ಕುಂದಾಪುರ: ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ಶಿಕ್ಷಕಿಯನ್ನು ವ್ಯಕ್ತಿಯೊಬ್ಬ ತಡೆಗಟ್ಟಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಘಟನೆ ಸಿದ್ಧಾಪುರ ಪೇಟೆಯಲ್ಲಿ ನಡೆದಿದೆ. ಉಳ್ಳೂರು 74 ನೇ ಗ್ರಾಮದ ತೆಂಕೂರು ನಿವಾಸಿ ಉಮೇಶ ಭೋವಿ (26) ಎಂಬಾತನೇ ಈ ಕೃತ್ಯ ಎಸಗಿದವನಾಗಿದ್ದು, ಶಿಕ್ಷಕಿ ದೂರಿನ ಮೇರೆಗೆ ಶಂಕರನಾರಾಯಣ ಎಸ್ಐ ದೇಜಪ್ಪ ಹಾಗೂ ಪೊಲೀಸ್ ಸಿಬ್ಬಂದಿ ಸಾರ್ವಜನಿಕರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ. ಲೈಂಗಿಕ ಕಿರುಕುಳ, ಮಾನಭಂಗ ಯತ್ನ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಕೋರ್ಟ್ಗೆ ಹಾಜರುಪಡಿಸಿದ್ದು, ಆ. 12 ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Author: Editor Desk
ಕುಂದಾಪುರ: ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ’ಇನ್ಸ್ಪಾಯರ್ ಅವಾರ್ಡ್’ಗಾಗಿ ಡಿಸ್ಟ್ರಿಕ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಆಂಡ್ ಟ್ರೈನಿಂಗ್(ಡಿಐಇಟಿ) ಉಡುಪಿ ಹಾಗೂ ಡಿಪಾರ್ಟ್ಮೆಂಟಲ್ ಆಫ್ಸ್ಟೇಟ್ ಎಜುಕೇಶನ್ ರೀಸರ್ಚ್ಆಂಡ್ ಟ್ರೈನಿಂಗ್(ಡಿಎಸ್ಇಟಆರ್ಟಿ) ಬೆಂಗಳೂರು ಬಂಟಕಲ್ಲು ಎಸ್ ಎಂವಿಐಟಿಎಂ ಕಾಲೇಜಿನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಸ.ಹಿ.ಪ್ರಾಥಮಿಕ ಶಾಲೆ ಮೂಡ್ಲಕಟ್ಟೆ ಇಲ್ಲಿಯ ವಿದ್ಯಾರ್ಥಿ ಕೌಶಿಕ್ ಇವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೆ ದಿನಕರ ಶೆಟ್ಟಿ ಪ್ರೋತ್ಸಾಹ ಧನವಾಗಿ 1,000ರೂ ನಗದನ್ನು ನೀಡಿ ಅಭಿನಂದಿಸಿದರು. ಈ ಸಮಯದಲ್ಲಿ ಶಾಲಾ ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ ಸದಸ್ಯರು ಮತ್ತು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಆ ಭಾಗದ ಪಂಚಾಯತ್ ಸದಸ್ಯರಾದ ಸಂತೋಷ ಪೂಜಾರಿ ಉಪಸ್ಥಿತರಿದ್ದರು.
ಕೊಲ್ಲೂರು: ಬಿಎಸ್ಎನ್ಎಲ್ ಚೀಫ್ ಜನರಲ್ ಮ್ಯಾನೇಜರ್ ಪಿ.ನಾಗರಾಜು ಗುರುವಾರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಅವರು ಮಾತನಾಡಿ ದೇವಳದ ಸುತ್ತಮುತ್ತಲು ಶೀಘ್ರದಲ್ಲಿಯೇ ವೈಫೈ, ಹಾಟ್ಸ್ಪಾಟ್ ಸೌಲಭ್ಯ ಜಾರಿಗೆ ತರಲಾಗುವುದು ಎಂದರು. ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕಷ್ಣಮೂರ್ತಿ ಮತ್ತು ಧರ್ಮದರ್ಶಿ ಶ್ರೀನಿವಾಸ ಕಲ್ಲೂರಾಯ ಗೌರವಿಸಿದರು. ಬಿಎಸ್ಎನ್ಎಲ್ ಮಂಗಳೂರು ವಿಭಾಗದ ಜನರಲ್ ಮ್ಯಾನೇಜರ್ ಜಿ.ಆರ್.ರವಿ, ಎಜಿಎಂ ಪುರಂದರ ಶೆಟ್ಟಿ, ಮೊಬೈಲ್ ಡಿಇ ಉಮೇಶ್ ಭಟ್, ಕುಂದಾಪುರ ಡಿಇ ಪುರಾಣಿಕ್, ಬೈಂದೂರು ಎಸ್ಡಿ ಭಾಸ್ಕರ್, ಕೊಲ್ಲೂರು ಎಕ್ಸ್ಚೇಂಜ್ನ ಯೋಗೀಶ್ ಉಪಸ್ಥಿತರಿದ್ದರು.
ಕುಂದಾಪುರ: ಭಾರಿ ಮಳೆಯ ಹಿನ್ನೆಲೆಯಲ್ಲಿ ವಾರಾಹಿ ನೀರಾವರಿ ಯೋಜನೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಭಾರೀ ಅನಾಹುತ ಸಂಭವಿಸಿದ್ದು ಅಪಾರ ಪ್ರಮಾಣದ ಕಷಿ ಹಾನಿ ಉಂಟಾಗಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ವಾರಾಹಿ ಎಡದಂಡೆ ಕಾಲುವೆಯ ಅಕ್ಸಾಲಿಕೊಡ್ಲು ಎಂಬಲ್ಲಿ ಕಾಲುವೆ ಬುಡದಲ್ಲಿ ಹಾದುಹೋಗುವ (ಅಂಡರ್ ಪ್ಯಾಸೇಜ್) ತೋಡು ಬ್ರೇಕ್ ಆಗಿದ್ದರಿಂದ ಭಾರೀ ನೀರು ಜನವಸತಿ ಪ್ರದೇಶಕ್ಕೆ ನುಗ್ಗಿದ್ದು ಆತಂಕ ಸಷ್ಟಿಯಾಗಿದೆ. ನೀರಿನ ಹೊಡೆತಕ್ಕೆ ಕಾಲುವೆ ಇಕ್ಕೆಲಗಳ ಗುಡ್ಡಜರಿತ ಉಂಟಾಗಿದ್ದರಿಂದ ಕಾಲುವೆ ಮುಚ್ಚಲ್ಪಟ್ಟು ಕಾಲುವೆ ನೀರು, ತೋಡಿನ ನೀರು ಅಂಡರ್ ಪ್ಯಾಸೇಜ್ ಮೂಲಕ ತೋಟ, ಕೃಷಿಭೂಮಿ, ಮನೆಗಳಿಗೆ ನುಗ್ಗಿದ್ದು ಮೊಳಹಳ್ಳಿ ಇಡಿ ಗ್ರಾಮ ಜಲಾವತಗೊಂಡಿದೆ. ಬಾವಿ, ತೋಡಿನ ದಂಡೆ, ಮೋರಿಗಳು ನೀರಿನ ಹೊಡೆತಕ್ಕೆ ಕೊಚ್ಚಿಹೋಗಿದೆ. ಬಾಸಬೈಲು ಎಂಬಲ್ಲಿ ನೂರಾರು ಎಕರೆ ಕೃಷಿ ಭೂಮಿ ಮುಳುಗಿದ್ದು ಜೇಡಿಮಣ್ಣು ಮಿಶ್ರಿತ ನೀರು ಪ್ರಳಯ ಸದಶ್ಯ ವಾತಾವರಣ ನಿರ್ಮಿಸಿದೆ. ಬಾಸಬೈಲುವಿನ 8 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ. ವಾರಾಹಿ ಎಡದಂಡೆ 23ನೇ ಕಿಮೀ ವ್ಯಾಪ್ತಿಯಲ್ಲಿ ಎಡದಂಡೆಗೆ ಹೊಂದಿಕೊಂಡಿರುವ ಗುಡ್ಡಜರಿತ…
ಕುಂದಾಪುರ: ಕಲ್ಯಾಣಪುರದ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರಗಿದ 2015-16ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಬಾಲಕಿಯರ ತಂಡವು ಪಡೆದುಕೊಂಡಿದೆ. ವಿಜೇತ ತಂಡದ ವಿದ್ಯಾರ್ಥಿಗಳಾದ ಸಂಜನಾ, ಪ್ರಿಯಾಂಕಾ, ಅನುಶ್ರೀ ಹಾಗೂ ಸನ್ಮಿತಾ ಅವರು ಸ.ವಿ. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಸೇರುಗಾರ್, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶಾಂತಿ ಡಿ’ಕೋಸ್ತಾ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ರತ್ನಾಕರ ಶೆಟ್ಟಿ ಅವರೊಂದಿಗೆ. ವಿಜೇತ ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕರು ಅಭಿನಂದಿಸಿದ್ದಾರೆ.
ಗಂಗೊಳ್ಳಿ : 2015-16ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿರುವ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಬಾಲಕಿಯರ ತಂಡದ ವಿದ್ಯಾರ್ಥಿನಿ ಪ್ರಿಯಾಂಕಾ 14ರ ವಯೋಮಾನದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಕುಂದಾಪುರ: ಸಾಮಾನ್ಯ ಕುಟುಂಬದಲ್ಲಿ ಜನಿಸಿ ತನ್ನ ಮೇರು ವ್ಯಕ್ತಿತ್ವದಿಂದ ಜಗತ್ತಿನ ಆದರಣೆಗೆ ಪಾತ್ರರಾಗಿ ಕೋಟ್ಯಾಂತರ ಭಾರತೀಯರ ಸ್ಫೂರ್ತಿಯ ಸೆಲೆಯಾದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಬದುಕಿನ ದಾರಿ ರೋಮಾಂಚನ ಮೂಡಿಸುತ್ತದೆ. ವಿದ್ಯಾರ್ಥಿಗಳು ಮಾತ್ರವಲ್ಲದೇ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುವಂತಹ, ಅನುಸರಿಸುವಂತಹ ಮಾದರಿ ವ್ಯಕ್ತಿತ್ವ ಅವರದು ಎಂದು ಉಡುಪಿ ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು. ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಕುಂದಾಪುರ ಫೆರ್ರಿ ರಸ್ತೆಯಲ್ಲಿರುವ ರೋಟರಿ ನರ್ಸರಿ ಸ್ಕೂಲ್ ಸಭಾಂಗಣದಲ್ಲಿ ಆಯೋಜಿಸಿದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸುತ್ತಾ ಮಾತನಾಡಿದರು. ಸೂಪರ್ ಗ್ರೇಡ್ ಇಲೆಕ್ಟ್ರಿಕಲ್ ಗುತ್ತಿಗೆದಾರರಾದ ಕೆ. ಆರ್. ನಾಯ್ಕ್, ಡಾ. ಹೆಚ್.ಎಸ್. ಮಲ್ಲಿ, ಪಿ.ಡಿ.ಜಿ. ಎ.ಎಸ್.ಎನ್. ಹೆಬ್ಬಾರ್, ನ್ಯಾಯವಾದಿ ಟಿ.ಬಿ.ಶೆಟ್ಟಿ, ಪರಮೇಶ್ವರ್ ಹೆಗ್ಡೆ, ಪತ್ರಿಕೋದ್ಯಮದ ವಿದ್ಯಾರ್ಥಿನಿ ಸೌಮ್ಯ ಮದ್ದುಗುಡ್ಡೆ ಮುಂತಾದ ಗಣ್ಯರು ನುಡಿನಮನ ಸಲ್ಲಿಸಿದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷರಾದ…
ಗಂಗೊಳ್ಳಿ : ಗಂಗೊಳ್ಳಿ ಪರ್ಸಿನ್ ಬೋಟ್ ವತಿಯಿಂದ ಮೀನುಗಾರರು ಶುಕ್ರವಾರ ಗಂಗೊಳ್ಳಿಯ ಮೀನುಗಾರಿಕಾ ಬಂದರಿನಲ್ಲಿ ಸಮುದ್ರ ಪೂಜೆ ನಡೆಸಿ ಪ್ರಾರ್ಥನೆ ಸಲ್ಲಿಸಿದರು. ಮೀನುಗಾರ ಮುಖಂಡ ಅಣ್ಣಪ್ಪ ಖಾರ್ವಿ ನೇತೃತ್ವದಲ್ಲಿ ಪರ್ಸಿನ್ ಬೋಟಯ ಮೀನುಗಾರರ ಉಪಸ್ಥಿತಿಯಲ್ಲಿ ವೇದಮೂರ್ತಿ ಜಿ.ಲಕ್ಷ್ಮೀನಾರಾಯಣ ಭಟ್ ನೇತೃತ್ವದಲ್ಲಿ ಸಮುದ್ರ ಪೂಜೆ ನಡೆಸಲಾಯಿತು.
ಕುಂದಾಪುರ: ಜು.20ರಿಂದ 25ರವರೆಗೆ ಹಾಂಗ್ಕಾಂಗ್ನಲ್ಲಿ ನಡೆದ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ ಉಡುಪಿ ಜಿಲ್ಲೆಯ ಜಿ.ವಿ. ಅಶೋಕ್ ಮೂರು ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಕೋಟದವರಾಗಿರುವ ಇವರು ಪ್ರಸ್ತುತ ಕೆನರಾ ಬ್ಯಾಂಕಿನ ಗಂಗೊಳ್ಳಿ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಲಿಗ್ರಾಮದ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ಇವರು ಅನೇಕ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಕುಂದಾಪ್ರ ಅಂದ್ರ ಗತಿಗೆ ಮದ್ಲ ನೆನ್ಪ್ ಆಪ್ದೆ ಕುಂದಾಪ್ರದ್ ಭಾಷಿ ಕಾಣಿ. ಅದ್ರ್ ವರ್ಚಸ್ಸೇ ಅಂತಾದ್ದ್. ಒಂದ್ಸಾರಿ ಈ ಭಾಷಿ ನಿಮ್ ಕೆಮಿಗ್ ಬಿದ್ರೆ ಗುತಾತ್ತ್, ನಮ್ ಕುಂದಾಪ್ರ ಅಪ್ಪಟ ಗ್ರಾಮೀಣ ಸಂಸ್ಕ್ರತಿಯಿಂದ ತುಂಬಿ ತುಳಕ್ತಿತ್ ಅಂದಳಿ. ನಮ್ಗಂತೂ ಕುಂದಾಪ್ರ ಕನ್ನಡ ಮತಾಡುದೇ ಒಂದ್ ಖುಶಿ ಕಾಣಿ. ಅದ್ರ ಬ್ಯೆಲಿ ಎಂತ ಅಂದ್ ಕುಂದಾಪ್ರದಗ್ ಇಪ್ಪೋರಿಗೆ ಅಷ್ಟ್ ಗುತಾತಿಲ್ಲ. ಅವರಿಗೆ ದಿನಾ ಮಾತಾಡಿ ಅಭ್ಯಸು ಆಯಿರತ್ತ ಕಾಣಿ. ಹಾಂಗಾಯಿ ಎಂತದೂ ಅನ್ಸುದಿಲ್ಲ. ಅದೇ ಬೇರೆ ಉರಗ್ ಇಪ್ಪು ಕುಂದಾಪ್ರದ್ ಬದಿಯೋರ್ ನ ಕೇಂಡ್ ಕಾಣಿ. ಅವ್ರಿಗೆ ಗೊತ್ತಾಯಿತ್ ಕುಂದಾಪ್ರ ಕನ್ನಡು ಎಷ್ಟ್ ಚಂದು ಅಂದೇಳಿ. ಇತ್ತಿತ್ಲಗೆ ಕುಂದಾಪ್ರದ ಜನ್ರೇ ಈ ಭಾಷಿ ಮಾತಾಡುಕೆ ನಾಚ್ಕಂತ್ರ. ಅದ್ರಗೂ ಈ ಕಾಲೆಜ್ ಮಕ್ಕಳ್, ಒಳ್ಳೆ ಕೆಲ್ಸಕ್ ಹ್ವಾಪರ್ ಮಾತಾಡುಕೇ ಹಿಂದು-ಮುಂದು ಕಾತ್ರ್. ಅವರಿಗೆ ಒಂತರಾ ಕೀಳರ್ಮಿ. ಎಲ್ಲ್ ನಾವ್ ಸದ್ರು ಆತ್ತೇನೊ ಅಂಬಂಗೆ. ಊರಗಿದ್ದರ ನಾಕ್ ದಿನದ್ ಮಟ್ಟಿಗೆ ಬೆಂಗ್ಳೂರ್, ಬೋಂಬಾಯ್ ಬದಿಗೆ ಹೋಯಿ…
