ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಅಂತರಾಷ್ಟ್ರೀಯ ಖ್ಯಾತಿಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ‍್ಯ ಅವರ ಮನೆಯ ಮೇಲಿನ ಹೋರ್ಡಿಂಗ್‌ನಲ್ಲಿ ಹಾಕಲಾಗಿದ್ದ ‘ಕಾಂಗ್ರೆಸ್ ಮುಕ್ತ ಭಾರತ’ ಕಾರ್ಟೂನು, ಕುಂದಾಪುರದ ಕಾಂಗೆಸಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಪುರಸಭೆಯ ಮೂಲಕ ಉದ್ದೇಶಪೂರ್ವಕವಾಗಿ ತೆರವುಗೊಳಿಸಿದ ಘಟನೆ ನಡೆದಿದೆ. ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಖಂಡನೆ ಎದುರಾಗಿದೆ. ‘ಕಾಂಗ್ರೆಸ್ ಮುಕ್ತ ಭಾರತ’ ಎಂಬ ಶೀರ್ಷಿಕೆಯ ಕಾರ್ಟೂನ್ ಹೋರ್ಡಿಂಗಿನಲ್ಲಿ ದೇಶದಲ್ಲಿ ಬದಲಾಗುತ್ತಿರುವ ರಾಜಕೀಯ ಚಿತ್ರಣ ಹಾಗೂ ಬಿಜೆಪಿಯ ‘ಕಾಂಗ್ರೆಸ್ ಮುಕ್ತ ಭಾರತ’ ಘೋಷಣೆಯಂತೆ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತಿರುವುದನ್ನು ಕೇಂದ್ರವಾಗಿಟ್ಟುಕೊಂಡು ಚಿತ್ರಿಸಲಾಗಿದ್ದ ಕಾರ್ಟೂನ್ ದೇಶದ ವಿವಿಧ ಪತ್ರಿಕೆ ಹಾಗೂ ವೆಬ್ಸೈಟ್‌ಗಳಲ್ಲಿ ಪ್ರಕಟಗೊಂಡು ಭಾರಿ ಜನಪ್ರಿಯತೆ ಗಳಿಸಿತ್ತು. ಹಾಗಾಗಿ ಈ ಕಾರ್ಟೂನು ಪ್ರತಿ ಭಾರಿಯಂತೆ ಸತೀಶ್ ಆಚಾರ‍್ಯ ಅವರ ಮನೆಯ ಮೇಲಿನ ಕಾರ್ಟೂನ್ ಕಾರ್ನರ್‌ನಲ್ಲಿ ಕೂಡ ಜಾಗ ಪಡೆದಿತ್ತು. ಆದರೆ ಕುಂದಾಪುರ ಪುರಸಭೆ ಏಕಾಏಕಿ ಫ್ಲೆಕ್ಸ್ ನಿರ್ಮೂಲನೆಯ ನೆಪವೊಡ್ಡಿ ಈ ಕಾರ್ಟೂನ್ ತೆರವುಗೊಳಿಸಿದೆ. ಇದರ ಹಿಂದೆ ಕಾಂಗ್ರೆಸ್‌ನ ಕೆಲವರ ಒತ್ತಡವೂ ಇದ್ದು ಪುರಸಭೆಯಲ್ಲಿ ಈ ವಿಷಯ ಚರ್ಚೆಗೆ…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪ್ರ ಡಾಟ್ ಕಾಂ: ಕುಂದಾಪುರ ಪರಿಸರದಲ್ಲಿ ಗುಣಮಟ್ಟದ ಮತ್ತು ಮೌಲ್ಯಪೂರ್ಣ ಶೈಕ್ಷಣಿಕ ಅವಕಾಶಗಳು ವಿಪುಲವಾಗಿ ತೆರೆದುಕೊಳ್ಳದ ಕಾಲಘಟ್ಟದಲ್ಲಿ ಅಂದರೆ 1975ರ ವೇಳೆಗೆ ಹುಟ್ಟಿಕೊಂಡ ಸಂಸ್ಥೆ ಕುಂದಾಪುರ ಎಜುಕೇಶನ್ ಸೊಸೈಟಿ. ಕುಂದಾಪುರದ ಹೃದಯ ಭಾಗದಲ್ಲಿ ತನ್ನ ನೆಲೆಯನ್ನು ಕಂಡುಕೊಂಡ ಈ ಸೊಸೈಟಿ ಮೊದಲು ಆರಂಭಿಸಿದ್ದು ನರ್ಸರಿ ತರಗತಿಯನ್ನು. ಇಂದು ಅದು ಪದವಿ ಶಿಕ್ಷಣದ ವರೆಗೆ ಬೆಳೆದು ನಿಂತು ರಾಜ್ಯದಾದ್ಯಂತ ತನ್ನ ಕೀರ್ತಿಯನ್ನು ಪಸರಿಸುತ್ತಿದೆ. ಕುಂದಾಪುರ ತಾಲೂಕಿನ ವಿಭಿನ್ನ ಗ್ರಾಮೀಣ ಪ್ರದೇಶಗಳ ಬಡಕುಟುಂಬಗಳನ್ನು ಪ್ರತಿನಿಧಿಸುವ ಪ್ರತಿ ಮಗುವಿಗೂ ಆಂಗ್ಲ ಮಾಧ್ಯಮ ಶಿಕ್ಷಣದ ಅವಕಾಶಗಳನ್ನು ತೆರೆದಿಡಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಜನ್ಮ ತಾಳಿದ ಈ ಸಂಸ್ಥೆ ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಸಾಮಾಜಿಕ ಬದ್ಧತೆಯೊಂದಿಗೆ ನಾಲ್ಕು ಶಿಕ್ಷಣ ಸಂಸ್ಥೆಗಳ ಮೂಲಕ ಶೈಕ್ಷಣಿಕ ಕ್ರಾಂತಿಯೊಂದಕ್ಕೆ ಕಾರಣವಾಗಿದೆ. ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ಸಂಸ್ಥೆಗಳಲ್ಲಿ ವಿಪುಲವಾದ ಅವಕಾಶಗಳಿದ್ದು, ಎಲ್ಲಾ ರಂಗದಲ್ಲಿಯೂ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಂಸ್ಥೆಯು ಗುರುತಿಸಿಕೊಂಡು ಎಲ್ಲರ ಗಮನ ಸೆಳೆದಿದೆ. ಕುಂದಾಪ್ರ ಡಾಟ್ ಕಾಂ. ಶಿಕ್ಷಣ ಕ್ರಾಂತಿಯ ರೂವಾರಿ ಶ್ರೀ…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಹೊಸೂರು ಶ್ರೀ ಮಾಕಾಂಬಿಕಾ ದೇವಳ ಪ್ರೌಢಶಾಲೆ ಕನ್ನಡ ಮಾಧ್ಯಮ ವಿದ್ಯಾರ್ಥಿ ಶಶಿಕಾಂತ್ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಒಟ್ಟು 618 ಅಂಕಗಳಿಸಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾನೆ. ಕನ್ನಡ ಮಾಧ್ಯಮದಲ್ಲಿಯೂ 125ಕ್ಕೆ 125ಅಂಕ ಪಡೆದು ವಿಶೇಷ ಸಾಧನೆಗೈದಿದ್ದಾನೆ. ಹೊಸೂರಿನ ಗೋಪಾಲ ಮತ್ತು ಶಾರದಾ ದಂಪತಿಗಳ ಇಬ್ಬರು ಮಕ್ಕಳಲ್ಲಿ ಶಶಿಕಾಂತ್ ಹಿರಿಯವ. ಬೆಂಗಳೂರಿನಲ್ಲಿ ಅಡಿಗೆ ವೃತ್ತಿ ಮಾಡುತ್ತಿರುವ ಗೋಪಾಲ್, ಮನೆಯಲ್ಲಿ ಬೀಡಿ ಕಟ್ಟುವ ತಾಯಿ ಶಾರದಾ ಮಗನ ಓದಿಗೆ ಒತ್ತಾಸೆಯಾಗಿ ನಿಂತಿದ್ದಾರೆ. ತಂಗಿ ಸೃಜನ ಶ್ರೀ ಮೂಕಾಂಬಿಕಾ ಪ್ರೌಢಶಾಲೆಯಲ್ಲಿ ಈ ಭಾರಿ 10ನೇ ತರಗತಿ ವಿದ್ಯಾರ್ಥಿಯಾಗಿದ್ದು ಆಕೆಯೂ ಕಲಿಕೆಯಲ್ಲಿ ಚುರುಕು. ತನ್ನ ಸಾಧನೆಯ ಬಗ್ಗೆ ಕುಂದಾಪ್ರ ಡಾಟ್ ಕಾಂ ಗೆ ಪ್ರತಿಕ್ರಿಯಿಸಿರುವ ಶಶಿಕಾಂತ್, ದಿನದಲ್ಲಿ ಆರು ಗಂಟೆ ವ್ಯಾಸಂಗ ಮಾಡುತ್ತಿದ್ದೆ. ರಾತ್ರಿ ಓದುತ್ತಿದ್ದು, ಬೆಳಗ್ಗೆ ಓದುತ್ತಿರಲಿಲ್ಲ. ಶಾಲಾ ಆಧ್ಯಾಪಕ ವೃಂದ ಸಪೋರ್ಟ್ ಉತ್ತಮವಾಗಿತ್ತು. ವಿಜ್ಞಾನ ನನ್ನ ನೆಚ್ಚಿನ ಸಬ್ಜೆಕ್ಟ್ ಆಗಿದ್ದು, ಪಿಸಿಎಂಸಿ ತೆಗೆದುಕೊಂಡು ಟೆಕ್ನೀಶನ್ ಆಗಬೇಕು ಎನ್ನೋದು…
ಕನ್ನಡ ತಿಳಿಯದ ಹುಡುಗಿಯ ಛಲಕ್ಕೆ ದಕ್ಕಿತು ಕನ್ನಡದಲ್ಲಿ 99 ಅಂಕ ! ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಒಂದನೇ ತರಗತಿಯಿಂದ 9ನೇ ತರಗತಿವರೆಗೆ ಪ್ರಪಂಚದ ಆರು ದೇಶಗಳಲ್ಲಿ ಓದಿದ ಹುಡುಗಿ ಹತ್ತನೇ ತರಗತಿ ಓದಿಗೆ ಆಯ್ದುಕೊಂಡದ್ದು ಕುಂದಾಪುರದ ಶಾಲೆಯನ್ನು. ಹನ್ನೊಂದು ವರ್ಷಗಳಿಂದ ಕನ್ನಡ ಓದದೇ ದೇಶ-ವಿದೇಶ ಸುತ್ತಿದ್ದಹುಡುಗಿ ಶ್ರೇಯಾ ಗಣಪತಿ, ಎಸ್.ಎಸ್.ಎಲ್.ಸಿಗೆ ಕುಂದಾಪುರ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡವನ್ನು ದ್ವಿತೀಯ ಭಾಷೆಯಾಗಿ ಆಯ್ದುಕೊಂಡು 100ರಲ್ಲಿ 99 ಅಂಕಗಳಿಸಿ ಕನ್ನಡ ಪ್ರೀತಿ ಮೆರೆದಿದ್ದಾಳೆ. ಹೆಬ್ರಿ ಸಮೀಪದ ಸಂತೆಕಟ್ಟೆಯ ಗಣಪತಿ ಕಾಮತ್ ಹಾಗೂ ಕುಂದಾಪುರದ ಶುಭಾ ಕಾಮತ್ ಅವರ ಪುತ್ರಿಯಾಗಿರುವ ಶ್ರೇಯಾಗೆ ಎಲ್ಕೆಜಿ ಯಿಂದ ಶಿಕ್ಷಣಾಭ್ಯಾಸವನ್ನು ಆರಂಭಿಸಿದ ಬಳಿಕ ಇಲ್ಲಿಯವರೆಗೆ ಭಾರತ ಸೇರಿದಂತೆ ವಿಶ್ವದ ಆರು ಬೇರೆ ಬೇರೆ ದೇಶಗಳಲ್ಲಿ ಶಿಕ್ಷಣ ಪಡೆಯುವಂತಾಗಿತ್ತು. ಸಾರ್ಕ್ ನಲ್ಲಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ತಂದೆ ಗಣಪತಿ ಕಾಮತ್ ಉದ್ಯೋಗ ಕಾರಣದಿಂದ ಕೀನ್ಯಾ, ನೈಜೇರಿಯಾ, ತಾಂಜೇನಿಯಾ, ಭೂತಾನ್, ಉಗಾಂಡದಲ್ಲಿ ವಾಸಿಸುತ್ತಿದ್ದಾಗ ಅವರೊಂದಿಗೆ ಕುಟುಂಬವೂ ತೆರಳಿತ್ತು. ಕುಂದಾಪ್ರ ಡಾಟ್…
ಕುಂದಾಪ್ರ ಡಾಟ್ ಕಾಂ ವರದಿ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಆರ್ಯಭಟ ಸಾಂಸ್ಕೃತಿಕ ಸಂಘಟನೆ ನೀಡಲಾಗುತ್ತಿರುವ 2015ನೇ ಸಾಲಿನ ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಬೆಂಗಳೂರಿನ ಉದ್ಯಮಿ, ಸಮಾಜ ಸೇವಕ ದಿನೇಶ್ ವೈದ್ಯ ಅಂಪಾರು ಅವರಿಗೆ ಲಭಿಸಿದೆ. ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವುದನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಯಶಸ್ವಿ ಉದ್ಯಮಿ ಕುಂದಾಪುರ ತಾಲೂಕಿನ ಅಂಪಾರಿನ ದಿನೇಶ್ ವೈದ್ಯ ಅವರು ಬೆಂಗಳೂರಿನಲ್ಲಿ ನೆಲೆನಿಂತು ಸ್ವಂತ ಉದ್ಯಮದಲ್ಲಿ ತೊಡಗಿಕೊಂಡು ಇಂದು ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡವರಲ್ಲದೇ, ಸಾಮಾಜಿಕ ಕಾರ್ಯಗಳಲ್ಲಿಯೂ ನಿರಂತರವಾಗಿ ತೊಡಗಿಸಿಕೊಂಡು ಸಾಮಾಜಿಕ ಬದುಕಿನಲ್ಲಿ ಹಲವರಿಗೆ ಬೆಳಕಾದವರು. ಕಳೆದ ಒಂದೂವರೆ ದಶಕಗಳ ಹಿಂದೆ ಹೊಟ್ಟೆಪಾಡಿಗಾಗಿ ಬೆಂಗಳೂರು ನಗರಿಗೆ ತೆರಳಿದ್ದ ದಿನೇಶ್ ವೈದ್ಯ ಅವರು ಹೋಟೆಲ್ ಮುಂತಾದೆಡೆ ಕಾರ್ಯನಿರ್ವಹಿಸಿ ಮುಂದೆ 2002ರಲ್ಲಿ ಇನ್ನಿಬ್ಬರು ಸಹವರ್ತಿಗಳೊಂದಿಗೆ ‘ಬರಕೆ ಶೋಕೇಸ್ ಇಂಕ್’ ಸಂಸ್ಥೆಯನ್ನು ಹುಟ್ಟುಹಾಕಿ ಸ್ವಂತ ಉದ್ಯಮವನ್ನು ಆರಂಭಿಸಿದರು. ಮುಂದೆ ಅದು ಏನ್’ಸೈನ್ ಇಕ್ವಿಪ್ಮೆಂಟ್ ಪ್ರೈವೇಟ್ ಲಿಮಿಟೆಡ್ ಎಂದು ಮರುನಾಮಕರಣಗೊಂಡ ಬಳಿಕ 2012ರಲ್ಲಿ ಸಂಸ್ಥೆಯ ಮುಖ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಆರ್ಯಭಟ ಕಲ್ಚರಲ್ ಆರ್ಗನೈಜೇಷನ್ ನೀಡಲಾಗುತ್ತಿರುವ 2015ನೇ ಸಾಲಿನ ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಡಾ. ಸತೀಶ್ ಪೂಜಾರಿ ಅವರಿಗೆ ಲಭಿಸಿದೆ. ವೈದ್ಯಕೀಯ ಹಾಗೂ ಸಂಘಟನಾ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಸ್ವತಃ ಗಾಯಕರಾದ ಸತೀಶ್ ಪೂಜಾರಿ ಅವರು ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವುದಲ್ಲದೇ ಪ್ರಖ್ಯಾತ ಬಹು ಭಾಷಾ ಗಾಯಕರಾದ ಎಸ್. ಜಾನಕಿ, ವಾಣಿ ಜಯರಾಂ ಅವರ ಸಂಗೀತ ಕಾರ್ಯಕ್ರಮವನ್ನು ಕುಂದಾಪುರದಲ್ಲಿ ಯಶಸ್ವಿಯಾಗಿ ಸಂಘಟಿಸಿದ ಸೈ ಎನಿಸಿಕೊಂಡವರು. ಕುಂದಾಪುರದ ಶ್ರೀ ಮಾತಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾಗಿ, ಕೋಟದ ಪರಿವರ್ತನ ರಿಹ್ಯಾಬಿಲಿಟೇಶನ್ ಸೆಂಟರ್‌ನ ನಿರ್ದೇಶಕರಾಗಿ ವೈದ್ಯಕೀಯ ಕ್ಷೇತ್ರದಲ್ಲಿಯೂ ಅನುಪಮ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ ಇದರೊಂದಿಗೆ ಹ್ಯೂಮನ್ ರೈಟ್ ಫೆಡರೇಶನ್ ಉಡುಪಿ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ, ಸಾಲಿಗ್ರಾಮದ ಗುರುನರಸಿಂಹ ವಿವಿಧೋದ್ಧೇಶ ಸಹಕಾರ ಸಂಘದ ನಿರ್ದೇಶಕರಾಗಿ, ಬ್ರಹ್ಮಾವರ ಬಾರ್ಕೂರಿನ ಲಯನ್ಸ್ ಕ್ಲಬ್‌ನ ಸಕ್ರೀಯ ಸದಸ್ಯರಾಗಿ…
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಉಡುಪಿ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಎಂದು ಗುರುತಿಸಿಕೊಳ್ಳುವ ವಂಡ್ಸೆ ಶಾಲೆ ಈಗಾಗಲೇ ಶತಮಾನವನ್ನು ಸಾರ್ಥಕವಾಗಿ ಪೂರೈಸಿದೆ. 1914ರಲ್ಲಿ ಸ್ಥಾಪನೆಯಾದ ಈ ಶಾಲೆ ಈಗ 102ವರ್ಷ ದಾಟಿದೆ. ಒಂದು ಇಡೀ ಶತಮಾನವನ್ನು ಕಂಡಿರುವ ಈ ಶಾಲೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನವನ್ನು ನೀಡಿದೆ. ವಂಡ್ಸೆಯ ಸುತ್ತಮುತ್ತ ಭಾಗದ ಜನ ಅಕ್ಷರ ಕಲಿತಿದ್ದಿದ್ದರೆ ಈ ಶಾಲೆಯ ಮೂಲಕವೇ. 1990ರ ದಶಕದ ತನಕ ಸುತ್ತ ಹಳ್ಳಿಗಳಲ್ಲಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲೆಯಾಗಲಿ ಇರಲಿಲ್ಲ. ಖಾಸಗಿ ಶಾಲೆಗಳಂತೂ ಇರಲೇ ಇಲ್ಲ. ಶ್ರೀಮಂತ ಇರಲಿ, ಬಡವ ಇರಲಿ, ಶಾಲೆ ಎಂದಾಕ್ಷಣ ಚಕ್ಕಂತ ನೆನಪಾಗುತ್ತಿದ್ದುದು ಈ ಶಾಲೆಯೇ. ಹಾಗಾಗಿ ವಂಡ್ಸೆ ಶಾಲೆ ಎಂದರೆ ಸುತ್ತ ಹತ್ತಾರು ಗ್ರಾಮಗಳ ವಿದ್ಯಾದೇಗುಲ. ಶತಮಾನಕ್ಕೂ ಪೂರ್ವದಲ್ಲಿ ವಂಡ್ಸೆಯಲ್ಲಿಯೂ ಕೂಡಾ ಐಗಳ ಮಠ ಇತ್ತಂತೆ. ಧನಿಕರ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದರು. ತದನಂತರ ಕಿರಿಯ ಪ್ರಾಥಮಿಕ ಶಾಲೆಯಾಗಿ ರೂಪುಗೊಂಡ ಶಾಲೆ ಒಂದಿಷ್ಟು ವರ್ಷ ವಿದ್ಯಾಭಿಮಾನಿಗಳ ಮನೆಯಲ್ಲಿಯೂ…
ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ. ಕುಂದಾಪುರ: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ, ಎಳವೆಯಲ್ಲಿಯೇ ಈ ಹುಡುಗಿಯ ಸಾಧನೆ ಅಸದಳ! ಚದುರಂಗದ ಮೂಲಕ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗಮನಸೆಳೆದ ಬಾಲೆ ಕುಂದಾಪುರ ಹೆಸರನ್ನು ಕ್ರೀಡೆಯಮೂಲಕ ಎತ್ತರಕ್ಕೇರಿಸಿದ್ದಾಳೆ. ಅಮೂಲ್ಯ ಶೆಟ್ಟಿ. ಕುಂದಾಪುರ ಎಜ್ಯುಕೇಶನ್ ಸೊಸೈಟಿ ಆಡಳಿತಕ್ಕೊಳಪಟ್ಟ ವಿ.ಕೆ.ಆರ್.ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿ ಮುಗಿಸಿದ್ದಾಳೆ. ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಚದುರಂಗ ಸ್ಪರ್ಧೆಯಲ್ಲಿ ಸತತ 5 ಬಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದಲ್ಲದೇ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಪ್ರತಿಭಾನ್ವಿತೆ. ಬುದ್ಧಿಶಕ್ತಿಗೆ ಪ್ರಚೋದನೆ ನೀಡಿ ಮಕ್ಕಳನ್ನು ಬೌದ್ಧಿಕವಾಗಿ ಎತ್ತರಕ್ಕೆ ಬೆಳೆಸುವ ಚದುರಂಗ ಆಟದಲ್ಲಿ ಸಾಧನೆ ಶಿಖರವೇರುವ ಅದೃಷ್ಟಶಾಲಿಗಳು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಇಂತಹ ಪ್ರತಿಭಾನ್ವಿತರ ಸಾಲಿಗೆ ಸೇರುವ ಹೆಮ್ಮೆಯ ಕುವರಿ ಅಮೂಲ್ಯ. ಕುಂದಾಪ್ರ ಡಾಟ್ ಕಾಂ ವರದಿ. ಎಳವೆಯಲ್ಲೇ ಚದುರಂಗದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಚತುರೆ ಎನಿಸಿರುವ ಅಮೂಲ್ಯಳ ತಂದೆ ವಡೇರ ಹೋಬಳಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಬಿ. ಸುಧಾಕರ…
ಸೋಲಾರ್ ನೆಟ್ ಮೀಟರಿಂಗ್ ಸಿಸ್ಟಮ್ ಮೂಲಕ ಸೌರಶಕ್ತಿಯ ಸಮರ್ಪಕ ಬಳಕೆ. ಸುನಿಲ್ ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಒಂದೆಡೆ ಪವರ್‌ಕಟ್. ಮತ್ತೊಂದೆಡೆ ಏರುತ್ತಿರುವ ಕರೆಂಟ್ ಬಿಲ್. ಇದಕ್ಕೊಂದು ಮುಕ್ತಿ ದೊರಕಿಸುವ ನಿಟ್ಟಿನಲ್ಲಿ ಕೈಗೊಂಡದ್ದು ಮಾತ್ರ ಮಾದರಿ ಯೋಜನೆ. ಅದು ಸೋಲಾರ್ ನೆಟ್ ಮೀಟರಿಂಗ್ ಸಿಸ್ಟಮ್. ಹೇರಳವಾಗಿ ದೊರೆಯುವ ಸೌರಶಕ್ತಿಯನ್ನು ಉಪಯೋಗಿಸಿಕೊಂಡು ಇಡಿ ಕ್ಯಾಂಪಸ್‌ಗೆ ಬೇಕಾದಷ್ಟು ವಿದ್ಯುತ್ತನ್ನು ಬಳಸಿಕೊಳ್ಳುವುದಲ್ಲದೇ ಮಿಕ್ಕಿದ್ದನ್ನು ಮೆಸ್ಕಾಂಗೆ ಮಾರಾಟ ಮಾಡುವ ಈ ವಿನೂತನ ಯೋಜನೆಯನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ಅಳವಡಿಸಿಕೊಂಡದ್ದು, ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಆಡಳಿತಕ್ಕೊಳಪಟ್ಟ ಗುರುಕುಲ ಪಬ್ಲಿಕ್ ಸ್ಕೂಲ್ ಹಾಗೂ ಪಿಯುಸಿ ಶಿಕ್ಷಣ ಸಂಸ್ಥೆಗಳು. ಸೋಲಾರ್ ನೆಟ್ ಮೀಟರಿಂಗ್ ಸಿಸ್ಟಮ್: ಏನು, ಹೇಗೆ? ಗುರುಕುಲ ಸಂಸ್ಥೆಯ ಮೇಲ್ಛಾವಣಿಯಲ್ಲಿ ಸುಮಾರು 5 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ 225 ಸೋಲಾರ್ ಪ್ಯಾನಲ್ ಅಳವಡಿಸಲಾಗಿದೆ. ಇದರ ಮೂಲಕ ದಿನವೊಂದಕ್ಕೆ ಸರಾಸರಿ 250 ಯೂನಿಟ್ ಸೌರವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಆದರೆ ಇಲ್ಲಿನ ಉತ್ಪಾದನೆಯಾಗುವ ವಿದ್ಯುತ್ತನ್ನು ನೇರವಾಗಿ ಬಳಕೆ ಮಾಡಲಾಗದು. ಸೌರಶಕ್ತಿಯಿಂದ ಉತ್ಪಾದನೆಯಾದ ವಿದ್ಯುತ್‌ನ್ನು…
ಕುಂದಾಪ್ರ ಡಾಟ್ ಕಾಂ. ಬಿಡುಗಡೆಯ ಮುನ್ನವೇ ಬಹಳಷ್ಟು ಸದ್ದು ಮಾಡುತ್ತಿರುವ ರವಿ ಬಸ್ರೂರು ಅವರು ಕುಂದಾಪುರ ಕನ್ನಡ ಸಿನೆಮಾ ‘ಬಿಲಿಂಡರ್’ ಎಂಟ್ರಿ ಸಾಂಗಿಗೆ ರೋರಿಂಗ್ ಸ್ಟಾರ್ ಶ್ರೀ ಮುರಳಿ ಹಾಡಿದ್ದಾರೆ. ಚಿತ್ರದ ಇನ್ನೊಂದು ಹಾಡಿಗೆ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಹಾಡಿದ್ದ, ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವೀಡಿಯೋ ನೋಡಿ | ಬಿಲಿಂಡರ್ ಚಿತ್ರಕ್ಕೆ ಪುನಿತ್ ರಾಜಕುಮಾರ್ ಹಾಡು! – http://kundapraa.com/?p=12604
