ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿ. ಬೈಂದೂರು: ಕೋವಿಡ್ ಕಾಲದ ಸಂಕಷ್ಟದ ಕಥೆಗಳ ನಡುವೆ ಯುವಕರ ತಂಡವೊಂದು ನಿರಂತರ ಅರಿವು ಮೂಡಿಸುತ್ತಾ, ನೆರವು ನೀಡುತ್ತಾ ಗ್ರಾಮದ ಜನರು ಹಾಗೂ ಕೋವಿಡ್ ಪೀಡಿತರಿಗಾಗಿ ಅವಿರತವಾಗಿ ಶ್ರಮಿಸುತ್ತಿದೆ. ಬೈಂದೂರು ತಾಲೂಕಿನ ಶಿರೂರು ಗ್ರಾಮ ಅತ್ಯಧಿಕ ಕೋವಿಡ್ ಕೇಸ್ಗಳಿಂದ ಸುದ್ದಿಮಾಡಿದ ಹೊತ್ತಿನಲ್ಲಿಯೇ ಗ್ರಾಮದ ಯುವ ಪಡೆಯೊಂದು ಜನರ ರಕ್ಷಣೆಗೆ ನಿಂತಿದೆ. ಶಿರೂರಿನ ಅನಿವಾಸಿ ಭಾರತೀಯ ಉದ್ಯಮಿ ಮಣಿಗಾರ್ ಮೀರಾನ್ ಸಾಹೇಬ್ ಅವರ ಮುತುವರ್ಜಿಯಲ್ಲಿ, ಶಿರೂರು ಅಸೋಶಿಯೇಷನ್, ಗ್ರಾಮ ಪಂಚಾಯತ್, ಆರೋಗ್ಯ ಇಲಾಖೆ ಸಹಕಾರದಲ್ಲಿ ಯುವ ಪತ್ರಕರ್ತ ಅರುಣ್ ಕುಮಾರ್ ಶಿರೂರು ಮುಂದಾಳತ್ವದಲ್ಲಿ ಲಾಕ್’ಡೌನ್ ಸಂದರ್ಭದಲ್ಲಿ ಕೋವಿಡ್ ಎದುರಿಸಲು ದಿಟ್ಟ ಪ್ರಯತ್ನ ನಡೆಸಿ ಯಶಸ್ಸು ಕಾಣುತ್ತಿದೆ. ಶಿರೂರು ಗ್ರಾಮ ಪಂಚಾಯತ್ ಸದಸ್ಯರುಗಳಾದ ಉದಯ ಪೂಜಾರಿ, ಶಲೀಕ್ ಮೊಹಮ್ಮದ್ ಹಾಗೂ ಮುಕ್ರಿ ಅಲ್ತಾಫ್ ಅವರನ್ನೊಳಗೊಂಡ 10ಕ್ಕೂ ಅಧಿಕ ಯುವಕರ ತಂಡ ಈ ನಿಸ್ವಾರ್ಥ ಸೇವೆಯಲ್ಲಿ ತೊಡಗಿಕೊಂಡಿದೆ. ನಿರಂತರ ಅರಿವು ನೆರವು: ಶಿರೂರು ಗ್ರಾಮದಲ್ಲಿ ಆರೋಗ್ಯ…
Author: ಸುನಿಲ್ ಹೆಚ್. ಜಿ. ಬೈಂದೂರು
ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲಾಕ್ಡೌನ್ನಿಂದಾಗಿ ಊಟ – ಉಪಹಾರಕ್ಕೆ ಸರಿಯಾದ ಹೋಟೆಲ್ಗಳು ಸಿಗದೆ ತೊಂದರೆ ಅನುಭವಿಸುತ್ತಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಲಾರಿ, ಟ್ರಕ್ಗಳ ಚಾಲಕರ ಹಸಿವು ತಣಿಸುವ ಕಾರ್ಯದಲ್ಲಿ ಕುಂದಾಪುರದ ತಾಲೂಕು ಸೇವಾಭಾರತಿ ಸಂಸ್ಥೆಯ ಕಾರ್ಯಕರ್ತರು ಎರಡು ವಾರಗಳಿಂದ ನಿರಂತರವಾಗಿ ತೊಡಗಿಕೊಂಡಿದ್ದಾರೆ. ಸೇವಾ ಭಾರತಿ ಸಂಸ್ಥೆಯ ಮೂಲಕ ನಿತ್ಯವೂ ಮಧ್ಯಾಹ್ನದ ಹೊತ್ತಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಗೂಡ್ಸ್ ವಾಹನಗಳು ಹಾಗೂ ಅಂಬ್ಯುಲೆನ್ಸ್ ಚಾಲಕರಿಗೆ ಉಚಿತ ಊಟ ಪೊಟ್ಟಣ ಹಾಗೂ ನೀರಿನ ಬಾಟಲಿಗಳನ್ನು ವಿತರಿಸಲಾಗುತ್ತಿದೆ. ಪ್ರತಿನಿತ್ಯ ಮಧ್ಯಾಹ್ನ ತೆಕ್ಕಟ್ಟೆ ಹಾಗೂ ಕೋಟೇಶ್ವರ ಭಾಗದಲ್ಲಿ ಎರಡು ತಂಡಗಳನ್ನು ಮಾಡಿಕೊಂಡು ಊಟ ವಿತರಿಸಲಾಗುತ್ತಿದೆ. ಆರಂಭದಲ್ಲಿ 100 ಊಟದ ಪೊಟ್ಟಣ ಖಾಲಿಯಾದರೆ ಈಗ 300 ರಿಂದ 350 ಊಟದ ಪೊಟ್ಟಣಗಳನ್ನು ಮಾಡಿ ವಿತರಿಸಲಾಗುತ್ತಿದೆ. ಕಳೆದ ಎರಡು ವಾರಗಳಿಂದ ಸೇವಾ ಭಾರತಿ ನಡೆಸುತ್ತಿರುವ ಈ ಸೇವಾ ಕಾರ್ಯದಲ್ಲಿ ವಿವಿಧ ದಾನಿಗಳು ಕೈಜೋಡಿಸಿದ್ದು ಅಗತ್ಯವಿರುವ ಆರ್ಥಿಕ ಸಹಕಾರ, ಅಕ್ಕಿ, ತರಕಾರಿಗಳನ್ನು ನೀಡುತ್ತಿದ್ದಾರೆ.…
ಸುನಿಲ್ ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಸಾಹಸಕ್ಕೆ ಹೆಸರಾದ ಕೊಂಕಣಿ ಖಾರ್ವಿ ಜನಾಂಗವು ಹೋಳಿ ಹಬ್ಬವನ್ನು ಅತ್ಯಂತ ಶ್ರದ್ಧೆ ಹಾಗೂ ಸಂಪ್ರದಾಯಬದ್ಧವಾಗಿ ಆಚರಿಸುತ್ತಾ ಬಂದಿದ್ದಾರೆ. ಈ ಸಮುದಾಯದ ಬಂಧುಗಳು ಬಣ್ಣದ ಓಕುಳಿಯಲ್ಲಿ ವಿಂದೇಳುವ ಮೊದಲು ವಾರಗಳ ಕಾಲ ಹಿಂದಿನ ಕಟ್ಟುಪಾಡುಗಳನ್ನು ಕ್ರಮಬದ್ಧವಾಗಿ ಆಚರಿಸುತ್ತಾ, ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ. ಕುಂದಾಪುರ ಹಾಗೂ ಗಂಗೊಳ್ಳಿ ಭಾಗದಲ್ಲಿ ನೆಲೆಸಿರುವ ಕೊಂಕಣಿ ಭಾಷಿಕ ಖಾರ್ವಿ ಸಮುದಾಯದ ಬಹುದೊಡ್ಡ ಹಬ್ಬ ಹೋಳಿ. ಸಮಾಜದ ಏಳಿಗೆಗೆ ಈ ಸಂಪ್ರದಾಯವನ್ನು ಶ್ರದ್ಧೆ ಹಾಗೂ ಭಕ್ತಿಯಿಂದ ಆಚರಿಸಬೇಕೆಂಬುದನ್ನು ಈ ಜನಾಂಗದ ಪ್ರತಿಯೊಬ್ಬರೂ ಬಲವಾಗಿ ನಂಬಿದ್ದಾರೆ. ಅದರಂತೆಯೇ ಶಿವರಾತ್ರಿಯ ಬಳಿಕ ಹೊಳಿ ಹಬ್ಬದ ತಯಾರಿಗಳು ನಡೆಯುತ್ತದೆ. ಕುಂದಾಪುರದ ಕೊಂಕಣಿ ಖಾರ್ವಿ ಜನಾಂಗದವರು ಊರಿನ ಅಧಿದೇವರಾದ ಶ್ರೀ ಕುಂದೇಶ್ವರನಿಗೆ ಪೂಜೆ ಸಲ್ಲಿಸಿ ದೇವರಿಂದ ಆಜ್ಞಾಪನೆ ದೊರೆತ ಬಳಿಕ ಸಮುದಾಯದ ಪ್ರತಿ ಮನೆಯಲ್ಲಿಯೂ ಹೋಳಿ ಹಬ್ಬದ ವಿಧಿ-ವಿಧಾನಗಳಿಗೆ ಚಾಲನೆ ದೊರೆಯುತ್ತದೆ. ಈ ಸಂದರ್ಭದಲ್ಲಿ ಮನೆ ಮನೆಗೆ ತೆರಳುವ ಸಮುದಾಯದ ಪುರುಷರು ಗುಮಟೆ ಬಾರಿಸುತ್ತಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕಮಲಶಿಲೆ: ತಾಲೂಕಿನ ಪ್ರಸಿದ್ದ ಕಮಲಶಿಲೆ ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪ್ರಸಿದ್ಧ ಅರೆಕಾ ಟೀ ಸಂಸ್ಥೆಯ ಸಂಸ್ಥಾಪಕ, ಯುವ ಉದ್ಯಮಿ ನಿವೇದನ್ ನೆಂಪೆ ಭೇಟಿ ನೀಡಿ ಶ್ರೀ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ತಮ್ಮ ಕುಟುಂಬಿಕರೊಂದಿಗೆ ದೇವಳಕ್ಕೆ ಭೇಟಿ ನೀಡಿದ ನಿವೇದನ್ ಅವರನ್ನು ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಗೌರವಿಸಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಿರ್ದೇಶಕ, ನಟ ರಿಷಬ್ ಶೆಟ್ಟಿ ನಾಯಕರಾಗಿ ನಟಿಸುತ್ತಿರುವ ‘ಹರಿಕಥೆ ಅಲ್ಲ ಗಿರಿಕಥೆ’ ಸಿನೆಮಾದ ಹಾಡಿನ ಚಿತ್ರೀಕರಣ ಕುಂದಾಪುರ, ಮರವಂತೆ ಹಾಗೂ ಬೈಂದೂರು ಭಾಗದಲ್ಲಿ ನಡೆದಿದೆ. ಮೈಸೂರು ಮಡಿಕೇರಿಯನ್ನು ಮುಗಿಸಿ ಪ್ರಮುಖ ಊರುಗಳಲ್ಲಿ ಹಾಡು ಹಾಗೂ ಚಿತ್ರದ ಕೆಲವು ಸೀನ್ಗಳ ಚಿತ್ರೀಕರಣ ನಡೆಯಿತು. ಸಂದೇಶ್ ನಾಗರಾಜ್ ಅವರ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ರಿಷಬ್ ಶೆಟ್ಟಿ ಫಿಲಂಸ್ ಸಹಯೋಗದೊಂದಿಗೆ ನಿರ್ಮಿಸುತ್ತಿರುವ, ಕರಣ್ ಅನಂತ್ ಹಾಗೂ ಅನಿರುದ್ಧ್ ಮಹೇಶ್ ಜಂಟಿಯಾಗಿ ನಿರ್ದೇಶಿಸುತ್ತಿದ್ದಾರೆ. ಗಿರಿಕೃಷ್ಣ ಕಥೆ ಹಾಗೂ ರಿಷಬ್ ಶೆಟ್ಟಿ, ಅನಿರುದ್ಧ್ ಮಹೇಶ್, ಕರಣ್ ಅನಂತ್ ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಚಂದ್ರಶೇಖರನ್, ರಂಗನಾಥ್ ಸಿ.ಎಂ ಛಾಯಾಗ್ರಹಣ, ಪ್ರಗತಿ ರಿಷಬ್ ಶೆಟ್ಟಿ ವಸ್ತ್ರ ವಿನ್ಯಾಸ ಹಾಗೂ ರಿತ್ವಿಕ್ ಅವರ ಸಂಕಲನ ಮಾಡುತ್ತಿದ್ದಾರೆ. ಪ್ರಮೋದ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಿಷಬ್ ಶೆಟ್ಟಿ ಅವರು ನಾಯಕನಾಗಿ ನಟಿಸುತ್ತಿರುವ ಮೂರನೇ ಸಿನಿಮಾ ಇದಾಗಿದು, ಈ ಸಿನಿಮಾದಲ್ಲಿ ರಿಷಭ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಂಗಕರ್ಮಿ, ಸಂಗೀತಗಾರ ಯು. ಶ್ರೀನಿವಾಸ ಪ್ರಭು ಅವರಿಗೆ ಕರ್ನಾಟಕ ನಾಟಕ ಅಕಾಡೆಮಿಯ 2020ನೇ ಸಾಲಿನ ವಾರ್ಷಿಕ ರಂಗಪ್ರಶಸ್ತಿ ಲಭಿಸಿದೆ. ಬೈಂದೂರಿನ ಹೆಸರಾಂತ ರಂಗ ಸಂಸ್ಥೆ ಲಾವಣ್ಯದ ಸ್ಥಾಪಕಾಧ್ಯಕ್ಷರಾದ ಯು. ಶ್ರೀನಿವಾಸ ಪ್ರಭು ಅವರು ಹತ್ತು ಹಲವು ನಾಟಕ ರಚನೆ, ನಿರ್ದೇಶನ, ಸಂಗೀತ ನಿರ್ದೇಶನ ಸೇರಿದಂತೆ ರಂಗಭೂಮಿ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಉಪ್ಪುಂದದ ಯ ದೇವಿದಾಸ ಪ್ರಭುಗಳ ಮಗನಾಗಿ 1952ರಲ್ಲಿ ಜನಿಸಿದ ಶ್ರೀನಿವಾಸ ಪ್ರಭು ತಮ್ಮ ಶಿಕ್ಷಣವನ್ನು ಉಪ್ಪುಂದ ಹಾಗೂ ಬೈಂದೂರಿನಲ್ಲಿ ಮುಗಿಸಿದರು. ತನ್ನ ಬಾಲ್ಯದಿಂದಲೇ ಹರಿಕಥೆ, ಭಜನೆ, ಯಕ್ಷಗಾನ, ನಾಟಕಗಳ ಕಡೆಗೆ ಆಕರ್ಷಿತರಾಗಿ ವಿದ್ಯಾರ್ಥಿ ಜೀವನದಲ್ಲಿಯೇ ಸಣ್ಣಪುಟ್ಟ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಸಿಂಡಿಕೇಟ್ ಬ್ಯಾಂಕ್ನಲ್ಲಿ ಉದ್ಯೋಗಿಯಾಗಿದ್ದಾಗ ಊರಿನ ಸ್ನೇಹಿತರನ್ನು, ಸಹೋದ್ಯೋಗಿಗಳನ್ನು ಕೂಡಿಸಿಕೊಂಡು ಕನ್ನಡ, ಕೊಂಕಣಿ ನಾಟಕಗಳನ್ನು ಆಡುವ ಹವ್ಯಾಸ ಬೆಳೆಸಿಕೊಂಡರು. ಇದರ ಜೊತೆಗೆ ಸಂಗೀತ ಶಾಲೆ ಸೇರಿ ಸಂಗೀತ ಉಪಕರಣಗಳನ್ನು ನುಡಿಸಲು ಕಲಿತರು. ನಾಟಕಗಳಲ್ಲಿ ನಟನೆ, ನಿರ್ದೇಶನ, ಸಂಗೀತ ಸಂಯೋಜನೆಯನ್ನು ಹವ್ಯಾಸವಾಗಿ ಬೆಳೆಸಿಕೊಂಡರು. ಕುಂದಾಪ್ರ ಡಾಟ್ ಕಾಂ…
ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಮದುವೆ ಮನೆ ಅಂದ ಮೇಲೆ ಬಂಧು ಬಳಗ ಸ್ನೇಹಿತರೆಲ್ಲಾ ಸೇರಿ ಸಂಭ್ರಮ ಸಡಗರದಲ್ಲಿ ಪಾಲ್ಗೊಳ್ಳೋದು ಮಾಮೂಲು. ಆದರೆ ಕುಂದಾಪುರದಲ್ಲಿ ನಡೆದ ಮದುವೆಯೊಂದು ಇವೆಲ್ಲದಕ್ಕೂ ಸಾಕ್ಷಿಯಾಗುವುದರ ಜೊತೆಗೆ ತೀರಾ ಭಿನ್ನವಾಗಿ ನಡೆದು ಸಂಬಂಧಗಳ ಬಂಧ ಗಟ್ಟಿಗೊಳಿಸಿದ್ದು ಮಾತ್ರವಲ್ಲದೇ ಸಮಾಜಕ್ಕೂ ಉತ್ತಮ ಸಂದೇಶ ನೀಡಿದೆ. ಹೌದು ಇಂತಹದ್ದೊಂದು ಮಾದರಿ ಮದುವೆ ನಡೆದದ್ದು ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷ ಕಿಶೋರ್ ಕುಮಾರ್ ಅವರ ಕುಟುಂಬದಲ್ಲಿ. ಕಿಶೋರ್ ಅವರ ಸಹೋದರ ಚಂದ್ರಶೇಖರ್ ಹಾಗೂ ಶೈಲಾ ದಂಪತಿಗಳ ಪುತ್ರ ಸಾತ್ವಿಕ್ ಅವರ ವಿವಾಹ ಶ್ರೀದೇವಿ ಅವರೊಂದಿಗೆ ಜನವರಿ 20ರಂದು ಸಂಭ್ರಮದಿಂದ ನಡೆಯಿತು. ಅದು ಇತರ ಮದುವೆಗಳಂತೆ ತೋರಿಕೆಯ, ಪ್ರತಿಷ್ಠೆ ಪ್ರದರ್ಶನದ ಮದುವೆ ಆಗಿರದೇ ಸಂಬಂಧಗಳನ್ನು ಬೆಸೆದ, ನಿಜಾರ್ಥದಲ್ಲಿ ಸಂಭ್ರಮವನ್ನು ತುಂಬಿದ, ಕೌಟುಂಬಿಕ ಮೌಲ್ಯಗಳನ್ನು ಎತ್ತಿಹಿಡಿದ ಮುದುವೆಯಾಗಿತ್ತು. ನಮ್ಮನಿ ಮದಿ! ನಮ್ಮನಿ ಮದಿ ಒಂದೆರಡು ದಿನದ ಸಂಭ್ರಮಕ್ಕಷ್ಟೇ ಸೀಮಿತವಾಗಿರಲಿಲ್ಲ. ವಾರ ಪೂರ್ತಿ ತಿಂಡಿ, ತಿನಿಸು, ಅಲಂಕಾರ, ಮಾತು, ಕಥೆ, ನಾಟಕ,…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮ ಮಂದಿರಕ್ಕೆ ಕುಂದಾಪುರ ತಾಲೂಕಿನ ಕೋಟೇಶ್ವರ ಪ್ರಸಿದ್ಧ ಶಿಲ್ಪಕಲಾ ಶಾಲೆಯಲ್ಲಿ ರಥ ನಿರ್ಮಿಸುವ ಸಿದ್ಧತೆಗಳು ಸದ್ದಿಲ್ಲದೆ ನಡೆಯುತ್ತಿದೆ. ಕಳೆದ ಕೆಲ ತಿಂಗಳುಗಳ ಹಿಂದೆ ಅಯೋಧ್ಯೆ ಶ್ರೀ ರಾಮ ಮಂದಿರದ ರಥ ನಿರ್ಮಾಣದ ಮಾತುಕತೆ ನಡೆದಿದ್ದು, ಕೋಟೇಶ್ವರದ ರಥಶಿಲ್ಪಿ, ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀನಾರಾಯಣ ಆಚಾರ್ಯ ಅವರ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯಲ್ಲಿಯೇ ಅಯೋಧ್ಯೆ ರಥ ನಿರ್ಮಾಣವಾಗುವುದು ಬಹುತೇಕ ಖಚಿತವಾಗಿದೆ. ಕುಂದಾಪ್ರ ಡಾಟ್ ಕಾಂ. ಅಯೋಧ್ಯೆ ರಾಮ ಮಂದಿರದ ರಥ ನಿರ್ಮಾಣದ ಕುರಿತು ಚರ್ಚೆ ಬಂದಾಗ ಲಕ್ಷ್ಮೀನಾರಾಯಣ ಆಚಾರ್ಯ ಅವರ ಹೆಸರು ಕೇಳಿಬಂದಿದ್ದು, ಇದಕ್ಕೆ ಪೂರಕವೆಂಬಂತೆ ವಿನ್ಯಾಸ ಸಮಿತಿಯಲ್ಲಿ ಪ್ರಮುಖರಾಗಿರುವ ಲೇಖಕಿ ಹಾಗೂ ಅಂಕಣಕಾರ್ತಿ ಶೇಫಾಲಿ ವೈದ್ಯ ಅವರು ಕೋಟೇಶ್ವರ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯರ ಮನೆಗೆ ಭೇಟಿ ನೀಡಿ ಹಲವು ದೇವಾಲಯಗಳಿಗೆ ಸುಂದರ ರಥ ನಿರ್ಮಿಸಿರುವುದನ್ನು ತಿಳಿದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆ ಬಳಿಕ ಉತ್ತರ ಭಾರತದ ಶೈಲಿ ಹಾಗೂ ದಕ್ಷಿಣ ಭಾರತದ ಶೈಲಿ…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಒಂದೇ ನೋಟಕ್ಕೆ ಮನತುಂಬಿದ ನಗು. ಬಾಗುವ ರೇಖೆಗೆ ತಕ್ಕಂತೆ ಬದಲಾಗುವ ಭಾವಲಹರಿ. ಕಾರ್ಟೂನ್ ಎಂದರೆ ಹಾಗೆ. ಆಳುವವರಿ ಗೊಂದು ಚಾಟಿ. ಜನಸಾಮಾನ್ಯರಿಗೆ ನಗುವಿನ ಚಟಾಕಿ. ವಾಸ್ತವದ ಅನಾವರಣ. ನೂರು ಪದಗಳಲ್ಲಿ ಹೇಳಬಹುದಾದದ್ದನ್ನು ಒಂದು ರೇಖೆಯಲ್ಲಿ ಹೇಳಿ ಮುಗಿಸುವ ಛಾತಿ. ಇಂತಹ ಕಾರ್ಟೂನಿಷ್ಠರನ್ನು ಕಾರ್ಟೂನಿಷ್ಠರ ತವರು, ಕುಂದಾಪುರದಲ್ಲಿ ಒಗ್ಗೂಡಿಸಿ ಕಳೆದ 6 ವರ್ಷಗಳಿಂದ ಆಯೋಜಿಸುತ್ತಿರುವ ಕಾರ್ಟೂನು ಹಬ್ಬ, ಈ ಭಾರಿ ಡಿ.12 ಹಾಗೂ 13ರಂದು ನಡೆಯಲಿದೆ. ಖ್ಯಾತ ವ್ಯಂಗ್ಯಚಿತ್ರಕಾರ ಕುಂದಾಪುರದ ಸತೀಶ್ ಆಚಾರ್ಯರ ಅವರ ಸಾರಥ್ಯದಲ್ಲಿ ವಿಭಿನ್ನ ಐಡಿಯಾಸ್ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಟೂನು ಹಬ್ಬ ಹತ್ತಾರು ವಿಶೇಷತೆಗಳೊಂದಿಗೆ ಕುಂದಾಪುರದ ಕಲಾಮಂದಿರದಲ್ಲಿ ನಡೆಯಲಿದ್ದು, ಈ ಭಾರಿ ಆನ್ಲೈನ್ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಡಿ. 12ರಂದು ಮುಂಬೈನಿಂದ ಕೊರೋನಾ ಯೋಧ, ನಟ ಸೋನು ಸೂದ್ ಕಾರ್ಟೂನು ಹಬ್ಬ ಹಾಗೂ ‘ಗೋ ಕರೋನಾ ಗೋ’ ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ. ವಿವಿಧ ಗಣ್ಯರು ಉದ್ಘಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅಂದು ಮಧ್ಯಾಹ್ನ 12:30ರಿಂದ…
ಕುಂದಾಪ್ರ ಡಾಟ್ ಕಾಂ ವರದಿ. ಬೈಂದೂರು: ಮದುವೆಯಾದ ಹೊಸತರಲ್ಲಿ ಸುತ್ತಾಟ, ಹನಿಮೂನ್ ಎನ್ನುವವರ ನಡುವೆ ಈ ಜೋಡಿ ಮಾತ್ರ ಭಿನ್ನವಾಗಿ ನಿಲ್ಲುತ್ತದೆ. ಬೈಂದೂರು ಸೋಮೇಶ್ವರದ ಕಡಲತೀರ ಸ್ವಚ್ಛಗೊಳಿಸಬೇಕು ಎಂಬ ಸಂಕಲ್ಪತೊಟ್ಟ ನವ ದಂಪತಿಗಳಾದ ಅನುದೀಪ್ ಹೆಗಡೆ ಹಾಗೂ ಮಿನುಷಾ ಕಾಂಚನ್ ಮದುವೆಯ ಸಂಭ್ರಮದೊಂದಿಗೆ ಸಾಮಾಜಿಕ ಬದ್ಧತೆಯನ್ನು ಮೆರೆದು ಇತರರಿಗೂ ಮಾದರಿಯಾಗಿದ್ದಾರೆ. ಬೈಂದೂರು ತಾಲೂಕಿನ ಕಳವಾಡಿಯವರಾದ ಅನುದೀಪ್ ಹೆಗ್ಡೆ ವೃತ್ತಿಯಲ್ಲಿ ಡಿಜಿಟಲ್ ಮಾರ್ಕೆಟರ್. ತಮ್ಮದೇ ಸ್ವುಡಿಯೋ1 ಪ್ರೊಡಕ್ಷನ್ ಮೂಲಕ ಈ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಮಿನುಷಾ ಫಾರ್ಮಾಸಿಟಿಕಲ್ ಕಂಪನಿ ಉದ್ಯೋಗಿ. ಈರ್ವರು ನ.18 ರಂದು ಮದುವೆಯಾಗಿದ್ದರು. ತಮ್ಮ ಮದುವೆಯ ನೆನಪು ಬಹುಕಾಲ ಉಳಿಯಬೇಕು ಎಂದು ನಿರ್ಧರಿಸಿದ್ದ ದಂಪತಿಗಳು, ವೆಡ್ಡಿಂಗ್ ಚಾಲೆಂಜ್ ಆಗಿ ಬೈಂದೂರಿನ ಸೋಮೇಶ್ವರ ಬೀಚ್ ಸ್ವಚ್ಛಗೊಳಿಸುವ ನಿರ್ಧಾರ ಮಾಡಿದರು. ಅದಕ್ಕಾಗಿ ಹನಿಮೂನ್ ಪ್ಲಾನ್ ಕೂಡ ಮುಂದೂಡಿದರು. ಕುಂದಾಪ್ರ ಡಾಟ್ ಕಾಂ. ಬೀಚ್ ಸ್ವಚ್ಛತೆಯ ಪಣತೊಟ್ಟ ದಂಪತಿಗಳು ನ.27ರಿಂದ ಪ್ರತಿದಿನ ಸಂಜೆ 2ಗಂಟೆ ಶ್ರಮದಾನ ಮಾಡಿ ತೀರದಲ್ಲಿ ಬಿದ್ದಿದ್ದ ಮದ್ಯದ ಬಾಟಲಿ, ಪ್ಲಾಸ್ಟಿಕ್, ಚಪ್ಪಲಿ ಹೀಗೆ…
