Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಕುಂದಾಪುರ: ಪತ್ರಿಕಾ ದಿನಾಚರಣೆ ಎನ್ನುವುದು ಆಚರಣೆಗೆ ಮಾತ್ರ ಸೀಮಿತವಾಗದೇ, ಪತ್ರಕರ್ತರು ಹಾಗೂ ಪತ್ರಿಕೋದ್ಯಮಿಗಳು ಆತ್ಮಾವಲೋಕನ ಮಾಡಿಕೊಳ್ಳುವಂತಹ ದಿನವಾಗಬೇಕು. ವಿದ್ಯಾರ್ಥಿಗಳು ಎಲ್ಲಿಯವರೆಗೆ ಅಧ್ಯಯನಶೀಲರಾಗುವಿದಿಲ್ಲವೋ ಅಲ್ಲಿಯ ವರೆಗೆ ಒಳ್ಳೆಯ ಪತ್ರಕರ್ತರಾಗಲು ಸಾಧ್ಯವಿಲ್ಲ ಎಂದು ಪ್ರೈಮ್ ಟಿವಿಯ ಕಾರ್ಯಕ್ರಮ ನಿರ್ದೇಶಕ ರವಿರಾಜ್ ವಳಲಂಬೆ ಹೇಳಿದರು. ಅವರು ಭಂಡಾರ್ಕಾರ್ಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಯೋಜಿಸಿದ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಬರವಣಿಗೆ, ಆಸಕ್ತಿ ಮತ್ತು ಹೊಸತನ್ನು ತಿಳಿಯುವ ಉತ್ಸಾಹ ಪತ್ರಿಕೋದ್ಯಮದಲ್ಲಿ ಬೆಳೆಯಲು ಸಹಕಾರಿಯಾದರೇ, ಸಂಶೋಧನಾತ್ಮಕ ದೃಷ್ಠಿಕೋನದಿಂದ ನಮ್ಮೊಳಗಿನ ವಿಚಾರಗಳು ಹೆಚ್ಚಾಗುತ್ತಾ ಹೋಗುತ್ತವೆ. ಒಂದು ಘಟನೆಯನ್ನು ಕೇವಲ ಸುದ್ದಿಯಾಗಿ ಮಾತ್ರವೇ ನೋಡದೆ ಅದರ ಒಳಹೊರವನ್ನು ಅರಿಯುವ ಮತ್ತು ಅದಕ್ಕೆ ಸ್ಪಂದಿಸುವ ಗುಣವನ್ನು ಪತ್ರಕರ್ತರಾಗುವವರು ಬೆಳೆಸಿಕೊಳ್ಳಬೇಕಿದೆ ಎಂದವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ನಾರಾಯಣ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ರವಿರಾಜ್ ವಳಲಂಬೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪತ್ರಿಕೋದ್ಯಮ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಪ್ರಬಂಧ ಸ್ವರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾಲೇಜಿನ ಇಂಗ್ಲೀಷ್…

Read More

ಗ೦ಗೊಳ್ಳಿ : ಎಲ್ಲಾ ಮಹಿಳೆಯರಿಗೂ ತಮ್ಮ ಹಕ್ಕುಗಳ ಬಗೆಗಿನ ಅರಿವು ಅತೀ ಅಗತ್ಯ. ಅ೦ತಹ ಅರಿವು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹುಟ್ಟು ಹಾಕುತ್ತದೆ. ಆ ಮೂಲಕ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಸ್ವಲ್ಪ ಮಟ್ಟಿಗಾದರೂ ನಿಯ೦ತ್ರಿಸಲು ಸಾಧ್ಯ ಎ೦ದು ಹಟ್ಟಿಗ೦ಗಡಿಯ ನಮ್ಮಭೂಮಿಯ ಕಾರ್ಯಕರ್ತೆ ಲಕ್ಷ್ಮೀ ಅವರು ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಆಶ್ರಯದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಿಗಾಗಿ ವಿಶೇಷವಾಗಿ ಹಮ್ಮಿಕೊ೦ಡಿದ್ದ ಮಹಿಳಾ ಹಕ್ಕುಗಳು ಮತ್ತು ರಕ್ಷಣೆಯ ಕುರಿತಾಗಿನ ಮಾಹಿತಿ ಕಾರ‍್ಯಕ್ರಮದಲ್ಲಿ ತಮ್ಮ ಅನಿಸಿಕೆಗಳನ್ನು ಹ೦ಚಿಕೊ೦ಡರು.ಅಧ್ಯಕ್ಷತೆ ವಹಿಸಿದ್ದ ಕು೦ದಾಪುರ ತಾಲೂಕು ಪ೦ಚಾಯತ್‌ನ ಮಹಿಳಾ ಮಿತ್ರದ ಫಿಲೋಮಿನಾ ಅವರು ಮಾತನಾಡಿ ದೌರ್ಜನ್ಯಕ್ಕೊಳಗಾದ ಸ೦ದರ್ಭದಲ್ಲಿ ಮಹಿಳೆಯರು ದೂರು ನೀಡಲು ಹಿ೦ಜರಿಯಬಾರದು. ಧೈರ್ಯದಿ೦ದ ಹೋರಾಟವನ್ನು ನಡೆಸಬೇಕು ಎ೦ದು ಹೇಳಿದರು. ಉಪನ್ಯಾಸಕಿ ಕವಿತಾ ಎಮ್ ಸಿ, ಮಹಿಳಾ ಮಿತ್ರದ ಕಾವೇರಿ ,ಸರಸ್ವತಿ ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನಾರಾಯಣ್ ನಾಯ್ಕ್ ಸ್ವಾಗತಿಸಿದರು.ಉಪನ್ಯಾಸಕ ಭಾಸ್ಕರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.…

Read More

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಆ ಯುವಕರೆಲ್ಲ ಒಂದೊಂದು ಉದ್ಯೋಗ ನಿರತರು. ಆದರೆ ತಮ್ಮ ಕೆಲಸ-ಕಾರ್ಯದ ನಡುವೆಯೂ ಒಂದಿಷ್ಟು ಹೊತ್ತನ್ನು ಕಡ್ಡಾಯವಾಗಿ ಸಮಾಜಸೇವೆಗೆ ಮೀಸಲಿಡಬೇಕೆಂಬ ಅವರ ತುಡಿತ ಮಾತ್ರ ಬಹು ಅಪರೂಪವಾದುದು. ಸ್ನೇಹಿತನ ನೆನಪಲ್ಲಿ ಆರಂಭಗೊಂಡ ತೆಕ್ಕಟ್ಟೆ ಫ್ರೆಂಡ್ಸ್ ಎಂಬ ಸಂಘಟನೆಯೊಂದು ಇಂದು ನೂರಾರು ಕುಟುಂಬಗಳಿಗೆ ನೆಲೆ-ಬೆಲೆ ತಂದುಕೊಟ್ಟಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಹಗಲು ರಾತ್ರಿ ಎನ್ನದೇ ನಿರಂತರವಾಗಿ ಸಮಾಜಮುಖಿ, ಮಾನವೀಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಯುವ ಪಡೆಯ ಕಾರ್ಯ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಉಚಿತ ಅಂಬ್ಯಲೆನ್ಸ್: ಆರೋಗ್ಯ ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ತೆಕ್ಕಟ್ಟೆ ಫ್ರೆಂಡ್ಸ್ 2011ರಲ್ಲಿ ಆಂಬ್ಯುಲೆನ್ಸ್ ಸೇವೆ ಆರಂಭಿಸುವ ಚಿಂತನೆಯಲ್ಲಿದ್ದಾಗ ಅದನ್ನು ಕಾರ್ಯರೂಪಕ್ಕಿಳಿಸಲು ಮೊದಲು ಸಹಾಯಹಸ್ತ ಚಾಚಿದವರು ಉದ್ಯಮಿ ವಿ. ಕೆ. ಮೋಹನ್, ಬಳಿಕ ಸಂಸ್ಥೆಯ ಉದ್ದೇಶ ಅರಿತ ಶಿರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಪಾದರು ಸಂಸ್ಥೆಗೆ ಅಂಬ್ಯುಲೆನ್ಸ್ ಕೊಡುಗೆಯಾಗಿ ನೀಡಿದರು. ಅಂದಿನಿಂದ ಇಂದಿನ ತನಕ ಹಗಲು ರಾತ್ರಿ ಎನ್ನದೇ ಯಾರೇ ಕರೆ ಮಾಡಿದರೂ ತೆಕ್ಕಟ್ಟೆ ಫ್ರೆಂಡ್ಸ್…

Read More

ಬೈಂದೂರು: ಸಮೀಪದ ಕಾಲ್ತೋಡು ಗ್ರಾಮದ ಹಳೇಕಾಲ್ತೋಡುವಿನ 108 ವರ್ಷದ ಹಿರಿಯಜ್ಜಿ ನಾಗಮ್ಮ ಶೆಡ್ತಿ ಎಂಬುವವರು ಶಿರೂರು ಹೊಸ್ಮನೆ ತಮ್ಮ ಸ್ವಗೃಹದಲ್ಲಿ ನಿಧನರಾದರು. ಕೃಷಿಕುಟುಂಬಕ್ಕೆ ಸೇರಿದ ಇವರು ತಮ್ಮ ಜೀವನದ ಕೊನೆಯ ಕಾಲದವರೆಗೂ ಆರೋಗ್ಯವಂತರಾಗಿದ್ದರು. ಕೆಲವಾರು ವರ್ಷಗಳ ಹಿಂದೆ ಊರಿನ ನಾಟಿ ಪ್ರಸೂತಿ ವೈದ್ಯೆಯಾಗಿದ್ದ ನಾಗಮ್ಮ ಶೆಡ್ತಿಯವರು ಈ ಪರಿಸರದವರ ಪ್ರೀತಿಗೆ ಪಾತ್ರರಾಗಿದ್ದರು. ಮೃತರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Read More

ಬೈಂದೂರು: ನದಿಗೆ ಸ್ನಾನ ಮಾಡಲು ಇಳಿದ ವ್ಯಕ್ತಿಯೋರ್ವರು ನೀರಿನ ಸುಳಿಗೆ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ ಘಟನೆ ಶಿರೂರಿನ ಸಂಕದಗುಂಡಿ ಎಂಬಲ್ಲಿ ನಡೆದಿದೆ. ಗಿರೀಶ್(23) ಮೃತ ದುರ್ದೈವಿ. ಘಟನೆಯ ವಿವರ: ತುಮಕೂರಿನಿಂದ ಶುಕ್ರವಾರ ರಾತ್ರಿ ಪ್ರವಾಸಕ್ಕೆಂದು ಹೊರಟಿದ್ದ ಅಲ್ಲಿನ ಟೊಯೊಟಾ ಸಪ್ಲಯರ‍್ಸ್ ಕಂಪೆನಿಯ 12 ಉದ್ಯೋಗಿಗಳು ಸಿಗಂದೂರು, ಜೋಗ ಹಾಗೂ ಮುರ್ಡೇಶ್ವರಕ್ಕೆ ತೆರಳಿ ಅಲ್ಲಿಂದ ಕೊಲ್ಲೂರಿಗೆ ತೆರಳುತ್ತಿರುವಾಗ ಮಾರ್ಗಮಧ್ಯೆ ಸಂಜೆ ೪:೩೦ರ ವೇಳೆಗೆ ಶಿರೂರಿನ ಸಮೀಪದ ಹೊಳೆಯನ್ನು ನೋಡಿ ತಮ್ಮ ಟೆಂಪೋ ಟ್ರಾವೆಲ್ಲರನ್ನು ನಿಲ್ಲಿಸಿ ಹೊಳೆಗಿಳಿದಿದ್ದಾರೆ. ಹೊಳೆಯಲ್ಲಿ ಸ್ನೇಹಿತರೊಂದಿಗೆ ಸ್ನಾನ ಮಾಡುತ್ತಿರುವಾಗ ಎಲ್ಲರಿಗಂತ ಸ್ವಲ್ಪ ಮುಂದೆ ಹೋಗಿದ್ದ ಗಿರೀಶ್ ಒಮ್ಮೆಲೆ ಹೆಚ್ಚಾದ ನೀರಿನ ರಭಸಕ್ಕೆ ನದಿಯಲ್ಲಿಯೇ ಕೊಚ್ಚಿಕೊಂಡು ಹೋಗಿದ್ದಾರೆ. ಗಿರೀಶ್‌ಗೆ ಈಜಲು ತಿಳಿದಿದ್ದರೂ ಕೂಡ ನೀರಿನ ಸುಳಿಗೆ ಸಿಕ್ಕಿದ್ದರಂದ ಅವರನ್ನು ರಕ್ಷಿಸಿಕೊಳ್ಳಲಾಗಲಿಲ್ಲ.  ಇವರ ಜೊತೆಗಿದ್ದ ಸ್ನೇಹಿತರಿಗೂ ಈಜು ಬಾರದ ಕಾರಣ ಅಲ್ಲಿಂದ ಸ್ಥಳೀಯರಿಗೆ ಸ್ನೇಹಿತನನ್ನು ರಕ್ಷಿಸುವಂತೆ ಗೊಗರೆದಿದ್ದಾರೆ. ಆದರೆ ಸ್ಥಳಿಯರು ಅಲ್ಲಿಗೆ ಬರುವ ವೇಳೆಗಾಗಲೇ ವ್ಯಕ್ತಿಯು ಮೃತಪಟ್ಟಿದ್ದರು.  ಮೃತ ಗಿರೀಶ್ ಹೊನ್ನಳಿಯವರಾಗಿದ್ದು ಕಳೆದ…

Read More

ಕುಂದಾಪುರ: ಇಲ್ಲಿನ ಮೀನು ಮಾರ್ಕೇಟ್ ರಸ್ತೆಯ ಫ್ರೆಂಡ್ಸ್ ಸರ್ಕಲ್ ರಿ. ಇವರ ಆಶ್ರಯದಲ್ಲಿ ಒಂದು ವಾರಗಳ ಕಾಲ ನಡೆದ ಉಚಿತ ಯೋಗ ತರಬೇತಿ ಶಿಬಿರಯನ್ನು ನರಸಿಂಹ ಎಸ್. ಹೆಗ್ಡೆ ಮನೆಯ 2ನೇ ಮಹಡಿ ಆವರಣದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಶ್ರೀ ಶ್ರೀ ರವಿಶಂಕರ ಗುರೂಜಿಯವರ ನವಚೇತನ ಶಿಬಿರದ ದಿನೇಶ ಮರಕಾಲ ತರಬೇತುದಾರರಾಗಿದ್ದರು.. 54 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.

Read More

ಕುಂದಾಪುರ: ಶುಕ್ರವಾರ ಮಧ್ಯಾಹ್ನದಿಂದ ಕುಂದಾಪುರ ತಾಲೂಕಿನಲ್ಲಿ ಬಿ.ಎಸ್.ಎನ್.ಎಲ್ ಇಂಟರ್‌ನೆಟ್‌ ಸಮಸ್ಯೆ ತಲೆದೋರಿತ್ತು. ಬೆಂಗಳೂರಿನ ಸರ್ವರ್‌ ಸಮಸ್ಯೆ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಮಳೆಗಾಲ ಆರಂಭಗೊಂಡಾಗಲಿಂದ ಬಿ.ಎಸ್.ಎನ್.ಎಲ್ ಇಂಟರ್ ನೆಟ್ ಆಗಾಗ ಕೈಕೊಡುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಆದರೆ ಸಂಪರ್ಕ ಸಾಧನೆಗೆ ಅತಿ ಅಗತ್ಯವಾದ ಇಂಟರ್‌ನೆಟ್‌ ಸಂಪರ್ಕದ ಕೊರತೆಯಿಂದ ಗ್ರಾಹಕರಿಗೆ ಭಾರೀ ತೊಂದರೆ ಅನುಭವಿಸುವಂತಾಗಿದೆ.

Read More

ಕುಂದಾಪುರ: ಕೋಣಿ ಪರಿಸರದ ಯುವಕನೋರ್ವ ಕುಂದಾಪುರ -ಬಸ್ರೂರು ರಾಜ್ಯ ಹೆದ್ದಾರಿಯ ಸಟ್ವಾಡಿ ಕ್ರಾಸ್‌ ಬಳಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದಾಗ ತಕ್ಷಣ ಸ್ಥಳಕ್ಕೆ ಬಂದಿದ್ದ ಇನ್ನೋರ್ವ ಯುವಕ ಪ್ರಾಣದ ಹಂಗು ತೊರೆದು ಹೊಳೆಗೆ ಹಾರಿ ರಕ್ಷಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಸಂತೋಷ್‌(25) ಎಂದು ಗುರುತಿಸಲಾಗಿದೆ. ರಸ್ತೆಯಲ್ಲಿರುವ ಸಣ್ಣ ಸೇತುವೆಯ ಮೇಲಿನಿಂದ ನದಿಗೆ ಹಾರಿದ ಯುವಕನ್ನು ನೋಡಿದ ಮಡಗಾಂವ್‌ ಮೂಲದ ಯುವಕ ಸಚಿನ್‌ ಕೇರ್ಕಾರ್‌(19) ನದಿಗೆ ಹಾರಿದನು. ಇವರ ಹಿಂದಿನಿಂದ ಬಂದಿದ್ದ ಜಪ್ತಿಯ ಬಾಬಣ್ಣ ಕುಲಾಲ್‌ ಅವರೂ ಹೊಳೆಗೆ ಹಾರಿ ಯುವಕನ ರಕ್ಷಣೆಗೆ ಮುಂದಾಗಿದ್ದಾರೆ. ಎಲ್ಲವೂ ಕ್ಷಣಾರ್ಧದೊಳಗೆ ನಡೆದಿದ್ದರಿಂದ ಆತ್ಮಹತ್ಯೆಗೆ ಯತ್ನಿಸಿದ ಸಂತೋಷ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ್ದ ಸಂತೋಷ್‌ ಶಿಲೆಕಲ್ಲು ಗಲ್ಲು ಕೆಲಸ ಮಾಡಿಕೊಂಡಿದ್ದು, ಆತ್ಮಹತ್ಯಗೆ ಕಾರಣ ತಿಳಿದು ಬಂದಿಲ್ಲ.

Read More

ಕುಂದಾಪುರ: ನಗರದ ಶೆಣೈ ವೃತ್ತದ ಬಳಿ (ಈ ಹಿಂದೆ ವೃಂದಾವನ ಹೋಟೇಲಿದ್ದ ಜಾಗದಲ್ಲಿ) ನಡೆಯುತ್ತಿರುವ ಕಾಮಗಾರಿಯ ಪ್ರದೇಶದಲ್ಲಿ ಸಂಜೆಯ ವೇಳೆಗೆ ಟಿಪ್ಪರ್ ಚಕ್ರಕ್ಕೆ ಸಿಲುಕಿದ ಎಳೆಯ ಹಸುಳೆಯೊಂದು ಸ್ಥಳದಲ್ಲೇ ಅನುನೀಗಿದ ಘಟನೆ ನಡೆದಿದೆ. ತಾಮಣ್ಣ (ಒಂದೂವರೆ ವರ್ಷ) ಮೃತ ದುರ್ದೈವಿ ಕೂಸು. ಮೂಲತ: ಕೊಪ್ಪಳದ ಉದಯನಗರದವರಾದ ಲಕ್ಷ್ಮೀ ಮಾರುತಿ ದಂಪತಿಗಳ ಕೊನೆಯ ಮಗುವೇ ದುರಂತ ಅಂತ್ಯಕ್ಕೀಡಾದ ತಾಮಣ್ಣ. ಕಟ್ಟಡ ಕಾಮಗಾರಿಯ ಸಂಬಂಧ ಆಗಮಿಸಿದ ಟಿಪ್ಪರ್‌ವೊಂದು ಪುನಃ ವಾಪಾಸು ಹೊರಟಾಗ ಎದುರಿಗೆ ಹಂಪ್ಸ್ ಇದ್ದ ಕಾರಣ ಚಾಲಕ ಹಿಮ್ಮುಖವಾಗಿ ಚಲಿಸಿದ್ದೆ ವಿದ್ರಾವಕ ಅಂತ್ಯಕೊಂದು ಮುನ್ನುಡಿಯಾಯಿತು. ಅಷ್ಟರ ತನಕ ಅಲ್ಲಿಯೇ ಕೆಲಸಮಾಡುತ್ತಿದ್ದ ತಾಯಿಯ ಬಳಿಯಿದ್ದ ಮಗು ಮುಂದಕ್ಕೆ ಓಡಿ ಬರುವುದಕ್ಕೂ ಟಿಪ್ಪರ್ ಹಿಂದೆ ಚಲಿಸುವದಕ್ಕೂ ತಾಳೆಯಾಗಿ ಟಿಪ್ಪರ್ ನ ಹಿಂದಿನ ಚಕ್ರವೊಂದು ಉರುಳಿದ ಮಗುವಿನ ತಲೆಯ ಮೇಲೆ ಹರಿದು ಬಿಟ್ಟ ರಭಸಕ್ಕೆ ಪುಟ್ಟ ಅಕ್ರಂದನಕ್ಕೂ ಅವಕಾಶವಿಲ್ಲದಂತೆ ನಿರ್ದಯಿ ಸಾವು ನಿಷ್ಪಾಪಿ ಹಸುಳೆಯನ್ನು ಹೊಸಕಿ ಹಾಕಿತ್ತು. ಈ ಬೀಭತ್ಸ ಘಟನೆ ಹೆತ್ತೊಡಲ ಎದುರಿಗೇ ಜರಗಿದ್ದು “ಅಯ್ಯೋ…

Read More

ಮುಂಬಯಿ: ಕಲಾಜಗತ್ತು ಮುಂಬಯಿ ಇದರ ನೂತನ ಅಧ್ಯಕ್ಷರಾಗಿ ಲೀಲೇಶ್‌ ಆರ್‌. ಶೆಟ್ಟಿ ಆಯ್ಕೆಯಾಗಿದ್ದಾರೆ. ಜೂ. 29ರಂದು ಸಾಂತಾಕ್ರೂಜ್‌ (ಪೂ.) ಪ್ರಭಾತ್‌ ಕಾಲನಿಯ ಪೇಜಾವರ ಮಠದಲ್ಲಿ ತೋನ್ಸೆ ವಿಜಯ ಕುಮಾರ್‌ ಶೆಟ್ಟಿ ನೇತೃತ್ವದ ಕಲಾಜಗತ್ತು ಮುಂಬಯಿ ಇದರ ವಿಶೇಷ ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಉಪಾಧ್ಯಕ್ಷರಾಗಿ ಕೃಷ್ಣರಾಜ್‌ ಸುವರ್ಣ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ದಯಾಸಾಗರ್‌ ಚೌಟ, ಜತೆ ಕಾರ್ಯದರ್ಶಿಯಾಗಿ ಶಿವಾನಂದ ಶೆಟ್ಟಿ, ಗೌರವ ಕೋಶಾಧಿಕಾರಿಯಾಗಿ ಜಗದೀಶ್‌ ರಾವ್‌, ಜತೆ ಕೋಶಾಧಿಕಾರಿಯಾಗಿ ಚಂದ್ರಾವತಿ ವಸಂತ್‌ ಅವರನ್ನು ನೇಮಿಸಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸುರೇಂದ್ರ ಕುಮಾರ್‌ ಹೆಗ್ಡೆ, ಕೃಷ್ಣರಾಜ್‌ ಶೆಟ್ಟಿ, ಪ್ರಭಾಕರ ಶೆಟ್ಟಿ, ಎನ್‌. ಪೃಥ್ವಿರಾಜ್‌ ಮುಂಡ್ಕೂರು, ಕೆ. ಆರ್‌. ವಿ. ಶೆಟ್ಟಿ, ಅಶು ಪಾಂಗಾಳ, ಜೂಲಿಯೆಟ್‌ ಪಿರೇರ, ಕುಶಲ್‌ ಕೆ. ಶೆಟ್ಟಿ, ಲಾರೆನ್ಸ್‌ ಡಿ’ಸೋಜಾ, ಶೇಖರ್‌ ಸಸಿಹಿತ್ಲು, ಸುಶೀಲಾ ದೇವಾಡಿಗ, ಜಯಂತಿ ದೇವಾಡಿಗ ಆಯ್ಕೆಯಾದರು. ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಕಲಾಜಗತ್ತು ಮುಂಬಯಿ ಇದರ ಸ್ಥಾಪಕಾಧ್ಯಕ್ಷ ತೋನ್ಸೆ ವಿಜಯಕುಮಾರ್‌ ಶೆಟ್ಟಿ ಅಭಿನಂದಿಸಿ ಶುಭಹಾರೈಸಿದರು.…

Read More