ಕುಂದಾಪುರ: ಈ ಚುನಾವಣೆಯಲ್ಲಿ ರಾಜಕೀಯ ಪಕ್ಷವಾಗಿ ಬಿಜೆಪಿ ವ್ಯವಸ್ಥಿತ ಕಾರ್ಯ ಯೋಜನೆ ರೂಪಿಸಿದೆ. ಕಾಂಗ್ರೆಸ್‌ನಲ್ಲಿರುವ ಆಂತರಿಕ ಬಂಡಾಯದ ಗೊಂದಲ ಒಂದಷ್ಟು ಮತಗಳು ನಮ್ಮತ್ತ ಬರಲು ಪ್ರೇರಣೆ ನೀಡುತ್ತದೆ ಎಂದು ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಕುಂದಾಪುರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ಎರಡು ಅವಧಿಯಲ್ಲಿ ವಿಧಾನ ಪರಿಷತ್‌ನ ಸದಸ್ಯನಾದ ಅನಂತರ ನಮ್ಮದೇ ಸರಕಾರ ಇರುವಾಗ ಕರ್ನಾಟಕ ರಾಜ್ಯದ ಇತಿಹಾಸಧಿದಲ್ಲೇ ಪ್ರಥಮವಾಗಿ ಗ್ರಾ.ಪಂ. ಸದಸ್ಯರಿಗೆ ಗೌರವ ಧನ ನೀಡುವ ಬಗ್ಗೆ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಸ್ಥಳೀಯಾಡಳಿತ ಸಂಸ್ಥೆಗಳಿಗೆ ಒಂದಷ್ಟು ಶಕ್ತಿ ನೀಡಬೇಕು, ತಾ.ಪಂ. ನಗರಸಭೆ, ಪುರಸಭೆಗಳಿಗೆ ಅನುದಾನ ಹೆಚ್ಚಿಸಬೇಕು ಮತ್ತು ಸ್ಥಳೀಯಾಡಳಿತದ ಎಲ್ಲ ಸಮಸ್ಯೆಗಳಿಗೆ ಪರಿಹಾರ ತಂದುಕೊಡಬೇಕು ಎನ್ನುವ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ ಎಂದು ಅವರು ಹೇಳಿದರು. (ಕುಂದಾಪ್ರ ಡಾಟ್ ಕಾಂ) ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ ಸ್ಥಳೀಯಾಡಳಿತಗಳಿಗೆ ಸ್ವಾಯತ್ತೆ ನೀಡಬೇಕು ಎನ್ನುವ ಸಂವಿಧಾನದ 73ನೇ ತಿದ್ದುಪಡಿಯಲ್ಲಿ ಹೇಳಲಾದ ಎಲ್ಲ ಅಂಶಗಳು…
Author: ನ್ಯೂಸ್ ಬ್ಯೂರೋ
ಕುಂದಾಪುರ: ಕರಾವಳಿಯ ಇತಿಹಾಸ ಪ್ರಸಿದ್ಧ ಗೋಳಿಗರಡಿ ಮೇಳ ಗರಡಿಯ ವತಿಯಿಂದ ಯಕ್ಷಗಾನ ಪ್ರದರ್ಶನ ನೀಡುವ ಏಕೈಕ ಮೇಳ ಇದಾಗಿದೆ. ವಿಠಲ ಪೂಜಾರಿ ಅವರ ಸಮರ್ಥ ನೇತೃತ್ವದಲ್ಲಿ ಮೇಳ ಯಶಸ್ವಿ ತಿರುಗಾಟ ನಡೆಸುವ ಮೂಲಕ ಕಲಾಸೇವೆ ಮಾಡುತ್ತಿದೆ ಎಂದು ಯಕ್ಷಗಾನ ವಿಮರ್ಶಕ, ಉಪನ್ಯಾಸಕ ಪ್ರೊ.ಎಸ್.ವಿ.ಉದಯಕುಮಾರ್ ಶೆಟ್ಟಿ ಅಭಿಪ್ರಾಯ ಪಟ್ಟರು. ಅವರು ಸಾಸ್ತಾನದ ಗೋಳಿಗರಡಿ ದೈವಸ್ಥಾನದಲ್ಲಿ ನ.೨೨ರಂದು ನಡೆದ ಶ್ರೀ ಪಂಜುರ್ಲಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ದೇವರ ಸೇವೆ ಮತ್ತು ಸಾಸ್ತಾನ ದಿ|ಚಂದು ಪೂಜಾರಿ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭಿನಂದನಾ ಭಾಷಣ ಮಾಡಿದರು. ಇವತ್ತು ಕಲಾ ಸೇವೆಯಲ್ಲಿ ಪ್ರಶಸ್ತಿ ಪಡೆಯುವ ವ್ಯಕ್ತಿಗೆ ಆರ್ಹ ಮಾನದಂಡವಿರಬೇಕು. ಅದನ್ನು ಪ್ರಶಸ್ತಿ ನೀಡುವ ಆಯೋಜಕರು ಪರಿಗಣಿಸಬೇಕು. ಆರ್ಹರಿಗೆ ಪ್ರಶಸ್ತಿ ಲಭಿಸಿದಾಗ ಪ್ರಶಸ್ತಿಯ ಮೌಲ್ಯ ಹೆಚ್ಚಳವಾಗುತ್ತದೆ ಎಂದರು. ಬಡಗುತಿಟ್ಟಿನ ಹಿರಿಯ ಕಲಾವಿದ ಹೆಮ್ಮಾಡಿ ರಾಮ ಚಂದನ್ ಅವರಿಗೆ ಸಾಸ್ತಾನ ದಿ.ಚಂದು ಪೂಜಾರಿ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮತ್ಸ್ಯೋದ್ಯಮಿ ಆನಂದ ಸಿ.ಕುಂದರ್…
ಗಂಗೊಳ್ಳಿ : 1890ರ ದಶಕದಲ್ಲಿ ಆರಂಭವಾಗಿದ್ದ ಎಸ್.ವಿ. ವಿದ್ಯಾಸಂಸ್ಥೆಗಳು ನಿರಂತರವಾಗಿ ಸುತ್ತಮುತ್ತಲಿನ ಸಹಸ್ರಾರು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ನೀಡುವ ಮೂಲಕ ವಿದ್ಯಾ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನಮಾನವನ್ನು ಪಡೆದುಕೊಂಡಿದೆ. ಶಾಲೆಯ ಆರಂಭಿಸುವ ಸಮಯದಲ್ಲಿ ನಮ್ಮ ಹಿರಿಯರು ಪಟ್ಟ ಪರಿಶ್ರಮ ಹಾಗೂ ಹಿರಿಯರ ದೂರದೃಷ್ಟಿಯ ಫಲವಾಗಿ ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಯ ಸಾಧನೆ ವಿಶಿಷ್ಟ ಹಾಗೂ ಶ್ರೇಷ್ಠವಾದುದು ಎಂದು ಗಂಗೊಳ್ಳಿ ಜಿಎಸ್‌ವಿಎಸ್ ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ ಹೇಳಿದರು. ಅವರು ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಕೆನರಾ ಬ್ಯಾಂಕಿನ ನಿವೃತ್ತ ಸೀನಿಯರ್ ಮ್ಯಾನೇಜರ್ ಬಾಂಡ್ಯ ಪಾಂಡುರಂಗ ಪೈ ಬೆಂಗಳೂರು ಶುಭಾಶಂಸನೆಗೈದರು. ಶಾಲೆಯ ಸಂಚಾಲಕ ಎನ್.ಸದಾಶಿವ ನಾಯಕ್ ಉಪಸ್ಥಿತರಿದ್ದರು. ಶಾಲೆಯ ಪ್ರಾಕ್ತನ ವಿದ್ಯಾರ್ಥಿ, ಸುರತ್ಕಲ್‌ನ ಶ್ರೀನಿವಾಸ ಆಸ್ಪತ್ರೆಯ ಜನರಲ್ ಸರ್ಜನ್ ಡಾ.ಭರತ್ ಕುಮಾರ್ ಭಟ್ ಸ್ವಸ್ತಿವಾಚನಗೈದರು. ಈ ಸಂದರ್ಭ ಶಾಲೆಯ ಉತ್ತಮ ಆದರ್ಶ ವಿದ್ಯಾರ್ಥಿನಿ ಸುನೀತಾ ಪೂಜಾರಿ ಅವರಿಗೆ ಬಾಂಡ್ಯ ರಾಮರಾಮ ಪೈ ಸ್ಮಾರಕ…
ಕುಂದಾಪುರ: ಪುತ್ತೂರಿನ ಫಿಲೋಮಿನ ಕ್ರೀಡಾಂಗಣದಲ್ಲಿ ನಡೆದ ರೋಟರಿ 3180 ಇದರ ಜಿಲ್ಲಾ ಕ್ರೀಡಾಕೂಟದಲ್ಲಿ ಕ್ರಿಕೆಟ್ ಪಂದ್ಯಾಟದ ಫೈನಲ್ ಹಣಾಹಣಿ ನಡೆಯಿತು. ರೋಟರಿ ವಲಯ1ರ ಕ್ರಿಕೆಟ್ ಪಂದ್ಯಾಟದಲ್ಲಿ ಚಾಂಪಿಯನ್ ಶಿಫ್ ಪಡೆದು ರೋಟರಿ ಜಿಲ್ಲಾ ಕ್ರಿಕೆಟ್ ಪಂದ್ಯಾಟಕ್ಕೆ ಅರ್ಹತೆಯನ್ನು ಪಡೆದ ಶ್ರೀಪಾದ ಉಪಾಧ್ಯಾಯ ನಾಯಕತ್ವದ ರೋಟರಿ ಕ್ಲಬ್ ಕುಂದಾಪುರ ತಂಡ ಮಂಗಳೂರಿನಲ್ಲಿ ನಡೆದ ರೋಟರಿ ಜಿಲ್ಲಾ ಕ್ರಿಕೆಟ್ ಪಂದ್ಯಾಟದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಫೈನಲ್ ಪ್ರವೇಶಿಸಿತ್ತು. ಪುತ್ತೂರಿನಲ್ಲಿ ನಡೆದ ಫೈನಲ್ ಪಂದ್ಯಾಟದಲ್ಲಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರೆಲ್ ತಂಡವನ್ನು ಮಣಿಸಿ ರೋಟರಿ ಜಿಲ್ಲಾ ಕ್ರಿಕೆಟ್ ಪಂದ್ಯಾಟದಲ್ಲಿಯೂ ಚಾಂಪಿಯನ್ ಪಟ್ಟವನ್ನು ಪಡೆದುಕೊಂಡರು. ರೋಟರಿ ಕ್ಲಬ್ ಕುಂದಾಪುರ ತಂಡದ ಕಪ್ತಾನ ಶ್ರೀಪಾದ ಉಪಧ್ಯಾಯ, ಸದಸ್ಯರಾದ ಸತೀಶ್ ಕೋಟ್ಯಾನ್, ಪ್ರದೀಪ್ ವಾಜ್, ಮನೋಜ್ ನಾಯರ್, ದಿನೇಶ್ ಮದ್ದುಗುಡ್ಡೆ, ಕೀಶೋರ್ ಕೋಟ್ಯಾನ್, ರಂಜಿತ್ ಶೆಟ್ಟಿ, ಜುಬಿನ್ ತೋಳಾರ್, ಶಾಹಿದ್ ನಾಕುದ, ವಿಜಯ ಎಸ್. ಪೂಜಾರಿ, ರಾಘವೇಂದ್ರಚರಣ ನಾವಡ ಪಂದ್ಯಾಟದಲ್ಲಿ ಭಾಗವಹಿಸಿದ್ದರು. ಟ್ರೋಫಿ ಹಾಗೂ ಪದಕವನ್ನು ರೋಟರಿ ಜಿಲ್ಲಾ ಗವರ್ನರ್…
ಗಂಗೊಳ್ಳಿ: ಗಂಗೊಳ್ಳಿಯ ಕ್ರಾಂತಿವೀರರ ಅಭಿಮಾನಿ ಬಳಗದ ಆಶ್ರಯದಲ್ಲಿ ಹಿಂದು ಜಾಗರಣ ವೇದಿಕೆ ಗಂಗೊಳ್ಳಿ, ವೀರ ಸಾವರ್ಕರ್ ದೇಶಪ್ರೇಮಿಗಳ ಬಳಗ ಗಂಗೊಳ್ಳಿ, ಭಗತ್ ಸಿಂಗ್ ಅಭಿಮಾನಿಗಳ ಬಳಗ ಗಂಗೊಳ್ಳಿ ಹಾಗೂ ಸ್ವಾಮೀ ವಿವೇಕಾನಂದ ದೇಶಪ್ರೇಮಿ ಬಳಗ ಗಂಗೊಳ್ಳಿ ಇವರ ಸಹಕಾರದೊಂದಿಗೆ ಗಂಗೊಳ್ಳಿಯಲ್ಲಿ ಗೋ ಭಿಕ್ಷಾ ಯಾತ್ರೆ ಜರಗಿತು. ಗಂಗೊಳ್ಳಿಯ ಪೋರ್ಟ್ ಆಫೀಸಿನ ಬಳಿಯಿಂದ ಆರಂಭಗೊಂಡ ಗೋ ಭಿಕ್ಷಾ ಯಾತ್ರೆಯು ಗಂಗೊಳ್ಳಿ ಶ್ರೀ ರಾಮ ಮಂದಿರದ ಬಳಿ ಸಮಾಪನಗೊಂಡಿತು. ಮನುಷ್ಯನ ಬದುಕಿಗೆ ಆರ್ಥಿಕವಾಗಿ, ಧಾರ್ಮಿಕವಾಗಿ ಹಾಗೂ ಆರೋಗ್ಯದಾಯಕಳಾಗಿರುವ ಗೋಮಾತೆಯ ಸೇವೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಹೀಗಾಗಿ ಗೋ ರಕ್ಷಣೆಯ ಪವಿತ್ರ ಕಾರ್ಯಕ್ಕೆ ನೆರವಾಗುವ ದೃಷ್ಟಿಯಿಂದ ನಿಧಿಯನ್ನು ಸಂಗ್ರಹಿಸಿ ಗೋಶಾಲೆಗೆ ಹಸ್ತಾಂತರಿಸುವ ಉದ್ದೇಶದಿಂದ ಗಂಗೊಳ್ಳಿಯಲ್ಲಿ ಗೋ ಭಿಕ್ಷಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಯಾತ್ರೆ ಮೂಲಕ ಸಂಗ್ರಹಗೊಂಡಿರುವ ಹಣವನ್ನು ಗೋಪಾಡಿ ಹೂವಿನಕೆರೆಯಲ್ಲಿರುವ ಕಾಮಧೇನು ಗೋ ಸಂರಕ್ಷಣಾ ಕೇಂದ್ರಕ್ಕೆ ಹಸ್ತಾಂತರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಸಂಘಟನೆಗಳ ಪ್ರಮುಖರಾದ ರಾಘವೇಂದ್ರ ಗಾಣಿಗ, ನವೀನ ಪಿ., ವಿಶ್ವನಾಥ ಖಾರ್ವಿ, ರಾಜ ಖಾರ್ವಿ, ಮಹೇಶ…
ಬೈಂದೂರು: ಗೋಳಿಹೊಳೆ ಶ್ರೀ ಮಹಿಷಮರ್ಧಿನಿ ಸಭಾಂಗಣದಲ್ಲಿ ನಡೆಯುತ್ತಿರುವ ಕುಂದಾಪುರ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸ್ವಯಂಸೇವಕರು ನಿರ್ಮಲ ಗ್ರಾಮ ಅಭಿಯಾನ ಮತ್ತು ಅಂಗದಾನದ ಅರಿವು ಕುರಿತ ಬೀದಿನಾಟಕ ಪ್ರದರ್ಶಸಿದರು. ಗೋಳಿಹೊಳೆ ಮೂರ್ಕೈಯಿಂದ ಅರೆಶಿರೂರು ಪೇಟೆವರೆಗೆ ನಡೆದ ನಿರ್ಮಲ ಗ್ರಾಮ ಅಭಿಯಾನ ಜಾಥಾಕ್ಕೆ ಬಿಳಿಶಿಲೆ ಶ್ರೀ ವಿನಾಯಕ ದೇವಸ್ಥಾನದ ಮೊಕ್ತೇಸರ ಶಿವರಾಜ ಪೂಜಾರಿ ಚಾಲನೆ ನೀಡಿದರು. ಅರೆಶಿರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಎನ್‌ಎಸ್‌ಎಸ್ ಕಾರ್ಯಕರ್ತರು ಅಂಗದಾನದ ಕುರಿತ ಬೀದಿನಟಕ ಪ್ರದರ್ಶಿಸಿದರು. ಈ ಸಂದರ್ಭ ರಘುರಾಮ ಶೆಟ್ಟಿ ಮುಂಡ್ಸಾಲು, ಕಳವಾಡಿ ಮಂಜು ಪೂಜಾರಿ ಸಸಿಹಿತ್ಲು, ಚುಚ್ಚಿ ಕುಶಲ್ ಶೆಟ್ಟಿ, ಎನ್‌ಎಸ್‌ಎಸ್ ಯೋಜನಾಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ, ಶಿಬಿರಾಧಿಕಾರಿ ಚೇತನ್ ಶೆಟ್ಟಿ ಕೊವಾಡಿ, ಕಾಲೇಜು ಗ್ರಂಥಾಲಯಾಧಿಕಾರಿ ಮಹೇಶ್ ಬಾಬು, ರಾಜೇಶ್ ಶೆಟ್ಟಿ, ಪ್ರವೀಣ್ ಮೊಗವೀರ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪುರ: ಪ್ಲೋರಾ ಎಂಡ್ ಫೌನಾ ಕ್ಲಬ್ಬಿನ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಇಕೋಕ್ಲಬ್‌ಗಳ ಸಮ್ಮೇಳನದಲ್ಲಿ ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರಾದ ವಿ.ಎಲ್. ಉಪಾಧ್ಯರು ಸಂಪನ್ಮೂಲ ವ್ಯಕ್ತಿಯಾಗಿ ತನ್ನ ಛಾಯಾಚಿತ್ರಗಳ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ಪ್ರಭೇದದ ಪಕ್ಷಿಗಳ ವಿವರ ನೀಡಿದರು. ಇದೇ ಸಮಾವೇಶದಲ್ಲಿ ಖ್ಯಾತಿ ಚಿತ್ರ ಕಲಾವಿದ ಬೋಜ ಹಾಂಡಾರವರ ಪಕ್ಷಿಗಳ ವರ್ಣಚಿತ್ರಗಳ ಪ್ರದರ್ಶನ ನಡೆಯಿತು. ಕ್ಲಬ್ಬಿನ ಉಪಾಧ್ಯಕ್ಷ ಪ್ರಶಾಂತ ತೋಳಾರ ಉಪಸ್ಥಿತರಿದ್ದರು. ಬಿ.ಇ.ಓ. ಶ್ರೀಮತಿ ಶೋಭಾ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಡಾ| ಭಾಸ್ಕರ ಆಚಾರ್ಯರು ಬಹುಮಾನ ವಿತರಿಸಿದರು.
ಕುಂದಾಪುರ: ಕೆಲವಾರು ವರ್ಷಗಳ ಹಿಂದೆ ಡ್ರಾಯಿಂಗ್ ಹಾಳೆ, ಪೆನ್ನು, ಬ್ರಶ್ ಉಪಯೋಗಿಸಿಕೊಂಡು ಕಾರ್ಟೂನು ರಚಿಸಲಾಗುತ್ತಿತ್ತು. ಇಂದು ಕಂಪ್ಯೂಟರ್, ಮೌಸ್ ನಮ್ಮನ್ನು ಆವರಿಸಿಕೊಂಡಿದೆ. ಈ ಹೊಸ ಉಪಕಣಗಳಿಗೆ ನೀವು ಒಗ್ಗಿಕೊಂಡಿದ್ದೀರಾ? ಕಾರ್ಟೂನ್ ವೃತ್ತಿಯನ್ನಾಗಿ ಆರಿಸಿಕೊಳ್ಳುವವರಿಗೆ ಬದುಕಿದೆಯಾ? ಎಲ್ಲಾ ಕಾರ್ಟೂನಿಷ್ಠರನ್ನು ನೋಡುವ ಮತ್ತು ಪಿ. ಮಹಮ್ಮದರನ್ನು ನೋಡುವ ದೃಷ್ಠಿಕೋನಗಳು ಬೇರೆ ಬೇರೆ. ಇಲ್ಲಿ ಕಾರ್ಟೂನಿಷ್ಠರೇ ಅಸಹಿಷ್ಣುತೆಗೆ ಒಳಗಾಗುತ್ತಿದ್ದಾರಲ್ಲ! ಹೀಗೆ ಹತ್ತಾರು ಪ್ರಶ್ನೆಗಳು ಮಾಸ್ಟರ್ ಸ್ಟ್ರೋಕ್ಸ್ ಗಳಿಗೆ ಎದುರಾದವು. ಕಾಲ ಬದಲಾದಂತೆ ಹೊಸತನಕ್ಕೆ ಒಗ್ಗಿಕೊಳ್ಳಬೇಕಾದ್ದು ಇಂದಿನ ಅನಿವಾರ್ಯತೆ ಅದಕ್ಕೆ ತಕ್ಕೆಂತೆ ನಾವು ಬದಲಾಗುತ್ತಿದ್ದೇವೆ. ನೇರವಾಗಿ ಕಂಪ್ಯೂಟರ್‌ನಲ್ಲಿ ಬಿಡಿಸಬಹುದು. ಸಾಧ್ಯವಿಲ್ಲದವರು, ಹಾಳೆಯಲ್ಲಿ ಚಿತ್ರಿಸಿ, ಸ್ಕ್ಯಾನ್ ಮಾಡಿ ಬಣ್ಣ ತುಂಬುತ್ತಾರೆ. ಆದರೆ ರಾಜಕೀಯ ಕಾರ್ಟೂನುಗಳು ಕಪ್ಪು ಬಿಳುಪಿನಲ್ಲಿ ಪ್ರಕಟಗೊಂಡರೆ ಅದು ಇನ್ನಷ್ಟು ಚಂದವಾಗಿ ಕಾಣುತ್ತದೆ ಎಂಬ ಅಭಿಪ್ರಾಯ ಹೊರಬಂತು. ಕಾರ್ಟೂನು, ಕಲೆಯಲ್ಲಿ ಆಸಕ್ತಿ ಇರುವವರಿಗೆ ಅವಕಾಶ ಖಂಡಿತ ಇದೆ. ಯಾವ ತಂತ್ರಾಂಶ ಬಳಸಿ ಕಾರ್ಟೂನು ರಚಿಸುತ್ತೀರಿ ಎಂಬುದರ ಬದಲಿಗೆ, ನನ್ನ ಕೈಯಿಂದ ಎಷ್ಟು ಚನ್ನಾಗಿ ಕಲೆ ಅರಳಬಲ್ಲದು ಎಂಬುದಕ್ಕೆ…
ಕುಂದಾಪುರ: ಸಾಹಿತ್ಯ ಮತ್ತು ಚಿತ್ರಕಲೆಯ ಮೂಲಕ ಏಕಕಾಲದಲ್ಲಿ ಜನರಿಗೆ ನಾಟುವ ಶಕ್ತಿ ಇರುವುದು ಕಾರ್ಟೂನಿಗೆ ಮಾತ್ರ. ಕಲಾತ್ಮಕ, ಸಾರ್ವಕಾಲಿಕ ಹಾಗೂ ತಕ್ಷಣಕ್ಕೆ ಸ್ಪಂದಿಸುವಂತೆ ಮಾಡುವ ಗುಣ ಇದರಲ್ಲಿದೆ ಎಂದು ರಂಗಕರ್ಮಿ ಸುರೇಶ್ ಆನಗಳ್ಳಿ ಹೇಳಿದರು ಅವರು ಕುಂದಾಪುರ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಕಾರ್ಟೂನು ಕುಂದಾಪ್ರ ನೇತೃತ್ವದಲ್ಲಿ ಆಯೋಜಿಸಲಾದ ’ಕಾರ್ಟೂನು ಹಬ್ಬ’ದ ಮೂರನೇ ದಿನ ’ಮಾಸ್ಟರ್ ಸ್ಟ್ರೋಕ್ಸ್’ – ವ್ಯಂಗ್ಯಚಿತ್ರಕಾರರೊಂದಿಗಿನ ಸಂವಾದ ಉದ್ಘಾಟಿಸಿ ಮಾತನಾಡಿದರು. ಕಾರ್ಟೂನು ಕಲೆಯನ್ನು ಚಳುವಳಿಯ ಹಾಗೆ ಬೆಳೆಸುತ್ತಾ ಅಧ್ಯಯನ ಶಿಸ್ತಿಗೆ ಒಳಪಡಿಸುವುದಕ್ಕೆ ಅಡಿಪಾಯವನ್ನು ಸತೀಶ್ ಆಚಾರ‍್ಯ ಹಾಕುತ್ತಿದ್ದಾರೆ. ಹತ್ತಾರು ವರ್ಷಗಳ ಹಿಂದೆ ಕಂಡಿದ್ದ ಕಾರ್ಟೂನು ಕಾಳಜಿ ಮತ್ತೆ ಕಾಣುವಂತಾಗಿದೆ ಎಂದವರು ಶ್ಲಾಘಿಸಿದರು. ಕ್ರೀಡಾ ಪತ್ರಕರ್ತ ಸೋಮಶೇಖರ ಪಡುಕೆರೆ ಮಾತನಾಡಿ ಕಾರ್ಟೂನು ಸಮಾಜವನ್ನು ಕೆರಳಿಸುವ ಬದಲಿಗೆ ಅರಳಿಸುವ ಕೆಲಸ ಮಾಡುತ್ತದೆ. ಸತ್ಯ ಯಾವಾಗಲೂ ಕಹಿಯಾಗಿಯೇ ಇರುತ್ತದೆ. ಅದನ್ನು ಒಪ್ಪುವ ಮತ್ತು ತಿದ್ದಿಕೊಳ್ಳುವ ಬದ್ಧತೆ ನಮ್ಮಲ್ಲಿರಬೇಕು ಎಂದರು. ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ್ ಹೆಮ್ಮಾಡಿ ಉಪಸ್ಥಿತರಿದ್ದರು. ವ್ಯಂಗಚಿತ್ರಕಾರರಾದ ಪಿ.…
ಕುಂದಾಪುರ: ಶ್ರೀ ಹಾಗುಳಿ ಸೇವಾ ಸಮಿತಿ ಬಾಳಿಕೆರೆ ನೇತೃತ್ವದಲ್ಲಿ ಶ್ರೀ ಆದಿಮುಡೂರ ಹಾಗುಳಿ, ಚಿಕ್ಕು ಸಪರಿವಾರ ದೈವಸ್ಥಾನ ಬಾಳಿಕೆರೆ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೆಂಚನೂರು, ಯಕ್ಷಮಿತ್ರ ಬಳಗ ಕೆಂಚನೂರು ಇವರ ಸಂಯುಕ್ತ ಆಶ್ರಯದಲ್ಲಿ ಕೆಂಚನೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದ ಸಾಲಿಗ್ರಾಮ ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ದಿ.ಕಾಳಿಂಗ ನಾವಡರ ಒಡನಾಡಿ, ಎರಡು ದಶಕಗಳ ಹಿಂದೆ ಯಕ್ಷಗಾನ ಭಾಗವತರಾಗಿ, ವಿವಿಧ ಪ್ರಯೋಗಗಳನ್ನು ನಡೆಸಿದ ಸದಾಶಿವ ಅಮೀನ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಶ್ರೀ ಆದಿಮುಡೂರ ಹಾಗುಳಿ, ಚಿಕ್ಕು ಸಪರಿವಾರ ದೈವಸ್ಥಾನ ಬಾಳಿಕೆರೆ ಇದರ ನರಸಿಂಹ ಪೂಜಾರಿ ಪಡುಕೋಣೆ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ ಬಾಳಿಕೆರೆ, ರವಿ ಗಾಣಿಗ ಕೆಂಚನೂರು, ಚಂದ್ರ ಬಾಳಿಕೆರೆ, ಗುರುರಾಜ್ ಭಟ್ ಶಂಕರಪ್ಪನಕೊಡ್ಲು ಉಪಸ್ಥಿತರಿದ್ದರು.ಕಲಾಭಿಮಾನಿಗಳ ನೆಚ್ಚಿನ ತಾಣವಾದ ಇಲ್ಲಿ ಯಕ್ಷಗಾನಕ್ಕೆ ಉತ್ತಮ ಪ್ರೋತ್ಸಾಹ ದೊರಕುತ್ತಿದ್ದು, ವಜ್ರಮಾನಸಿ ಯಶಸ್ವಿ ಪ್ರದರ್ಶನಕ್ಕೆ ಸಹಕರಿಸಿದ ಮೇಳದ ಕಲಾವಿದರಿಗೂ, ಮೇಳದ ಯಜಮಾನರಿಗೂ, ನೆರೆದ…
