Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಉಡುಪಿ: ವಿಧಿಯಾಟವೆಂಬುದು ಎಂಥಹ ಕ್ರೂರವಾದುದು ಎಂಬುದಕ್ಕೆ ಈ ಯುವಕನೇ ಸಾಕ್ಷಿ. ಛಲದಿಂದ ಬದುಕು ಕಟ್ಟಿಕೊಳ್ಳಬೇಕೆಂಬುದು ಹೊರಟ ಯುವಕ ಈಗ ಹಾಸಿಗೆಯಿಂದಾಚೆ ಏಳಲಾರದೆ ಪರಿತಪಿಸುತ್ತಿರುವ ರೀತಿ ಮನಕಲಕುವಂತದ್ದು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆಯ ನಿವಾಸಿ ಕೃಷ್ಣಯ್ಯ ಶೆಟ್ಟಿ ಮತ್ತು ಪ್ರೇಮಾ ಎಂಬುವವರ ಎರಡನೇ ಮಗನಾದ ನಾಗರಾಜ ಶೆಟ್ಟಿ (26) ಕಳೆದ 10 ವರ್ಷಗಳಿಂದ ಹಾಸಿಗೆಯಿಂದ ಎಳಲಾರದೇ ತನ್ನೆಲ್ಲಾ ಬೇಕು-ಬೇಡಗಳಿಗೆ ಮತ್ತೊಬ್ಬರನ್ನು ಅವಲಂಬಿಸಬೇಕಾದ ಸ್ಥಿತಿಯಲ್ಲಿ ಮಲಗಿದ್ದಾರೆ. ನಾಗರಾಜ ಅವರ ಮನೆಯಲ್ಲಿ ತೀರಾ ಬಡತನವಾದ್ದರಿಂದ ವಿದ್ಯಾಭ್ಯಾಸವನ್ನು ಪಿಯುಸಿಗೆ ಮೊಟಕುಗೊಳಿಸಿದ ಖಾಸಗಿ ವಿದ್ಯುತ್ ಗುತ್ತಿಗೆದಾರರಲ್ಲಿ ಬಳಿ ವಿದ್ಯುತ್ ಕಂಬ ಹಾಕುವ ಹಾಗೂ ತಂತಿ ಎಳೆಯುವ ಕೆಲಸಕ್ಕೆ ಸೇರಿದರು. 2005ರಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಕಂಬದಿಂದ ಆಯತಪ್ಪಿ ಕೆಳಕ್ಕೆ ಬಿದ್ದಿದ್ದರಿಂದ ಅವರ ಬೆನ್ನುಮೂಳೆ ಮುರಿತಕ್ಕೊಳಗಾಗಿತ್ತಲ್ಲದೇ ಮೆದುಳು ಬಳ್ಳಿಯು ಜಖಂಗೊಂಡಿತ್ತು. ಇದರಿಂದ ಸೊಂಟದ ಕೆಳಭಾಗ ನಿಶ್ಚಲವಾಗಿತ್ತು. ಸ್ವಂತ ದುಡಿಮೆಯಲ್ಲಿ ಓದು ಮುಂದುವರಿಸಬೇಕು, ಮುಂದೆ ಒಳ್ಳೆಯ ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಎಂದು ಹೊರಟ್ಟಿದ್ದ ಯುವಕ ಬದುಕು ಹಾಸಿಗೆಗೆ ಸೀಮಿತವಾಯಿತು. ಮಣಿಪಾಲದ ಕೆಎಂಸಿಯಲ್ಲಿ…

Read More

ಕುಂದಾಪುರ: ಇಲ್ಲಿನ ಪ್ರತಿಷ್ಠಿತ ಭಂಡಾರ್‌ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ ಕೆ. ಕಾರ್ತಿಕೇಯ ಮಧ್ಯಸ್ಥ ಆಯ್ಕೆಯಾಗಿದ್ದು, ಗೌರವಾಧ್ಯಕ್ಷರಾಗಿ ಡಾ. ಎನ್. ಪಿ. ನಾರಾಯಣ ಶೆಟ್ಟಿ, ಕಾರ್ಯದರ್ಶಿಯಾಗಿ ರಂಜಿತ್ ಕುಮಾರ್ ಶೆಟ್ಟಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಕೃಷ್ಣಾನಂದ ಚಾತ್ರ, ಡಾ.ಸುಧಾಕರ ನಂಬಿಯಾರ್, ಬುದ್ದರಾಜ ಶೆಟ್ಟಿ, ಸಂದೀಪ್ ಎ. ಪೂಜಾರಿ, ಖಜಾಂಚಿಯಾಗಿ ಪ್ರೊ ಕೆ. ಶಾಂತಾರಾಮ್, ಜೊತೆ ಕಾರ್ಯದರ್ಶಿಯಾಗಿ ಅರ್ಚನ, ಮೈತ್ರಿ, ಜಯಮಾಲ, ನಿರ್ದೇಶಕರಾಗಿ ಸಚಿನ್ ನಕ್ಕತ್ತಾಯ, ಚಂದ್ರಕಾಂತ್ (ಚನ್ನ), ರಾಜೇಂದ್ರ, ಪ್ರವೀಣ್ ಕುಮಾರ್ ಟಿ., ಸುರೇಶ ಹಂಗಳೂರು, ದೀಪಕ್ ಕುಮಾರ್ ನಾವುಂದ, ರಾಘವೇಂದ್ರ ಭಟ್, ಸತೀಶ್ ದೇವಾಡಿಗ, ಸಲಹಾ ಸಮಿತಿ ಸದಸ್ಯರಾಗಿ ರಾಜೀವ ಕೋಟ್ಯಾನ್, ಶಶಿಧರ ಶೆಟ್ಟಿ ಮಡಾಮಕ್ಕಿ, ಪ್ರೊ ಅರುಣಾಚಲ ಮೈಯ್ಯ, ನವೀನ್ ಕುಮಾರ್ ಶೆಟ್ಟಿ ಆಯ್ಕೆಗೊಂಡರು. ಇತ್ತೀಚೆಗೆ ನಡೆದ ಸಮಾನ್ಯ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

Read More

ಕುಂದಾಪುರ: ತಾಲೂಕಿನ ಕಂಡ್ಲೂರಿನಲ್ಲಿ ತನ್ನ ಮನೆಯ ಬಾವಿ ಕಟ್ಟೆಯ ಆವರಣ ಮೇಲೆ ಮಗುವನ್ನು ಕುಳ್ಳಿರಿಸಿಕೊಂಡು ಉಟ ಮಾಡಿಸುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದ ಮಗು ಮೃತಪಟ್ಟ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಮುದ್ದು ಕಂದಮ್ಮ ಶೆಹರಾಝ್(11 ತಿಂಗಳು) ಮೃತ ದುರ್ದೈವಿ ಘಟನೆಯ ವಿವರ: ಕಡ್ಲೂರಿನ ರಾಮಮಂದಿರ ರಸ್ತೆಯ ದಾರು ಸ್ಸೂರೂರ್ ಸರ್ಫರಾಜ್ ಅವರ ಪತ್ನಿ ಹೀನಾ ಅವರು ಎಂದಿನಂತೆ ತನ್ನ ಮನೆಯ ಬಳಿ ಇರುವ ಬಾವಿ ಕಟ್ಟೆಯ ಮೇಲೆ ಮಗುವನ್ನು ಹಿಡಿದು ಕೂರಿಸಿಕೊಂಡು ಊಟ ಮಾಡಿಸುತ್ತಿದ್ದರು. ಊಟ ಮಾಡುತ್ತಿದ್ದ ಮಗು ಕೊಸರಿಕೊಂಡಗ ಒಮ್ಮೆಲೆ ಆಯತಪ್ಪಿ ಬಾವಿಗೆ ಬಿದ್ದಿತ್ತು. ಮಗುವನ್ನು ರಕ್ಷಿಸಲು ತಾಯಿಯೂ ಬೊಬ್ಬೆ ಹಾಕುತ್ತಾ ತಕ್ಷಣ ಬಾವಿಗೆ ಹಾರಿದ್ದಳು. ತಾಯಿಯ ಬೊಬ್ಬೆ ಕೇಳಿದ ನೆರೆಹೊರೆಯವರು ಅಲ್ಲಿಗೆ ಧಾವಿಸಿ ಬಂದು ತಾಯಿ ಮಗುವನ್ನು ರಕ್ಷಿಸಲು ಬಾವಿಗಿಳಿದರಾದರೂ ಅದಾಗಲೇ ಮಗುವಿನ ಪ್ರಾಣಪಕ್ಷಿ ಹಾರಿಹೋಗಿತ್ತು. ತಾಯಿ ಜೀವನ್ಮರಣದ ಮಧ್ಯೆ ಹೋರಾಟುತ್ತಿದ್ದಳು. ತಕ್ಷಣ ತಾಯಿ ಮಗುವನ್ನು ಕುಂದಾಪುರದ ಆಸ್ಪತ್ರೆಗೆ ಸಾಗಿಸಿದರಾದರೂ ವೈದ್ಯರು ಮಗು ಮೃತ ಪಟ್ಟಿರುವುದನ್ನು ದೃಢಪಡಿಸಿದರು.  ದುಬೈನಲ್ಲಿ…

Read More

ಬೈಂದೂರು: ಇಲ್ಲಿನ ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದ ಶ್ರೀ ಮನ್ಮಹಾ ರಥೋತ್ಸವಕ್ಕೆ ಎಪ್ರಿಲ್ 24ರಂದು ಜರುಗಲಿದ್ದು, ಹಬ್ಬದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಇಡಿ ನಗರವೇ ಸಜ್ಜಾಗಿದೆ. ಚಾರಿತ್ರಿಕ ಹಿನ್ನೆಲೆಯುಳ್ಳ ಬೈಂದೂರು ರಥೋತ್ಸವದಲ್ಲಿ ಊರ ಪರವೂರ ಸಾವಿರಾರು ಭಕ್ತಸಮೂಹ ಪಾಲ್ಗೊಂಡು ಪುನೀತರಾಗುತ್ತಾರೆ. ಕಲಾವೈಭವಗಳಿಂದ ಕಂಗೊಳಿಸುವ ದೇವಾಲಯಕ್ಕೆ ವಾರ್ಷಿಕ ರಥೋತ್ಸವ ಇನ್ನಷ್ಟು ಮೆರಗನ್ನು ನೀಡುತ್ತದೆ. ರಥಕ್ಕೆ ಗರ್ನಪಟ್ಟೆ ಕಟ್ಟಿದ ಹನ್ನೊಂದು ದಿನಗಳಿಗೆ ರಥೋತ್ಸವ ನಡೆಯುವುದೆಂಬ ಸೂಚನೆ ದೊರೆಯುತ್ತದೆ. ಒಟ್ಟು ಏಳು ದಿನಗಳ ಕಾಲ ನಡೆಯುವ ಉತ್ಸವವು ಧಾರ್ಮಿಕ ಕಾರ್ಯಗಳಿಂದ ಆರಂಭಗೊಳ್ಳುತ್ತದೆ. ಈ ಮಧ್ಯೆ ನಾಕಟ್ಟೆ ಉತ್ಸವ, ಪಡುವರಿ ಕಟ್ಟೆ ಉತ್ಸವ, ಬಂಕೇಶ್ವರ ಕಟ್ಟೆ ಉತ್ಸವ ನಡೆದ ಬಳಿಕ ರಥೋತ್ಸವ, ಅವಭೃಥೋತ್ಸವ ಕೊನೆಯಲ್ಲಿ ನಗರೋತ್ಸವ ನಡೆಯುತ್ತದೆ. ರಥೋತ್ಸವದ ಪೂರ್ವದಲ್ಲಿ ಮುಸ್ಲಿಂ ಭಾಂದವರನ್ನು ಆಹ್ವಾನಿಸುವ, ರಥೋತ್ಸವದ ಆರಂಭದಲ್ಲಿ ಬೈಂದೂರಿನ ಪೊಲೀಸ್ ಠಾಣಾಧಿಕಾರಿಯನ್ನು ಕರೆತಂದು ಚಾಲನೆ ದೊರಕಿಸುವ ಸಂಪ್ರದಾಯ ಇಂದಿಗೂ ರೂಢಿಯಲ್ಲಿದೆ. ನಗರೋತ್ಸವದಲ್ಲಿ ಜಾತಿ ಮತ ಭೇದವಿಲ್ಲದೇ ಎಲ್ಲಾ ಧರ್ಮಿಯರೂ ಪಾಲ್ಗೊಂಡು ಸಂಭ್ರಮಿಸುತ್ತಾರೆ. ರಥೋತ್ಸವದ ಸಮಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು…

Read More

ಕುಂದಾಪುರ: ಕಳೆದ ವಾರ ಗೋಪಾಡಿಯಲ್ಲಿ ಗರ್ಭಿಣಿಯನ್ನು ಮಹಿಳೆಯನ್ನು ಅತ್ಯಾಚಾರಗೈದು ಕೊಲೆ ನಡೆಸಿರುವ ಪ್ರಕರಣವನ್ನು ಖಂಡಿಸಿ ಹಾಗೂ ಹತ್ಯೆ ಗೀಡಾದ ಮಹಿಳೆಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕುಂದಾಪುರ ತಾಲೂಕಿನ ಮಹಿಳಾ ಮಿತ್ರರು ಹಾಗೂ ಮಕ್ಕಳ ಮಿತ್ರರು, ಅಂಗನವಾಡಿ ಕಾರ್ಯಕರ್ತರು, ಮಹಿಳಾ ಸಂಘಟನೆ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ಕುಂದಾಪುರದ ಶಾಸ್ತ್ರೀ ವೃತ್ತದಿಂದ ಕಾಲ್ನಡಿಗೆಯಲ್ಲಿ ಮೆರವಣಿಗೆ ಮೂಲಕ ಕುಂದಾಪುರ ಮಿನಿ ವಿಧಾನಸೌಧಕ್ಕೆ ತೆರಳಿದ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿ ಚಾರುಲತಾ ಸೋಮಲ್‌ ಅವರಿಗೆ ಬಳಿಕ ಪೊಲೀಸ್‌ ವೃತ್ತ ನಿರೀಕ್ಷಕ ಪಿ.ಎಂ. ದಿವಾಕರ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ, ಮಕ್ಕಳ ಮಿತ್ರ ರವೀಂದ್ರ ದೊಡ್ಮನೆ ಕರಾವಳಿಯಲ್ಲಿ ಹೆಚ್ಚುತ್ತಿರುವ ಮಹಿಳೆಯ ಹಾಗೂ ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಕರಾವಳಿಯ ಹಲವಾರು ಕಡೆ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಅಧ್ಯಕ್ಷೆ ಫಿಲೋಮಿನಾ, ದಿ ಕನ್ಸ್‌ರ್ರ್ಡ್ ಫಾರ್‌…

Read More

ಬೈಂದೂರು: ಈ ನೆಲದ ಸನಾತನ ಧರ್ಮದ ಅಂದಿನ ಕಂದಾಚಾರಗಳ ಬದಲಿಗೆ ಸದಾಚಾರ ಮತ್ತು ಸಾತ್ವಿಕತೆಗೆ ಒತ್ತುಕೊಟ್ಟು ಜನಸಾಮಾನ್ಯರಿಗೆ ಭಕ್ತಿ ಪ್ರಧಾನವಾದ ಆರಾಧನೆಯ ಮಾರ್ಗವನ್ನು ತೋರಿಸಿದವರು ಆದಿಶಂಕರಾಚಾರ್ಯರು. ಸಂಸ್ಕೃತದಲ್ಲಿ ಸುಲಲಿತ ಕಾವ್ಯ ಮನೋ ಭೂಮಿಕೆಯಿಂದ ಅವರು ರಚಿಸಿದ ಸ್ತೋತ್ರಗಳು ಭಾವಪೂರ್ಣವಾಗಿವೆ ಎಂದು ವೇ|ಮೂ|ಸುಬ್ರಹ್ಮಣ್ಯ ಭಟ್‌ ಬಾಡ ಅವರು ಹೇಳಿದರು. ಅವರು ಶಂಕರ ತತ್ವ ಪ್ರಸಾರ ಸಮಿತಿ ಇವರ ಆಶ್ರಯದಲ್ಲಿ ಬೈಂದೂರು ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ನಡೆದ ಶಂಕರ ಜಯಂತಿಯ ಸರಣಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಉಪನ್ಯಾಸ ನೀಡುತ್ತಾ ಮಾತನಾಡಿದರು. ಶ್ರೀ ಭಗವದ್ಗೀತಾ ಜಯಂತಿ ಆಚರಣೆಯ ಸಮಿತಿ ಅಧ್ಯಕ್ಷ ರಾಮಕೃಷ್ಣ ಬಿಜೂರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬೈಂದೂರು ಪರಿಸರದಲ್ಲಿ ಸ್ವರ್ಣವಲ್ಲಿ ಮಠದ ಗೀತಾ ಜಯಂತಿ ಮತ್ತು ಶ್ರೀ ಶೃಂಗೇರಿ ಮಠದ ಶಂಕರ ತತ್ವ ಪ್ರಸರಣ ಕಾರ್ಯಕ್ರಮವು ಆಸ್ತಿಕರಲ್ಲಿ ಧಾರ್ಮಿಕ ಪ್ರಜ್ಞೆ ಮತ್ತು ಜೀವನ ಮೌಲ್ಯಗಳನ್ನು ವೃದ್ಧಿಸುವಲ್ಲಿ ಸಹಕಾರಿಯಾಗಲಿದೆ ಎಂದರು. ಶಂಕರ ತತ್ವ ಪ್ರಸರಣಾ ಸಮಿತಿಯ ಸಂಚಾಲಕ ಉಪ್ಪುಂದ ಚಂದ್ರಶೇಖರ ಹೊಳ್ಳರು…

Read More

ಗಂಗೊಳ್ಳಿ: ಅವಕಾಶಗಳು ಒದಗಿಬಂದಾಗ ಕೈಚೆಲ್ಲಿ ಕುಳಿತುಕೊಂಡಲ್ಲಿ ಉಜ್ವಲ ಸಾಧನೆ ಮತ್ತು ಸುಪ್ತ ಪ್ರತಿಭೆ ಹೊರಹೊಮ್ಮುವ ಮಾರ್ಗವೇ ತಪ್ಪಿಹೋಗುತ್ತದೆ. ಅವಕಾಶಗಳು ದೊಡ್ಡದಿರಲಿ, ಚಿಕ್ಕದಿರಲಿ ಅದನ್ನು ಬಾಚಿಕೊಂಡು ಉತ್ತಮವಾಗಿ ಬಳಸಿಕೊಂಡಾಗ ಮಾತ್ರ ಶ್ರೇಷ್ಠ ಕಾರ್ಯಗಳನ್ನು ರೂಪಿಸಲು ಸಾಧ್ಯ ಎಂದು ಸಾಮಾಜಿಕ ಕಾರ್ಯಕರ್ತ ಮೋಹನಚಂದ್ರ ಕಾಳಾವರ ಅವರು ಹೇಳಿದರು. ಬಸವ ಜಯಂತಿಯ ಅಂಗವಾಗಿ ಮೇಲ್‌ಗಂಗೊಳ್ಳಿ ಬಾವಿಕಟ್ಟೆಯ ಶ್ರೀ ಬಸವೇಶ್ವರ ಸಮಾಜ ಮಂದಿರ ಹಾಗೂ ಶ್ರೀ ಬಸವೇಶ್ವರ ಬಾಲಕರ ಭಜನಾ ತಂಡ ಇವರ ವತಿಯಿಂದ ಆಯೋಜಿಸಲಾದ ಬಸವ ಜಯಂತ್ಯುತ್ಸವ ಮತ್ತು ಉಡುಪಿ ಜಿಲ್ಲಾ ಮಟ್ಟದ ಚಿಣ್ಣರ ಭಜನಾ ಸ್ಪರ್ಧೆ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು 2012ನೇ ಸಾಲಿನ ರಾಜೇಶ್ ಶಿಬಾಜೆ ಗ್ರಾಮೀಣ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಅವರನ್ನು ಸಮ್ಮಾನಿಸಿ ಮಾತನಾಡಿದರು. ಮುಖ್ಯ ಅತಿಥಿ ಭಜನಾ ಸ್ಪರ್ಧೆ ತೀರ್ಪುಗಾರರಾದ ಬಿ. ಪ್ರಕಾಶ ಶೆಣೈ, ಸಮಾಜ ಮಂದಿರದ ಅಧ್ಯಕ್ಷ ಮಣಿಕಂಠದಾಸ್, ಗುಲ್ವಾಡಿ ವೀರಾಂಜನೇಯ ಭಜನಾ ಮಂದಿರದ ಕಾರ್ಯದರ್ಶಿ ಜಯಕರ ಪೂಜಾರಿ, ಈಶ್ವರ ಜಿ.,…

Read More

ಉಪ್ಪುಂದ: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ., ಉಪ್ಪುಂದ, ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಲಯನ್ಸ್ ಕಣ್ಣಿನ ಆಸ್ಪತ್ರೆ ಕೋಟ, ಲಯನ್ಸ್ ಟ್ರಸ್ಟ್ ಫಾರ್ ಸರ್ವಿಸಸ್ & ಚಾರಿಟೇಸ್ (ರಿ.) ಲಯನ್ಸ್ ಕ್ಲಬ್ ಬ್ರಹ್ಮಾವರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಅಂಧತ್ವ ನಿವಾರಣಾ ವಿಭಾಗ ಉಡುಪಿ, ಲಯನ್ಸ್ & ಲಯನೆಸ್ ಕ್ಲಬ್ ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರ ಜರಗಿತು. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್, ಪ್ರಕಾಶ್ಚಂದ್ರ ಶೆಟ್ಟಿ ಇವರು ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದ ಪ್ರಯೋಜನ ಪಡೆಯುವಲ್ಲಿ ಯಶಸ್ವಿ ಹೊಂದಬೇಕು ಎಂದರು. ಶಿಬಿರವನ್ನು ಚಾಮರ್ಕಿ ನಾರಾಯಣ ಶೆಟ್ಟಿ ಕಣ್ಣಿನ ಆಸ್ಪತ್ರೆಯ ಅಧ್ಯಕ್ಷರಾದ ಸೀತಾರಾಮ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಆಸ್ಪತ್ರೆಯ ವೈದ್ಯರಾದ ಶ್ರೀಮತಿ ವೀಣಾ ಉಮೇಶ ಇವರು ಕಣ್ಣಿನ ರಕ್ಷಣೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ…

Read More

ಕುಂದಾಪುರ: ಉದಯವಾಣಿಯ ಕುಂದಾಪುರ ಕಛೇರಿಯು ನಗರದ ಮುಖ್ಯರಸ್ತೆಯ ಬಳಿ ಇರುವ ಶ್ರೀಸಾಯಿ ಸೆಂಟರ್‌ನ ಎರಡನೇ ಮಹಡಿಗೆ ಸ್ಥಳಾಂತರಗೊಂಡಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ನೂತನ ಕಚೇರಿಯನ್ನು ಉದ್ಘಾಟಿಸಿ ಶುಭಹಾರೈಸಿದರು. ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ನ ಸಿಇಒ ವಿನೋದ್‌ ಕುಮಾರ್‌, ಫೈನಾನ್ಸ್‌ ಡಿ.ಜಿ.ಎಂ. ಸುದರ್ಶನ್‌ ಶೇರಿಗಾರ್‌, ರಾಧಾಕೃಷ್ಣ ಕೊಡವೂರು, ಕೃಷ್ಣಮೂರ್ತಿ, ಉದಯ ಆಚಾರ್‌ ಸಾಸ್ತಾನ, ಹರೀಶ್‌ ಜಾಲಾಡಿ, ವಿಶ್ವನಾಥ್‌, ರಾಘವೇಂದ್ರ ಪ್ರಭು, ಸಂತೋಷ್‌ ಇಂದ್ರಾಳಿ ಮೊದಲಾದವರು ಉಪಸ್ಥಿತರಿದ್ದರು. ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿ. ನ ಮ್ಯಾಗಜೀನ್‌ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ರಾಮಚಂದ್ರ ಮಿಜಾರ್‌ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಸಹ ಉಪಾಧ್ಯಕ್ಷ ಆನಂದ ಕೆ. ವಂದಿಸಿದರು.

Read More

ಬೈಂದೂರು: ಇಲ್ಲಿನ ತಗ್ಗರ್ಸೆ ಗ್ರಾಮದ ನೆಲ್ಯಾಡಿ ಅರಳಿಕಟ್ಟೆ ಮನೆಯ ಸುಶೀಲಾ ಮತ್ತು ನಾಗಮ್ಮ ಶೆಡ್ತಿ ಎಂಬುವವರ ಹಂಚಿನ ಮನೆಗೆ ಯಾರೂ ಇಲ್ಲದ ವೇಳೆ ಬೆಂಕಿ ಹಚ್ಚಿದ್ದ ಆರೋಪಿಗಳು, ಮದುವೆ ಸಂಭ್ರಮದಲ್ಲಿದ್ದ ಮನೆಮಂದಿಗೆ ಬಿಸಿ ಶಾಕ್ ನೀಡಿದ ಘಟನೆ ವರದಿಯಾಗಿದೆ. ಘಟನೆಯ ವಿವರ: ತಗ್ಗರ್ಸೆಯ ನೆಲ್ಯಾಡಿ ಅರಳಿಕಟ್ಟೆ ಮನೆ ಸುಶೀಲಾ ಎಂಬುವವರ ಮಗನಿಗೆ ಮದವೆ ನಿಗದಿಯಾಗಿತ್ತು. ಮನೆಯವರೆಲ್ಲರೂ ಮದುವೆ ಸಮಾರಂಭಕ್ಕೆ ಕಲ್ಯಾಣ ಮಂಟಪಕ್ಕೆ ತೆರಳಿದ್ದ ಸಂದರ್ಭವನ್ನು ನೋಡಿಕೊಂಡು ಕುಟುಂಬದ ಹತ್ತಿರದ ಸಂಬಂಧಿಕರಾದ ರಾಘವೇಂದ್ರ ಹಾಗೂ ರಾಜೇಶ ಎಂಬುವವರು ಮಧ್ಯಾಹ್ನ 12ಗಂಟೆಯ ಸುಮಾರಿಗೆ ಸುಶೀಲಾ ಅವರ ಮನೆಗೆ ಬಿಂಕಿ ಹಚ್ಚಿ ಪರಾರಿಯಾಗಿದ್ದರು. ಇವರುಗಳ ನಡುವೆ ಆಸ್ತಿ ವಿಚಾರಕ್ಕೆ ತಕರಾರಿತ್ತು ಎನ್ನಲಾಗಿದ್ದು ಅದೇ ವಿಷಯವನ್ನಿಟ್ಟುಕೊಂಡು ಮನೆಗೆ ಬೆಂಕಿ ಹಚ್ಚಿದ ಬಗ್ಗೆ ತಿಳಿದುಬಂದಿದೆ ಬೆಂಕಿ ಮನೆ ಜಗಲಿಯನ್ನು ಆವರಿಸಿರುವುದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಶಕ್ಕೆ ಪೋನಾಯಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರಾದರೂ ಅಷ್ಟರಲ್ಲಾಗಲೇ ಸುಮಾರು 3ಲಕ್ಷ ಮೌಲ್ಯದ ಸೊತ್ತುಗಳು ಸುಟ್ಟು ಕರಕಲಾಗಿದ್ದವು. ಪ್ರಕರಣದ ಬೆನ್ನತ್ತಿದ…

Read More