ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗುರುಕೃಪಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ೨೫ನೇ ವಾರ್ಷಿಕ ಮಹಾಸಭೆಯು ಕೊಟೇಶ್ವರದ ಸಂಘದ ಕಚೇರಿಯಲ್ಲಿ ಜರುಗಿತು. ಸಂಘದ ಅಧ್ಯಕ್ಷ ಶ್ರೀನಿವಾಸ್ ಪ್ರಭು ಹುಣ್ಸೆಮಕ್ಕಿ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಎಂ ದಯಾನಂದ್ ರಾವ್ ಕುಂದಾಪುರ, ಸದಾಶಿವ ಶೇಟ್ ಕೋಟೇಶ್ವರ, ಕೆ ಅಣ್ಣಪ್ಪ ನಾಯ್ಕ್ ಸೇನಾಪುರ, ಕೆ ಕೋಣಿ ವೆಂಕಟೇಶ್ ನಾಯ್ಕ್ ಬೈಂದೂರು, ಕೆ ರಾಮಚಂದ್ರ ಶೇಟ್ ನೆಲ್ಲಿಕಟ್ಟೆ, ರೂಪಾ ಬಿ ಶೇಟ್ ಕೋಟೇಶ್ವರ, ಲತಾ ಎಲ್ ಶೇಟ್ ವಕ್ವಾಡಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕುಂದಾಪುರ ತಾಲೂಕು ವೈಶ್ಯವಾಣಿ ಸಮಾಜದ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದ ಕಾರ್ಯದರ್ಶಿ ಗಣಪತಿ ನಾಯ್ಕ ಕೋಣಿ ವಾರ್ಷಿಕ ವರದಿ ವಾಚಿಸಿದರು. ರಾಜೇಶ್ ನಾಯಕ್ ಕುಂದಾಪುರ ಕಾರ್ಯಕ್ರಮ ನಿರ್ವಹಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಪ್ರಜೆಗಳು ಸಮಸ್ಯೆಗೆ ತಲೆಬಾಗದೇ ಕಾನೂನಿನ ನೆರವು ಪಡೆದುಕೊಳ್ಳಬೇಕೆಂದು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಹೇಳಿದರು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ದ.ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮೂಡುಬಿದಿರೆ ವಕೀಲರ ಸಂಘ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಆಳ್ವಾಸ್ ಕಾಲೇಜಿನ ನುಡಿಸಿರಿ ವೇದಿಕೆಯಲ್ಲಿ ಗುರುವಾರ ನಡೆದ ಕಾನೂನು ಸೇವಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಾಲಯಗಳು ಇಲ್ಲದಿರುವುದರಿಂದ ಪ್ರಕರಣಗಳು ಬಾಕಿ ಉಳಿದಿದೆ. ಹಾಗಂತ ಭಾರತದ ಯಾವ ಪ್ರಜೆಯೂ ಸಮಸ್ಯೆಗೆ ತಲೆಬಾಗದೇ, ಕಾನೂನಿನ ಮೂಲಕ ಪರಿಹಾರ ಪಡೆದುಕೊಳ್ಳಬೇಕು. ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣಗಳು ಕಡಿಮೆ ಇದ್ದಷ್ಟು ಸಮಾಜ ಸ್ವಸ್ಥ ಹಾಗೂ ಆರೋಗ್ಯಕರವಾಗಿದೆ ಎಂಬ ಸಂದೇಶ ಸಿಗುತ್ತದೆ. ಹಾಗೆಯೇ ಸಿವಿಲ್ ಪ್ರಕರಣಗಳು ಹೆಚ್ಚಾದಷ್ಟು, ಕಾನೂನಿನ ನೆರವು ಪಡೆಯಲು ಜನರು ಮುಂದಾಗಿದ್ದಾರೆ ಎಂದು ತಿಳಿಯುತ್ತದೆ ಎಂದರು. ಯಾವುದೇ ಯೋಜನೆಗಳು ಅನುಷ್ಠಾನಗೊಂಡಾಗ, ಮೊದಲು ಅದರ ಕುರಿತು ಜನರಲ್ಲಿ ಅರಿವು ಮೂಡಿಸು ಕಾರ್ಯಕ್ರಮ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಧ್ಯೇಯೋದ್ದೇಶ ಮರುನವೀಕರಣ ಎಂಬ ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಜಿ.ಆರ್.ಐ.ಡಿ ಇದರ ಉಪಾಧ್ಯಕ್ಷರು, ವಿವಿಧ ಶೈಕ್ಷಣಿಕ ಸಂಸ್ಥೆಗಳ ಸಲಹೆಗಾರರೂ ಆದ ಜಯಪ್ರಕಾಶ್ ರಾವ್ ಹಾಗೂ ವಸಂತ್ ಕೇದಿಗೆ ಇವರು ಆಗಮಿಸಿದ್ದರು. ಕಾಲೇಜಿನ ಧ್ಯೇಯೋದ್ದೇಶ, ಗುರಿ ಹಾಗೂ ಮೌಲ್ಯಗಳನ್ನು ವೃದ್ಧಿಸುವಲ್ಲಿ ಪ್ರಾಧ್ಯಾಪಕರಾಗಿ ತಮ್ಮನ್ನು ತಾವು ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ವಿವರಿಸಿದ್ದಲ್ಲದೆ ವಿವಿಧ ಚಟುವಟಿಕೆಗಳನ್ನು ನೀಡುವುದರ ಮೂಲಕ ಮನದಟ್ಟು ಮಾಡಿಕೊಟ್ಟರು. ಕಾಲೇಜಿನ ಅಧ್ಯಕ್ಷರಾದ ಸಿದ್ಢಾರ್ಥ ಜೆ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರರಾವ್ ಮದಾನೆ, ಉಪ ಪ್ರಾಂಶುಪಾಲ, ಡೀನ್, ವಿಭಾಗದ ಮುಖ್ಯಸ್ಥರು, ಅಧ್ಯಾಪಕರು ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು. ಕಾಲೇಜಿನ ಅಕಾಡೆಮಿಕ್ ಡೀನ್ ಡಾ|ಪ್ರತಿಭ ಪಟೇಲ್ ಕಾರ್ಯಕ್ರಮ ನಿರ್ವಹಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶ್ರೀ ಸೇನೆಶ್ವರ ಕ್ರೀಡಾ ಮತ್ತು ಕಲಾ ಸಂಘ (ರಿ) ಬೈಂದೂರು ಇದರ ಮೂರನೇ ವರ್ಷದ ವಾರ್ಷಿಕ ಸಭೆ ನಡೆಯಿತು. ಈ ಸಂದರ್ಭ ಅಧ್ಯಕ್ಷರಾಗಿ ಸಂತೋಷ್ ಪೂಜಾರಿ ಜೇಡಿ ಅವರನ್ನು ಪುನರಾಯ್ಕೆ ಮಾಡಲಾಯಿತು. ಗೌರವದ್ಯಕ್ಷರಾಗಿ ಸುಧಾಕರ ಶೆಟ್ಟಿ ಮತ್ತು ಕಾರ್ಯದರ್ಶಿಯಾಗಿ ಸುಕುಮಾರ್ ಶೆಟ್ಟಿಯವರನ್ನು ಮುಂದುವರಿದಿದ್ದಾರೆ. ಸಂಘದ ಸಂಸ್ಥಾಪಕರಾದ ರಾಮಕೃಷ್ಣ ದೇವಾಡಿಗ, ಉಪಾಧ್ಯಕ್ಷರಾದ ಸಂದೀಪ್ ಮೊಗವೀರ ಹಾಗೂ ಖಜಾಂಚಿಯಾದ ಗೌರೀಶ್ ಹುದಾರ್ ಮತ್ತು ಸದಸ್ಯರಾದ ಬಾಬು ರಾವ್, ಅಶೋಕ್ ಪೂಜಾರಿ, ಚಂದ್ರ ಪೂಜಾರಿ ಜಗದೀಶ್ ದೇವಾಡಿಗ, ಶಶಿ ಯೋಜನನಗರ, ರಾಘವೇಂದ್ರ ಮೊಗವೀರ, ಸೀತಾರಾಮ್ ಶ್ರೀಯಾನ್, ನಟೇಶ್, ಅಮರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಡಿ.30: ಮೊಬೈಲ್ ಆ್ಯಪ್ ಮೂಲಕ ಮಾಡಿಕೊಂಡ ಸಾಲ ಮರುಪಾವತಿಸಲಾಗದೇ, ಕಂಪೆನಿ ಉದ್ಯೋಗಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೆಮ್ಮಾಡಿ ಗ್ರಾಮದಲ್ಲಿ ನಡೆದಿದೆ. ಹರೆಗೋಡು ಕೊಳಹಿತ್ಲು ನಿವಾಸಿ ಸಂಜೀವ ದೇವಾಡಿಗ ಎಂಬುವವರ ಪುತ್ರ ವಿಘ್ನೇಶ್ ದೇವಾಡಿಗ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ವಿಘ್ನೇಷ್ ತಾಯಿ ಇಂದು ಬೆಳಿಗ್ಗೆ ಐದು ಗಂಟೆ ಸುಮಾರಿಗೆ ಎದ್ದು ನೋಡುವಾಗ ಮನೆಯ ಬಾಗಿಲು ತೆರೆದಿತ್ತು. ಅನುಮಾನಗೊಂಡು ಹೊರಗಡೆ ಬಂದು ನೋಡಿದಾಗ ಮನೆ ಎದುರಿನ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿತ್ತು. ಕೊಳಹಿತ್ಲು ನಿವಾಸಿ ಸಂಜೀವ ಹಾಗೂ ಕನಕ ದಂಪತಿಗಳ ನಾಲ್ವರು ಮಕ್ಕಳಲ್ಲಿ ಎರಡನೇಯವನಾದ ವಿಘ್ನೇಶ್ ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು ಲಾಕ್ ಡೌನ್ ಬಳಿಕ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ಸ್ನೇಹಿತನೊಂದಿಗೆ ಸೇರಿ ಬ್ರಹ್ಮಾವರ ಸಮೀಪ ಚಪ್ಪಲಿ ಹೋಲ್ ಸೆಲ್ ಶೋರೂಂ ಆರಂಭಿಸಿದ್ದು, ಉದ್ಯಮಕ್ಕೆ ಬಂಡವಾಳ ಹಾಕುವ ಉದ್ದೇಶದಿಂದ ಮೊಬೈಲ್ ಆ್ಯಪ್ ಫೈನಾನ್ಸ್ ಮೂಲಕ ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ. ವ್ಯವಹಾರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗೊಂಬೆಯಾಟ ಟ್ರಸ್ಟ್ ನ ಬೆಳ್ಳಿ ಹಬ್ಬದ ಸಂಭ್ರಮ ಹಾಗೂ ಸೂತ್ರಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಜನ್ಮ ಶತಮಾನೋತ್ಸವದ ಅಂಗವಾಗಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆಮನೆಯಲ್ಲಿ ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ನಿರಂತರ ಸರಣಿ ಕಾರ್ಯಕ್ರಮದಡಿ 68 ನೇ ತಿಂಗಳ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ನಿವೃತ್ತ ಪ್ರಾಂಶುಪಾಲ ಎಮ್. ರತ್ನಾಕರ ಪೈ, ವಸಂತಿ ಆರ್. ಪಂಡಿತ್, ಯಕ್ಷಗಾನ ಭಾಗವತ ಉಮೇಶ್ ಸುವರ್ಣ, ರೇವತಿ ಸುವರ್ಣ, ಶಿಕ್ಷಕ ಉದಯ ಭಂಡಾರ್ಕಾರ್, ಮಾಲತಿ ಪಿ. ಬಂಗೇರ, ಸುಜಾತಾ ಎನ್. ಕುಂದರ್ ಮತ್ತು ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ರಾಮ ಭಜನಾ ಮಂದಿರ ಮಹಿಳಾ ತಂಡ, ಬೀಜಾಡಿ, ಗೋಪಾಡಿ ಇದರ ಮುಖ್ಯಸ್ಥೆ ಮಾಲತಿ ಪಿ. ಬಂಗೇರ ಮತ್ತು ಶ್ರೀ ರಾಮ ನಾಮ ಸಂಕೀರ್ತನ ಮಹಿಳಾ ಭಜನಾ ಮಂಡಳಿ, ಕುಂಭಾಶಿಯ ಮುಖ್ಯಸ್ಥೆ ಸುಜಾತಾ ಎನ್. ಕುಂದರ್ ಇವರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು. ಹಾವೇರಿಯ ಮಹಾಂತೇಶ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಸ್ವಾರ್ಥ ರಹಿತ ಸಹಕಾರ ತತ್ವದ ಅಳವಡಿಕೆಯಿಂದ ಸಹಕಾರಿ ಸಂಸ್ಥೆಗಳು ಸದೃಢವಾಗಿ ಬೆಳವಣಿಗೆ ಹೊಂದಲು ಸಾಧ್ಯವಿದೆ. ಸಹಕಾರ ಮನೋಭಾವ ಹಾಗೂ ಅತ್ಯುತ್ತಮ ಸೇವೆ ಮೂಲಕ ಯಶಸ್ವಿಯಾಗಿ ೧೦೦ ವರ್ಷ ಪೂರ್ಣಗೊಳಿಸಿದ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು ಇಂತಹ ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆ ಮತ್ತಷ್ಟು ಬೆಳೆದು ಜನರಿಗೆ ಇದರಿಂದ ಪ್ರಯೋಜನ ದೊರೆಯುವಂತಾಗಲಿ ಎಂದು ಹಿರಿಯ ಸಹಕಾರಿ ಗಿಳಿಯಾರು ಶ್ರೀಧರ ಸೋಮಯಾಜಿ ಹೇಳಿದರು. ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿಯಮಿತದ ಬೈಲೂರು ಮಂಜುನಾಥ ಶೆಣೈ ಸಭಾಭವನದಲ್ಲಿ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನವೀಕೃತ ವೆಬ್ಸೈಟ್ನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರಿಯ ಅಧ್ಯಕ್ಷ ಎಚ್.ಗಣೇಶ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಬ್ಯಾಂಕ್ ಗಂಗೊಳ್ಳಿ-೨ ಶಾಖೆಯ ವ್ಯವಸ್ಥಾಪಕ ಸುಧಾಂಶು ಸೌರಭ್ ಶುಭ ಹಾರೈಸಿದರು. ವೆಬ್ಸೈಟ್ ವಿನ್ಯಾಸಕಾರ ದೀಪಕ್ ವೆಬ್ಸೈಟ್ ಬಗ್ಗೆ ಮಾಹಿತಿ ನೀಡಿದರು. ಸಹಕಾರಿಯ ಉಪಾಧ್ಯಕ್ಷ ಜಿ. ವಿಶ್ವನಾಥ ಆಚಾರ್ಯ, ನಿರ್ದೇಶಕರು, ಸಿಬ್ಬಂದಿಗಳು,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನಲ್ಲಿ ಯುವಜನಸೇವಾ ಮತ್ತು ಕ್ರೀಡಾ ಇಲಾಖೆ, ಯುವ ಸ್ಪಂದನ ಕೇಂದ್ರ ಉಡುಪಿ, ಸಂಚಾರಿ ಪೋಲಿಸ್ ಠಾಣೆ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾನವ ದಿನಾಚರಣೆಯ ಅಂಗವಾಗಿ ಯುವ ಜನತೆಗೆ ಅಂತರ್ಜಾಲ ಹಾಗೂ ಸೈಬರ್ ಬಳಕೆಯ ಮುನ್ನೆಚ್ಚರಿಕೆಯ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು. ಉದ್ಯಮಿ, ರೋಟರಿ ಕುಂದಾಪುರ ನಿಕಟಪೂರ್ವ ಅಧ್ಯಕ್ಷರಾದ ಕೆ.ಆರ್.ನಾಯಕ್ ಸಮಾರಂಭ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ಸಂಚಾರಿ ಪೋಲಿಸ್ ಠಾಣೆಯ ಠಾಣಾಧಿಕಾರಿ ಸುಧಾ ಪ್ರಭು, ಯುವ ಸ್ಪಂದನ ಕೇಂದ್ರದ ತಾಲೂಕು ಪರಿವರ್ತಕರಾದ ರಮೇಶ್ ಗಾಣಿಗ ಹಾಗೂ ಕಾಲೇಜಿನ ಹಿರಿಯ ಉಪನ್ಯಾಸಕಿ ಮಮತಾ ರೈ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕುಂದಾಪುರ ಸಂಚಾರಿ ಠಾಣೆಯ ಸಿಬ್ಬಂದಿ ನವಿನ್ ಕುಮಾರ್ ಕಾರ್ಯಾಗಾರವನ್ನು ನಿವರ್ಹಿಸಿದರು. ಕಾಲೇಜಿನ ಬೋಧಕ ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿ, ಉಪನ್ಯಾಸಕಿ ಮಮತಾ ರೈ ಸ್ವಾಗತಿಸಿ, ಉಪನ್ಯಾಸಕ ಉದಯ್ ನಾಯ್ಕ್ ನಿರೂಪಿಸಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಡಿ.29: ಕೃಷಿ ಇಲಾಖೆ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಆತ್ಮ ಯೋಜನೆಯಡಿ ಗುತ್ತಿಗೆ ಆಧಾರದಲ್ಲಿ ಉಪ ಯೋಜನಾ ನಿರ್ದೇಶಕರು ಹಾಗೂ ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ತಲಾ 1 ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಖಾಲಿ ಇರುವ ಉಪ ಯೋಜನಾ ನಿರ್ದೇಶಕರ ಹುದ್ದೆಗೆ ಮಾಸಿಕ 42,000 ರೂ. ವೇತನ ನಿಗಧಿಪಡಿಸಿದ್ದು, ಕೃಷಿ/ಕೃಷಿ ಸಂಬಂಧಿತ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಕ್ಷೇತ್ರ ಮಟ್ಟದ ಅನುಭವ ಹೊಂದಿರುವವರು ಹಾಗೂ ಬೈಂದೂರು ರೈತ ಸಂಪರ್ಕ ಕೇಂದ್ರದಲ್ಲಿ ಖಾಲಿ ಇರುವ ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಮಾಸಿಕ 25,000 ರೂ. ವೇತನ ನಿಗಧಿಪಡಿಸಿದ್ದು, ಕೃಷಿ/ಕೃಷಿ ಸಂಬಂಧಿತ ವಿಷಯಗಳಲ್ಲಿ ಪದವಿ ಹೊಂದಿರುವ, ವಿಸ್ತರಣಾ ಕ್ಷೇತ್ರಗಳಲ್ಲಿ ಅನುಭವವುಳ್ಳ ಸ್ಥಳಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ./ ಕುಂದಾಪ್ರ ಡಾಟ್ ಕಾಂ ಸುದ್ದಿ/ ಅರ್ಜಿ ಸಲ್ಲಿಸಲು ಜನವರಿ 28 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ಗ್ರಾಮದಲ್ಲಿ ಸುಮಾರು 285 ಮಂದಿ ಈವರೆಗೆ ಕೋವಿಡ್ ಲಸಿಕೆ ಪಡೆದುಕೊಂಡಿಲ್ಲ. ಹಲವಾರು ಬಾರಿ ಇವರ ಮನವೊಲಿಸುವ ಪ್ರಯತ್ನ ನಡೆಸಲಾಗಿದೆ. ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ನೀಡಬೇಕೆಂಬ ಸರಕಾರ ಮತ್ತು ಜಿಲ್ಲಾಡಳಿತದ ಸೂಚನೆ ಹಿನ್ನಲೆಯಲ್ಲಿ ಕೋವಿಡ್ ಲಸಿಕೆ ಪಡೆದುಕೊಳ್ಳದವರ ಮನೆಗೆ ತೆರಳಿ ಮತ್ತೊಮ್ಮೆ ಅವರ ಮನವೊಲಿಸುವ ಪ್ರಯತ್ನ ಮಾಡಬೇಕು. ಮನೆ ಮನೆಗೆ ತೆರಳಿ ಅವರ ಮನವೊಲಿಸಿ ಲಸಿಕೆ ನೀಡುವ ಕಾರ್ಯ ನಡೆಸಲಾಗುತ್ತಿದೆ ಎಂದು ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಮಿತಾ ಹೇಳಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಬುಧವಾರ ಜರಗಿದ ಗಂಗೊಳ್ಳಿ ಗ್ರಾಮದ ಟಾಸ್ಕ್ಪೋರ್ಸ್ ಸಮಿತಿ ಸಭೆಯಲ್ಲಿ ಅವರು ಮಾಹಿತಿ ನೀಡಿ ಮಾತನಾಡಿದರು. ವಂಡ್ಸೆ ಹೋಬಳಿ ರೆವಿನ್ಯೂ ಇನ್ಸ್ಪೆಕ್ಟರ್ ರಾಘವೇಂದ್ರ ದೇವಾಡಿಗ ಮಾತನಾಡಿ, ಸರಕಾರದ ಸೂಚನೆಯಂತೆ ಲಸಿಕೆ ಪಡೆಯದೆ ಇರುವ ಜನರ ಮನೆಗೆ ತೆರಳಿ ಅವರ ಮನವೊಲಿಸಿ ಲಸಿಕೆ ನೀಡುವ ಕಾರ್ಯಕ್ರಮ ಆಯೋಜಿಸಲಾಗಿದ್ದು ಇದಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ…
