ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಕೊರೋನಾ ಕಾರಣದಿಂದಾಗಿ ಯಕ್ಷಗಾನ ಕಲಾವಿದರ ಬದುಕು ಅತಂತ್ರವಾಗಿದ್ದು, ಕಲೆಯನ್ನೆ ನಂಬಿಕೊಂಡ ಕಲಾವಿದರಿಗೆ ಬದುಕು ಸಾಗಿಸುವುದು ಕಷ್ಟವಾಗುತ್ತಿದೆ. ಕಲಾಸೇವೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಕೊಲ್ಲೂರು ದೇವಳದ ವತಿಯಿಂದ ಹೊಸ ಯಕ್ಷಗಾನ ಮೇಳ ಆರಂಭಿಸುವಂತೆ ಯಕ್ಷಗಾನ ಕಲಾವಿದ ಕೋಡಿ ವಿಶ್ವನಾಥ ಗಾಣಿಗರ ನೇತೃತ್ವದಲ್ಲಿ ಕಲಾವಿದರು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕೊಲೂರಿನಲ್ಲಿ ಮನವಿ ಸಲ್ಲಿಸಿದರು. ದೇಶಕ್ಕೆ ಆವರಿಸಿದ ಮಹಾಮಾರಿ ಕೊರೋನಾದಿಂದ ಮಾರ್ಚ್ನಿಂದ ಸ್ಥಗಿತಗೊಂಡ ಯಕ್ಷಗಾನ ಮೇಳಗಳು ಮತ್ತೆ ನವೆಂಬರ್ನಿಂದ ತಿರುಗಾಟ ಆರಂಭಿಸುವುದಕ್ಕೆ ಅವಕಾಶ ಕಲ್ಪಿಸಬೇಕು. ಧಾರ್ಮಿಕ ದತ್ತಿಗೆ ಒಳಪಡುವ ಮೇಳಗಳ ಕಲಾವಿದರಿಗೆ ಪೂರ್ಣ ಪ್ರಮಾಣದ ಸಂಭಾವನೆ ಸಿಕ್ಕಿದೆ. ಖಾಸಗಿ ಸಂಚಾಲಕತ್ವದಿಂದ ನಡೆಯುವ ಮೇಳಗಳಿಗೆ ಪರಿಹಾರದ ಸಂಭಾವನೆಯನ್ನು ಸಂಚಾಲಕರರಿಂದಲೂ, ಸರಕಾರದಿಂದಲೂ ಕೊಡಿಸುವುದರೊಂದಿಗೆ ಖಾಸಗಿ ಮೇಳಗಳು ಕೆಲವು ಆರಂಭವಾಗುವ ಸ್ಥಿತಿ ಇಲ್ಲದಿರುವುದರಿಂದ ಕೊಲ್ಲೂರು ದೇವಳದ ವತಿಯಿಂದ ಹೊಸ ಮೇಳವೊಂದನ್ನು ಆರಂಭಿಸಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಕೋಟ ಶ್ರೀನಿವಾಸ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಪ್ರತಿ ವರ್ಷ ಮುಂಗಾರು ಪತ್ರಿಕೆಯ ಸಂಪಾದಕ ದಿ| ವಡ್ಡರ್ಸೆ ರಘುರಾಮ ಶೆಟ್ಟಿ ಹೆಸರಲ್ಲಿ ಕೊಡಮಾಡುವ ಪತ್ರಿಕೋದ್ಯಮ ಪ್ರಶಸ್ತಿಗೆ ಕರಾವಳಿ ಮುಂಜಾವು ದಿನಪತ್ರಿಕೆಯ ಸಂಪಾದಕ ಗಂಗಾಧರ ಹಿರೇಗುತ್ತಿ ಈ ಬಾರಿ ಆಯ್ಕೆಯಾಗಿದ್ದಾರೆ ಎಂದು ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಬ್ರಹ್ಮಾವರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾ ವಿತರಕರಾಗಿ ವೃತ್ತಿ ಜೀವನವನ್ನು ಆರಂಭಿಸಿದ ಗಂಗಾಧರ ಹಿರೇಗುತ್ತಿಯವರು ಪತ್ರಿಕೋದ್ಯಮದ ಕುರಿತು ಬಾಲ್ಯದಲ್ಲೇ ಹಲವು ಕನಸುಗಳನ್ನು ಕಂಡಿದ್ದರು. ಅನಂತರ ‘ಮುಂಗಾರು’ ದಿನಪತ್ರಿಕೆಯಲ್ಲಿ ಉತ್ತರ ಕನ್ನಡದ ವರದಿಗಾರನಾಗಿ 10 ವರ್ಷ ಸೇವೆ ಸಲ್ಲಿಸಿ, ಅನಂತರ ಕಾರವಾರದ ಜಿಲ್ಲಾ ಕೇಂದ್ರದಿಂದ ‘ಕರಾವಳಿ ಮುಂಜಾವು’ ದಿನಪತ್ರಿಕೆ ಆರಂಭಿಸಿದ್ದು ಪ್ರಸ್ತುತ ಈ ಪತ್ರಿಕೆ ರಾಜ್ಯದ ಪ್ರಸಿದ್ಧ ದಿನಪತ್ರಿಕೆಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಅತ್ಯುನ್ನತ ಸಾಧನೆಗಾಗಿ ಹಿರೇಗುತ್ತಿಯವರಿಗೆ ಮೊಹರೆ ಹನುಮಂತರಾಯ ಪ್ರಶಸ್ತಿ, ಸಾಧನ ರಾಷ್ಟ್ರೀಯ ಪ್ರಶಸ್ತಿಗಳು ಸಂದಿದೆ. ವಡ್ಡರ್ಸೆಯವರ ಪತ್ರಿಕೋದ್ಯಮದ ಆದರ್ಶ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಸೆ.19ರ ಶನಿವಾರ 215 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 50, ಉಡುಪಿ ತಾಲೂಕಿನ 121 ಹಾಗೂ ಕಾರ್ಕಳ ತಾಲೂಕಿನ 35 ಮಂದಿಗೆ ಪಾಸಿಟಿವ್ ಬಂದಿದೆ. 9 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ. ಒಟ್ಟು ಪ್ರಕರಣಗಳಲ್ಲಿ 112 ಸಿಂಥಮೇಟಿವ್ ಹಾಗೂ 103 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, ಒಟ್ಟು ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 98, ILI 68, ಸಾರಿ 3 ಪ್ರಕರಣವಿದ್ದು, 45 ಪ್ರಕರಣದ ಮೂಲ ಪತ್ತೆಹಚ್ಚಲಾಗುತ್ತಿದೆ. ಓರ್ವ ವ್ಯಕ್ತಿ ಹೊರ ಜಿಲ್ಲೆಯಿಂದ ಬಂದಿದ್ದಾರೆ. ಇಂದು 82 ಮಂದಿ ಆಸ್ಪತ್ರೆಯಿಂದ ಹಾಗೂ 229 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ. ಉಡುಪಿಯ 52 ವರ್ಷದ ಪುರುಷ ಮೃತಪಟ್ಟಿದ್ದಾರೆ. 858 ನೆಗೆಟಿವ್: ಈ ತನಕ ಒಟ್ಟು 93528 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 78240 ನೆಗೆಟಿವ್, 15098 ಪಾಸಿಟಿವ್ ಬಂದಿದ್ದು, 190 ಮಂದಿಯ ವರದಿ ಬರುವುದು ಬಾಕಿ ಇದೆ. 1,337 ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ಒಟ್ಟು…
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ,ಸೆ.19: ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿ 1994 ರ ತಿದ್ದುಪಡಿ ನಿಯಮಗಳು 2020 ರನ್ವಯ ಸರ್ಕಾರವು ಪ್ರತಿ ಮೆ.ಟನ್ ಮರಳಿಗೆ ರೂ. 60 ರಿಂದ ರಾಜಧನವನ್ನು ಪ್ರಸ್ತುತ ರೂ. 80 ಕ್ಕೆ ಹೆಚ್ಚಿಸಿರುವುದರಿಂದ, ರಾಜಧನದೊಂದಿಗೆ ಇತರೆ ಶುಲ್ಕಗಳನ್ನು ಹೆಚ್ಚುವರಿಯಾಗಿ ಪರವಾನಿಗೆದಾರರು ಸರ್ಕಾರಕ್ಕೆ ಪಾವತಿಸಬೇಕಾಗಿರುವುದರಿಂದ, ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸಲು ಇರುವ ಜಿಲ್ಲಾ 7 ಸದಸ್ಯರ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿರುವಂತೆ ಈ ಹಿಂದೆ ನಿಗದಿಪಡಿಸಿದ್ದ ದರವನ್ನು ಪುನರ್ ಪರಿಶೀಲಿಸಿ ಈ ಕೆಳಕಂಡಂತೆ ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಯಲ್ಲಿ ತೆರವುಗೊಳಿಸುವ ಮರಳಿಗೆ ದರ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ 7 ಸದಸ್ಯರ ಸಮಿತಿ, ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಅಧ್ಯಕ್ಷರಾದ ಜಿ. ಜಗದೀಶ್ ತಿಳಿಸಿದ್ದಾರೆ. ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿನ (ಸಿಆರ್ಝಡ್ ಪ್ರದೇಶದ ಸ್ವರ್ಣಾ, ಸೀತಾ ಮತ್ತು ಪಾಪನಾಶಿನಿ ನದಿ ವ್ಯಾಪ್ತಿಗಳಲ್ಲಿ) ಮರಳು ದಿಬ್ಬಗಳೊಂದಿಗೆ ತೆರವುಗೊಳಿಸಿದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ಲಲಿತಕಲಾ ಅಕಾಡೆಮಿ 18 ರಿಂದ 24ರ ವರೆಗೆ ನಡೆಸುವ ಆನ್ಲೈನ್ ಕಲಾಶಿಬಿರದಲ್ಲಿ ಭಾಗವಹಿಸಲು ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಯ್ಕೆಯಾದ 60 ಚಿತ್ರ ಕಲಾವಿದರಲ್ಲಿ ಉಡುಪಿ ಜಿಲ್ಲೆಯ ಉಪ್ಪುಂದದ ಯು. ಮಂಜುನಾಥ ಮಯ್ಯ ಮತ್ತು ಪಲಿಮಾರಿನ ಶರತ್ಕುಮಾರ್ ಎಲ್ ಸೇರಿದ್ದಾರೆ. ಶಿಬಿರವನ್ನು ಅಕಾಡೆಮಿ ಅಧ್ಯಕ್ಷ ಮಹೇಂದ್ರ ಡಿ. ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಂಸ್ಕೃತಿ ಸಚಿವ ಸಿ. ಟಿ. ರವಿ ಶುಕ್ರವಾರ ಉದ್ಘಾಟಿಸಿದರು. ಅಕಾಡೆಮಿಯು ಪ್ರತಿ ವರ್ಷ ಚಿತ್ರಕಲಾ ಶಿಬಿರ, ಕಲಾಪ್ರದರ್ಶನಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ. ಈ ವರ್ಷ ಕೊರೊನಾ ಸಾಂಕ್ರಾಮಿಕದ ಕಾರಣ ಅದರ ಚಟುವಟಿಕೆ ಸ್ಥಗಿತವಾಗಿ ಕಲಾವಿದರಿಗೆ, ಕಲಾಭಿಮಾನಿಗಳಿಗೆ ನಿರಾಸೆಯಾಗಿತ್ತು. ಪ್ರಸಕ್ತ ಕಾರ್ಯಕ್ರಮ ಅವರಿಗೆ ಸಂತಸ ತಂದಿದೆ ಎಂದು ಕಲಾವಿದ ಮಯ್ಯ ಹೇಳಿದ್ದಾರೆ. ಇದರಲ್ಲಿ ಆಯ್ಕೆಯಾದ ಕಲಾವಿದರು ತಮ್ಮ ಮನೆಗಳಲ್ಲೇ ಚಿತ್ರಗಳನ್ನು ರಚಿಸಿ, ಪ್ರದರ್ಶಿಸಲಿದ್ದಾರೆ. ಅಕಾಡೆಮಿಯ ಈ ಕಾರ್ಯಕ್ರಮದ ವಿಡಿಯೋ ಆವೃತ್ತಿ ಅದರ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಾಗುತ್ತದೆ ಎಂದು ರಿಜಿಸ್ಟ್ರಾರ್ ಪ್ರಕಟಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿಶ್ವ ಹಿಂದೂ ಪರಿಷತ್ ಬಜರಂಗದಳ ನಾವುಂದ ಘಟಕ ಇದರ ನೂತನ ಜವಾಬ್ದಾರಿ ಘೋಷಣೆ ಕಾರ್ಯಕ್ರಮ ಮತ್ತು ಭಾರತ್ ಮಾತಾ ಪೂಜನಾ ಕಾರ್ಯಕ್ರಮ ನಾವುಂದದ ಮಹಾಗಣಪತಿ ಮಾಂಗಲ್ಯ ಕಲ್ಯಾಣ ಮಂಟಪದಲ್ಲಿ ಜರಗಿತು, ಉಡುಪಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷರಾದ ಶ್ರೀಧರ್ ಬಿಜೂರ್, ಜಿಲ್ಲಾ ಬಜರಂಗದಳ ಸಂಚಾಲಕರಾದ ಸುರೇಂದ್ರ ಕೋಟೇಶ್ವರ, ಜಿಲ್ಲಾ ಧರ್ಮ ಪ್ರಚಾರ ಪ್ರಮುಖ್ ಆದ ಗುರುಪ್ರಸಾದ್ ಶೆಟ್ಟಿ ಮತ್ತು ತಾಲೂಕು ಸುರಕ್ಷಾ ಪ್ರಮುಖ್ ಮಹೇಶ್ ಕಿರಿಮಂಜೇಶ್ವರ ಭಾಗಹಿಸಿದ್ದರು, ಸಭೆಯ ಅಧ್ಯಕ್ಷತೆಯನ್ನು ಅಶೋಕ್ ಆಚಾರ್ ವಹಿಸಿದ್ದರು ಭಾರತ ಮಾತೆಯ ಭಾವ ಚಿತ್ರಕ್ಕೆ ಪುಷ್ಪಾಅರ್ಚನೆ ಮತ್ತು ದೀಪ ಬೆಳಗಿಸುವ ಮೂಲಕ ಭಾರತ್ ಮಾತಾ ಪೂಜನ ಕಾರ್ಯಕ್ರಮ ನೆರವೇರಿಸಲಾಯಿತು, ಸಭೆಯ ನಿರೂಪಣೆಯನ್ನು ತಾಲುಕು ಸಾಪ್ತಾಹಿಕ ಮಿಲನ್ ಪ್ರಮುಖ್ ಶರತ್ ಮೋವಾಡಿ ನಿರ್ವಹಿಸಿದರು, ಸ್ವಾಗತವನ್ನು ತಾಲುಕು ಸಂಪರ್ಕ ಪ್ರಮುಖ್ ಸತೀಶ್ ನಾವುಂದ ನೆರವೇರಿಸಿದರು, ಹೊಸ ಜವಾಬ್ಧಾರಿಯನ್ನು ತಾಲುಕು ಕಾರ್ಯದರ್ಶಿ ಪ್ರಶಾಂತ್ ಬೈಂದೂರು ಅವರು ಘೋಷಿಸಿದರು, ವಿಶ್ವ ಹಿಂದೂ ಪರಿಷತ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ರಾಷ್ಟಿಯ ಆರೋಗ್ಯ ಅಭಿಯಾನದ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಅದರ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಸಿಕ ಕನಿಷ್ಟ 20 ಯೋಗ ಶಿಬಿರಗಳನ್ನು ಆಯೋಜಿಸಲು, ಮಾಸಿಕ 5000 ರೂ. ಗೌರವಧನ ಆಧಾರದಲ್ಲಿ ಅರ್ಹ ಯೋಗ ತರಬೇತುದಾರರ ಸೇವೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆ, ವಿದ್ಯಾರ್ಹತೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವಿವರ, ಯೋಗ ತರಬೇತಿಯ ವಿವರ ಮತ್ತು ಇತ್ಯಾದಿ ಮಾಹಿತಿಯನ್ನು ಜಿಲ್ಲಾ ಯೋಜನಾ ನಿರ್ವಹಣಾ ಘಟಕ, ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿ ಕಚೇರಿ, ಅಜ್ಜರಕಾಡು, ಉಡುಪಿ ಇವರಿಂದ ಪಡೆದು, ಸೆಪ್ಟಂಬರ್ 30 ರಂದು ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಕೊರೋನಾ ಕಾರಣದಿಂದಾಗಿ ಇಲೆಕ್ಟ್ರಾನಿಕ್ ವಸ್ತುಗಳ ಬೆಲೆ ಮಾರುಕಟ್ಟೆಯಲ್ಲಿ ಹೆಚ್ಚಾಗಿದ್ದು, ಗ್ರಾಹಕರ ಮೇಲೆ ಇದು ಭಾರಿ ಪರಿಣಾಮ ಬೀರಿದೆ. ಕೊರೋನಾ ದೇಶದ ಆರ್ಥಿಕತೆ, ಉದ್ಯಮ ವಲಯ, ಮಾರುಕಟ್ಟೆಯ ವ್ಯವಹಾರಗಳ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ. ಸರ್ಕಾರ ದೇಶದಲ್ಲಿ ಮೂರು ತಿಂಗಳ ಲಾಕ್ಡೌನ್ ಘೋಷಿಸಿ, ಎಲ್ಲಾ ಭಾಗಗಳಲ್ಲೂ ಸಂಚಾರ ವ್ಯವಸ್ಥೆಯನ್ನು ತಡೆಗಟ್ಟಿ, ಕೇವಲ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿಪಡಿಸಿತು. ಇದರಿಂದ ಉಳಿದ ವಸ್ತುಗಳ ಖರೀದಿ ಮತ್ತು ಆನ್ಲೈನ್ ಮಾರಾಟವು ಇಲ್ಲದಂತಾಗಿ ಅಂಗಡಿ ಮಾಲೀಕರು, ಕಂಪೆನಿಗಳಿಗೆ ನಷ್ಟವಾಗಿ, ಮಾರುಕಟ್ಟೆಯಲ್ಲಿ ಬೆಲೆ ಕುಸಿಯಿತು. ಲಾಕ್ಡೌನ್ ಹಂತ-ಹಂತವಾಗಿ ತೆರವಾಗಿ ಅಂಗಡಿ ಮುಂಗಟ್ಟುಗಳ ಜೊತೆಗೆ ಆನ್ಲೈನ್ ಮಾರಾಟವೂ ಸಹ ತಮ್ಮ ವ್ಯವಹಾರವನ್ನು ಪುನಃ ಪ್ರಾರಂಭಿಸಿವೆ. ಆದರೆ ಖರೀದಿದಾರರ ಸಂಖ್ಯೆಯಲ್ಲಿ ನಿಧಾನಗತಿಯಿದೆ. ಕೊರೋನಾ ಭಯ ಒಂದು ಕಾರಣವಿರಬಹುದು. ಇನ್ನೊಂದು, ಎರಿದ ವಸ್ತುಗಳ ಬೆಲೆ. ಮಾರುಕಟ್ಟೆಯಲ್ಲಿ ಇಲೆಕ್ಟ್ರಾನಿಕ್ ಸಾಮಾನುಗಳ ಬೆಲೆ ದುಬಾರಿಯಾಗಿದೆ. ಲಾಕ್ಡೌನ್ನಿಂದ ಎಲ್ಲಾ ಕೆಲಸ ನಿಂತಿದ್ದ ಕಾರಣ ಇಲೆಕ್ಟ್ರಾನಿಕ್ ವಸ್ತುಗಳ ಹೊಸ ಸ್ಟಾಕ್ಗಳ ಉತ್ಪಾದನೆಯೂ ಆಗಿಲ್ಲ, ಈಗ ಪ್ರಾರಂಭವಾಗಿದ್ದರೂ ಅದರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯಕ್ಷಗಾನ ವೇಷಧಾರಿ ಹಾಗೂ ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ತಂಡದ ಅರ್ಥಧಾರಿ ಶಂಕರ ಬಿಲ್ಲವ, ಹೆಮ್ಮಾಡಿ ಇವರ ನಿರಂತರ ಸೇವೆಯನ್ನು ಗುರುತಿಸಿ ಗೊಂಬೆಯಾಟ ಅಕಾಡೆಮಿಯಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು. ವೃತ್ತಿಯಲ್ಲಿ ಪೋಸ್ಟ್ ಮ್ಯಾನ್ ಆಗಿ ಪ್ರವೃತ್ತಿಯಲ್ಲಿ ಯಕ್ಷಗಾನ ಹಾಗೂ ಗೊಂಬೆಯಾಟದ ಅರ್ಥಧಾರಿಯಾಗಿ ಎಲ್ಲರ ಗಮನ ಸೆಳೆದವರು. ಸಭಾ ಕಾರ್ಯಕ್ರಮ ಶ್ರೀಮತಿ ದೇವಕಿ ಪ್ರಭು ತಲ್ಲೂರು ಇವರ ಪ್ರಾರ್ಥನೆಯಿಂದ ಪ್ರಾರಂಭವಾಯಿತು. ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲರಾದ ಎಮ್. ರತ್ನಾಕರ್ ಪೈ ಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಭ್ಯುತ್ಥಾನ ಟ್ರಸ್ಟ್ ನ ಅಧ್ಯಕ್ಷ ಸಂತೋಷ್ ಕೋಣಿ, ಶಿಕ್ಷಕರಾದ ನಾಗೇಶ್ ಶ್ಯಾನುಭಾಗ್, ಉದಯ ಭಂಡಾರ್ ಕಾರ್, ಗೊಂಬೆಯಾಟ ಕಲಾವಿದ ಮಂಜುನಾಥ ಮೈಪಾಡಿ ಹಾಗೂ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ರವರು ಭಾಗವಹಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ: ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಹೊಸಂಗಡಿ ಭಾಗದ ಬಿಜೆಪಿ ನಾಯಕರು ಹಾಗು ಕಾರ್ಯಕರ್ತರು ಬೈಂದೂರಿನ ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿಯವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು, ಹೊಸಂಗಡಿ ಭಾಗದ ಗೋವಿಂದ ಶೆಟ್ಟಿ ಹಣ್ಸೆಹಾಡಿ, ಹಾಗೂ ಅವರ ಜೊತೆಯಲ್ಲಿ ಬಿಜೆಪಿಯ ಪ್ರಮುಖ ಕಾರ್ಯಕರ್ತರಾಗಿದ ಚಂದ್ರ ಹೆನ್ನಾಬೇಲು, ಶೇಖರ್ ಬೆಳಾರಿ ಯಡಮೊಗೆ, ಕಿಶೋರ್ ಮುಲ್ಲಿಕಟ್ಟೆ, ದಿವಾಕರ್ ಬಾಕ್ರಮನೆ, ಮಹೇಶ ಮಡಿವಾಳ, ನಕ್ಷತ್ರ ಕಾರೂರು, ದಿನೇಶ್ ಬೆಳಾರಿ, ಬಾಬು ಗೊಲ್ಲ ರವಿಂದ್ರ ಶೆಟ್ಟಿ ಅವರು ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ವಂಡ್ಸೆ ಬಾಕ್ಲ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಸಂಜೀವ ಶೆಟ್ಟಿ ಸಂಪೀಗೇಡಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಪ್ರಸ್ನನ್ ಕುಮಾರ್ ಶೆಟ್ಟಿ ಕೆರಾಡಿ, ಸಿದ್ದಾಪುರ ತಾಲೂಕು ಪಂಚಾಯತ್ ಸದಸ್ಯರಾದ ವಾಸುದೇವ ಪೈ, ಹೊಸಂಗಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಅನಂತ್ ಶೆಟ್ಟಿ ಬಾಗಿಮನೆ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶ್ರೀಧರ್ ಪೂಜಾರಿ ಮತ್ತು ಹೊಸಂಗಡಿ – ಸಿದ್ದಾಪುರ ಗ್ರಾಮದ ಕಾಂಗ್ರೆಸ್ ಪಕ್ಷದ…
