ಗ೦ಗೊಳ್ಳಿ: ನೆಹರು ಯುವ ಕೇ೦ದ್ರ ಉಡುಪಿ ಜಿಲ್ಲೆ,ಡಾ.ಬಿ.ಆರ್.ಅ೦ಬೇಡ್ಕರ್ ಯುವಕ ಮ೦ಡಲ(ರಿ) ಅಮೃತಾ ಯುವತಿ ಮ೦ಡಲ ಮತ್ತು ಅರ್ಚನಾ ಮಹಿಳಾ ಮ೦ಡಲ ಮೇಲ್ ಗ೦ಗೊಳ್ಳಿ ಇವುಗಳ ಸ೦ಯುಕ್ತ ಆಶ್ರಯದಲ್ಲಿ ಗ೦ಗೊಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಗ್ರಾಮ ಪ೦ಚಾಯತ್ ಸದಸ್ಯೆ ಚೆ೦ದು ಅಧ್ಯಕ್ಷತೆ ವಹಿಸಿದ್ದರು.ಮೇಲ್ ಗ೦ಗೊಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯರಾದ ರಮೇಶ ಮಹಲೆ ಶುಭ ಹಾರೈಸಿದರು. ಯುವಕ ಮ೦ಡಲದ ಸ್ಥಾಪಕಾಧ್ಯಕ್ಷರಾದ ಭಾಸ್ಕರ ಎಚ್ ಜಿ,.ಅ೦ಗನವಾಡಿ ಶಿಕ್ಷಕಿ ನಾಗವೇಣಿ.ಯುವಕ ಮ೦ಡಲದ ಉಪಾಧ್ಯಕ್ಷ ಕಿರಣ್, ಯುವತಿ ಮ೦ಡಲದ ಕಾರ‍್ಯದರ್ಶಿ ಸಹನಾ ಕೆ., ರಾಮ, ಯೋಗ ಪಟು ಸುದರ್ಶನ ಕೆ ಮೊದಲಾದವರು ಉಪಸ್ಥಿರಿದ್ದರು. ವರದಿ :ನರೇ೦ದ್ರ ಎಸ್ ಗ೦ಗೊಳ್ಳಿ
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪುರ: ಪ್ರತಿ ಮಗುವಿನ ಉಜ್ವಲ ಭವಿಷ್ಯದ ದೃಷ್ಠಿಯಲ್ಲಿ ವಿದ್ಯೆಯು ಬಹಳ ಮುಖ್ಯವಾಗಿದೆ ಆದುದರಿಂದ ರೋಟರಿ ಕ್ಲಬ್ ಮಿಡ್ ಟೌನ್ ವಿದ್ಯೆಯ ಹಸಿವನ್ನು ನೀಗಿಸುವ ಸಲುವಾಗಿ ಆಧುನಿಕ ಜಗತ್ತಿಗೆ ಪೂರಕವಾಗಿ ಸ್ಮಾರ್ಟ್ ಕ್ಲಾಸ್‌ನ್ನು ಕೊಡುಗೆಯಾಗಿ ನೀಡಿದೆ ಎಂದು ರೋಟರಿ ಕ್ಲಬ್ ಮಿಡ್‌ಟೌನ್ ಅಧ್ಯಕ್ಷ ಅಬ್ದುಲ್ ಬಶೀರ್ ಕೋಟ ಹೇಳಿದರು. ಅವರು ಜೂ.24ರಂದು ರೋಟರಿ ಕ್ಲಬ್ ಮಿಡ್‌ಟೌನ್ ವತಿಯಿಂದ ಕುಂದಾಪುರದ ಅಂಜುಮಾನ್ ಮುಸ್ಲಿಂ ಘೋಷ ಹಿರಿಯ ಪ್ರಾಥಮಿಕ ಶಾಲೆಗೆ ಕೊಡ ಮಾಡಲ್ಪಟ್ಟ ಇ-ಶಾಲೆ ಸ್ಮಾರ್ಟ್ ಕ್ಲಾಸನ್ನು ಕೊಡುಗೆಯಾಗಿ ನೀಡಿ ಮಾತನಾಡಿದರು. ರೋಟರಿ ಕ್ಲಬ್ ಮಿಡ್‌ಟೌನ್ ಅಧ್ಯಕ್ಷರಾಗಿ ಜನ ಸೇವೆ ಮಾಡಲು ಅವಕಾಶ ಒದಗಿದ್ದು, ಒಂದು ವರ್ಷದ ಅವಧಿಯಲ್ಲಿ ಅಗತ್ಯತೆಯಿರುವವರ ಹೊಟ್ಟೆಯ ಹಸಿವಿನಿಂದ ಹಿಡಿದು ವಿದ್ಯೆಯ ಹಸಿವನ್ನು ಇಂಗಿಸುವ ಅವಕಾಶವನ್ನು ಪೂರೈಸಿರುವ ಸೇವಾ ತೃಪ್ತಿ ತನಗಿದೆ ಎಂದು ಅಬ್ದುಲ್ ಬಶೀರ್ ಹೇಳಿದರು. ಇ-ಶಾಲೆ ಸ್ಮಾರ್ಟ್ ಕ್ಲಾಸನ್ನು ರೋಟರಿ ಅಸಿಸ್ಟೆಂಟ್ ಗವರ್ನರ್ ಮೊಳಹಳ್ಳಿ ಗಣೇಶ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು. ಕುಂದಾಪುರದ ಅಂಜುಮಾನ್ ಮುಸ್ಲಿಂ ಘೋಷ ಹಿರಿಯ ಪ್ರಾಥಮಿಕ…
ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಭವನ ಗೊಂಬೆಮನೆಯಲ್ಲಿ ಜೂನ್ ತಿಂಗಳ ಕಾರ್ಯಕ್ರಮವಾಗಿ ದಿ ರಾಮ ಮಯ್ಯ ಸಾಂಸ್ಕೃತಿಕ ಪ್ರತಿಷ್ಠಾನ, ಉಪ್ಪಿನಕುದ್ರು ಇದರ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಜರುಗಿತು. ತಿಂಗಳ ಅತಿಥಿಯಾಗಿ ಡಾ. ಎಂ.ವಿ.ಹೊಳ್ಳ, ಅಶ್ವಿನಿ ಕ್ಲಿನಿಕ್, ತಲ್ಲೂರು ಭಾಗವಹಿಸಿದ್ದರು. ದಿ ರಾಮ ಮಯ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಸೂರ್ಯನಾರಾಯಣ ಮಯ್ಯ ಹಾಗೂ 2014-15 ನೇ ಸಾಲಿನ ಪಿ.ಯು.ಸಿ ಕಲಾ ವಿಭಾಗದಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕುಮಾರಿ ಮಹಾಲಕ್ಷ್ಮಿ, ಉಪ್ಪಿನಕುದ್ರು ಇವರನ್ನು ಗೊಂಬೆಯಾಟ ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್, ವೇ|ಮೂ| ಚಂದ್ರಶೇಖರ ಅಡಿಗ, ವೇ|ಮೂ| ಮಂಜುನಾಥ ಐತಾಳ್, ವೆಂಕಟರಮಣ ಹೊಳ್ಳ, ಬಿ. ನಾಗೇಶ್ ಸೇರುಗಾರ್, ನಿತ್ಯಾನಂದ ಹೆಬ್ಬಾರ್ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ಬಳಿಕ ಹೆರಂಜಾಲು ಗೋಪಾಲ ಗಾಣಿಗ, ಪರಮೇಶ್ವರ ನಾಯಕ್ ಹಾಗೂ ನಿತ್ಯಾನಂದ ಹೆಬ್ಬಾರ್ ಇವರಿಂದ ಯಕ್ಷಗಾನ ಗಾನ ವೈಭವ ನಡೆಯಿತು. ನಾಗೇಶ್ ಶ್ಯಾನುಭಾಗ್ ಮತ್ತು ವಿಠ್ಠಲ್…
ಕುಂದಾಪುರ: ಉತ್ತಮ ವ್ಯಕ್ತಿತ್ವದ ನಿರ್ಮಾಣ ಶಿಕ್ಷಣದಿಂದ ಸಾಧ್ಯ. ಉನ್ನತ ಶಿಕ್ಷಣವನ್ನು ಪಡೆಯುತ್ತಾ ಹೋದಂತೆ ಸಾಮಾಜಿಕ ಗೌರವ, ಉಜ್ವಲ ಭವಿಷ್ಯವನ್ನು ಹೊಂದಲು ಸಾಧ್ಯವಾಗುತ್ತದೆ. ಕರ್ನಾಟಕ ಶೈಕ್ಷಣಿಕವಾಗಿ ಅಪ್ರತಿಮ ಪ್ರಗತಿಯನ್ನು ಸಾಧಿಸುತ್ತಿರುವುದಕ್ಕೆ ಇಂದಿನ ಮಕ್ಕಳು ಪಡೆಯುತ್ತಿರುವ ಅಂಕಗಳೇ ಸಾಕ್ಷಿ ಗುಣಮಟ್ಟದ ಶಿಕ್ಷಣವನ್ನು ಪಡೆದು ದೇಶದ ಅಭ್ಯುದಯಕ್ಕೆ ಶ್ರಮಿಸಿ ಎಂದು ಕುಂದಾಪುರ ತಹಶೀಲ್ದಾರ್ ಗಾಯತ್ರಿ ನಾಯಕ್ ಹೇಳಿದರು. ಅವರು ಇತ್ತೀಚೆಗೆ ರೋಟರಿ ಕ್ಲಬ್ ಕುಂದಾಪುರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು. ಎಸ್.ಎಸ್.ಎಲ್.ಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ಮೇಘನಾ ಎಂ, ನಿಶಾ ಕಾಮತ್, ಅನಿರುದ್ದ ಮಯ್ಯ, ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ಸೌಂದರ್ಯ ಉಪಧ್ಯಾಯ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. ರೋಟರಿ ಅಸಿಸ್ಟೆಂಟ್ ಗವರ್ನರ್ ಮೊಳಹಳ್ಳಿ ಗಣೇಶ ಶೆಟ್ಟಿ, ವಲಯ ಸೇನಾನಿ ಕೆ. ಕೆ. ಕಾಂಚನ್ ಶುಭಹಾರೈಸಿದರು. ರೋಟರಿ ಕ್ಲಬ್ ಕುಂದಾಪುರದ ಅದ್ಯಕ್ಷ ಮನೋಜ್ ನಾಯರ್ ಸ್ವಾಗತಿಸಿ, ಅಧ್ತಕ್ಷತೆವಹಿಸಿದ್ದರು. ನಿವೃತ್ತ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಎಚ್.ಎಸ್. ಹತ್ವಾರ್, ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ…
ಕುಂದಾಪುರ: ರೋಟರಿ ಕ್ಲಬ್ ಮಿಡ್‌ಟೌನ್ ಕುಂದಾಪುರ ಇದರ 2015-16ನೇ ಸಾಲಿನ ಅಧ್ಯಕ್ಷರಾಗಿ ಉದ್ಯಮಿ ಮಹೇಶ್ ಬೆಟ್ಟಿನ್ ಆಯ್ಕೆಯಾಗಿದ್ದಾರೆ. ಕೋಟೇಶ್ವರದಲ್ಲಿ ವಿಘ್ನೇಶ್ವರ ಪ್ಲಾಸ್ಟಿಕ್ ಇಂಡಸ್ಟ್ರೀಸ್‌ನ ಉದ್ಯಮವನ್ನು ನಡೆಸುತ್ತಿರುವ ಇವರು ಕುಂದಾಪುರದ ರೋಯಲ್ ಕ್ಲಬ್‌ನ ಅಧ್ಯಕ್ಷರಾಗಿ ಹಾಗೂ ಜೇಸಿಐ ಕುಂದಾಪುರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದು, ಕುಂದಾಪುರದ ರಾಮಕ್ಷತ್ರಿಯ ಯುವಕ ಮಂಡಲದ ಸಂಘಟನಾ ಕಾರ್ಯದರ್ಶಿ ಸೇರಿದಂತೆ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪದಾಧಿಕಾರಿಗಳಾಗಿ ರವೀಶ್‌ಚಂದ್ರ ಶೆಟ್ಟಿ(ಕಾರ್ಯದರ್ಶಿ), ರಘುರಾಮ ಶೆಟ್ಟಿ ಹೆಚ್. (ಖಜಾಂಚಿ), ಶಿವರಾಮ್ ಶೆಟ್ಟಿ (ಮೆಂಬರ್ ಶಿಫ್ ಡೆವಲಪ್‌ಮೆಂಟ್ ಸಮಿತಿ ಸಂಚಾಲಕ), ರವಿಶಂಕರ್ (ಕ್ಲಬ್ ಸರ್ವಿಸ್), ನಿತ್ಯಾನಂದ ಶೆಟ್ಟಿ (ಒಕೇಶನಲ್ ಸರ್ವಿಸ್), ಮಧುಕರ್ ಹೆಗ್ಡೆ (ಕಮ್ಯೂನಿಟ್ ಸರ್ವಿಸ್), ವೈ.ಸೀತಾರಾಂ ಶೆಟ್ಟಿ (ಇಂಟರ್ ನ್ಯಾಷನಲ್ ಸರ್ವಿಸ್), ಗೌತಮ್ ಹೆಗ್ಡೆ (ರೋಟರಿ ಫೌಂಡೇಶನ್), ಡಾ. ಪ್ರಸಾದ್ ಶೆಟ್ಟಿ (ಪೋಲಿಯೋ ಪ್ಲಸ್), ಶಂಕರ್ ಶೆಟ್ಟಿ (ಲಿಟರಸಿ ಚಯರ್‌ಮೆನ್), ವೈ.ಜಯಪ್ರಕಾಶ್ ಶೆಟ್ಟಿ (ಸ್ಫೋರ್ಟ್ಸ್ ಹಾಗೂ ಸಾಂಸ್ಕೃತಿಕ), ಸುಧಾಕರ ಶೆಟ್ಟಿ (ಸಿಂಧೂರ ಪತ್ರಿಕೆ ಸಂಪಾದಕ), ರಾಮ ನಾಯ್ಕ್ (ಫೆಲೋಶಿಪ್…
ಹೆಮ್ಮಾಡಿ: ಇಲ್ಲಿನ ಶ್ರೀ ವಿ.ವಿ.ವಿ.ಮಂಡಳಿ ಆಡಳಿತಕ್ಕೊಳಪಟ್ಟ ಜನತಾ ಪ್ರೌಢಶಾಲೆ ಹೆಮ್ಮಾಡಿ ಇದರ ವಿದ್ಯಾರ್ಥಿ ಸರ್ಕಾರವನ್ನು ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ಉದ್ಘಾಟಿಸಿದರು. ಪ್ರಜಾಪ್ರಭುತ್ವದ ಮಾದರಿಯ ಶಾಲಾ ಸರ್ಕಾರವು ಶಾಲಾ ಹಂತದಲ್ಲಿ ರಾಜಕೀಯ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಡಲ್ಲಿ ಭವಿಷ್ಯದಲ್ಲಿ ಉತ್ತಮ ರಾಜಕಾರಣದ ತಳಹದಿಯಾಗುತ್ತದೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಬಿ.ಮೋಹನದಾಸ್ ಶೆಟ್ಟಿ ವಿದ್ಯಾರ್ಥಿ ಸರ್ಕಾರದ ಪದಾಧಿಕಾರಿಗಳಿಗೆ ಪ್ರಮಾಣ ವಚನವನ್ನು ಭೋದಿಸಿದರು. ಆಡಳಿತ ಪಕ್ಷ ಮತ್ತು ವಿರೋದ ಪಕ್ಷದವರು ಪ್ರಾಮಾಣಿಕ ಸೇವೆಯಿಂದ ಉತ್ತಮ ಪ್ರಜಾಪ್ರಭುತ್ವಕ್ಕೆ ಸರ್ಕಾರ ನಿರ್ಮಿಸಲು ಸಾದ್ಯ ಎಂದರು. ಸಭೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕದೆವೇಂದ್ರ ನಾಯಕ್, ಶ್ರೀಮತಿ ಪ್ರವಿತ, ಶಾಲೆಯ ಹಿರಿಯ ಶಿಕ್ಷಕರಾದ ದಿನಕರ್ ಎಸ್ ಅವರು ಸ್ವಾಗತಿಸಿದರು. ವಿವಿಧ ಸಂಘಗಳ ಪರಿಚಯವನ್ನು ಶಿಕ್ಷಕರಾದ ನಾರಾಯಣ ಸ್ವಾಮಿ ವಾಚಿಸಿದರು, ಮಂತ್ರಿ ಮಂಡಲ ಪಟ್ಟಿಯನ್ನು ವಿಠಲ್ ನಾಯ್ಕ ವಾಚಿಸಿದರು. ಕನ್ನಡ ಭಾಷಾ ಶಿಕ್ಷಕರಾದ ಜಗದೀಶ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕ ಅಶೋಕ ಶೆಟ್ಟಿ ವಂದಿಸಿದರು.
ಕುಂದಾಪುರ: ಭಾರತ ಸರಕಾರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಾಯ, ನೆಹರೂ ಯುವಕೇಂದ್ರ ಉಡುಪಿ, ಜೆಸಿಐ ಕುಂದಾಪುರ ಸಿಟಿ, ಮಹಾವಿಷ್ಣು ಯುವಕ ಮಂಡಲ ಹಾಗೂ ಮೆಟ್ರಿಕ್ ಪೂರ್ವಾ ಬಾಲಕರ ವಿದ್ಯಾರ್ಥಿನಿಲಯದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗ ಶಿಬಿರದ ಮಾಹಿತಿ ನೆಡೆಯಿತು. ಯೋಗ ಆರೋಗ್ಯಕ್ಕೆ ಉತ್ತಮವೆಂದು ಕುಂದಾಪುರದ ಉದ್ಯಮಿ ಕೆ.ಆರ್.ನಾಯ್ಕ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷರಾದ ಚಂದ್ರಕಾಂತ್ ಅವರು ವಹಿಸಿ ಶುಭಹಾರೈಸಿದರು. ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ರಾಘವೇಂದ್ರ ನಾವುಡ ಇವರು ಶಿಬಿರದಲ್ಲಿ ಭಾಗವಹಿಸದ ಶಿಬಿರಾರ್ಥಿಗಳಿಗೆ ಯೋಗದ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ನರಸಿಂಹ ಗಾಣಿಗ ಹರೆಗೋಡು, ವಸತಿ ನಿಲಯದ ಮಲ್ವೀಚಾರಕರಾದ ಮಂಜುನಾಥ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಪೇಕ್ಷ ವಂದಿಸಿರು. ಸಚಿನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪುರ: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಕುಂದಾಪುರದ ಪ್ರಥಮ ವಿಶ್ವಯೋಗ ದಿನಾಚರಣೆ ಸಮಿತಿ ಆಶ್ರಯದಲ್ಲಿ ಜೂನ್ ೨೧ ರಂದು ಕುಂದಾಪುರದ ಸರಕಾರಿ ಪ.ಪೂ. ಕಾಲೇಜಿನಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಿಗ್ಗೆ ೬.೪೫ಕ್ಕೆ ಸುಮಾರು ೫೦೦ ರಷ್ಟು ಮಂದಿ ಯೋಗಾಭ್ಯಾಸದಲ್ಲಿ ಪಾಲ್ಗೊಂಡರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಸಾಮೂಹಿಕ ಪ್ರಾರ್ಥನೆಯೊಂದಿಗೆ, ಸೂರ್ಯ ನಮಸ್ಕಾರ, ಯೋಗಾಸನ, ಪ್ರಾಣಯಾಮವನ್ನು ಮಾಡಲಾಯಿತು. ಕುಂದಾಪುರದ ಕಾರ್ತಿಕ್ ಸ್ಕ್ಯಾನಿಂಗ್ ಸೆಂಟರ್‌ನ ಮಾಲಕ ಡಾ|| ಬಿ.ವಿ. ಉಡುಪ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದ್ಯಮಿ ಕೆ.ಕೆ. ಕಾಂಚನ್ ಕಾರ್ಯಕ್ರಮ ನಿರ್ವಹಿಸಿ, ಯೋಗ ಬಂಧು ರಘವೀರ ನಗರ್‌ಕರ್ ಯೋಗದ ಮಹತ್ವ ತಿಳಿಸಿ ವಂದಿಸಿದರು. ಯೋಗ ಶಿಕ್ಷಕರಾದ ಅಣ್ಣಪ್ಪ ಕೋಟೇಶ್ವರ ಅವರು ಸರಳವಾಗಿ ಯೋಗಾಭ್ಯಾಸವನ್ನು ಮಾಡಿಸಿದರು. ಯೋಗ ಶಿಕ್ಷಕಿ ಶಶಿಕಲಾ ಅವರು ಪ್ರಾರ್ಥನೆ, ಧ್ಯಾನ ಸಂಕಲ್ಪ ಮತ್ತು ಶಾಂತಿಮಂತ್ರವನ್ನು ಕಲಿಸಿದರು. ಹಾಲ್‌ನಲ್ಲಿ ಸಂಖ್ಯೆ ಹೆಚ್ಚುತ್ತಾ ಹೋದ ಹಿನ್ನಲೆಯಲ್ಲಿ ೬೦ ಮಂದಿಗೆ ಕುಂದಾಪುರದ ಬಿ.ಆರ್.ರಾಯರ ಹಿಂದೂ…
ಕುಂದಾಪುರ: ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಉಡುಪಿ ಜಿಲ್ಲಾ ಘಟಕ ನೀಡುವ ಪತ್ರಿಕಾ ದಿನದ ಗೌರವಕ್ಕೆ ಹಿರಿಯ ಪತ್ರಕರ್ತ, ಸಂಗೀತ ತಜ್ಞ, ಸಿನಿಮಾ ನಿರ್ದೇಶಕ ನಾದವೈಭವಂ ವಾಸುದೇವ ಭಟ್ ಅವರು ಆಯ್ಕೆಯಾಗಿದ್ದಾರೆ. “ಹಿರಿಯರೆಡೆಗೆ ನಮ್ಮ ನಡಿಗೆ” ಧ್ಯೇಯವಾಕ್ಯದೊಂದಿಗೆ ಕಳೆದ ಏಳುವರ್ಷಗಳಿಂದ ಹಿರಿಯ ಪತ್ರಕರ್ತರ ನಿವಾಸಗಳಲ್ಲಿ ಪತ್ರಿಕಾ ದಿನಾಚರಣೆಯನ್ನು ವೇದಿಕೆ ನಡೆಸುತ್ತಾ ಬಂದಿದ್ದು ಪತ್ರಿಕಾ ದಿನದ ಮುನ್ನಾ ದಿನ ಇಂದ್ರಾಳಿಯ ಪತ್ರಕರ್ತರ ಕಾಲೋನಿಯ “ಈಶವಾಸ್ಯಂ”ನಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಬೆಳಗ್ಗೆ ಕಾರ್ಯಕ್ರಮ ನಡೆಯಲಿದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ತಿಳಿಸಿದ್ದಾರೆ. ಈ ಹಿಂದೆ ಅಂಬಾತನಯ ಮುದ್ರಾಡಿ, ವಿದ್ವಾನ್ ಬಿ.ಚಂದ್ರಯ್ಯ, ಉಮೇಶ್ ರಾವ್ ಎಕ್ಕಾರ್, ಎಂ.ವಿ.ಕಾಮತ್, ಎ.ಎಸ್.ಎನ್ ಹೆಬ್ಬಾರ್, ರಾಘವ ನಂಬಿಯಾರ್ ಮೊದಲಾದವರ ನಿವಾಸಗಳಲ್ಲಿ ಈ ಹಿಂದೆ ಈ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪತ್ರಕರ್ತರಾಗಿ ವಾಸುದೇವ ಭಟ್ ಉಡುಪಿ ವಾಸುದೇವ ಭಟ್ ಅವರು ತಮ್ಮ ತಂದೆ ಪತ್ರಕರ್ತರಾಗಿದ್ದ ಯು.ಎಸ್ ಭಟ್ ಅವರಿಂದ ಪ್ರಭಾವಿತರಾಗಿ ಅವರನ್ನೇ ಗುರುಗಳೆಂದು ಸ್ವೀಕರಿಸಿ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿದ್ದರು. 1961 ರಲ್ಲಿ…
ಕುಂದಾಪುರ: ಯು.ಎ.ಇ. ಪದ್ಮಶಾಲಿ ಸಮುದಾಯದ 6ನೇ ವಾರ್ಷಿಕೋತ್ಸವದ ಪ್ರಯುಕ್ತ ದುಬೈನ ಸಿಂಧಿ ಕಮರ್ಶಲ್ ಸೆಂಟರ್‌ನ ಹಾಲ್‌ನಲ್ಲಿ ನಡೆಯಲಿರುವ ಸಾಮೂಹಿಕ ಸತ್ಯನಾರಾಯಣ ಪೂಜೆಯ ಪೌರೋಹಿತ್ಯಕ್ಕಾಗಿ ಜ್ಯೋತಿಷಿ ಹಾಗೂ ವಾಸ್ತುತಜ್ಞ ಬಸವರಾಜ್ ಶೆಟ್ಟಿಗಾರ್ ವಿದೇಶಕ್ಕೆ ತೆರಳಲಿದ್ದಾರೆ. ವಾಸ್ತುಶಾಸ್ತ್ರ, ಜ್ಯೋತಿಷ್ಯ, ಯಕ್ಷಗಾನ, ಸಾಹಿತ್ಯ, ಸಮಾಜ ಸಂಘಟನೆ, ಕೃಷಿ ಕ್ಷೇತ್ರ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಾಗಿ ಶೆಟ್ಟಿಗಾರರಿಗೆ 215ನೇ ಸನ್ಮಾನ ಮಾಡಿ ಗೌರವಿಸಲಾಗುವುದೆಂದು ಯು.ಎ.ಇ. ಪದ್ಮಶಾಲಿ ಕಮ್ಯೂನಿಟಿಯ ಅಧ್ಯಕ್ಷರು ತಿಳಿಸಿದ್ದಾರೆ. ಅಲ್ಲದೇ ವಿದೇಶದಲ್ಲಿ ಸರಳವಾಸ್ತು ಆಧುನಿಕ ಜ್ಯೋತಿಷ್ಯದ ಕುರಿತು ಮಾಹಿತಿ ನೀಡಲಿರುವ ಬಸವರಾಜ್ ಶೆಟ್ಟಿಗಾರ್‌ರವರು ಕೋಟೇಶ್ವರದ ಕಛೇರಿಯಲ್ಲಿ ಹಾಗೂ ಹಂಗಳೂರು ಶನೀಶ್ವರ ದೇವಸ್ಥಾನದಲ್ಲಿ ಜುಲೈ 1ರಿಂದ 15ರ ವರೆಗೆ ಲಭ್ಯವಿರುವುದಿಲ್ಲವೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
