Author: Editor Desk

ಬೈಂದೂರು: ಜೂ.17ರಂದು ಹತ್ಯೇಗೀಡಾದ ಬೈಂದೂರು ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ನಿವಾಸಕ್ಕೆ ಸಂಸದ ಬಿ. ಎಸ್. ಯಡಿಯೂರಪ್ಪ ಭೇಟಿ ನೀಡಿ ಕುಟುಂಬಿಕರಿಗೆ ಸಾಂತ್ವಾನ ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಘಟನೆ ನಡೆದಾಗಿನಿಂದಲೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ನಿರಂತರ ಸಂಪರ್ಕದಲ್ಲಿದ್ದು ಪ್ರಕರಣದ ಮಾಹಿತಿ ಪಡೆದುಕೊಂಡಿದ್ದೇನೆ. ಪ್ರಕರಣದಲ್ಲಿ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಇನ್ನೂ ಯಾರಾದರೂ ಭಾಗಿಯಾಗಿದ್ದರೇ ಅವರನ್ನೂ ಬಂಧಿಸುವಂತೆ ತಿಳಿಸಿದ್ದೇನೆ ಎಂದರು. ಅಕ್ಷತಾಳ ಡೈರಿಯನ್ನು ನೋಡಿದರೆ ಆಕೆಯ ದೂರದೃಷ್ಟಿ ಎಷ್ಟಿತ್ತು ಎಂಬುದು ತಿಳಿಯುತ್ತೆ. ಆಕೆಯ ಮೊದಲ ತಂಗಿಯ ಎಸ್.ಎಸ್.ಎಲ್.ಸಿ ಶಿಕ್ಷಣ ಪೂರ್ಣಗೊಂಡ ಬಳಿಕ ಆಕೆಯನ್ನು ಶಿಕ್ಷಣಿಕ ಉದ್ದೇಶಕ್ಕೆ ದತ್ತು ತೆಗೆದುಕೊಳ್ಳಲು ಬೈಂದೂರು ಬಿಜೆಪಿ ಅಧ್ಯಕ್ಷ ಸುಕುಮಾರ್ ಶೆಟ್ಟಿ ಅವರಿಗೆ ಸೂಚಿಸಿದ್ದೇನೆ. ಪೊಲೀಸರಿಂದ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ಜಿಲ್ಲಾಧಿಕಾರಿಗಳ ನಿಧಿಯಿಂದ 3 ಲಕ್ಷ ಪರಿಹಾರ ದೊರೆಯಲಿದೆ. ಇಲ್ಲಿನ ರಸ್ತೆ ದುರಸ್ತಿಗೆ ಸಂಸದರ ನಿಧಿಯಿಂದ 5 ಲಕ್ಷ ಅನುದಾನ ಹಾಗೂ ಸರಕಾರಿ ಬಸ್ ಓಡಾಟಕ್ಕೆ ಕಾನೂನು…

Read More

ಬೈಂದೂರು: ಜೂ.17ರಂದು ಹತ್ಯೇಗೀಡಾದ ಬೈಂದೂರು ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ನಿವಾಸಕ್ಕೆ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಭೇಟಿನೀಡಿ ಕುಂಟುಂಬಕ್ಕೆ ಸಾಂತ್ವಾನ ಹೇಳಿದರು. ಬಳಿಕ ಮಾಧ್ಯಮ ಪ್ರತಿನಿಧಿಗೊಂದಿಗೆ ಮಾತನಾಡಿದ ಅವರು ಪ್ರತಿಭಾವಂತ ವಿದ್ಯಾರ್ಥಿನಿ ಅಕ್ಷತಾನ್ನು ಕಳೆದುಕೊಂಡಿರುವುದು ಎಲ್ಲರಿಗೂ ನೋವು ತಂದಿದೆ. ಅಕ್ಷತಾ ಇಂಜಿನೀಯರ್ ಆಗುವ ಕನಸನ್ನು ಹೊತ್ತಿದ್ದಳು. ಅವಳ ಕನಸನ್ನು ಆಕೆಯ ತಂಗಿಯರು ನೆರವೇರಿಸುವಂತಾಗಲಿ. ಅವರ ಶಿಕ್ಷಣಕ್ಕೆ ಅಗತ್ಯ ನೆರವನ್ನು ಸರಕಾರದಿಂದ ಕೊಡಿಸುವುದಾಗಿ ತಿಳಿಸಿದ ಅವರು, ಹೇನುಬೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ದುರಸ್ತಿಯ ಬಗ್ಗೆ ಕ್ಷೇತ್ರದ ಶಾಸಕರು ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ತಾನೂ ಕೂಡ ಇಲಾಖೆಯೊಂದಿಗೆ ಚರ್ಚಿಸಿ ಶೀಘ್ರ ಕಾಮಗಾರಿ ನಡೆಸುವಂತೆ ಮಾತನಾಡುತ್ತೇನೆ ಎಂದರು. ಅಕ್ಷತಾ ಕುಟುಂಬದ ಹೆಣ್ಣುಮಗಳೊಬ್ಬಳಿಗೆ ಸರಕಾರಿ ಕೆಲಸ ದೊರೆಯುವ ತನಕ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ದೊರಕಿಸಿಕೊಡುವುದಾಗಿ ತಿಳಿಸಿದರು. ಈ ಸಂದರ್ಭ ಬೈಂದೂರು ಕ್ಷೇತ್ರದ ಶಾಸಕ ಗೋಪಾಲ ಪೂಜಾರಿ, ತಾ.ಪಂ. ಸದಸ್ಯ ರಾಜು ಪೂಜಾರಿ, ಕಾಂಗ್ರೆಸ್ ಮುಖಂಡರುಗಳಾದ ಎ೦.ಎ.ಗಪೂರ್, ರಾಜು ದೇವಾಡಿಗ ಮೊದಲಾದವರು…

Read More

ಬೈಂದೂರು: ಇಲ್ಲಿನ ಸಂತೆ ಮಾರ್ಕೆಟ್ ಆವರಣದಲ್ಲಿರುವ ಹಳೆಯ ಅರಳಿಮರವೊಂದು ಬೆಳಿಗ್ಗೆ ನೆಲಕ್ಕುರುಳಿದ್ದು, ಮರದ ಕೆಳಗಿದ್ದ ಅಂಗಡಿ ಹಾಗೂ ವಾಹನಗಳಿಗೆ ಹಾನಿ ಸಂಭವಿಸಿದೆ. ಸುಮಾರು 300 ವರ್ಷಗಳು ಹಿಂದಿನ ಅರಳಿ ಮರವು ಗಾಳಿಯ ನೆಲಕ್ಕುರುಳಿದ್ದು ಕೆಳಗೆ ನಿಲ್ಲಿನಿದ್ದ ಚಂದ್ರ, ಸೀತಾರಾಮ ಶೆಟ್ಟಿ, ಆನಂದ ಎಂಬುವವರ ಬೈಕ್ ಹಾಗೂ ಸಬೀರ್ ಎಂಬುವವರ ಕೋಳಿ ಅಂಗಡಿ, ನಾಗ ದೇವಾಡಿಗರ ತರಕಾರಿ ಅಂಗಡಿ ಹಾಗೂ ಇನ್ನೊರ್ವರಿಗೆ ಸೇರಿದ ಕುರಿ ಅಂಗಡಿಗೂ ಹಾನಿಯಾನಿದೆ. ಮರದ ಕೆಳಗೆ ನಿಂತಿದ್ದ ಆನಂದ ಹಾಗೂ ಸೂರ ಶೆಟ್ಟಿ ಎಂಬುವವರಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಸೂಮಾರು 1.50ಲಕ್ಷ ರೂ. ಹಾನಿ ಸಂಭವಿಸಿರಬುದೆಂದು ಅಂದಾಜಿಸಲಾಗಿದೆ. ಯಡ್ತರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟವೊಂದರ ಮೇಲ್ಚಾವಣಿಯು ರಾತ್ರಿ ಬೀಸಿದ ಗಾಳಿಗೆ ಹಾರಿ ಹೋಗಿ ಹಿಂದಿನ ಮನೆಯ ಗೋಡೆಗೆ ಅಪ್ಪಳಿಸಿದೆ. ಅಪ್ಪಳಿಸಿದ ರಭಸಕ್ಕೆ ಮನೆಗೆ ಅಲ್ಪಸ್ವಲ್ಪ ಹಾನಿ ಸಂಭವಿಸಿದೆ.

Read More

ಕುಂದಾಪುರ: ಕೇವಲ ಸಂಘಗಳನ್ನು ಸ್ಥಾಪನೆ ಮಾಡಿದರೆ ಸಾಲದು ಬದಲಾಗಿ ತಮ್ಮನ್ನು ತಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಸಂಕಷ್ಟದಲ್ಲಿದ್ದವರನ್ನು ಸ್ಪಂದಿಸಬೇಕು. ಇಂತಹ ಸಂಕಷ್ಟಪರಿಹಾರ ನಿಧಿಗಾಗಿ ಆರಂಭಿಕ ದೇಣಿಗೆಯಾಗಿ ವಾಸ್ತುತಜ್ಞ ಬಸವರಾಜ್ ಶೆಟ್ಟಿಗಾರ್‌ರವರು ತಮ್ಮ ತಂದೆಯವರ ಸ್ಮರಣಾರ್ಥ  ದೇಣಿಗೆ ನೀಡಿರುವುದು ಶ್ಲಾಘನೀಯ ಎಂದು ತ್ರಾಸಿ ವಲಯ ಶೆಟ್ಟಿಗಾರರ ನೂತನ ಸಂಘವನ್ನು ಉದ್ಘಾಟನೆ ಮಾಡಿದ ಸಾಲಿಕೇರಿ ದೇವಸ್ಥಾನದ ಆಡಳಿತ ಮುಕ್ತೇಸರರಾದ ಸದಾಶಿವ ಶೆಟ್ಟಿಗಾರರು ಹೇಳಿದರು. ದಕ್ಷಿಣಕನ್ನಡ ಪದ್ಮಶಾಲಿ ಮಹಾಸಭಾದ ಉಪಾಧ್ಯಕ್ಷರಾದ ಜಯರಾಮ್ ಶೆಟ್ಟಿಗಾರ್‌ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜ್ಯೋತಿಷಿ ಹಾಗೂ ಪ್ರಸಂಗಕರ್ತ ಬಸವರಾಜ್ ಶೆಟ್ಟಿಗಾರ್‌ರವರು ಮಾತನಾಡುತ್ತಾ – ಸಂಘ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ಸಂಘಕ್ಕೆ ಏನು ಕೊಟಿದ್ದೇವೆ ಎಂಬುದು ಮುಖ್ಯ ಹಾಗಾಗಿ ಯಾವುದೇ ಸಂಘಟನೆ ಬಲಗೊಳ್ಳಬೇಕಾದರೆ ಪ್ರತಿಯೊಬ್ಬರು ನಿಷ್ಟೆಯಿಂದ, ಶ್ರದ್ಧೆಯಿಂದ, ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸಾಧ್ಯ. ಈ ಸಂಘಟನೆ ನೂರ‍್ಕಾಲ ಬಾಳಿ ಬೆಳಗಲಿ ಎಂದು ಶುಭ ಹಾರೈಸಿದರು. ರಾಜಕೀಯ ಮುಖಂಡ ರಾಜುದೇವಾಡಿಗ, ಸಾಲಿಕೇರಿ ದೇವಸ್ಥಾನದ ಟ್ರಸ್ಟಿ ಬಾಲಕೃಷ್ಣ…

Read More

ಕುಂದಾಪುರ: ರೋಟರಿ 3180ಯ ವಲಯ 1ರ 2015-16ನೇ ಸಾಲಿನ ಸಹಾಯಕ ಗವರ್ನರ್ ಆಗಿ ಉದ್ಯಮಿ ಸತೀಶ್ ಎನ್. ಶೇರೆಗಾರ್ ಆಯ್ಕೆಯಾಗಿದ್ದಾರೆ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಪೂರ್ವಾಧ್ಯಕ್ಷರಾಗಿ, ರೋಟರಿ ವಲಯ ಸೇನಾನಿಯಾಗಿ, ಕುಂದಾಪುರದ ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಆಡಳಿತ ನಿರ್ದೇಶಕರಾಗಿ, ಕುಂದಾಪುರ ತಾಲೂಕು ಮಂಜುಗಡ್ಡೆ ಮತ್ತು ಶೈತ್ಯಾಗಾರ ಮಾಲಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕಾವೇರಿ ಐಸ್‌ಫ್ಲಾಂಟ್ ಗೋಪಾಡಿ, ಸಾಗರ್ ಐಸ್ ಫ್ಲಾಂಟ್ ಮರವಂತೆಯ ಮಾಲಕರಾಗಿದ್ದಾರೆ. ವಲಯ ಕಾರ್ಯದರ್ಶಿಯಾಗಿ ಸುದರ್ಶನ್ ಕೆ.ಎಸ್. ಆಯ್ಕೆಯಾದರು.

Read More

ಬೈಂದೂರು: ಇಲ್ಲಿನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ಕೊಲೆ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ ಘಟನೆ ನಡೆದ ಮೂರು ದಿನಗಳಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸ್ ಇಲಾಖೆ ಅಭಿನಂದನಾರ್ಹ ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.. ಅವರು ಇಲ್ಲಿನ ಶಾಸಕರ ಕಛೇರಿಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಬೈಂದೂರು ಜನತೆಯನ್ನು ದಿಗ್ಬ್ರಮೆಗೊಳಿಸಿದ ಈ ಘಟನೆಯಿಂದ ಎಲ್ಲರೂ ಆತಂಕಕ್ಕೊಳಗಾಗಿದ್ದರು. ಈಗ ಪ್ರಕರಣಕ್ಕೊಂದು ಅಂತ್ಯ ದೊರೆತಿದೆ ಎಂದರು. ಅಕ್ಷತಾಳ ಕುಟುಂಬಕ್ಕೆ 5 ಲಕ್ಷಗಳ ಪರಿಹಾರವನ್ನು ಸರ್ಕಾರದ ವತಿಯಿಂದ ಕೂಡಲೆ ತರಿಸಿಕೊಡಲಾಗುವುದು. ಪೊಲೀಸ್ ಇಲಾಖೆಯ ವರದಿಗಳಲ್ಲಿ ಪರಿಹಾರ ದೊರಕಿಸಿಕೊಡುವಲ್ಲಿ ಪ್ರಮುಖವಾಗಿರುವುದರಿಂದ ವರದಿಗಳ ಬಂದ ತಕ್ಷಣ ಪರಿಹಾರ ದೊರಕಿಸಿಕೊಡಲಾಗುವುದು. ತಕ್ಷಣ ಪ್ರಕರಣವನ್ನು ಬೇಧಿಸುವಲ್ಲಿ ಇಲಾಖೆ ಶ್ರಮಿಸಿದ್ದು, ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಬಗ್ಗೆ ಗೌರವ ಮೂಡಿಸುವ ಕೆಲಸ ಮಾಡಿದೆ ಎಂದರು. ಈಗಾಗಲೇ ಮೃತ ಅಕ್ಷತಾ ಮನೆಗೆ ಶಿಕ್ಷಣ ಸಚಿವರು ಭೇಟಿ ನೀಡಿ, ಅಲ್ಲಿನ ವಿದ್ಯಾರ್ಥಿಗಳ ಬೇಡಿಕೆಯಂತೆ ವಾಹನ ವ್ಯವಸ್ಥೆಯ ಭರವಸೆ ನೀಡಿದ್ದಾರೆ. ಬೈಂದೂರು ಕಾಲೇಜಿನಲ್ಲಿ ಬಾಲಕರ ಶೌಚಾಲಯಕ್ಕೆ 10…

Read More

ಕೆನಡಾದಲ್ಲಿ ಯಾಕುಬ್ ಖಾದರ್ ಗುಲ್ವಾಡಿಯ ನನ್ನ ಫಾರಿನ್ ಟೂರಿಂಗ್ ಟಾಕೀಸ್ ಕೃತಿ ಬಿಡುಗಡೆ ಕುಂದಾಪುರ: ಸಾಹಿತಿ, ನಟ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಯಾಕುಬ್ ಖಾದರ್ ಗುಲ್ವಾಡಿಯವರು ಜೂನ್ 27 ಹಾಗೂ 28ರಂದು ಕೆನಡಾದ ಟೋರೆಂಟೋದಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿಯ ಸದಸ್ಯರಾಗಿ, ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಧಾನ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿರುವ ಯಾಕುಬ್ ಖಾದರ್ ಅವರ ನಾಲ್ಕು ದೇಶಗಳ ಪ್ರವಾಸ ಕಥನ ನನ್ನ ಫಾರಿನ್ ಟೂರಿಂಗ್ ಟಾಕೀಸ್ ಕೃತಿಯನ್ನು ಸಮ್ಮೇಳನದಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರ ಶೇಖರ ಅವರು ಬಿಡುಗಡೆಗೊಳಿಸಲಿದ್ದಾರೆ. ಈ ಸಮ್ಮೇಳನದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಸಚಿವರಾದ ಎಚ್. ಆಂಜನೇಯ ಅವರು ಉದ್ಘಾಟಿಸಲಿದ್ದಾರೆ. ಸಮ್ಮೇಳನದ ಅಧ್ಯಕ್ಷರಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಎಲ್. ಹನುಮಂತಯ್ಯ, ಶಿವಗಂಗೆ ಗವಿಮಠದ ಶ್ರೀ ಮಲೆಯ ಶಾಂತಮುನಿ ದೇಶಿಕೇಂದ್ರ ಸ್ವಾಮೀಜಿ, ಖ್ಯಾತ ಚಲನಚಿತ್ರ ನಟ…

Read More

ಬೈಂದೂರು: ಮರವಂತೆ ಬಂದರು ಸಮೀಪದ ಕಡಲ್ಕೋರೆತ ಪ್ರದೇಶದಕ್ಕೆ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ವೀಕ್ಷಿಸಿದರು. ಬಳಿಕ ಮಾತನಾಡಿದ ಅವರು ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಮೀನುಗಾರರ ಅನುಕೂಲಕ್ಕಾಗಿ 56ಕೋಟಿ ರೂ ಅನುದಾನದಲ್ಲಿ ಬಂದರು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಕಳೆದ ಒಂದು ವರ್ಷದಿಂದ ಯೋಜನೆ ಮಂದಗತಿಯಲ್ಲಿ ಸಾಗುತ್ತಿದೆ.  ಸಮುದ್ರದ ಆರ್ಭಟಕ್ಕೆ ಇಲ್ಲಿನ ರಸ್ತೆಗಳು ಕೊಚ್ಚಿ ಹೋಗಿದೆ. ಈ ತಡೆಗೋಡೆಯನ್ನು ರಚಿಸಲು ಸರಕಾರಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ಮಹೇಂದ್ರ ಪೂಜಾರಿ, ಗ್ರಾಪಂ ಸದಸ್ಯರಾದ ಪ್ರಭಾಕರ ಎಂ. ಖಾರ್ವಿ, ಲೋಕೇಶ್ ಖಾರ್ವಿ, ನಾಗರಾಜ, ಸುಶೀಲ, ಶ್ರೀ ರಾಮ ಮಂದಿರ ಮೀನುಗಾರರ ಸೇವಾ ಸಮಿತಿಯ ಅಧ್ಯಕ್ಷ ಬಿ. ವೆಂಕಟರಮಣ ಖಾರ್ವಿ, ಗೌರವಾಧ್ಯಕ್ಷ ಸೋಮಯ್ಯ ಖಾರ್ವಿ, ಮಾಜಿ ಅಧ್ಯಕ್ಷ ಚಂದ್ರ ಖಾರ್ವಿ ಮೊದಲಾದವರು ಜೊತೆಗಿದ್ದರು.

Read More

ಬೈಂದೂರು: ಮಾಜಿ ಕೇಂದ್ರ ಸಚಿವ ಸಚಿವ ಡಾ| ವೀರಪ್ಪ ಮೊಯ್ಲಿ ಮೃತ ಕಾಲೇಜು ವಿದ್ಯಾರ್ಥಿನಿ ಅಕ್ಷತಾ ದೇವಾಡಿಗರ ಮನೆಗೆ ಭೇಟಿ ನೀಡಿ ಆಕೆಯ ಕುಟುಂಬಿಕರಿಗೆ ಸಾಂತ್ವಾನ ಹೇಳಿದರು. ಬಳಿಕ ಊರಿನ ಪ್ರಮುಖರೊಂದಿಗೆ ಮಾತನಾಡಿ ಘಟನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪೊಲೀಸ್ ಅಧಿಕಾರಿಗಳಿಂದ ಪಡೆದುಕೊಂಡಿದ್ದೇನೆ. ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಅಕ್ಷತಾ ಮೃತಪಟ್ಟಿರುವುದು ಅತೀವ ನೋವು ತಂದಿದೆ. ಅಕ್ಷತಾಳ ಕನಸನ್ನು ಅವರು ತಂಗಿಯರಿಬ್ಬರು ಈಡೇರಿಸುವಂತಾಗಬೇಕು. ಆಕೆಯ ಇಬ್ಬರು ತಂಗಿಯರು ಏನೇ ಶಿಕ್ಷಣ ಪಡೆಯುವುದಿದ್ದರೂ ಅವರಿಗೆ ಆರ್ಥಿಕ ನೇರವನ್ನು ನೀಡಲು ದೇವಾಡಿಗ ಸಂಘದಿಂದ ಒಂದು ಫಂಡ್ ತೆಗೆದಿರಿಸುತ್ತೇನೆ ಎಂದರು. ಊರಿನ ಮೂಲಭೂತ ಸೌಕರ್ಯಗಳಲ್ಲೊಂದಾದ ರಸ್ತೆಯನ್ನು ಶಾಮನಕೊಡ್ಲುವಿನಿಂದ ಹೇನುಬೇರಿಗೆ ಸೇರಿಸಲು ಪಿಡಬ್ಲ್ಯೂಡಿ ಇಲಾಖೆ ನಿರ್ದೇಶನ ನೀಡುವುದಾಗಿ ಭರವಸೆ ಇತ್ತರು. ಬೀದಿದೀಪಗಳ ಅಳವಡಿಕೆ, ಅಕೇಶಿಯಾ ಪ್ಲಾಂಟೆಶನ್ ತೆರವು, ಮಕ್ಕಳು ಶಾಲೆಗೆ ತೆರಳಲು ವಾಹನದ ವ್ಯವಸ್ಥೆಯ ಮುಂತಾದವುಗಳ ಕುರಿತು ಗ್ರಾಮಸ್ಥರು ಅಹವಾಲು ತೋಡಿಕೊಂಡಾಗ ಸಂಬಂಧಿಸಿದ ಇಲಾಖೆಯೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಬೈಂದೂರು ಶಾಸಕ ಗೋಪಾಲ ಪೂಜಾರಿ, ಮಾಜಿ ಶಾಸಕ…

Read More

ಬೈಂದೂರು: ಅಕ್ಷತಾ ದೇವಾಡಿಗಳನ್ನು ಧಾರುಣವಾಗಿ ಹತ್ಯೆ ಮಾಡಿದ ಪಾಪಿಗಳಿಗೆ ಕಠಿಣ ಶಿಕ್ಷೆಯಾದಲ್ಲಿ ಮಾತ್ರ ತಮ್ಮ ಮಗಳ ಆತ್ಮಕ್ಕೆ ಶಾಂತಿ ದೊರಕಲಿದೆ ಎನ್ನುವ ವೇದನೆ ಆಕೆಯ ಹೆತ್ತವರಿಗೆ ಇದೆ ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಸೊಲೋಚನಾ ಭಟ್ ತಿಳಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸವಿತಾ ಕೋಟ್ಯಾನ್, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ಎಂ ಸುಕುಮಾರ ಶೆಟ್ಟಿ ಹಾಗೂ ಪಕ್ಷದ ಪ್ರಮುಖರಾದ ಶ್ಯಾಮಲಾ ಕುಂದರ್ ಅವರ ಜೊತೆಯಲ್ಲಿ ಶನಿವಾರ ಮಧ್ಯಾಹ್ನ ಮೃತ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗರ ಮನೆಗೆ ತೆರಳಿ ಆಕೆಯ ಪೋಷಕರೊಂದಿಗೆ ಮಾತುಕತೆ ನಡೆಸಿ ಅವರಿಗೆ ಸಾಂತ್ವಾನ ನೀಡಿದ ಬಂದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಕಳೆದ ವರ್ಷ ರತ್ನಾ ಕೊಠಾರಿ, ಈ ವರ್ಷ ಅಕ್ಷತಾ ದೇವಾಡಿಗ ಹೀಗೆ ಅಮಾಯಕ ವಿದ್ಯಾರ್ಥಿನಿಯರು ಬಲಿಯಾಗುತ್ತಾ ಹೋದರೆ ಹೆಣ್ಣು ಮಕ್ಕಳು ಹಗಲಿನಲ್ಲಿಯೇ ಒಂಟಿಯಾಗಿ ತಿರುಗಾಡಲು ಭಯ ಪಡುವ ಸನ್ನಿವೇಶಗಳು ನಿರ್ಮಾಣವಾಗಿದೆ. ನಿಗೂಢವಾಗಿ ಸಾಪನ್ನಪ್ಪಿದ ರತ್ನಾ ಕೊಠಾರಿ ಪ್ರಕರಣ ನಡೆದು ಒಂದು ವರ್ಷ ಕಳೆದರೂ,…

Read More