Author: Editor Desk

ಬೈಂದೂರು: ಕಾಲ್ತೋಡು ಗ್ರಾಮದ ಮಹಾಲಸಾ ಮಾರಿಕಾಂಬ ದೇವಳಕ್ಕೆ ಗುರುವಾರ ರಾತ್ರಿ ನುಗ್ಗಿದ ಕಳ್ಳರು  ಸುಮಾರು 6ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿದ ಘಟನೆ ವರದಿಯಾಗಿದೆ. ಸಂಜೆ ಗಂಟೆ 7:30 ರ ಸುಮಾರಿಗೆ ಅರ್ಚಕರು ಪೂಜೆ ಮಾಡಿ ದೇಗುಲಕ್ಕೆ ಬೀಗ ಹಾಕಿ ಮನೆಗೆ ತೆರಳಿದ ಬಳಿಕ ತಡ ರಾತ್ರಿ ದೇವಳದ ಬಾಗಿಲಿನ ಬೀಗ ಮುರಿದು, ಒಳ ನುಗ್ಗಿದ ಕಳ್ಳರು ಗರ್ಭಗುಡಿಗೆ ತೆರಳಿ ದೇವರಿಗೆ ಅಲಂಕಾರ ಮಾಡಿ ಇಟ್ಟ ಸುಮಾರು 3.5 ಕೆ.ಜಿಯ ಬೆಳ್ಳಿಯ ಪ್ರಭಾವಳಿ, ಎರಡು ಪವನ್ ಚಿನ್ನದ ಮಾಂಗಲ್ಯ ಸರ ಹಾಗೂ ದೇವರ ವಿಗ್ರಹದ ಚಿನ್ನದ ಮೂಗುತಿ ಸೇರಿದಂತೆ ಸುಮಾರು ೬ಲಕ್ಷ ರೂ. ಮೌಲ್ಯದ ಚಿನ್ನದ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿದ್ದಾರೆ. ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಅರ್ಚಕರು ಪೂಜೆಗಾಗಿ ದೇವಾಲಯಕ್ಕೆ ಬಂದಾಗ ದೇಗುಲದ ಬಾಗಿಲಿನ ಬೀಗ ಮುರಿದಿರುವುದು ಕಂಡು ಬಂದಿದ್ದು, ಒಳ ಪ್ರವೇಶಿಸಿ ನೋಡಿದಾಗ ಕಳವು ಮಾಡಿರವುದು ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರ ಸಹಕಾರದಿಂದ ಬೈಂದೂರು ಠಾಣೆಗೆ ಮಾಹಿತಿ ನೀಡಿದ್ದಾರೆ.…

Read More

ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚಿತ್ತೂರು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಚಿತ್ತೂರು ಪ್ರೌಢಶಾಲೆ ಮತ್ತು ಚಿತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ವನಮಹೋತ್ಸವ ಮತ್ತು ಪರಿಸರ ಮಾಹಿತಿ ಕಾರ್ಯಕ್ರಮ ನಡೆಯಿತು. ಚಿತ್ತೂರು ವಲಯ ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ ವಂಡಬಳ್ಳಿ ಜಯರಾಮ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚಿತ್ತೂರು ವಲಯ ಮೇಲ್ವಿಚಾರಕ ಪ್ರಭಾಕರ, ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ ಮಡಿವಾಳ, ಒಕ್ಕೂಟದ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷ ನಾಗೇಂದ್ರ ಆಚಾರ್ಯ, ನಿಕಟಪೂರ್ವಧ್ಯಕ್ಷ ದಿವಾಕರ ಆಚಾರ್ಯ, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ತಾರಾ, ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ನಾರಾಯಣ ಶೆಟ್ಟಿ, ಸೇವಾ ಪ್ರತಿನಿಧಿ ಮಮತಾ, ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

Read More

ಗಂಗೊಳ್ಳಿ: ಕುಂದಾಪುರದ ವಿ.ಕೆ.ಆರ್.ಆಚಾರ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚಿಗೆ ನಡೆದ 2015-16ನೇ ಸಾಲಿನ ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಬಾಲಕಿಯ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ವಿಜೇತ ತಂಡದ ವಿದ್ಯಾರ್ಥಿಗಳು ಪ್ರಿಯಾಂಕಾ, ಅನುಶ್ರೀ, ಸನ್ಮಿತಾ ಹಾಗೂ ಸಂಜನಾ, ಅವರು ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶಾಂತಿ ಡಿ’ಕೋಸ್ತಾ, ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಎಸ್. ಮತ್ತು ದೈಹಿಕ ಶಿಕ್ಷಣ ಶಿಕ್ಷಕ ರತ್ನಾಕರ ಶೆಟ್ಟಿ ಅವರೊಂದಿಗಿರುವುದು ನೋಡಬಹುದು.

Read More

ಶಂಕರನಾರಾಯಣ: ಎರಡು ದಿನಗಳ ಹಿಂದೆ ಕಾಲೇಜು ವಿದ್ಯಾರ್ಥಿನಿಯೋರ್ವಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಕ್ಕೊಳಗಾಗಿರುವ ಎಡಮೊಗೆ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಬಾಲಚಂದ್ರ ಕುಲಾಲ್‌ ಅವರನ್ನು ಬಂಧಿಸುವಂತೆ ಆಗ್ರಹಿಸಿ ಶಂಕರನಾರಾಯಣ ಪೇಟೆಯಲ್ಲಿ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದರು. ಶಂಕರನಾರಾಯಣ ಕಾಲೇಜು ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಹೊರನಡೆದು ಪ್ರತಿಭಟನಾ ಮೆರವಣಿಗೆ ನಡೆಸಿ ಅರ್ಧ ಗಂಟೆಗೂ ಹೆಚ್ಚು ಕಾಲ ರಾಜ್ಯ ಹೆದ್ದಾರಿಯನ್ನು ಬಂದ್‌ ಮಾಡಿದರು. ಎಬಿವಿಪಿ ಸಂಘಟನೆ,  ಬಿಜೆಪಿ ಯುವಮೋರ್ಚಾ, ರಾಜ್ಯ ಕಾರ್ಮಿಕ ಘಟಕ ಮತ್ತು ವಿವಿಧ ಸಂಘಟನೆಗಳ ಸದಸ್ಯರು ಎಡಮೊಗೆ ಪಂಚಾಯತ್‌ ಎದುರು ಪ್ರತಿಭಟನೆ ನಡೆಸಿ ಬಾಲಚಂದ್ರ ಕುಲಾಲ್‌ನ ಪಂಚಾಯತ್‌ ಸದಸ್ಯತ್ವ ರದ್ದು  ಮಾಡಿ ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಶಂಕರನಾರಾಯಾಣ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದರು.

Read More

ಬೈಂದೂರು: ಮಳೆಗಾಲವೆಂದಾಕ್ಷಣ ಅಲ್ಲಿನ ಜನರಲ್ಲೊಂದು ಸಣ್ಣ ಆತಂಕ ಶುರುವಾಗುತ್ತದೆ. ತಮ್ಮೂರಿಗೊಂದು ಸೇತುವೆಯಾಗಬೇಕೆಂಬ ಬೇಡಿಕೆ ಇಟ್ಟು ವರ್ಷಗಳೇ ಕಳೆದರೂ ಇನ್ನೂ ಅದು ಕನಸಾಗಿಯೇ ಉಳಿದು ಅನ್ಯ ಮಾರ್ಗವಿಲ್ಲದೇ ಗಂಗಾನಾಡು ಹೊಳೆಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿರುವ ಮರದ ಹಲಗೆಯ ಸೇತುವೆಯ ಮೂಲಕವೇ ದಾಟುವ ಅನಿವಾರ್ಯತೆ ಅವರದ್ದು. ಸರಕಾರ ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಹತ್ತಾರು ಯೋಜನೆಗಳನ್ನು ಜಾರಿಗೆ ತಂದರೂ ಸಹಿತ ಸಂಪರ್ಕ ಸೇತುವೆಗಾಗಿ ಹೋರಾಟ ನಡೆಸುತ್ತಿಸುತ್ತಿರುವ ಕಲ್ಯಾಣ್ಕಿ – ಕುಂಜಳ್ಳಿನ ಜನತೆಗೆ ಮಾತ್ರ ಈ ತಾತ್ಕಲಿಕ ಕಾಲುಸಂಕದಿಂದ ಇನ್ನೂ ಮುಕ್ತಿ ದೊರೆಯತಿಲ್ಲ. ಬೈಂದೂರು ಹಾಗೂ ಯಡ್ತರೆ ಗ್ರಾಮ ಪಂಚಾಯತ್ ಗಡಿಭಾಗದಲ್ಲಿರುವ ಕಲ್ಯಾಣ್ಕಿ, ಕುಂಜಳ್ಳಿ, ಮದ್ದೋಡಿ, ತೋಕ್ತಿ ಸೇರಿದಂತೆ ಮೊದಲಾದ ಕುಗ್ರಾಮಗಳು ಬೈಂದೂರು ಪೇಟೆಯಿಂದ ಸುಮಾರು 13 ಕಿ.ಮೀ. ದೂರದಲ್ಲಿದೆ. ಇಲ್ಲಿನ ಸಾರ್ವಜನಿಕರು, ವಿದ್ಯಾರ್ಥಿಗಳು ಪ್ರತಿದಿನ ಬೈಂದೂರಿಗೆ ಬರಬೇಕಾದರೆ ಗಂಗನಾಡು ಹೊಳೆಯನ್ನು ದಾಟಿ ಬರಬೇಕಾಗಿದೆ. ಆದರೆ ಮಳೆಗಾಲದಲ್ಲಿ ಈ ಹೊಳೆಯಲ್ಲಿ ನೀರಿನ ಸೆಳೆತ ಹೆಚ್ಚಾಗಿದ್ದು ಹೊಳೆ ದಾಟಲು ಇಲ್ಲಿನ ಸ್ಥಳೀಯರು ಮರದ ದಿಮ್ಮಿಗಳನ್ನು ಬಳಸಿ ತಾತ್ಕಲಿಕ ಕಾಲು ಸಂಕ…

Read More

ಕುಂದಾಪುರ: ರೋಟರಿ ಕ್ಲಬ್, ಕುಂದಾಪುರದ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಕುಂದಾಪುರದ ಖ್ಯಾತ ವೈದ್ಯ ಡಾ. ಬಿ. ಆರ್. ಶೆಟ್ಟಿ ಅವರು ರೋಟರಿಯ ಚತುರ್ವಿಧ ಪರೀಕ್ಷೆಯ ಪತ್ರಕವನ್ನು ಬಿಡುಗಡೆಗೊಳಿಸಿ, ಚತುರ್ವಿಧ ಪರೀಕ್ಷೆಯನ್ನು ತಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡಾಗ ರೋಟರಿಯ ಧ್ಯೇಯ ವಾಕ್ಯದಂತೆ ವಿಶ್ವಕ್ಕೆ ವರವಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂದರು. ರೋಟರಿ ಕ್ಲಬ್, ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅಧ್ಯಕ್ಷತೆವಹಿಸಿದ್ದರು. ರೋಟರಿ ಪದಪ್ರದಾನ ಕಾರ್ಯಕ್ರಮದ ಕುರಿತು ಮಾತನಾಡಿದ ರೋಟರ‍್ಯಾಕ್ಟ್ ಛೇರ್‌ಮೆನ್ ಎಚ್.ಎಸ್. ಹತ್ವಾರ್ ಅವರು ಸಮಯ ಪ್ರಜ್ಞೆಗೆ ಹೆಚ್ಚಿನ ಆದ್ಯತೆ ನೀಡಿ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭಿಸಿ ಮುಕ್ತಾಯಗೊಳಿಸಿರುವುದು ರೋಟರಿ ವಲಯ ೧ರ ಸದಸ್ಯರ ಪ್ರಶಂಸೆಗೆ ಪಾತ್ರವಾಗಿದೆ ಎಂದರು. ಡಾ. ಛಾಯಾ ಹೆಬ್ಬಾರ್, ರವಿರಾಜ್ ಶೆಟ್ಟಿ, ಟಿ. ಬಿ. ಶೆಟ್ಟಿ, ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಇನ್ನಿತರರು ಅಭಿಪ್ರಾಯ ಹಂಚಿಕೊಂಡರು. ಕ್ಲಬ್ ಸರ್ವೀಸ್ ನಿರ್ದೇಶಕ ಸಾಲಗದ್ದೆ ಶಶಿಧರ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಸಂತೋಷ ಕೋಣಿ ವಂದಿಸಿದರು.

Read More

ಕುಂದಾಪುರ: ಜ್ಞಾನ ವಿಕಸನ ಪ್ರತಿಯೊಬ್ಬರ ಬೌದ್ಧಿಕಮಟ್ಟವನ್ನು ವಿಸ್ತರಿಸಿ ಅಮೂಲಾಗ್ರವಾದ ಬದಲಾವಣೆಯನ್ನು ತರುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಅದುದರಿಮದ ರೋಟರಿ ಕ್ಲಬ್ ಪ್ರಸಕ್ತ ಸಾಲಿನಲ್ಲಿ ಜ್ಞಾನದ ಹಸಿವನ್ನು ಇಂಗಿಸಿ ಪ್ರಭುದ್ಧತೆಯ ಕಡೆಗೆ ಕೊಂಡೊಯ್ಯುವ ಪ್ರಯತ್ನ ಮಾಡಲಿದೆ ಇದರಿಂದ ಎಳವೆಯಲ್ಲಿಯೇ ಸ್ವಾವಲಂಬನೆಯ ಚಿಂತನೆ ಬೆಳೆದು ಭವಿಷ್ಯದಲ್ಲಿ ಸುಧೃಢವಾದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಹೇಳಿದರು. ಅವರು ಜುಲೈ 19ರಂದು ರೋಟರಿ ಕ್ಲಬ್, ಕುಂದಾಪುರದ ಆಶ್ರಯದಲ್ಲಿ ಕೆದೂರಿನ ಸ್ಫೂರ್ತಿಧಾಮದ ವಿದ್ಯಾರ್ಥಿಗಳಿಗೆ ರೋಟರಿ ಚತುರ್ವಿಧ ಪರೀಕ್ಷೆಯ ಕುರಿತು ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು. ರೋಟರಿ ವಲಯ-1ರ ಲೆಫ್ಟಿನೆಂಟ್ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಅವರು ಚತುರ್ವಿಧ ಪರೀಕ್ಷೆಯ ಮಾಹಿತಿ ನೀಡಿ ಸ್ಪರ್ಧೆಯಲ್ಲಿ ಭಾಗವಹಿಸಿದವರನ್ನು ಅಭಿನಂದಿಸಿದರು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಸುನಿಲ್ ಕೆ.ಯು. ಮೈಸೂರು ಹಾಗೂ ಪ್ರೇಮಾ ಪಡೆದುಕೊಂಡರು. ದ್ವಿತೀಯ ಬಹುಮಾನವನ್ನು ಸತೀಶ್ ಬಳೆಗಾರ ಪಡೆದುಕೊಂಡರು. ಕುಂದಾಪುರ ರಕ್ತನಿಧಿ ಕೇಂದ್ರದ ಕೋ-ಆರ್ಡಿನೇಟರ್ ಆವರ್ಸೆ ಮುತ್ತಯ್ಯ ಶೆಟ್ಟಿ, ರೋಟರಿ…

Read More

ಕುಂದಾಪುರ: ಹಗಲು ಮತ್ತು ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕೊಲ್ಲೂರಿನಲ್ಲಿ ಹುಟ್ಟಿ, ಹಲವು ಗ್ರಾಮಗಳ ಮೂಲಕ ಹರಿದು ಗಂಗೊಳ್ಳಿಯಲ್ಲಿ ಸಮುದ್ರ ಸೇರುವ ಸೌಪರ್ಣಿಕಾ ನದಿಯಲ್ಲಿ ಮಧ್ಯರಾತ್ರಿ ಹೊತ್ತಿಗೆ ಬಂದ ಪ್ರವಾಹದಲ್ಲಿ ನದಿ ತೀರದ ನೂರಾರು ಮನೆಗಳು ಜಲಾವೃತವಾದುವಲ್ಲದೆ ಮನೆಗಳಲ್ಲಿದ್ದ ಬೆಲೆಬಾಳುವ ಸ್ವತ್ತುಗಳು ನಾಶವಾದುವು. ಹೇರೂರು, ಉಳ್ಳೂರು, ಬಡಾಕೆರೆ, ನಾವುಂದ, ಮರವಂತೆ, ನಾಡ, ಹಡವು, ತ್ರಾಸಿ, ಹೊಸಾಡು, ಸೇನಾಪುರ ಗ್ರಾಮಗಳಲ್ಲಿ ನೆರೆ ತನ್ನ ಉಗ್ರ ಸ್ವರೂಪ ತೋರಿದೆ. ಮಧ್ಯ ರಾತ್ರಿ ನಿದ್ದೆಯಿಂದ ಎಚ್ಚತ್ತ ಕೆಲವರು ಉಳಿದವರಿಗೆ ಸುದ್ದಿ ಮುಟ್ಟಿಸಿದ್ದರಿಂದ ಯುವಕರು ಲಭ್ಯ ದೋಣಿಗಳನ್ನು ಬಳಸಿ ಜನರನ್ನು ಎತ್ತರದ ಪ್ರದೇಶಗಳಿಗೆ ಸಾಗಿಸಿದ್ದರಿಂದ ಯಾವುದೇ ಜೀವ ಹಾನಿ ಸಂಭವಿಸಲಿಲ್ಲ. ಈ ಗ್ರಾಮಗಳಲ್ಲಿ ನದಿಯ ನೀರು ಇಕ್ಕಡೆಗಳಲ್ಲಿ ಒಂದು, ಒಂದೂವರೆ ಕಿಲೋಮೀಟರುಗಳಷ್ಟು ಪ್ರದೇಶವನ್ನು ಆವರಿಸಿದ್ದರಿಂದ ನದಿತೀರದ ಎಲ್ಲ ಮನೆಗಳಿಗೆ ನೀರು ನುಗ್ಗಿದೆ. ಹಲವು ಮನೆಗಳು ಜಲಾವೃತವಾದರೆ, ಇನ್ನು ಹಲವು ಮನೆಗಳೊಳಗೆ ಮಂಡಿ ಮುಳುಗುವಷ್ಟು ನೀರು ನಿಂತಿತು. ನೀರು ನುಗ್ಗಿದ ಮನೆಗಳಲ್ಲಿ ಆಹಾರ ಸಾಮಗ್ರಿಗಳು, ಅನ್ಯ ದಿನೋಪಯೋಗಿ ವಸ್ತುಗಳು…

Read More

ಕುಂದಾಪುರ: ಸೌರ್ಪಣಿಕಾ ನದಿಯಲ್ಲಿ ನೆರೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಬಡಾಕೆರೆಯ ಕೋಣ್ಕಿ ಎಂಬಲ್ಲಿ ಸೌಪರ್ಣಿಕ ನದಿಯ ತೀರದಲ್ಲಿ ಹಾಗೂ ನದಿಯ ಮಧ್ಯದಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಕಂಬಗಳು ನೆರೆಗೆ ಕೊಚ್ಚಿ ಹೋದ ಪರಿಣಾಮ ಕುಂದಾಪುರ ತಾಲೂಕಿನ ಬೈಂದೂರು ಹಾಗೂ ಶಿರೂರು ಜನರು ಕತ್ತಲೆಯಲ್ಲಿ ಕಾಲ ಕಳೆಯಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. ಬೈಂದೂರು 33 ಕೆವಿ ಉಪ ವಿದ್ಯುತ್ ಕೇಂದ್ರಕ್ಕೆ ವಿದ್ಯುತ್ ಸರಬರಾಜು ಮಾಡುವ ವಿದ್ಯುತ್ ಮಾರ್ಗಗಳನ್ನು ಬಡಾಕೆರೆಯ ಕೋಣ್ಕಿ ಎಂಬಲ್ಲಿ ಸೌಪರ್ಣಿಕ ನದಿಯ ತೀರದಲ್ಲಿ ಹಾಗೂ ನದಿಯ ಮಧ್ಯದಲ್ಲಿ ರಚಿಸಲಾಗಿತ್ತು. ಭಾನುವಾರ ಬೆಳಗಿನಿಂದ ಸುರಿದ ಭಾರಿ ಮಳೆಗೆ ಸೌರ್ಪಣಿಕಾ ನದಿಯಲ್ಲಿ ನೆರೆ ಕಾಣಿಸಿಕೊಂಡಿದ್ದು, ನದಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚಾದ ಪರಿಣಾಮ ವಿದ್ಯುತ್ ಕಂಬಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದರೆ, ತೀರದಲ್ಲಿನ ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. ಹೀಗಾಗಿ ಬೈಂದೂರು ಉಪವಿದ್ಯುತ್ ಕೇಂದ್ರಕ್ಕೆ ವಿದ್ಯುತ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಆದುದರಿಂದ ಬೈಂದೂರು ಹಾಗೂ ಶಿರೂರು ಗ್ರಾಮಗಳಲ್ಲಿ ವಿದ್ಯುತ್ ಕಡಿತಗೊಂಡಿದ್ದು, ಇನ್ನು ಕೆಲವು ದಿನ ಜನರು ಕತ್ತಲೆಯಲ್ಲಿ ಕಾಲ…

Read More

 ಕೆನಡಾದಲ್ಲಿ ಯುವ ಲೇಖಕ ಯಾಕುಬ್ ಖಾದರ್ ಗುಲ್ವಾಡಿ ಅವರ ಕೃತಿ ನನ್ನ ಫಾರಿನ್ ಟೂರಿಂಗ್ ಟಾಕೀಸ್ ಬಿಡುಗಡೆ ಕುಂದಾಪುರ: ಒಳನೋಟಗಳಿಲ್ಲದ ಪ್ರವಾಸಿಯ ತಿರುಗಾಟ ಮೇಲ್ಪದರದ ಶೋಕಿಯಿಂದ ಕೂಡಿದ್ದು, ಆಳವಾದ ಗ್ರಹಿಕೆಯಿಂದ ವಂಚಿತವಾಗಿರುತ್ತದೆ. ಹೊಸ ನೆಲದಲ್ಲಿ ಪುಳಕ, ಬೆರಗು, ತರತಮ ಅರಿವು ಮತ್ತು ಸಂಶೋಧನಾಪ್ರಜ್ಞೆ ಇದ್ದಾಗ ಮಾತ್ರ ಪ್ರವಾಸವು ಅರ್ಥಪೂರ್ಣವೂ ಅಭಿವ್ಯಕ್ತಿ ಯೋಗ್ಯವೂ ಆಗುತ್ತದೆ ಎನ್ನಲು ಯುವ ಲೇಖಕ ಯಾಕುಬ್ ಖಾದರ್ ಗುಲ್ವಾಡಿ ಅವರ ಕೃತಿ ಪ್ರವಾಸಾನುಭವಗಳ ಮೂಲಕ ಶುಷ್ಕ ವಿವರಗಳಿಂದಾಚೆಗೆ ಇಣುಕಲು, ಹಲವಾರು ಮಾಹಿತಿಗಳನ್ನು ಸಂಗ್ರಹಿಸಿ ವಿಶಿಷ್ಟ ಅನುಭವ ಪ್ರಪಂಚವನ್ನು ತೆರೆಯುತ್ತದೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ ಹೇಳಿದರು.   ಅವರು ಕೆನಡಾದಲ್ಲಿ ನಡೆದ ೧೧ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಯುವ ಲೇಖಕ ಯಾಕುಬ್ ಖಾದರ್ ಗುಲ್ವಾಡಿ ಅವರ ಅಮೇರಿಕಾ, ತಾನ್ಜಾನಿಯಾ, ಸಿಂಗಾಪುರ, ಮಾಲ್ಡೀವ್ಸ್ ದೇಶಗಳ ಕಲೆ, ಸಾಹಿತ್ಯ ಸಂಸ್ಕ್ರತಿ, ಭಾಷೆ, ಇತಿಹಾಸವನ್ನೊಳಗೊಂಡ ಪ್ರವಾಸ ಕಥನ ನನ್ನ ಫಾರಿನ್ ಟೂರಿಂಗ್ ಟಾಕೀಸ್ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಈ…

Read More