ಇರಿಸಿ ನೀಡಿರುವ ಜವಾಬ್ದಾರಿಗಳಿಗೆ ಚ್ಯುತಿ ಬಾರದೆ ಇರುವಂತೆ ಹುದ್ದೆಯ ನಿರ್ವಹಣೆ ಮಾಡಬೇಕಾದ ಅಗತ್ಯತೆ ಇದೆ ಎಂದರು ಕುಂದಾಪುರ ಕ್ಷೇತ್ರ ಬಿಜೆಪಿ ಮಣಡಲದ ಅಧ್ಯಕ್ಷ ಶಂಕರ್ ಅಂಕದಕಟ್ಟೆ ಅಧ್ಯಕ್ಷತೆ ವಹಿಸಿದ್ದರು ಮಂಗಳೂರು ಪ್ರಭಾರಿ ಗೋಪಾಲಕೃಷ್ಣ ಹೇರ್ಳೆ ಆತ್ಮ ನಿರ್ಭರ ಭಾರತ ಕುರಿತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅತೀ ಹೆಚ್ಚಿನ ಪಂಚಾಯತ್‌ಗಳ ಜಯ ಸಾಧಿಸಲಿದೆ. ಬಿಜೆಪಿ ಬೆಂಬಲಿತರು ಅಧಿಕಾರಕ್ಕೆ ಬರಲಿದ್ದಾರೆ ಎಂದು ಬೈಂದೂರು ಕ್ಷೇತ್ರದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ಅವರು ಚಿತ್ತೂರಿನಲ್ಲಿ ನಡೆದ ವಿಶೇಷ ಕಾರ್ಯಕಾರಿಣಿ ಸಭೆಯನ್ನುದ್ದೆಶಿಸಿ ಮಾತನಾಡಿದರು. ವಂಡ್ಸೆ ಸ್ವಾವಲಂಬನಾ ಕೇಂದ್ರ ವಿಚಾರ ಪ್ರಸ್ತಾವಿಸಿದ ಅವರು, ಸರ್ಕಾರಿ ಕಟ್ಟಡದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಮತಿಯಿಲ್ಲದೇ ಪಂಚಾಯತ್ ಅಧಿಕಾರ ಅಧಿಕಾರ ನಿರ್ವಹಣೆ ಮಾಡುವಂತಿಲ್ಲ. ಖಾಸಗಿಯಾಗಿ ನಾಲ್ಕಾರು ಜನ ಹುಡುಗಿಯರು ಹೊಲಿಗೆ ತರಬೇತಿ ಮಾಡುತ್ತಿದ್ದರು. ಅವರಿಗೆ ಬೇರೆ ಕಡೆ ಪುನರ್ವಸತಿ ಕಲ್ಪಿಸಲಾಗಿದೆ. ಮಹಿಳೆಯರನ್ನು ಬೀದಿ ಪಾಲು ಮಾಡಿದ್ದಾರೆ ಎನ್ನುವ ಆರೋಪಗಳಿಗೆ ಹುರುಳಿಲ್ಲ. ನಾನು ಬೈಂದೂರು ಕ್ಷೇತ್ರದಲ್ಲಿ ಜನರ ಪರವಾಗಿ ಕೆಲಸ ಮಾಡುತ್ತಿದ್ದೇನೆ ಎನ್ನುವುದನ್ನು ಜನ ಗುರುತಿಸಿದ್ದಾರೆ ಎಂದರು. ಬಿಜೆಪಿ ವಿಭಾಗೀಯ ಸಂಚಾಲಕ ಉದಯ ಕುಮಾರ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಉಪಾಧ್ಯಕ್ಷ ಶ್ರೀಶ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮುಂಬೈ: ಭಾರತ್ ಕೋ-ಅಪರೇಟಿವ್ ಬ್ಯಾಂಕ್ ನ ಮಾಜಿ ಅಧ್ಯಕ್ಷ, ಬಿಲ್ಲವರ ಮಹಾಮಂಡಲದ ಸ್ಥಾಪಕಾಧ್ಯಕ್ಷ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೂಲ್ಕಿ ಜಯ ಸಿ. ಸುವರ್ಣ (82) ಬುಧವಾರ ಬೆಳಗ್ಗಿನ ಜಾವ ಮುಂಬೈಯಲ್ಲಿ ನಿಧನರಾಗಿದ್ದಾರೆ. ಮುಂಬಯಿಯಲ್ಲಿ ಹೊಟೇಲ್ ಉದ್ಯಮಿಯಾಗಿರುವ ಜಯ ಸಿ.ಸುವರ್ಣ ಅವರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಮುಂಬಯಿ ಭಾರತ್ ಕೋ-ಅಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾಗಿ, ಅಭಿವೃದ್ಧಿಯ ರೂವಾರಿಯಾಗಿದ್ದರು. ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿಯವರ ನಿಕಟವರ್ತಿ, ಎಲ್ಲಾ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದಂತಹ ಕೊಡುಗೈದಾನಿ, ಬಿಲ್ಲವ ಭವನ ಮುಂಬಯಿ ಮತ್ತು ಮಹಾಮಂಡಲ ಭವನ ಮುಲ್ಕಿ ಇದರ ನಿರ್ಮಾತೃ ಆಗಿದ್ದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಪಾರ ಭಕ್ತರಾಗಿರುವ ಇವರು ಕುದ್ರೋಳಿ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ರಮ ಸೇರಿದಂತೆ ಪ್ರತಿಯೊಂದು ಕಾರ್ಯಕ್ರಮದಲ್ಲೂ ಮುಂಚೂಣಿಯಲ್ಲಿದ್ದು ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಮೃತರ ಅಂತ್ಯಕ್ರಿಯೆ ಇಂದು (ಅ.21) ಮಧ್ಯಾಹ್ನ 3 ಗಂಟೆಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ:  ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಕಾರಂತ ಟ್ರಸ್ಟ್ ಉಡುಪಿ, ಯು – ಚಾನೆಲ್ ಸಹಯೋಗದಲ್ಲಿ ನಡೆಯುತ್ತಿರುವ ಡಾ. ಶಿವರಾಮ ಕಾರಂತ ಜನ್ಮ ದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ 16ನೇ ವರ್ಷದ ಸಂಭ್ರಮದ ಅಂಗವಾಗಿ ನಡೆಯುತ್ತಿರುವ ಸಾಹಿತ್ಯಿಕ – ಸಾಂಸ್ಕೃತಿಕ ಸುಗ್ಗಿ ಆಲ್ಮೋರ – 2020 ಮರೆಯಲಾಗದ ಶಬ್ಧತೀರ ಕಾರ್ಯಕ್ರಮದಲ್ಲಿ ಎಂಟನೇ ದಿನದ ಕಾರಂತ ಚಿಂತನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರದಲ್ಲಿ ಸಾಹಿತಿ ವಿಠ್ಠಲ್ ವಿ. ಗಾಂವ್ಕರ್ ಮಾತನಾಡಿ, ಕಾರಂತರು ನೋಬೆಲ್ ಪ್ರಶಸ್ತಿಗೆ ಆರ್ಹರು ಅವರ ಕಾದಂಬರಿಯಲ್ಲಿ ಹೆಚ್ಚಾಗಿ ಬಡತನ, ಹೋರಾಟ, ಪರಿಸರದ ಬಗ್ಗೆ ಕಾಳಜಿ ಕಾಣುತ್ತದೆ, ಅಲ್ಲದೇ ಅವರ ಮನಸ್ಸು ಯಾವಾಗಲೂ ಹೊಸತನದತ್ತ ಹಾತೊರೆಯುತ್ತಿತ್ತು ಎಂದು ಹೇಳಿದರು. ಕಾರಂತ ಚಿಂತನ ಕಾರ್ಯಕ್ರಮದ ಎಸ್. ಪಿ. ಮ್ಯೂಸಿಕಲ್ ಕುಂದಾಪುರ ಇವರಿಂದ ಸಂಗೀತ ಸಿಂಚನ ಕಾರ್ಯಕ್ರಮ ನಡೆಯಿತು. ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ನಿರೂಪಿಸಿ ಕಾರಂತ್ ಥೀಮ್ ಪಾರ್ಕ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಬಿದ್ಕಲ್ ಕಟ್ಟೆ ನಿವಾಸಿ ಶಾಂತಾರಾಮ ಮೋಗವೀರ  ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಕುಟುಂಬ ಸಂಕಷ್ಟಕ್ಕೀಡಾಗಿದೆ. ಸಮಾಜಸೇವೆ ರಕ್ತದಾನದಲ್ಲಿ ತೊಡಗಿಸಿಕೊಂಡಿದ್ದ ಅವರಿಂದು ಹಾಸಿಗೆ ಹಿಡಿದಿದ್ದಾರೆ. ಈವರೆಗೆ 20ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿ ಹಲವರಿಗೆ ಜೀವದಾನ ಮಾಡಿದವರು. ದೈನಂದಿನ ದುಡಿಮೆಯ ಮೂಲಕ ಪತ್ನಿ ಪುತ್ರಿ ಹಾಗೂ ತಾಯಿಯನ್ನೊಳಗೊಂಡ ಸಂಸಾರದ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದ ಇವರೀಗ ತನಗಿರುವ ಕಾಯಿಲೆಗೆ ಸೂಕ್ತ ಚಿಕಿತ್ಸೆ ಪಡೆಯಲಾಗದ ಕಷ್ಟ ಎದುರಿಸುತ್ತಿದ್ದಾರೆ. ಕಿಡ್ನಿ ಚಿಕಿತ್ಸೆಗಾಗಿ ಮಣಿಪಾಲ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರು ವಾರದಲ್ಲಿ 2 ಬಾರಿ ಡಯಾಲಿಸ್ ಮಾಡಬೇಕಾದೆ. ಅದಕ್ಕಾಗಿ ಸಾವಿರಾರು ರೂ. ವ್ಯಯಿಸಬೇಕಾಗಿದೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತುರ್ತು ಕಿಡ್ನಿ ರಿಪ್ಲೇಸ್ಮೆಂಟ್‌ಗೆ ಶಿಪಾರಸು ಮಾಡಿಸಿದ್ದು ಅದಕ್ಕಾಗಿ 17 ಲಕ್ಷ ರೂ. ಬೇಕಾಗಬಹುದು ಎಂದು ತಿಳಿಸಿದ್ದಾರೆ. ದಿನದ ದುಡಿಮೆಯಿಂದ ಬದುಕುತ್ತಿರುವ ಇವರ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗೆ ಆರ್ಥಿಕ ತೊಂದರೆ ಎದುರಾಗಿದ್ದು ಸಹೃದಯರ ನೆರವಿನ ಆಪೇಕ್ಷಿಸಿದ್ದಾರೆ ದುಡಿಯುವ ವ್ಯಕ್ತಿ ಹಾಸಿಗೆ ಹಾಸಿಗೆ ಹಿಡಿದಿದ್ದರಿಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಈ ಬಾರಿಯ ನೀಟ್ ಪರೀಕ್ಷಾ ಫಲಿತಾಂಶದಲ್ಲಿಆಳ್ವಾಸ್ ಪದವಿ ಪೂರ್ವ ಕಾಲೇಜಿನ 8 ವಿದ್ಯಾರ್ಥಿಗಳು 650 ಅಂಕಗಳಿಗಿಂತ ಅಧಿಕ, 37 ಮಂದಿ 600 ಅಂಕಗಳಿಗಿಂತ ಅಧಿಕ, 500ರಿಂದ 600 ಅಂಕಗಳ ಒಳಗಡೆ, 139 ಮಂದಿ, 400ರಿಂದ 500 ಅಂಕಗಳ ಒಳಗಡೆ 203 ವಿದ್ಯಾರ್ಥಿಗಳು, 300-400 ಅಂಕಗಳ ಒಳಗಡೆ 535 ವಿದ್ಯಾರ್ಥಿಗಳು ಅಂಕ ಗಳಿಸಿದ್ದು, ಒಟ್ಟು 914 ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ದಾಖಲಿಸಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. 720 ಅಂಕಗಳಲ್ಲಿ ಅರ್ನವ್ ಅಯ್ಯಪ್ಪ(685) ಅನಘ್ರ್ಯ ಕೆ(683)ಪಿ.ಎಸ್.ರವೀಂದ್ರ (670) ಖುಷಿ ಚೌಗಲೆ(661)ಪೂಜಾ ಜಿ.ಎಸ್ (656)ಚಂದುಸಾಬ್ ದಿವಾನ್ಸಾಬ್ ಪೈಲ್ವಾನ್ (651) ಚಿನ್ಮಯಿ ಆರ್.( 650) ವರುಣ್ ತೇಜ್ ವೈ.ಡಿ( 650) ಅನಘ ತೆನಗಿ( 647), ಅಂತರ್ಯಾ ಎನ್(646), ಕಲ್ಪನಾ(642), ದೆವಿನ್ ಪ್ರಜ್ವಲ್ ರೈ(641), ಅಭಿಷೇಕ್ ಸಂಗಪ್ಪ(640), ಅವಿನಾಶ್(637), ಯಶ್ವಿನಿ(636), ಅಮೃತೇಶ್(636), ತೇಜಸ್(634), ದರ್ಶನ್(632), ಗಣೇಶ್(632), ದೀಪಕ್ ಬಾಬು(626), ಪ್ರಮೋದ್(625),…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷ  ದಿನಕರ ಬಾಬು, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ನವೆಂಬರ್ 1 ರಿಂದ ಕಡ್ಡಾಯವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಿಸುವ ಕುರಿತಂತೆ ಎಲ್ಲಾ ಪಿ.ಡಿ.ಓಗಳು ಹಾಗೂ ತಾ.ಪಂ.ಕಾರ್ಯ ನಿರ್ವಹಣಾಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಪ್ಲಾಸ್ಟಿಕ್ ನಿಷೇಧ ಕಾಯಿದೆ 2006 ರಲ್ಲಿ ಜಾರಿಯಾಗಿದ್ದರೂ ಸಹ ಗ್ರಾಮೀಣ ಪ್ರದೇಶದಲ್ಲಿ ಈ ಬಗ್ಗೆ ಆದೇಶ ಪಾಲನೆ ನಡೆಯುತ್ತಿಲ್ಲ, ಅಂಗಡಿಗಳಲ್ಲಿ, ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಪ್ಲಾಸ್ಟಿಕ್ ಚೀಲಗಳನ್ನು ನೀಡುತ್ತಿರುವುದು ಕಂಡು ಬರುತ್ತಿದೆ, ಪ್ಲಾಸ್ಟಿಕ್‌ಗೆ ಪರ್ಯಾಯ ವಸ್ತುಗಳು ಇದ್ದರೂ ಸಹ ಅವುಗಳ ಬಳಕೆ ನಡೆಯುತ್ತಿಲ್ಲ, ಅದ್ದರಿಂದ ನವೆಂಬರ್ 1 ರಿಂದ ಪ್ಲಾಸ್ಟಿಕ್ ಬಳಸುವವರ ವಿರುದ್ಧ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಕಡ್ಡಾಯವಾಗಿ ದಂಡ ದಾಖಲಿಸಿ, ಈ ಬಗ್ಗೆ ಗ್ರಾಮಗಳಲ್ಲಿ ಇಂದಿನಿಂದಲೇ ಜಾಗೃತಿ ಮೂಡಿಸುವಂತೆ ಹೇಳಿದರು. ತಾರಸಿ ತೋಟ ನಿರ್ವಹಣೆ ಕುರಿತಂತೆ ಜಿಲ್ಲಾ ತೋಟಗಾರಿಕೆ ಇಲಾಖೆ ಕಟ್ಟಡದ…

Read More