Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘ ಮಹಾಸಭೆ
    ಊರ್ಮನೆ ಸಮಾಚಾರ

    ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘ ಮಹಾಸಭೆ

    Updated:05/10/2015No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪುರ: ತಾಲೂಕಿನ ಮಡಾಮಕ್ಕಿ ಗ್ರಾಮವನ್ನು ಹೊರತುಪಡಿಸಿ, ಉಳಿದ ೧೦೦ ಗ್ರಾಮಗಳ ವ್ಯಾಪ್ತಿಗೆ ತನ್ನ ಕಾರ್ಯಕ್ಷೇತ್ರವನ್ನು ಹೊಂದಿರುವ ಈ ಸಂಘವು ಆಯಾ ಗ್ರಾಮಗಳ ನೋಂದಾಯಿತ ಸದಸ್ಯರಿಗೆ ಸೇವೆ ನೀಡುತ್ತಿದೆ. ಸದಸ್ಯತ್ವ ವರ್ಷಂತ್ಯಕ್ಕೆ 31.42 ವೃದ್ಧಿಯಾಗಿದ್ದು, ಪಾಲುಹಣ ಶೇ. 18.19 ರಷ್ಟು, ಶೇ. 17.16 ರಷ್ಟು ವೃದ್ದಿಯಾಗಿ ವೃದ್ಧಿಯಾಗಿದೆ ಎಂದು ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘ ನಾವುಂದ ಇದರ ಅಧ್ಯಕ್ಷರಾದ ರಮೇಶ ಗಾಣಿಗ ತಿಳಿಸಿದರು. ಅವರು ಸಂಘದ ಪ್ರಧಾನ ಕಛೇರಿಯಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    Click Here

    Call us

    Click Here

    ಸಂಘವು 2014-15 ನೇ ಸಾಲಿನ ಲೆಕ್ಕ ಪರಿಶೋಧನೆ ವರದಿಯಂತೆ ರೂ. 8,85,713 ನಿವ್ವಳ ಲಾಭ ಗಳಿಸಿದ್ದು, ಲಾಭಾಂಶದಲ್ಲಿ ಸದಸ್ಯರಿಗೆ ಶೇಕಡಾ 11 ಡಿವಿಡೆಂಡ್ ಘೋಷಿಸಬಹುದು, ಬಾಕಿ ಲಾಭವನ್ನು ಸಹಕಾರಿ ನಿಯಮದಂತೆ ಹಂಚಲಾಗುವುದು ಸಂಘವು ವರದಿ ಸಾಲಿನಲ್ಲಿ ರೂ. 15,76,23,307.45 ವ್ಯವಹಾರ ಮಾಡಿದ್ದು, ಶೇ. 30.42 ರಷ್ಟು ವೃದ್ದಿಯಾಗಿದೆ. ಪ್ರಸಕ್ತ ಸಾಲಿನ ಅಡಿಟ್ ವರ್ಗೀಕರಣವು ’ಎ’ ತರಗತಿಯಲ್ಲಿದೆ ಎಂದರು. ಇದು ಕೇವಲ ಏಳು ವರ್ಷದ ಯಶಸ್ವಿ ಸಾಧನೆ ಎಂದು ಹೇಳಬಹುದು. ಮುಂದಿನ ದಿನಗಳಲ್ಲಿ ಸಂಘದ ಅಧೀನದಲ್ಲಿ ಸ್ವ-ಸಹಾಯ ಗುಂಪುಗಳನ್ನು ರಚಿಸಲು ತೀರ್ಮಾನಿಸಲಾಗಿದೆ ಎಂದರು.

    ವರದಿ ವರ್ಷದ ಆರಂಭಕ್ಕೆ ಸಂಘದಲ್ಲಿ 1,112 ’ಎ’ ತರಗತಿಯ ಸದಸ್ಯರಿದ್ದು, ವರದಿ ಸಾಲಿನಲ್ಲಿ 57 ಸದಸ್ಯರು ಸೇರ್ಪಡೆಯಾಗಿ, ವರ್ಷಾಂತ್ಯಕ್ಕೆ 1,167 ಸದಸ್ಯರಿದ್ದಾರೆ. ವರ್ಷಾಂತ್ಯಕ್ಕೆ ಒಟ್ಟು 3,087 ಸದಸ್ಯರಿದ್ದಾರೆ ಇದು ಪ್ರತಿಶತ 31.42 ರಷ್ಟು ವೃದ್ದಿಯಾಗಿದೆ. ವರದಿ ವರ್ಷದ ಆರಂಭದಲ್ಲಿ ’ಎ’ ತರಗತಿಯ ರೂ. 22,51,800 ಪಾಲು ಹಣವಿದ್ದು, ವರದಿ ಸಾಲಿನಲ್ಲಿ ರೂ. 501,900ಜಮಾ ಆಗಿ, ರೂ. 2,41,700 ಮರುಪಾವತಿಯಾಗಿ ವರ್ಷಾಂತ್ಯಕ್ಕೆ ರೂ. 25,12,000 ಇರುತ್ತದೆ. ಸಂಘದ ಸದಸ್ಯರಿಗೆ ಯಶಸ್ವಿನಿ ವಿಮೆ ನೋಂದಣಿ ಸೌಲಭ್ಯವನ್ನು ನೀಡುತ್ತಿದ್ದೇವೆ. ಕಳೆದ ಸಾಲಿನಲ್ಲಿ 150 ಸದಸ್ಯರನ್ನು ಈ ಯೋಜನೆಯಡಿ ನೋಂದಾಯಿಸಿ ಕೊಳ್ಳಲಾಗಿದ್ದು, ಈ ಸಾಲಿನಲ್ಲಿ ಇಲ್ಲಿ ತನಕ 170 ಸದಸ್ಯರನ್ನು ನೋಂದಾಯಿಸಲಾಗಿದೆ. ಸಂಘದ ವ್ಯಾಪ್ತಿಯಲ್ಲಿ ಕಲಿತ ಸದಸ್ಯರ ಮಕ್ಕಳಿಗೆ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ನಗದು ರೂಪದಲ್ಲಿ ಪ್ರತಿಭಾ ಪುರಸ್ಕಾರ, ಈ ಸಾಲಿನಲ್ಲಿ ಗ್ರಾಮ ಪಂಚಾಯತ್‌ಗೆ ಆಯ್ಕೆಯಾದ ಸದಸ್ಯರನ್ನು ಸಂಘದ ವತಿಯಿಂದ ಗೌರವಿಸಲಾಯಿತು.

    ಸಂಘದ ಉಪಾಧ್ಯಕ್ಷ ಸುಧೀರ್ ಪಂಡಿತ್ ಕುಂಭಾಶಿ, ನಿರ್ದೇಶಕರಾದ ಶಶಿಕಲಾ ನಾರಾಯಣ ಗಾಣಿಗ ಕುಂದಾಪುರ, ನವೀನ್ ಎನ್.ಗಾಣಿಗ ನಾವುಂದ, ಮಂಜುನಾಥ ಗಾಣಿಗ ಗಂಗೊಳ್ಳಿ, ಕೆ.ರಮಾನಂದ ಕುಂದಾಪುರ, ಬಿ.ಎಂ.ನಾಗರಾಜ ಗಾಣಿಗ ಬೈಂದೂರು, ಜಾನಕಿ ಗಾಣಿಗ ಶಿರೂರು ಉಪಸ್ಥಿತರಿದ್ದರು. ಪ್ರಧಾನ ವ್ಯವಸ್ಥಾಪಕ ನಾಗರಾಜ ಗಾಣಿಗ ಹಿಲ್ಕೋಡು ವರದಿ ಮಂಡಿಸಿದರು. ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ್ ಗಾಣಿಗ ಬೈಂದೂರು ವಂದಿಸಿದರು.

    Gopalakrishna vividoddesha seva sahakari sanga nagoor byndoor (1)r

    Click here

    Click here

    Click here

    Call us

    Call us

    Like this:

    Like Loading...

    Related

    Byndoor
    Share. Facebook Twitter Pinterest LinkedIn Tumblr Telegram Email
    ಸುನಿಲ್ ಹೆಚ್. ಜಿ. ಬೈಂದೂರು
    • Website
    • Facebook
    • X (Twitter)
    • LinkedIn

    ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

    Related Posts

    ಸೋಲು ಕಲಿಸುವ ಪಾಠ ದೊಡ್ಡ ಯಶಸ್ಸಿಗೆ ಕಾರಣ: ಮುನಿಯಾಲ್ ಉದಯ ಕುಮಾ‌ರ್ ಶೆಟ್ಟಿ

    08/12/2025

    ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ವಾರ್ಷಿಕೋತ್ಸವ

    08/12/2025

    ಗ್ರಾಮಾಭಿವೃದ್ಧಿ ಯೋಜನೆ ಸಮಾಜಕ್ಕೆ ಶಕ್ತಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

    08/12/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಸೋಲು ಕಲಿಸುವ ಪಾಠ ದೊಡ್ಡ ಯಶಸ್ಸಿಗೆ ಕಾರಣ: ಮುನಿಯಾಲ್ ಉದಯ ಕುಮಾ‌ರ್ ಶೆಟ್ಟಿ
    • ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್: ಆಳ್ವಾಸ್ ಮಹಿಳಾ ತಂಡಕ್ಕೆ ಸಮಗ್ರ ಪ್ರಶಸ್ತಿ
    • ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ವಾರ್ಷಿಕೋತ್ಸವ
    • ಗ್ರಾಮಾಭಿವೃದ್ಧಿ ಯೋಜನೆ ಸಮಾಜಕ್ಕೆ ಶಕ್ತಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ
    • ಬೈಂದೂರು: ಡಾ. ಬಿ.ಆರ್ ಅಂಬೇಡ್ಕರ್ ಅವರ ಪರಿ ನಿಬ್ಬಣ ದಿನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d