ರತ್ನಾ ಕೊಠಾರಿ ಪ್ರಕರಣ, ಮಹಿಳೆಯ ಸುರಕ್ಷೆ, ಊರಿನ ಸಮಸ್ಯೆಗಳ ಬಗ್ಗೆ ಚರ್ಚೆ ಬೈಂದೂರು: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸ್ ಜನಸಂಪರ್ಕ ಸಭೆಯು ಶಿರೂರು ಪೇಟೆ ವೆಂಕಟರಮಣ ಸಭಾಭವನದಲ್ಲಿ ಬುಧವಾರ ಜರುಗಿತು. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಅಣ್ಣಾಮಲೈ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಶಿರೂರು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರತ್ನಾ ಕೊಠಾರಿ ಅಸಹಜ ಸಾವಿನ ಪ್ರಕರಣದ ಮರಣೋತ್ತರ ಪರೀಕ್ಷೆಯ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದಿದೆ, ಆದರೆ ವರದಿಯಲ್ಲಿ ಅತ್ಯಾಚಾರ, ಕೊಲೆ ಹಾಗೂ ವಿಷ ಜಂತುಗಳ ಕಡಿತದಿಂದ ಸಾವನ್ನಪ್ಪಿದ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಇದೊಂದು ಸಹಜ ಸಾವು ಎಂದು ದಾಖಲಾಗಿದೆ. ಆದರೆ ಇಲಾಖೆ ಈ ಪ್ರಕರಣದ ಬಗ್ಗೆ ಸಂಶಯಾಸ್ಪದವಾಗಿ ಕಂಡು ಬಂದ 77 ಜನರನ್ನು ವಿಚಾರಣೆ ನಡೆಸಿದ್ದು, ಕೆಲವರು ಪೊಲೀಸರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದುವರೆಗೂ ಈ ಪ್ರಕರಣವನ್ನು ಮುಚ್ಚಿ ಹಾಕಿಲ್ಲ, ಇನ್ನು ಒಂದು ತಿಂಗಳು ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದ ಅವರು ರತ್ನಾ ಕೊಠಾರಿ ಬಡ ಕುಟುಬಂದ…
Author: Editor Desk
ಕುಂದಾಪುರ: ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ- ಕುಂದಾಪುರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಉಡುಪಿ ಜಿಲ್ಲೆಯ ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆ ಹಾಗೂ ಭಾರತೀಯ ಕಿಸಾನ್ ಸಂಘಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಹಲಸಿನ ಹಬ್ಬ ಜೂನ್ 13 ಹಾಗೂ 14ರಂದು ಕುಂದಾಪುರದ ಶ್ರೀ ನಾರಾಯಣ ಗುರು ಕಲ್ಯಾಣಮಂಟಪದಲ್ಲಿ ಜರಗಲಿದೆ. ಹಿಂದೆ ಹಲಸು ನಮ್ಮಲ್ಲಿ ಮುಖ್ಯ ಆಹಾರವಾಗಿತ್ತು, ಕಾರಣಾಂತರಗಳಿಂದ ಈಗ ನಿರ್ಲಕ್ಷ್ಯಕ್ಕೆ ಈಡಾಗಿದೆ. ಹಲಸನ್ನು ಮತ್ತೆ ಆಹಾರದ ಮುಖ್ಯ ವಾಹಿನಿಗೆ ತರುವುದಕ್ಕಾಗಿ ಈ ಹಲಸಿನ ಮೇಳವನ್ನು ಆಯೋಜಿಸಲಾಗಿದೆ. ಬದಲಾದ ಕಾಲಘಟ್ಟದಲ್ಲಿ ಸಾಂಪ್ರದಾಯಿಕವಾದ ಎಲ್ಲ ತಿಂಡಿತೀರ್ಥಗಳಂತೆ ಹಲಸಿನ ಖಾದ್ಯಗಳು ಮರೆವೆಗೆ ಸಂದಿವೆ. ಅಷ್ಟು ಮಾತ್ರ ಅಲ್ಲ; ಹಲಸಿನ ಬಗೆಗೇ ಅವಜ್ಞೆ ಹುಟ್ಟಿಕೊಂಡಿದೆ. ಆದರೆ, ಹಲಸು ಹೀಗೆ ನಿರ್ಲಕ್ಷ್ಯಕ್ಕೆ ಒಳಗಾಗಬೇಕಾದ ವಸ್ತುವಲ್ಲ. ಹವಾಮಾನ ಬದಲಾವಣೆ, ಭೂಮಿ ಬಿಸಿಯೇರಿಕೆ, ಮಾಲಿನ್ಯ ಇತ್ಯಾದಿಗಳನ್ನು ನಾವು ಈಗಾಗಲೇ ಅನುಭವಿಸುತ್ತಿದ್ದೇವೆ. ಇದು ಹೀಗೆಯೇ ಮುಂದುವರಿದರೆ ಆಹಾರ ಕ್ಷಾಮ ಅನುಭವಿಸಬೇಕಾದ…
ಕುಂದಾಪುರ: ರಾಮಕ್ಷತ್ರಿಯ ಯುವಕ ಮಂಡಳಿ, ಕುಂದಾಪುರ ರಾಮಕ್ಷತ್ರಿಯ ಕ್ಷೇತ್ರ ಸಮಿತಿ ಉಳ್ಳೂರು, ಸಾಂತಾವರ,ಮೇರ್ಡಿ, ಬಸ್ರೂರು, ಕಾರ್ತಿಕೇಯ ಫ್ರೆಂಡ್ಸ್ (ರಿ.) ಉಳ್ಳೂರು, ಕಂದಾವರ ಹಾಗೂ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡ್ಲಕಟ್ಟೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಉದ್ಯಮಿ, ದಾನಿ ನಾಗೇಶ್ ಶೇರೆಗಾರ್ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮಾತನಾಡಿ ಈ ಆರೋಗ್ಯ ಶಿಬಿರ ಅತ್ಯಂತ ಉಯುಕ್ತವಾಗಿದ್ದು ಇದರ ಪ್ರಯೋಜನ ಇಲ್ಲಿಯ ನಾಗರಿಕರಿಗೆ ತಲುಪಲಿ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳಿಂದ ರಾಮಕ್ಷತ್ರಿಯ ಸಂಘ ಬಲಿಷ್ಠವಾಗುತ್ತದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ರಾಮಕ್ಷತ್ರಿಯ ಸಂಘ ಕುಂದಾಪುರದ ಅಧ್ಯಕ್ಷ ಸುರೇಶ್ ಬೆಟ್ಟಿನ್ ವಹಿಸಿದ್ದು ಈ ವಾಜಪೇಯಿ ಆರೋಗ್ಯ ಶ್ರೀಕಾರ್ಯಕ್ರಮ ಶ್ಲಾಘನೀಯವಾಗಿದ್ದು ಎಲ್ಲರಿಗು ತಲುಪಲಿ ಎಂದರು. ರಾಮಕ್ಷತ್ರಿಯ ಸಂಘ ಉಳ್ಳೂರು ಇದರ ಅಧ್ಯಕ್ಷ, ಗ್ರಾ. ಪಂ.ಸದಸ್ಯ ಸುರೇಂದ್ರ ಶೇರೆಗಾರ್, ಸಚ್ಚಿದಾನಂದ, ಡಾ| ಚೇತನ್, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಯು, ಶಾಲಾ ಮುಖ್ಯೋಪಾಧ್ಯಾಯ ಕೆ. ಉಮೇಶ್, ಶಾಲಾ…
ಮರವಂತೆ: ಗ್ರಾ.ಪಂ.ನಲ್ಲಿ ನಡೆದ ಚುನಾವಣೆಯಲ್ಲಿ 13 ಸ್ಥಾನದಲ್ಲಿ ಸ್ಪರ್ಧಿಸಿ ವಿಜೇತರಾದ ಅಭ್ಯರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಜರಗಿತು. ವಿಜೇತರನ್ನು ಸಮ್ಮಾನಿಸಿ ಮಾತನಾಡಿದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಗ್ರಾ.ಪಂ. ಚುನಾವಣೆಯಲ್ಲಿ ವಿಜೇತರಾದವರು ಜನರೊಂದಿಗೆ ಸ್ಪಂದಿಸುವ ಮೂಲಕ ಗ್ರಾಮದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಲ್ಲಿ ಮುಂದಾಗಬೇಕಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮದ ಕುಂದು ಕೊರತೆಗಳನ್ನು ಆಲಿಸಿ ಸರಿಯಾದ ನ್ಯಾಯ ಸಮ್ಮತವಾಗಿ ಕೆಲಸ ಮಾಡಬೇಕು ಎಂದರು. ಬೈಂದೂರು ಕ್ಷೇತ್ರ ಬಿ.ಜೆ.ಪಿ. ಅಧ್ಯಕ್ಷ ಬಿ.ಎಂ.ಸುಕುಮಾರ ಶೆಟ್ಟಿ ಮಾತನಾಡಿ , ಮುಂದಿನ ದಿನಗಳಲ್ಲಿ ಕಾಮಗಾರಿಗಳನ್ನು ನಡೆಸುವಾಗ ಜಾಗರೂಕತೆಯಿಂದ ಹಣ ದುಂದು ವೆಚ್ಚವಾಗದಂತೆ ನೋಡಿಕೊಳ್ಳಬೇಕು. ಗ್ರಾಮದ ಜನರು ನಿಮ್ಮ ಮೇಲೆ ಕಣ್ಣಿಟ್ಟಿರುತ್ತಾರೆ ಎಂದು ಎಚ್ಚರಿಸಿದರು. ಜಿ.ಪಂ. ಸದಸ್ಯ ಬಾಬು ಶೆಟ್ಟಿ ಮತ್ತು ತಾ.ಪಂ. ಸದಸ್ಯ ಮಹೇಂದ್ರ ಪೂಜಾರಿ ಮತ್ತು ನರಸಿಂಹ ಶೆಟ್ಟಿ ಉಪಸ್ಥಿತರಿದ್ದರು. ಗ್ರಾ.ಪಂ. ಸದಸ್ಯ ಪ್ರಭಾಕರ ಖಾರ್ವಿ ಸ್ವಾಗತಿಸಿ, ಲೊಕೇಶ ಖಾರ್ವಿ ವಂದಿಸಿದರು.
ಬೈಂದೂರು: ಅರಣ್ಯ ಇಲಾಖೆಯ ಹಾಗೂ ಕೇಂದ್ರ ಸರಕಾದ ಹೆಸರಿನಲ್ಲಿ ಸುಳ್ಳು ದಾಖಲೆ ಹಾಗೂ ಮೊಹರು ಹಾಗೂ ವೆಬ್ಸೈಟ್ ಸೃಷ್ಟಿಸಿ ಸುಳ್ಳು ಉದ್ಯೋಗ ಮಾಹಿತಿಯನ್ನು ನೀಡಿ ಮಹಿಳೆಯೋರ್ವರನ್ನು ವಂಚಿಸಿದ ಘಟನೆ ಬೈಂದೂರಿನ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಿರಿಮಂಜೇಶ್ವರ ನಿವಾಸಿ ನಾಗರತ್ನ ವಂಚನೆಗೊಳಗಾದ ಮಹಿಳೆ. ಘಟನೆಯ ವಿವರ: ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಲು ಪುರುಷ/ಮಹಿಳೆಯರು ಬೇಕಾಗಿದ್ದಾರೆ ಎಂಬುದಾಗಿ ಪತ್ರಿಕೆಯಲ್ಲಿ ಜಾಹಿರಾತನ್ನು ನೀಡಿದ್ದರು. ಜಾಹೀರಾತಿನಲ್ಲಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಂಡ ನಾಗರತ್ನ ನೇಮಕಾತಿಗೆ ತರಬೇತಿಗಾಗಿ ಹಾಗೂ ವಿಮೆಗಾಗಿ ಸತತ ಹಣವನ್ನು ಜಮೆ ಮಾಡಿದ್ದು ಕೊನೆಯಲ್ಲಿ ಅನುಮಾನ ಬಂದು ಇಲಾಖೆಯಲ್ಲಿ ಈ ವಂಚನೆ ವಿಷಯ ಬೆಳಕಿಗೆ ಬಂದಿದೆ. ನಾಗರತ್ನ ಅವರು ಗೌತಮ್ ಕುಮಾರ್ ಎನ್ನುವವನ ಖಾತೆಗೆ ರೂ. 2ಸಾವಿರ ಹಣವನ್ನು ಜಮೆ ಮಾಡಿದ ಬಳಿಕ ನೇಮಕಾತಿ ಪತ್ರ ಅಂಚೆ ಮೂಲಕ ಬಂದಿದ್ದು 7 ದಿನಗಳ ತರಬೇತಿ ಇರುತ್ತದೆ ಎಂದು ನಮೂದು ಮಾಡಲಾಗಿತ್ತು. ನಂತರ ಕರೆಮಾಡಿದ ಆಕೆಗೆ ವಿಚಾರಿಸಿದಾಗ ತರಬೇತಿ ಸಮಯದಲ್ಲಿ ಮೊಬೈಲ್ , ಲ್ಯಾಪ್ಟಾಪ್…
ಕುಂದಾಪುರ: ಗುಲ್ವಾಡಿ ಗ್ರಾಮದ ಸೌಕೂರು ಚಿಕ್ಕಪೇಟೆ ನಿವಾಸಿ ಶೇಖರ (28) ಅವರು ಜೂ. 7ರಂದು ಕಂಡ್ಲೂರು ಪೇಟೆಗೆಂದು ಹೊರಟವರು ಕಾಲು ಸಂಕ ದಾಟುತ್ತಿದ್ದ ಸಮಯದಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಗುಲ್ವಾಡಿ ಗ್ರಾಮದ ಕುಚ್ಚೆಟ್ಟು ಹೊಳೆಯ ಕಟ್ಟುವಿನ ಬಳಿ ಹೊಳೆಯ ನೀರಿನಲ್ಲಿ ಜೂ. 8ರಂದು ಬೆಳಗ್ಗೆ ಮೃತದೇಹ ದೊರೆತಿರುತ್ತದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಹಟ್ಟಿಯಂಗಡಿ ನಿವಾಸಿ ಪ್ರಕಾಶ ಪೈ (34) ಅವರು ಆನಗಳ್ಳಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಅವಿವಾಹಿತರಾಗಿದ್ದು, ಎಳೆಂಟು ವರ್ಷಗಳಿಂದ ಮಾನಸಿಕ ಅಸ್ವಾಸ್ಥ್ಯದಿಂದ ಬಳಲುತ್ತಿದ್ದು, ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇದೇ ಖಾಯಿಲೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಂದಾಪುರ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ
ಮಂಗಳೂರು: ಕರ್ಣಾಟಕ ಬ್ಯಾಂಕ್ ಬ್ರಿಟನ್ ಮೂಲದ ಮೆ| ಎನ್ಕ್ಯುಎ ಯುಕೆಎಎಸ್ ಸಂಸ್ಥೆಯಿಂದ ಐಎಸ್ಒ 27001:2013 ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ. ಸಂಸ್ಥೆಯ ನಿರ್ದೇಶಕ ಗಣೇಶ್ ಶಾಸ್ತ್ರಿ ಅವರು ಈ ಪ್ರಮಾಣ ಪತ್ರವನ್ನು ಬ್ಯಾಂಕಿನ ಆಡಳಿತ ನಿರ್ದೇಶಕ ಪಿ. ಜಯರಾಂ ಭಟ್ ಅವರಿಗೆ ಪ್ರದಾನ ಮಾಡಿದರು. ಚೀಫ್ ಜನರಲ್ ಮ್ಯಾನೇಜರ್ ಮಹಾಬಲೇಶ್ವರ ಎಂ.ಎಸ್., ಸೀನಿಯರ್ ಜನರಲ್ ಮ್ಯಾನೇಜರ್ ಪಿ. ಜೈರಾಂ ಹಂದೆ, ಜನರಲ್ ಮ್ಯಾನೇಜರ್ಗಳಾದ ಎನ್. ಉಪೇಂದ್ರ ಪ್ರಭು, ಡಾ| ಮೀರಾ ಎಲ್.ಬಿ. ಅರಾನ್ಹಾ, ರಘುರಾಮ, ಡಿಜಿಎಂಗಳಾದ ಅನಂತ ಪದ್ಮನಾಭ (ಐಟಿ ವಿಭಾಗ) ಮತ್ತು ಸುರೇಶ್ ಕೆ. (ಆರ್ಎಂಡಿ), ಚೀಫ್ ಮ್ಯಾನೇಜರ್ (ಸಿಐಎಸ್ಒ) ವಾದಿರಾಜ ಕೆ. ಉಪಸ್ಥಿತರಿದ್ದರು. ಆತ್ಯಾಧುನಿಕ ಸೌಲಭ್ಯ ಕರ್ಣಾಟಕ ಬ್ಯಾಂಕ್ ಶೇ. 100 ಕೋರ್ ಬ್ಯಾಂಕಿಂಗ್ ಸೊಲ್ಯೂಶನ್ ವ್ಯವಸ್ಥೆ ಹೊಂದಿದೆ. 681ಕ್ಕೂ ಅಧಿಕ ಶಾಖೆಗಳು ಮತ್ತು 1,020ಕ್ಕೂ ಮಿಕ್ಕಿ “ಮನಿ ಪ್ಲಾಂಟ್’ ಎಟಿಎಂಗಳಿದ್ದು, ಇಂಟರ್ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಎಸ್ಎಂಎಸ್ ಬ್ಯಾಂಕಿಂಗ್ ಮುಂತಾದ ಸೇವಾ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸಿದೆ. ಪ್ರಸ್ತುತ…
ಕುಂದಾಪುರ: ಹೆಮ್ಮಾಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾಲಾಡಿ ಕ್ರಾಸ್ ಬಳಿ ಖಾಸಗಿ ಬಸ್ವೊಂದು ನಿಯಂತ್ರಣ ತಪ್ಪಿ ರಸ್ತೆಯ ಬಲ ಭಾಗಕ್ಕೆ ತಿರುಗಿ ಹಳ್ಳಕ್ಕಿಳಿದು ನಿಂತ ಘಟನೆ ನಡೆದಿದೆ. ಕೊಲ್ಲೂರಿನಿಂದ ಪ್ರಯಾಣಿಕರನ್ನು ಕರೆದುಕೊಂಡು ಕುಂದಾಪುರಕ್ಕೆ ಬರುತ್ತಿದ್ದು, ಜಾಲಾಡಿ ಕ್ರಾಸ್ನಲ್ಲಿ ಹೆದ್ದಾರಿಯಲ್ಲಿ ವಾಹನವೊಂದು ಹಟಾತ್ನೆ ತಿರುಗಿದ್ದರಿಂದ ಅಪಘಾತವಾಗುವುದನ್ನು ತಪ್ಪಿಸಲು ಬಸ್ಸಿಗೆ ಬ್ರೇಕ್ ಹಾಕಿದ್ದರಿಂದ ಬಸ್ಸು ನಿಯಂತ್ರಣ ತಪ್ಪಿ ಸೀದಾ ರಸ್ತೆಯ ಬಲ ಭಾಗಕ್ಕೆ ತಿರುಗಿ ನಿಂತಿದೆ. ಈ ಸಮಯದಲ್ಲಿ ಮಳೆ ಸುರಿಯುತ್ತಿತ್ತು. ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ಉಡುಪಿ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲೆಯ 2,398 ಸ್ಥಾನಗಳಲ್ಲಿ 1,324 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಬೈಂದೂರು ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಕ್ಷೇತ್ರವಾರು ವಿವರ ಇಂತಿದೆ: ಬೈಂದೂರು- 578 ಒಟ್ಟು ಸ್ಥಾನ, 247 ಬಿಜೆಪಿ, 307 ಕಾಂಗ್ರೆಸ್, 24 ಇತರ, ಕುಂದಾಪುರ -500 ಒಟ್ಟು ಸ್ಥಾನ, 314 ಬಿಜೆಪಿ, 171 ಕಾಂಗ್ರೆಸ್, 15 ಇತರ, ಉಡುಪಿ- 327 ಒಟ್ಟು ಸ್ಥಾನ, 174 ಬಿಜೆಪಿ, 148 ಕಾಂಗ್ರೆಸ್, 5 ಇತರ, ಕಾಪು- 501 ಒಟ್ಟು ಸ್ಥಾನ, 273 ಬಿಜೆಪಿ, 215 ಕಾಂಗ್ರೆಸ್, 13 ಇತರ, ಕಾರ್ಕಳ- 492 ಒಟ್ಟು ಸ್ಥಾನ, 316 ಬಿಜೆಪಿ, 173 ಕಾಂಗ್ರೆಸ್, 3 ಇತರ. ಒಟ್ಟು ಸ್ಥಾನ 2,398, ಬಿಜೆಪಿ 1,324, ಕಾಂಗ್ರೆಸ್ 1,014, ಇತರ 60. ಕುಂದಾಪ್ರ ಡಾಟ್ ಕಾಂ- editor@kundapra.com
