Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸಕ್ಕೆ ಕೇವಲ ಕಲಿಕಾ ವಿಷಯಗಳು ಮಾತ್ರ ಮುಖ್ಯ ಪಾತ್ರ ವಹಿಸದೆ, ಸೃಜನಾತ್ಮಕ ಬರವಣಿಗೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವದ ಮೇಲೆ ಗುರುತರ ಪಾತ್ರ ವಹಿಸುತ್ತವೆ. ಶಾಲೆಯಲ್ಲಿ ಮಕ್ಕಳು ತಮ್ಮ ಪಠ್ಯ ವಿಷಯದ ಜೊತೆಗೆ ವಿಭಿನ್ನ ಬಗೆಯ ಸಹ ಪಟ್ಯ ಚಟುವಟಿಕೆಗಳನ್ನು ಕೈಗೊಳ್ಳುವುದರಿಂದ ಬೌದ್ಧಿಕ ವಿಕಾಸ ಪೂರಕವಾಗುತ್ತದೆ ಎಂದು.ಎನ್.ವಿನಯ್. ಹೆಗಡೆ, ಕುಲಪತಿಗಳು ನಿಟ್ಟೆ ಡೀಮ್ದ್ ಯುನಿವರ್ಸಿಟಿ ಅಭಿಪ್ರಾಯ ಪಟ್ಟರು. ಅವರು ಗುರುಕುಲ ವಿದ್ಯಾಸಂಸ್ಥೆ ಮತ್ತು ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಗುರುಕುಲ ವಾರ್ಷಿಕ ಸಂಚಿಕೆ ’ಗುರುಸ್ಪರ್ಶ’ ಬಿಡುಗಡೆ ಮಾಡಿ ಮಾತನಾಡಿದರು. ಶಾಲಾ ವಾರ್ಷಿಕ ಸಂಚಿಕೆ ವಿದ್ಯಾರ್ಥಿಗಳ ಮತ್ತು ಶಾಲೆಯ ವಾರ್ಷಿಕ ಕ್ರೀಯಾ ಚಟುವಟಿಕೆಗಳ ತೋರಿಸುವ ಕೈಗನ್ನಡಿ ಎಂದು ಹೇಳಿದರಲ್ಲದೆ, ಈ ವಾರ್ಷಿಕ ಸಂಚಿಕೆಯ ವಿದ್ಯಾರ್ಥಿಗಳ ಮತ್ತು ವಿದ್ಯಾಸಂಸ್ಥೆಯ ನೆನಪಿನ ಭುತ್ತಿ ಎಂದು ಬಣ್ಣಿಸಿದರು. ಗುರುಸ್ಪರ್ಶ ವಾರ್ಷಿಕ ಸಂಚಿಕೆ, ವಾರ್ಷಿಕೋತ್ಸವದ ಸಮಾರಂಭದಲ್ಲಿ ಬಿಡುಗಡೆಗೊಳ್ಳುತ್ತಿರುವುದು ಅರ್ಥಪೂರ್ಣವಾಗಿದೆ. ಹಾಗೆಯೇ ಪ್ರತಿವರ್ಷವು ಇನ್ನಷ್ಟು ಸೃಜನಾತ್ಮಕ ಬರವಣಿಗೆಯೊಂದಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಕಲಾಮಂದಿರಲ್ಲಿ ನ.೨೬ರಿಂದ ನ.೨೯ರ ವರೆಗೆ ಕಾಟೂನು ಕುಂದಾಪ್ರ ತಂಡ ನೇತೃತ್ವದಲ್ಲಿ ಜರುಗುತ್ತಿರುವ ’ಕಾರ್ಟೂನು ಹಬ್ಬ’ದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ವಿವಿಧ ಸ್ವರ್ಧೆಗಳನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ನ.೨೮ರ ಬೆಳಿಗ್ಗೆ ೧೦ಗಂಟೆಗೆ ’ಸೈಬರ್ ಕಾರ್ಟೂನು ಸ್ವರ್ಧೆ’ ಆಯೋಜಿಸಲಾಗಿದೆ. ಸೋಶಿಯಲ್ ಮೀಡಿಯಾ, ಡಿಜಿಟಲ್ ಇಂಡಿಯಾ ಎಂಬ ವಿಷಯದಲ್ಲಿ ಒಂದನ್ನು ಆಯ್ದುಕೊಳ್ಳಬಹುದಾಗಿದ್ದು ಜ್ಯೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಸ್ವರ್ಧೆ ನಡೆಯಲಿದೆ. ಡ್ರಾಯಿಂಗ್ ಹಾಳೆ ಹೊರತು ಪಡಿಸಿ ಉಳಿದ ಪರಿಕರಗಳನ್ನು ವಿದ್ಯಾರ್ಥಿಗಳು, ಸಾರ್ವಜನಿಕರೇ ತರಬೇಕಿದ್ದು ಎಲ್ಲಾ ಸ್ವರ್ಧೆಯಲ್ಲಿ ಆಯ್ಕೆಗೊಂಡ ಕಾರ್ಟೂನುಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಕಾರ್ಟೂನು ಹಬ್ಬದ ಸಮಾರೋಪ ಸಮಾರಂಭಲ್ಲಿ ನೀಡಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಯುವ ಕನ್ನಡ ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನ ಆಳ್ವಾಸ್ ನುಡಿಸಿರಿ-2016ಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ನ. 18ರಿಂದ 20ರ ವರೆಗೆ ಮೂಡಬಿದಿರೆ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿರುವ ರತ್ನಾಕರವರ್ಣಿ ವೇದಿಕೆಯಲ್ಲಿ ವಿಜೃಂಭಣೆಯಿಂದ ಉದ್ಘಾಟನೆ ಹಾಗೂ ಪ್ರಮುಖ ಕಾರ್ಯಕ್ರಮಗಳು ಜರುಗಿದರೆ, ಉಳಿದ ಸಮನಾಂತರ ವೇದಿಕೆಗಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ಕರ್ನಾಟಕದ ನಾಳೆಗಳು ಎಂಬ ಪರಿಕಲ್ಪನೆಯಲ್ಲಿ ಈ ಭಾರಿಯ ನುಡಿಸಿರಿ ಜರುಗಲಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಕಲಾಮಂದಿರಲ್ಲಿ ನ.೨೬ರಿಂದ ನ.೨೯ರ ವರೆಗೆ ಕಾಟೂನು ಕುಂದಾಪ್ರ ತಂಡ ನೇತೃತ್ವದಲ್ಲಿ ಜರುಗುತ್ತಿರುವ ’ಕಾರ್ಟೂನು ಹಬ್ಬ’ದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ವಿವಿಧ ಸ್ವರ್ಧೆಗಳನ್ನು ಆಯೋಜಿಸಲಾಗಿದೆ. ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ನ.೨೬ರ ಮಧ್ಯಾಹ್ನ ೨ ಗಂಟೆಗೆ ’ಕಾರ್ಟೂನು ಮೊಗ್ಗು ಕಾರ್ಟೂನು ಸ್ವರ್ಧೆ’ ಆಯೋಜಿಸಲಾಗಿದೆ. ಜ್ಯೂನಿಯರ್ ಹಾಗೂ ಸಿನಿಯರ್ ವಿಭಾಗದಲ್ಲಿ ಸ್ವರ್ಧೆ ನಡೆಯಲಿದ್ದು ವಿದ್ಯಾರ್ಥಿಗಳು ಸೋಶಿಯಲ್ ಮೀಡಿಯಾ, ಡಿಜಿಟಲ್ ಇಂಡಿಯಾ ಹಾಗೂ ಕಾಳಧನ ಈ ಮೂರು ವಿಷಯದಲ್ಲಿ ಯಾವುದಾದರೂ ಎರಡು ವಿಷಯವನ್ನು ಆಯ್ದುಕೊಂಡು ಎರಡು ಗಂಟೆಯ ಅವಧಿಯಲ್ಲಿ ಸ್ಥಳದಲ್ಲಿಯೇ ಕಾರ್ಟೂನು ರಚಿಸಬಹುದಾಗಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ನ.೨೮ರ ಬೆಳಿಗ್ಗೆ ೧೦ಗಂಟೆಗೆ ’ಸೈಬರ್ ಕಾರ್ಟೂನು ಸ್ವರ್ಧೆ’ ಆಯೋಜಿಸಲಾಗಿದೆ. ಸೋಶಿಯಲ್ ಮೀಡಿಯಾ, ಡಿಜಿಟಲ್ ಇಂಡಿಯಾ ಎಂಬ ವಿಷಯದಲ್ಲಿ ಒಂದನ್ನು ಆಯ್ದುಕೊಳ್ಳಬಹುದಾಗಿದ್ದು ಜ್ಯೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಸ್ವರ್ಧೆ ನಡೆಯಲಿದೆ. ಡ್ರಾಯಿಂಗ್ ಹಾಳೆ ಹೊರತು ಪಡಿಸಿ ಉಳಿದ ಪರಿಕರಗಳನ್ನು ವಿದ್ಯಾರ್ಥಿಗಳು, ಸಾರ್ವಜನಿಕರೇ ತರಬೇಕಿದ್ದು ಎಲ್ಲಾ ಸ್ವರ್ಧೆಯಲ್ಲಿ ಆಯ್ಕೆಗೊಂಡ ಕಾರ್ಟೂನುಗಳಿಗೆ ಕ್ರಮವಾಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಕಲಾಮಂದಿರಲ್ಲಿ ನ.೨೬ರಿಂದ ನ.೨೯ರ ವರೆಗೆ ಕಾಟೂನು ಕುಂದಾಪ್ರ ತಂಡ ನೇತೃತ್ವದಲ್ಲಿ ಜರುಗುತ್ತಿರುವ ’ಕಾರ್ಟೂನು ಹಬ್ಬ’ದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ವರ್ಧೆಗಳನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿನಿಯರಲ್ಲಿ ಕಾರ್ಟೂನು ಕಲೆಯತ್ತ ಒಲವು ಬೆಳೆಸುವ ಹಾಗೂ ಉತ್ತೇಜಿಸುವ ಸಲುವಾಗಿ ಶಾಲಾ-ಕಾಲೇಜುಗಳಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿನಿಯರಿಗಾಗಿ ನ.೨೬ರ ಮಧ್ಯಾಹ್ನ ೨ ಗಂಟೆಗೆ ಖ್ಯಾತ ಕಾರ್ಟೂನಿಷ್ಠ್ ದಿ. ಮಾಯಾ ಕಾಮತ್ ಅವರ ಸ್ಮರಣಾರ್ಥವಾಗಿ, ಮಾಯಾ ಕಾಮತ್ ಕುಟುಂಬದ ಸಹಭಾಗಿತ್ವದಲ್ಲಿ ’ಮಾಯಾ ಕಾಮತ್ ಕಾರ್ಟೂನು ಸ್ವರ್ಧೆ’ ಆಯೋಜಿಸಲಾಗಿದೆ. ಜ್ಯೂನಿಯರ್ ಹಾಗೂ ಸಿನಿಯರ್ ವಿಭಾಗದಲ್ಲಿ ಸ್ವರ್ಧೆ ನಡೆಯಲಿದ್ದು ವಿದ್ಯಾರ್ಥಿನಿಯರು ಸೋಶಿಯಲ್ ಮೀಡಿಯಾ, ಡಿಜಿಟಲ್ ಇಚಿಡಿಯಾ ಹಾಗೂ ಕಾಳಧನ ಈ ಮೂರು ವಿಷಯದಲ್ಲಿ ಯಾವುದಾದರೂ ಎರಡು ವಿಷಯವನ್ನು ಆಯ್ದುಕೊಂಡು ಎರಡು ಗಂಟೆಯ ಅವಧಿಯಲ್ಲಿ ಸ್ಥಳದಲ್ಲಿಯೇ ಕಾರ್ಟೂನು ರಚಿಸಬಹುದಾಗಿದೆ. ಡ್ರಾಯಿಂಗ್ ಹಾಳೆ ಹೊರತು ಪಡಿಸಿ ಉಳಿದ ಪರಿಕರಗಳನ್ನು ವಿದ್ಯಾರ್ಥಿನಿಯರೇ ತರಬೇಕಿದ್ದು, ಸ್ವರ್ಧೆಯಲ್ಲಿ ಆಯ್ಕೆಗೊಂಡ ಮೂರು ಕಾರ್ಟೂನುಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಕಾರ್ಟೂನು ಹಬ್ಬದ ಸಮಾರೋಪ ಸಮಾರಂಭಲ್ಲಿ…

Read More

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಅಂತರಾಷ್ಟ್ರೀಯ ಖ್ಯಾತಿಯ ವಾಲಿಬಾಲ್ ಪಟು, ಕರ್ನಾಟಕದ ರಾಜ್ಯ ವಾಲಿಬಾಲ್ ತಂಡದ ಸದಸ್ಯ ಕುಂದಾಪುರದ ಅನುಪ್ ಡಿ’ಕೋಸ್ಟಾ 2015ನೇ ಸಾಲಿನ ರಾಜ್ಯ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದೇಶದ ಭರವಸೆಯ ವಾಲಿಬಾಲ್ ಕ್ರೀಡಾಪಟುವೆಂದೇ ಗುರುತಿಸಿಕೊಂಡಿರುವ ಅನೂಪ್ ಅವರಿಗೆ ಕರ್ನಾಟಕದ ಏಕಲವ್ಯ ಪ್ರಶಸ್ತಿ ದೊರೆತಿರುವುದು ಸಾಧನೆಯ ಮುಕುಟಕ್ಕೊಂದು ಗರಿ ಮೂಡಿದಂತಾಗಿದೆ. ಕುಂದಾಪುರ ಹಂಗಳೂರಿನ ಅಂತೋನಿ ಡಿ’ಕೋಸ್ಟಾ ಹಾಗೂ ಗೀತಾ ಡಿಕೋಸ್ಟಾ ದಂಪತಿಗಳ ಪುತ್ರರಾದ ಅನೂಪ್ ಡಿಕೋಸ್ಟಾ, ಹೊಸನಗರ ಹೋಲಿ ರೆಡಿಮೇರ್ ಸ್ಕೂಲಿನಲ್ಲಿ ಪ್ರಾಥಮಿಕ ಶಿಕ್ಷಣವನ್ನೂ; ಕುಂದಾಪುರದ ಸೈಂಟ್ ಮೇರಿಸ್ ಪ್ರೌಡಶಾಲೆಯಲ್ಲಿ ಮುಗಿಸಿ ಪ್ರೌಢ ಶಿಕ್ಷಣವನ್ನು ಪಡೆದು ಬೆಂಗಳೂರಿನ ಅಲ್ ಅಮೀನ್ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿ, ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿಬಿಎಂ ಪದವಿ ಪಡೆದಿದ್ದಾರೆ. ಪ್ರಸ್ತುತ ಹೈದರಬಾದ್ ಆದಾಯ ತೆರಿಗೆ ಇಲಾಯಲ್ಲಿ ಉದ್ಯೋಗಿಯಾಗಿದ್ದಾರೆ. ಕುಂದಾಪ್ರ ಡಾಟ್ ಕಾಂ. ಶಾಲಾ ದಿನಗಳಿಂದಲೇ ಅನೂಪ್ ಕ್ರೀಡೆಯತ್ತ ಅತೀವ ಆಸಕ್ತಿ ಹೊಂದಿದ್ದರು. ಸ್ವತಃ ಕ್ರೀಡಾಪಟುವಾಗಿದ್ದ ತಂದೆ ಅಂತೋನಿ ಡಿ’ಕೋಸ್ಟಾ ಮಗನ ಆಸಕ್ತಿ…

Read More

ಕೊಲ್ಲೂರು: ಕುಂದಾಪುರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲೊಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸನ್ನಿಧಿಯಲ್ಲಿ ಅ. 1ರಿಂದ ಅ. 11ರವರೆಗೆ ನವರಾತ್ರಿ ಉತ್ಸವ ವೈಭವದಿಂದ ಜರುಗುವ ನವರಾತ್ರಿ ಉತ್ಸವಕ್ಕೆ ದಿನವೂ ಸಾವಿರಾರು ಭಕ್ತಾದಿಗಳು ಪಾಲ್ಗೊಳ್ಳುತ್ತಿದ್ದಾರೆ. ಅ.01ರಿಂದಲೇ ತಾಯಿ ಮೂಕಾಂಬಿಕೆ ಸನ್ನಿಧಿಯಲ್ಲಿ ವಿವಿಧ ಪೂಜೆ, ಹೋಮ-ಹವನಗಳು ನಡೆಯುತ್ತಿದ್ದು, ಅ. 10ರಂದು ಬೆಳಿಗ್ಗೆ ಚಂಡಿಕಾಹೋಮ, ರಾತ್ರಿ ರಥೋತ್ಸವ ಹಾಗೂ ಅ. 11ರ ವಿಜಯದಶಮಿಯಂದು ವಿದ್ಯಾರಂಭ, ನವಾನ್ನಪ್ರಾಶನ ನಡೆಯಲಿದೆ. ವಿದ್ಯಾರಂಭಕ್ಕೆ ದಕ್ಷಿಣ ಭಾರತ ಹಾಗೂ ಉತ್ತರ ಭಾರತದಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ತಮ್ಮ ಮಕ್ಕಳನ್ನು ಕರೆತಂದು ಸರಸ್ವತಿ ಮಂಟಪದಲ್ಲಿ ಮಕ್ಕಳ ನಾಲಿಗೆಯ ಮೇಲೆ ಓಂಕಾರವನ್ನು ಬರೆಸಲಿದ್ದಾರೆ. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ದೇಗುಲಕ್ಕೆ ಆಗಮಿಸುವ ಭಕ್ತರ ಅನುಕೂಲತೆ, ವಾಸ್ತವ್ಯಕ್ಕೆ ಸಕಲ ಸೌಕರ್ಯ ಒದಗಿಸಲಾಗಿದ್ದು, ಯಾವುದೇ ತೊಂದರೆಯಾಗದಂತೆ ನಿಗಾ ವಹಿಸಲಾಗಿದೆ ಎಂದು ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ವಿ. ಪ್ರಸನ್ನ ಅವರು ತಿಳಿಸಿದ್ದಾರೆ.

Read More

ಸುನಿಲ್ ಹೆಚ್. ಜಿ. ಬೈಂದೂರು. | ಕುಂದಾಪ್ರ ಡಾಟ್ ಕಾಂ ದೇಶಕ್ಕೆ ಮಗ್ಗುಲ ಮುಳ್ಳಾಗಿದ್ದ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿರುವ ನಮ್ಮ ವೀರ ಯೋಧರ ಧೈರ್ಯ, ಶೌರ್ಯ ಶ್ಲಾಘನಾರ್ಹ. ಇದು ಕೇವಲ ಪಾಕಿಸ್ತಾನದ ನೆಲದಲ್ಲಿ ನಿಂತು ಉಗ್ರರೊಂದಿಗೆ ನಡೆಸಿದ ಹೋರಾಟವಲ್ಲ. ಬದಲಿಗೆ ಭಾರತ ದೇಶದ ಶಾಂತಿಭಂಗಕ್ಕೆ ಕ್ಷಣ ಕ್ಷಣವೂ ಹವಣಿಸುತ್ತಿರುವ ಉಗ್ರರು ಹಾಗೂ ವಿರೋಧಿ ರಾಷ್ಟ್ರಗಳಿಗೆ ನೀಡಿದ ಎಚ್ಚರಿಕೆಯ ಸಂದೇಶ. ದೇಶದ ಪ್ರಧಾನಿ ಈ ಐತಿಹಾಸಿಕ ನಿರ್ಣಯವನ್ನು ಕೈಗೊಂಡು ನಮ್ಮ ಸೈನಿಕರು ಹಾಗೂ ದೇಶವಾಸಿಗಳಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಭಾರತೀಯರಾದ ನಾವು ಹರ್ಪೋದ್ಘಾರದಲ್ಲಿ ಮುಳುಗಿದರಷ್ಟೇ ಸಾಕೆ? ವರ್ಷವಿಡಿ ನಮಗಾಗಿ ಪ್ರಾಣ ಒತ್ತೆ ಇಟ್ಟು ಹೋರಾಡುವ ನಮ್ಮ ಹೆಮ್ಮೆಯ ಸೈನಿಕರ ರಕ್ಷಣೆಗೆ ಅಗತ್ಯ ಸೌಕರ್ಯಗಳು ದೊರೆಯುವಂತೆ ನೋಡಿಕೊಳ್ಳುವುದೂ ಕೂಡ ಭಾರತೀಯ ಪ್ರಜೆಯಾಗಿ ನಮ್ಮ ಕರ್ತವ್ಯವಲ್ಲವೇ? ಹೌದು ಇದೇ ಸಕಾಲ. ನಮಗಾಗಿ ಪ್ರಾಣದ ಹಂಗು ತೊರೆದು ಹೋರಾಡುವ ಸೈನಿಕರ ನೆರವಿಗಾಗಿ ಕೇಂದ್ರ ರಕ್ಷಣಾ ಇಲಾಖೆ ಆರಂಭಿಸಿರುವ ’ಆರ್ಮಿ ವೆಲ್ಫೇರ್ ಫಂಡ್’ಗೆ ಒಂದಿಷ್ಟು…

Read More

ಸಾಲಮಾಡಿ ಶೌಚಾಲಯ ಕಟ್ಟಿದ್ದರೂ ಅನುದಾನ ನೀಡಲು ನಾಡ ಪಂಚಾಯತ್ ಹಿಂದೇಟು ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ತಾಲೂಕಿನಲ್ಲಿ ಮುಖವೆತ್ತರಿಸಿ ನೋಡಬೇಕಾದ ವಸತಿ ಸಮಚ್ಛಯಗಳು ತಲೆಯೆತ್ತುವ ಮಟ್ಟಿಗೆ ಆರ್ಥಿಕ ಪರಿಸ್ಥಿತಿಗಳು ಸುಧಾರಿಸುತ್ತಿರುವ ಹೊತ್ತಿಗೆ, ಹುಲ್ಲಿನ ಗುಡಿಸಿಲೊಳಕ್ಕೆ ಮಳೆ ಬಿಸಿಲೆನ್ನದೆ ಬದುಕು ಕಂಡುಕೊಂಡಿದೆ ನಾಡ ಗ್ರಾಪಂ ವ್ಯಾಪ್ತಿಯ ಪಡುಕೋಣೆ ಹಡವು ನರಸಿಂಹ ದೇವಾಡಿಗರ ಕುಟುಂಬ. ಕಳೆದ ಎಪ್ಪತ್ತು ವರ್ಷಗಳಿಂದ ಹಡವು ನರಸಿಂಹ ದೇವಾಡಿಗ ಅವರು ಮಳಿ ಹುಲ್ಲು ಸೂರಿನಡಿಯಲ್ಲಿ ಪತ್ನಿ ಬಾಬಿ ದೇವಾಡಿಗ ಪುತ್ರಿ ಸಮುನಾ ಜೊತೆ ವಾಸ ಮಾಡುತ್ತಿದ್ದಾರೆ. ವಾಸಿಸುವ ಮನೆ, ಹಟ್ಟಿ, ಸ್ನಾನದ ಮನೆ ಎಲ್ಲವೂ ಮಳಿ ಹುಲ್ಲಿಂದ ನಿರ್ಮಿಸಲಾಗಿದೆ. ಕಳೆದ ಒಂದು ವರ್ಷದ ಹಿಂದೆ ವಿದ್ಯುತ್ ಬಂದಿದ್ದು ಬಿಟ್ಟರೆ ಮತ್ತೇನು ಪ್ರಗತಿ ಸಾಧಿಸಿಲ್ಲ. ಮನೆ ಗೋಡೆಯಲ್ಲಿ ಹುತ್ತ ಕಟ್ಟಿದೆ. ಒಳಗಡೆ ಇಲಿ ಹೆಗ್ಗಣಗಳು ತೋಡಿದ ಗುಳಿಗಳಿವೆ. ಹಾವುಗಳಂತೂ ಈ ಮನೆಯ ಖಾಯಂ ಸದಸ್ಯರು. ಮಳೆ ಬಂದರೆ ನೀರೆಲ್ಲಾ ಒಳಗೆ. ಜೋರು ಮಳೆ…

Read More

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ಲೇಖನ ಗಣೇಶನ ಹಬ್ಬವೆಂದರೆ ಹಾಗೆ. ಅದು ಸರ್ವರ ಸಂಭ್ರಮ. ನಾನಾ ರೂಪದಲ್ಲಿ ಪೂಜಿಸಲ್ಪಡುವ ಗಣನಾಯಕನೂ ಅಷ್ಟೇ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರಿಗೂ ಪ್ರೀತಿ. ನಿರ್ವಿಕಾರ ಮೂರ್ತಿಯನ್ನು ಬಗೆ ಬಗೆಯಲ್ಲಿ ಕಾಣುವ ಸಂಭ್ರಮ. ಚಿತ್ರ ಕಲಾವಿದೆ, 11ನೇ ತರಗತಿಯ ಕಾಮರ್ಸ್ ವಿದ್ಯಾರ್ಥಿನಿ ಶ್ರೇಯಾಳ ಗಣಪತಿಯ ಪ್ರೀತಿಯೂ ಅಂತಹದ್ದೇ. ಪ್ರತಿ ಚೌತಿಯ ಸಮಯದಲ್ಲಿಯೂ ವಿಘ್ನನಿವಾರಕನನ್ನು ವಿವಿಧ ರೂಪದಲ್ಲಿ ಚಿತ್ರಿಸುತ್ತಿದ್ದ ಆಕೆ ಈ ಭಾರಿ ಗಣೇಶ ಹಬ್ಬದ ಸಲುವಾಗಿ ಆಂಗ್ಲ ಭಾಷೆಯ 26 ವರ್ಣಮಾಲೆಗನುಸಾರವಾಗಿ A ಯಿಂದ Z ಅಕ್ಷರ ಆರಂಭಗೊಳ್ಳುವ ಗಣಪತಿಯ ಹೆಸರುಗಳನ್ನು ಕಲೆಹಾಕಿ ಹೆಸರಿಗೆ ತಕ್ಕಂತೆ 26 ರೂಪಗಳಲ್ಲಿ ಗಣಪತಿಯನ್ನು ಚಿತ್ರಿಸಿದ್ದಾಳೆ. A for Apple, B for bat, C for Cat.. ಅಂತಿದ್ದವರು ಇನ್ನು ಮುಂದೆ ಚೌತಿಯ ಸಮಯದಲ್ಲಾದರೂ A for Akhuratha, B for Buddhipriya, C for Chaturbhuj, D for Devantakanashakarin…ಅನ್ನಬಹುದೆನ್ನಿ ಗಣಪತಿಯ ಪ್ರೀತಿ: ಶ್ರೇಯಾ ನಾಲ್ಕನೆ ತರಗತಿಯಲ್ಲಿರುವಾಗಿನಿಂದ ಪ್ರತಿ ಚೌತಿಗೂ…

Read More