ಕುಂದಾಪುರ: ತಾಲೂಕಿನ ಶಿರೂರಿನ ಮೂಲದ ವೈದ್ಯ, ನಾರಾಯಣ ನೇತ್ರಾಲಯದ ಉಪಾಧ್ಯಕ್ಷ ಡಾ.ರೋಹಿತ್ ಶೆಟ್ಟಿ ‘ಕಣ್ಣೀರು ಮತ್ತು ಕೆರಟೊಕೊನಸ್’ ಎಂಬ ವಿಷಯದಲ್ಲಿ ಭಾರತದಲ್ಲೇ ಪ್ರಥಮ ಬಾರಿ ಪಿ.ಎಚ್.ಡಿ.ಪದವಿ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ರೋಹಿತ್ ಶೆಟ್ಟಿ ನೆದರ್ಲ್ಯಾಂಡ್ಸ್ ಮಾಸ್ಟ್ರಿಚ್ ವಿಶ್ವವಿದ್ಯಾನಿಲಯದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಪಿ.ಎಚ್.ಡಿ. ಪದವಿ ಪಡೆದ ಮೊಟ್ಟಮೊದಲ ಭಾರತೀಯ ವೈದ್ಯ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಮನುಕುಲದ ಉನ್ನತಿಗೆ ಶ್ರಮಿಸಬೇಕೆನ್ನುವ ಅವರ ಆಂತರ್ಯದ ತುಡಿತವು ಅವರನ್ನು ಕಣ್ಣೀರಿನ ಕುರಿತಾದ ಈ ಅಪರೂಪದ ಸಂಶೋಧನೆಯನ್ನು ಕೈಗೊಳ್ಳುವಲ್ಲಿ ಪ್ರೇರಣೆಯನ್ನು ನೀಡಿತ್ತು. ಡಾ.ರೋಹಿತ್ ಅವರ ಸಂಶೋಧನೆಯು ಕೆರಟೊಕೊನಸ್ ಎಂದು ಕರೆಯಲ್ಪಡುವ ಕಣ್ಣಿಗೆ ಸಂಬಂಧಿಸಿದ ರೋಗವನ್ನು ಪತ್ತೆಹಚ್ಚಲು ಮತ್ತು ಕ್ರಮೇಣ ಅಭಿವೃದ್ಧಿ ಹೊಂದುವ ಗುಣವನ್ನು ಹೊಂದಿರುವ ಈ ರೋಗವನ್ನು ತಡೆಯಲು ಸಹಾಯ ಮಾಡುತ್ತದೆ. [quote bgcolor=”#ffffff” arrow=”yes”]ನಾರಾಯಣ ನೇತ್ರಾಲಯದ ಉಪಾಧ್ಯಕ್ಷ ಹಾಗೂ ಖ್ಯಾತ ನೇತ್ರಶಾಸ್ತ್ರಜ್ಞರಾಗಿರುವ ಡಾ.ರೋಹಿತ್ ಶೆಟ್ಟಿ ಬೆಂಗಳೂರಿನ ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನಲ್ಲಿ ತಮ್ಮ ವೈದ್ಯಕೀಯ ಶಿಕ್ಷಣವನ್ನು ಪೂರೈಸಿ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣವನ್ನು (DBN) ಬೆಂಗಳೂರಿನ…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪುರ: ಇತ್ತಿಚಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಉಡುಪಿ ಜಿಲ್ಲೆ ಇವರ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು ಹಿರಿಯಡ್ಕ ಇಲ್ಲಿ ನಡೆದ ಜಿಲ್ಲಾ ಮಟ್ಟ ವಾಲಿಬಾಲ್ ಪಂದ್ಯಾಟದಲ್ಲಿ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ಕೋಡಿ ಪ್ರಥಮ ಸ್ಥಾನ ಗಳಿಸಿದೆ. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಹಾಜಿ ಮಾಸ್ಟರ್ ಮೆಹಮೂದ್, ನಿರ್ದೇಶಕರಾದ ಪ್ರೊ.ಚಂದ್ರಶೇಖರ ದೋಮ ಹಾಗೂ ಮುಖ್ಯೋಪಾಧ್ಯಾಯರಾದ ಶ್ರೀ ರವೀಂದ್ರ ಹಾಗೂ ದೈಹಿಕ ಶಿಕ್ಷಕರಾದ ಜೆಫ್ ಸನ್ನಿ ಡಿಸೋಜ ಶುಭ ಹಾರೈಸಿದರು.
ಕುಂದಾಪುರ: ಆದಿತ್ಯ ವಿವಿಧೋದ್ದೇಶ ಸಹಕಾರಿ ಸಂಘ ನಿ., ಹಂಗಳೂರು ಇದರ 2014-15ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಕಛೇರಿಯಲ್ಲಿ ಜರುಗಿತು. ಸಂಘದ ಅಧ್ಯಕ್ಷರಾದ ರಾಜೇಂದ್ರ ಹೆಗ್ಡೆ 2014-15ನೇ ಸಾಲಿನ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸುತ್ತಾ ವರದಿ ವರ್ಷದಲ್ಲಿ ರೂಪಾಯಿ 8.50 ಕೋಟಿ ವ್ಯವಹಾರ ಮಾಡಿದ್ದು ನಿವ್ವಳ ಲಾಭದಿಂದ ಸದಸ್ಯರಿಗೆ ಶೇ. 8.50 ಡಿವಿಡೆಂಡ್ ಹಂಚಲಾಗಿದೆ. ಮುಂದಿನ ಸಾಲಿಗೆ ಶೇ. 15.00 ಡಿವಿಡೆಂಡ್ ನೀಡಲಿದ್ದೇವೆ. ಹಾಗೂ ಸಂಘವು 2ನೇ ವರ್ಷದಲ್ಲಿಯೇ ಉತ್ತಮ ’ಎ’ ತರಗತಿಯ ಸಂಸ್ಥೆಯಾಗಿರುವುದಕ್ಕೆ ಸಂಘದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ವ್ಯವಸ್ಥಾಪಕರಾದ ನಾರಾಯಣ ಬಿಲ್ಲವ ಮಾತನಾಡಿ 2014-15ನೇ ಸಾಲಿನ ಲೆಕ್ಕಪರಿಶೋಧನಾ ವರದಿಯನ್ನು ಹಾಗೂ ಆಯ ವ್ಯಯ, ಲಾಭ ನಷ್ಟ, ಆಸ್ತಿ ಜವಾಬ್ದಾರಿ ಮತ್ತು ಮುಂದಿನ ವರ್ಷದ ಅಂದಾಜು ಆಯ ವ್ಯಯವನ್ನು ಸಭೆಯಲ್ಲಿ ಮಂಡಿಸಿ ಮಂಜೂರಾತಿ ಪಡೆದರು. ಸಂಘದ ಉಪಾಧ್ಯಕ್ಷರಾದ ವಿ.ದಿನೇಶ ದೇವಾಡಿಗ, ನಿರ್ದೇಶಕರಾದ ರತ್ನಾಕರ ಕೋಟೆಗಾರ, ಜಯರಾಮ ಶೆಟ್ಟಿ, ಸಂಜೀವ ದೇವಾಡಿಗ, ಕೃಷ್ಣ ದೇವಾಡಿಗ, ಹರೀಶ್ ಬಿಲ್ಲವ, ಉದಯ ಮೆಂಡನ್, ರವೀಂದ್ರ ಹೆಗ್ಡೆ, ಸಂತೋಷ ಕೋಣಿ,…
ಕುಂದಾಪುರ: ಕೋಟೇಶ್ವರ ಗ್ರಾಮದ ಐತಾಳಬೆಟ್ಟು ಉದ್ದಿನಕೆರೆ ಪರಿಸರದಲ್ಲಿ ಅನಾದಿಯಿಂದಲೂ ನಡೆದಾಡುವ ಹಾದಿಗೆ ತಡೆಯೊಡ್ಡಲಾಗಿದ್ದು, ಪರಿಶಿಷ್ಟ ಜಾತಿ ಸೇರಿದಂತೆ ನೂರಾರು ನಾಗರಿಕರು ದಿಗ್ಬಂಧನಕ್ಕೊಳಗಾಗಿದ್ದಾರೆ. ಸರಕಾರಿ ಸ್ಥಳ ಸರ್ವೆ ನಂಬ್ರ 162.1ಎ1ಸಿ ವಿಸ್ತೀರ್ಣ 0.02, ಸ.ನಂಬ್ರ 163.1ಸಿ2ಬಿ ವಿಸ್ತೀರ್ಣ 0..05 ಸ.ನಂಬ್ರ 163.1ಸಿ3 ವಿಸ್ತೀರ್ಣ 0.04.೦೪, ಸ.ನಂಬ್ರ 163.1ಸಿ1ಸಿ ವಿಸ್ತೀರ್ಣ 0.05 ಸ.ನಂಬ್ರ 170.1 ವಿಸ್ತೀರ್ಣ 0.06೫ ಎಕ್ರೆಗಳನ್ನು ಅತಿಕ್ರಮಣ ಮಾಡಲಾಗಿರುವುದನ್ನು ತೆರವುಗೊಳಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿದೆ. ಖಾಸಗಿ ವ್ಯಕ್ತಿಯೊಬ್ಬರು ಪರಂಬೋಕು ಸ್ಥಳಕ್ಕೆ ತಡೆಯೊಡ್ಡಿದ್ದರೂ, ಸ್ಥಳೀಯ ಪಂಚಾಯತ್ ಹಾಗೂ ಕಂದಾಯ ಇಲಾಖೆ ಮೌನ ವಹಿಸಿದೇ ಎಂದು ಕೋಟೇಶ್ವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕರಿಯದೇವಾಡಿಗ ಆರೋಪಿಸಿದ್ದಾರೆ. ನಡೆದಾಡುವ ಹಾದಿಗೆ ತಡೆ ಉಂಟು ಮಾಡಿದ ಬಗ್ಗೆ ತಹಶೀಲ್ದಾರ್ ಗ್ರಾಮ ಪಂಚಾಯತ್ಗೆ ದೂರು ನೀಡಿದ್ದರೂ ಯಾವುದೇ ಕ್ರಮ ನಡೆದಿಲ್ಲ. ತಡೆಯೊಡ್ಡಿದ ಸ್ಥಳದಿಂದ 3 ಕಿ.ಮೀ. ದೂರದಿಂದ ಜನರು ದೈನಂದಿನ ಅಗತ್ಯಕ್ಕಾಗಿ ಬರುವುದು ತಪ್ಪಿಹೋಗಿದೆ. ಅನಾರೋಗ್ಯ ಪೀಡಿತರನ್ನು ಹೊತ್ತುಕೊಂಡು ಸಾಗಬೇಕಾಗಿದೆ. ನಾಗರಿಕರು ಕಾನೂನು ಕೈಗೆತ್ತಿಕೊಳ್ಳುವ ಮೊದಲು ಆಡಳಿತ ಸೌಹಾರ್ಧ ವಾತಾವರಣ ಮೂಡಿಸಬೇಕು ಎಂದು…
ಗಂಗೊಳ್ಳಿ: ಗಂಗೊಳ್ಳಿಯಲ್ಲಿ ಮೀನುಗಾರಿಕೆಯ ಅಭಿವೃದ್ಧಿ ಹಾಗೂ ಸಮಸ್ತ ಮೀನುಗಾರರ ಶ್ರೇಯೋಭಿವೃದ್ಧಿಗಾಗಿ ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಸದಸ್ಯರು ಶೃಂಗೇರಿಯಲ್ಲಿ ಶೃಂಗೇರಿಯ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿಯವರನ್ನು ಮತ್ತು ಶ್ರೀ ವಿದುಶೇಖರ ಭಾರತೀ ತೀರ್ಥ ಶ್ರೀಗಳನ್ನು ಭೇಟಿ ಮಾಡಿ ಪಾದಪೂಜೆ ಸಲ್ಲಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಆಶೀರ್ವಚನ ಪಡೆದರು. ಶ್ರೀಗಳ ಭೇಟಿಗೂ ಮುನ್ನ ಮೀನುಗಾರರು ಶೃಂಗೇರಿಯ ಶ್ರೀ ಶಾರದಾ ಮಾತೆಗೆ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಿದರು. ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಎಚ್.ಮಂಜು ಬಿಲ್ಲವ, ಗೌರವಾಧ್ಯಕ್ಷ ಕೋಡಿ ತಿಮ್ಮಪ್ಪ ಖಾರ್ವಿ, ಮಾಜಿ ಅಧ್ಯಕ್ಷ ಡಿ.ಚಂದ್ರ ಖಾರ್ವಿ ಹಾಗೂ ನಾಡದೋಣಿ ಮೀನುಗಾರರು ಶ್ರೀಗಳವರನ್ನು ಭೇಟಿ ಮಾಡಿ ಆಶೀರ್ವಚನ ಪಡೆದರು.
ಕುಂದಾಪುರ: ಕಸ್ತೂರಿ ರಂಗನ್ ವರದಿಯಲ್ಲಿ ಮತ್ತೆ ವಂಡ್ಸೆ ಸೇರ್ಪಡೆಯಾಗಿರುವ ಬಗ್ಗೆ ವಂಡ್ಸೆಯ ಸಾರ್ವಜನಿಕರು ಅಸಮಾಧಾನ ವ್ಯಕ್ತ ಪಡಿಸಿದ್ದು, ಅಕ್ಟೋಬರ್ 13ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಕುಂದಾಪುರ: ಜಾನಪದ ಕ್ಷೇತ್ರಕ್ಕೆ ಉಪ್ಪಿನಕುದ್ರು ಗೊಂಬೆಯಾಟ ತಂಡ ತನ್ನದೇ ಆದ ಕಾಯಕದಿಂದ ವಿಶಿಷ್ಟ ಸೇವೆ ಸಲ್ಲಿಸುತ್ತಿರುವುದಂತೂ ಸುಳ್ಳಲ್ಲಾ. ಇಲ್ಲಿಯ ಕಲಾ ಪರಂಪರೆ ೩೫೦ ವರ್ಷಗಳ ಸುಧೀರ್ಘ ಇತಿಹಾಸದ ಹಿನ್ನೆಲೆಯಲ್ಲಿ ಇಂದು 6 ನೇ ತಲಾಂತರದಲ್ಲಿ ನಿರಂತರವಾಗಿ ಪ್ರವಹಿಸುತ್ತಿರುವುದು ಒಂದು ಗಿನ್ನಿಸ್ ದಾಖಲೆವೆನ್ನಬಹುದು. ಈ ಎಲ್ಲಾ ಸಾಧನೆ ಸಂವರ್ಧನೆಗೆ ಮೂಲ ಕಾರಣ ಉಪ್ಪಿನಕುದುರಿನ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ತಂಡ. ಸರಕಾರದ ಯಾವುದೇ ಸಹಾಯಧನ ನಿರೀಕ್ಷಿಸದೆ, ಸಾಂಘಿಕ ಪ್ರಯತ್ನದಿಂದ ಅಳಿವಿನಂಚಿನಲ್ಲಿರುವ ವಿಶಿಷ್ಟ ಅಷ್ಟೇ ಅಪರೂಪದ ಗೊಂಬೆಯಾಟ ಕಲೆಯನ್ನು ಪ್ರಪಂಚದಾದ್ಯಂತ15-20 ಕ್ಕೂ ಹೆಚ್ಚು ಬಾರಿ ನಾನಾ ರಾಷ್ಟ್ರಗಳಿಗೆ ಪರಿಚಯಿಸಿದ ಕೀರ್ತಿ ಈ ತಂಡದ್ದು. ಇಂದು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ತಂಡ ತನ್ನ ಸಾಧನೆಯ ಇನ್ನೊಂದು ಮೈಲಿಗಲ್ಲಿಗಾಗಿ ಸಿದ್ಧವಾಗುತ್ತಿರುವುದೊಂದು ವಿಶೇಷ. ರಾಜ್ಯ ಪ್ರಶಸ್ತಿ ವಿಜೇತ ಭಾಸ್ಕರ್ ಕೊಗ್ಗ ಕಾಮತರ ನೇತೃತ್ವದಲ್ಲಿ ಸಅಕ್ಟೋಬರ್ ೮ರಂದು ಹಾಂಗ್ ಕಾಂಗ್ ದೇಶದಲ್ಲಿ ಪ್ರದರ್ಶನ ನೀಡಲು ಸಜ್ಜಾಗಿದೆ. ಒಂದು ವಾರದ ಕಾಲ ಅಲ್ಲಿ ಪ್ರದರ್ಶನ ನೀಡಲಿರುವ ಈ ತಂಡವನ್ನು ಹಾಂಗ್ ಕಾಂಗ್ ಕನ್ನಡ ಸಂಘ…
ಕೋಟ: ಕಾರಂತರು ಅಂದು ನಡೆದಾಡಿದ ಜಾಗದಲ್ಲಿ ತಲೆ ಎತ್ತಿರುವ ಕಾರಂತ ಕಲಾ ಭವನದಲ್ಲಿ ವರ್ಷ ವರ್ಷವು ಕೂಡ ಕಾರಂತರ ಜನ್ಮ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸುತ್ತಿರುವ ಸಂತಸದ ವಿಚಾರವಾಗಿದೆ. ಕೋಟ ಕಾರಂತ ಕಲಾ ಭವನ ನಮ್ಮ ಕೋಟದ ಹೆಮ್ಮೆಯ ಆಸ್ತಿ ಎಂದು ಕೋಟ ಯಕ್ಷಾಂತರಂಗದ ವ್ಯವಸ್ಥಾಪಕ ಕೃಷ್ಣ ಮೂರ್ತಿ ಉರಾಳ ಅಭಿಪ್ರಾಯಪಟ್ಟರು. ಅವರು ಕೋಟ ಕಾರಂತ ಥೀಂ ಪಾರ್ಕನಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಪ್ರಧಾನ ಸಮಾರಂಭ ಅಂಗವಾಗಿ ಡಾ.ಕಾರಂತರ ಅಬಿಮಾನಿಗಳ ಬಳಗ ಪಾರಂಪಳ್ಳಿ, ಇನಿದನಿ ಕೋಟ, ಗೆಳೆಯರ ಬಳಗ ಕಾರ್ಕಡ ಜಬ್ಬರ್ ಸುಮೋ ಸಾರಥ್ಯದಲ್ಲಿ ಪ್ರಸ್ತುತ ಪಡಿಸಿದ ಸುಧನ್ವ ಕಾಳಗ ತಾಳಮದ್ದಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೋಟತಟ್ಟು ಪಂಚಾಯಿತಿ ಸದಸ್ಯ ವಾಸು ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆವಹಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾಂಸ್ಕೃತಿಕ ಚಿಂಕರ ಶಿವಾನಂದ ಹಂದೆ, ಇನಿದನಿ ವ್ಯವಸ್ಥಾಪಕ ರವಿಕಾರಂತ ಮತ್ತು ಗೆಳೆಯರ ಬಳಗ ಕಾರ್ಕಡ ಕಾರ್ಯದರ್ಶಿ ಕೆ. ಶಿವರಾಮ ಉಪಸ್ಥಿತರಿದ್ದರು. ಇದೇ ಸಂದರ್ಭ ಕಾರ್ಯಕ್ರಮಕ್ಕೆ ಸಹಕರಿಸಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.…
ಕೋಟ: ಕಾರಂತರ ರಂಗಕಲ್ಪನೆ ಅದ್ಭುತವಾದುದು. ಅವರ ರಂಗ ಪ್ರಯೋಗಗಳು ವಿನೂತನವಾದರೂ ತಮ್ಮ ಅದ್ಭುತ ಅಸಾಧಾರಣ ರಂಗ ಪ್ರಯೋಗದಿಂದ ರಂಗಭೂಮಿಯನ್ನು ಜೀವಂತಗೊಳಿಸಿದ ಕಾರಂತರು ರಂಗ ಚಟುವಟಿಕೆಗಳಿಗೆ ಹೊಸ ಆಯಾಮ ನೀಡಿದ ಮಹಾನುಭಾವ ಎಂದು ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ಅಧ್ಯಕ್ಷ ರೋ ಶ್ರೀಪತಿ ಅಧಿಕಾರಿ ಹೇಳಿದರು. ಅವರು ಕೋಟ ಥೀಂ ಪಾರ್ಕನಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಕಾರ್ಯಕ್ರಮದ 2ನೇ ದಿನದ ಅಂಗವಾಗಿ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ, ಅಶ್ವಿನೀ ಸ್ಮಾರಕ ಕೇಂದ್ರ ಮಣೂರು, ಪಂಚವರ್ಣ ಯುವಕ ಮಂಡಲ(ರಿ.) ಕೋಟ, ರಸರಂಗ ಕದ್ರಿಕಟ್ಟು ಕೋಟ ಇವರ ಸಹಯೋಗದಲ್ಲಿ ಆಯೋಜಿಸಲಾದ ಸಾಂಸ್ಕೃತಿಕ ದಿಬ್ಬಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು. ಕೋಟತಟ್ಟು ಪಂಚಾಯಿತಿ ಮಾಜಿ ಅಧ್ಯಕ್ಷ ರಘು ತಿಂಗಳಾಯ ದೀಪ ಪ್ರಜ್ವಲನ ಮಾಡಿದರು. ಮುಖ್ಯ ಅಶ್ವಿನೀ ಸ್ಮಾರಕ ಕೇಂದ್ರದ ಎಂ.ಎನ್.ಮಧ್ಯಸ್ಥ, ಪಂಚವರ್ಣ ಗೆಳೆಯರ ಬಳಗದ ನಾಗರಾಜ ಗಾಣಿಗ, ರಸರಂಗದ ಸುಧಾ ಮಣೂರು, ಕೋಟತಟ್ಟು ಪಂಚಾಯಿತಿ ಉಪಾಧ್ಯಕ್ಷ ಲೊಕೇಶ್ ತಿಂಗಳಾಯ ಉಪಸ್ಥಿತರಿದ್ದರು. ಶಿಕ್ಷಕಿ ವಿದ್ಯಾ ಹೇರ್ಳೆ ಕಾರ್ಯಕ್ರಮ…
ಕುಂದಾಪುರ: ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನಡೆಸುತ್ತಿರುವ ಹಾಸ್ಟೆಲ್ ಹಾಗೂ ವಸತಿ ಶಾಲೆಗಳಲ್ಲಿ ಮುಖ್ಯ ಅಡುಗೆಯವರು, ಅಡುಗೆ ಸಹಾಯಕರು, ಕಾವಲುಗಾರರು, ಜವಾನರು, ಕಸ ಹೊಡೆಯುವವರು, ಸ್ವಚ್ಚತಾ ಸಿಬ್ಬಂದಿ ಮುಂತಾದ ನೌಕರರು ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಉಡುಪಿ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಕುಂದಾಪುರ ಕಾರ್ಮಿಕ ಭವನದಲ್ಲಿ ಬೃಹತ್ ಸಮಾವೇಶವು ಜರಗಿತು. ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಾ ಹಾಸ್ಟೆಲ್ ಸರಕಾರಿ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ಅಡಿಯಲ್ಲಿ ಅನೇಕ ಸಲ ಜಿಲ್ಲಾ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಿ ತಮಗೆ ಸರಕಾರವೇ ನಿಗದಿಪಡಿಸಿದ ತುಟ್ಟಿಭತ್ಯೆ ಸಹಿತರ ಕನಿಷ್ಟ ವೇತನ ಹಾಗೂ ಇತರ ಕಾನೂನು ಬದ್ಧ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸುತ್ತಾ ಬಂದಿದ್ದಾರೆ.…
