ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಲೇರಿಯಾ ಜ್ವರದಿಂದಾಗಿ ತಾಲೂಕಿನ ಕೊಲ್ಲೂರಿನ ಯುವತಿಯೋರ್ವಳು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟ ಘಟನೆ ವರದಿಯಾಗಿದೆ. ಮಾಜಿ ತಾಪಂ ಸದಸ್ಯ ಗೋಪಾಲಕೃಷ್ಣ ಅಡಿಗರ ಏಕೈಕ ಪುತ್ರಿಯಾದ ಭಾಗೀರತಿ ಅಡಿಗ (22) ಮೃತ ಯುವತಿ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಅನುವಂಶೀಯ ಅರ್ಚಕ ಕುಟುಂಬದ ಗೋಪಾಲಕೃಷ್ಣ ಅಡಿಗ ಮಗಳಾದ ಭಾಗೀರಥಿಗೆ ಜ್ವರ ಕಾಣಿಸಿಕೊಂಡು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಲೇರಿಯಾ ರೋಗವೆಂಬುದನ್ನು ಖಚಿತಪಡಿಸಿಕೊಂಡು ಚಿಕಿತ್ಸೆ ನೀಡಲಾಗಿತ್ತು. ಸೋಮವಾರ ರಾತ್ರಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಯುವತಿ ಮಂಗಳವಾರ ಮಧ್ಯಾಹ್ನ ಮೃತಪಟ್ಟಿದ್ದಾಳೆ. ಕುಟುಂಬದಲ್ಲಿ ಎಲ್ಲರ ಪ್ರೀತಿಪಾತ್ರಳಾಗಿದ್ದ ಭಾಗೀರಥಿಯ ಅಗಲಿಕೆ ಕುಟುಂಬಕ್ಕೆ ತೀವ್ರ ಆಘಾತವನ್ನುಂಟುಮಾಡಿದೆ. ಬಿಎಸ್ಸಿ ಪದವಿಯ ಬಳಿಕ ಎಂಬಿಎಂ ಸ್ನಾತಕೋತ್ತರ ಪದವಿ ಪೂರೈಸಿದ್ದರೆನ್ನಲಾಗಿದೆ. ಕುಂದಾಪುರ ತಾಲೂಕಿನಲ್ಲಿ ಎರಡು ವರ್ಷಗಳ ಬಳಿಕ ಮಲೇರಿಯಾ ಜ್ವರಕ್ಕೆ ಯುವತಿ ಬಲಿಯಾಗಿರುವುದು ತೀವ್ರ ಆತಂಕ ಮೂಡಿದೆ.
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷರಾಗಿ ಸದಾನಂದ ಶೇರುಗಾರ್ ಉಪ್ಪಿನಕುದ್ರು ಇವರನ್ನು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ನೇಮಕಗೊಳಿಸಿದ್ದಾರೆ. ಸದಾನಂದ ಶೇರುಗಾರ್ ಅವರು ತಲ್ಲೂರು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷರಾಗಿ, ಬಿಜೆಪಿ ತ್ರಾಸಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಹಾಗೂ ಬೈಂದೂರು ಬಿಜೆಪಿ ಕ್ಷೇತ್ರ ಸಮಿತಿಯ ಪ್ರಧಾನ ಸಮಿತಿಯ ಕಾರ್ಯದರ್ಶಿಯಾಗಿ ಮತ್ತು ಪಕ್ಷದಲ್ಲಿ ತಳಮಟ್ಟದಿಂದ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಅಸಹಿಷ್ಟುತೆಯ ನೆಪವೊಡ್ಡಿ ಪ್ರಶಸ್ತಿ ವಾಪಾಸಿ ಚಳುವಳಿಗಳಲ್ಲಿ ಮುಂಚೂಣಿಯಲ್ಲಿದ್ದ ಸಾಹಿತಿಗಳು ಇಂದು ಮತ್ತೆ ಪ್ರಶಸ್ತಿ ಪಡೆಯವ ಹಪಹಪಿಯಲ್ಲಿದ್ದಾರೆ. ಸಣ್ಣತನದ ಮನಸ್ಥಿತಿ ಹೊಂದಿರುವ ಹಾಗೂ ಅಪ್ರಾಮಾಣಿಕ ಸಾಹಿತಿಗಳಿಂದಾಗಿ, ಸಾಹಿತ್ಯ ಕ್ಷೇತ್ರವೇ ಕುಲಗೆಟ್ಟು ಹೋಗಿದೆ. ಇಲ್ಲಿ ಕೆಲಸಮಾಡುವುದು ಕೇವಲ ಪ್ರಶಸ್ತಿಗಾಗಿ ಎಂಬ ಭಾವನೆಯಿದೆ, ಜನರು ಇಲ್ಲಿನ ಪ್ರಶಸ್ತಿಗಳ ಬಗ್ಗೆ ನಂಬಿಕೆ ಕಳೆದುಕೊಂಡಿದ್ದಾರೆ, ಬದಲಾಗಿ ಲೇವಡಿ ಮಾಡುವ ಪರಿಸ್ಥಿತಿ ಎದುರಾಗಿದೆ, ಇದು ಹೀಗೆ ಮುಂದುವರಿದರೇ ಇಡೀ ಸಾಹಿತ್ಯ ಕೇತ್ರಕ್ಕೆ ಗಂಡಾಂತರ ಕಾದಿದೆ ಎಂದು ಹಿರಿಯ ಸಾಹಿತಿ ಡಾ. ಮೊಗಸಾಲೆ ಹೇಳಿದರು. ಉಪ್ಪುಂದ ಶಂಕರಕಲಾ ಮಂದಿರದಲ್ಲಿ ಕುಂದ ಅಧ್ಯಯನ ಕೇಂದ್ರ ಉಪ್ಪುಂದ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ ಹಾಗೂ ಸ್ಥಳೀಯ ಸಂಘಟನೆಗಳ ಸಹಕಾರದೊಂದಿಗೆ ಸಹಕಾರದೊಂದಿಗೆ ಉಪ್ಪುಂದದ ಹೊಳಪು ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಕುಂದಶ್ರೀ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಉಪ್ಪುಂದ ಚಂದ್ರಶೇಖರ ಹೊಳ್ಳ ದಂಪತಿ ಅನನ್ಯವಾದುದು. ಹೊಳ್ಳರು ನಿಜಕ್ಕೂ ಸಂತಸದ ಸಂತರು. ಎಲ್ಲಾ…
ಕರ್ನಾಟಕದಲ್ಲಿ ಜುಲೈ 1ನ್ನು ಪತ್ರಿಕಾ ದಿನಾಚರಣೆಯಾನ್ನಾಗಿ ಆಚರಿಸಲಾಗಿತ್ತಿದೆ. ಕನ್ನಡದ ಮೊದಲ ಪತ್ರಿಕೆ ”ಮಂಗಳೂರು ಸಮಾಚಾರ” ಜುಲೈ 1, ಕ್ರಿ.ಶ.1843ರಲ್ಲಿ ರೆವರೆಂಡ್ ಫಾದರ್ ಹರ್ಮನ್ ಮೊಗ್ಲಿಂಗ್ ಇವರ ಸಂಪಾದಕತ್ವದಲ್ಲಿ ಆರಂಭಗೊಂಡಿತು. ಈ ದಿನದ ನೆನಪಾಗಿ ಕರ್ನಾಟಕದಲ್ಲಿ ಜುಲೈ 1ನ್ನು ಪತ್ರಿಕಾ ದಿನವನ್ನಾಗಿ ಆಚರಿಸಲಾಗುತ್ತಿದೆ. 1982 ರಲ್ಲಿ ಅಸ್ತಿತ್ವಕ್ಕೆ ಬಂದ ಮಾದ್ಯಮ ಅಕಾಡೆಮಿ ಪತ್ರಿಕಾ ದಿನಾಚರಣೆಯ ಮುಂದಾಳತ್ವವನ್ನು ವಹಿಸುತ್ತಿದೆ. 1996 ರಿಂದ ಪ್ರತಿ ವರ್ಷ ಈ ಆಚರಣೆ ನಡೆಯುತ್ತಿರುವುದು ಗಮನಾರ್ಹ. ಹರ್ಮನ್ ಮೊಗ್ಲಿಂಗ್: ಕನ್ನಡದ ಮೊದಲ ಪತ್ರಿಕೆಯನ್ನು ಆರಂಭಿಸಿದ ಹರ್ಮನ್ ಮೊಗ್ಲಿಂಗ್ ಅವರನ್ನು ಕನ್ನಡ ಪತ್ರಿಕೆಯ ಪಿತಾಮಹ ಎಂದು ಕರೆಯಲಾಗಿದೆ. 1811ರಲ್ಲಿ ಜರ್ಮನಿಯ ಬ್ರಾಕನ್ ಹೀಮ್ ಎಂಬಲ್ಲಿ ಜನಿಸಿದ ರೆವರೆಂಡ್ ಹರ್ಮನ್ ಮೊಗ್ಲಿಂಗ್ ವಿದೇಶಿಗನಾದರೂ ಕನ್ನಡದಲ್ಲಿ ಅಪಾರ ಪ್ರೇಮವನ್ನಿಟ್ಟು ಕನ್ನಡಕ್ಕೆ ಸಂಬಂಧಿಸಿದ ಅನೇಕ ವಿಷಯಗಳಲ್ಲಿ ಮೊದಲಿಗನಾದವನು. 4 ಪುಟಗಳ ಪಾಕ್ಷಿಕ ಪತ್ರಿಕೆಯಾಗಿ ಹೊರಬಂದ ”ಮಂಗಳೂರು ಸಮಾಚಾರ” ಕನ್ನಡದ ಮೊದಲ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಕಲ್ಲಚ್ಚಿನಲ್ಲಿ ಮುದ್ರಿತಗೊಳ್ಳುತ್ತಿದ್ದ ಪತ್ರಿಕೆಯ ಬೆಲೆ ಆ 2 ಪೈಸೆಯಾಗಿತ್ತು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ನಮ್ಮ ಸಾಮರ್ಥ್ಯದ ಬಗೆಗೆ ಭ್ರಮೆಗಳನ್ನು ಸೃಷ್ಟಿಸಿಕೊಳ್ಳದೆ ವಾಸ್ತವದ ಒಳಹೊಕ್ಕು ಸತ್ಯವನ್ನು ಅರಿತುಕೊಳ್ಳಬೇಕು.ನಮ್ಮ ಬುದ್ದಿವಂತಿಕೆ ಎನ್ನುವುದು ಸಮಾಜದ ಒಳಿತಿಗೆ ತೆರೆದುಕೊಂಡಾಗ ಮಾತ್ರ ಬದುಕಿನ ಸಾರ್ಥಕತೆ ಸಾಧ್ಯ ಎಂದು ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸುಬ್ರಮಣ್ಯ ಭಟ್ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾರ‍್ಯಕ್ರಮದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ದೃಷ್ಟಿ ಬಿಡುಗಡೆಗೊಳಿಸಿ ಮಾತನಾಡಿದರು. ಕನ್ನಡದಲ್ಲಿ ಸ್ತ್ರೀ ಸಾಹಿತ್ಯಕ್ಕೆ ಮತ್ತಷ್ಟು ಮನ್ನಣೆ ಸಿಗಬೇಕಿದೆ.ಸಾಹಿತ್ಯದಿಂದ ಬದುಕಿನ ನಿಜವಾದ ಸಂತೋಷವನ್ನು ಅನುಭವಿಸಲು ಸಾಧ್ಯ.ಆ ದಿಸೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಸರಸ್ವತಿ ವಿದ್ಯಾಲಯ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಮ್ ಸಿ. ಅಧ್ಯಕ್ಷತೆ ವಹಿಸಿದ್ದರು. ಸರಸ್ವತಿ ವಿದ್ಯಾಲಯ ವಿದ್ಯಾ ಸಂಸ್ಥೆಗಳ ಕಾರ‍್ಯದರ್ಶಿ ಎನ್ ಸದಾಶಿವ ನಾಯಕ್ ಶುಭ ಹಾರೈಸಿದರು.ವಿದ್ಯಾರ್ಥಿನಿ ಸುರಕ್ಷಾ ಭಾವಗೀತೆಯ ಮೂಲಕ ಕಾರ‍್ಯಕ್ರಮಕ್ಕೆ ಚಾಲನೆ ನೀಡಿದರು. ಕನ್ನಡ ಉಪನ್ಯಾಸಕ ಎಚ್ ಸುಜಯೀಂದ್ರ ಹಂದೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಡೆಯ ಬಾರದ ಕರಾಳ ಘಟನೆಯೊಂದು ನಡೆದು ಹೋಗಿದೆ ಇನ್ನೂ ಅರಳದ ದೇವರ ತೋಟದ ಕುಸಮಗಳು ಮುದುಡಿಹೋಗಿವೆ. ಆ ಮುಗ್ಧ ಕಂದಮ್ಮ ಗಳ ಪುನೀತ ಆತ್ಮಗಳಿಗೆ ದೇವರ ಆಸ್ಥಾನದಲ್ಲಿ ಶಾಂತಿ ಲಭಿಸಲಿ, ಹೊತ್ತಲ್ಲದ ಹೊತ್ತಿನಲ್ಲಿ ತಮ್ಮ ಕರುಳ ಕುಡಿಗಳನ್ನು ಅಗಲಿರುವ ಮಕ್ಕಳ ಹೆತ್ತವರಿಗೆ, ಪೋಷಕರಿಗೆ ಆ ಅಲ್ಲಾಹು ನೋವನ್ನು ಮಣಿಸುವ , ಸಹಿಸುವ ಶಕ್ತಿಯನ್ನು ನೀಡಲಿ ಎಂದು ಕುಂದಾಪುರ ಜಾಮೀಯಾ ಮಸೀದಿಯ ಖತೀಬರಾದ ಜನಾಬ್ ಅಬ್ದುಲ್ ರಹಿಮಾನ್ ಹೇಳಿದರು. ತ್ರಾಸಿ ಶಾಲಾ ಮಕ್ಕಳ ದುರಂತದ ಶುಕ್ರವಾರದ ಜುಮ್ಮಾ ನಮಾಜಿನ ನಂತರ ಖತೀಬರ ಉಪಸ್ಥಿತಿಯಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ ಊರ ಪರವೂರ ಅಸಂಖ್ಯಾತ ಮುಸ್ಲಿಮ್ ಬಾಂಧವರು ಮರೆಯಾದ ಮುಗ್ಧ, ಪುಟ್ಟ ಜೀವಗಳಿಗೆ ಶೃದ್ಧಾಂಜಲಿ ಕೋರಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ಅಂಜುಮನ್ ಮುಸ್ಲಿಮೀನ್ ಸಂಸ್ಥೆ, ಜಮ್ಯಿಯತುಲ್, ಫಲ್ಹಾ, ಮುಸ್ಲಿಮ್ ವೆಲ್ ಫೆರ್ ಘಟಕಗಳೂ ಭಾಗವಹಿಸಿ ತಮ್ಮ ಆಶ್ರುತರ್ಪಣವನ್ನು ಸಲ್ಲಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಮೇರಿಕದ ಜಾರ್ಜಿಯಾ ರಾಜ್ಯದಲ್ಲಿನ ಅಟ್ಲಾಂಟಾ ನಗರದಲ್ಲಿ ಜುಲೈ 1ರಿಂದ ಮೂರು ದಿನ ನಡೆಯಲಿರುವ ’ವಿಶ್ವ ಕೊಂಕಣಿ ಸಮ್ಮೇಳನ 2016’ ರಲ್ಲಿ ಖ್ಯಾತ ಜಾದೂಗಾರ ಚಿತ್ರನಟ ಓಂಗಣೇಶ್ ಉಪ್ಪುಂದ ವಿಶೇಷ ಸಾಂಸ್ಕೃತಿಕ ಅತಿಥಿಯಾಗಿ ಆಹ್ವಾನ ಪಡೆದಿದ್ದಾರೆ. ಕನ್ನಡ ಕೊಂಕಣಿ ಎರಡೂ ಭಾಷೆಯಲ್ಲಿ ಪ್ರವಾಸ ಕಥನ, ಅಂಕಣಗಳಲ್ಲದೆ ಹಲವು ನಾಟಕಗಳ ಅನುವಾದಕರಾಗಿ ರಾಜ್ಯ ಕೊಂಕಣಿ ಅಕಾಡೆಮಿಯ ಪ್ರಶಸ್ತಿ ಪಡೆದ ಸಾಹಿತಿಯಾಗಿ ಮಾನ್ಯರಾದ ಓಂಗಣೇಶ್ ತಮ್ಮ 40 ದೇಶದ ಪ್ರವಾಸಾನುಭವ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಿಂದ ಅಮೇರಿಕಾದ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರದಲ್ಲೂ ತಮ್ಮ ಭಾಷೆಯ ಮೂಲ ಪರಂಪರೆ ಸಂಸ್ಕೃತಿಗಳನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ 1996ರಿಂದ ನ್ಯೂಜರ್ಸಿ, ಚಿಕಾಗೊ, ಹ್ಯೂಸ್ಟನ್, ಲಾಸ್ ಎಂಜಲೀಸ್, ಸಾನ್ ಫ್ರಾನ್ಸಿಸ್‌ಕೊ, ಟೊರೆಂಟೊ ಮುಂತಾದ ನಗರಗಳಲ್ಲಿ ಯಶಸ್ವೀ ಸಮ್ಮೇಳನ ಸಂಘಟಿಸುತ್ತಾ ಬಂದ ’ನಾರ್ತ್ ಅಮೆರಿಕನ್ ಕೊಂಕಣಿ ಅಸೊಶಿಯೆಷನ್’(NAKA) ಈ ಬಾರಿ ದಕ್ಷಿಣದ ಜಾರ್ಜಿಯಾ ಕೊಂಕಣಿ ಸಂಘಟನೆಯ ಸಹಯೋಗದೊಂದಿಗೆ ಅಲ್ಲಿನ ಇಂಟರ್ ನ್ಯಾಷನಲ್ ಕನ್‌ವೆನ್ಷನ್ ಸೆಂಟರ್ ನಲ್ಲಿ…
ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ ಕುಂದಾಪುರ: ಆ ಪುಟಾಣಿಗಳಿಗೆ ಶಾಲೆಗೆ ಹೋಗುವ ತವಕ. ಅಮ್ಮ ಅಕ್ಕರೆಯಿಂದ ಸ್ನಾನ ಮಾಡಿಸಿ ಮಡಿಸಿಟ್ಟ ಯುನಿಫಾರ್ಮ್ ತೊಡಿಸಿ, ಪ್ರೀತಿಯಿಂದ ತಲೆಬಾಚಿ ಮುಖಕ್ಕೆ ತೆಳ್ಳಗಿನ ಪೌಡರ್ ಲೇಪಿಸಿದಾಗ ಗೋಡೆಗೆ ತಗಲಿಸಿದ್ದ ಗಡಿಯಾರದ ಪುಟ್ಟ ಮುಳ್ಳು 9 ಅಂಕೆಯ ಮೇಲೆ ತಣ್ಣಗೆ ಒರಗಿತ್ತು. ಅಬ್ಬಾ ಶಾಲೆಯ ಕಾರು ಬರುವ ಹೊತ್ತಾಯಿತು, ಮಮ್ಮಿ ಟಿಫನ್ ಬಾಕ್ಸ್ ಎಲ್ಲಿ ಎಂದು ಕೇಳಿದ ಮಗುವಿಗೆ ಇಗೋ ರೆಡಿ ಎನ್ನುವಷ್ಟರಲ್ಲಿ ಹೊರಗೆ ಕಾರಿನ ಸದ್ದು. ಮಮ್ಮಿ ಬಾಯ್.. ಎಂದ ಮಕ್ಕಳು ಕಾರಿನಲ್ಲಿ ಕುಳಿತೇ ಬಿಟ್ಟಿದ್ದವು. ಅದು ಮಕ್ಕಳು ಹೇಳಿದ ಕಟ್ಟಕಡೆಯ ಬಾಯ್.. ಆಗಿತ್ತಾ! ಇನ್ನೆಂದೂ ಆ ನಿಷ್ಪಾಪಿ ಕರುಳಿನ ಕುಡಿಗಳು ಮತ್ತೆ ಮನೆಯ ಹೊಸಿಲಿನ ಒಳಗೆ ಕಾಲಿಡಲಾರವು ಎಂಬ ಒಂದೂ ಶಂಕೆ ಇಲ್ಲದೇ ಮಕ್ಕಳಿಗೆ ಟಾಟಾ ಹೇಳಿದ ಹೆತ್ತವರಿಗೆ ಶಾಲೆಯ ಅನತಿ ದೂರದಲ್ಲಿ ಸಾವೆಂಬ ಸಾವು ಕಕ್ಕರುಗಾಲಿನಲ್ಲಿ ಮಕ್ಕಳಿಗಾಗಿ ಸಹನೆಯಿಂದ ಪಹರೆ ಕುಂತಿರುವ ವಿಷಯವಾದರೂ ಎಲ್ಲಿ ಗೊತ್ತಿತ್ತು? ಎಂದಿನಂತಿರಲಿಲ್ಲಾ ಮುಂದಿನ ಆ ಕರಾಳ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಿಕಾರಿಗೆಂದು ಒಟ್ಟಿಗೆ ತೆರಳಿದ್ದ ಸ್ನೇಹಿತನನ್ನು ಗುಂಡಿಟ್ಟು ಕೊಂದು ಘಟನೆ ಹೇರೂರು ಗ್ರಾಮದ ಮೇಕೋಡು ಜಕ್ಷನ್ ಬಳಿ ನಡೆದಿದ್ದು, ಘಟನೆಯಲ್ಲಿ ಕಂಬದಕೋಣೆ ಗ್ರಾಮದ ಆಚಾರಬೆಟ್ಟು ನಿವಾಸಿ ಪ್ರಶಾಂತ ಶೆಟ್ಟಿ(24) ಗುಂಡೇಟಿಗೆ ಬಲಿಯಾಗಿದ್ದಾನೆ. ಗುಂಡಿಕ್ಕಿ ಕೊಂದಿದ್ದಾನೆ ಎನ್ನಲಾಗಿರುವ ಮೇಕೊಡಿನ ಅಂಕಿತ ಶೆಟ್ಟಿ(24) ಹಾಗೂ ಇನ್ನಿರ್ವರನ್ನು ಬಂಧಿಸಲಾಗಿದೆ. ಘಟನೆಯ ವಿವರ: ಸ್ನೇಹಿತರಾದ ಪ್ರಶಾಂತ ಶೆಟ್ಟಿ, ಅಂಕಿತ್ ಶೆಟ್ಟಿ, ಮನೀಷ್ ಶೆಟ್ಟಿ ಹಾಗೂ ದೀಪಕ್ ಶೆಟ್ಟಿ ಎಂಬುವವರು ಒಟ್ಟಾಗಿ ಮಧ್ಯಾಹ್ನ ಅಂಕಿತ್ ಶೆಟ್ಟಿಯ ಮನೆಯಲ್ಲಿ ಗಡಿಪೂಜೆ ಊಟವನ್ನು ಮುಗಿಸಿ, ಸಂಜೆಯ ವರೆಗೆ ಮನೆಯ ಸಮೀಪದಲ್ಲಿಯೇ ಕ್ರಿಕೆಟ್ ಆಡಿಕೊಂಡು ಬಳಿಕ ನಾವುಂದ ಬಾರೊಂದರಲ್ಲಿ ಕಂಠಪೂರ್ತಿ ಕುಡಿದು ಶಿಕಾರಿಗೆಂದು ತೆರಳುವುದಾಗಿ ನಿರ್ಧರಿಸಿ ಮರಳಿ ಮೇಕೋಡಿನ ಅಂಕಿತನ ಮನೆಗೆ ತೆರಳಿದ್ದಾರೆ. ಮನಿಷ್ ಶೆಟ್ಟಿ ಹಾಗೂ ದೀಪಕ್ ಶೆಟ್ಟಿ ಅಂಕಿರ ಶೆಟ್ಟಿಯ ಇನ್ನೊಂದು ಮನೆಯಲ್ಲಿ ಹೋಗಿ ಮಲಗಿಕೊಂಡರೇ, ಪ್ರಶಾಂತ ಶೆಟ್ಟಿ ಅಂಕಿತ ಶೆಟ್ಟಿಯ ಮನೆಗೆ ತೆರಳಿದ್ದಾನೆ. ಅಲ್ಲಿ ಅಂಕಿತ್ ಬಂದೂಕು ಹಿಡಿಕೊಂಡಿರುವಾಗ ಟ್ರಗರ್ ಮೇಲೆ ಕೈಯಿಟ್ಟಿದ್ದರಿಂದ…
ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ | 17 ಜೂನ್ 2015. ಬೈಂದೂರಿನ ಇತಿಹಾಸದಲ್ಲಿ ಎಂದೂ ಮರೆಯಲಾಗದ ಕರಾಳ ದಿನವದು. ಎಲ್ಲರಂತೆಯೇ ನೂರಾರು ಕನಸು ಹೊತ್ತ ಕಂಗಳು ಅಂದು ಕಮರಿ ಹೋಗಿದ್ದವು. ಮನುಷ್ಯರೂಪಿ ವ್ಯಾಫ್ರನ ಅಟ್ಟಹಾಸಕ್ಕೆ ಆ ಕುಗ್ರಾಮದ ಹುಡುಗಿ ನಲುಗಿ ಹೋಗಿದ್ದಳು. ಭವಿಷ್ಯದ ಸ್ಪಷ್ಟ ಗುರಿ ಹೊಂದಿದ್ದ ದಿಟ್ಟ ಹುಡುಗಿಯ ಬದುಕಿನ ದಾರಿಗೆ ಅಂತ್ಯ ಹಾಡಲಾಗಿತ್ತು. ಹೌದು. ಅಂದು ಬೈಂದೂರು ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಅಕ್ಷತಾ ದೇವಾಡಿಗ ಎಂಬ ಹೆಣ್ಣಮಗಳು ತನ್ನ ಮನೆಗೆ ಸಾಗುವ ಹಾದಿಯಲ್ಲಿಯೇ ವಿಧಿಯ ಕ್ರೂರಲೀಲೆ ಬಲಿಯಾಗಿ ಹೋಗಿದ್ದಳು ಅಕ್ಷತಾಳ ಸಾವಿನ ಕರಾಳತೆಗೆ ಬೈಂದೂರಿನ ಜನತೆ ಬೆಚ್ಚಿ ಬಿದ್ದಿದ್ದರು. ವಿದ್ಯಾರ್ಥಿ ಸಮೂಹ ಅಕ್ಷರಶಃ ಆಕ್ರೋಶಭರಿತರಾಗಿ ಬೀದಿಗಿಳಿದಿದ್ದರು. ಸ್ವತಃ ಪೊಲೀಸ್ ವರಿಷ್ಠಾಧಿಕಾರಿಗಳೇ ತನಿಕೆಗೆ ಮುಂದಾದರು. ಕೊನೆಗೆ ಆರೋಪಿಯ ಬಂಧನವೂ ಆಯಿತು. ಆದರೆ ಅಕ್ಷತಾ ಮಾತ್ರ ಮರಳಿ ಬರಲಿಲ್ಲ! ಬದುಕಿದ್ದರೆ ಇಂಜಿನಿಯರಿಂಗ್ ಓದುತ್ತಿದ್ದಳು: ಹೇನಬೇರಿನ ಬಾಬು ದೇವಾಡಿಗ ಹಾಗೂ…
