ಕುಂದಾಪುರ: ತಲ್ಲೂರಿನ ಪಾರ್ತಿಕಟ್ಟೆಯಲ್ಲಿ ಕೋಮುಸೌಹಾರ್ದತೆಗೆ ಧಕ್ಕೆ ತರುವಂತಿದ್ದ ಹಾಗೂ ಕಾನೂನು ಬಾಹಿರವಾಗಿ ಅಳವಡಿಲಾಗಿದ್ದ ಭಗವಧ್ವಜವನ್ನು ತೆಗೆದು ಹಾಕಲು ತಲ್ಲೂರು ಗ್ರಾ.ಪಂ. ಅಧ್ಯಕ್ಷರು ಹಾಗೂ ಪಿಡಿಓ ಅವರ ಬಳಿ ಮನವಿ ಮಾಡಿಕೊಂಡ ಬಳಿಕ ಅವರು ಕಾನೂನುಕ್ರಮ ಕೈಗೊಂಡಿದ್ದಾರೆ. ಇಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ಯಾವುದೇ ಪ್ರಯತ್ನ ನಡೆಸಿಲ್ಲ. ಆದರೆ ರಾಜಕೀಯ ಪ್ರೇರಿತವಾಗಿ ಸಾಮಾಜಿಕ ತಾಣಗಳಲ್ಲಿ ತನ್ನ ತೇಜೋವಧೆ ಮಾಡಲಾಗುತ್ತಿದೆ ಎಂದಿರುವ ತಲ್ಲೂರು ಗ್ರಾ.ಪಂ. ಸದಸ್ಯ ಉದಯಕುಮಾರ ತಲ್ಲೂರು ಘಟನೆ ಕುರಿತು ‘ಕುಂದಾಪ್ರ ಡಾಟ್ ಕಾಂ’ಗೆ ಸ್ಪಷ್ಟನೆ ನೀಡಿದ್ದಾರೆ. ತಲ್ಲೂರು ವಾರ್ಡ್-1ರ ಗಡಿಯಲ್ಲಿ ಹಟ್ಟಿಯಂಗಡಿ ಗ್ರಾಮ ಪಂಚಾಯತಿಗೆ ಸೇರಿದ 9 ಮನೆಗಳಿದ್ದು ಈ ಭಾಗದ ರಸ್ತೆ ಹಾಗೂ ಮೂಲಭೂತ ಸೌಕರ್ಯಗಳನ್ನು ತಲ್ಲೂರು ಗ್ರಾಮ ಪಂಚಾಯತ್ ವತಿಯಿಂದಲೇ ಅಭಿವೃದ್ಧಿಪಡಿಸಿತ್ತು. ಹಾಗಾಗಿ ಈ ಭಾಗದಲ್ಲಿ ಧ್ವಜವನ್ನು ಹಾಕುವ ಬಗ್ಗೆ ಪರವಾನಿಗೆ ನೀಡಲು ತಲ್ಲೂರು ಹಾಗೂ ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಜಂಟಿ ಸದನ ಸಮಿತಿಯಲ್ಲಿ ತೀರ್ಮಾನ ಅವಶ್ಯ. ಕೇವಲ ಒಂದು ಗ್ರಾಮ ಪಂಚಾಯತಿಯಿಂದ ತಾತ್ಕಾಲಿಕ ಪರವಾನಿಗೆ ಪಡೆದರೇ…
Author: ನ್ಯೂಸ್ ಬ್ಯೂರೋ
ಬೈಂದೂರು: ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು ಖಾಸಗೀ ಬಸ್ಸು ಮಾಲಕರ ಅಪವಿತ್ರ ಮೈತ್ರಿಯಿಂದಾಗಿ ಜನರು ರೈಲುಗಳ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಜನರಿಗೆ ರೈಲು ಸೌಲಭ್ಯ ಸಿಗದಿರಲು ಜನಪ್ರತಿನಿಧಿಗಳ ವೈಪಲ್ಯವಾಗಿದೆ. ಜಿಲ್ಲೆಯಲ್ಲಿ 35 ಸಾವಿರ ಸಹಿ ಸಂಗ್ರಹ ಮಾಡಿ ರೈಲು ಬೇಡಿಕೆ ಈಡೇರಿಸಲು ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಮುಂದೆ ಹಂತಹಂತವಾಗಿ ತೀವ್ರ ತೆರನಾದ ಹೋರಾಟಗಳನ್ನು ಸಿಪಿಐ(ಎಂ) ಪಕ್ಷ ನಡೆಸಲಿದೆ ಎಂದು ಬೈಂದೂರು ವಲಯ ಕಾರ್ಯದರ್ಶಿ ಸುರೇಶ್‌ಕಲ್ಲಾಗರ ಹೇಳಿದರು. ಅವರು ಬೈಂದೂರಿನಲ್ಲಿ ನಡೆದ ಕಾರವಾರ-ಬೆಂಗಳೂರು ರೈಲು ವೇಗ ಹೆಚ್ಚಳಕ್ಕಾಗಿ ಹಾಗೂ ಬೆಂಗಳೂರಿಗೆ ಮತ್ತೊಂದು ರೈಲು ಆರಂಭಿಸಲು ಒತ್ತಾಯಿಸಿ ಸಾರ್ವಜನಿಕರಿಂದ ಸಹಿ ಸಂಗ್ರಹ ಚಳವಳಿಯಲ್ಲಿ ಭಾಗವಹಿಸಿ ಮಾತನಾಡಿದರು. ಸಿಪಿಐ(ಎಂ) ಬೈಂದೂರು ವಲಯ ಮುಖಂಡರಾದ ವೆಂಕಟೇಶಕೋಣಿ ಮಾತನಾಡಿ ಖಾಸಗಿ ಮತ್ತು ಸರಕಾರಿ ಬಸ್ಸುಗಳ ಮಾಲಕರು ಹಬ್ಬ ಹರಿದಿನಗಳಲ್ಲಿ ಮನಸ್ಸೊ-ಇಚ್ಚೆ ಜನರಿಂದ ಸಾವಿರಾರು ರೂ.ಗಳನ್ನು ವಸೂಲಿ ಮಾಡಲಾಗುತ್ತಿದೆ. ಬಸ್ಸು ಮಾಲಕರಿಗೆ ಯಾವುದೇ ಕಡಿವಾಣ ಇಲ್ಲದಂತಾಗಿದೆ. ಕ್ರಮ ಜರುಗಿಸಬೇಕಾದ ಜಿಲ್ಲಾಡಳಿತ ತಪ್ಪಗೆ ಮಲಗಿದೆ ಎಂದು ಆರೋಪಿಸಿದರು. ಸಿಪಿಐ(ಎಂ) ಮುಖಂಡರಾದ ಹೆಚ್. ನರಸಿಂಹ, ರಾಜೀವ…
ಕುಂದಾಪುರ: ಪ್ರತಿಯೊಬ್ಬರಿಗೂ ಮಾತೃಭಾಷೆ ಮುಖ್ಯವಾಗಿರುತ್ತದೆ. ನಮ್ಮ ಭಾಷೆಯ ಮೇಲೆ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆಯನ್ನು ಬೆಳೆಸುವುದರೊಂದಿಗೆ ಬೇರೆ ಭಾಷೆಗೂ ಪ್ರಾಮುಖ್ಯತೆಯನ್ನು ನೀಡಬೇಕಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಹೇಳಿದರು. ಅವರು ಕನ್ನಡ ವೇದಿಕೆ ಕುಂದಾಪುರ, ಕುಂದಾಪುರ ತಾಲೂಕು ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘ, ಬಕುಳ ಸಾಹಿತ್ಯ ವೇದಿಕೆ, ಸರಕಾರಿ ಪ.ಪೂ.ಕಾಲೇಜು ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರದ ಸರಕಾರಿ ಪ.ಪೂ.ಕಾಲೇಜಿನ ಲಕ್ಷ್ಮಿ ನರಸಿಂಹ ಕಲಾಮಂದಿರದಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಜೊತೆ ಕನ್ನಡ ಮಾಸಾಚರಣೆಯ ಪ್ರಯುಕ್ತ ನಿತ್ಯ ಸತ್ಯ ಕನ್ನಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿಜ್ಞಾನಿ ಡಾ|ದಿನೇಶ್ ಆಶಯ ಭಾಷಣ ಮಾಡಿ ಭಾಷೆ ಎನ್ನುವುದು ಅನುಭವಿಸುವಂತಾಗಬೇಕು. ಪ್ರತಿಯೊಬ್ಬನು ಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಿಕೊಂಡು ಅದು ಬದುಕಿನ ಒಂದು ಭಾಗವಾಗಬೇಕು ಎಂದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ತಾಲೂಕು ಪ್ರೌಢಶಾಲಾ ಮುಖ್ಯೋಪಾಯರ ಸಂಘದ ಅಧ್ಯಕ್ಷ ದಿನಕರ ಆರ್.ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಕುಂದಾಪುರ…
ಗಂಗೊಳ್ಳಿ: ಇತ್ತೀಚೆಗೆ ಕರ್ನಾಟಕ ಸರಕಾರದ ಪದವಿಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಇವರ ವತಿಯಿಂದ ಚಿತ್ರದುರ್ಗದಲ್ಲಿ ನಡೆದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕರ ಟೆನ್ನಿಕಾಯ್ಟ್ ಪಂದ್ಯಾಟದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಬಾಲಕರು ದ್ವಿತೀಯ ಸ್ಥಾನ ಪಡೆದರು.. ಟ್ರೋಫಿಯೊಂದಿಗೆ ವಿಜೇತ ಕ್ರೀಡಾಳುಗಳಾದ ನಾಗೇಂದ್ರ ಮೊಗವೀರ,ನಾಗರಾಜ ನಾಯಕ್ ಮತ್ತು ಪ್ರಜ್ವಲ್ ಖಾರ್ವಿ. ಸರಸ್ವತಿ ವಿದ್ಯಾಲಯದ ಪ್ರಾಂಶುಪಾಲ ಆರ್ ಎನ್ ರೇವಣ್‌ಕರ್,ದೈಹಿಕ ಶಿಕ್ಷಣ ನಿರ್ದೇಶಕರಾದ ನಾಗರಾಜ ಶೆಟ್ಟಿ ಉಪಸ್ಥಿತರಿದ್ದಾರೆ. ವರದಿ: ನರೇಂದ್ರ ಎಸ್ ಗಂಗೊಳ್ಳಿ.
ಗಂಗೊಳ್ಳಿ: ವ್ಯಕ್ತಿ ಎಷ್ಟೇ ದೊಡ್ಡವನಾದರೂ ತಾಯ್ನೆಲ ಮತ್ತು ತಾಯಿ ಬಾಷೆಯನ್ನು ಮರೆಯಬಾರದು. ಕನ್ನಡ ಎನ್ನುವುದು ನಮ್ಮ ದಿನನಿತ್ಯದ ಬಳಕೆಯಲ್ಲಿ ಸರಾಗವಾಗಿ ಹರಿಯಬೇಕು. ಬಾಷೆಯ ಬಗೆಗೆ ಹೆಮ್ಮೆ ಇರಬೇಕೆ ಹೊರತು ಕೀಳರಿಮೆ ಸಲ್ಲದು. ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವಿಶ್ವನಾಥ ಭಟ್ ಅವರು ಅಭಿಪ್ರಾಯ ಪಟ್ಟರು. ಬೆಂಗಳೂರು ಹೋಟೆಲ್ ನ್ಯೂಸ್ ಮಾಸಪತ್ರಿಕೆ ಮತ್ತು ಕರ್ನಾಟಕ ಕರಾವಳಿ ನಾಗರಿಕ ಹಿತರಕ್ಷಣಾ ವೇದಿಕೆಯ ಗಂಗೊಳ್ಳಿ ಘಟಕವು ಇಲ್ಲಿ ಹಮ್ಮಿಕೊಂಡಿದ್ದ 60ನೇ ಕನ್ನಡ ರಾಜ್ಯೋತ್ಸವ ಕಾರ‍್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು. ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ಜಿ.ಕೆ. ವೆಂಕಟೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ನರೇಂದ್ರ ಎಸ್ ಗಂಗೊಳ್ಳಿ ಕಾರ‍್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಕ ನಾರಾಯಣ ಶೆಟ್ಟಿ. ರವೀಂದ್ರ ಪಟೇಲ್,ನಾಗರಾಜ ಶೇರುಗಾರ್, ರಾಘವೇಂದ್ರ ಪೂಜಾರಿ, ಆನಂದ ಗಾಣಿಗ ,ಆಕಾಶ್ ಗಾಣಿಗ , ಭಾಸ್ಕರ, ಲಕ್ಷ್ಮಣ, ಗುರು, ನಾರಾಯಣ, ಮುಕುಂದ, ನಾಗರಾಜ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.ಸ.ವಿ.ಮಾದರಿ ಹಿರಿಯ…
ಕುಂದಾಪುರ: ತಾಲೂಕಿನ ಹಟ್ಟಿಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದೆನ್ನಲಾದ ಸ್ಥಳದಲ್ಲಿ ಹಾಕಲಾಗಿದ್ದ ಭಗವದ್ವಜವನ್ನು ವಿನಾಕಾರಣ ಕಿತ್ತೆಸೆದ ತಲ್ಲೂರು ಗ್ರಾಮಾಡಳಿತದ ಕ್ರಮವನ್ನು ಖಂಡಿಸಿ ಇಂದು ತಲ್ಲೂರು ಗ್ರಾಮಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಕೋಟೆಬಾಗಿಲಿನ ಯುವಕರು ಇತ್ತೀಚೆಗೆ ಪಾರ್ತಿಕಟ್ಟೆ ಎಂಬಲ್ಲಿ ರಕ್ತೇಶ್ವರಿ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿದ್ದ ಭಗವದ್ವಜ ನೆಟ್ಟಿದ್ದರು. ಸೋಮವಾರ ಮಧ್ಯಾಹ್ನ ತಲ್ಲೂರು ಪಂಚಾಯಿತಿ ಗುಮಾಸ್ತರೊಬ್ಬರು ಈ ಬಾವುಟವನ್ನು ಕಿತ್ತಿದ್ದರೆನ್ನಲಾಗಿದೆ. ಪುನಃ ದ್ವಜ ನೆಟ್ಟಿದ್ದರೂ ತಲ್ಲೂರು ಗ್ರಾಮ ಪಂಚಾಯಿತಿ ಸದಸ್ಯರೋರ್ವರ ಅಣತಿಯಂತೆ ಮತ್ತೆ ರಾತ್ರಿ ಕೀಳಲಾಗಿದೆ ಎಂದು ಕೆಲ ಯುವಕರು ಆರೋಪಿಸಿದ್ದಾರೆ. ಈ ಬಗ್ಗೆ ಮಂಗಳವಾರ ನಡೆದ ತಲ್ಲೂರು ಗ್ರಾಮಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೋ ಪೂರ್ವಾಪರ ಇಟ್ಟುಕೊಂಡು ಧ್ವಜವನ್ನು ಕಿತ್ತು ತಪ್ಪೆಸಗಿದವರು ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಹಿಂದೂ ಸಂಘಟನೆಯ ಯುವಕರು ಎಚ್ಚರಿಸಿದ್ದರು. (ಕುಂದಾಪ್ರ ಡಾಟ್ ಕಾಂ ಸುದ್ದಿ) ಈ ನಡುವೆ ಸಾಮಾಜಿಕ ತಾಣಗಳಲ್ಲಿ ಭಗವಧ್ವಜ ಕಿತ್ತೆಸೆದಿರುವ ಬಗ್ಗೆ ಹಿಂದೂ ಪರ…
ಬೈಂದೂರು: ಇಲ್ಲಿಗೆ ಸಮೀಪದ ನಾಯ್ಕನಕಟ್ಟೆ ಬಳಿ ಲಾರಿಯೊಂದು ಮೊಪೆಡ್ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭಿರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಇಂದು ಸಂಜೆಯ ವೇಳೆಗೆ ನಡೆದಿದೆ. ನಂದನವನ ನಿವಾಸಿ ಲಕ್ಷ್ಮಣ ಭಟ್ (66) ಮೃತ ದುರ್ದೈವಿ. ಬೈಂದೂರಿನಿಂದ ಕುಂದಾಪುರಕ್ಕೆ ಸಾಗುತ್ತಿದ್ದ ಲಾರಿ ಉಪ್ಪುಂದ ಕಡೆಯಿಂದ ನಂದನವನದತ್ತ ಸಾಗುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದಾಗ ಬೈಕ್ ಸವಾರ ಪಕ್ಕಕ್ಕೆ ಬಿದ್ದು, ಬೈಕ್ ಮೇಲೆ ಲಾರಿ ಏರಿಹೋದ ಪರಿಣಾಮ ಬೈಕ್ ಸಂಪೂರ್ಣ ನುಜ್ಜು ಗುಜ್ಜಾಗಿತ್ತು. ಗಂಭೀರವಾಗಿ ಗಾಯಗೊಂಡ ಲಕ್ಷ್ಮಣ ಭಟ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿರುವಾಗ ಅವರು ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. (ಕುಂದಾಪ್ರ ಡಾಟ್ ಕಾಂ) ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಕ್ರೀಡೆಗಳು ಬದುಕಿನಲ್ಲಿ ಹೊಸ ಚೈತನ್ಯ ಮೂಡಿಸುವ ಜೊತೆಗೆ ನಮ್ಮ ಕೌಶಲ್ಯವನ್ನು ವೃದ್ಧಿಸುತ್ತದೆ. ನಮ್ಮೊಳಗಿನ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶ ಕ್ರೀಡಾಕೂಟದಿಂದ ದೊರೆಯುವುದರಿಂದ ರೋಟರಿ ವಲಯದ ಸದಸ್ಯರ ನಡುವಿನ ಭಾಂದವ್ಯ ವೃದ್ಧಿಸುವ ಸಲುವಾಗಿ ವಲಯ ಕ್ರೀಡೋತ್ಸವವನ್ನು ಆಯೋಜಿಸಲಾಗಿದೆ. ಎಲ್ಲ ಸದಸ್ಯರ ಉತ್ಸಾಹದ ಭಾಗವಹಿಸುವಿಕೆಯಿಂದ ಕ್ರೀಡಾಕೂಟ ಯಶಸ್ವಿಯಾಗಲು ಸಾಧ್ಯವಾಗಿದೆ ಎಂದು ರೋಟರಿ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್ ಹೇಳಿದರು. ಅವರು ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ರೋಟರಿ ವಲಯ 1ರ ಸದಸ್ಯರಿಗೆ ಏರ್ಪಡಿಸಿದ ರೋಟರಿ ವಲಯ ಕ್ರೀಡಾಕೂಟದ ಅಂಗವಾಗಿ ಕುಂದಾಪುರದ ಆರ್ಶೀವಾದ ಹಾಲ್‌ನಲ್ಲಿ ಆಯೋಜಿಸಿದ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅಧ್ಯಕ್ಷತೆವಹಿಸಿದ್ದರು. ಸಹನಾ ಡೆವಲಪರ‍್ಸ್‌ನ ನಿರ್ದೇಶಕ ಸುರೇಂದ್ರ ಶೆಟ್ಟಿ ಬಹುಮಾನ ವಿತರಿಸಿದರು. ವಲಯದ ಕಾರ್ಯದರ್ಶಿ ಸುದರ್ಶನ್ ಕೆ. ಎಸ್., ಕ್ರೀಡಾಕೂಟ ಸಂಯೋಜಕ ರವಿರಾಜ್ ಶೆಟ್ಟಿ, ಕ್ರೀಡಾಕೂಟ ಸಂಚಾಲಕ ರಂಜಿತ್ ಶೆಟ್ಟಿ, ರೋಟರಿ ಕುಂದಾಪುರ ಕಾರ್ಯದರ್ಶಿ ಸಂತೋಷ ಕೋಣಿ ಉಪಸ್ಥಿತರಿದ್ದರು. ರೋಟರಿ ಸದಸ್ಯರಾದ…
ಬೈಂದೂರು: ಸಿಬ್ಬಂದಿಯೊಬ್ಬ ತನ್ನ ಸೇವಾ ಅವಧಿಯಲ್ಲಿ ಪ್ರಾಮಾಣಿಕತೆ, ನಿಷ್ಠೆ ಹಾಗೂ ತನ್ನ ಕರ್ತವ್ಯ ಅರಿತು ಕೆಲಸಮಾಡಿದಾಗ ಜನಮನ್ನಣೆಗಳಿಸಲು ಸಾಧ್ಯ ಎನ್ನುವುದಕ್ಕೆ ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಂಕರ ಕೊಠಾರಿ ಉತ್ತಮ ನಿದರ್ಶನ ಎಂದು ಸಂಘದ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ ಹೇಳಿದರು. ಯಡ್ತರೆಯ ಸಂಘದ ಪ್ರಧಾನ ಕಛೇರಿ ಆವರಣದಲ್ಲಿ ನಡೆದ ಇತ್ತೀಚೆಗೆ ನಿವೃತ್ತರಾದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಂಕರ ಕೊಠಾರಿ ಹಾಗೂ ವ್ಯವಸ್ಥಾಪಕ ವೈ. ಸುರೇಶ್ ಶ್ಯಾನುಬಾಗ್ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸುಧೀರ್ಘ 19 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಕೊಠಾರಿ ಅವರು ಸಂಘದ ಸಿಬ್ಬಂದಿಗಳು ಹಾಗೂ ಆಡಳಿತ ಮಂಡಳಿಯ ನಡುವೆ ಸಂಪರ್ಕ ಕೊಂಡಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸಂಘದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಮಹತ್ತರವಾಗಿದೆ ಎಂದರು. ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ರಾಜು ಪೂಜಾರಿ, ಸಂಘದ ನಿರ್ದೇಶಕರಾದ ವೆಂಕ್ಟ ಪೂಜಾರಿ, ಸದಾಶಿವ ಪಡುವರಿ, ಬಾಬು ಶೆಟ್ಟಿ, ಚಿಕ್ಕು ಪೂಜಾರಿ, ಎನ್. ನಾಗರಾಜ ಶೆಟ್ಟಿ,…
ಗಂಗೊಳ್ಳಿ : ನಿವೃತ್ತಿ ಎನ್ನುವುದು ಪ್ರತಿ ಉದ್ಯೋಗಸ್ಥರ ಜೀವನದ ಸಹಜ ತಿರುವು. ದುಖಃ ಸಂತೋಷಗಳೆರಡೂ ಸಹಜ. ಅವೆಲ್ಲಕ್ಕಿಂತ ಹೆಚ್ಚಾಗಿ ಒಬ್ಬರ ನಿವೃತ್ತಿ ಮೊದಲಿನ ಬದುಕು ಇಡೀ ಸಂಸ್ಥೆ ಮತ್ತು ಸಮಾಜ ಹಮ್ಮೆಪಡುವಂತಿದ್ದರೆ ಅದು ನಿಜವಾದ ಸಾಧನೆ ಎಂದು ಜಿ.ಎಸ್ ವಿ.ಎಸ್ ಅಸೋಶಿಯೇಶನ್ನಿನ ಅಧ್ಯಕ್ಷರಾದ ಡಾ.ಕಾಶೀನಾಥ ಪೈ ಅಭಿಪ್ರಾಯಪಟ್ಟರು. ಅವರು ಇಲ್ಲಿಯ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ ಸತತ ನಲವತ್ತೊಂದು ವರುಷಗಳ ಕಾಲ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಜಿ.ಸದಾಶಿವ ಗಾಣಿಗರನ್ನು ಬೀಳ್ಗೊಡುವ ಸಮಾರಂಭದಲಿ ಅದ್ಯಕ್ಷತೆ ವಹಿಸಿ ಅವರನ್ನು ಅಭಿನಂದಿಸಿ ಮಾತನಾಡಿದರು. ಜಿ.ಎಸ್ ವಿ.ಎಸ್ ಅಸೋಶಿಯೇಶನ್ನಿನ ಕಾರ‍್ಯದರ್ಶಿ ಹೆಚ್ ಗಣೇಶ್ ಕಾಮತ್, ಸರಸ್ವತಿ ವಿದ್ಯಾಲಯದ ಕಾರ‍್ಯದರ್ಶಿ ಎನ್ ಸದಾಶಿವ ನಾಯಕ್, ಕಾಲೇಜಿನ ಪ್ರಾಂಶುಪಾಲ ಆರ್ ಎನ್ ರೇವಣ್‌ಕರ್ ,ಆಂಗ್ಲ ಮಾಧ್ಯಮ ಫ್ರೌಢಶಾಲೆಯ ಮುಖ್ಯೋಪಧ್ಯಾಯ ರಾಘವೇಂದ್ರ ಶೇರುಗಾರ್, ಆಡಳಿತ ಮಂಡಳಿಯ ಸದಸ್ಯ ಅಶ್ವಿನ್ ನಾಯಕ್, ಕಛೇರಿ ಸಿಬ್ಬಂದಿ ವರ್ಗದವರು ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಕಛೇರಿ ಯ ನಿಕಟವರ್ತಿ ಭಾಸ್ಕರ್…
