ಉಡುಪಿ: ಪೆರ್ಡೂರು ಕ್ಷೇತ್ರದಲ್ಲಿ ಸಿಂಹ ಸಂಕ್ರಮಣದ ದಿನ ನಡೆಯುವ ಮದುಮಕ್ಕಳ ಜಾತ್ರೆಯಲ್ಲಿ ಮದುವೆ, ಸಂತಾನ, ಐಶ್ವರ್ಯದ ತುಳುನಾಡ ದೈವ “ಮಾಯಕದ ಮಾನಿಬಾಲೆ ಮಾಯಂದಲಮ್ಮ” ಕೃತಿಯು ಬಿಡುಗಡೆಯಾಯಿತು. ಪತ್ರಕರ್ತ ಶೇಖರ ಅಜೆಕಾರು ಅವರ ಈ ಕೃತಿಯನ್ನು ಅನಂತ ಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸದಾನಂದ ಆರ್. ಸೇರ್ವೆಗಾರ್ ಅವರು ದೇವಾಲಯದೆದುರಿನ ಮಂಟಪದಲ್ಲಿ ಬಿಡುಗಡೆ ಮಾಡಿದರು. “ನಾಡು ನುಡಿಯ ಆಚರಣೆಗಳು ನಿರಂತರವಾಗಿ ಜನರ ಜೀವನದ ಅವಿಭಾಜ್ಯ ಅಂಗವಾಗಿ ಬೆಳೆದು ಬಂದಿವೆ. ತುಳುನಾಡಿನ ಮಾಯಕದ ಮಾಯಂದಾಲ ದೈವದ ಕುರಿತ ಈ ಕೃತಿ ಮಾಹಿಪೂರ್ಣವಾಗಿ ಹೊರ ಬಂದಿದೆ” ಎಂದು ಅವರು ಅಭಿಪ್ರಾಯ ಪಟ್ಟರು. ಮದುಮಕ್ಕಳ ಜಾತ್ರೆಯು ಈ ಭಾಗದಲ್ಲಿ ಅತ್ಯಂತ ಭಕ್ತಿ ಭಾವದಿಂದ ನಡೆಯುವ ಜಾತ್ರೆ, ಅನಂತ ಪದ್ಮನಾಭನ ಸನ್ನಿಧಿಗೆ ಈ ಸಂದರ್ಭದಲ್ಲಿ ಸಹಸ್ರಾರು ಮಂದಿ ಭಕ್ತರು ಆಗಮಿಸಿ ತಮ್ಮ ಹರಕೆಯನ್ನು ಸಲ್ಲಿಸುತ್ತಾರೆ. ಮದುಮಕ್ಕಳ ಸಂಭ್ರಮ ಭಕ್ತಿ ಈ ಸಂದರ್ಭದಲ್ಲಿ ವಿಶೇಷವಾಗಿ ಕಾಣಬಹುದು ಎಂದು ಅವರು ಹೇಳಿದರು. ದೇವಾಲಯದ ಆಡಳಿತಾಧಿಕಾರಿ ಪೂರ್ಣಿಮಾ, ನೂತನ ವಧುವರರಾದ ಬುಕ್ಕಿಗುಡ್ಡೆಯ…
Author: Editor Desk
ಕುಂದಾಪುರ ಸೌಹಾರ್ದ ಕ್ರೆಡಿಟ್ ಕೊ-ಅಪರೇಟಿವ್ ಕುಂದಾಪುರ ಇವರಿಂದ ಶಾಲಾ ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗು ವಿತರಣೆ. 69ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತವಾಗಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹುಂಚಾರುಬೆಟ್ಟು ವಡೇರಹೋಬಳಿ ಕುಂದಾಪುರ ಇಲ್ಲಿಯ ಶಾಲಾ ಮಕ್ಕಳಿಗೆ ಕುಂದಾಪುರ ಸೌಹಾರ್ದ ಕ್ರಡಿಟ್ ಕೋ-ಅಪರೇಟಿವ್ ಇದರ ವತಿಯಿಂದ ಉಚಿತವಾಗಿ ಸ್ಕೂಲ್ ಬ್ಯಾಗನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿವಾನಂದರವರು ದ್ವಜಾರೋಹಣಗೈದು ಶಾಲಾ ಮಕ್ಕಳಿಗೆ ಸಿಹಿ ತಿಂಡಿ ಹಂಚಿ ಶುಭ ಹಾರೈಸಿದರು. ಅಲ್ಲದೆ ಮುಂದಿನ ದಿನದಲ್ಲಿ ಈ ಶಾಲೆಗೆ ಉಚಿತ ಸಮವಸ್ತ್ರ ನೀಡುವ ಭರವಸೆಯನ್ನು ನೀಡುವುದರೊಂದಿಗೆ ಮಕ್ಕಳ ವಿವಿಧ ಕಾರ್ಯಕ್ರಮವನ್ನು ವೀಕ್ಷಿಸಿದರು. ಸಂಸ್ಥೆಯ ಉಪಾಧ್ಯಕ್ಷರಾದ ಸುಧಾಕರ ಖಾರ್ವಿ, ನಿರ್ದೇಶಕರಾದ ಕೆ ರಾಜೇಶ್ ಹಾಗೂ ಶಾಖಾ ವ್ಯವಸ್ಥಾಪಕರಾದ ರಾಜು ಉಪಸ್ಥಿತರಿದ್ದರು.
ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನ ಗಣಕವಿಜ್ಞಾನ ವಿಭಾಗದಿಂದ ಯುಜಿಸಿ ಪ್ರಾಯೋಜಿತ ನೆಟ್ ತಂತ್ರಜ್ಞಾನದ ಕುರಿತು ರಾಜ್ಯಮಟ್ಟದ ಕಾರ‍್ಯಾಗಾರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಗಣಕವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ.ಮಂಜಯ್ಯ ಡಿ.ಹೆಚ್. ಅವರು ಉನ್ನತ ಮತ್ತು ವಿಶಿಷ್ಟ ಶಿಕ್ಷಣವನ್ನು ಪಡೆದಷ್ಟು ಸಮಾಜದಲ್ಲಿ ನಾವು ಗುರುತಿಸಲ್ಪಡುತ್ತೇವೆ. ನಮ್ಮ ಶಿಕ್ಷಣ ಎನ್ನುವುದು ನಮ್ಮನ್ನು ಉನ್ನತ ಸ್ಥಾನಮಾನಕ್ಕೆ ಏರಿಸುತ್ತದೆ ಎಂದರು. ನಾವು ಇಂದು ಡಿಜಿಟಲ್ ತಂತ್ರಜ್ಞಾನಯುಗದಲ್ಲಿದ್ದೇವೆ. ಪೂರಕವಾಗಿ ಶಿಕ್ಷಣ, ವಿಜ್ಞಾನ-ತಂತ್ರಜ್ಞಾನ ಮತ್ತು ಸಮಾಜ ಬೆಳೆಯುತ್ತಿದೆ. ನಮ್ಮ ಸಂಪತ್ತು ಅತ್ಯಂತ ಹೆಚ್ಚು ಮಟ್ಟದಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಉಪಯೋಗಕ್ಕೆ ಬರಬೇಕು. ಅದಕ್ಕೆ ಪೂರಕವಾಗಿ ನಮ್ಮ ಶಿಕ್ಷಣ ಬೆಳೆಯಬೇಕು. ನಾವು ಪಡೆದ ಶಿಕ್ಷಣ ವಯಕ್ತಿಕ ನೆಲೆಯಲ್ಲಿ ಹೇಗೆ ಉಪಯೋಗವಾಗಬಹುದು ಎಂಬುದನ್ನು ಯೋಚಿಸಿಕೊಳ್ಳಬೇಕು. ತನ್ಮೂಲಕ ಮೊದಲು ಮನುಷ್ಯನಿಗೆ ತದನಂತರ ಸಮಾಜಕ್ಕೆ ಅನುಕೂಲಕರವಾಗಿರಬೇಕು ಇವುಗಳಿಂದಾಗಿ ಆರೋಗ್ಯಪೂರ್ಣ ಸಮಾಜದ ನಿರ್ಮಾಣದ ಖಂಡಿತ ಸಾಧ್ಯವಿದೆ ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿ ಡಾ.ಹೆಚ್.ಶಾಂತಾರಾಮ್ ವಹಿಸಿದ್ದರು.…
ಕುಂದಾಪುರ: ಬಸ್ರೂರು ರಥಬೀದಿ ಫ್ರೆಂಡ್ಸ್‌ನ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಪೂರ್ವಭಾವಿ ಸಭೆಯು ಜು.26ರಂದು ರಥಬೀದಿ ಫ್ರೆಂಡ್ಸ್ ಕಛೇರಿಯಲ್ಲಿ ಜರುಗಿತು. ಸಮಿತಿಯ ಗೌರವ ಅಧ್ಯಕ್ಷರಾದ ರಾಮ್ ಕಿಶನ್ ಹೆಗ್ಡೆ ಹಾಗೂ ಅಧ್ಯಕ್ಷರಾದ ಶ್ರೀಕಾಂತ ಕೆರೆಕಟ್ಟೆಯವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ರಥಬೀದಿ ಫ್ರೆಂಡ್ಸ್ ದಶಮಾನೋತ್ಸವ ಸಮಿತಿಯ ಈ ಕೆಳಗಿನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆರಿಸಲಾಯಿತು. ಅಧ್ಯಕ್ಷರಾಗಿ ಹರೀಶ್ ಪಡಿಯಾರ್, ಕಾರ್ಯದರ್ಶಿಯಾಗಿ ಉಮೇಶ ಆಚಾರ್ಯ, ಉಪಾಧ್ಯಕ್ಷರಾಗಿ ರಾಮಚಂದ್ರ ನಾಯಕ್, ಪ್ರದೀಪ್ ಜೋಗಿ, ರಾಘವ ಶ್ರೀಯಾನ್, ಜೊತೆಕಾರ್ಯದರ್ಶಿಯಾಗಿ ಜಗದೀಶ್ ಪುರಾಣಿಕ್, ಕೋಶಾಧಿಕಾರಿ ಮಹೇಶ್ ಕಿಣಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆರಿಸಲಾಯಿತು. ಸಮಿತಿಯ ಅಧ್ಯಕ್ಷರು ದಶಮಾನೋತ್ಸವ ಸಮಿತಿಯ ಮುಂದಿನ ಕಾರ್ಯಕ್ರಮಗಳಲ್ಲಿ ಸರ್ವ ಸದಸ್ಯರ ಸಂಪೂರ್ಣ ಸಹಕಾರವನ್ನು ಕೋರಿದರು. ರಥಬೀದಿ ಫ್ರೆಂಡ್ಸ್ ಕಾರ್ಯದರ್ಶಿ ನಾಗೇಶ್ ಎಸ್. ಬಳ್ಕೂರು ವಂದಿಸಿದರು.
ಕುಂದಾಪುರ: ಬಡಾಕೆರೆ ಹಂಗಳೂರು ಶಾಲಾ ವಠಾರದಲ್ಲಿ ಸರಕಾರದಿಂದ ಕೊಡ ಮಾಡಿದ ಉಚಿತ ಸೈಕಲ್ ವಿತರಣಾ ಸಮಾರಂಭದ ಸಭೆಯ ಅಧ್ಯಕ್ಷತೆಯನ್ನು ಹಂಗಳೂರು ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ಜಲಜ ಹೆಚ್. ಚೆಂದನ್ ವಹಿಸಿದ್ದರು. ತಾಲೂಕು ಪಂಚಾಯತ್ ಸದಸ್ಯ ಮಂಜು ಬಿಲ್ಲವ ವಿದ್ಯಾರ್ಥಿಗಳಿಗೆ ಸರಕಾರದಿಂದ ಕೊಡಮಾಡಿದ ಸೈಕಲನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು. ಹಂಗಳೂರು ಗ್ರಾ.ಪಂ. ಉಪಾಧ್ಯಕ್ಷರಾದ ಸ್ಟೀವನ್, ಸದಸ್ಯರಾದ ಶ್ರೀಮತಿ ಜನೇಟಾ, ಶ್ರೀಮತಿ ಸರೋಜ ಪೂಜಾರ್ತಿ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀಮತಿ ಸಾಧು ಪೂಜಾರ್ತಿ, ಉಪಾಧ್ಯಕ್ಷರಾದ ರಾಮ ದೇವಾಡಿಗ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶಂಕರ ಪೂಜಾರಿ ಸ್ವಾಗತಿಸಿದರು. ಶಾಲಾ ಶಿಕ್ಷಕರು ಹಾರಜರಿದ್ದು, ಶ್ರೀಮತಿ ಶ್ಯಾಮಲ ಶಿಕ್ಷಕಿ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ರಾಮ ಕೆ.ಕೆ. ಕಾರ್ಯಕ್ರಮ ನಿರೂಪಿಸಿದರು.
ಕುಂದಾಪುರ: ಯಾವುದೇ ಪ್ರಾಣಿಗಳು ಕೂಡಿಡುವ ಪ್ರಯತ್ನ ಮಾಡುವುದಿಲ್ಲ. ಮಾನವ ತನ್ನ ಮುಂದಾಲೋಚನೆಯಿಂದ ಕೂಡಿಡುವ ಪ್ರಯತ್ನ ಮಾಡುತ್ತಾ ಪ್ರಕೃತಿಯನ್ನು ಶೋಷಿಸುತ್ತಿದ್ದಾನೆ. ಪರಿಸರಕ್ಕೆ ನಾವು ಅನಿವಾರ್ಯವಲ್ಲ ಆದರೆ ನಮಗೆ ಪರಿಸರ ಅನಿವಾರ್ಯ ಎಂಬ ವಿವೇಚನೆಯನ್ನು ಬೆಳಸಿಕೊಳ್ಳ ಬೇಕು. ಪರಿಸರವನ್ನು ಸಂರಕ್ಷಿಸಿದರೇ ಮಾತ್ರ ಮನುಕುಲದ ಉಳಿವು ಎಂಬ ಅರಿವನ್ನು ಹೊಂದಿ ಕಾರ್ಯನಿರ್ವಹಿಸ ಬೇಕಿದೆ ಎಂದು ಕುಂದಾಪುರದ ವಲಯ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಕುಮಾರ್ ಹೇಳಿದರು. ಅವರು ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ರೋಟರಿ ನರ್ಸರಿ ಸ್ಕೂಲ್ ಹಾಲ್‌ನಲ್ಲಿ ಸಸ್ಯ ಸಂವರ್ಧನೆ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು. ಕರಾವಳಿ ಹಾಗೂ ಮಲೆನಾಡಿನಲ್ಲಿ ನೀರಿನ ಟ್ಯಾಂಕ್‌ಗಳು ಓಡಾಡುತ್ತಿವೆ ಎಂದರೆ ನಮಗೆ ಪರಿಸರ ಕಾಳಜಿ ಎಷ್ಟಿದೆ ಎಂಬುವುದು ಅರಿವಾಗುತ್ತದೆ. ಬಹುತೇಕ ಅರಣ್ಯ ಭಾಗಗಳಿದ್ದರೂ ಅದನ್ನು ಸಂರಕ್ಷಿಸುವ ಪ್ರಯತ್ನದಲ್ಲಿ ಮಾನವ ವಿಫಲನಾಗುತ್ತಿದ್ದಾನೆ ಇದು ಕ್ರಮೇಣ ನೀರಿನ ಅಭಾವಕ್ಕೆ ಕಾರಣವಾಗುತ್ತಿದೆ. ಪರಿಸರ ಮತ್ತು ಮಾನವ ಒಂದಕ್ಕೊಂದು ಪೂರಕವಾಗಿ ಮುನ್ನೆಡೆದರೆ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ. ಆದುದರಿಂದ ಮರಗಿಡಗಳನ್ನು ಪ್ರೀತಿಸಿ ಅವುಗಳ ಬಗ್ಗೆ…
ಕುಂದಾಪುರ: ದೇಶದ 11 ಕೇಂದ್ರ ಕಾರ್ಮಿಕ ಸಂಘಟನೆಗಳು ಸೆಪ್ಟಂಬರ್ 2 ರಂದು ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬುಧವಾರದಂದು ಭಾರತೀಯ ಮಜ್ದೂರ್‌ಸಂಘ (ಬಿ.ಎಂ.ಎಸ್) ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೇಸ್ (ಇಂಟಕ್) ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಸಂಘಟನೆಗಳು ಜಂಟಿಯಾಗಿ ಸಭೆ ಸೇರಿ ಮುಷ್ಕರವನ್ನು ಬೆಂಬಲಿಸಿ ಭಾಗವಹಿಸಲು ಕುಂದಾಪುರದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿತು. ಪ್ರಮುಖ ಬೇಡಿಕೆಗಳಾದ ರಸ್ತೆ ಸಾರಿಗೆ ಮಸೂದೆ-2014 ವಾಪಾಸ್ಸು ಪಡೆಯಬೇಕು, ಕಾರ್ಮಿಕ ಕಾನೂನು ಮಾಲೀಕರ ಪರ ತಿದ್ದುಪಡಿ ಕೈಬಿಡಬೇಕು, ಕನಿಷ್ಟ ವೇತನ ರೂ. 15,000 ನಿಗದಿಯಾಗಬೇಕು, ವಿಮಾ ರಂಗದಲ್ಲಿ ವಿದೇಶಿ ನೇರ ಬಂಡವಾಳ ಮಿತಿಯನ್ನು ಶೇ.49ರಷ್ಟು ಹೆಚ್ಚಿಸುವ ಸುಗ್ರೀವಾಜ್ಞೆ ವಾಪಾಸ್ಸಾಗಬೇಕು, ರೂ. 3,000 ಕನಿಷ್ಠ ಪಿಂಚಣಿ ನೀಡಬೇಕು, ಸಾರ್ವಜನಿಕ ರಂಗದ ಶೇರು ವಿಕ್ರಯ ನಿಲ್ಲಿಸಬೇಕು. ಬೆಲೆ ಏರಿಕೆ ತಡೆಗಟ್ಟಬೇಕು, ಗುತ್ತಿಗೆ ಕಾರ್ಮಿಕ ಕಾನೂನಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ತಿದ್ದುಪಡಿ ಮಾಡಬೇಕು, ಮುಂತಾದ ಬೇಡಿಕೆಗಳಿಗಾಗಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಯಲಿದೆ. ಸಿಐಟಿಯು…
ಕುಂದಾಪುರ: ಗಂಗೊಳ್ಳಿಯ ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿಯ ಆಶ್ರಯದಲ್ಲಿ ದಿ. ಅಕ್ಷತಾ ದೇವಾಡಿಗ ಮತ್ತು ದಿ. ರತ್ನಾ ಕೊಠಾರಿ ಸ್ಮರಣಾರ್ಥ ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ಸಚಿವರ ಸಂವಾದ ಕಾರ್ಯಕ್ರಮ ಆ.29ರಂದು ಮಧ್ಯಾಹ್ನ 2 ಗಂಟೆಗೆ ಗಂಗೊಳ್ಳಿಯ ಶ್ರೀ ವಿಜಯ ವಿಠಲ ಮಂಟಪದಲ್ಲಿ ನಡೆಯಲಿದೆ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಕಾರ್ಯಕ್ರಮ ಉದ್ಘಾಟಿಸಿ ’ವಿದ್ಯಾರ್ಥಿನಿಯರ ಸುರಕ್ಷತೆಯಲ್ಲಿ ಸಮಾಜದ ಪಾತ್ರ’ ಕುರಿತು ಕುಂದಾಪುರ ತಾಲೂಕಿನ ವಿವಿಧ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ರೇಷ್ಮಾ ಆರ್.ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ, ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ, ಕುಂದಾಪುರ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಬಿ.ಎಂ.ಸುಕುಮಾರ್ ಶೆಟ್ಟಿ, ಉಡುಪಿ ಜಿಲ್ಲೆಯ ಡಿಡಿಪಿಐ ಎಚ್.ದಿವಾಕರ ಶೆಟ್ಟಿ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಜಿ.ಭಾಸ್ಕರ ಖಾರ್ವಿ ತಿಳಿಸಿದ್ದಾರೆ.
ಕುಂದಾಪುರ: ವಿದ್ಯೆಗೆ ಜಾತಿ ಮತ, ಬಡವ ಬಲ್ಲಿದ ಎಂಬ ಬೇಧಭಾವವಿಲ್ಲ. ಬಾಲ್ಯದಲ್ಲಿ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ನೀಡಿ ವಿದ್ಯಾವಂತರಾಗಬೇಕು. ಆ ಮೂಲಕ ಸಮಾಜದ ದೀನದಲಿತರ ಸೇವೆ ಮಾಡುವಂತಾಗಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಒಳ್ಳೆತನವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ಭವಿಷ್ಯದಲ್ಲಿ ಬೇರೆ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದಾಗ ಮಾತ್ರ ವಿದ್ಯಾರ್ಥಿವೇತನ ನಿಜವಾದ ಪ್ರಯೋಜನ ಪಡೆದಂತಾಗುತ್ತದೆ ಎಂದು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಆರ್.ಎನ್.ರೇವಣಕರ್ ಹೇಳಿದರು. ಅವರು ಇತ್ತೀಚಿಗೆ ಗಂಗೊಳ್ಳಿಯ ಶ್ರೀ ವಿಜಯವಿಠಲ ಮಂಟಪದಲ್ಲಿ ಸ್ಥಳೀಯ ಪಂಚಗಂಗಾವಳಿ ಬಳಗ ಪ್ರಾಯೋಜಿತ ಪಂಚಗಂಗಾವಳಿ ವಿದ್ಯಾನಿಧಿ ಯೋಜನೆಯ ೧೧ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದರು. ಕುಂದಾಪುರ ರೋಟರಿ ಕ್ಲಬ್ ಸನ್‌ರೈಸ್‌ನ ಅಧ್ಯಕ್ಷ ದಿನಕರ ಪಟೇಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರಕಾಶ ಆರ್.ಖಾರ್ವಿ ಶುಭ ಹಾರೈಸಿದರು. ವಿದ್ಯಾನಿಧಿ ಯೋಜನೆಯ ಸಂಚಾಲಕ ಜಿ.ಪುರುಷೋತ್ತಮ ಆರ್ಕಾಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚೇತನ ಖಾರ್ವಿ ಸಂದೇಶ ವಾಚಿಸಿದರು. ಯೋಜನೆಯ ಗೌರವ ಕಾರ್ಯದರ್ಶಿ ಜಿ.ಎನ್.ಸತೀಶ ಖಾರ್ವಿ…
ಕುಂದಾಪುರ: ಇಂದು ಮಾತ್ರ ನಮ್ಮದು. ನಾಳೆ ಹೇಗೋ, ಏನೋ ಎಂಬುದು ಯಾರಿಗೂ ತಿಳಿದಿಲ್ಲ. ಬದುಕಿದ್ದಾಗ ಜನ ನೆನಪಿಸಿಕೊಳ್ಳುತ್ತಾರೆ. ಆದರೆ ಇಹಲೋಕದ ಪಯಣ ಮುಗಿದ ಮೇಲೆ ನೆನಪಿಸಿಕೊಳ್ಳುವವರ್ಯಾರು? ಮರಣದ ಬಳಿಕವೂ ಉಳಿಯುವ ವ್ಯಕ್ತಿಯ ಹೆಸರನ್ನಷ್ಟೇ ಅಲ್ಲದೇ ಅವರನ್ನು ಪತ್ಯಕ್ಷವಾಗಿ ನೋಡಬೇಕೆಂದಿದ್ದರೇ, ಆ ಮೂಲಕ ವೈದ್ಯವಿಜ್ಞಾನದ ಹೊಸ ಆವಿಷ್ಕಾರಗಳಿಗೆ ನೆರವಾಗಬೇಕೆಂದಿದ್ದರೇ ಇರುವುದೊಂದೇ ಮಾರ್ಗ. ಅದು ಮರಣೋತ್ತರ ದೇಹದಾನ. ಮರಣದ ಬಳಿಕ ದೇಹವನ್ನು ಸುಟ್ಟು ಇಲ್ಲವೇ ಹೂತು ಮಣ್ಣಲ್ಲಿ ಮಣ್ಣಾಗಿಸುವ ಬದಲಿಗೆ ಅದು ವೈದ್ಯಕೀಯ ಲೋಕದ ಪ್ರಯೋಗ, ಸಂಶೋಧನೆಗಳಿಗೆ ನೆರವಾದರಷ್ಟು ಒಳ್ಳೆಯದು ಎಂಬುದನ್ನು ಅರಿತ ಗೋಪಾಲ ಶೆಟ್ಟಿ ಹಾಗೂ ಪುಪ್ಪಾ ಗೋಪಾಲ ಶೆಟ್ಟಿ ದಂಪತಿಗಳುಮರಣೋತ್ತರ ತಮ್ಮ ದೇಹವನ್ನು ದಾನ ಮಾಡಲು ಒಪ್ಪಿಗೆ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಕರಾವಳಿ ಕ್ರಾಂತಿ ಪಾಕ್ಷಿಕದ ಸಂಪಾದಕರಾಗಿರುವ ಗೋಪಾಲ ಶೆಟ್ಟಿ, ಹಲವಾರು ಸಮಾಜಕಾರ್ಯ ಕೆಲಸಗಳಲ್ಲಿಯೂ ಸದಾ ನಿರತರು. ಗೋಪಾಲ ಶೆಟ್ಟಿ ಹಾಗೂ ಪುಪ್ಪಾ ದಂಪತಿಗಳು ದೈವಭಕ್ತರಾದರೂ ತಮ್ಮ ಧರ್ಮದಂತೆ ಮರಣೊತ್ತರದ ಧಾರ್ಮಿಕ ಕ್ರಿಯಾ ಕರ್ಮಗಳನ್ನು ನೆರವೇರಿಸುವುದಕ್ಕಿಂತಲೂ ದೇಹದಾನದಿಂದ ಮಾನವ ಕೋಟಿಗೆ…
