Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಎಸ್.ಎಲ್.ಆರ್.ಎಂನ ಯಶಸ್ವಿ ಅನುಷ್ಠಾನದಿಂದ ವಂಡ್ಸೆ ಗ್ರಾಮ ಪಂಚಾಯತ್ ಗಮನ ಸಳೆದಿದೆ. ಈ ತನಕ ಹಸಿ ಕಸ ಮತ್ತು ಒಣ ಕಸ ಎಂದು ಎರಡು ವಿಭಾಗಗಳಲ್ಲಿ ತ್ಯಾಜ್ಯ ಸಂಗ್ರಹಣೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಅಪಾಯಕಾರಿ ಕಸ ನಿರ್ವಹಣೆಗೆ ಜಿಲ್ಲಾಡಳಿತ ಮುಂದಾಗಿದ್ದು ಉಡುಪಿ ಜಿಲ್ಲೆಯ ಮೂರು ಗ್ರಾಮ ಪಂಚಾಯತ್‌ಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಟಾನ ಮಾಡುತ್ತಿದ್ದು, ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಹೇಳಿದರು. ಅವರು ಅ.೨೨ರಂದು ವಂಡ್ಸೆ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿ ಮಾತನಾಡಿದರು. ಅಪಾಯಕಾರಿ ಕಸವಾದ ಸ್ಯಾನಿಟರ್ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯಗಳನ್ನು ಪ್ರತ್ಯೇಕವಾಗಿಯೇ ಮನೆಗಳಿಂದ ಸಂಗ್ರಹಿಸಬೇಕು. ಅದಕ್ಕೆ ಕೆಂಪು ಬಣ್ಣದ ಬಕೇಟನ್ನು ನೀಡಬೇಕು. ಅಪಾಯಕಾರಿ ಕಸವನ್ನು ಈ ಬಕೆಟಿಗೇ ಹಾಕಬೇಕು. ಜನರಿಗೆ ಈ ಬಗ್ಗೆ ಅರಿವು ಮೂಡಿಸಬೇಕು. ಈ ರೀತಿ ಮಾಡುವುದರಿಂದ ಎಸ್.ಎಲ್.ಆರ್.ಎಂನಲ್ಲಿ ಕಸ ವಿಂಗಡಣೆಯೂ ಸುಲಭವಾಗುತ್ತದೆ ಎಂದರು. ವಂಡ್ಸೆಯ ಎಸ್.ಎಲ್.ಆರ್.ಎಂ ಘಟಕ ಅಧ್ಯಯನಕ್ಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹೆದ್ದಾರಿ ಹೋರಾಟ ಸಮಿತಿ ಶಿರೂರು ಇದರ ಮುಂದಾಳತ್ವದಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಸ್ಥಳೀಯರ ಬೇಡಿಕೆಗಳನ್ನು ಆಗ್ರಹಿಸಿ ಟೋಲ್ ಚಲೋ ಅಭಿಯಾನ ಅಕ್ಟೋಬರ್ 30ರಂದು ಬೆಳಿಗ್ಗೆ 10ಗಂಟೆಗೆ ನಡೆಯಲಿದೆ. ಈಗಾಗಲೇ ಹೆದ್ದಾರಿ ಹೋರಾಟ ಸಮಿತಿ ಮುಂದಾಳತ್ವದಲ್ಲಿ ಸರ್ವಿಸ್ ರಸ್ತೆ ಬೇಡಿಕೆ ಸಲ್ಲಿಸಿದ್ದು ಬೇಡಿಕೆಗೆ ಸ್ಪಂದಿಸಿದ ಸಂಸದರು ಹೆದ್ದಾರಿ ವಲಯ ಕಛೇರಿ ಅಧಿಕಾರಿಗಳ ಜೊತೆ ಮಾತನಾಡಿ ಮಂಜೂರು ಮಾಡಿಸಿದ್ದರು. ಆದರೆ ಹೆದ್ದಾರಿ ಅಧಿಕಾರಿಗಳಿಂದ ಇದುವರೆಗೆ ಸ್ಪಷ್ಟತೆ ದೊರೆತಿಲ್ಲ. ಮಾತ್ರವಲ್ಲ ಸ್ಥಳೀಯ ಪಂಚಾಯತ್ ಸೇರಿದಂತೆ ಪ್ರಮುಖ ಲಿಂಕ್ ರಸ್ತೆಗಳನ್ನು ಕಡಿತಗೊಳಿಸಿದ್ದು ಇದುವರೆಗೆ ದುರಸ್ತಿಗೊಳಿಸಿಲ್ಲ. ಇದರ ಜೊತೆಗೆ ಕಂಪೆನಿ ಟೋಲ್‌ಗೇಟ್ ಆರಂಭಿಸಲು ಸಿದ್ದತೆ ನಡೆಸುತ್ತಿದೆ. ಸ್ಥಳೀಯ ೧೦ ಕಿ.ಮೀ ವ್ಯಾಪ್ತಿಯ ಒಳಗಿನವರಿಗೆ ರಿಯಾಯಿತಿ ನೀಡಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಟೋಲ್ ಚಲೋ ಅಭಿಯಾನ ಅಕ್ಟೋಬರ್ 20ರಂದು ಬೆಳಿಗ್ಗೆ 10 ಗಂಟೆಗೆ ಶಿರೂರು ಟೋಲ್ ಗೇಟ್ ಬಳಿ ನಡೆಯಲಿದೆ. ಸ್ಥಳೀಯ ಶಾಸಕರಾದ ಬಿ. ಎಮ್. ಸುಕುಮಾರ ಶೆಟ್ಟಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಸಮಿತಿ ಮತ್ತು ಮನೆ,ನಿವೇಶನ ರಹಿತರ ಹೋರಾಟ ಸಮಿತಿಯ ಆಶ್ರಯದಲ್ಲಿ ಉಡುಪಿ ಜಿಲ್ಲೆಯಾದ್ಯಂತ ಸರಕಾರದಿಂದ ಸಮೀಕ್ಷೆಯಲ್ಲಿ ಆಯ್ಕೆಗೊಂಡ ಅರ್ಹ ಬಡ ನಿವೇಶನ ರಹಿತ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡಲು ಸರಕಾರಿ / ಖಾಸಗೀ ಜಾಗ ಗುರುತಿಸಬೇಕೆಂದು ಒತ್ತಾಯಿಸಿ 18, ನವಂಬರ್ 2019 ಸೋಮವಾರದಿಂದ ಅನಿರ್ಧಿಪ್ಟಾವಧಿ ಉಡುಪಿ ಮಣಿಪಾಲ ಜಿಲ್ಲಾಧಿಕಾರಿ ಕಛೇರಿಗೆ ಎದುರು ಜರಗುವ ನಿವೇಶನ ರಹಿತರ ಭೂಮಿ ಹಕ್ಕಿನ ನಿಣಾ೯ಯಕಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಕನಾ೯ಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಕರೆ ನೀಡಿದರು. ಬೈಂದೂರು ಸಿಐಟಿಯು ಕಚೇರಿ ಸಭಾಂಗಣದಲ್ಲಿ ಜರಗಿದ ಬೈಂದೂರು, ತಗ್ಗಸೆ೯ಪಡುವರಿ, ಯಡ್ತರೆ ಗ್ರಾಮಗಳ ನಿವೇಶನ ರಹಿತರ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ನಿವೇಶನ ರಹಿತರ ಕೈಗೆ ಭೂಮಿ ಹಕ್ಕು ಪತ್ರ ಸಿಗುವ ತನಕ ಈ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕವಯಿತ್ರಿ ಸುಮಿತ್ರಾ ಡಿ ಐತಾಳ್ ಅವರ ಕವನ ಸಂಕಲನ ಮೌನರತಿ ಬಿಡುಗಡೆಯ ಅಂಗವಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕವನ ಸ್ಪರ್ಧೆಯ ಸಾರ್ವಜನಿಕ ವಿಭಾಗದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಯವರು ರಚಿಸಿದ ಕವನ “ರಾಧೆಯ ಸ್ವಗತ” ಪ್ರಥಮ ಬಹುಮಾನ ಪಡೆದಿದ್ದು ಅವರನ್ನು ಕಳೆದ ಭಾನುವಾರ ನಡೆದ ಸಮಾರಂಭದ ವೇದಿಕೆಯಲ್ಲಿ ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಕವಯಿತ್ರಿ ಸುಮಿತ್ರಾ ಡಿ ಐತಾಳ್, ಕುಂದಪ್ರಭ ಪತ್ರಿಕೆಯ ಸಂಪಾದಕ ಯು.ಎಸ್.ಶೆಣೈ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಎ. ಎಸ್.ಎನ್ ಹೆಬ್ಬಾರ್, ಉತ್ತಮ ಹೋಮಿಯೋ ಕ್ಲಿನಿಕ್ ನ ಡಾ.ಉತ್ತಮ ಕುಮಾರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹರೆಗೋಡು ಮಹಾವಿಷ್ಣು ಯುವಕ ಮಂಡಲ ರಿ. ಹಾಗೂ ಮಾನಸ ಯುವತಿ ಮಂಡಲದ ಕಛೇರಿಗೆ ನೆಹರು ಯುವ ಕೇಂದ್ರ ಉಡುಪಿಯಲ್ಲಿ ತರಬೇತಿ ಪಡೆಯುತ್ತಿರುವ 7 ಜಿಲ್ಲೆಗಳ ಯುವ ಸ್ವಯಂಸೇವಕರುಗಳು ಅಧ್ಯಯನ ಪ್ರವಾಸದ ಭಾಗವಾಗಿ ಸೋಮವಾರ ಭೇಟಿ ನೀಡಿ ಯುವ ಮಂಡಲಗಳ ಕಾರ್ಯವೈಖರಿಯ ಬಗ್ಗೆ ಚರ್ಚಿಸಿದರು. ಯುವಕ ಮಂಡಲ ಸ್ಥಾಪನೆ, ಕಾರ್ಯಕ್ರಮಗಳ ಆಯೋಜನೆ, ಆರ್ಥಿಕ ಮೂಲಗಳ ಸಂಯೋಜನೆ, ಸಂಘಟನೆ, ಸಮುದಾಯಕ್ಕೆ ಅರಿವು ಮೂಡಿಸುವ ಪ್ರಕ್ರಿಯೆ ಮುಂತಾದ ವಿಚಾರಗಳ ಬಗೆಗೆ ಯುವ ಸ್ವಯಂಸೇವಕರುಗಳು ಯುವ ಮಂಡಲದ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು. ಈ ಸಂದರ್ಭ ಉಡುಪಿ ನೆಹರು ಯುವ ಕೇಂದ್ರದ ಯುವ ಸಮನ್ವಯಾಧಿಕಾರಿ ವಿಲ್‌ಫ್ರೆಡ್ ಡಿಸೋಜಾ, ಲೆಕ್ಕಾಧಿಕಾರಿ ವಿಷ್ಣುಮೂರ್ತಿ, ಜಿ. ಎಸ್. ಹಿರೇಮಠ್, ಲಿಂಗರಾಜ್ ನಿಡುವಾನಿ, ಮಹಾವಿಷ್ಣು ಯುವಕ ಮಂಡಲದ ಅಧ್ಯಕ್ಷ ಬಸವ ದೊಡ್ಡಹಿತ್ಲು, ಮಾನಸ ಯುವತಿ ಮಂಡಲದ ಶ್ಯಾಮಲಾ, ಅನ್ನಪೂರ್ಣ, ಕಸ್ತೂರಿ, ಯುವಕ ಮಂಡಲದ ನರಸಿಂಹ ಗಾಣಿಗ ಉಪಸ್ಥಿತರಿದ್ದರು. ಯುವಕ ಮಂಡಲದ ಕಿಶೋರ್ ಆಚಾರ್ಯ ಸ್ವಾಗತಿಸಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಹಾತ್ಮ ಗಾಂಧಿ ಜಯಂತಿಯ ೧೫೦ನೇ ವರ್ಷದ ಅಂಗವಾಗಿ ಸ್ವದೇಶಿ, ಸವರಾಜ್, ಸ್ವಾವಲಂಬಿ ಮತ್ತು ಸ್ವಚ್ಛ ಭಾರತ ಸಾಕಾರಕ್ಕಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಂಡ ೧೫೦ ಕಿ.ಮೀ ಪಾದಯಾತ್ರೆಯ ಭಾಗವಾಗಿ ಮೂರನೇ ದಿನ ಬೈಂದೂರು ವಿಧಾನಸಭಾ ಕ್ಷೇತ್ರದ ಕೊಲ್ಲೂರಿನಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಪಾದಯಾತ್ರೆ ನೇತೃತ್ವ ವಹಿಸಿ ಮಾತನಾಡಿದ ಸಂಸದ ಬಿ. ವೈ. ರಾಘವೇಂದ್ರ ಅವರು, ರಾಷ್ಟ್ರೀಯ ನಾಯಕರ ಸೂಚನೆಯಂತೆ ಗಾಂಧೀಜಿ ಅವರ ೧೫೦ನೇ ಜನ್ಮ ದಿನಾಚರಣೆ ಅಂಗವಾಗಿ ದೇಶದಾದ್ಯಂತ ಗಾಂಧಿ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಪ್ರತಿ ಲೋಕಸಭಾ ವ್ಯಾಪ್ತಿಯಲ್ಲಿ ೧೫೦ ಕಿಲೋ ಮೀಟರ್ ಪಾದಯಾತ್ರೆಯ ಮೂಲಕ ಸಂಚರಿಸಿ ಗಾಂಧೀಜಿ ಅವರ ತತ್ವಾದರ್ಶಗಳನ್ನು ಜನರಿಗೆ ಮುಟ್ಟಿಸಿ, ಜನಜಾಗೃತಿ ಮೂಡಿಸುವ ಉದ್ದೇಶವನ್ನು ಇರಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ. ಬಾಬು ಶೆಟ್ಟಿ ತಗ್ಗರ್ಸೆ, ಶೋಭಾ ಪುತ್ರನ್, ಸುರೇಶ್ ಬಟ್ವಾಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಕುಂದರ್ ಮುಂತಾದವರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಶಾಸ್ತ್ರಿ ಸರ್ಕಲ್‌ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆಯುತ್ತಿರುವ ಫ್ಲೈಓವರ್‌ ಹಾಗೂ ಇತರ ಕಾಮಗಾರಿಗಳ ವಿಳಂಬ ಧೋರಣೆ ವಿರೋಧಿಸಿ ಕುಂದಾಪುರ ತಾಲ್ಲೂಕು ಪತ್ರಕರ್ತರ ಸಂಘ ಹಾಗೂ ಇತರ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ಪ್ರತಿಭಟನಾ ಸಭೆ ನಡೆಯಿತು. ಕೇಮಾರು ಸಾಂದೀಪನಿ ಮಠದ ಈಶ ವಿಠ್ಠಲದಾಸ ಸ್ವಾಮೀಜಿ  ಮಾತನಾಡಿ ಹಿಂದೆ ರಾಜರ ಆಡಳಿತ ಇದ್ದಾಗ ಆತನಿಗೆ ಮಾತ್ರ ನಮಸ್ಕಾರ ಹಾಕಿದರೆ ಬೇಡಿಕೆಗಳು ಈಡೇರುತ್ತಿದ್ದವು. ಆದರೆ, ಈಗ ಶ್ರೀಸಾಮಾನ್ಯ ತನ್ನ ಬೇಡಿಕೆ ಹಾಗೂ ಹಕ್ಕುಗಳನ್ನು ಪಡೆದುಕೊಳ್ಳಲು ಹಳ್ಳಿಯಿಂದ ದಿಲ್ಲಿವರೆಗೂ ಹಲವು ಮಂದಿಯ ಕಾಲುಗಳನ್ನು ಹಿಡಿಯುವ ಸ್ಥಿತಿ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು. ‘ಸ್ವಾತಂತ್ರ್ಯ ಬಂದ ನಂತರ ಅಧಿಕಾರಿ ಹಾಗೂ ಜನಪ್ರತಿನಿಧಿ ಎನ್ನುವ ಎರಡು ವರ್ಗಗಳು ಮಾತ್ರ ಉದ್ಧಾರವಾಗಿವೆ, ಜನಸಾಮಾನ್ಯರ ಪರಿಸ್ಥಿತಿ ಹಾಗೆಯೇ ಇದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಜನರ ಸಮಸ್ಯೆಗಳ ಕುರಿತಂತೆ ಅರಿವು ಇಲ್ಲದೇ ಇರುವುದು ನೋವಿನ ವಿಚಾರ. ಯಂತ್ರಿತ ಸೌಲಭ್ಯಗಳನ್ನು ರದ್ದು ಮಾಡಿ ಜನಸಾಮಾನ್ಯರಂತೆ ಬದುಕುವುದನ್ನು ರೂಢಿಸಿಕೊಂಡಾಗ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಚಿಕ್ಕನ್‌ಸಾಲ್‌ ರಸ್ತೆಯಲ್ಲಿರುವ ಕೇಂದ್ರ ಅಂಚೆ ಕಚೇರಿಯಲ್ಲಿ ಭಾನುವಾರ ನಡೆದ ಆಧಾರ್‌ ಕಾರ್ಡ್‌ ಆದಾಲತ್‌ನಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನ ವಿವಿಧ ಭಾಗಗಳ ಸಾವಿರಾರು ಜನರು ಭಾಗವಹಿಸಿದ್ದರು. ಭಾನುವಾರ ಬೆಳಿಗ್ಗೆ 7ರ ವೇಳೆಗಾಗಲೇ ಹಳ್ಳಿ ಹಾಗೂ ನಗರ ಪ್ರದೇಶಗಳಿಂದ ಸಾವಿರಾರು ಜನರು ಬಂದಿದ್ದರು. ಗಂಡ, ಹೆಂಡತಿ ಹಾಗೂ ಮಕ್ಕಳ ಸಮೇತವಾಗಿ ಸಾರ್ವಜನಿಕರು ಬಂದಿದ್ದರಿಂದ ಅಂಚೆ ಕಚೇರಿಯ ಆವರಣ ಭರ್ತಿಯಾಗಿತ್ತು. ಜನರು ತಮ್ಮ ಅವಕಾಶಕ್ಕಾಗಿ ಕಚೇರಿ ಹೊರಗಿನ ಚಿಕ್ಕನ್‌ಸಾಲ್‌ ರಸ್ತೆಯಿಂದ ಮುಖ್ಯರಸ್ತೆಯ ಪುರಸಭಾ ಕಚೇರಿಯವರೆಗೂ ಸರದಿ ಸಾಲಿನಲ್ಲಿ ನಿಂತಿದ್ದರು. ನಿರೀಕ್ಷೆಗೂ ಮೀರಿ ಜನರು ಜಮಾಯಿ ಸಿದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸ್‌ ಹಾಗೂ ಗೃಹ ರಕ್ಷಕ ಸಿಬ್ಬಂದಿ ಹರಸಾಹಸಪಟ್ಟರು. ಆಧಾರ್‌ ಕಾರ್ಡ್‌ನಲ್ಲಿನ ದೋಷ ಸರಿಪಡಿಸಿಕೊಳ್ಳಲು ಬಯಸಿ ಬಂದಿದ್ದ ನೂರಾರು ಜನರು ಅದಾಗಲೇ ಸೇರಿದ್ದ ಜನಸ್ತೋಮವನ್ನು ಕಂಡು ಬೆದರಿ, ಹಿಂತಿರುಗಿದರು. ‘ಪ್ರಾರಂಭದಲ್ಲಿ ಐದು ಯಂತ್ರಗಳನ್ನು ಹಾಕಲಾಗಿತ್ತು. ನಂತರ ಬಂದಿರುವ ಜನಸ್ತೋಮವನ್ನು ನೋಡಿ ಇನ್ನೂ ಎರಡು ಯಂತ್ರಗಳನ್ನು ಹೆಚ್ಚುವರಿಯಾಗಿ ಹಾಕಲಾಯಿತು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬ್ರಹ್ಮಾವರ: ‘ಕೃಷಿಯಲ್ಲಿ ಆದಾಯ ಹೆಚ್ಚಿಸಲು ಮಣ್ಣಿನ ಸಂರಕ್ಷಣೆ, ಮಣ್ಣಿನ ಪರಿಶೀಲನೆ, ತೇವಾಂಶ, ನೀರಿನ ಶೇಖರಣೆ ಅಗತ್ಯ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಸಂಶೋಧನಾ ನಿರ್ದೇಶಕ ಡಾ.ಎಂ.ಎ.ಶಂಕರ್ ಹೇಳಿದರು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಬ್ರಹ್ಮಾವರ ಉಳ್ಳಾಲದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ ಕೃಷಿ ಡಿಪ್ಲೊಮಾ ಮಹಾವಿದ್ಯಾಲಯ, ಕೃಷಿ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಕೃಷಿ ಮೇಳದ ‘ಲಾಭದಾಯಕ ಸಮಗ್ರ ಕೃಷಿ ಪದ್ಧತಿ’ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿದರು. ‘ಮಣ್ಣಿನ ಫಲವತ್ತತೆ ತಿಳಿದು ಕೃಷಿ ಮಾಡಿದಲ್ಲಿ ಲಾಭ ಪಡೆಯಬಹುದು. ಇದಲ್ಲದೇ ಕೃಷಿಯೊಂದಿಗೆ ಕುರಿ, ಕೋಳಿ, ಆಡು, ಹಂದಿ ಸಾಕಣೆಗೆ ಒತ್ತು ನೀಡಬೇಕು. ಅಡಿಕೆ, ಕಾಳು ಮೆಣಸು, ನೆಲಗಡಲೆ ಬೆಳೆಗಳನ್ನೂ ಭತ್ತ, ತೆಂಗು, ಬಾಳೆ, ಅಡಿಕೆಯೊಂದಿಗೆ ಬೆಳೆಯುವ ಮೂಲಕ ರೈತರು ಸಮಗ್ರ ಕೃಷಿಯತ್ತ ಚಿತ್ತ…

Read More

ಕುಂದಾಪ್ರ ಡಾಟ್ ಕಾಂ ವರದಿ. ಉಡುಪಿ: ಯುವಕರಿಗೆ ಸೂಕ್ತ ಸಮಯದಲ್ಲಿ ಸರಿಯಾದ ಮಾರ್ಗದರ್ಶನ ದೊರೆತಾಗ ಅವರು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡು ಸಮಾಜಮುಖಿಯಾಗಿ ಬದುಕುತ್ತಾರೆ. ಅಂತಹ ದೇಶ ಕಟ್ಟುವ ರಚನಾತ್ಮಕ ಕಾರ್ಯಗಳಲ್ಲಿ ಆಸಕ್ತರಾಗಿರುವ ಯುವ ಸಮೂಹವನ್ನು ಗುರುತಿಸಿ, ಒಗ್ಗೂಡಿಸಿ, ಅವರಿಗೆ ತರಬೇತಿ ನೀಡಿ ಸಮುದಾಯವನ್ನು ಜಾಗೃತವಾಗಿಸುವ ಬಹುದೊಡ್ಡ ಕಾರ್ಯದಲ್ಲಿ ನೆಹರು ಯುವ ಕೇಂದ್ರ ನಿರತವಾಗಿದೆ. ಇದಕ್ಕೆ ಪೂರಕವಾಗಿ ಉಡುಪಿ ಬ್ರಹ್ಮಗಿರಿಯಲ್ಲಿರುವ ನ್ಯಾಶನಲ್ ಇನ್ಸಿಟ್ಯೂಟ್ ಆಫ್ ಎಸ್.ಹೆಚ್.ಜಿ ತರಬೇತಿ ಸಂಸ್ಥೆ – ಪ್ರಗತಿ ಸೌಧದಲ್ಲಿ ಉಡುಪಿ ನೆಹರು ಯುವ ಕೇಂದ್ರದ ಸಾರಥ್ಯದಲ್ಲಿ ಅ.10 ಗುರುವಾರದಿಂದ ಆರಂಭಗೊಂಡಿರುವ 15 ದಿನಗಳ ರಾಷ್ಟ್ರೀಯ ಯುವ ಸ್ವಯಂಸೇವಕರ ಪ್ರವೇಶ ತರಬೇತಿ (National Youth Volunteer Induction Training) ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ಯುವ ಶಿಬಿರಾರ್ಥಿಗಳು ಸಕ್ರೀಯವಾಗಿ ಪಾಲ್ಗೊಂಡಿದ್ದಾರೆ. ಉಡುಪಿಯ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಂದ ಕಾರ್ಯಕ್ರಮ ಉದ್ಘಾಟನೆಗೊಂಡು ಈವರೆಗೆ ಹತ್ತು ಹಲವು ವಿಚಾರಗಳ ಬಗೆಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ಯುವ ಸಂಘಗಳ ಭೇಟಿ, ಅಧ್ಯಯನ ಪ್ರವಾಸ, ಪ್ರವಾಸಿ…

Read More