Author: Kundapra.com

ನಾಳೆಗಳ ನಿರ್ಮಾಣ ಎಂಬುದು ಹಿಂದಿನ ತಪ್ಪುಗಳ ಮರುಕಳಿಕೆಯೋ ಮುಂದುವರಿಕೆಯೋ ಆಗದಂತೆ ಎಚ್ಚರವಹಿಸುವುದೇ ಈಗ ಆಗಬೇಕಾದ ಮೊದಲ ಕೆಲಸ. ಹಿಂದಿನಿಂದ ಉಳಿದು ಬರುತ್ತಿರುವ ಸಾಂಸ್ಕೃತಿಕ ನೆನಪುಗಳು ಇಂದಿಗೂ, ಮುಂದಕ್ಕೂ ಮನುಕುಲಕ್ಕೆ ಎಷ್ಟು ಉಪಯುಕ್ತ, ಎಷ್ಟರಮಟ್ಟಿಗೆ ಅವು ನಮ್ಮನ್ನೂ, ನಾಳೆಗಳನ್ನೂ ಒಳಿತಿನತ್ತ, ಉನ್ನತಿಯತ್ತ ಕರೆದೊಯ್ಯಬಲ್ಲವು ಎನ್ನುವ ಎಚ್ಚರದ ವಿವೇಚನೆಯಿದ್ದಾಗ ಮಾತ್ರ ಸಾಂಸ್ಕೃತಿಕ ಸ್ಮೃತಿಯು ಒಂದು ಬೆಳಕಾಗಿ, ಒಂದು ಚೈತನ್ಯವಾಗಿ ಇಂದುಗಳನ್ನು ಎದುರಿಸಲು ನಮ್ಮ ಬೆನ್ನ ಬಲವಾಗಬಹುದು; ಹಾಗೆಯೇ ಭಾವೀ ಜನಾಂಗದ ಆತ್ಮಶಕ್ತಿಯನ್ನು ಕುಗ್ಗದ ಹಾಗೆ ಕಾಪಾಡುವ ಶಕ್ತಿಯೂ ಆಗಬಲ್ಲದು. – ಡಾ. ಬಿ.ಎನ್. ಸುಮಿತ್ರಾ ಬಾಯಿ, ಸಮ್ಮೇಳನಾಧ್ಯಕ್ಷೆ ನಾಡು ನುಡಿ ಸಂಸ್ಸೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ೨೦೧೬ರ ಸಮ್ಮೇಳನಾಧ್ಯಕ್ಷೆ ಡಾ. ಬಿ.ಎನ್. ಸುಮಿತ್ರಾ ಬಾಯಿ ಅವರ ಭಾಷಣದ ಪೂರ್ಣಪಾಠ ಮೂಡುಬಿದಿರೆ, ರತ್ನಾಕರವರ್ಣಿ ವೇದಿಕೆ: ಆಳ್ವರ ನುಡಿಸಿರಿ ರಾಷ್ಟ್ರೀಯ ಸಮಾವೇಶಗಳು ಪ್ರತಿವರ್ಷವೂ ಕನ್ನಡ ಮನಸ್ಸನ್ನು ವಿವಿಧ ನಿಟ್ಟಿನಿಂದ ಶೋಧಿಸುವ ಯತ್ನಗಳನ್ನು ಮಾಡುತ್ತಾ ಬಂದಿವೆ. ಆ ಕನ್ನಡ ಮನಸ್ಸು ಎದುರಿಸುತ್ತಾ ಬಂದಿರುವ ಸಾಹಿತ್ಯಕ ಮತ್ತು ಸಾಂಸ್ಕೃತಿಕ…

Read More

ನಾಡು ನುಡಿ ಸಂಸ್ಸೃತಿಯ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಇಂದು ತಂತ್ರಜ್ಞಾನದ ಹೊಡೆತಕ್ಕೆ ಸಿಕ್ಕು ನೇರ ಬದುಕಿನ ಸಂಪರ್ಕ ಕಡಿದುಕೊಂಡು ಮಾನಸಿಕ ಗುಲಾಮಗಿರಿಯಲ್ಲಿ ಬದುಕುತ್ತಿದ್ದೇವೆ. ತಂತ್ರಜ್ಞಾನವಾಗಲಿ, ಸಾಹಿತ್ಯವಾಗಲಿ ನಮ್ಮಲ್ಲಿನ ವೈಚಾರಿಕತೆಯನ್ನು ಎಚ್ಚರಿಸುವ ಕೆಲಸ ಮಾಡಿದರೇ ಮಾತ್ರ ಅದು ಯಶಸ್ವಿ ಸಂವಹನ ಮಾಧ್ಯಮವಾಗಿ ಉಳಿದುಕೊಳ್ಳುತ್ತದೆ ಎಂದು ಖ್ಯಾತ ಸಾಹಿತಿ ಡಾ. ಜಯಂತ ಗೌರಿಶ್ ಕಾಯ್ಕಿಣಿ ಹೇಳಿದರು. ಅವರು ವಿದ್ಯಾಗಿರಿಯ ರತ್ಮಾಕರವರ್ಣಿ ವೇದಿಕೆಯಲ್ಲಿ ನಾಡು ನುಡಿ ಸಂಸ್ಸೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ೨೦೧೬ಕ್ಕೆ ಭತ್ತದ ತೆನೆಗೆ ಹಾಲೆರೆದು, ವ್ಯಾಸಪೀಠದಲ್ಲಿನ ಪುಸ್ತಕವನ್ನು ಬಿಡಿಸಿ ಚಾಲನೆ ನೀಡಿ ಅವರು ಮಾತನಾಡಿದರು. ಜಾತಿ ಮತ, ಭಾಷೆಯ ಎಲ್ಲೆ ಮೀರಿ ಎಲ್ಲರೂ ಒಂದೆಡೆ ಸೇರುವುದೇ ನಿಜವಾದ ಹಬ್ಬ. ನಾವು ಎಲ್ಲಿದ್ದೇವೆ ಎನ್ನುವ ಭೇದ ಬೇಡ. ಕನ್ನಡದ ದೋಣಿಯಲ್ಲಿ ಎಲ್ಲರೂ ಹುಟ್ಟು ಹಾಕಿ ಮುನ್ನಡೆಸುವುದಷ್ಟೇ ಮುಖ್ಯವಾದುದು ಎಂದರು. ಸಮಾನ, ಸರಳ, ಪ್ರಾಮಾಣಿಕ ಜಗತ್ತೇ ನಿಜವಾದ ನಾಳೆ. ನಮ್ಮೊಳಗೆ ಪ್ರೀತಿ ಇದ್ದರೆ ಎಲ್ಲವೂ ಚಂದ ಎಲ್ಲವೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಗೆ ಪೂರ್ವಭಾವಿಯಾಗಿ ಆಳ್ವಾಸ್ ಸಿನಿಸಿರಿಯನ್ನು ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಿರು. ಹಿರಿಯ ರಂಗಕರ್ಮಿ ಬಿ. ಜಯಶ್ರಿ, ಆಳ್ವಾಸ್ ನುಡಿಸಿರಿಯ ಕಾರ್ಯಾಧ್ಯಕ್ಷ ಡಾ. ಎಂ. ಮೋಹನ ಆಳ್ವ. ವಿದ್ಯಾರ್ಥಿ ಸಿರಿ ಅಧ್ಯಕ್ಷೆ ಅನನ್ಯಾ ಮೊದಲಾದವರು ಉಪಸ್ಥಿತರಿದ್ದರು

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮಂಗಳೂರು: ಮೂಡಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಯುವ ಕನ್ನಡ ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನ ಆಳ್ವಾಸ್‌ ನುಡಿಸಿರಿ-2016 ಈ ಬಾರಿ ನ. 18ರಿಂದ 20ರ ವರೆಗೆ ಮೂಡಬಿದಿರೆ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿರುವ ರತ್ನಾಕರವರ್ಣಿ ವೇದಿಕೆಯಲ್ಲಿ ವಿಜೃಂಭಣೆಯಿಂದ ಜರಗಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ತಿಳಿಸಿದರು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕನ್ನಡ ಬಾಂಧವರ ಸಹಕಾರದೊಂದಿಗೆ ಕಳೆದ 12 ವರ್ಷ ಗಳಿಂದ ಯಶಸ್ವಿಯಾಗಿ ನಡೆದ ನುಡಿಸಿರಿ ಈ ಬಾರಿ 13ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಬಾರಿ ಕರ್ನಾಟಕ-ನಾಳೆಗಳ ನಿರ್ಮಾಣ ಎಂಬ ಪರಿಕಲ್ಪನೆಯೊಂದಿಗೆ ಸಮ್ಮೇಳನ ಆಯೋಜಿಸಲ್ಪಟ್ಟಿದೆ. ಹಿರಿಯ ವಿಮರ್ಶಕಿ ಡಾ| ಬಿ.ಎನ್‌. ಸುಮಿತ್ರಾ ಬಾಯಿ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿದ್ದು, ಕವಿ, ಕತೆಗಾರ ಡಾ| ಜಯಂತ ಗೌರೀಶ ಕಾಯ್ಕಿಣಿ ಉದ್ಘಾಟಿಸಲಿದ್ದಾರೆ ಎಂದರು. ನ. 18ರಂದು ಬೆಳಗ್ಗೆ 8.30ಕ್ಕೆ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದ್ದು, 9.30ಕ್ಕೆ ಉದ್ಘಾಟನೆ ಜರಗಲಿದೆ. ಉದ್ಘಾಟನ ಸಮಾರಂಭದಲ್ಲಿ ಅತಿಥಿಗಳಾಗಿ ಡಾ| ಮನು ಬಳಿಗಾರ್‌, ಡಾ| ಕೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆಯು ನಡೆಸಿಕೊಂಡು ಬರುತ್ತಿರುವ ಕನ್ನಡ ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯು ನವೆಂಬರ್ 18, 19 ಮತ್ತು 20ರಂದು ಮೂಡುಬಿದಿರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ಜರುಗಲಿದೆ ಎಂದು ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮೂರು ದಿನಗಳ ಕಾಲ ಜರಗುವ ಈ ಸಮ್ಮೇಳನದಲ್ಲಿ ಕನ್ನಡನಾಡಿನ ಖ್ಯಾತ ಕವಿಗಳು, ಸಂಶೋಧಕರು, ವಿಮರ್ಶಕರರು, ಕಲಾವಿದರು ಹಾಗೂ ಸಾಹಿತಿಗಳು ಭಾಗವಹಿಸಲಿದ್ದಾರೆ. ದಿನಾಂಕ 18ರಂದು ಬೆಳಗ್ಗೆ 9.30ಕ್ಕೆ ಸಮ್ಮೇಳನದ ಉದ್ಘಾಟನ ಸಮಾರಂಭ ನಡೆಯಲಿದ್ದು ದಿನಾಂಕ 20ರಂದು ಸಂಜೆ ಸಮಾರೋಪ ಸಮಾರಂಭವು ಜರುಗಲಿದೆ. ಈ ಸಮಾರೋಪ ಸಮಾರಂಭದಲ್ಲಿ ಕನ್ನಡ ನಾಡು ನುಡಿಗಾಗಿ ಶ್ರಮಿಸಿದ 13 ಮಂದಿ ಸಾಧಕರನ್ನು ‘ಆಳ್ವಾಸ್ ನುಡಿಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು 25,000 ನಗದು ಪುರಸ್ಕಾರ, ಪ್ರಶಸ್ತಿ ಪತ್ರ ಹಾಗೂ ಸ್ಮರರಣಿಕೆಗಳನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪುರಸ್ಕೃತರು : 1. ಡಾ. ಗಿರಡ್ಡಿ ಗೋವಿಂದರಾಜ ಧಾರವಾಡ ಜಿಲ್ಲೆಯ ರೋಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಹಲವು ವಿಶೇಷತೆಗಳೊಂದಿಗೆ ಆರಂಭಗೊಳ್ಳಲಿರುವ ಆಳ್ವಾಸ್ ನುಡಿಸಿರಿಗೆ ಪೂರಕವಾಗಿ ಕಲಾತ್ಮಕ ಸಿನಿಮಾಗಳಿಗೆ ವೇದಿಕೆಯಾಗಿರುವ ಆಳ್ವಾಸ್ ಸಿನಿಸಿರಿಯಲ್ಲಿ ಪ್ರಶಸ್ತಿ ಪುರಸ್ಕೃತ ಸಿನಿಮಾಗಳು ಪ್ರದರ್ಶನಗೊಳ್ಳಲಿದೆ. ನ.17ರಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ಸಿನಿಸಿರಿಯಲ್ಲಿ ಪ್ರಶಸ್ತಿ ವಿಜೇತ ಹಾಗೂ ಕನ್ನಡ ಸಿನಿಮಾರಂಗದಲ್ಲಿ ದಾಖಲೆ ಮಾಡಿರುವ ಒಟ್ಟು 12 ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ. ನ.17ರಂದು ನಾಗತಿಹಳ್ಳಿ ಚಂದ್ರಶೇಖರ್ ಅವರು ಈ ಮಿನಿ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನ.17ರಂದು ಗುಬ್ಬಚ್ಚಿಗಳು, ನಾನು ನನ್ನ ಕನಸು, ಸಿಂಹದ ಮರಿಸೈನ್ಯ, ನ.18ರಂದು ಬಂಗಾರದ ಮನುಷ್ಯ, ಅಮೆರಿಕಾ ಅಮೆರಿಕಾ, ದ್ವೀಪ, ನ.19ರಂದು ಡಿಸೆಂಬರ್ 1, ಅಮೃತಧಾರೆ, ಪುಷ್ಪಕ ವಿಮಾನ, ನ.20ರಂದು ಕಸ್ತೂರಿ ನಿವಾಸ, ಸತ್ಯ ಹರಿಶ್ಚಂದ್ರ, ನಾಗರಹಾವು ಸಿನಿಮಾಗಳು ಬೆಳಿಗ್ಗೆ 10.30, ಮಧ್ಯಾಹ್ನ 2.30 ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ. ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಪದವಿ ಕಾಲೇಜಿನ ಕುವೆಂಪು ಸಭಾಂಗಣವನ್ನು ರೂಪಿಸಲಾಗಿದೆ. ಮಿನಿ ಥಿಯೇಟರ್ ಎನ್ನಬಹುದಾದ ರೀತಿಯಲ್ಲಿರುವ ಈ ಸಭಾಂಗಣಕ್ಕೆ ಅತ್ಯಾಧುನಿಕ ಧ್ವನಿವರ್ಧಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡಬಿದಿರೆ: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಆಳ್ವಾಸ್‌ ಚಿತ್ರಿಸಿರಿ ರಾಜ್ಯ ಮಟ್ಟದ ಕಲಾಶಿಬಿರದ ಸಮಾರೋಪ ಸಮಾರಂಭದಲ್ಲಿ ಹಿರಿಯ ಚಿತ್ರಕಲಾವಿದ ಜಿ.ಎಲ್‌.ಎನ್‌. ಸಿಂಹ ಅವರಿಗೆ ಆಳ್ವಾಸ್‌ ಚಿತ್ರಸಿರಿ-2016 ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ವನ್ಯಜೀವಿ ಛಾಯಾಚಿತ್ರಕಾರ ಟಿ.ಎನ್‌.ಎ. ಪೆರುಮಾಳ್‌ ಅವರಿಗೆ ಆಳ್ವಾಸ್‌ ಛಾಯಾಚಿತ್ರ ಸಿರಿ-2016 ಪ್ರಶಸ್ತಿಗಳನ್ನು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಮೋಹನ ಆಳ್ವ ಅವರು ಪ್ರದಾನ ಮಾಡಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ, ಬೆಂಗಳೂರು ಆಯುಕ್ತರ ಕಚೇರಿಯ ಚಿತ್ರಕಲಾ ವಿಭಾಗದ ಸಹಾಯಕ ನಿರ್ದೇಶಕ ಮಹಾಂತೇಶ್‌ ಕಂಠಿ ಮಾತನಾಡಿ, ಕಲೆಯ ಏಳಿಗೆಗಾಗಿ ಸರಕಾರ ಮಾಡಬೇಕಾದ ಕಾರ್ಯವನ್ನು ಆಳ್ವಾಸ್‌ ಮಾಡುತ್ತಿದೆ. ಧರ್ಮ, ಸಮಾಜ ಸೇವಾ ಕ್ಷೇತ್ರಗಳಲ್ಲಿ ಡಾ| ವೀರೇಂದ್ರ ಹೆಗ್ಗಡೆ ಅವರು ಮಾಡುತ್ತಿರುವ ಸೇವೆಯಂತೆ ಶಿಕ್ಷಣ, ಕಲೆ, ಕ್ರೀಡೆ, ಆರೋಗ್ಯಾದಿ ರಂಗಗಳಲ್ಲಿ ಡಾ| ಮೋಹನ ಆಳ್ವ ಅವರು ಆವಿಸ್ಮರಣೀಯ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾ ಸಿದರು. ಆಳ್ವಾಸ್‌ನಲ್ಲಿ ನಡೆದಿರುವ ಚಿತ್ರಕಲಾ ಶಿಬಿರಗಳಲ್ಲಿ ರೂಪುಗೊಂಡಿರುವ ಕಲಾಕೃತಿಗಳೂ ಸೇರಿದಂತೆ ಆಳ್ವಾಸ್‌ನಲ್ಲಿ ಆರ್ಟ್‌…

Read More

ಮೂಡುಬಿದಿರೆ: 2016ನೇ ಸಾಲಿನ ಆಳ್ವಾಸ್ ಚಿತ್ರಸಿರಿ ಪ್ರಶಸ್ತಿಗೆ ಮೈಸೂರಿನ ಹಿರಿಯ ಚಿತ್ರಕಲಾವಿದ ಜಿ.ಎಲ್.ಎನ್ ಸಿಂಹ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 25ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದ್ದು ನ. 13ರಂದು ನಡೆಯಲಿರುವ ಆಳ್ವಾಸ್ ಚಿತ್ರಸಿರಿಯ ಸಮಾರೋಪದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಾ. ಎಂ.ಮೋಹನ್ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಚಿತ್ರಕಲಾವಿದರಾಗಿ ಸೇವೆ ಸಲ್ಲಿಸಿದ ಸಿಂಹ ಅವರು ಕಲಾಲೋಕಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ. ಸರಣಿಚಿತ್ರಗಳು, ಶ್ರೀಸೂಕ್ತ, ಪುರುಷಸೂಕ್ತ, ವಾಗಂಭೃಣೀಸೂಕ್ತ, ರುದ್ರಾಧ್ಯಾಯ, ಕಾಳಿಕಾ ಪುರಾಣ, ದಶಮಹಾವಿದ್ಯಾ, ಗಣೇಶಪುರಾಣ, ಮತ್ತು ಗೀತಗೋವಿಂದದ ದಶಾವತಾರ ಹೀಗೆ ಅತ್ಯಮೂಲ್ಯ ಕೃತಿಗಳು ಅವರ ಕೈಯಿಂದ ಮೂಡಿವೆ. ಇಲ್ಲಿಯ ತನಕ ಕೇವಲ ಶ್ರವಣ ಮಾಧ್ಯಮದಲ್ಲಿದ್ದ ಶ್ಲೋಕಗಳು ಅನ್ಯಾದೃಶ ಚಿಂತನೆಗಳುಳ್ಳ ಚಿತ್ರಗಳ ಮುಖಾಂತರ ಎಲ್ಲರ ಮನದಾಳಕ್ಕೆ ಇಳಿಯುವಲ್ಲಿ ಇವರ ಕಲಾಕೃತಿಗಳು ಮಹತ್ವವಾದ ಪಾತ್ರವಹಿಸಿದೆ. ಬಹುತೇಕ ಧ್ಯಾನಶ್ಲೋಕಗಳನ್ನು ಆಧರಿಸಿ ಬಿಡಿಬಿಡಿಯಾಗಿ ದೇವೀ ದೇವತೆಗಳ ಚಿತ್ರಗಳನ್ನು ರಚಿಸಿದ್ದಾರೆ. ಲೌಖಿಕ ವಿಷಯಗಳನ್ನು ಆಧರಿಸಿಯೂ ಚಿತ್ರಗಳನ್ನು ರಚಿಸಿದ್ದಾರೆ. ಇವರ ಕಲಾಕೃತಿಗಳು ಹಲವಾರು ಪ್ರತಿಷ್ಠಿತ ಕಲಾಗ್ಯಾಲರಿಗಳಲ್ಲಿ ಸಂಗ್ರಹಗೊಂಡಿವೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಕರ್ನಾಟಕ ರಾಜ್ಯ ಬಾಡಿಬಿಲ್ಡಿಂಗ್ ಸಂಸ್ಥೆ ಹಾಗೂ ದ.ಕ. ಜಿಲ್ಲಾ ಬಾಡಿಬಿಲ್ಡಿಂಗ್ ಸಂಸ್ಥೆ ಇವುಗಳ ಆಶ್ಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಕಾರದೊಂದಿಗೆ ಈ ಬಾರಿಯ ಆಳ್ವಾಸ್ ನುಡಿಸಿರಿ-2016ರಲ್ಲಿ ರಾಜ್ಯಮಟ್ಟದ ಮಿ. ಆಳ್ವಾಸ್ ನುಡಿಸಿರಿ ದೇಹದಾರ್ಢ್ಯ ಸ್ಪರ್ಧೆ ನಡೆಯಲಿದೆ ಎಂದು ರಾಜ್ಯ ದೇಹದಾರ್ಢ್ಯ ಸಂಸ್ಥೆಯ ಕಾರ್ಯಾಧ್ಯಕ್ಷ ಜಾನ್ ರೆಬೆಲ್ಲೊ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆಳ್ವಾಸ್ ನುಡಿಸಿರಿಯಲ್ಲಿ ಇದೇ ಬಾರಿಗೆ ದೇಹದಾರ್ಢ್ಯ ಸ್ಪರ್ಧೆಯನ್ನು ಪರಿಸಚಯಿಸಿದ್ದು ನ.19ರಂದು ಅಪರಾಹ್ನ 2.00 ಗಂಟೆಯಿಂದ 4.30ರವರೆಗೆ ವಿದ್ಯಾಗಿರಿಯ ಕೆ.ವಿ.ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ಅಂತಿಮ ಸುತ್ತಿನ ಸ್ಪರ್ಧೆಗಳು ನಡೆಯಲಿದೆ. ಒಟ್ಟು 7 ದೇಹತೂಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು ರಾಜ್ಯದ ಸುಮಾರು 100ಕ್ಕಿಂತ ಹೆಚ್ಚು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ದೇಹದಾಢ್ರ್ಯಪಟುಗಳು ಭಾಗವಹಿಸುವ ನಿರೀಕ್ಷೆ ಇದೆ. ಸ್ಪರ್ಧೆಯ ಕೊನೆಯಲ್ಲಿ ಎಲ್ಲಾ 7 ದೇಹತೂಕ ವಿಭಾಗದ ವಿಜೇತರು ಪ್ರತಿಷ್ಠಿತ ಮಿ. ಆಳ್ವಾಸ್ ನುಡಿಸಿರಿ ಪ್ರಸಸ್ತಿಗಾಗಿ ಸೆಣಸಾಡಲಿದ್ದಾರೆ. ಪ್ರತಿ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತರಿಗೆ ಹಾಗೂ ಮಿ. ಆಳ್ವಾಸ್ ನುಡಿಸಿರಿ ಪ್ರಶಸ್ತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಆಳ್ವಾಸ್ ನುಡಿಸಿರಿ ಅಂಗವಾಗಿ ಮೂಡುಬಿದಿರೆ ಪುತ್ತಿಗೆ ಆಳ್ವಾಸ್ ಪ್ರೌಢಶಾಲಾ ಆವರಣದಲ್ಲಿ ನ.10ರಿಂದ 13ರ ತನಕ ರಾಜ್ಯಮಟ್ಟದ ಚಿತ್ರಕಲಾ ಶಿಬಿರ ‘ಆಳ್ವಾಸ್ ಚಿತ್ರಸಿರಿ 2016’ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ 32 ಶ್ರೇಷ್ಠ ಸಮಕಾಲೀನ ಕಲಾವಿದರು ತಲಾ ಎರಡು (ಒಟ್ಟು 64) ಕಲಾಕೃತಿಗಳನ್ನು ಶಿಬಿರದಲ್ಲಿ ಪ್ರಸ್ತುತಪಡಿಸಲಿದ್ದಾರೆ. ಮೂಡುಬಿದಿರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮೀಜಿ ಉದ್ಘಾಟಿಸುವರು. ಉದ್ಯಮಿ ಮನೋಹರ ಶೆಟ್ಟಿ ಮುಖ್ಯ ಅತಿಥಿಯಾಗಿರುವರು ಎಂದು ಹಿರಿಯ ಕಲಾವಿದ, ಕಾರ್ಯಕ್ರಮ ಸಲಹಾ ಸಮಿತಿಯ ಗಣೇಶ ಸೋಮಯಾಜಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಮಾರೋಪದಲ್ಲಿ ಮೈಸೂರಿನ ಹಿರಿಯ ಕಲಾವಿದ ಜಿ.ಎಲ್. ಎನ್.ಸಿಂಹ ಅವರಿಗೆ 2016ನೇ ಸಾಲಿನ ‘ಆಳ್ವಾಸ್ ಚಿತ್ರಸಿರಿ’ ಪ್ರಶಸ್ತಿ ಪ್ರದಾನ ನಡೆಯಲಿದೆ. 25 ಸಾವಿರ ರೂ.ನಗದು ಬಹುಮಾನ ಒಳಗೊಂಡಿದೆ ಎಂದು ಹೇಳಿದರು. ಶಿಬಿರದ ಅವಧಿಯಲ್ಲಿ ಪ್ರತಿದಿನ ಸಾಯಂಕಾಲ ಕಲಾವಿದರು ತಮ್ಮ ಪೂರ್ವ ಕಲಾಕೃತಿಗಳ ಸ್ಲೈಡ್ ಶೋ ಹಾಗೂ ಕಲಾ ಸಂವಾದದಲ್ಲಿ ಭಾಗವಹಿಸುವರು. ಚಿತ್ರ ರಚನೆ…

Read More