ಕುಂದಾಪುರ: ಇಲ್ಲಿನ ತಲ್ಲೂರು ಸೇತುವೆ ಬಳಿ ಶನಿವಾರ ರಾತ್ರಿ ಕುಂದಾಪುರದಿಂದ ಹೆಮ್ಮಾಡಿಯತ್ತ ಸಾಗುತ್ತಿದ್ದ ಕಾರಿಗೆ ಸರಕು ಲಾರಿಯೊಂದು ಮುಖಾಮುಖೀ ಢಿಕ್ಕಿಯಾದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಂದಾಪುರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಕೇರಳದತ್ತ ಸಾಗುತ್ತಿದ್ದ ಸರಕು ಲಾರಿ ಟೊಯೊಟಾ ಕಾರಿಗೆ ಢಿಕ್ಕಿಹೊಡೆದ ಪರಿಣಾಮ ಕಾರಿನ ಮುಂಭಾಗ ಮತ್ತು ಬಲ ಮತ್ತು ಎಡ ಭಾಗದ ಬಾಗಿಲುಗಳು ತೆರೆದುಕೊಂಡಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ. ಅಪಘಾತದಿಂದಾಗಿ ಕೆಲ ಕಾಲ ಸೇತುವೆ ಮೇಲೆ ವಾಹನ ಸಂಚಾರಕ್ಕೆ ಅಡಚನೆಯಾಯಿತು. ಕುಂದಾಪುರ ಸಂಚಾರಿ ಪೊಲೀಶರು ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: Editor Desk
ಗ೦ಗೊಳ್ಳಿ: ವನಮಹೋತ್ಸವ ಎನ್ನುವುದು ಕೇವಲ ಒ೦ದು ದಿನಕ್ಕೆ ಸೀಮಿತವಾಗಬಾರದು. ಅದು ನಿತ್ಯ ನಿರ೦ತರ ಪ್ರಕ್ರಿಯೆಯಾಗಬೇಕು. ಆಗ ಮಾತ್ರ ನಿಜವಾದ ಅರ್ಥದಲ್ಲಿ ಸು೦ದರ ಪರಿಸರ ನಿರ್ಮಾಣ ಸಾಧ್ಯ ಎ೦ದು ಗ೦ಗೊಳ್ಳಿ ರೋಟರಿಯ ಅಧ್ಯಕ್ಷ ಪ್ರದೀಪ್ ಡಿ. ಕೆ ಅವರು ಅಭಿಪ್ರಾಯಪಟ್ಟರು. ಅವರು ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಭಾ೦ಗಣದಲ್ಲಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೋಟರಿ ಕ್ಲಬ್ ಗ೦ಗೊಳ್ಳಿ ಜ೦ಟಿಯಾಗಿ ಹಮ್ಮಿಕೊ೦ಡಿದ್ದ ವನಮಹೋತ್ಸವ ಆಚರಣೆಯ ಕುರಿತಾದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯ ಮುಖ್ಯ ಅತಿಥಿ ಪ್ರಾ೦ಶುಪಾಲ ಆರ್ ಎನ್ ರೇವಣ್ಕರ್ ಮಾತನಾಡಿ ಮು೦ದಿನ ಪೀಳಿಗೆ ಒ೦ದು ಸು೦ದರವಾದ ಪರಿಸರವನ್ನು ಬಿಟ್ಟುಕೊಟುವಲ್ಲಿ ನಾವು ಕಟೀಬದ್ಧರಾಗಿ ಶ್ರಮಿಸೋಣ ಎ೦ದು ಹೇಳಿದರು. ಉಪಸ್ಥಿತರಿದ್ದ ರೊಟೇರಿಯನ್ ರಾಮನಾಥ ನಾಯಕ್ ಶುಭ ಹಾರೈಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನಾರಾಯಣ್ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನವ್ಯಶ್ರೀ ಪ್ರಾರ್ಥಿಸಿದರು. ಅನುಷಾ ಕಾರ್ಯಕ್ರಮ ನಿರೂಪಣೆ ಮಾಡಿದರು. ನಿಖಿಲ್ ಧನ್ಯವಾದಗೈದರು.ಸಭಾ ಕಾರ್ಯಕ್ರಮದ ಬಳಿಕ…
ಕುಂದಾಪುರ: ಅನ್ಯ ಕೋಮಿನ ಯುವಕರ ತಂಡವೊಂದು ಹಿಂದೂ ಸಂಘಟನೆಯ ಹೆಸರಿನಲ್ಲಿ ನಕಲಿ ಗ್ರೂಪ್ವೊಂದನ್ನು ವಾಟ್ಸ್ಯಾಪ್ನಲ್ಲಿ ತೆರೆದು, ಅದಕ್ಕೆ ಹಿಂದೂ ಯುವಕರನ್ನು ಸದಸ್ಯರನ್ನಾಗಿ ಮಾಡುವುದರ ಮೂಲಕ ಅವರಿಂದ ಕೆಲವೊಂದು ಮಾಹಿತಿಗಳನ್ನು ಸಂಗ್ರಹಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಮಂಗಳವಾರ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೋಟ ಸಮೀಪದ ಕೆಲವೊಂದು ಯುವಕರ ವಾಟ್ಸ್ಯಾಪ್ ಸಂಖ್ಯೆಯನ್ನು ಕಲೆಹಾಕಿದ ಬೆಳ್ತಂಗಡಿ ಮೂಲದ ಅನ್ಯಕೋಮಿನ ಯುವಕರ ತಂಡ, ವೀರ ಕೇಸರಿ, ಹಿಂದೂ ಟೈಗರ್ಸ್ ಎನ್ನುವ ಗ್ರೂಪ್ ಗಳನ್ನು ಸೃಷ್ಟಿಸಿ ಅದರ ಮೂಲಕ ಮಾಹಿತಿ ಕಲೆಹಾಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಲಾಗಿದೆ. ಗ್ರೂಪ್ನ ಸದಸ್ಯರು ಅದರ ಮುಖ್ಯಸ್ಥರು ಯಾರು ಎಂದು ಪರಿಶೀಲಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಅನಂತರ ಎಲ್ಲ ಸದಸ್ಯರು ಗ್ರೂಪ್ಗಳಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ. ಮಾಹಿತಿ ಕಲೆ ಹಾಕುವ ಉದ್ಧೇಶ; ಈ ರೀತಿ ಹಿಂದೂ ಯುವಕರನ್ನು ಸೇರಿಸಿಕೊಂಡು ರಚಿಸಲ್ಪಟ್ಟ ಗ್ರೂಪ್ನಲ್ಲಿ ಹಿಂದೂಗಳ ಕುರಿತು ಕೆಲವೊಂದು ಮಾಹಿತಿ ಸಂಗ್ರಹಿಸಲು ಹಾಗೂ ಇತರರ ಮೊಬೈಲ್ ಸಂಖ್ಯೆಗಳನ್ನು ಪಡೆದು ದುರುಪಯೋಗಪಡಿಸಿಕೊಳ್ಳಲಾಗುತ್ತದೆ ಎಂದು ಆರೋಪಿಸಲಾಗಿದೆ.
ಕುಂದಾಪುರ: ಮಾರಣಕಟ್ಟೆಯಲ್ಲಿ ಕಾಲುಸಂಕ ದಾಟುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ನೀರು ಪಾಲಾಗಿ ಸಾವನ್ನಪ್ಪಿದ ಅಲ್ಲಿನ ಸರಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ವಿಸ್ಮಯಾಳ ಪೋಷಕರಿಗೆ ಪ್ರಕೃತಿ ವಿಕೋಪ ಅನುದಾನದಡಿ ರೂ. 4 ಲಕ್ಷ ಮೊತ್ತದ ಚೆಕ್ನ್ನು ಜು. 18ರಂದು ಮಾರಣಕಟ್ಟೆಯ ಸನ್ಯಾಸಿಬೆಟ್ಟುವಿನ ನೊಂದ ಕುಟುಂಬದ ಮನೆಯಲ್ಲಿ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ವಿತರಿಸಿದರು. ಈ ಸಂದರ್ಭ ಕುಂದಾಪುರ ತಹಶೀಲ್ದಾರೆ ಗಾಯತ್ರಿ ನಾಯಕ್, ಚಿತ್ತೂರು ಗ್ರಾ.ಪಂ. ಅಧ್ಯಕ್ಷ ಸಂತೋಷ್ ಮಡಿವಾಳ, ತಾ. ಪಂ. ಸದಸ್ಯ ಎಚ್. ಮಂಜಯ್ಯ ಶೆಟ್ಟಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಪಿಗೆಯಡಿ ಸಂಜೀವ ಶೆಟ್ಟಿ, ತಾ. ಪಂ. ಮಾಜಿ ಸದಸ್ಯೆ ಮೂಕಾಂಬು ಶೆಟ್ಟಿ, ಚಿತ್ತೂರು ಗ್ರಾ. ಪಂ. ಉಪಾಧ್ಯಕ್ಷ ಅಣ್ಣಪ್ಪ ನಾಯಕ್, ಉಪತಹಶೀಲ್ದಾರ ಕೊರಗು ಬಿಲ್ಲವ, ಆರ್.ಐ. ಅಶೋಕ್, ಕಾಂಗ್ರೆಸ್ ಮುಖಂಡ ವಂಡಬಳ್ಳಿ ಜಯರಾಮ ಶೆಟ್ಟಿ, ವಂಡ್ಸೆ ಗ್ರಾ. ಪಂ. ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಚಿತ್ತೂರು ಗ್ರಾ. ಪಂ. ಸದಸ್ಯರು, ಕೆಂಚನೂರು ಸುಬ್ಬಣ್ಣ ಶೆಟ್ಟಿ, ಶಾಲಾ…
ಕುಂದಾಪುರ: ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತುನಿಂದ ಕೋಟೇಶ್ವರದ ರಥಬೀದಿಯಲ್ಲಿರುವ ಶಾದರಾ ಕಲ್ಯಾಣ ಮಂಟಪದಲ್ಲಿ ವಿಪ್ರವಾಣಿ ಸಂಚಿಕೆ ಬಿಡುಗಡೆ ಹಾಗೂ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು. ಪರಿಷತ್ತ್ಗಾಗಿ ತಾಲೂಕು ಅಧ್ಯಕ್ಷರಾದ ವಕ್ವಾಡಿ ಸುಬ್ರಹ್ಮಣ್ಯ ಐತಾಳರ ಜೊತೆ ಸೇರಿ ಅವಿರತವಾಗಿ ಶ್ರಮಿಸಿದ ಶಿಕ್ಷಣ ತಜ್ಞರಾದ ಬಿ.ಲಕ್ಷ್ಮೀನಾರಾಯಣ ಉಪಾಧ್ಯಾಯರು ಹಾಗೂ ದೊಡ್ಮನೆ ಶ್ರೀ ಮುಖ್ಯ ಪ್ರಾಣ ದೇವಸ್ಥಾನದ ಪ್ರಧಾನ ಅರ್ಚಕರಾದ ವೈ.ಎನ್.ವೆಂಕಟೇಶಮೂರ್ತಿ ಭಟ್ಟರನ್ನು ಅಧ್ಯಕ್ಷರು ಅವರ ಸೇವೆಯನ್ನು ಗೌರವಿಸಿ ಸಮ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ವಿಪ್ರವಾಣಿ ಪ್ರಾಯೋಜಕರಾದ ವೇ.ಮೂ. ಸುದರ್ಶನ ಉಡುಪ ದಂಪತಿಗಳು, ಗೌರವಾಧ್ಯಕ್ಷ ಕೆ.ಶ್ರೀನಿವಾಸ ಹೆಬ್ಬಾರ್, ಜ್ಯೋತಿಷ್ಯ ವಿದ್ವಾನ್ ಟಿ.ವಾಸುದೇವ ಜೋಯಿಸರು ಹಾಗೂ ಜ್ಯೋತಿಷ್ಯ ಶಿರೋಮಣಿ ವಿಶ್ವನಾಥ ಉಪಾಧ್ಯಾಯರು ನೂತನ ಅಧ್ಯಕ್ಷ ಕೆ.ಗಣೇಶ ರಾವ್ ಹಾಗೂ ಪ್ರಧಾನ ಕಾರ್ಯದರ್ಶಿ ಹಳ್ಳಿ ಶ್ರೀನಿವಾಸ ಭಟ್ಟರು, ತಾಲೂಕು ಮಹಿಳಾ ಅಧ್ಯಕ್ಷೆ ಶ್ರೀಮತಿ ಅನ್ನಪೂರ್ಣ ಉಡುಪ ಉಪಸ್ಥಿತರಿದ್ದರು.
ಗ೦ಗೊಳ್ಳಿ: ನಾವು ನಮ್ಮ ನಮ್ಮ ಕಾರ್ಯಕ್ಷೇತ್ರಗಳಲ್ಲಿ ನಮ್ಮನ್ನು ಸ೦ಪೂರ್ಣವಾಗಿ ತೊಡಗಿಸಿಕೊ೦ಡು ಆಯಾ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡುವುದೇ ನಾವು ಅಬ್ದುಲ್ ಕಲಾ೦ ಅವರಿಗೆ ಸಲ್ಲಿಸಬಹುದಾದ ನಿಜವಾದ ಗೌರವ. ಆ ನಿಟ್ಟಿನಲ್ಲಿ ನಾವು ಸತತವಾಗಿ ಪ್ರಯತ್ನಿಸಬೇಕಿದೆ ಎ೦ದು ಜಿ.ಎಸ್ ವಿ.ಎಸ್ ಅಸೋಷಿಯೇಶನ್ನಿನ ಕಾರ್ಯದರ್ಶಿ ಎಚ್ ಗಣೇಶ್ ಕಾಮತ್ ಅಭಿಪ್ರಾಯಪಟ್ಟರು. ಅವರು ಭಾರತದ ಮಾಜಿ ರಾಷ್ಟ್ರಪತಿ ಖ್ಯಾತ ವಿಜ್ಞಾನಿ ಡಾ. ಎ.ಪಿ.ಜೆ ಅಬ್ದುಲ್ ಕಲಾ೦ ಅವರ ನಿಧನದ ಸಲುವಾಗಿ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಮತ್ತು ಸಮೂಹ ಸ೦ಸ್ಥೆಗಳ ವತಿಯಿ೦ದ ಇಲ್ಲಿಯ ಕ್ರೀಡಾ೦ಗಣದಲ್ಲಿ ನಡೆದ ಶ್ರದ್ಧಾ೦ಜಲಿ ಸಭೆಯಲ್ಲಿ ಮಾತನಾಡಿದರು. ಪ್ರಾ೦ಶುಪಾಲ ಆರ್ ಎನ್ ರೇವಣ್ಕರ್ ಅವರು ಮಾತನಾಡಿ ಕಲಾ೦ ಅವರ ಮಾತು ಮತ್ತು ಕೃತಿಗಳು ಯಾವತ್ತಿಗೂ ಅನುಸರಣೀಯ .ಅವರು ವಿದ್ಯಾರ್ಥಿಗಳ ಪ್ರೇರಕ ಶಕ್ತಿ ಎ೦ದು ಹೇಳಿದರು.ವಿದ್ಯಾರ್ಥಿ ಪ್ರತಿನಿಧಿ ಆಯಿಷಾ ಕಲಾ೦ ಅವರಿಗೆ ನುಡಿನಮನ ಸಲ್ಲಿಸಿದರು. ಸರಸ್ವತಿ ವಿದ್ಯಾಲಯದ ಉಪನ್ಯಾಸಕರು , ಶಿಕ್ಷಕರು,ಸಿಬ್ಬ೦ದಿವರ್ಗ ಮತ್ತು ವಿದ್ಯಾರ್ಥಿಗಳು ಮೌನ ಪ್ರಾರ್ಥನೆ ಸಲ್ಲಿಸಿ…
ಕುಂದಾಪುರ: ದೈಹಿಕ, ಮಾನಸಿಕವಾದ ಬಹುತೇಕ ಬಾಧೆಗಳು ನಾವು ತಿನ್ನುವ ಆಹಾರದ ಪರಿಣಾಮಗಳಾಗಿರುತ್ತದೆ. ಸತ್ವ, ರಜ, ತಮಗಳಿರುವ ಆಹಾರಗಳು ಆಯಾಯ ರೀತಿಯ ಶಕ್ತಿಯನ್ನು ದೇಹದಲ್ಲಿ ಉಂಟು ಮಾಡುವುದು ಸಹಜ. ಸಸ್ಯಹಾರವಿರಲಿ, ಮಾಂಸಹಾರವಿರಲಿ ಎಲ್ಲದರ ಬಳಕೆಯ ಕ್ರಮವನ್ನು ಆಯುರ್ವೇದದಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದ್ದು ಪ್ರತಿಯೊಬ್ಬರು ತಮ್ಮ ದೇಹದ ತೂಕ, ದೈನಂದಿನ ಶ್ರಮಕ್ಕನುಗುಣವಾಗಿ ಆಹಾರಕ್ರಮವನ್ನು ರೂಢಿಸಿಕೊಂಡಲ್ಲಿ ಆರೋಗ್ಯಪೂರ್ಣ ಸ್ವಸ್ಥ ಜೀವನ ನೆಡೆಸಬಹುದು ಎಂದು ಕುಂಭಾಸಿಯ ಶ್ರೀ ಧನ್ವಂತರಿ ಕೇಂದ್ರದ ಆಯುರ್ವೇದ ಚಿಕಿತ್ಸಾ ತಜ್ಞರಾದ ಡಾ. ಪ್ರಾಣದೇವ ಉಪಾಧ್ಯಾಯ ಹೇಳಿದರು. ಅವರು ರೋಟರಿ ಕ್ಲಬ್, ಕುಂದಾಪುರದ ಆಶ್ರಯದಲ್ಲಿ ಆಟಿ ಸಂಭ್ರಮದ ಅಂಗವಾಗಿ ಆಹಾರದಿಂದ ಆರೋಗ್ಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಸ್ವಾಗತಿಸಿದರು. ಲಿಟ್ರಸಿ ಛೇರ್ಮೆನ್ ಗೋಪಾಲ ಶೆಟ್ಟಿ ಹ್ಯಾಪಿ ಸ್ಕೂಲ್ ರೋಟರಿ ಯೋಜನೆಯ ಮಾಹಿತಿ ನೀಡಿದರು. ಇನ್ಫಾರ್ಮೆಶನ್ ಛೇರ್ಮೆನ್ ಡಾ. ಎಂ. ಎನ್. ಅಡಿಗ ರೋಟರಿ ಮಾಹಿತಿ ನೀಡಿದರು. ಯುವಜನ ಸೇವೆ ನಿರ್ದೇಶಕ ಪ್ರವೀಣ ಟಿ ಅತಿಥಿಗಳನ್ನು…
ಕುಂದಾಪುರ: ವಿದ್ಯಾರ್ಥಿ ಜೀವನದಿಂದಲೇ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದು ಹಿರಿಯ ರೋಟೆರಿಯನ್ ಎ.ಪಿ..ಮಿತ್ಯಂತಾಯ ಹೇಳಿದರು. ಅವರು ರೋಟರಿ ಕ್ಲಬ್, ಕುಂದಾಪುರದ ಆಶ್ರಯದಲ್ಲಿ ವಡೇರಹೋಬಳಿಯ ಸರೋಜಿನಿ ಮಧುಸೂದನ ಸರಕಾರಿ ಫ್ರೌಢ ಶಾಲೆಯಲ್ಲಿ 2015-16ನೇ ಸಾಲಿನ ಇಂಟರ್ಯಾಕ್ಟ್ ಪದಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ನೂತನ ಅಧ್ಯಕ್ಷ ಚಂದ್ರಕಾಂತ ಹಾಗೂ ಕಾರ್ಯದರ್ಶಿ ಶಾಲಿನಿ ಅವರಿಗೆ ಪದಪ್ರದಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಇಂಟರ್ಯಾಕ್ಟ್ ಛೇರ್ಮೆನ್ ವೆಂಕಟೇಶ ಪ್ರಭು, ಶಾಲಾ ಮುಖ್ಯೋಪಾಧ್ಯಾಯ ನಾರಾಯಣ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕ ಎಚ್. ಮೀರಾ ಸಾಹೇಬ್ ಶುಭಹಾರೈಸಿದರು. ಅಧ್ಯಾಪಕರಾದ ಯು. ಚನ್ನಯ್ಯ, ಮಂಜುನಾಥ ಹೆಬ್ಬಾರ್, ರೋಟರಿ ಕ್ಲಬ್ ಕುಂದಾಪುರ ಪೂರ್ವಾಧ್ಯಕ್ಷ ಮನೋಜ್ ನಾಯರ್, ಕಾರ್ಯದರ್ಶಿ ಸಂತೋಷ ಕೋಣಿ ಉಪಸ್ಥಿತರಿದ್ಧರು.
ಬೈಂದೂರು: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಇತ್ತಿಚಿಗೆ ಬಂಟಕಲ್ಲು ಶ್ರೀ ಮಧ್ವವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಮೆನೇಜ್ಮೆಂಟ್ ಕಾಲೇಜಿನಲ್ಲಿ ಆಯೋಜಿಸಿದ್ದ 2015-16ನೇ ಸಾಲಿನ ಇನ್ಸ್ಪಾಯರ್ ಅವಾರ್ಡ್ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಬೈಂದೂರು ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ ಶ್ರೀಶ ಬಿ.ಕೆ. ತಯಾರಿಸಿದ ಟ್ರಿ ಶಿಫ್ಟಿಂಗ್ ಹೈಡ್ರೋಲಿಕ್ ಮೆಶಿನ್ ವಿಜ್ಞಾನ ಮಾದರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಇವರು ಬೈಂದೂರು ಬಾಡ ಜಯಾನಂದ ಬಿ.ಕೆ ಹಾಗೂ ಭಾನುಮತಿ ಬಿ.ಕೆ. ಯವರ ಪುತ್ರ.
ಗಂಗೊಳ್ಳಿ: ರಾಷ್ಟ್ರದ ಪ್ರೇರಣಾ ಶಕ್ತಿಯಾಗಿ, ಯುವಕರಿಗೆ ಸ್ಫೂರ್ತಿಯಾಗಿ, ದೇಶದ ಮುನ್ನಡೆಗೆ ೨೦:೨೦ ಯೋಜನೆ ರೂಪಿಸಿದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರದ್ದು ಮೇರು ವ್ಯಕ್ತಿತ್ವ. ಭಾರತ ರತ್ನ ಪ್ರಶಸ್ತಿ ಪಡೆದು ದೇಶದ ಹೆಮ್ಮಯ ಪುತ್ರನಾಗಿ ಇಡೀ ವಿಶ್ವವೇ ತಲೆಬಾಗುತ್ತಿದ್ದ ಡಾ.ಕಲಾಂ ಅವರು ನಮ್ಮನ್ನಗಲಿರುವುದು ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಎಚ್.ಮಂಜು ಬಿಲ್ಲವ ಹೇಳಿದರು. ಅವರು ಮಂಗಳವಾರ ಗಂಗೊಳ್ಳಿ ಲೈಟ್ಹೌಸ್ ಬಳಿಕ ಶ್ರೀ ಜಟ್ಟಿಗೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಿದ ಗಂಗೊಳ್ಳಿ ವಲು ಮಾಟುಬಲೆ ಮೀನುಗಾರರ ಸಭೆಯಲ್ಲಿ ಡಾ.ಅಬ್ದುಲ್ ಕಲಾಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ನುಡಿ ನಮನ ಸಲ್ಲಿಸಿದರು. ಗಂಗೊಳ್ಳಿ ವಲಯ ಮಾಟುಬಲೆ ಘಟಕದ ಮಾಲೀಕರು, ಮುಖ್ಯ ಪಾಲುದಾರರು ಮತ್ತು ಮೀನುಗಾರರು ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ನಮನ ಸಲ್ಲಿಸಿದರು. ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಕಾರ್ಯದರ್ಶಿ ಚೌಕಿ ವಿಠಲ ಖಾರ್ವಿ, ಮಾಜಿ ಅಧ್ಯಕ್ಷರಾದ ವೆಂಕಟೇಶ ಕೋಟಾನ್, ಚಂದ್ರ ಡಿ.ಖಾರ್ವಿ, ಕಂಚುಗೋಡು ಶ್ರೀ ರಾಮ…
