ಗಂಗೊಳ್ಳಿ: ಇತ್ತೀಚೆಗೆ ಗಂಗೊಳ್ಳಿಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಡುಪಿ ಮತ್ತು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪ೦ದ್ಯಾಟದಲ್ಲಿ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡವು ದ್ವಿತೀಯ ಸ್ಥಾನ ಗಳಿಸಿತು.ಟ್ರೋಫಿಯೊಂದಿಗೆ ವಿಜೇತ ಕ್ರೀಡಾಳುಗಳಾದ ಮನಿಷ,ಸಹನಾ,ಅಕ್ಷತಾ,ದಿಶಾ ಭಟ್,ಪ್ರತಿಭಾ,ಅನುಷಾ ಮತ್ತು ರಕ್ಷಿತಾ.ಸರಸ್ವತಿ ವಿದ್ಯಾಲಯ ಆಡಳಿತ ಮಂಡಳಿಯ ಹೆಚ್ ಗಣೇಶ್ ಕಾಮತ್,ಪ್ರಾಂಶುಪಾಲ ಆರ್ ಎನ್ ರೇವಣ್‌ಕರ್,ವಾಮನದಾಸ ಭಟ್ ,ದೈಹಿಕ ಶಿಕ್ಷಣ ನಿರ್ದೇಶಕರಾದ ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು. ವರದಿ: ನರೇಂದ್ರ ಎಸ್ ಗಂಗೊಳ್ಳಿ.
Author: ಸುನಿಲ್ ಹೆಚ್. ಜಿ. ಬೈಂದೂರು
ಗಂಗೊಳ್ಳಿ: ಕ್ರೀಡಾಳುಗಳಿಗೆ ಕ್ರೀಡಾ ಮನೋಭಾವ ಅತ್ಯಂತ ಮುಖ್ಯವಾದದ್ದು. ಸೋಲು ಗೆಲುವು ಸಹಜ. ಆದರೆ ನಮ್ಮ ಗುರಿ ಮತ್ತು ಪ್ರಯತ್ನ ಗೆಲುವಿನ ಕಡೆಗಿರಬೇಕು ಎಂದು ಗಂಗೊಳ್ಳಿಯ ಜಿ.ಎಸ್.ವಿ.ಎಸ್ ಅಸೋಶಿಯೇಶನ್ನಿನ ಕಾರ‍್ಯದರ್ಶಿ ಹೆಚ್ ಗಣೇಶ ಕಾಮತ್ ಅಭಿಪ್ರಾಯಪಟ್ಟರು.ಅವರು ಇತ್ತೀಚೆಗೆ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪ೦ದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಸರಸ್ವತಿ ವಿದ್ಯಾಲಯ ಕಾಲೇಜಿನ ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಅಧ್ಯಕ್ಷತೆ ವಹಿಸಿದ್ದರು.ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸ೦ಘದ ಅಧ್ಯಕ್ಷ ವಸಂತ ಶೆಟ್ಟಿ . ಸರಸ್ವತಿ ವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಶೆಟ್ಟಿ,ವಿದ್ಯಾರ್ಥಿ ಪ್ರತಿನಿಧಿಗಳಾದ ಅನುಷಾ ಶೆಣೈ ಮತ್ತು ಸಚಿನ್ ಪೂಜಾರಿ ಉಪಸ್ಥಿತರಿದ್ದರು.ಉಪನ್ಯಾಸಕಿ ಕವಿತಾ ಎಮ್ ಸಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಸುಜಯೀಂದ್ರ ಹಂದೆ ಕಾರ‍್ಯಕ್ರಮ ನಿರೂಪಿಸಿದರು.
ದುಬೈ: ಕುಂದಾಪುರ ದೇವಾಡಿಗ ಮಿತ್ರ (ಕದಂ) ಇದರ 5ನೇ ವಾರ್ಷಿಕೋತ್ಸವ ಸಮಾರಂಭ ಅಕ್ಟೋಬರ್ 23 ರಂದು ದುಬೈ ಶೆರಾಟನ್ ದಯಿರದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಹಲವಾರು ಅತಿಥಿಗಳ ಸಮಕ್ಷಮದಲ್ಲಿ ಈ ಕಾರ್ಯಕ್ರಮ ಉದ್ಗಾಟನೆ ಗೊಳ್ಳಲಿದ್ದು ನಂತರ ಹಲವಾರು ಮನೋರಂಜನ ಕಾರ್ಯಕ್ರಮ ಗಳನ್ನೂ ನಡೆಸಿಕೊಡುವ ಮೂಲಕ ಹಾಗು ಅದ್ಬುತ ಖಾದ್ಯಗಳ ಬೋಜನಕೂಟ ಏರ್ಪಡಿಸುವ ಮೂಲಕ ದುಬೈನಲ್ಲಿರುವ ದೇವಾಡಿಗರ ಹೆಮ್ಮೆಯ ಸಂಘ ಕದಂ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಲು ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿದೆ. [quote bgcolor=”#ffffff”]ಕದಂ (ಕುಂದಾಪುರ ದೇವಾಡಿಗ ಮಿತ್ರ) ಹತ್ತು ಹಲವಾರು ಯೋಜನೆಗಳನ್ನು ರೂಪಿಸಿಕೊಂಡು ದೇವಾಡಿಗ ಸಮಾಜದ ಒಳಿತಿಗಾಗಿ ದೂರದ ಕೊಲ್ಲಿ ರಾಷ್ಟ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಂದು ಸಂಸ್ಥೆ. 5 ವರ್ಷದ ಹಿಂದೆ ಅಂದರೆ 2010 ರಲ್ಲಿ ಕೆಲವು ಸಮಾನ ಮನಸ್ಕ ಸಮಾಜಬಾಂದವರು ಹುಟ್ಟು ಹಾಕಿದ ಈ ಸಂಸ್ಥೆ ಈಗ ಐದನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಕದಂ ಈ ಶಬ್ದದ ಹಿಂದಿ ಭಾವಾರ್ಥ ಹೆಜ್ಜೆಯ ನಂತರ ಇನ್ನೊಂದು ಹೆಜ್ಜೆ. ವಿದ್ಯಾರ್ಥಿವೇತನ, ವೈದ್ಯಕೀಯ…
ಕುಂದಾಪುರ: ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಕುಂದಾಪುರ ತಾಲೂಕು ಘಟಕದ ವತಿಯಿಂದ ಆದಿವಾಸಿ ಬುಟಕಟ್ಟು ಸಮುದಾಯಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕುಂದಾಪುರ ತಾಲೂಕು ಪಂಚಾಯತ್ ಎದುರು ಸಾಂಕೇತಿಕ ಪ್ರತಿಭಟನೆ ನಡೆಯಿತು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ತಾಲೂಕು ಸಂಚಾಲಕ ಶ್ರೀಧರ ನಾಡಾ ಮಾತನಾಡಿ ಜಿಲ್ಲೆಯಲ್ಲಿ ವಾಸವಾಗಿರುವ ವಿವಿಧ ಬುಡಕಟ್ಟು ಸಮುದಾಯದ ಜನರು ಕಳೆದ ಹಲವಾರು ವರ್ಷಗಳಿಂದ ಭೂಮಿ, ಮನೆ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ನಡೆಸುತ್ತಲೇ ಬಂದಿದ್ದೇವೆ. ಆದರೆ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಈಗ ಬುಡಕಟ್ಟು ಸಮುದಾಯದ ಎಲ್ಲಾ ಪಂಗಡದ ಜನ ಸಂಘಟಿತರಾಗಿದ್ದಾರೆ. ನಮ್ಮ ಬೇಡಿಕೆ ಈಡೇರಿಕೆಗಾಗಿ ಹತ್ಕೊತ್ತಾಯವನ್ನು ಆರಂಭಿಸಿದ್ದೇವೆ ಎಂದರು. [quote bgcolor=”#ffffff”]ಉಡುಪಿ ಜಿಲ್ಲೆಯ ಹಲಸ ಸಮುದಾಯವನ್ನು ಹಲಸರು ಎಂದು ಪರಿಗಣಿಸಿ ಪ.ಪಂಗಡಕ್ಕೆ ಸೇರಿಸುವುದು, ಕುಡುಬಿ-ಕುಣಬಿ ಸಮುದಾಯವನ್ನು ಪ.ಪಂಗೆ ಸೇರಿಸುವುದು, ಕಂದಾಯ ಭೂಮಿಯಲ್ಲಿ ವಾಸವಾಗಿರುವ ಹಾಗೂ ಅರಣ್ಯವಾಸಿ ಹಕ್ಕುಪತ್ರ ವಂಚಿತ ಬುಡಕಟ್ಟು ಕುಟುಂಬಗಳಿಗೆ ಹಕ್ಕುಪತ್ರ ನೀಡುವುದು, ಮುದೂರು ಉದಯನಗರದಲ್ಲಿ ಸರಕಾರಿ ಶಾಲೆ…
ಕುಂದಾಪುರ: ಇಲ್ಲಿನ ಕುಂಭಾಶಿ ಕೊರಗ ಕಾಲನಿಯಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯೆ ಜಯಮಾಲ(36) ಎಂಬುವವರ ಶವ ಅವರ ಮನೆಯ ಸಮೀಪದ ಕೊಟ್ಟಿಗೆಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದ್ದು, ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಕುಂಭಾಶಿ ಕಾಲೋನಿಯ ನಿವಾಸಿ ಜಯಮಾಲ, ಅದೇ ಕಾಲೋನಿಯ ಪಾಪಣ್ಣ ಎನ್ನುವವನೊಂದಿಗೆ ಕಳೆದ ಮೂರು ವರ್ಷಗಳಿಂದ ವಾಸವಾಗಿದ್ದಳು. ನಿನ್ನೆ ಪಾಪಣ್ಣ ಕುಡಿದ ಮತ್ತಿನಲ್ಲಿ ತಡರಾತ್ರಿಯವರೆಗೂ ಜಲಮಾಲಳ ಜೊತೆ ಜಗಳವಾಡುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದು, ಘಟನೆಯ ಬಳಿಕ ಪಾಪಣ್ಣ ನಾಪತ್ತೆಯಾಗಿರುವುದರಿಂದ ಆತನ ಮೇಲೆ ಹಲವು ಅನುಮಾನಗಳು ಮೂಡಿದೆ. [quote bgcolor=”#ffffff” bcolor=”#ff3a3a”]ಕಳೆದ ಸಾಲಿನಲ್ಲಿ ಹಾಗೂ ಅದಕ್ಕೂ ಹಿಂದೆ ನಡೆದ ಮಧ್ಯಂತರ ಚುನಾವಣೆಯಲ್ಲಿ ಬಿಜಾಡಿ-ಗೋಪಾಡಿ ಗ್ರಾ.ಪಂ ಸದಸ್ಯೆಯಾಗಿದ್ದ ಜಯಮಾಲ, ರೋಶನಿಧಾಮದ ರಮೇಶ್ ಎಂಬುವರೊಂದಿಗೆ ವಿವಾಹವಾಗಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದರು. ಆದರೆ ಮೂರು ವರ್ಷಗಳ ಹಿಂದೆ ರಮೇಶ ಅವರಿಂದ ದೂರವಾಗಿದ್ದ ಜಯಮಾಲ ಪಾಪಣ್ಣನ ಜೊತೆ ವಾಸವಾಗಿದ್ದರು. ವಿಪರೀತ ಕುಡಿತದ…
ಕೋಟ: ಡಾ.ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಅಕ್ಟೋಬರ್ 1ರಿಂದ 10ರವರೆಗೆ ನಡೆಯಲಿರುವ ಚಿತ್ತಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಈ ಬಾರಿಯ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಲಿರುವ ರಂಗಕರ್ಮಿ ಛಾಯಾಗ್ರಾಹಕ ಸದಾನಂದ ಸುವರ್ಣ ಅವರಿಗೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಈ ಸಂದರ್ಭ ಪ್ರತಿಷ್ಠಾನದ ಸದಸ್ಯ ಸುಬ್ರಾಯ ಆಚಾರ್ಯ ಅವರು ಶ್ರೀಯುತರಿಗೆ ಶಾಲು ಹೊದಿಸಿ ಗೌರವಿಸಿ ಆಮಂತ್ರಣ ಪತ್ರಿಕೆ ಹಸ್ತಾಂತರಿಸಿದರು. ಈ ಸಂದರ್ಭ ಪ್ರತಿಷ್ಠಾನದ ಕಾರ್ಯದರ್ಶಿ ಶಿಕ್ಷಕ ಸಾಹಿತಿ ಕೋಟ ನರೇಂದ್ರ ಕುಮಾರ್, ಸಂಜೀವ ಗುಂಡ್ಮಿ ಮತ್ತು ಥೀಂ ಪಾರ್ಕ ವಕ್ತಾರ ಅಶ್ವಥ್ ಆಚಾರ್ಯ ಯಡಬೆಟ್ಟು ಉಪಸ್ಥಿತರಿದ್ದರು.
ಬೈಂದೂರು: ಗೋಳಿಹೊಳೆ ಗ್ರಾಪಂ ವ್ಯಾಪ್ತಿಯ ಅರೆಶಿರೂರಿನ ನಿವಾಸಿ ಹೋಟೆಲ್ ಉದ್ಯಮಿಯಾಗಿದ್ದ ಕೆ. ನರಸಿಂಹಮೂರ್ತಿ ಶ್ಯಾನುಭಾಗ್(49) ಅಲ್ಪಕಾಲದ ಅನಾರೋಗ್ಯದಿಂದ ಮಣಿಪಾಲ ಖಾಸಗಿ ಅಸ್ಪತ್ರೆಯಲ್ಲಿ ಶನಿವಾರ ನಿಧನರಾದರು. ಇವರ ಪತ್ನಿ ಬೈಂದೂರು ಕ್ಷೇತ್ರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನಯನಾ ಎನ್. ಶ್ಯಾನುಭಾಗ್‌ರನ್ನು ಅಗಲಿದ್ದಾರೆ.
ಕುಂದಾಪುರ: ಸೌಪರ್ಣಿಕ ವಾರ್ತೆ ಪತ್ರಿಕೆಯ ಸಂಪಾದಕ ಸುಭ್ರಹ್ಮಣ್ಯ ಭಟ್ ಅಲ್ಪಕಾಲದ ಅಸೌಖ್ಯದಿಂದ ಸೆ.25ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿರುತ್ತಾರೆ. ಉದಯವಾಣಿ ದೈನಿಕದ ಜಾಹೀರಾತು ವಿಭಾಗದ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದ ಪತ್ರಕರ್ತ ಸುಬ್ರಹ್ಮಣ್ಯ ಭಟ್, ಇತ್ತೀಚೆಗೆ “ಸೌಪರ್ಣಿಕಾ ವಾರ್ತೆ’ ಎಂಬ ಸ್ವಂತ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಈ ಹಿಂದೆ ಹಲವು ಪತ್ರಿಕೆಗಳಲ್ಲಿ ದುಡಿದಿ ದ್ದರು. ಮೃತರು ವಂಡ್ಸೆ ಸಮೀಪದ ಹೊಸೂರು ಮೂಲದವರಾಗಿದ್ದು ಕುಂದಾಪುರ ಹವ್ಯಕ ಬ್ರಾಹ್ಮಣ ಸಮಾಜದ ಸಂಘಟನೆಯಲ್ಲಿ ಸಕ್ರಿಯ ರಾಗಿದ್ದರು. ಹೊಸನಗರದ ರಾಮಚಂದ್ರ ಮಠದೊಡನೆ ನಿಕಟ ಸಂಬಂಧವನ್ನು ಹೊಂದಿರುವ ಅವರು ಕುಂದಾಪುರ ತಾಲೂಕು ಪತ್ರಕರ್ತರ ಸಂಘದ ಸದಸ್ಯ ರಾಗಿದ್ದರು. ಕುಂದಾಪುರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಅತೀವ ದುಃಖ ವ್ಯಕ್ತ ಪಡಿಸಿದ್ದು ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದ್ದಾರೆ.
ವಿಶ್ವ ಹೃದಯ ದಿನದ ಅಂಗವಾಗಿ ಆರೋಗ್ಯ ಅರಿವು ಮೂಡಿಸಲು ಕುಂದಾಪುರದಲ್ಲಿ ಪ್ರಪ್ರಥಮ ಭಾರಿಗೆ ಹಮ್ಮಿಕೊಂಡ ಆರೋಗ್ಯಕ್ಕಾಗಿ ಓಟ ಕುಂದಾಪುರ: ವಿಶ್ವ ಹೃದಯ ದಿನದ ಅಂಗವಾಗಿ, ಆರೋಗ್ಯದ ಬಗೆಗೆ ಜನಜಾಗೃತಿ ಮೂಡಿಸಲು ಇಂದು(ಸೆ.27) ರೋಟರಿ ಕ್ಲಬ್ ಕುಂದಾಪುರ ಹಾಗೂ ನ್ಯೂ ಮೆಡಿಕಲ್ ಸೆಂಟರ್ ಜಂಟಿಯಾಗಿ ಹಮ್ಮಿಕೊಂಡ ’ಆರೋಗ್ಯಕ್ಕಾಗಿ ಓಟ-2015’ ಭಾರಿ ಜನಮನ್ನಣೆ ಗಳಿಸಿತು. ಪುರುಷ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ವಿಭಾಗದಲ್ಲಿ ಆಯೋಜಿಸಲಾಗಿದ್ದ ಓಟ ಸ್ವರ್ಧೆಯಲ್ಲಿ 18 ವರ್ಷ ಮೇಲ್ಪಟ್ಟ 150ಕ್ಕೂ ಹೆಚ್ಚು ಸ್ವರ್ಧಾಳುಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ರಂಗು ತುಂಬಿದರು. ಬೆಳ್ಳಿಗೆ ೮ಗಂಟೆಗೆ ಕುಂದಾಪುರದ ಗಾಂಧಿಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಉಪವಿಭಾಗಾಧಿಕಾರಿ ಚಾರುಲತಾ ಸೋಮಲ್ ಬಲೂನ್ ಹಾರಿಸಿ, ಬಾವುಟದ ನಿಶಾನೆ ತೋರುವ ಮೂಲಕ ಓಟಕ್ಕೆ ಚಾಲನೆ ನೀಡಿದರು. ಗಾಂಧಿಮೈದಾನದಿಂದ ಹೊರಟ ಸ್ವರ್ಧಾಳುಗಳು ಶಾಸ್ತ್ರಿ ಪಾರ್ಕ್, ಪಾರಿಜಾತ ಸರ್ಕಲ್ ಮೂಲಕ ಹೊಸ ಬಸ್ ನಿಲ್ದಾಣವನ್ನು ತಲುಪಿ ಅಲ್ಲಿಂದ ಪುರಸಭೆ ರಸ್ತೆಯನ್ನು ದಾಟಿ ಯಡ್ತರೆ ಮಂಜಯ್ಯ ಶೆಟ್ಟಿ ರಸ್ತೆಯ ಮೂಲಕ ಮತ್ತೆ ಗಾಂಧಿ ಮೈದಾನವನ್ನು ತಲುಪಿದರು. ಒಟ್ಟು 3.2ಕಿ.ಮೀ ದೂರವನ್ನು…
ಕುಂದಾಪುರ: ರೆಡ್ ಆಪಲ್ ಮೂವಿಸ್ ಕ್ರೀಯೆಷನ್ಸ್ ನ ಯುವ ನಿರ್ದೇಶಕ ದೇವರಾಜ್ ಪೂಜಾರಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರ ‘ ಕಿನಾರೆ’ ಗೆ ಉಡುಪಿ, ಕುಂದಾಪುರ ಭಾಗಗಳಿಂದ ಪ್ರತಿಭಾವಂತ ಕಲಾವಿದರು ಬೇಕಾಗಿದ್ದಾರೆ. ಆಸಕ್ತರು ತಮ್ಮ ಇತ್ತಿಚಿನ ಭಾವಚಿತ್ರದೊಂದಿಗೆ ಸೆಪ್ಟಂಬರ್ 27ರ ಭಾನುವಾರ ಕುಂದಾಪುರ ಹೋಟೆಲ್ ಶರೋನ್ ಮಿನಿ ಹಾಲಿನಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ನಡೆಯುವ ಆಡಿಶನ್ ನಲ್ಲಿ ತಮ್ಮ ಇತ್ತಿಚಿನ ಭಾವಚಿತ್ರದೊಂದಿಗೆ ಭಾಗವಹಿಸಬಹುದಾಗಿದೆ.
