Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ನೆರೆ: ವಿವಿಧೆಡೆ ಬಾರಿ ಹಾನಿ
    ಊರ್ಮನೆ ಸಮಾಚಾರ

    ನೆರೆ: ವಿವಿಧೆಡೆ ಬಾರಿ ಹಾನಿ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪುರ: ಹಗಲು ಮತ್ತು ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕೊಲ್ಲೂರಿನಲ್ಲಿ ಹುಟ್ಟಿ, ಹಲವು ಗ್ರಾಮಗಳ ಮೂಲಕ ಹರಿದು ಗಂಗೊಳ್ಳಿಯಲ್ಲಿ ಸಮುದ್ರ ಸೇರುವ ಸೌಪರ್ಣಿಕಾ ನದಿಯಲ್ಲಿ ಮಧ್ಯರಾತ್ರಿ ಹೊತ್ತಿಗೆ ಬಂದ ಪ್ರವಾಹದಲ್ಲಿ ನದಿ ತೀರದ ನೂರಾರು ಮನೆಗಳು ಜಲಾವೃತವಾದುವಲ್ಲದೆ ಮನೆಗಳಲ್ಲಿದ್ದ ಬೆಲೆಬಾಳುವ ಸ್ವತ್ತುಗಳು ನಾಶವಾದುವು.

    Click Here

    Call us

    Click Here

    ??????????????????????????????? ??????????????????????????????? Maravanthe J 20-5 Maravanthe J 20-6

    ಹೇರೂರು, ಉಳ್ಳೂರು, ಬಡಾಕೆರೆ, ನಾವುಂದ, ಮರವಂತೆ, ನಾಡ, ಹಡವು, ತ್ರಾಸಿ, ಹೊಸಾಡು, ಸೇನಾಪುರ ಗ್ರಾಮಗಳಲ್ಲಿ ನೆರೆ ತನ್ನ ಉಗ್ರ ಸ್ವರೂಪ ತೋರಿದೆ. ಮಧ್ಯ ರಾತ್ರಿ ನಿದ್ದೆಯಿಂದ ಎಚ್ಚತ್ತ ಕೆಲವರು ಉಳಿದವರಿಗೆ ಸುದ್ದಿ ಮುಟ್ಟಿಸಿದ್ದರಿಂದ ಯುವಕರು ಲಭ್ಯ ದೋಣಿಗಳನ್ನು ಬಳಸಿ ಜನರನ್ನು ಎತ್ತರದ ಪ್ರದೇಶಗಳಿಗೆ ಸಾಗಿಸಿದ್ದರಿಂದ ಯಾವುದೇ ಜೀವ ಹಾನಿ ಸಂಭವಿಸಲಿಲ್ಲ. ಈ ಗ್ರಾಮಗಳಲ್ಲಿ ನದಿಯ ನೀರು ಇಕ್ಕಡೆಗಳಲ್ಲಿ ಒಂದು, ಒಂದೂವರೆ ಕಿಲೋಮೀಟರುಗಳಷ್ಟು ಪ್ರದೇಶವನ್ನು ಆವರಿಸಿದ್ದರಿಂದ ನದಿತೀರದ ಎಲ್ಲ ಮನೆಗಳಿಗೆ ನೀರು ನುಗ್ಗಿದೆ. ಹಲವು ಮನೆಗಳು ಜಲಾವೃತವಾದರೆ, ಇನ್ನು ಹಲವು ಮನೆಗಳೊಳಗೆ ಮಂಡಿ ಮುಳುಗುವಷ್ಟು ನೀರು ನಿಂತಿತು.

    ನೀರು ನುಗ್ಗಿದ ಮನೆಗಳಲ್ಲಿ ಆಹಾರ ಸಾಮಗ್ರಿಗಳು, ಅನ್ಯ ದಿನೋಪಯೋಗಿ ವಸ್ತುಗಳು ನಿರುಪಯೋಗಿಯಾಗಿವೆ, ಹಾಸಿಗೆ, ಬಟ್ಟೆಬರೆ ಒದ್ದೆಯಾಗಿವೆ. ಟಿವಿ, ಫ್ರಿಜ್, ವಾಶಿಂಗ್ ಮಶೀನ್, ಪಂಪ್‌ಗಳಿಗೂ ನೀರುಹೊಕ್ಕಿದೆ ಎಂದು ಜನ ಹೇಳುತ್ತಿದ್ದಾರೆ. ಮನೆಯ ಮುಂದೆ ನಿಲ್ಲಿಸಿದ್ದ ವಾಹನಗಳು ಕೆಲವೆಡೆ ಪೂರ್ತಿಯಾಗಿ, ಇನ್ನು ಕೆಲವೆಡೆ ಭಾಗಶ: ಮುಳುಗಿವೆ, ಅಂಗಳದಲ್ಲಿ ಸಂಗ್ರಹಿಸಿಟ್ಟಿದ್ದ ತೆಂಗಿನಕಾಯಿ, ಹುಲ್ಲಿನ ಮೆದೆ, ಕಟ್ಟಿಗೆ ತೇಲಿಹೋಗಿವೆ. ನೀರು ಇಳಿದ ಬಳಿಕವಷ್ಟೆ ಹಾನಿಗೀಡಾದ ಮನೆಗಳ ಮತ್ತು ಸ್ವತ್ತುಗಳ ನಷ್ಟದ ಅಂದಾಜು ದೊರೆಯಲಿದೆ.

    ಪ್ರವಾಹ ತಲೆದೋರಿದ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯ ಯುವಕರು ಲಭ್ಯ ದೋಣಿಗಳನ್ನು ಬಳಸಿ ತೀರ ಅಪಾಯದಲ್ಲಿದ್ದವರನ್ನು ರಕ್ಷಿಸಿದರು. ಬಡಾಕೆರೆಯಲ್ಲಿ ಸತೀಶ ಖಾರ್ವಿ, ಶಾಂತಾರಾಮ, ಬಿ. ಎಂ. ಶಂಸುದ್ದೀನ್, ಉಮೇಶ, ಸುರೇಶ, ಜಯಂತ, ಗಣೇಶ, ಬಸವರಾಜ್, ಜನಾರ್ದನ ಖಾರ್ವಿ, ನಾಗರಾಜ ಖಾರ್ವಿ, ನಾವುಂದದ ಸಾಲ್ಬುಡದಲ್ಲಿ ಯೋಗೀಶ ಕಾರಂತ, ನಾರಾಯಣ ಖಂಡಿಕೇರಿ, ಲಕ್ಷ್ಮಣ ಸಾಲ್ಬುಡ, ರಾಮ ಪೂಜಾರಿ ಚಟ್ಟನಹಿತ್ಲು ಮತ್ತಿತರರು ರಕ್ಷಣಾ ಕೆಲಸ ನಿರ್ವಹಿಸಿದರು. ಮರವಂತೆ ಮೀನುಗಾರ ಮುಖಂಡ ಸೋಮಯ್ಯ ಖಾರ್ವಿ ಒಂದು ಯಂತ್ರ ಮತ್ತು ಜೀವರಕ್ಷಕ ಸಾಧನ ನೀಡಿದರು. ಕುಂದಾಪುರದ ಅಗ್ನಿಶಾಮಕ ಕೇಂದ್ರದ ಸಹಾಯಕ ಅಧಿಕಾರಿ ನವೀನ್ ನೇತೃತ್ವದ ತಂಡ ಬಡಾಕೆರೆ, ನಾವುಂದಕ್ಕೆ ಬಂದು ಪರಿಸ್ಥಿತಿಯನ್ನು ಅವಲೋಕಿಸಿತು.

    Click here

    Click here

    Click here

    Call us

    Call us

    ನಾಡದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೇನ್ ಮೇರಿ ಒಲಿವೇರ, ಉಪಾಧ್ಯಕ್ಷ ಅರವಿಂದ ಪೂಜಾರಿ, ಸದಸ್ಯರಾದ ವಿನೋದ್ ಡಿ’ಸೋಜ, ರಾಮ ಪೂಜಾರಿ, ಮಾಜಿ ತಾ.ಪಂ ಸದಸ್ಯ ಕೆನೆಡಿ ಪಿರೇರಾ ಮತ್ತಿತರರು ರಕ್ಷಣಾ ಕಾರ್ಯದ ನೇತೃತ್ವ ವಹಿಸಿದ್ದರು, ಇಲ್ಲಿನ ಚಿಕ್ಕಳಿಯ ಪ್ರಕಾಶ ಡಿ’ಸೋಜ ಅವರ ದೋಣಿ ಪ್ರವಾಹದಲ್ಲಿ ತೇಲಿಹೋಗಿದೆ ಎಂದು ತಿಳಿದು ಬಂದಿದೆ.

    ಕುಂದಾಪುರ ತಹಸಿಲ್ದಾರ್ ಗಾಯತ್ರಿ ನಾಯಕ್ ಮತ್ತು ಬೈಂದೂರು ವಿಶೇಷ ತಹಸಿಲ್ದಾರ್ ಕಿರಣ್ ಗೌರಯ್ಯ ನೇತೃತ್ವದ ಕಂದಾಯ ಇಲಾಖೆಯ ಅಧಿಕಾರಿಗಳ ತಂಡ, ಡಿವೈಎಸ್‌ಪಿ ಎಂ. ಮಂಜುನಾಥ ಶೆಟ್ಟಿ, ಬೈಂದೂರು ವೃತ್ತ ನಿರೀಕ್ಷಕ ಎಂ. ಸುದರ್ಶನ, ಗಂಗೊಳ್ಳಿ ಎಸ್‌ಐ ಬಿ. ಸುಬ್ಬಣ್ಣ ಮತ್ತು ಸಿಬ್ಬಂದಿ ಪ್ರವಾಹ ಪೀಡಿತ ಪ್ರದೆಶಗಳಿಗೆ ಭೇಟಿನೀಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್. ರಾಜು ಪೂಜಾರಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿನೀಡಿ, ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ಕ್ರಮಕ್ಕೆ ಆಗ್ರಹಿಸಿದರು.

    ಕೆಲವೇ ಗಂಟೆಗಳ ಅವಧಿಯಲ್ಲಿ ಪ್ರವಾಹ ಉಲ್ಬಣಗೊಳ್ಳಲು ಸೌಪರ್ಣಿಕಾ ನದಿಗೆ ಅಡ್ಡವಾಗಿ ಅರಾಟೆಯಲ್ಲಿ ನಿರ್ಮಿಸಿರುವ ಉಪ್ಪುನೀರು ತಡೆ ಅಣೆಕಟ್ಟಿನಲ್ಲಿ ನೀರಿನ ಹರಿವಿಗೆ ಅಡ್ಡಿಯಾಗಿರುವುದು ಕಾರಣ ಎಂದು ಸೋಮವಾರ ಬೆಳಿಗ್ಗೆ ತಿಳಿದುಬರುತ್ತಿದ್ದಂತೆ ಅಧಿಕಾರಿಗಳ ಪಡೆ ಅಲ್ಲಿಗೆ ಧಾವಿಸಿತು. ಅಲ್ಲಿ ನದಿಯಲ್ಲಿ ತೇಲಿಬಂದ ಕಟ್ಟಿಗೆ, ಮರ, ಬಿದಿರು ಮತ್ತು ತ್ಯಾಜ್ಯ ವಸ್ತುಗಳು ಅಣೆಕಟ್ಟಿನ ಉದ್ದಕ್ಕೂ ಸುಮಾರು ಎರಡು ಅಡಿ ಎತ್ತರಕ್ಕೆ ಸಂಗ್ರಹವಾದ ದೃಶ್ಯ ಕಂಡುಬಂತು. ಹೊಸಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಹಾಗೂ ಸದಸ್ಯರ ನೇತೃತ್ವವದಲ್ಲಿ ಯುವಕರ ತಂಡ ಅವುಗಳನ್ನು ತೆರವುಗೊಳಿಸುವ ಕೆಲಸ ಆರಂಭಿಸಿದ್ದರು. ಅಗ್ನಿಶಾಮಕ ಸಿಬ್ಬಂದಿ ಅವರೊಂದಿಗೆ ಸೇರಿಕೊಂಡರು. ಅಣೆಕಟ್ಟು 150 ಮೀಟರ್ ಅಗಲವಾಗಿರುವುದರಿಂದ ಈ ಕೆಲಸಕ್ಕೆ ಸಾಕಷ್ಟು ಸಮಯ ಹಿಡಿಯಲಿದೆ.

    ಗಂಗೊಳ್ಳಿಯಲ್ಲಿ ಗಾಳ ಹಾಕಲು ತೆರಳಿದ್ದ ಒಬ್ಬ ವ್ಯಕ್ತಿ ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾದ ವರದಿ ಬಿಟ್ಟರೆ ಅನ್ಯ ಹಾನಿ ಸಂಭವಿಸಿಲ್ಲ.

    Share. Facebook Twitter Pinterest LinkedIn Tumblr Telegram Email
    Editor Desk
    • Website
    • Facebook
    • X (Twitter)

    Related Posts

    ಬ್ರಹ್ಮಾವರ: ಮಟಪಾಡಿ ದಿ. ಶಿವರಾಮ ಶೆಟ್ಟಿ ಅವರ 10ನೇ ವರ್ಷದ ಪುಣ್ಯಸ್ಮರಣೆ

    04/02/2026

    ತ್ರಾಸಿ: ವಾಕಿಂಗ್‌ ವೇಳೆ ವೃದ್ಧೆಯ ಕುತ್ತಿಗೆಯಿಂದ ಚಿನ್ನದ ಸರ ಎಳೆದುಕೊಂಡು ಪರಾರಿಯಾದ ಕಳ್ಳ

    04/02/2026

    ಸಾಲಿಗ್ರಾಮದಲ್ಲಿ ಬೃಹತ್ ಹಿಂದೂ ಸಂಗಮ, ಶೋಭಾಯಾತ್ರೆ

    04/02/2026
    Leave A Reply Cancel Reply

    15 − 13 =

    Call us

    Click Here

    Call us

    Call us

    Call us
    Highest Viewed Recently
    • ಬ್ರಹ್ಮಾವರ: ಮಟಪಾಡಿ ದಿ. ಶಿವರಾಮ ಶೆಟ್ಟಿ ಅವರ 10ನೇ ವರ್ಷದ ಪುಣ್ಯಸ್ಮರಣೆ
    • ಜೀವನದಲ್ಲಿ ಉಚ್ಚ ಆದರ್ಶಗಳನ್ನು ಮತ್ತು ಉನ್ನತ ಗುರಿಯನ್ನಿಟ್ಟುಕೊಳ್ಳಿ: ಸ್ವಾಮಿ ಯುಗೇಶಾನಂದ
    • 70ನೇ ರಾಷ್ಟ್ರೀಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್ ಕಾಲೇಜಿನ ಬಾಲಕಿಯರು ಚಾಂಪಿಯನ್ಸ್
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಾಫ್ಟ್ ಸ್ಕಿಲ್ಸ್ ತರಬೇತಿ
    • ತ್ರಾಸಿ: ವಾಕಿಂಗ್‌ ವೇಳೆ ವೃದ್ಧೆಯ ಕುತ್ತಿಗೆಯಿಂದ ಚಿನ್ನದ ಸರ ಎಳೆದುಕೊಂಡು ಪರಾರಿಯಾದ ಕಳ್ಳ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.