Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಬೈಂದೂರು: ಸ್ಕೌಟ್ಸ್ ಮತ್ತು ಗೈಡ್ಸ್‌ನಂತಹ ಸೇವಾ ಸಂಸ್ಥೆಗಳೊಂದಿಗೆ ವಿದ್ಯಾರ್ಥಿಗಳು ಹೆಚ್ಚು ತೊಡಗಿಸಿಕೊಳ್ಳುವ ಮೂಲಕ ದೇಶ ಕಟ್ಟುವ ಕೆಲಸವನ್ನು ಮಾಡಬೇಕಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಉಡುಪಿ ಜಿಲ್ಲಾ ಸಂಸ್ಥೆ ಹಾಗೂ ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ಎರಡು ದಿನಗಳ ರೋವರ್ ರೇಂಜರ್ ಚಾರಣ ಶಿಬಿರ ಹಾಗೂ ವಹಮಹೋತ್ಸವನ್ನು ಉದ್ಘಾಟಿಸಿ ಮಾತನಾಡಿದರು. ಉಜ್ವಲ ಭವಿಷ್ಯವನ್ನು ಪಡೆದು ಉತ್ತಮ ನಾಗರೀಕರಾಗಿ ಬದುಕಬೇಕಾದರೇ ವಿದ್ಯಾರ್ಥಿ ದೆಸೆಯಿಂದಲೇ ಸೇವಾ ಮನೋಭಾವವನ್ನು ಮೈಗೂಡಿಕೊಳ್ಳಬೇಕಿದೆ. ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸಮಾಜವನ್ನೂ ಉತ್ತಮ ಮಾರ್ಗದಲ್ಲಿ ಕೊಂಡೊಯ್ಯಬೇಕಿದೆ ಎಂದವರು ಹೇಳಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಿ. ಎ. ಮೇಳಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಸದಸ್ಯ ರಾಜು ಪೂಜಾರಿ, ಭಾರತ್ ಸೌಟ್ಸ್ ಮತ್ತು ಗೌಡ್ಸ್‌ನ ಕರ್ನಾಟಕ ರಾಜ್ಯ ಉಪಾಧ್ಯಕ್ಷೆ ಶಾಂತ ವಿ. ಎಸ್.…

Read More

ಕುಂದಾಪುರ: ಮಕ್ಕಳಿಗೆ, ಸಾರ್ವಜನಿಕರಿಗೆ ಸ್ಪರ್ಧೆ, ಪ್ರತಿಭಾ ಪ್ರದರ್ಶನಗಳು, ಮನರಂಜನಾ ಕಾರ್ಯಕ್ರಮಗಳಿಂಧಾಗಿ ಜೇಸಿ ಸಪ್ತಾಹವೆಂದರೇ ಕುಂದಾಪುರದಲ್ಲಿ ಹಬ್ಬ ಎಂಬ ವಾತಾವರಣ ನಿರ್ಮಾಣವಾಗುತ್ತದೆ. ಜೇಸಿ ಸಂಸ್ಥೆಯಲ್ಲಿ ತರಬೇತಿ ಪಡೆದವರು ಎಲ್ಲ ರಂಗದಲ್ಲಿಯೂ ಸಲ್ಲುವ ಜೊತೆಗೆ ಉತ್ತಮ ನಾಗರಿಕರಾಗಿ ಮೂಡಿ ಬರುತ್ತಾರೆ ಎಂದು ಪ್ಲೆಸೆಂಟ್ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಬಶೀರ್ ಕೋಟ ಹೇಳಿದರು. ಅವರು ಜೇಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಜೇಸಿ ಸಪ್ತಾಹದ ೬ನೇ ದಿನದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷ ಚಂದ್ರಕಾಂತ ವಹಿಸಿದ್ದರು. ಕುಂದಾಪುರದ ಖ್ಯಾತ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ| ಮಧುಮಯೂರಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಕುಂದಾಪುರ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ರಾಜೇಶ್ ಕಾವೇರಿ, ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಎಚ್. ಎಸ್. ಹತ್ವಾರ್, ಕುಂದಾಪುರ ಸ. ಪ. ಪೂ. ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಶಿ, ಜೇಸಿಐ ಕುಂದಾಪುರ ಸಿಟಿ ಸಲಹೆಗಾರರಾದ ಪುರುಷೋತ್ತಮ…

Read More

ಗ೦ಗೊಳ್ಳಿ : ಇ೦ದಿನ ಕಾಲದಲ್ಲಿ ಮಕ್ಕಳ ಬಗೆಗೆ ಹೆಚ್ಚಿನ ನಿಗಾ ಅಗತ್ಯ. ಮಕ್ಕಳು ನಮ್ಮ ನಡೆನುಡಿಗಳನ್ನು ಅನುಸರಿಸುವುದರಿ೦ದ ನಮ್ಮ ನಡತೆಯ ಬಗೆಗೆ ಹೆಚ್ಚಿನ ಗಮನವನ್ನು ಹರಿಸಬೇಕು ಎ೦ದು ಗ೦ಗೊಳ್ಳಿ ಗ್ರಾಮ ಪ೦ಚಾಯತ ಉಪಾಧ್ಯಕ್ಷ ಮಹೇಶ್ ರಾಜ್ ಅಭಿಪ್ರಾಯ ಪಟ್ಟರು. ಅವರು ಮೇಲ್ ಗ೦ಗೊಳ್ಳಿಯ ಶಾಲಾವಠಾರದಲ್ಲಿ ನಡೆದ ಗ೦ಗೊಳ್ಳಿಯ ಡಾ.ಬಿ.ಆರ್ ಅ೦ಬೇಡ್ಕರ್ ಯುವಕ ಮ೦ಡಲ (ರಿ),ಅಮೃತಾ ಯುವತಿ ಮ೦ಡಲ ಮತ್ತು ಅರ್ಚನಾ ಮಹಿಳಾ ಮ೦ಡಲ ಮೇಲ್ ಗ೦ಗೊಳ್ಳಿ ಮತ್ತು ಪ೦ಚಗ೦ಗಾವಳಿ ಸೌಹಾರ್ದ ಕ್ರೆಡಿಟ್ ಕೊ ಅಪರೇಟಿವ್ ಲಿ. ಗ೦ಗೊಳ್ಳಿ ಇವರ ಸ೦ಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ನ ಜನ್ಮಾಷ್ಠಮಿ ಪ್ರಯುಕ್ತ ನಡೆದ ಐದನೇ ವರುಷದ ಮುದ್ದು ಕೃಷ್ಣ ವೇಷ ಸ್ಪರ್ಧೆಯ ಸಭಾ ಕಾರ‍್ಯಕ್ರಮದಲ್ಲಿ ಸಮಾರ೦ಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪ೦ಚಗ೦ಗಾವಳಿ ಸೌಹಾರ್ದ ಕ್ರೆಡಿಟ್ ಕೊ ಅಪರೇಟಿವ್ ಲಿ.ನ ಅಧ್ಯಕ್ಷ ರಾಜು ದೇವಾಡಿಗ ತ್ರಾಸಿ ಉಪಸ್ಥಿತರಿದ್ದರು.ನಿವೃತ್ತ ಪೋಟ್ ಕನ್ಸ್‌ರ್ವೇಟರ್ ಮೋನಪ್ಪ ಆದ್ಯಪಾಡಿ ಬಹುಮಾನಗಳನ್ನು ವಿತರಿಸಿದರು.ತೀರ್ಪುಗಾರರಾದ ನಾರಾಯಣ್ ನಾಯ್ಕ್ ,ಆನ೦ದ ಜಿ.ಮತ್ತು ರಾಜ ಉಪಸ್ಥಿತರಿದ್ದರು.…

Read More

ಕೋಟ: ಕಳೆದ 10 ವರ್ಷಗಳಿಂದ ಗಾಂಧಿ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿರುವ ಬಹುಮಖಿ ಸಾಲಿಗ್ರಾಮ ಸಂಸ್ಥೆಯ ಈ ಬಾರಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಕಡೂರು ಕ್ಷೇತ್ರದ ಶಾಸಕ ವೈ.ಎಸ್.ವಿ.ದತ್ತಾ ಅವರನ್ನು ಮುಖ್ಯ ಭಾಷಣಕಾರರಾಗಿ ಆಗಮಿಸುತ್ತಿದ್ದು, ಸಂಸದೀಯ ಪ್ರಜಾಪ್ರಭತ್ವ – ವರ್ತಮಾನ ಪ್ರಸ್ತುತತೆ ಎಂಬ ವಿಷಯವಾಗಿ ಅವರು ಉಪನ್ಯಾಸ ನೀಡಲಿದ್ದಾರೆ ಎಂದು ಡಾ. ಕೃಷ್ಣ ಕಾಂಚನ್ ತಿಳಿಸಿದರು. ಅವರು ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಪ್ಠಿಯಲ್ಲಿ ಮಾತನಾಡುತ್ತಾ, ಪ್ರತಿ ವರ್ಷವು ಗಣ್ಯರನ್ನು ಆಮಂತ್ರಿಸಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸುವ ಪರಿಪಾಠ ನಮ್ಮ ಸಂಸ್ಥೆಯದ್ದಾಗಿದೆ. ಅಲ್ಲದೇ ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನ, ಯಕ್ಷಗಾನ ತಾಳ ಮದ್ದಳೆ ಕಾರ್ಯಕ್ರಮವನ್ನು ೧೦ ವರ್ಷಗಳಿಂದ ಆಯೋಜಿಸುತ್ತಾ ಬಂದಿದ್ದೇವೆ. ಈ ಬಾರಿಯ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಕೋಟ ಶ್ರೀ ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ ಸಿ.ಕುಂದರ್ ಮೊದಲಾವರು ಉಪಸ್ಥಿತರಿರಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಸಾಗರದ ಸಾಕೇತ ಕಲಾವಿದರಿಂದ ರಾಮ…

Read More

ಬೈಂದೂರು: ಇಲ್ಲಿಗೆ ಸಮೀಪದ ನಾಗೂರು ಎಡಮಾವಿನ ಹೊಳೆ ತಿರುವಿನಲ್ಲಿ ರಾತ್ರಿ ಸಂಭವಿಸಿದ ಬೈಕ್ ಮತ್ತು ಇನ್ಸುಲೇಟರ್ ವ್ಯಾನ್ ನಡುವಿನ ಭೀಕರ ಅಪಘಾತದಲ್ಲಿ ಬೈಕ್ ಸವಾರರೀರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಹೆರಂಜಾಲು ರವಿ ದೇವಾಡಿಗ (30) ಹಾಗೂ ಕೆರ್ಗಾಲು ಉಮೇಶ ದೇವಾಡಿಗ (27) ಮೃತ ದುರ್ದೈವಿಗಳು ಘಟನೆಯ ವಿವರ: ಹೆರಂಜಾಲು ಗ್ರಾಮದ ನಿರ್ಗದ್ದೆ ಮನೆ ನಿವಾಸಿ ಮಾಹಾಲಿಂಗ ಅವರ ಪುತ್ರ ರವಿ ದೇವಾಡಿಗ ಹಾಗೂ ಕೆರ್ಗಾಲು ಗ್ರಾಮದ ಅಜ್ಜರಮನೆ ನಿವಾಸಿ ರಾಮ ದೇವಾಡಿಗ ಅವರ ಪುತ್ರ ಉಮೇಶ್ ದೇವಾಡಿಗ ಪಲ್ಸರ್ ಬೈಕಿನಲ್ಲಿ ನಾಗೂರು ಕಡೆಯಿಂದ ಕಂಬದಕೋಣೆ ಕಡೆಗೆ ತೆರಳುತ್ತಿದ್ದ ವೇಳೆ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ಇನ್ಸುಲೇಟರ್ ವ್ಯಾನ್ ನಾಗೂರು ಎಡಮಾವಿನ ಹೊಳೆ ತಿರುವಿನಲ್ಲಿ ಮುಖಾಮುಖಿ ಢಿಕ್ಕಿ ಹೊಡೆದಿತ್ತು. ಢಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ರವಿ ಹಾಗೂ ಉಮೇಶ್ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಪೂನಾದಲ್ಲಿ ಉದ್ಯೋಗಿಯಾಗಿದ್ದ ಉಮೇಶ್ ದೇವಾಡಿಗ ಕೆಲವು ದಿನಗಳ ಹಿಂದಷ್ಟೇ…

Read More

ಗಂಗೊಳ್ಳಿ: ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ 2014-15ನೇ ಸಾಲಿನ ವಾರ್ಷಿಕ ಮಹಾಸಭೆಯು ಇತ್ತೀಚಿಗೆ ಸಂಘದ ಪ್ರಧಾನ ಕಛೇರಿಯ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕೆ. ನಾಗ ಖಾರ್ವಿ ಅವರು ಸಂಘವು 2014-15ನೇ ಸಾಲಿನಲ್ಲಿ ರೂ 30,70,975.02 ನಿವ್ವಳ ಲಾಭ ಗಳಿಸಿದ್ದು, ಸದಸ್ಯರ ಪಾಲು ಬಂಡವಾಳಕ್ಕೆ ಶೇ.೨೫ ಡಿವಿಡೆಂಡ್ ನೀಡಲಾಗುವುದು. ಸಂಘದ ಸದಸ್ಯರಿಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ತರಿಸಿ ಕೊಡುವರೇ ಮುತವರ್ಜಿ ವಹಿಸುತ್ತಿದ್ದೇವೆ ಎಂದರು. ಸಂಘದ ಉಪಾಧ್ಯಕ್ಷ ಪ್ರಕಾಶ್ ಆರ್. ಖಾರ್ವಿ, ನಿರ್ದೇಶಕರಾದ ಮೋಹನ ಖಾರ್ವಿ, ವಿಘ್ನೇಶ್ ಖಾರ್ವಿ, ಮಾಧವ ಖಾರ್ವಿ, ಶಂಕರ ಖಾರ್ವಿ, ದಿನೇಶ್ ಖಾರ್ವಿ, ತಿಮ್ಮಪ್ಪ ಖಾರ್ವಿ, ಸರೋಜಿನಿ, ಶಶಿಕಲಾ, ಶ್ರೀಮತಿ ಸುಮತಿ, ಜಿ. ಪಾಂಡು ಖಾರ್ವಿ, ಕೆ. ಅಜಂತ ಖಾರ್ವಿ, ರತ್ನಾಕರ ಖಾರ್ವಿ ಉಪಸ್ಥಿತರಿದ್ದರು. ಸಂಘದ ವ್ಯವಸ್ಥಾಪಕ ಮೋಹನ ಖಾರ್ವಿ ಅವರು 2014-15ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಸಂಘದ ಸಿಬ್ಬಂದಿ ಪಾಂಡುರಂಗ ಮಡಿವಾಳ ಕಾರ್ಯಕ್ರಮ ನಿರೂಪಿಸಿದರು.

Read More

ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಸೆ. 21ರಂದು ಕುಂದಾಪುರದ ಶಾಸ್ತ್ರೀ ಸರ್ಕಲ್‌ನಲ್ಲಿ ವಿಶ್ವ ಶಾಂತಿ ದಿನಾಚರಣೆಯ ಅಂಗವಾಗಿ ಕ್ಯಾಂಡಲ್ ಲೈಟ್ ಬೆಳಗಿಸಿ ವಿಶ್ವ ಶಾಂತಿಗಾಗಿ ಪ್ರಾರ್ಥನೆ ನಡೆಸಲಾಯಿತು. ವಿಶ್ವದ ನಾನಾ ಭಾಗಗಳಲ್ಲಿ ಅಶಾಂತಿ ಹೆಚ್ಚುತ್ತಿದೆ. ಶಾಂತಿ, ನೆಮ್ಮದಿಯನ್ನು ಅರಸಿ ಸಿರಿಯಾ ಮೊದಲಾದ ದೇಶಗಳ ಜನರು ಪ್ರಾಣದ ಹಂಗು ತೊರೆದು ವಲಸೆ ಹೋಗುವ ಪ್ರಯತ್ನ ನಡೆಸುತ್ತಿದ್ದಾರೆ. ಭಯೋತ್ಪಾದನೆಯ ಕರಾಳ ಸ್ವರೂಪವನ್ನು ಉಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಇಂತಹ ಕಾಲಘಟ್ಟದಲ್ಲಿ ವಿಶ್ವ ಶಾಂತಿಗಾಗಿ ನಡೆಸುವ ಪ್ರಾರ್ಥನೆ ಅರ್ಥಪೂರ್ಣ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಎ.ಎಸ್.ಎನ್. ಹೆಬ್ಬಾರ್ ಹೇಳಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ರೋಟರಿ ಕ್ಲಬ್ ಕುಂದಾಪುರ ಮಿಡ್‌ಟೌನ್ ಪೂರ್ವಾಧ್ಯಕ್ಷ ಬಶೀರ್ ಸಾಹೇಬ್ ಕೋಟ, ರೋಟರಿ ಕ್ಲಬ್ ಕುಂದಾಪುರದ ಪೂರ್ವಾಧ್ಯಕ್ಷರಾದ ಡಾ. ಎನ್. ಪಿ. ಕಮಾಲ್, ರವಿರಾಜ್ ಶೆಟ್ಟಿ, ವಿ. ಆರ್. ಕೆ. ಹೊಳ್ಳ, ಶಶಿಧರ ಹೆಗ್ಡೆ ಸಾಲಗದ್ದೆ, ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷ…

Read More

ಕುಂದಾಪುರ: ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್ ದ.ಕ., ಉಡುಪಿ ಇದರ ರಜತ ಮಹೋತ್ಸವದ ಅಂಗವಾಗಿ ಎಸ್‌ಕೆಪಿಎ ಕುಂದಾಪುರ ವಲಯದ ವತಿಯಿಂದ ಸಂಘದ ಸದಸ್ಯರು ಹಾಗೂ ಸಾರ್ವಜನಿಕರಿಂದ ನೇತ್ರದಾನ ಘೋಷಣಾ ಕಾರ್ಯಕ್ರಮ ಮತ್ತು ಸಾರ್ವಜನಿಕರಿಗೆ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸೆ.26 ಬೆಳಿಗ್ಗೆ 10ರಿಂದ ಕುಂದಾಪುರದ ಆರ್.ಎನ್.ಶೆಟ್ಟಿ ಕಲ್ಯಾಣ ಭವನದಲ್ಲಿ ನಡೆಯಲಿದೆ ಎಂದು ಎಸ್‌ಕೆಪಿಎ ಕುಂದಾಪುರ ಅಧ್ಯಕ್ಷ ನಾಗರಾಜ್ ರಾಯಪ್ಪನಮಠ ತಿಳಿಸಿದರು. ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಉದ್ಘಾಟಿಸುವರು. ಎಸ್‌ಕೆಪಿಎ ಅಧ್ಯಕ್ಷ ವಾಸುದೇವ ರಾವ್ ಅಧ್ಯಕ್ಷತೆ ವಹಿಸುವರು. ಸಚಿವ ವಿನಯ ಕುಮಾರ್ ಸೊರಕೆ ಪ್ರಮಾಣ ಪತ್ರ ವಿತರಿಸುವರು. ಈ ಸಂದರ್ಭದಲ್ಲಿ ಖ್ಯಾತ ನ್ಯಾಯವಾದಿಗಳಾದ ರವಿಕಿರಣ್ ಮುರ್ಡೇಶ್ವರ ಅವರನ್ನು ಸನ್ಮಾನಿಸಲಾಗುವುದು. ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು. ಈ ಕಾರ್ಯಕ್ರಮ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೇಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರಜ್ಯೋತಿ ಚಾರಿಟೆಬಲ್ ಟ್ರಸ್ಟ್ ಉಡುಪಿ ಸಹಯೋಗದಲ್ಲಿ…

Read More

ರಾಮಕ್ಷತ್ರಿಯ ಶ್ರೀ ಗಣೇಶೋತ್ಸವ ಸುವರ್ಣ ಸಂಭ್ರಮಕ್ಕೆ ಅದ್ದೂರಿ ತೆರೆ ಕುಂದಾಪುರ: ಇಲ್ಲಿನ ರಾಮಕ್ಷತ್ರಿಯ ಯುವಕ ಮಂಡಲದ ಶ್ರೀ ಗಣೇಶೋತ್ಸವ ಸುವರ್ಣ ಮಹೋತ್ಸವ ಸಮಾರಂಭ ಏಳು ದಿನಗಳು ಕಾಲ ವಿಜೃಂಭಣೆಯಿಂದ ಜರುಗಿ ವೈಭವಪೂರಿತ ಮೆರವಣಿಗೆಯೊಂದಿಗೆ ಸಮಾಪನಗೊಂಡಿತು. ಈ ಭಾರಿಯ ಸುವರ್ಣ ಮಹೋತ್ಸವಕ್ಕೆ ಒಂದು ವರ್ಷದಿಂದಲೇ ತಯಾರಿ ನಡೆಸಿದ್ದ ರಾಮಕ್ಷತ್ರಿಯ ಯುವಕ ಮಂಡಳಿ ವಿವಿಧ ಕಾರ್ಯಕ್ರಮಗಳು, ರಾಜ್ಯ ಮಟ್ಟದ ಕ್ರೀಡಾಕೂಟ ಮುಂತಾದವುಗಳ ಮೂಲಕ ಸಮಾಜ ಬಂಧುಗಳನ್ನು ಸಂಘಟಿಸಿತ್ತು. ಸೆ.18ರಂದು ಕುಂದಾಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಪುರಮೆರವಣಿಗೆಯಲ್ಲಿ ಗಣೇಶನ ವಿಗ್ರಹವನ್ನು ತಂದು ಪೂಜಾ ಪೀಠದಲ್ಲಿ ಪ್ರತಿಷ್ಠಾಪಿಸುವುದರಿಂದ ಮೊದಲ್ಗೊಂಡು ಪ್ರತಿನಿತ್ಯ ಗಣಹೋಮ, ಮಹಾಪೂಜೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತ್ತು. ಪ್ರತಿದಿನ ಸಂಜೆ ವಿವಿಧ ಸ್ವರ್ಧೆ, ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು ಸೆ.19ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಆಗಮಿಸಿ ಧಾರ್ಮಿಕ ಪ್ರವಚನ ನೀಡಿ ಆಶಿರ್ವದಿಸಿದರು. ಸೆ.23ರ ಸಂಜೆ ನಡೆದ ವೈಭವಪೂರಿತ ಪುರಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು. ಕುಂದಾಪುರ ಶ್ರೀ ಸೀತಾರಾಮಚಂದ್ರ…

Read More

ಬೈಂದೂರು ವಲಯ 35 ಶಾಲೆ. ಕುಂದಾಪುರ ವಲಯ 8 ಶಾಲೆ ಕುಂದಾಪುರ: ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕ್ಷೀಣಿಸುತ್ತಿದೆ ಎಂದು ಬೊಬ್ಬೆ ಹೊಡೆಯುವವರು ಹೊಡೆಯುತ್ತಲೇ ಇರುತ್ತಾರೆ. ಆದರೆ ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾತ್ರ ಇದು ತಮಗೆ ಸಂಬಂಧಿಸಿದ ವಿಷಯವೇ ಅಲ್ಲವೆಂದು ಸುಮ್ಮನಿರುತ್ತಾರೆ. ಅಧಿಕಾರಿಗಳ ಇಂತಹ ಜಡ ಧೋರಣೆ ಇಲಾಖೆಯ ಕಾರ್ಯವೈಖರಿಯನ್ನೇ ಪ್ರಶ್ನಿಸುವಂತೆ ಮಾಡುತ್ತದೆ. ಬೈಂದೂರು ಹಾಗೂ ಕುಂದಾಪುರ ವಲಯದ 41 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಹುದ್ದೆ ಸರಿಸುಮಾರು ಕಳೆದ ಶೈಕ್ಷಣಿಕ ವರ್ಷದಿಂದಲೇ ಖಾಲಿ ಬಿದ್ದಿದ್ದರೂ ಅವುಗಳನ್ನು ಭರ್ತಿಗೊಳಿಸುವ ಕೆಲಸ ಮಾತ್ರ ಈವರೆಗೆ ನಡೆದಿಲ್ಲ ಎಂಬುದು ಶಿಕ್ಷಣ ಇಲಾಖೆಯ ಆಮೆ ನಡಿಗೆಯನ್ನು ಸಾಕ್ಷೀಕರಿಸುವಂತಿದೆ. ಬೈಂದೂರು ವಲಯದ 35 ಶಾಲೆಗಳ ಪೈಕಿ 28 ಶಾಲೆಗಳಿಲ್ಲಿ ಮುಖ್ಯಶಿಕ್ಷಕರ ಹುದ್ದೆ ಖಾಲಿ ಇದ್ದು, 7 ಶಾಲೆಗಳ ಪೂರ್ಣಕಾಲಿಕಾ ಮುಖ್ಯ ಶಿಕ್ಷಕರ ಹುದ್ದೆಗೆ ಮಂಜೂರಾತಿ ಕೋರಿ ಉಪನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಕುಂದಾಪುರ ವಲಯಲ್ಲಿ 8 ಮುಖ್ಯ ಶಿಕ್ಷಕ ಹುದ್ದೆಯ ಪೈಕಿ 6 ಪೂರ್ಣಕಾಲಿಕ…

Read More