Author: ನ್ಯೂಸ್ ಬ್ಯೂರೋ

ನಮ್ಮ ಸೌಂದರ್ಯವನ್ನು ಹೆಚ್ಚುಸಲು ಸುಂದಾರವಾದ ಕೂದಲು ಹೆಚ್ಚಿನ ಪಾತ್ರ ವಹಿಸುತ್ತದೆ. ಆರೋಗ್ಯಕರ ಮತ್ತು ಸುಂದರವಾದ ಕೂದಲು ನಿಮ್ಮನ್ನು ಹೆಚ್ಚು ಆಕರ್ಷಕವಾಗಿ ಮಾಡುತ್ತದೆ ಮನುಷ್ಯರಲ್ಲಿ ಸುರುಳಿಯಾಕಾರದ ಕೂದಲು, ತೆಳ್ಳನೆಯ ಕೂದಲು, ಎಣ್ಣೆಯುಕ್ತ ಕೂದಲು, ಒಣ ಕೂದಲು ಹೀಗೆ ಹಲವಾರು ರೀತಿಯ ಕುದಲನ್ನು ಹೊಂದಿರುತ್ತಾರೆ. ಆದರೆ ನಿಶ್ಚಿತ ಕೂದಲ ರಕ್ಷಣೆಯ ಸಲಹೆಗಳು ಎಲ್ಲವು ಎಲ್ಲರ ಕೂದಲಿಗೆ ಸರಿ ಹೊಂದುವುದಿಲ್ಲ. ಪ್ರತಿಯೊಬ್ಬರು ಹೊಳೆಯುವ, ಉದ್ದ ಮತ್ತು ಸುಂದರವಾದ ಕೂದಲನ್ನು ಬಯಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಹಲವಾರು ವಿಭಿನ್ನ ಪ್ರಯೋಗಳನ್ನು ಉಪಯೋಗಿಸಿ ನಿಮ್ಮ ಸುಂದರವಾದ ಕೂದಲನ್ನು ಹಾಳು ಮಾಡಿಕೊಂಡಿರಬಹುದು. ಹೀಗೆ ನಿಮ್ಮ ಕೂದಲ ಆರೈಕೆಯಲ್ಲಿ ಈ ಕೆಳಗಿನ ತಪ್ಪುಗಳನ್ನು ಎಂದಿಗೂ ಮಾಡಬೇಡಿ. ತೊಳೆಯುವ ಮೊದಲು ಬಾಚದೇ ಇರುವುದು:ಕೆಲವು ಸೋಮಾರಿ ಹುಡಿಗಿಯರು ತೊಳೆಯುವ ಮೊದಲು ಅವರು ಎಂದಿಗೂ ಕೂದಲನ್ನು ಬಾಚಿಕೊಳ್ಳುವುದಿಲ್ಲ ಇದರಿಂದ ಕೂದಲು ಹೆಚ್ಚು ಸಿಕ್ಕು ಸಿಕ್ಕಾಗಿ ಹೆಚ್ಚಿನ ಕೂದಲು ಉದುರುವ ಸಾಧ್ಯತೆ ಇದೆ. ಆದುದರಿಂದ ಸಾಧ್ಯವಾದಷ್ಟು ಕೂದಲನ್ನು ಬಾಚಿ ಸ್ಪ್ಲಿಟ್ ಎಂಡ್ಸ್:ನೀವು ಸ್ಪ್ಲಿಟ್ ಎಂಡ್ಸ್ ಗಳನ್ನು ಹೊಂದಿದ್ದರೆ, ಆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಎಂಕಾಂ ಅಂತಿಮ ಸ್ನಾತಕೋತ್ತರ ಪರೀಕ್ಷೆಯಲ್ಲಿ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ತೃತೀಯ ರಾಂಕ್ ಪಡೆದ ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವಗ೯ಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಪುತ್ರಿ ಸ್ವಾತಿ ಪೂಜಾರಿ ಅವರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು ವಿದ್ಯಾಥಿ೯ಯ ಮನೆಗೆ ತೆರಳಿ ಸನ್ಮಾನಿಸಲಾಯಿತು. ಸನ್ಮಾನಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸಂಟ್ ಆಳ್ವ ಮಾತನಾಡಿ, ತಂದೆ ತಾಯಿಯ ಸರಳ ಸಜ್ಜನಿಕೆ ಆಚಾರ-ವಿಚಾರಗಳಿಂದ ಪ್ರಭಾವಿತರಾಗಿ, ಯಾವತ್ತು ಸಚಿವರ ಪುತ್ರಿ ಎಂದು ಹೇಳಿಕೊಳ್ಳದೆ ಕಾಲೇಜಿಗೆ ದೊಡ್ಡ ಕೀರ್ತಿ ತಂದು ಕೊಟ್ಟು ನಮ್ಮ ಎಲ್ಲಾ ವಿಧ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಎಂದರು. ಸನ್ಮಾನ ಸ್ವೀಕರಿಸಿ, ಮಾತನಾಡಿದ ಸ್ವಾತಿ ಪೂಜಾರಿ ಮಾತನಾಡಿ ನನ್ನ ಯಶಸ್ವಿಗೆ ಕಾರಣೀಕತ೯ರಾದ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ನನ್ನ ಎಲ್ಲಾ ಮಿತ್ರರಿಗೂ ವಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾ. ಸಿ. ಜಯರಾಮ್ ಶೆಟ್ಟಿಗಾರ ಕಾಯ೯ಕ್ರಮವನ್ನು ಸಂಯೋಜಿಸಿದ್ದರು. ಪ್ರೊ. ಸೋಫಿಯಾ ಡಯಾಸ್.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕುಂದಾಪುರದ ಪದವಿಪೂರ್ವ ಕಾಲೇಜು ಕವಿ ಮುದ್ದಣ ವೇದಿಕೆಯಲ್ಲಿ ಗುರುವಾರ ಹದಿನೈದನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ’ತುರಾಯಿ’ ಅನ್ವೇಷಣೆಯ ಪ್ರತಿಬಿಂಬ ಇದರ ಸಾಂಸ್ಕೃತಿಕ ಕಾರ್ಯಕ್ರಮ ಮೂಲಕ ಚಾಲನೆ ನೀಡಿ, ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಜಿಲ್ಲಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಪ್ರೊ. ಎ.ವಿ.ನಾವಡ ಮತ್ತು ಗಾಯತ್ರಿ ವಿ.ನಾವಡ ದಂಪತಿ ದೀಪ ಬೆಳಗಿಸಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಡಾ. ಉಮೇಶ್ ಪುತ್ರನ್, ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕೋಶಾಧಿಕಾರಿ ಮನೋಹರ ಪಿ., ಶಿಕ್ಷಕರಾದ ಮಂಜುನಾಥ, ಸತ್ಯನಾ ಕೊಡೇರಿ, ಅನಂತಕೃಷ್ಣ ಕೊಡ್ಗಿ, ಅಧ್ಯಕ್ಷ ಪುಂಡಲೀಕ ನಾಯಕ್ ಮುಂತಾದವರು ಇದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಸುನೀಲ್ ಭಂಡಾರಿ ಕಡತೋಕ, ಶ್ರೀಕಾಂತ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಂಬೇಡ್ಕರ್ ಕಾಲದಲ್ಲಿ ಆಸ್ಪೃಶ್ಯತೆ, ವರ್ಗ ಸಂಘರ್ಷ, ಸಮಾಜದಲ್ಲಿ ಇದ್ದ ವೈಪರೀತ್ಯಗಳ ಮೆಟ್ಟಿನಿಂತು ಸಂವಿಧಾನ ರಚಿಸಿ, ದೇಶಕ್ಕೆ ಸಂವಿಧಾನ ನೀಡಿದ ಅಂಬೇಡ್ಕರ್ ಸಾಗಿಬಂದ ಹಾದಿ ಸುಲಭದ್ದಾಗಿರಲಿಲ್ಲ. ಭಾರತ ಶಕ್ತಿಯುತ ದೇಶವಾಗಿ ಬೆಳೆಯಲು ಅಂಬೇಡ್ಕರ್ ಅವರ ಸಂವಿಧಾನ ಕಾರಣವಾಗಿದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು ಅಭಿಪ್ರಾಯಪಟ್ಟರು. ಕುಂದಾಪುರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಂಘಟನೆ ಆಶ್ರಯದಲ್ಲಿ ತಾಲೂಕು ಪಂಚಾಯಿತಿ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಗುರುವಾರ ನಡೆದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿ ನಾವು ಅಂಬೇಡ್ಕರ್ ಅವರು ಸಾಗಿಬಂದ ದಾರಿಯಲ್ಲಿ ಸಾಗುವ ಮೂಲಕ ನಮ್ಮಿಂದಾದ ಕೊಡುಗೆ ದೇಶಕ್ಕೆ ನೀಡಿದರೆ ಅಂಬೇಡ್ಕರ್ ಜಯಂತಿಗೊಂದು ಅರ್ಥಬರುತ್ತದೆ ಎಂದರು. ಕುಂದಾಪುರ ಪುರಸಭೆ ಅಧ್ಯಕ್ಷ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಮಂಜುನಾಥ ಹಿಲಿಯಾಣ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಉಪನ್ಯಾಸ ಮಾಡಿದರು. ದಲಿತ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕಲಾವಿದ ಅಥವಾ ತಂಡ ಇವೆರಡನ್ನು ತುಲನೆ ಮಾಡಿ ನೋಡಿದಾಗ ಯಾವುದು ಮುಖ್ಯ ಎಂಬ ಸಂಘರ್ಷ ಹುಟ್ಟಿಕೊಳ್ಳುತ್ತದೆ. ಆದರೆ ನಾವೆಲ್ಲರೂ ಕಲೆಗೆ ಶರಣಾದಾಗ ಮಾತ್ರ ಸಂಘಟನೆ ವಿಭಜನೆಯಾಗದೇ ಮುನ್ನಡೆಯುತ್ತದೆ. ಇಂದಿನ ದಿನಗಳಲ್ಲಿ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡಬೇಕಾಗಿದೆ. ಹಿರಿಯರು ನೀಡಿದ ಧನಾತ್ಮಕ ಸಲಹೆಗಳನ್ನು ವಿಮರ್ಶಿಸಿ ಅರಿತಾಗಲೇ ಹೊಸ ಬದುಕಿನತ್ತ ಸಾಗಲು ಸಾಧ್ಯವಾಗುತ್ತದೆ ಎಂದು ರಂಗಭೂಮಿ ಉಡುಪಿ ಇದರ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಹೇಳಿದರು. ಇಲ್ಲಿನ ಶಾರದಾ ವೇದಿಕೆಯಲ್ಲಿ ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಲಾವಣ್ಯ ಬೈಂದೂರು ವತಿಯಿಂದ ಐದು ದಿನಗಳ ಕಾಲ ನಡೆದ ರಂಗಪಂಚಮಿ-2022 ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಇಂದಿನ ಕಾಲಘಟ್ಟದಲ್ಲಿ ಆಧುನಿಕತೆ ಹಾಗೂ ಹಿಂದಿನ ವ್ಯವಸ್ಥೆಯನ್ನು ಸರಿದೂಗಿಸಿಕೊಂಡು ಹೋಗುವ ಅನಿವಾರ್ಯತೆಯಿದೆ. ಸಂಸ್ಥೆ ಹಿಂದಿನ ಕಷ್ಟದ ದಿನಗಳನ್ನು ಹಾಗೂ ಅದರ ಕಲ್ಪನೆಗಳನ್ನು ಮತ್ತು ನಡೆದು ಬಂದ ರಹದಾರಿಯನ್ನು ಮುಂದಿನ ದಿನಗಳಲ್ಲಿ ಸಂಸ್ಥೆಯನ್ನು ಮುನ್ನೆಡೆಸುವವರು ನೆನಪಿಟ್ಟುಕೊಂಡು ಆಗಾಗ ಸಿಂಹಾಲೋಕನ ಮಾಡಿಕೊಳ್ಳುವುದು ಅತ್ಯವಶ್ಯಕ. ಹಳೆಯದನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಏ.11: ಕುಂದಾಪುರ ಪುರಸಭಾ ವ್ಯಾಪ್ತಿಯ ವಾಸ್ತವ್ಯ, ವಾಣಿಜ್ಯ ಕಟ್ಟಡ ಹಾಗೂ ಖಾಲಿ ನಿವೇಶನಗಳ ಮಾಲೀಕರು ಪ್ರಸಕ್ತ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ 30 ರ ಒಳಗೆ ಪಾವತಿಸಿದಲ್ಲಿ ಆಸ್ತಿ ತೆರಿಗೆ ಮೇಲೆ ಶೇ. 5 ರಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ. ಜೂನ್ 30 ರ ವರೆಗೆ ದಂಡ ರಹಿತವಾಗಿ ಆಸ್ತಿ ತೆರಿಗೆ ಪಾವತಿಸಬಹುದಾಗಿದ್ದು, ಜುಲೈ 1 ರ ನಂತರ ಪಾವತಿಸಿದ್ದಲ್ಲಿ ತಿಂಗಳಿಗೆ ಶೇ. 2 ರ ದಂಡವನ್ನು ವಿಧಿಸಲಾಗುವುದು. ಆದ್ದರಿಂದ ಸಾರ್ವಜನಿಕರು ಏ. 30 ರ ಒಳಗೆ ಆಸ್ತಿ ತೆರಿಗೆ ಪಾವತಿಸಿ, ಇದರ ಸದುಪಯೋಗ ಪಡೆದುಕೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Read More

ಹೆಣ್ಣು ಸಂಸಾರದ ಕಣ್ಣು, ಇತ್ತೀಚಿನ ದಿನಗಳಲ್ಲಿ ಹೆಣ್ಣು ಎಲ್ಲಾ ರಂಗದಲ್ಲಿಯೂ ತನ್ನದೇ ಆದ ಛಾಪನ್ನು ಮೂಡಿಸುತ್ತಿದ್ದಾಳೆ. ಗಂಡಿನ ಸರಿಸಮಾನವಾಗಿ ದುಡಿಯುತ್ತಿದ್ದಾಳೆ, ಹೆಜ್ಜೆಯಿಡುತ್ತಿದ್ದಾಳೆ. ಆದರೆ ಮದುವೆಯಾದ ತಕ್ಷಣ ಮಹಿಳೆಯರು ಪ್ರತಿ ವಿಚಾರಕ್ಕೂ ಗಂಡನನ್ನು ಅವಲಂಬಿಸುತ್ತಾರೆ. ಒಳ್ಳೆಯ ಓದು, ಉದ್ಯೋಗವಿರೋ ಮಹಿಳೆಯರು ಕೂಡ ತನ್ನ ಇಷ್ಟ ಕಷ್ಟಗಳ ಕುರಿತು ನಿರ್ಧಾರ ಕೈಗೊಳ್ಳುವಾಗ ಗಂಡನ ಅಪ್ಪಣೆ ಕೋರುತ್ತಾರೆ. ಆದರೆ ಇಂತಹ ವಿಚಾರಗಳು ಮಹಿಳೆಯನ್ನು ಇನ್ನಷ್ಟು ದುರ್ಬಲಗೊಳಿಸುತ್ತವೆ. ಸಂಸಾರದಲ್ಲಿ ಇಬ್ಬರಲ್ಲೂ ಸಮನಾದ ಹೊಂದಾಣಿಗೆ ಇರಬೇಕು ನಿಜ, ಆದ್ರೆ ಅತಿಯಾದ ಅವಲಂಬನೆ ಖಂಡಿತಾ ಒಳ್ಳೆಯದ್ದಲ್ಲ. ತಮ್ಮ ಸಾಮರ್ಥ್ಯವನ್ನು ಅರಿಯದೆ ಹೆಣ್ಣು ಪ್ರತಿ ವಿಚಾರಕ್ಕೂ ಪತಿಯನ್ನೇ ಅವಲಂಬಿಸುತ್ತಾ ಹೋದರೆ ತನ್ನತನ ಕಳೆದುಕೊಳ್ಳುತ್ತಾಳೆ. ಮಹಿಳೆ ಮದುವೆ ಬಳಿಕ ಗಂಡ, ಮನೆ, ಮಕ್ಕಳು ಎಂದು ತನ್ನ ವ್ಯಕ್ತಿತ್ವ, ಕೌಶಲ್ಯ, ವೃತ್ತಿ ಬದುಕನ್ನು ತ್ಯಾಗ ಮಾಡಬೇಕಾದ ಅಗತ್ಯವಿಲ್ಲ. ಸಂಸಾರದ ಜೊತೆ ಸ್ವಾವಲಂಬನೆ ಬದುಕನ್ನು ಇಂದಿನ ಎಷ್ಟೋ ಮಹಿಳೆಯರು ನಿಭಾಯಿಸುತ್ತಿದ್ದಾರೆ. ಇದರಿಂದ ಆತ್ಮವಿಶ್ವಾಸ ಹಾಗೂ ಆರ್ಥಿಕ ಸ್ವಾವಲಂಬನೆ ಜೊತೆ ನೆಮ್ಮದಿಯ ಬದುಕನ್ನು ಕಂಡುಕೊಳ್ಳಬಹುದು. ಪತಿಗಾಗಿ ನಿಮ್ಮತನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸರ್ಕಾರಿ ಶಾಲೆಗಳಲ್ಲಿ ಸಾರ್ವಜನಿಕರ ಸಹಭಾಗಿತ್ವ ಇದ್ದರೆ ಶೈಕ್ಷಣಿಕ ಬದಲಾವಣೆಗಳನ್ನು ತರಬಹುದು. ಇತ್ತೀಚಿನ ವರ್ಷಗಳಲ್ಲಿ ಆಂಗ್ಲಮಾಧ್ಯಮ ಶಾಲೆಗಳಿಗೆ ಸರ್ಕಾರಿ ಶಾಲೆಗಳು ಪೈಪೋಟಿ ನೀಡುತ್ತಿರುವುದು ಕೂಡ ಒಂದು ರೀತಿಯ ಶೈಕ್ಷಣಿಕ ಕ್ರಾಂತಿಯಾಗಿದೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಉಪ್ಪುಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಳೆವಿದ್ಯಾರ್ಥಿಗಳ ನೆರವಿನಿಂದ ನಿರ್ಮಾಣಗೊಂಡ ಐದು ತರಗತಿ ಕೋಣೆಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಸುಮಾರು 140 ವರ್ಷಗಳ ಇತಿಹಾಸ ಹೊಂದಿರುವ ಉಪ್ಪುಂದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. ಈ ಶಾಲೆಯಲ್ಲಿ ಶಿಕ್ಷಣ ಪಡೆದ ಹಳೆ ವಿದ್ಯಾರ್ಥಿಗಳು ಒಂದು ಸಮಿತಿ ರಚಿಸಿ ಸುಸಜ್ಜಿತ ಐದು ತರಗತಿ ಕಟ್ಟಡಗಳನ್ನು ನಿರ್ಮಿಸಿ ಶಾಲೆಗೆ ಹಸ್ತಾಂತರಿಸಿದ್ದು ಒಂದು ಇತಿಹಾಸವಾಗಿದೆ. ಹೀಗೆಯೇ ಇತರ ಎಲ್ಲಾ ಶಾಲೆಗಳಲ್ಲಿಯೂ ಕೂಡ ಪೋಷಕರು, ಹಳೆವಿದ್ಯಾರ್ಥಿಗಳು ಶಾಲಾ ಎಸ್‌ಡಿಎಂಸಿಯೊಂದಿಗೆ ಕೈಜೋಡಿಸುವ ಮೂಲಕ ಸರ್ಕಾರಿ ಶಾಲೆಗಳು ಇನ್ನಷ್ಟು ಅಭಿವೃದ್ಧಿ ಹೊದುವಂತಾಗಲಿ ಎಂದು ಹಾರೈಸಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಂಗಾಸಕ್ತ ಸಹೃದಯಿ ಕಲಾಭಿಮಾನಿಗಳು, ಕಲಾ ಪೋಷಕರು ಲಾವಣ್ಯದ ಕೈಹಿಡಿದು ಮುನ್ನೆಡಿಸಿದ ಪರಿಣಾಮ ಈ ನಲವತ್ತೈದು ವಸಂತಗಳಲ್ಲಿ ಲವಲವಿಕೆಯಿಂದಲೇ ಬೆಳೆದುಬಂದಿದೆ. ಲಾವಣ್ಯ, ಒಳ ಹೊರಗೆ ತನ್ನದೇ ಆದ ಉತ್ಸಾಹಿ ಸಮುದಾಯವನ್ನು ಕಟ್ಟಿಕೊಂಡಿದೆ. ಚಲನಶೀಲತೆಯನ್ನು ಅಳವಡಿಸಿಕೊಂಡಿದ್ದರಿಂದಲೇ ವರ್ಷದಿಂದ ವರ್ಷಕ್ಕೆ ನಿರಂತರವಾಗಿ ಬೆಳೆಯುತ್ತಿದೆ ಎಂದು ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಆಡಳಿತ ಟ್ರಸ್ಟಿ ಡಾ. ಗೋವಿಂದ ಬಾಬು ಪೂಜಾರಿ ಹೇಳಿದರು. ಇಲ್ಲಿನ ಶಾರದಾ ವೇದಿಕೆಯಲ್ಲಿ ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಲಾವಣ್ಯ ಬೈಂದೂರು ವತಿಯಿಂದ ಐದು ದಿನಗಳ ಕಾಲ ನಡೆಯುವ ರಂಗಪಂಚಮಿ-2022 ನಾಟಕೋತ್ಸವದ ನಾಲ್ಕನೇ ದಿನದ ಸಭಾಧ್ಯಕ್ಷತೆವಹಿಸಿ ಮಾತನಾಡಿದರು. ಈ ಸಾಲಿನ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ಆಚಾರ್ಯ, ಕಳೆದ ಇಪ್ಪತ್ತು ವರ್ಷಗಳಲ್ಲಿ ಯಕ್ಷಗಾನ ವೃತ್ತಿ ಮೇಳಗಳ ಸಂಖ್ಯೆ ವೃದ್ಧಿಸಿದೆ. ನೂರಾರು ಹಿರಿಯ, ಕಿರಿಯ ಹವ್ಯಾಸಿ ತಂಡಗಳು ಈ ಕ್ಷೇತ್ರದಲ್ಲಿ ಕಾಣಿಸಿಕೊಂಡು, ಪ್ರದರ್ಶನ…

Read More