Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಕುಂದಾಪ್ರ ಡಾಟ್ ಕಾಂ ಸುದ್ದಿ ಇಂದು ಆಸ್ಟ್ರೇಲಿಯಾದಲ್ಲಿ ನಡೆದ ಅಂತರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಸ್ವರ್ಧೆಯಲ್ಲಿ ಮುಂಬೈ ದೇವಾಡಿಗ ಸಂಘದ ಮಹಿಳಾ ವಿಭಾಗ ಕಾರ್ಯದರ್ಶಿ ಜಯಂತಿ ಎಂ. ದೇವಾಡಿಗ ಲಾಂಗ್ ಜಂಪ್ ವಿಭಾಗದಲ್ಲಿ ತೃತೀಯ ಬಹುಮಾನ ಗಳಿಸಿದ್ದಾರೆ. ಜಯಂತಿ ಮೂಲತಃ ದಕ್ಷಿಣಕನ್ನಡ ಜಿಲ್ಲೆಯ ಶಿಬರೂರಿನವರು. ಅವರು ಇತ್ತಿಚಿಗೆ ಮುಂಬೈ ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ಜರುಗಿದ ಮೊದಲ ರಾಷ್ಟ್ರೀಯ ಮರ್ಕೆಂಟೈಲ್-ಕಾರ್ಪೊರೇಟ್ ಮಾಸ್ಟರ್ಸ್ ಟ್ರಾಕ್ ಮತ್ತು ಫಿಲ್ಡ್ -2015 ಇದರಲ್ಲಿ ಮೂರು ಚಿನ್ನದ ಪದಕ ಹಾಗೂ 2 ಬೆಳ್ಳಿಯ ಪದಕಗಳನ್ನು ಗಳಿಸಿ, ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದ ಪ್ರೇಮಾ ಅವರೊಂದಿಗೆ ಚಾಂಪಿಯನ್ ಶಿಪ್ ಹಂಚಿಕೊಂಡಿದ್ದರು. ಹಲವು ಅಲ್ಲದೇ ಅಂತರಾಜ್ಯ ಕ್ರೀಡಾಕೂಟಗಳಲ್ಲೂ ಭಾಗವಹಿಸಿ ಪದಕ ಗಳಿಸಿದ್ದರು. ಮುಂಬೈನಲ್ಲಿಯೇ ವಾಸವಿರುವ ಮಾಧವ ದೇವಾಡಿಗ ಅವರ ಪತ್ನಿಯಾದ ಜಯಂತಿ ದೇವಾಡಿಗ ಅವರಿಗೆ ಮೂವರು ಮಕ್ಕಳಿದ್ದಾರೆ. ಜಯಂತಿ ಅವರ ಕ್ರೀಡಾಕ್ಷೇತ್ರದಲ್ಲಿ ಈ ಸಾಧನೆಯನ್ನು ಅವರ ಬಂಧುಗಳು, ಸಮಾಜದ ಗಣ್ಯರು, ಅಭಿಮಾನಿಗಳು ಅಭಿನಂದಿಸಿದ್ದಾರೆ. ವರದಿ: ಚರಣ್ ಬೈಂದೂರು

Read More

ಕೋಟ: ಇಲ್ಲಿನ ಡಾ. ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಸಂಭ್ರಮದಲ್ಲಿರುವ ಕೋಟ ಕಾರಂತ ಥೀಂ ಪಾರ್ಕಗೆ ಕಡೂರು ಶಾಸಕ, ಜೆಡಿಎಸ್ ಧುರೀಣ ವೈ.ಎಸ್.ವಿ.ದತ್ತ ಭೇಟಿ ನೀಡಿದರು.. ಕಾರಂತರ ಹುಟ್ಟೂರಿನಲ್ಲಿ ನಿರ್ಮಾಣವಾಗಿ ಸಾಂಸ್ಕೃತಿಕ ಸಾಹಿತ್ಯಿಕ ಸಿಂಚನವನ್ನು ನೀಡುತ್ತಿರುವ ಥೀಂ ಪಾರ್ಕನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಶ್ರೀಯುತರನ್ನು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ. ಕುಂದರ್, ಥೀಂ ಪಾರ್ಕಗೆ ಬರಮಾಡಿಕೊಂಡ ಶಾಲು ಹೊದಿಸಿ ಸನ್ಮಾನಸಿ ಗೌರವಿಸಿದರು. ಈ ಸಂದರ್ಭ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೋಟತಟ್ಟು ಪಂಚಾಯಿತಿ ಉಪಾಧ್ಯಕ್ಷ ಲೋಕೇಶ್ ಶೆಟ್ಟಿ, ಸದಸ್ಯರಾದ ಜಯಪ್ರಕಾಶ್, ಪ್ರತಿಷ್ಠಾನದ ಸುಬ್ರಾಯ ಆಚಾರ್ಯ, ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ರಾಜೇಶ್ ಕಾವೇರಿ, ಪ್ರತಿಷ್ಢಾನದ ಕಾರ್ಯದರ್ಶಿ ಶಿಕ್ಷಕ ಸಾಹಿತಿ ನರೇಂದ್ರ ಕುಮಾರ್ ಕೋಟ, ಕೋಟ ಪಂಚಾಯಿತಿ ಸದಸ್ಯ ಸಂತೋಷ ಪ್ರಭು ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪುರ: ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರು ಪ್ರಜ್ಞಾವಂತರಾಗಿ ಕಾರ್ಯವೆಸಗಿದರೆ ಉತ್ತಮ ನಾಯಕರನ್ನು ಆರಿಸಲು ಸಾಧ್ಯವಿದೆ. ವ್ಯವಸ್ಥೆ ಸಂಪೂರ್ಣವಾಗಿ ಆರೋಗ್ಯಕರವಾಗಬೇಕಾದಲ್ಲಿ ರಾಜಕಾರಣಿಗಳ ಜೊತೆಗೆ ಮತದಾರರ ಕೊಡುಗೆ ಕೂಡ ಅಮೂಲ್ಯವಾದದು ಎಂದು ಕಡೂರು ಶಾಸಕ ಜೆಡಿಎಸ್ ಧುರೀಣ ವೈ.ಎಸ್.ವಿ.ದತ್ತ ಹೇಳಿದರು. ಅವರು ಗುಂಡ್ಮಿಯ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಬಹುಮಖಿ ಸಾಲಿಗ್ರಾಮ ಸಂಸ್ಥೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಂಸದೀಯ ಪ್ರಜಾಪ್ರಭುತ್ವ ಮತ್ತು ವರ್ತಮಾನ ಪ್ರಸ್ತುತತೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ, ಗಾಂಧಿ ಯುಗ ಅಂತ್ಯವಾಗಿದೆ ಪ್ರಾಮಾಣಿಕವಾಗಿ ರಾಜಕೀಯದಲ್ಲಿರುವ ನಾವು ನೀವು ವಾನಪ್ರಸ್ಥಾಶ್ರಮಕ್ಕೆ ತೆರಳುವ ಸಂದರ್ಭ ಬಂದಿದೆ. ಆದರೆ ನಿರಾಶೆಯಲ್ಲಿಯೂ ಕ್ರಿಯಾಶೀಲತೆಯನ್ನು ನಂಬಿ ಬಂದಿರುವ ನಾನು ವ್ಯವಸ್ಥೆಯ ಬದಲಾವಣೆಯ ಬಗ್ಗೆ ಇನ್ನೂ ಆಶಾವಾದಿಯಾಗಿ ಎದುರು ನೋಡುತ್ತಿದ್ದೇನೆ. ೧೨೧೫ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ದಿನ ಇಂಗ್ಲೇಂಡ್‌ನ ರಾಜ ಜಾನ್‌ನ ಆಡಳಿತ ವ್ಯವಸ್ಥೆ ವಿರುದ್ಧ ಜನಾದೋಲನವಾಗಿ ಮ್ಯಾಗ್ನಾ ಕಾರ್ಟಾ ನೀಡಿದಾಗ, ಆಡಳಿತ ವ್ಯವಸ್ಥೆ ಜನ ಶಕ್ತಿಯ ಮನವಿಗೆ ಬಾಗಿದ ದಿನವಾಗಿದೆ. ಆದರೆ ಇಂದು ಅಂತಹ…

Read More

ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ವತಿಯಿಂದ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಅ. ೦೨ರಂದು ಶಾಸ್ತ್ರಿ ಸರ್ಕಲ್‌ನಲ್ಲಿರುವ ಶಾಸ್ತ್ರಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಸದಸ್ಯರಾದ ಟಿ. ಬಿ. ಶೆಟ್ಟಿ, ವಿ. ಶ್ರೀಧರ ಆಚಾರ್ಯ, ಉದಯಕುಮಾರ್ ಶೆಟ್ಟಿ, ಮನೋಜ್ ನಾಯರ್, ಮುತ್ತಯ್ಯ ಶೆಟ್ಟಿ, ಡಾ| ಬಿ. ಆರ್. ಶೆಟ್ಟಿ, ನೂಜಾಡಿ ಸಂತೋಷ ಕುಮಾರ್ ಶೆಟ್ಟಿ, ಪ್ರದೀಪ ವಾಜ್, ಎಚ್. ಎಸ್. ಹತ್ವಾರ್, ವೆಂಕಟಾಚಲ ಕನ್ನಂತ, ರಂಜಿತ್ ಶೆಟ್ಟಿ, ಆನ್ಸ್ ಕ್ಲಬ್ ಅಧ್ಯಕ್ಷೆ ಭಾರತಿ ಪ್ರಕಾಶ್ ಶೆಟ್ಟಿ, ಗೀತಾ ಟಿ. ಬಿ. ಶೆಟ್ಟಿ, ಸಾವಿತ್ರಿ ಕನ್ನಂತ, ವಿದ್ಯಾ ಬಿ. ಆರ್. ಶೆಟ್ಟಿ, ಕಾರ್ಯದರ್ಶಿ ಸಂತೋಷ ಕೋಣಿ ಇನ್ನಿತರರು ಉಪಸ್ಥಿತರಿದ್ದರು.

Read More

ಗಂಗೊಳ್ಳಿ: ಗಾಂಧೀಜಿ ಮತ್ತು ಶಾಸ್ತ್ರೀಜಿಯವರು ಪ್ರತಿಪಾದಿಸಿದ ಮೌಲ್ಯಗಳು ನಮಗೆ ಮುಖ್ಯವಾಗಬೇಕು. ಅವುಗಳ ಅರಿಯುವಿಕೆಗಿಂತ ಆಳವಡಿಕೆ ಪ್ರಮುಖವಾಗಬೇಕು.ಈ ನಿಟ್ಟಿನಲ್ಲಿ ಬೇರೆಯವರನ್ನು ಪ್ರೋತ್ಸಾಹಿಸಬೇಕು ಎಂದು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಆರ್ ಎನ್ ರೇವಣ್ ಕರ್ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಸಮೂಹ ಸಂಸ್ಥೆಗಳು ಮತ್ತು ರಾಷ್ಟ್ರೀಯ ಸೇವಾ ಯೋಜನೆಯವತಿಯಿಂದ ಇಲ್ಲಿನ ರೋಟರಿ ಸಭಾಂಗಣದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು. ಕಾರ‍್ಯಕ್ರಮದಲ್ಲಿ ದೀಪ ಬೆಳಗಿಸಿ, ಮಹಾತ್ಮರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ನುಡಿನಮನ ಸಲ್ಲಿಸಲಾಯಿತು.ಉಪನ್ಯಾಸಕಿ ಕವಿತಾ ಎಮ್ ಸಿ,ಸರಸ್ವತಿ ವಿದ್ಯಾಲಯ ಫ್ರೌಢಶಾಲೆಯ ಉಪಪ್ರಾಂಶುಪಾಲ ವಾಮನದಾಸ ಭಟ್,ಸರಸ್ವತಿ ವಿದ್ಯಾಲಯ ಆಂಗ್ಲ ಮಾದ್ಯಮ ಫ್ರೌಢಶಾಲೆಯ ಮುಖ್ಯೋಪಧ್ಯಾಯ ರಾಘವೇಂದ್ರ ಸೇರುಗಾರ್ ,ದೈಹಿಕ ಶಿಕ್ಷಕ ಸದಾನಂದ ವೈದ್ಯ.ಎನ್‌ಸಿಸಿ ಕಾರ‍್ಯಕ್ರಮ ನಿರ್ವಹಣಾಧಿಕಾರಿ ಆದಿನಾಥ ಕಿಣಿ, ಕಛೇರಿ ಪ್ರಬಂಧಕ ಜಿ. ಸದಾಶಿವ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ಅಧ್ಯಾಪಕಿ ಶ್ರೀಲತಾ ಅವರು ಸ್ವಾಗತಿಸಿದರು. ರಾಷ್ಟ್ರೀಯ ಸೇವಾ…

Read More

ಕುಂದಾಪುರ: ತಾಲೂಕಿನ ಸಿದ್ದಾಪುರದಲ್ಲಿ ಅಂಗಡಿಯೊಂದು ಬೆಂಕಿಗೆ ಆಹುತಿಯಾಗಿದ್ದು ಸುಮಾರು ಒಂದು ಕೋಟಿಗೂ ಮಿಕ್ಕಿ ನಷ್ಟ ಸಂಭವಿಸಿದೆ. ಸಿದ್ದಾಪುರದ ‘ಕಾಮತ್ ಜನರಲ್ ಸ್ಟೋರ್’ ಬೆಂಕಿಗೆ ಆಹುತಿಯಾದ ಅಂಗಡಿಯಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಅಂಗಡಿಯನ್ನು ಆವರಿಸಿದೆ ಎಂದು ಶಂಕಿಸಲಾಗಿದೆ. ಸಿದ್ದಾಪುರ ಪೇಟೆಯಲ್ಲಿರುವ ಈ ಅಂಗಡಿಯಲ್ಲಿ ದಿನಬಳಕೆಯ ವಸ್ತುಗಳಲ್ಲದೆ, ಹಲವಾರು ಗೃಹೋಪಯೋಗಿ ವಸ್ತುಗಳನ್ನು ಮಾರಾಟಕ್ಕೆ ಇಡಲಾಗುತ್ತಿತ್ತು. ಶುಕ್ರವಾರ ರಾತ್ರಿ 11.30 ರ ವೇಳೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು ಕ್ಷಣಾರ್ಧದಲ್ಲಿ ಬೆಂಕಿ ಕೆನ್ನಾಲಗೆ ಅಂಗಡಿಯನ್ನು ಸಂಪೂರ್ಣ ಭಸ್ಮ ಮಾಡಿದೆ. ರವೀಂದ್ರನಾಥ್ ಕಾಮತ್ ಒಡೆತನದ ಈ ಅಂಗಡಿ ಇರುವ ಕಟ್ಟಡಕ್ಕೂ ಹಾನಿಯಾಗಿದೆ. ಸ್ಥಳಕ್ಕಾಗಮಿಸಿದ ಕುಂದಾಪುರ ಅಗ್ನಿಶಾಮಕ ದಳದವರು ಬೆಂಕಿಯನ್ನು ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಶಂಕರನಾರಾಯಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಕುಂದಾಪುರ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೋಟ ಶಿವರಾಮ ಕಾರಂತದ ಹುಟ್ಟೂರಲ್ಲಿ ಅವರ ನೆನಪಿಗಾಗಿ ನಿರ್ಮಾಣಗೊಂಡಿರುವ ಸ್ಮಾರಕ ಭವನ ನಿಜಾರ್ಥದಲ್ಲಿ ಸಾರ್ಥಕ್ಯವನ್ನು ಕಾಣುತ್ತಿದೆ. ಪ್ರತಿ ವಾರವೂ ಭವನದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಸುವ ಮೂಲಕ ಉಡುಪಿ ಜಿಲ್ಲೆಯಲ್ಲಿಯೇ ವಿಭಿನ್ನವಾಗಿ ಗುರುತಿಸಿಕೊಂಡಿರುವ ಕಾರಂತ ಭವವೀಗ (ಕಾರಂತ ಥೀಂ ಪಾರ್ಕ) ಸಾಂಸ್ಕೃತಿಕ ಕೇಂದ್ರವಾಗಿ ಮಾರ್ಪಟ್ಟಿದೆ. ಇದರೊಂದಿಗೆ ಅಕ್ಟೋಬರ್ 1ರಿಂದ ಅಕ್ಟೋಬರ್ 10ರ ವರೆಗೆ ನಡೆಯುತ್ತಿರುವ ವಿವಿಧ ವಿಚಾರಗಳ ‘ಚಿತ್ತಾರ’ ಭವನದ ನಿರ್ಮಾಣದ ಆಶಯಕ್ಕೆ ರೆಕ್ಕೆ ನೀಡಿದೆ. [quote bgcolor=”#ffffff” arrow=”yes” align=”right”]ಅಕ್ಟೋಬರ್ 1ರಿಂದ 10ರ ವರೆಗೆ ಕಾರಂತ ಥೀಂ ಪಾರ್ಕನಲ್ಲಿ ಚಿತ್ತಾರ ಮಾತಿನಾಚೆಯ ಗುರುತು ಕಾರ್ಯಕ್ರಮ ನಡೆಯುತ್ತಲಿದೆ. ಖ್ಯಾತ ರಂಗಕರ್ಮಿ ಛಾಯಾಗ್ರಾಹಕ ಸ್ವರ್ಣ ಕಮಲ ಪ್ರಶಸ್ತಿ ವಿಜೇತ ಸದಾನಂದ ಸುವರ್ಣ ಅವರಿಗೆ ಅಕ್ಟೋಬರ್ 10ರಂದು ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಕಾರ್ಟೂನ್ ಹಬ್ಬ ಮತ್ತ ಸಾಂಸ್ಕೃತಿಕ ಸುಗ್ಗಿ 10 ದಿನಗಳ ಕಾಲವೂ ನಡೆಯಲಿದೆ.[/quote] 2011ರಲ್ಲಿ ಕೋಟ ಶಿವರಾಮ ಕಾರಂತ ಕಲಾಭವನವನ್ನು…

Read More

ಕುಂದಾಪುರ: ತಾಲೂಕಿನ ಮಡಾಮಕ್ಕಿ ಗ್ರಾಮವನ್ನು ಹೊರತುಪಡಿಸಿ, ಉಳಿದ ೧೦೦ ಗ್ರಾಮಗಳ ವ್ಯಾಪ್ತಿಗೆ ತನ್ನ ಕಾರ್ಯಕ್ಷೇತ್ರವನ್ನು ಹೊಂದಿರುವ ಈ ಸಂಘವು ಆಯಾ ಗ್ರಾಮಗಳ ನೋಂದಾಯಿತ ಸದಸ್ಯರಿಗೆ ಸೇವೆ ನೀಡುತ್ತಿದೆ. ಸದಸ್ಯತ್ವ ವರ್ಷಂತ್ಯಕ್ಕೆ 31.42 ವೃದ್ಧಿಯಾಗಿದ್ದು, ಪಾಲುಹಣ ಶೇ. 18.19 ರಷ್ಟು, ಶೇ. 17.16 ರಷ್ಟು ವೃದ್ದಿಯಾಗಿ ವೃದ್ಧಿಯಾಗಿದೆ ಎಂದು ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘ ನಾವುಂದ ಇದರ ಅಧ್ಯಕ್ಷರಾದ ರಮೇಶ ಗಾಣಿಗ ತಿಳಿಸಿದರು. ಅವರು ಸಂಘದ ಪ್ರಧಾನ ಕಛೇರಿಯಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘವು 2014-15 ನೇ ಸಾಲಿನ ಲೆಕ್ಕ ಪರಿಶೋಧನೆ ವರದಿಯಂತೆ ರೂ. 8,85,713 ನಿವ್ವಳ ಲಾಭ ಗಳಿಸಿದ್ದು, ಲಾಭಾಂಶದಲ್ಲಿ ಸದಸ್ಯರಿಗೆ ಶೇಕಡಾ 11 ಡಿವಿಡೆಂಡ್ ಘೋಷಿಸಬಹುದು, ಬಾಕಿ ಲಾಭವನ್ನು ಸಹಕಾರಿ ನಿಯಮದಂತೆ ಹಂಚಲಾಗುವುದು ಸಂಘವು ವರದಿ ಸಾಲಿನಲ್ಲಿ ರೂ. 15,76,23,307.45 ವ್ಯವಹಾರ ಮಾಡಿದ್ದು, ಶೇ. 30.42 ರಷ್ಟು ವೃದ್ದಿಯಾಗಿದೆ. ಪ್ರಸಕ್ತ ಸಾಲಿನ ಅಡಿಟ್ ವರ್ಗೀಕರಣವು ’ಎ’ ತರಗತಿಯಲ್ಲಿದೆ ಎಂದರು. ಇದು ಕೇವಲ ಏಳು ವರ್ಷದ ಯಶಸ್ವಿ ಸಾಧನೆ ಎಂದು ಹೇಳಬಹುದು. ಮುಂದಿನ…

Read More

ಕುಂದಾಪುರ: ಮಂಗಳೂರಿನ ರೆಡ್ ಎಫ್.ಎಮ್ 93.5 ಪ್ರಸ್ತುತ ಪಡಿಸುವ ಉಡುಪಿ ಜಿಲ್ಲಾ ಪೊಲೀಸ್ ಹಾಗೂ ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಕುಂದಾಪುರದ ಹೋಟೆಲ್ ಪಾರಿಜಾತದ ಪ್ರಾಯೋಜಕತ್ವದಲ್ಲಿ ಅ. 4ರಂದು ಬೆಳಿಗ್ಗೆ 9 ಕ್ಕೆ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ರೆಡ್ ಸುರಕ್ಷಾ ಅಭಿಯಾನ ಸೀಸನ್-2 ಅಪರಾಧ ತಡೆ ಕುರಿತು ಜಾಗೃತಿ ಮೂಡಿಸುವಂತಹ ಉಡುಪಿ ಜಿಲ್ಲಾ ಮಟ್ಟದ ಅಂತರ್‌ಕಾಲೇಜು ಸ್ಕಿಟ್ ಕಾಂಪಿಟೇಶನ್ ನಡೆಯಲಿದೆ. ಉಡುಪಿ ಜಿಲ್ಲಾ ಅಧೀಕ್ಷಕರಾದ ಅಣ್ಣಾಮಲೈ ಪೂರ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಲಿದ್ದಾರೆ. ಹೆಚ್ಚುವರಿ ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಸಂತೋಷ ಕುಮಾರ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅಪರಾಧ ತಡೆ ಕುರಿತು ಮಾಹಿತಿಯನ್ನೊಳಗೊಂಡ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಬಹುದಾಗಿದ್ದು, ಕಾನೂನು ಸುವ್ಯವಸ್ಥೆ ಹಾಗೂ ಪಾಲನೆಯ ಅಗತ್ಯತೆಯ ಅರಿವು, ಮಾಹಿತಿ ಲಭ್ಯವಾಗಲಿದೆ. ಈ ಉಪಯುಕ್ತ ಮಾಹಿತಿ ಕಾರ್ಯಕ್ರಮದಲ್ಲಿ ಯುವಕ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾರ್ಯಕ್ರಮ ಸಂಯೋಜಕ ಪ್ರವೀಣ ಟಿ. ತಿಳಿಸಿದ್ದಾರೆ

Read More

[quote bgcolor=”#ffffff” bcolor=”#ffbb00″ arrow=”yes” align=”right”]ಅ.8: ಕಾರ್ಯಕ್ರಮಗಳ ವಿವರ: ವಿಶೇಷ ಉಪನ್ಯಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿ-ಸವಾಲುಗಳ ಬಗ್ಗೆ ಹಿರಿಯ ನ್ಯಾಯವಾದಿ ಎ.ಎಸ್.ಎನ್.ಹೆಬ್ಬಾರ್ ಮಾತನಾಡಲಿದ್ದಾರೆ. ಆಕಾಶವಾಣಿ ಕಲಾವಿದ ಚಂದ್ರ ಕೆ. ಹೆಮ್ಮಾಡಿ ಮತ್ತು ತಂಡದವರಿಂದ ಕನ್ನಡ ಗೀತೆಗಳು ಪ್ರಸ್ತುತಗೊಳ್ಳಲಿದೆ. ಅಪರಾಹ್ನ 2 ಗಂಟೆಯಿಂದ ಸಾಹಿತ್ಯ ಮತ್ತು ಸಂಸ್ಕೃತಿ ಎಂಬ ವಿಚಾರ ಸಂಕಿರಣದಲ್ಲಿ ಡಾ. ಕನರಾಡಿ ವಾದಿರಾಜ ಭಟ್, ಡಾ. ಜಗದೀಶ ಶೆಟ್ಟಿ, ಡಾ. ಪಿ. ಅಮ್ಮಾಜಿ ಭಾಗವಹಿಸಲಿದ್ದಾರೆ. ಮಹಿಳಾ ಸಂವೇದನೆ ಕುರಿತು ಡಾ. ಶುಭಾ ಮರವಂತೆ ಉಪನ್ಯಾಸ ನೀಡಲಿದ್ದಾರೆ. ಸಂಜೆ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟಕ-ಕೆರೆಗೆ ಹಾರ, ಯಕ್ಷಗಾನ-ಮಾಯಾಪುರಿ ಮಹಾತ್ಮೆ ಹಾಗೂ ಬೈಂದೂರು ರಿದಂ ನೃತ್ಯಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ವೈಭವ ನಡೆಯಲಿದೆ.[/quote] ಬೈಂದೂರು: ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿ ನೂರು ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯ ಕನ್ನಡ ವರ್ಷಾಚರಣೆ-ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಎಂಬ ಎರಡು ದಿನಗಳ ಸಾಹಿತ್ಯೋತ್ಸವವನ್ನು ಆಯೊಜಿಸಲಾಗಿದೆ. ಆರ್.ಕೆ.ಸಂಜೀವರಾವ್ ಜನ್ಮ ಶತಾಬ್ದಿ ಆಚರಣಾ ಸಮಿತಿಯ…

Read More