ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚ್‌ನಲ್ಲಿ ಧರ್ಮಗುರು ರೆ. ಫಾ .ರೋನಾಲ್ಡ್ ಮಿರಾಂದ ಅಧ್ಯಕ್ಷತೆಯಲ್ಲಿ ನಡೆದ ಚರ್ಚ್‌ನ ಪಾಲನ ಮಂಡಳಿ ಪದಾಧಿಕಾರಿಗಳ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ನಿವೃತ್ತ ಶಿಕ್ಷಕ ಸ್ಟ್ಯಾನಿ ಡಯಾಸ್ ಹಾಗೂ ಕಾರ್ಯದರ್ಶಿಯಾಗಿ ಅನಿತಾ ನಜ್ರೆತ್ ಇವರು ಸರ್ವಾನುಮತದಿಂದ ಆಯ್ಕೆಯಾದರು. ಮುಖ್ಯ ಸಂಘಟಕರಾಗಿ ಸಿಸಿಲಿಯಾ ರೆಬೆರೊ ಮತ್ತು ಆರ್ಥಿಕ ಸಮಿತಿ ಸದಸ್ಯರಾಗಿ ಡಾ. ರೋಶನ್ ಪಾಯಸ್, ವೋಲ್ಗಾ ಡಯಾಸ್ ಆಯ್ಕೆಯಾದರು. ಈ ಸಂದರ್ಭ ಮಾಜಿ ಉಪಾಧ್ಯಕ್ಷ ರಾಬರ್ಟ್ ರೆಬೆಲ್ಲೊ, ಮಾರ್ಟಿನ್ ಡಯಾಸ್ ಸಹಕರಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಪೋಷಕರು ಶಾಲೆಗೆ ಮಕ್ಕಳನ್ನು ಸೇರಿಸಿದ ತಕ್ಷಣ ತಮ್ಮ ಜವಾಬ್ದಾರಿಗಳನ್ನು ಮರೆಯಬಾರದು. ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರೊಂದಿಗೆ ಪೋಷಕರ ಸಹಕಾರವೂ ಅತೀ ಮುಖ್ಯ. ಆಗ ಮಾತ್ರ ಶಿಕ್ಷಣದ ಸಾರ್ಥಕತೆ ಸಾಧ್ಯ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಅಭಿಪ್ರಾಯ ಪಟ್ಟರು. ಅವರು ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಗಂಗೊಳ್ಳಿ ಇದರ ಸುವರ್ಣ ಮಹೋತ್ಸವದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ಬಗೆಗೆ ವ್ಯಾಮೋಹ ಹೆಚ್ಚುತ್ತಿದೆ. ಆದರೆ ಕನ್ನಡ ಮಾಧ್ಯಮ ಶಾಲೆಗಳು ಯಾವುದರಲ್ಲೂ ಕಡಿಮೆ ಇರುವುದಿಲ್ಲ. ಆಂಗ್ಲ ಭ್ರಮೆಯಿಂದ ಹೊರಬಂದು ಕನ್ನಡ ಶಾಲೆಗಳನ್ನು ಉಳಿಸುವ ಕೆಲಸ ಆಗಬೇಕಿದೆ ಎಂದು ಅವರು ಅಭಿಪ್ರಾಯ ಪಟ್ಟರು. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಪೋಸ್ತಲಿಕ್ ಕಾರ್ಮೆಲ್ ಕರ್ನಾಟಕ ಪ್ರಾಂತ್ಯಾಧಿಕಾರಿ ಸಿಸ್ಟ್ರ್ ಕಾರ್ಮೆಲ್ ರೀಟಾ ಎ.ಸಿ ಸ್ಮರಣ ಸಂಚಿಕೆಯ ಮುಖಪುಟ ಅನಾವರಣಗೊಳಿಸಿದರು. ಗಂಗೊಳ್ಳಿಯ ಚರ್ಚಿನ ಧರ್ಮಗುರು ಅಲ್ಬರ್ಟ್ ಕ್ರಾಸ್ತಾ ,ವಿಧಾನ ಪರಿಷತ್ ಸದಸ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇಶದಲ್ಲಿ ಸರಕಾರ ನಡೆಸುತ್ತಿರುವ ಬಿಜೆಪಿ ಗೋರಕ್ಷಣೆ ಹೆಸರಲ್ಲಿ ಹಿಂದೂ, ಮುಸ್ಲಿಂ ಎಂದು ವಿಭಾಜಿಸುತ್ತಿದ್ದು, ಗೋ ರಕ್ಷಣೆ ಹೆಸರಲ್ಲಿ ದಲಿತರ ಮೇಲೆ ದಾಳಿ ಮೂಲಕ ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ. ದಲಿತರ ಪ್ರಾಣಕ್ಕೆ ಪಶುವಿನಷ್ಟು ಕಿಮ್ಮತ್ತು ಸಿಗುತ್ತಿಲ್ಲ. ಬಿಜೆಪಿ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖದಂತಿದ್ದು, ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಅನುಷ್ಠಾನ ಮಾಡದೆ ಬಡವರ ಉದ್ಯೋಗ ಕಸಿಯುವ ಮೂಲಕ ಅವರ ಹೊಟ್ಟೆ ಮೇಲೆ ಹೊಡೆಯಲಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರಕಾರ ಬಡವರ ಮೇಲೆ ದಾಳಿ ನಡೆಸುತ್ತಿದೆ ಎಂದು ಕೇರಳ ಮಾಜಿ ಸಂಸದ ಎ. ವಿಜಯರಾಘವನ್ ಆರೋಪಿಸಿದರು. ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಉಡುಜಿ ಜಿಲ್ಲೆ, ಕುಂದಾಪುರ ಶಾಖೆ ಆಶ್ರಯದಲ್ಲಿ ಕುಂದಾಪುರ ನೆಹರು ಮೈದಾನದಲ್ಲಿ ನಡೆದ 6ನೇ ಕೃಷಿ ಕೂಲಿಕಾರರ ರಾಜ್ಯ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕನಿಷ್ಟ ಉದ್ಯೋಗ ಇನ್ನೂರು ದಿನಕ್ಕೆ ಹೆಚ್ಚಿಸಿ, ಕೂಲಿ ಮುನ್ನೂರು ರೂ.ಗೆ ಏರಿಸಿ, ಕೂಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಂಗಭೂಮಿ ತನ್ನ ಒಡಲಿನೊಳಗೆ ಭೂಮಿ ಎಂಬ ಪದವನ್ನು ಹಿಟ್ಟುಕೊಂಡಿದೆ. ಭೂಮಿಯ ಸ್ವರ್ಶ ದಕ್ಕಿದವರು ಮನಷ್ಯತ್ವನ್ನು ಕಂಡುಕೊಳ್ಳುತ್ತಾರೆ ಮತ್ತು ಸತ್ಯ ಹೇಳುತ್ತಾರೆ ರಂಗಭೂಮಿಯ ಜಗತ್ತಿನ ದೈನಂದಿನ ಸತ್ಯಗಳನ್ನು, ಬದುಕಬೇಕಾದ ದರ್ಶನವನ್ನು ಒಟ್ಟೊಟ್ಟಿಗೆ ತೆರೆದಿಡುತ್ತದೆ ಎಂದು ರಂಗ ನಿರ್ದೇಶಕ ಶ್ರೀಪಾದ್ ಭಟ್ ಶಿರಸಿ ಹೇಳಿದರು. ಅವರು ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ‘ರಂಗಸುರಭಿ 2016’ ನಾಟಕ ಸಪ್ತಾಹದಲ್ಲಿ ಸಮಾರೋಪ ನುಡಿಗಳನ್ನಾಡುತ್ತಿದ್ದರು. ಪುರಾಣ ಮತ್ತು ವರ್ತಮಾನವನ್ನು ಮುಖಾಮುಖಿ ಮಾಡುವುದರಿಂದ ಹಿಡಿದು ಮನುಷ್ಯನ ಒಳಹೊರ ಜಗತ್ತನ್ನು ಅನಾವರಣ ಮಾಡುವ, ಗೃಹಸ್ಥಾಶ್ರಮದಿಂದ ಸಮಾಜಾಶ್ರಮದ ವರೆಗೆ ಧೀರ್ಘ ಕಥಾನಕದಲ್ಲಿ ಸಣ್ಣವೇದಿಕೆಯಲ್ಲಿ ತೋರಿಸುವುದು ರಂಗಭೂಮಿಯ ತಾಕತ್ತು ಎಂದವರು ವಿಶ್ಲೇಶಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಮಾತನಾಡಿ ಬೈಂದೂರಿನ ಸಾಂಸ್ಕೃತಿಕ ಸಂಘಟನೆಗಳು ಸದಭಿರುಚಿಯ ಕಾರ್ಯಕ್ರಮಗಳ ಮೂಲಕ ಕಲಾರಸಿಕರನ್ನು ಸೃಷ್ಟಿಸುವ ಕೆಲಸ ಮಾಡಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಮರ್ಥ ಭಾರತ ಸ್ವಯಂಸೇವಾ ಸಂಘಟನೆಯ ನೇತೃತ್ವದಲ್ಲಿ ಜ. 28ರಂದು ನಡೆಯಲಿರುವ ‘ವಿವೇಕ ಪರ್ವ’ ಕಾರ್ಯಕ್ರಮ ಪೂರ್ವಭಾವಿಯಾಗಿ ಸಮರ್ಥ ಭಾರತ ಸಂಘಟನೆಯ ಕಾರ್ಯಾಲಯ ಬೈಂದೂರಿನ ಮೂಕಾಂಬಿಕಾ ಕಾಂಪ್ಲೆಕ್ಸ್‌ನಲ್ಲಿ ಆರಂಭಗೊಂಡಿತು. ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಧ್ಯಾಯ, ಸಮರ್ಥ ಭಾರತ ಬೈಂದೂರು ಘಟಕದ ಗೌರವಾಧ್ಯಕ್ಷ ವಿಶ್ವೇಶ್ವರ ಅಡಿಗ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಜಯಾನಂದ ಹೋಬಳಿದಾರ್, ಹಿರಿಯ ಮುಖಂಡ ಗೋಪಾಲಕೃಷ್ಣ ಶಿರೂರು, ಸಂಚಾಲಕರಾದ ಶ್ರೀಧರ ಬಿಜೂರು, ಭೀಮೇಶ್ ಬೈಂದೂರು, ಕಾರ್ಯದರ್ಶಿ ವಿಜಯ ಕಂಚಿಕಾನ್, ಮಹಿಳಾ ಸಂಚಾಲಕಿ ಪ್ರಿಯದರ್ಶಿನಿ ಬೆಸ್ಕೂರು, ಭಾಗೀರಥಿ ಮಯ್ಯಾಡಿ ಮೊದಲಾದವರು ಉಪಸ್ಥಿತರಿದ್ದರು. ಸ್ವಾಮಿ ವಿವೇಕಾನಂದರ 153ನೇ ಜನ್ಮದಿನಾಚರಣೆಯ ನೆನಪಿಗಾಗಿ ಜ.28ರಂದು ಬೈಂದೂರಿನ ಗಾಂಧಿ ಮೈದಾನದಲ್ಲಿ ಕಾರ್ಯಕ್ರಮ ಜರುಗಲಿದ್ದು, ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಪ್ರಮುಖ ವಾಗ್ಮಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದು, ಹದಿನೈದು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೀವನದಲ್ಲಿ ಸ್ಪಷ್ಟ ಗುರಿಯನ್ನಿಟ್ಟುಕೊಂಡು ಅದರೆಡೆಗಡೆಗೆ ಸಾಗವತ್ತ ನಿರಂತರ ಪ್ರಯತ್ನಶೀಲರಾಗಬೇಕು. ಕಂಡ ಕನಸ್ಸನ್ನು ನನಸಾಗಿಸಿಕೊಳ್ಳುವ ಉತ್ಕಟ ಬಯಕೆ ಮನುಷ್ಯನ ವ್ಯಕ್ತಿತ್ವವನ್ನು ಉತ್ತುಂಗಕ್ಕೇರಿಸುತ್ತದೆ. ಆದುದರಿಂದ ಜೀವನದ ಪ್ರತಿ ಹಂತದಲ್ಲಿಯೂ ಕನಸನ್ನು ನನಸು ಮಡುವ ಪ್ರಯತ್ನ ನನಗೆ ಯಶಸ್ಸನ್ನು ತಂದು ಕೊಟ್ಟಿತು ಎಂದು ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್‌ನ ನಿಯೋಜಿತ ರಾಷ್ಟ್ರೀಯ ಅಧ್ಯಕ್ಷ ಡಾ. ಸಂತೋಷ್ ಟಿ. ಸೋನ್ಸ್ ಹೇಳಿದರು. ಅವರು ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಕುಂದಾಪುರದ ಬಸ್ರೂರು ಮೂರುಕೈ ಬಳಿಯಿರುವ ಆಶೀರ್ವಾದ ಹಾಲ್‌ನಲ್ಲಿ ಜರುಗಿದ ರೋಟರಿ ವಲಯ೧ರ ಕ್ರೀಡಾಕೂಟದ ಬಹುಮಾನ ವಿತರಣಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮಾಜಿ ಜಿಲ್ಲಾ ಗವರ್ನರ್ ಕೃಷ್ಣಯ್ಯ ಶೆಟ್ಟಿ ಅವರು ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್‌ನ ನಿಯೋಜಿತ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಸಂತೋಷ್ ಟಿ. ಸೋನ್ಸ್ ಅವರನ್ನು ಸನ್ಮಾನಿಸಿ, ವೈದ್ಯಕೀಯ ಸೇವೆಯಲ್ಲಿ ಸೇವಾ ಮನೋಭಾವ, ರೋಗಿಗಳೊಂದಿಗಿನ ಗುಣಾತ್ಮಕ ಸ್ಪಂದನ, ಭಾಂಧವ್ಯ ವ್ಯಕ್ತಿಯನ್ನು ಶಕ್ತಿಯನ್ನಾಗಿಸುತ್ತದೆ ಎನ್ನಲು ಡಾ. ಸಂತೋಷ್ ಟಿ.…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ತಾಲೂಕಿನ ಗ್ರಾಮೀಣ ಭಾಗವಾದ ಆನಗಳ್ಳಿಯಲ್ಲಿ ಸದ್ದಿಲ್ಲದೆ ಬೆಳೆಯುತ್ತಿರುವ ಯುವ ಪ್ರತಿಭೆಯೊಬ್ಬರು ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುವುದಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಕಾಲೇಜಿನಿಂದ ಆರಂಭವಾದ ಪವರ್ ಲಿಫ್ಪಿಂಗ್ ಎನ್ನುವ ಕ್ರೀಡಾಸಕ್ತಿಯ ಪಯಣ ಇದೀಗ ಅಂತರಾಷ್ಟ್ರೀಯ ಮಟ್ಟದವರೆಗೂ ಬೆಳೆದು ನಿಂತಿರುವ ಬಗ್ಗೆ ಈ ಯುವಕನಲ್ಲಿ ಹೆಮ್ಮೆ ಇದೆ. ಸದ್ಯದಲ್ಲಿಯೇ ಜಮ್‌ಶೆಡ್‌ಪುರದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿರುವ ಬಸ್ರೂರಿನ ಶಾರದಾ ಕಾಲೇಜಿನ ಜಾಕ್ಸನ್ ಡಿಸೋಜಾ ಇದೀಗ ರಾಜ್ಯದ ಪವರ್ ಲಿಫ್ಟಿಂಗ್ ಸ್ಪರ್ಧಿಗಳ ಪೈಕಿ, ಪದಕ ಗೆಲ್ಲುವ ಭರವಸೆಯ ಕುದರೆ. ಆನಗಳ್ಳಿ ಜೋಸೆಫ್ ಡಿಸೋಜಾ ಹಾಗೂ ಕಾಮೀನ್ ಡಿಸೋಜಾ ದಂಪತಿಗಳ ಕಿರಿಯ ಪುತ್ರ ಜಕ್ಸನ್‌ಗೆ ಕಾಲೇಜು ದಿನಗಳಿಂದಲೂ ಬದುಕಿನಲ್ಲಿ ಏನಾದರು ಸಾಧಿಸಬೇಕು ಎನ್ನುವ ಹಂಬಲ, ಇದಕ್ಕಾಗಿ ಡಾ.ಬಿ.ಬಿ ಹೆಗ್ಡೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೆ ’ಪವರ್ ಲಿಫ್ಟಿಂಗ್’ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಪ್ರಾರಂಭದ ದಿನಗಳಲ್ಲಿಯೇ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಿಂದೆ ಯುವ ಜನ ಮೇಳ ಎಂಬುಂದು ಒಂದು ಊರ ಹಬ್ಬ ಅಗುತ್ತಿತ್ತು. ಅದರೆ ಇಂದು ಯುವಕರಲ್ಲಿ ಹಾಗೂ ಪ್ರೇಕ್ಷಕರಲ್ಲೂ ಕೂಡ ಅಸಕ್ತಿ ಕಡಿಮೆ ಆಗ ತೋಡಗಿದೆ. ಯುವಜನ ಮೇಳದಲ್ಲಿ ಸ್ಪರ್ಧೆಗೊಳ್ಳುವ ನಮ್ಮ ವೀರಗಾಸೆ, ಗೀಗೀಪದ, ಕೋಲಾಟ, ಲಾವಣಿ ಸೇರಿದಂತೆ ಇನ್ನಿತರ ಸಾಂಪ್ರದಾಯಿಕ ಕಲೆಗಳನ್ನು ಇಂದು ಇಂಟರ್‌ನೆಟ್, ಮೊಬೈಲ್, ಸಾಮಾಜಿಕ ಜಾಲತಾಣಗಳು ನುಂಗಿವೆ. ನಮ್ಮ ಸಾಂಪ್ರದಾಯಿಕ ಕಲೆಗಳ ಬಗ್ಗೆ ಹಿನ್ನಲೆ ಕೂಡ ನಮಗೆ ಗೋತ್ತಿಲ್ಲ. ಹಿನ್ನಲೆ ಗೋತ್ತಿದ್ದರೇ ಉತ್ತಮ ನಿರ್ವಹಣೆ ಮತ್ತು ಪ್ರದರ್ಶನ ನೀಡಲು ಸಾಧ್ಯವಿದೆ ಎಂದು ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಬೀಜಾಡಿ ಮೂಡು ಶಾಲಾ ವಠಾರದಲ್ಲಿ ಉಡುಪಿ ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಇಲಾಖೆ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಬೀಜಾಡಿ ಹಾಗೂ ಮಿತ್ರ ಸಂಗಮ ಬೀಜಾಡಿ-ಗೋಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕುಂದಾಪುರ ತಾಲೂಕು ಯುವಜನ ಮೇಳ ‘ಸಂಗಮ-2016’ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಲಯದ ಬಿದ್ಕಲ್ ಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿ ತಿಂಗಳು ನಡೆಯುವ ವಿನೂತನ ಮಾಸಿಕ ಕಾರ್ಯಕ್ರಮವಾದ ತಿಂಗಳ ಕಲಿಕಾ ಪ್ರದರ್ಶನದ ೫ನೇ ಕಾರ್ಯಕ್ರಮ ’ಶಾಲೆಗೆ ಬನ್ನಿ ಶನಿವಾರ, ಕಲಿಕೆಗೆ ನೀಡಿ ಸಹಕಾರ’ ಎಂಬ ಕಾರ್ಯಕ್ರಮದ ಅಡಿಯಲ್ಲಿ ದಾನಿಗಳಿಂದ ವಿವಿಧ ಕೊಡುಗೆ ಸ್ವೀಕರಿಸುವ ಪ್ರಥಮ ಸಮಾರಂಭವು ಹಾಲಾಡಿ-ಬಿದ್ಕಲ್‌ಕಟ್ಟೆ ಲಯನ್ಸ್ ಕ್ಲಬ್‌ನ ಸಹಯೋಗದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶಾಂತಾರಾಮ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಹಾಲಾಡಿ-ಬಿದ್ಕಲ್‌ಕಟ್ಟೆ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ಲ.ಉದಯ ಶೆಟ್ಟಿಯವರು ೫ನೇ ತಿಂಗಳ ಕಲಿಕಾ ಪ್ರದರ್ಶನಕ್ಕೆ ಚಾಲನೆ ನೀಡಿದರು. ಪ್ರಾಜೆಕ್ಟರ್, ಲ್ಯಾಪ್‌ಟಾಪ್ ಕೊಡುಗೆ ನೀಡಿದ ಸಂಧ್ಯಾ ಸುಬ್ರಹ್ಮಣ್ಯ ಅಡಿಗ ಹಾಗೂ ದಾನಿ, ನಿವೃತ್ತ ಮುಖ್ಯೋಪಾಧ್ಯಾಯ ಎಚ್ ಸುಬ್ಬಣ್ಣ ಶೆಟ್ಟಿಯವರನ್ನು ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಿ ಮಾತನಾಡಿದ ಲಯನ್ಸ್ ೩೧೭ ಸಿ ಜಿಲ್ಲಾ ಗವರ್ನರ್ ಲ. ದಿವಾಕರ ಶೆಟ್ಟಿ ಯವರು ’ಗ್ರಾಮೀಣ ಪ್ರದೇಶದಲ್ಲಿರುವ ಈ ಸರಕಾರಿ ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸ್ಥಳೀಯ ಜನಸಮುದಾಯ ಕೈಜೋಡಿಸುವ ಮೂಲಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿಯ ಪಂಚಗಂಗಾವಳಿ ಬಳಗದ ನೂತನ ಅಧ್ಯಕ್ಷರಾಗಿ ಜಿ.ಶ್ರೀನಿವಾಸ ಖಾರ್ವಿ ಆಯ್ಕೆಯಾದರು. ನಾರಾಯಣ ಸುಬ್ರಾಯ ಖಾರ್ವಿ (ಗೌರವಾಧ್ಯಕ್ಷ), ಸೌಪರ್ಣಿಕ ಬಸವ ಖಾರ್ವಿ, ಬೋರ್‌ಕಾರ್ ಮಾಧವ ಖಾರ್ವಿ, ಜಿ.ಎನ್.ಸತೀಶ ಖಾರ್ವಿ, ಮಾಧವ ಗೋವಿಂದ ಖಾರ್ವಿ, ಅನಂತ ಖಾರ್ವಿ (ಉಪಾಧ್ಯಕ್ಷರು), ಜಿ.ಎಂ.ರಾಘವೇಂದ್ರ ಖಾರ್ವಿ (ಕಾರ್ಯದರ್ಶಿ), ಸಂದೀಪ ಖಾರ್ವಿ, ಬೋರ್‌ಕಾರ್ ನಾಗರಾಜ ಖಾರ್ವಿ, ಸಜಿತ್ ಬಿ. (ಜತೆ ಕಾರ್ಯದರ್ಶಿ), ಎಂ.ಕೆ.ನಾಗರಾಜ ಖಾರ್ವಿ (ಖಜಾಂಚಿ), ಚೇತನ್ ಖಾರ್ವಿ (ಲೆಕ್ಕ ಪರಿಶೋಧಕ), ಜಗನ್ನಾಥ ಖಾರ್ವಿ, ಶಿಪಾ ಸಂತೋಷ ಖಾರ್ವಿ, ಬಿ.ಸಂತೋಷ ಖಾರ್ವಿ, ಬಿ.ರಾಮನಾಥ ಖಾರ್ವಿ, ಕೆ.ರಾಜ ಖಾರ್ವಿ, ಸಜಿತ್ ಖಾರ್ವಿ, ಸುಧಾಕರ ಖಾರ್ವಿ (ಕ್ರೀಡಾ ಕಾರ್ಯದರ್ಶಿಗಳು), ಜಿ.ಎನ್.ದಿಲೀಪ ಖಾರ್ವಿ, ಶಿಪಾ ನಾಗ ಖಾರ್ವಿ, ಜೋಗಿ ಸಂತೋಷ ಖಾರ್ವಿ, ಅಣ್ಣಪ್ಪ ಖಾರ್ವಿ, ಕೆ.ರಾಘವೇಂದ್ರ ಖಾರ್ವಿ, ಮಂಜುನಾಥ ಖಾರ್ವಿ, ಸಚಿನ್, ರೋಶನ್, ಕೀರ್ತನ್ (ಕಾರ್ಯಕಾರಿ ಸಮಿತಿ ಸದಸ್ಯರು), ನಾಗರತ್ನ, ಶೋಭಾ ಎಸ್.ಆರ್ಕಾಟಿ, ರೇಖಾ ಆರ್.ಕೆ., ಅಶ್ವಿನಿ ಎಂ., ಜಯಶ್ರೀ ಆರ್., ಅನುಷಾ ಆರ್., ಸೌಮ್ಯ,…
