Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಬೈಂದೂರು: ಅಧ್ಯಕ್ಷ, ಪದಾಧಿಕಾರಿಗಳಿಲ್ಲದೇ ಎಲ್ಲರೂ ಸಮಾನರು ಎಂಬ ನೆಲೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಳದ ರಥಬೀದಿ ಪರಿಸರದ ೫೦ ಜನರ ಯುವಪಡೆ ಶ್ರೀದುರ್ಗಾ ಫ್ರೆಂಡ್ಸ್ ತಂಡವನ್ನು ಕಟ್ಟಿಕೊಂಡು ಎಲ್ಲರೂ ಕಾರ್ಯಕರ್ತರಂತೆ ಎಲೆ ಮರೆಯ ಕಾಯಿಯ ಹಾಗೆ ಯಾವುದೇ ಪ್ರಚಾರ ಬಯಸದೇ ಸಾಮಾಜಿಕ ಕಾರ್ಯ ಚಟುವಟಿಕೆ ಮಾಡುತ್ತಿರುವುದು ಶ್ಲಾಘನೀಯ ಎಂದು ಕೊಲ್ಲೂರು ದೇವಳದ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಂ. ಸುಕುಮಾರ್ ಶೆಟ್ಟಿ ಹೇಳಿದರು. ಉಪ್ಪುಂದ ರಥಬೀದಿಯ ಶ್ರೀದುರ್ಗಾ ಫ್ರೆಂಡ್ಸ್‌ನ ನಾಲ್ಕನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಸಮಾಜಮುಖಿ ಹಾಗೂ ಜನಹಿತ ಕೆಲಸ ಮಾಡುವವರಿಗೆ ದೇವರ ವಿಶೇಷ ಕೃಪೆ ಇರುತ್ತದೆ. ವೈಜ್ಞಾನಿಕ ಯುಗದಲ್ಲಿಯೂ ಕೂಡಾ ವರ್ಷದಿಂದ ವರ್ಷಕ್ಕೆ ದೇವತಾಕಾರ್ಯ ಮತ್ತು ಜಾತ್ರೆಗೆ ಹೆಚ್ಚು ಜನ ಸೇರುತ್ತಿರುವುದರಿಂದ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡುವುದರ ಮೂಲಕ ಸಮಾಜವನ್ನು ದೈವತ್ವದ ಕಡೆಗೆ ಅಕರ್ಷಿಸುತ್ತಿದೆ ಎಂದು ಅಭಿಪ್ರಾಯಪಟ್ಟರು. ನಂತರ ಜಿಪಂ ಮಾಜಿ ಸದಸ್ಯ ಮದನ್‌ಕುಮಾರ್ ಮಾತನಾಡಿ, ನಾಡುಕಟ್ಟುವ ಕೆಲಸ ಕೇವಲ ಸರಕಾರ, ಮಂತ್ರಿ, ಜನಪ್ರತಿನಿಧಿಗಳಿಂದ ಮಾತ್ರ ಸಾಧ್ಯವಿಲ್ಲ. ದೇಶದ ಪ್ರತಿಯೊಬ್ಬ ನಾಗರಿಕ ಹಾಗೂ…

Read More

ಕುಂದಾಪುರ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾಕೇಂದ್ರದ ವಿದ್ಯಾರ್ಥಿಯಾಗಿ ಕನ್ನಡ ಮಾಧ್ಯಮದಲ್ಲಿ ಕುಂದಾಪುರ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಹಿನ್ನಲೆಯಲ್ಲಿ ರೋಷನ್ ಭಾಸ್ಕರ್ ಪೂಜಾರಿಯವರು 2015-16ನೇ ಸಾಲಿನಲ್ಲಿ ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೊಡಮಾಡುವ ಕನ್ನಡ ಮಾಧ್ಯಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನ.29ರಂದು ಮೈಸೂರಿನ ಕರ್ನಾಟಕ ಕಲಾ ಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈತ ಉದ್ಯಮಿ ಭಾಸ್ಕರ ಗುಲ್ವಾಡಿ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯೆ ಕಲ್ಪನಾ ಭಾಸ್ಕರ್ ಅವರ ಪುತ್ರ.

Read More

ಕೊಲ್ಲೂರು: ಪೂರ್ವ ಪ್ರಾಥಮಿಕ ಮಕ್ಕಳ ಭವಿಷ್ಯವನ್ನು ಮತ್ತು ಅವರ ಬಾಲ್ಯಜೀವನವನ್ನು ಹಸನಾಗಿ ಮಾಡುವಲ್ಲಿ ಕೊಲ್ಲೂರು ಅಂತಮ್ಮ ಪ್ರತಿಷ್ಟಾನ ಅತ್ಯಂತ ಪ್ರಾಮುಖ್ಯವಾದ ಹೆಜ್ಜೆಯನ್ನಿಟ್ಟಿದೆ. ಒಂದು ಸದೃಢ ಸಮಾಜದ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಬದುಕಲು ಹಾಗೂ ಪ್ರಾರಂಭದಿಂದಲೇ ವಿದ್ಯಾಭ್ಯಾಸ ಮಾಡಲು ಈ ಅಂಗನವಾಡಿ ಕೇಂದ್ರ ಸಹಕಾರಿಯಾಗಲಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಅಭಿಪ್ರಾಯಪಟ್ಟರು. ಕೊಲ್ಲೂರಿನಿಂದ ಸುಮಾರು ಏಳು ಕಿ.ಮಿ. ದೂರದ ನಕ್ಸಲ್ ಪೀಡಿತ ಪ್ರದೇಶ ವ್ಯಾಪ್ತಿಯ ಗುಡ್ಡಗಾಡು ಪ್ರದೇಶವಾಗಿರುವ ಹಳ್ಳಿಬೇರಿನಲ್ಲಿ ಕೊಲ್ಲೂರು ಅಂತಮ್ಮ ಪ್ರತಿಷ್ಟಾನದಿಂದ ರೂ.2.30ಲಕ್ಷ ಹಾಗೂ ತಾಪಂನಿಂದ 95 ಸಾವಿರ ರೂ.ಗಳ ಅನುದಾನದಿಂದ ನೂತನವಾಗಿ ನಿರ್ಮಿಸಿದ ಅಂಗನವಾಡಿ ಕೇಂದ್ರವನ್ನು ಲೋಕಾರ್ಪಣೆ ಮಾಡಿ, ಬಳಿಕ ಮಾತನಾಡಿದರು. ಕಷ್ಟದಲ್ಲಿರುವವರಿಗೆ ನೆರವಿನ ಸಹಾಯದ ಮೂಲಕ ಸ್ಪಂದಿಸುವ, ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿತ್ವ ಹಾಗೂ ಉತ್ತಮ ಚಿಂತನೆ ಹೊಂದಿದ ತಾಪಂ ಸದಸ್ಯ ಕೊಲ್ಲೂರು ರಮೆಶ ಗಾಣಿಗ, ತಮ್ಮ ಹೊಣೆಯರಿತು ತಾಯಿ ಅಂತಮ್ಮ ಗಾಣಿಗ ಹೆಸರಿನ ಪ್ರತಿಷ್ಟಾನ ಸ್ಥಾಪಿಸಿ ಸಾಮಾಜಿಕ ಚಟುವಟಿಕೆಗಳ ಮೂಲಕ ಸಮಾಜಸೇವೆ ಮಾಡುತ್ತಿರುವುದು ಅವರ ಹೃದಯವೈಶಾಲ್ಯತೆಗೆ…

Read More

ಬೈಂದೂರು: ಸಂಸ್ಕೃತಿಯೊಂದಿಗೆ ಮಾತೃ ಭಾಷೆಯ ಬಳಕೆ ಹಾಗೂ ಉಳಿಕೆಯ ಚಿಂತನಾ ಶೀಲತೆಯನ್ನು ಮಕ್ಕಳಲ್ಲಿ ಉದ್ದೀಪನ ಗೊಳಿಸಲು ರಂಗಪ್ರಯೋಗ ಹೆಚ್ಚು ಪರಿಣಾಮಕಾರಿ ಎಂಬ ಹಿನ್ನೆಲೆಯಿಂದ ಉಪ್ಪುಂದದಲ್ಲಿ ’ವಿಂದ್ರಾ ಪೀಲ’ ಎಂಬ ಮಕ್ಕಳ ಕೊಂಕಣಿ ನಾಟಕವನ್ನು ಇತ್ತಿಚಿಗೆ ಆಯೋಜಿಸಲಾಗಿದೆ. ಇಲ್ಲಿನ ಶ್ರೀಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮಂಡಳಿಯ ಸಹಯೋಗದೊಂದಿಗೆ ದೇವಾಲಯದ ಸಭಾಭವನದಲ್ಲಿ ಜರಗುವ ಈ ಮಕ್ಕಳ ವಿಶೇಷ ರಂಗಕೃತಿಯನ್ನು ಮಂಗಳೂರಿನ ಸಾಧನಾ ಬಳಗ ಪ್ರಸ್ತುತ ಪಡಿಸಿತು. ಈ ಪ್ರಯೋಗದಲ್ಲಿ ಕರಾವಳಿ ಪರಿಸರದ ಸುಮಾರು 25 ಮಕ್ಕಳು ಅಭನಯಿಸಲಿದ್ದಾರೆ. ಸಂದೇಶ ಪೂರಿತ ವರ್ಣಮಯ ಹಾಸ್ಯ ನಾಟಕವನ್ನು ನಿನಾಸಂನ ಪಿ.ಬಿ. ಸತೀಶ್ ನಿರ್ದೇಶಿಸಿದ್ದು, ನಿರ್ಮಾಣ ನಿರ್ವಹಣೆ ಪ್ರಕಾಶ್ ಶೆಣೈ, ಸಂಗೀತ ಭಾವನಾ ಪಿ. ಶೆಣೈ ಹಾಗೂ ರಂಗ ಸಂಯೋಜನೆಯನ್ನು ಜಗನ್ ಪವಾರ್ ನಿರ್ವಹಿಸಿದರು. – ಜನನಿ

Read More

ಕುಂದಾಪುರ: ಆರ್ಥಿಕ ಸಾರ್ಥಕತೆ ಅಭಿಯಾನದಲ್ಲಿ ೧೮ ವರ್ಷದಿಂದ ೪೦ ವರ್ಷದವರೆಗಿನವರು ಅಟಲ್ ಪಿಂಚಣಿ ಯೋಜನೆಯಲ್ಲಿ ಸೌಲಭ್ಯ ಪಡೆಯುವಂತಾಗಬೇಕು. ಈ ಯೋಜನೆಯು ನಮ್ಮ ಜೀವನದಲ್ಲಿ ಆರ್ಥಿಕ ಸದೃಢತೆಗೆ ಬುನಾದಿಗೆ ಸಹಕಾರಿಯಾಗಲಿದೆ ಎಂದು ನೇರಳಕಟ್ಟೆ ಕೆನರಾ ಬ್ಯಾಂಕ್ ಶಾಖೆಯ ಮುಖ್ಯ ಪ್ರಬಂಧಕ ಸತೀಶ ಬೀಡು ಅಭಿಪ್ರಾಯಪಟ್ಟರು. ಅವರು ಇತ್ತೀಚಿಗೆ ಜರಗಿದ ಬಾಂಡ್ಯ ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಯೋಜನೆ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು. ಕೆನರಾ ಬ್ಯಾಂಕಿನ ಕೃಷಿ ವಿಸ್ತರಣಾಧಿಕಾರಿ ಪ್ರವೀಣಕುಮಾರ್ ಅವರು ಬ್ಯಾಂಕಿನ ಕೃಷಿ ಸಾಲ ಸೌಲಭ್ಯಗಳು ಹಾಗೂ ಕೃಷಿ ಸಾಲದ ಬಗ್ಗೆ ಮಾಹಿತಿ ನೀಡಿದರು. ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಸ್ವಾಗತಿಸಿದರು. ವಿಸ್ತರಣಾಧಿಕಾರಿ ಜಯರಾಮ್ ವಂದಿಸಿದರು.

Read More

ಗಂಗೊಳ್ಳಿ: ಮೆಸ್ಕಾಂ ಸಬ್‌ಸ್ಟೇಶನ್ ಆರಂಭಿಸಲು ಎದುರಾಗಿದ್ದ ತೊಡಕುಗಳು ಇನ್ನೂ ನಿವಾರಣೆಯಾಗದಿರುವುದರಿಂದ ಸಬ್‌ಸ್ಟೇಶನ್ ಆರಂಭವಾಗುವವರೆಗೆ ಹೋರಾಟ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಮೆಸ್ಕಾಂ ಸಬ್‌ಸ್ಟೇಶನ್ ಹೋರಾಟ ಸಮಿತಿ ಅಧ್ಯಕ್ಷ ರಾಜೇಂದ್ರ ಸುವರ್ಣ ಹೇಳಿದರು. ಅವರು ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ನಡೆದ ಸಮಿತಿ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ನಡುವಿನ ಜಟಾಪಟಿ ಹಾಗೂ ಗೊಂದಲದಿಂದ ಸಬ್‌ಸ್ಟೇಶನ್ ಇನ್ನೂ ಕಾರ್ಯಾರಂಭ ಮಾಡಿಲ್ಲ. ಈ ಸಂಬಂಧ ಸಚಿವರು ಹಾಗೂ ಇಲಾಖಾಧಿಕಾರಿಗಳ ಸಭೆ ನಡೆಸಿದ್ದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಸುಮಾರು ಒಂದು ತಿಂಗಳ ಹಿಂದೆ ಬೈಂದೂರು ಶಾಸಕರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಲಾಗಿದ್ದು, ಆದರೆ ಈವರೆಗೆ ಯಾವುದೇ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹೀಗಾಗಿ ಮೆಸ್ಕಾಂ ಆಡಳಿತ ನಿರ್ದೇಶಕರನ್ನು ಭೇಟಿಯಾಗಿ ಅಹವಾಲು ಸಲ್ಲಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಸರಕಾರದ ಎರಡು ಇಲಾಖೆಗಳ ನಡುವಿನ ಗೊಂದಲವನ್ನು ಆದಷ್ಟು ಬೇಗನೇ ಬಗೆಹರಿಸಿ ಗಂಗೊಳ್ಳಿ ಮೆಸ್ಕಾಂ ಸಬ್‌ಸ್ಟೇಶನ್ ವ್ಯಾಪ್ತಿಯ ನಾಗರಿಕರ, ಗ್ರಾಹಕರ ಬೇಡಿಕೆಗಳಿಗೆ ಕೂಡಲೇ ಸ್ಪಂದಿಸಬೇಕು. ಗಂಗೊಳ್ಳಿಯಲ್ಲಿ…

Read More

ಕುಂದಾಪುರ: ದೇಶದ ವ್ಯವಸ್ಥೆಯಲ್ಲಿ ಬದಲಾವಣೆ ಆಗ ಬೇಕಿ ದ್ದರೆ ಅದು ರಾಜಕೀಯದಿಂದ ಮಾತ್ರ ಸಾಧ್ಯ. ಭಾರತೀಯ ಜನತಾ ಪಕ್ಷಕ್ಕೆ ತನ್ನದೇ ಆದ ತಣ್ತೀ ಸಿದ್ಧಾಂತಗಳಿವೆ. ಪಕ್ಷ ಸಿದ್ಧಾಂತ, ವ್ಯವಸ್ಥೆಯಲ್ಲಿನ ಬದ ಲಾವಣೆ, ಧ್ಯೇಯ, ನಿಷ್ಠೆಗಳ ಅರಿವು ಮೂಡಿಸುವ ಈ ಪ್ರಶಿಕ್ಷಣ ವರ್ಗ ಬಿಜೆಪಿಯ ವೈಶಿಷ್ಟ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿರ್ಮಲ್‌ ಕುಮಾರ್‌ ಸುರಾನ ಹೇಳಿದರು. ಅವರು ಕೋಟೇಶ್ವರದ ಯುವ ಮೆರಿಡಿಯನ್‌ ಮಿನಿ ಹಾಲ್‌ನಲ್ಲಿ ಉಡುಪಿ ಜಿಲ್ಲಾ ಬಿಜೆಪಿ, ಪಂ. ದೀನ ದಯಾಳ್‌ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಧ್ಯಾಯದ ಜಿಲ್ಲಾ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಮಾತನಾಡಿದರು. ಸೂಕ್ತ ತರಬೇತಿಗಳು ರಾಜಕಾರಣಿಗಳಲ್ಲಿ ಇಲ್ಲದೇ ಇರುವುದರಿಂದ ರಾಜಕೀಯ ಅರ್ಥ ಕಳೆದುಕೊಳ್ಳುತ್ತಿದೆ. ರಾಜಕಾರಣವೆಂದರೆ ಕೇವಲ ಹಣ, ಜನ ಸಂಪರ್ಕ ಎನ್ನುವ ಭ್ರಮೆ ಹುಟ್ಟಿಸುವ ಈ ಕಾಲದಲ್ಲಿ ರಾಜನೀತಿಗೆ ಸರಿಯಾದ ಅರ್ಥ ಕೊಡುವಲ್ಲಿ ಬಿಜೆಪಿಗೆ ಮಾತ್ರ ಸಾಧ್ಯ ಎನ್ನುವುದನ್ನು ಜನರು ತಿಳಿಸಿಕೊಟ್ಟಿದ್ದಾರೆ ಎಂದರು. ಕೇಂದ್ರದಲ್ಲಿ ಬಿಜೆಪಿ ಚುಕ್ಕಾಣಿ ಹಿಡಿದ ಅನಂತರ ದೇಶದ ಚಿತ್ರಣವೇ ಬದಲಾಗಿದೆ. ಭಿಕ್ಷುಕರ…

Read More

ಕುಂದಾಪುರ: ಯಕ್ಷಗಾನ ಕ್ಷೇತ್ರದ ಉದಯೋನ್ಮುಕ ಕಲಾವಿದ, ಪ್ರಸಂಗ ಕರ್ತ ಕಾಲ್ತೋಡು ನಿವಾಸಿ ಚಂದ್ರಕಾಂತ ಶೆಟ್ಟಿ(30) ಜೀವನದಲ್ಲಿ ಜಿಗುಪ್ಸೆಗೊಂಡು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಮಡ ಘಟನೆ ಮಂಗಳವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಚಂದ್ರಕಾಂತ ಶೆಟ್ಟಿ ಕೆಲವು ವರ್ಷಗಳಿಂದ ಗೋಳಿಗರಡಿ ಹಾಗೂ ಸಿಗಂಧೂರು ಮೇಳದಲ್ಲಿಯೂ ಕಲಾವಿದರಾಗಿ ಸೇವೆ ಸಲ್ಲಿಸಿದವರೆನ್ನಲಾಗಿದ್ದು ಆಜ್ರಿಯ ಚೋನಮನೆ ಶ್ರೀ ಶನೀಶ್ವರ ಯಕ್ಷಗಾನ ಮೇಳದಲ್ಲಿಯೂ ಕಲಾವಿದರಾಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದರೆನ್ನಲಾಗಿದೆ. ಆದರೆ ಈ ಬಾರಿ ಸಿಗಂಧೂರು ಮೆಳದಲ್ಲಿಯೇ ಕಲಾವಿದರಾಗಿ ಮುಂದುವರೆದಿದ್ದರು ಎನ್ನಲಾಗಿದೆ. ಸೋಮವಾರ ಬೆಂಗಳೂರಿನಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ಉಡುಪಿಗೆ ಬಂದಿದ್ದರೆನ್ನಲಾಗಿದ್ದು, ಮಂಗಳವಾರ ರಾತ್ರಿ ಇಂದ್ರಾಳಿ ಸಮೀಪ ಚಲಿಸುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಚಂದ್ರಕಾಂತ ಶೆಟ್ಟಿ ಯಕ್ಷಗಾನ ಪ್ರಸಂಗಕರ್ತರಾಗಿ ಕೆಲವು ಪ್ರಸಂಗಗಳನ್ನು ರಚಿಸಿದ್ದು, ವಿಪರೀತ ಕುಡಿತದ ಚಟಕ್ಕೆ ಬಲಿಯಾಗಿದ್ದರು ಎನ್ನಲಾಗಿದೆ. ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More

ಕುಂದಾಪ್ರ ಡಾಟ್ ಕಾಂ ಮೊಬೈಲ್ App ಬಿಡುಗಡೆಗೊಳಿಸಿ ಮಾತನಾಡಿದ ವಾಟ್ಸಪ್ ಹೀರೋ ಕುಂದಾಪುರ: ಕ್ಷಣಾರ್ಧದಲ್ಲಿ ಸುದ್ದಿಯಲ್ಲಿ ಪ್ರಪಂಚದ ಮೂಲೆ ಮೂಲೆಗಳಿಗೂ ತಲುಪಿಸುವಷ್ಟು ಸಶಕ್ತವಾದ ತಂತ್ರಜ್ಞಾನ ಇಂದು ಬೆಳೆದು ನಿಂತಿದೆ. ದೂರದಲ್ಲಿ ಘಟಿಸುವ ಘಟನೆಗಳು ನಿರೀಕ್ಷೆಗಿಂತ ವೇಗವಾಗಿ ತಲುಪಿ ಚರ್ಚೆಯ ವಸ್ತುವಾಗುತ್ತಿರುವ ಹೊತ್ತಿನಲ್ಲಿ ನಮ್ಮೂರಿನ ವೈಶಿಷ್ಟ್ಯಗಳನ್ನು ಮೊದಲು ನಮ್ಮವರಿಗೆ ತಲುಪಿಸಬೇಕೆಂಬ ತುಡಿತ ವಿಶೇಷವಾದುದು. ಕುಂದಾಪುರದ ಸಂಸ್ಕೃತಿ, ಭಾಷಾ ಸೊಗಡು ಎಲ್ಲವನ್ನು ದಿನನಿತ್ಯದ ಆಗುಹೋಗುಗಳೊಂದಿಗೆ ಕಟ್ಟಿಕೊಡುವ ಪ್ರಯತ್ನ ಶ್ಲಾಘನೀಯ ಎಂದು ಶಿಕ್ಷಕ, ಸಾಮಾಜಿಕ ತಾಣದ ವಿಶಿಷ್ಟ ಧ್ವನಿ ಮನೋಹರ ಹಂದಾಡಿ(ಮನು ಹಂದಾಡಿ) ಹೇಳಿದರು. ಅವರು ಇಲ್ಲಿನ ಭಂಡಾರ್‌ಕಾರ್ಸ್ ಕಾಲೇಜಿನ ಎ.ವಿ. ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕುಂದಾಪ್ರ ಡಾಟ್ ಕಾಂ ಮೊಬೈಲ್ ಆಪ್ ಬಿಡುಗಡೆಗೊಳಿಸಿ ಮಾತನಾಡಿದರು. ಇಂದು ಮೊಬೈಲ್ ಇಲ್ಲದ ಕೈಗಳಿಲ್ಲ. ಅದು ನಮ್ಮ ಬದುಕನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ. ಎಲ್ಲವನ್ನೂ ಮೊಬೈಲ್ ಭಾಷೆಯಲ್ಲಿಯೇ ಸಂವಹನಿಸಬೇಕಾದ ಕಾಲಘಟ್ಟದಲ್ಲಿ ಕುಂದಾಪ್ರ ಡಾಟ್ ಕಾಂ ಮೊಬೈಲ್ ಆಪ್ ಪರಿಚಯಿಸಿ ಕುಂದನಾಡಿನ ಸೊಗಡನ್ನು ಮತ್ತಷ್ಟು ಸುಲಭವಾಗಿ ಓದುಗರಿಗೆ ತಲುಪಿಸುವ ಕೆಲಸಕ್ಕೆ ಮುಂದಾಗಿದ್ದು…

Read More

ಮೂಡುಬಿದಿರೆ: ಒಂದು ರಾಷ್ಟ್ರದ ಅಭಿವೃದ್ಧಿಗೆ, ಶಾಂತಿಗೆ ನೆಮ್ಮದಿಯ ಬದುಕಿಗೆ ಯಾವೆಲ್ಲಾ ರೀತಿಯ ಕಾರ್ಯಗಳನ್ನು ರೂಪಿಸಬೇಕೋ ಅವೆಲ್ಲವನ್ನೂ ಆಳ್ವಾಸ್ ನುಡಿಸಿರಿ ಕಳೆದ ಹನ್ನೊಂದು ವರ್ಷಗಳಿಂದ ಸತತವಾಗಿ ನಿರ್ವಹಿಸಿಕೊಂಡು ಬಂದಿದೆ. ಇದಕ್ಕಾಗಿ ಇದನ್ನು ಜನತಾ ವಿಶ್ವವಿದ್ಯಾಲಯ ಎಂದು ಕರೆದರೂ ತಪ್ಪಾಗದು. ಹೀಗೆಂದು ನುಡಿದವರು ಆಳ್ವಾಸ್‌ರ ನುಡಿಸಿರಿ 2015ರ ಸರ್ವಾಧ್ಯಕ್ಷ ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರೀ. ನುಡಿಸಿರಿ ಅಧ್ಯಕ್ಷೀಯ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಇಡೀ ನುಡಿಸಿರಿಯಲ್ಲಿ ನಡೆದ ಎಲ್ಲಾ ಗೋಷ್ಠಿಗಳು ಗಂಭೀರವಾಗಿ ತಲಸ್ಪರ್ಶಿಯಾಗಿದ್ದವು. ಶಿಸ್ತುಬದ್ಧ ಮತ್ತು ಉತ್ಕೃಷ್ಟ ಗುಣಮಟ್ಟದ ಕಾರ್ಯಕ್ರಮಗಳಿಗಾಗಿಯೇ ಇಂದು ಆಳ್ವಾಸ್ ನುಡಿಸಿರಿ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದರು. * ಆಳ್ವಾಸ್ ನುಡಿಸಿರಿ ನನಗೆ ಹೆಮ್ಮೆಯ ಗರಿ ಈ ಸಂದರ್ಭದಲ್ಲಿ ನನ್ನಿಂದ ಮಾತನಾಡಲು ಮಾತುಗಳು ಹೊರಬರುತ್ತಿಲ್ಲ. ಆದ್ದರಿಂದ ಒಂದು ಹಾಡಿನ ಮೂಲಕ ನನ್ನ ಋಣವನ್ನು ಅರ್ಪಿಸುತ್ತೇನೆ. – ವಿದ್ವಾನ್ ಆರ್. ಕೆ. ಪದ್ಮನಾಭ * ಹೊಸತನದ ನಿಜವಾದ ಹುಡುಕಾಟಕ್ಕೆ ಈ ನುಡಿಸಿರಿ ನಾಂದಿಯಾಗಿದೆ. – ಡಾ. ಬನ್ನಂಜೆ ಗೋವಿಂದಾಚಾರ್ಯ * ಕಂಡ ಕನಸುಗಳನ್ನು…

Read More