ಕುಂದಾಪುರ: ಚಾಲಕನ ಅತೀವೇಗದಿಂದಾಗಿ ನಿಯಂತ್ರಣ ಕಳೆದುಕೊಂಡ ಟಿಪ್ಪರ್ ಒಂದು ರಸ್ತೆ ಬದಿಯಲ್ಲಿ ಮೇಯುತ್ತಿದ್ದ ಜಾನುವಾಗಳ ಮೇಲೆ ಪಲ್ಟಿಯಾದ ಪರಿಣಾಮ ಟಿಪ್ಪರ್ ಅಡಿಯಲ್ಲಿ ಸಿಕ್ಕಿ ಹಾಕೊಂಡ ಎಂರಡು ಜಾನುವಾರುಗಳು ಸಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕಾಳಾವರ ಸಮೀಪದ ದಬ್ಬೆಕಟ್ಟೆ ಎಂಬಲ್ಲಿ ನಡೆದಿದೆ. ಜಲ್ಲಿ ತುಂಬಿಕೊಂಡು ಕುಂದಾಪುರದ ಕಡೆಗೆ ಬರುತ್ತಿದ್ದ ಟಿಪ್ಪರ್ ದಬ್ಬೆ ಕಟ್ಟೆ ಸಮೀಪದ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಇದೇ ಸಂದರ್ಭ ರಸ್ತೆ ಬದಿಯಲ್ಲಿ ಜಾನುವಾರುಗಳು ಮೇಯುತ್ತಿದ್ದವು. ಟಿಪ್ಪರ್ ಜಾನುವಾರುಗಳ ಮೇಲೆ ಅನಿರೀಕ್ಷಿತವಾಗಿ ಬಿದ್ದ ಪರಿಣಾಮ ಎರಡು ದನಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ. ಟಿಪ್ಪರ್ ಪಲ್ಟಿಯಾದ ತಕ್ಷಣ ಸ್ಥಳಿಯರು ಓಡಿ ಬಂದರಾದರೂ ಜಲ್ಲಿ ತುಂಬಿದ್ದ ಟಿಪ್ಪರನ್ನು ಅಲ್ಲಾಡಿಸಲೂ ಸಾಧ್ಯವಾಗಲಿಲ್ಲ. ಇತ್ತೀಚೆಗೆ ಕುಂದಾಪುರದಲ್ಲಿ ಟಿಪ್ಪರ್ಗಳ ಅಟ್ಟಹಾಸ ಹೆಚ್ಚುತ್ತಿದ್ದು ಸಂಚಾರಿ ಪೊಲೀಸರ ಎದುರೇ ಯಮದೂತರಂತೆ ಪ್ರಯಾಣಿಸುತ್ತಿದ್ದು, ಇತ್ತೀಚೆಗೆ ಹಲವು ಅಪಘಾತಗಳಿಗೆ ಕಾರಣವಾಗಿದೆ. ಆದರೆ ಇದುವರೆಗೆ ಸಂಬಂಧಪಟ್ಟ ಇಲಾಖೆಗಳೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಇಂತಹಾ ಅಪಘಾತಗಳು ಹೆಚ್ಚುತ್ತಲೇ ಇವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Author: Editor Desk
ಕುಂದಾಪುರ: ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ ರಾವ್ ಅವರ ಪದಚ್ಯತುಗಾಗಿ ಕುಂದಾಪುರದ ನ್ಯಾಯಾಲಯದಲ್ಲಿ ವಕೀಲರು ಕೆಂಪು ಪಟ್ಟಿ ಧರಿಸಿ ನ್ಯಾಯಾಲಯ ಕಲಾಪಗಳಲ್ಲಿ ಭಾಗಿಯಾಗುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು.
ಕುಂದಾಪುರ: ಇಲ್ಲಿನ ಪುರಸಭೆಯಲ್ಲಿ ಹಲವು ವರ್ಷಗಳಿಂದ ಪರಿಸರ ಅಭಿಯಂತರರಾಗಿ ಸೇವೆ ಸಲ್ಲಿಸುತ್ತಿದ್ದ ರಾಘವೇಂದ್ರ ಅವರನ್ನು ಏಕಾಏಕೀ ವರ್ಗಾವಣೆ ಮಾಡಿರುವುದನ್ನು ವಿರೋಧಿಸಿದ ಪುರಸಭೆಯ ಪೌರ ಕಾರ್ಮಿಕರು ಮುಂಜಾನೆಯಿಂದ ಪುರಸಭೆಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಬೆಳಿಗ್ಗೆ ಒಂದು ಹಂತದ ಕೆಲಸ ಮುಗಿಸಿದ ನಂತರ ಪೌರಕಾರ್ಮಿಕರಲ್ಲಿ ಖಾರ್ಯ ಸಿಬ್ಬಂದಿಗಳು ಹಾಗೂ ಗುತ್ತಿಗೆ ಆಧಾರಿತ ಕಾರ್ಮಿಕರೂ ಜೊತೆಯಾಗಿ ಪ್ರತಿಭಟನೆ ನಡೆಸಿ, ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿಯವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದರು. ರಾಘವೇಂದ್ರ ಅವರ ಅವಧಿಯಲ್ಲಿ ಪೌರಕಾರ್ಮಿಕರಿಗೆ ಎಲ್ಲಾ ಸವಲತ್ತುಗಳು ನ್ಯಾಯಯುತವಾಗಿ ದೊರಕಿದೆ. ಅಲ್ಲದೇ ಕಾರ್ಮಿಕರ ಬಗ್ಗೆ ಕಾಳಜಿಯದ್ದ ಅಭಿಯಂತರರಾಗಿದ್ದು, ಅವರನ್ನು ಹೀಗೇ ಏಕಾಏಕಿ ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂದು ಆಗ್ರಹಿಸಿದ ಪೌರಕಾರ್ಮಿಕರು, ರಾಘವೇಂದ್ರ ಅವರು ಕುಂದಾಪುರ ಪುರಸಭೆಗೆ ಮರುನೇಮಕ ಮಾಡುವವರೆಗೆ ನಾವು ಕೆಲಸ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭ ಪ್ರತಿಭಟನಾ ನಿರತರನ್ನು ಸಮಾಧಾನಿಸಲೆತ್ನಿಸಿದ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಇದು ಮೇಲಧಿಕಾರಿಗಳ ತೀರ್ಮಾನವಾಗಿದ್ದು ಕಾರ್ಮಿಕರ ಆಗ್ರಹವನ್ನು ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಪ್ರತಿಭಟನೆಯಿಂದ…
ಕುಂದಾಪುರ: ಕೋಟೇಶ್ವರ ಕಾಳಾವರ ವರದರಾಜ.ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೮ ವರ್ಷಗಳ ಕಾಲ ಕಚೇರಿ ಸಹಾಯಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ವರ್ಗಾವಣೆಗೊಂಡ ನಾರಾಯಣ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಗೀತಾ, ಗಣಿತ ಉಪನ್ಯಾಸಕಿ ಶ್ರೀಮತಿ ಅಡಿಗ, ಗುಮಾಸ್ತ ಸುದೇಶ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ನಿತ್ಯಾನಂದ ಗಾಂವ್ಕರ್, ಕಚೇರಿ ಸಹಾಯಕ ಕೃಷ್ಣ, ಗ್ರಂಥಾಲಯ ವಿಭಾಗದ ರವಿಚಂದ್ರ, ರಾಜ್ಯ ಶಾಸ್ತ್ರ ಉಪನ್ಯಾಸಕ ಎನ್.ನಿತ್ಯಾನಂದ, ಅರ್ಥಶಾಸ್ತ್ರ ಉಪನ್ಯಾಸಕ ಸುಬ್ರಹ್ಮಣ್ಯ, ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಶಂಕರ್ ನಾಯಕ್, ಕನ್ನಡ ಉಪನ್ಯಾಸಕಿ ಡಾ. ಉಷಾದೇವಿ.
ಗಂಗೊಳ್ಳಿ: ಉಡುಪಿ ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯಾಧಿಕಾರಿ ಉಡುಪಿ ಮತ್ತು ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಉಡುಪಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ ಇವರ ಆಶ್ರಯದಲ್ಲಿ ಮಲೇರಿಯಾ ಮಾಸಾಚರಣೆ ಕಾರ್ಯಕ್ರಮ ಶುಕ್ರವಾರ ಗಂಗೊಳ್ಳಿ ಟೈಲ್ ವರ್ಕ್ಸ್ ಕಂ. ವಠಾರದಲ್ಲಿ ಜರಗಿತು. ಕಾರ್ಖಾನೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಮಾತನಾಡಿದ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ವೇತಾ, ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಸರದ ನೈರ್ಮಲ್ಯ ಕಾಪಾಡಿಕೊಳ್ಳಬೇಕಾದುದು ಅತಿ ಮುಖ್ಯ. ಇತ್ತೀಚಿನ ಕೆಲವು ದಿನಗಳಲ್ಲಿ ಮಲೇರಿಯಾ, ಡೆಂಗ್ಯೂ ಪ್ರಕರಣಗಳು ದಾಖಲಾಗುತ್ತಿದ್ದು, ಇದು ಹರಡದಂತೆ ಮುನ್ನಚ್ಚೆರಿಕೆ ವಹಿಸಬೇಕು ಎಂದು ಕರೆ ನೀಡಿದ ಅವರು, ಮಲೇರಿಯಾ, ಡೆಂಗ್ಯೂ, ಫೈಲೇರಿಯಾ ಮೊದಲಾದ ರೋಗಗಳು ಹರಡುವ ವಿಧಾನ ಹಾಗೂ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿಯರಾದ ಗಿರಿಜಾ ನಾಯ್ಕ್, ಅರ್ಪಿತಾ, ಪ್ರಜ್ವಲಾ, ಕುಸುಮಾ, ಕಾರ್ಖಾನೆಯ ಕಛೇರಿ ಸಿಬ್ಬಂದಿಗಳಾದ ಎನ್.ನಾರಾಯಣ ನಾಯಕ್, ಬಿ.ಪ್ರಕಾಶ ಪಡಿಯಾರ್, ಎನ್.ರವೀಂದ್ರ ನಾಯಕ್…
ಮರವಂತೆ: ಉಡುಪಿ ಜಿಲ್ಲಾ ಶಿಕ್ಷಣ ಇಲಾಖೆ ಮತ್ತು ಬೆಂಗಳೂರಿನ ಸ್ಕಂದ ಸಂಸ್ಥೆಯ ಸಹಯೋಗದಲ್ಲಿ ಕ್ಷೇತ್ರ ವ್ಯಾಪ್ತಿಯ ವಿಶೇಷ ಅಗತ್ಯವಿರುವ ಮಕ್ಕಳ ವೈದ್ಯಕೀಯ ತಪಾಸಣಾ ಶಿಬಿರ ಮಂಗಳವಾರ ನಡೆಯಿತು. ಡೈಸ್ ಮತ್ತು ಇತರ ಸಮೀಕ್ಷೆಗಳಲ್ಲಿ ಗುರುತಿಸಲ್ಪಟ್ಟ ನ್ಯೂನತೆಯುಳ್ಳ ಮಕ್ಕಳು ಪೋಷಕರೊಂದಿಗೆ ಭಾಗವಹಿಸಿದ್ದರು. ಕುಂದಾಪುರ ಸರಕಾರಿ ಆಸ್ಪತ್ರೆಯ ಮೂಳೆ ತಜ್ಞ ಡಾ. ಶಿವಕುಮಾರ್, ನೇತ್ರ ತಜ್ಞ ಡಾ. ದಿನಕರ, ಕಿವಿ, ಮೂಗು, ಗಂಟಲು ತಜ್ಞ ಡಾ. ರಾಬರ್ಟ್ ರೆಬೆಲೊ, ಸ್ಕಂದ ಸಂಸ್ಥೆಯ ಡಾ. ಸಿ. ಎನ್. ಸುದರ್ಶನ ಮಕ್ಕಳ ತಪಾಸಣೆ ನಡೆಸಿ ಅವರಿಗೆ ಅಗತ್ಯವಿರುವ ಚಿಕಿತ್ಸೆ, ಸೌಲಭ್ಯ ಸೂಚಿಸಿದರು. ಜಿಲ್ಲಾ ಉಪ ಯೋಜನಾಧಿಕಾರಿ ನಾಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯಕ್, ಶಾಲೆಯ ಮುಖ್ಯೋಪಾಧ್ಯಾಯ ಜಿ. ಆನಂದ್ ಮತ್ತು ಸಿಬ್ಬಂದಿ ಸಹಕಾರ ನೀಡಿದರು. ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ತಾಲ್ಲೂಕು ಪಂಚಾಯತ್ ಸದಸ್ಯ ಮಹೇಂದ್ರಕುಮಾರ್, ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ ಶಿಬಿರಕ್ಕೆ ಭೇಟಿ…
ಗ೦ಗೊಳ್ಳಿ: ವಿದ್ಯಾರ್ಥಿಗಳಲ್ಲಿನ ಸಾಹಿತ್ಯದ ಅಭಿರುಚಿಯ ಪ್ರತಿಬಿ೦ಬದ೦ತೆ ಮೂಡುವ ಕಾಲೇಜಿನ ವಾರ್ಷಿಕ ಸ೦ಚಿಕೆಗಳು ಒ೦ದು ಕಾಲೇಜಿನ ಮೌಲ್ಯಯುತವಾದ ಬೆಳವಣಿಗೆಗೆ ಕನ್ನಡಿ ಇದ್ದ ಹಾಗೆ.ವಿದ್ಯಾರ್ಥಿಗಳ ಪ್ರತಿಭೆಯ ವಿಕಸನದ ಜೊತೆಗೆ ನಾಡಿನ ಸಾಹಿತ್ಯದ ಅಭಿವೃದ್ದಿಯಲ್ಲಿಯೂ ಕಾಲೇಜಿನ ವಾರ್ಷಿಕಾ೦ಕಗಳ ಮಹತ್ವ ಗಮನಾರ್ಹವಾದುದು ಎ೦ದು ಸುರತ್ಕಲ್ ಎನ್ಐಟಿಕೆಯ ನಿವೃತ್ತ ಫ್ರೊಫೆಸರ್ ಆರ್ ಕೆ ಶಾಜಿ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಗ೦ಗೊಳ್ಳಿಯ ರೋಟರಿ ಸಭಾ೦ಗಣದಲ್ಲಿ ನಡೆದ ಸಮಾರ೦ಭದಲ್ಲಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ಗ೦ಗೊಳ್ಳಿ ಇದರ ವಾರ್ಷಿಕ ಸಂಚಿಕೆ ’ದೃಷ್ಟಿ’ ಬಿಡುಗಡೆಗೊಳಿಸಿ ಮಾತನಾಡಿದರು. ಬೆ೦ಗಳೂರಿನ ಇಸ್ರೋ ಸ೦ಸ್ಥೆಯ ಪ್ರಸಾರ ಮತ್ತು ಸಾರ್ವಜನಿಕ ಸ೦ಪರ್ಕ ವಿಭಾಗದ ನಿರ್ದೇಶಕರಾಗಿರುವ ದೇವಿಪ್ರಸಾದ್ ಕರ್ಣಿಕ್ ಅಧ್ಯಕ್ಷತೆ ವಹಿಸಿದ್ದರು. ಸ೦ಚಿಕೆಯ ಪ್ರಧಾನ ಸಂಪಾದಕರಾದ ಎಚ್. ಸುಜಯೀಂದ್ರ ಹಂದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸ೦ಧರ್ಭದಲ್ಲಿ ಶೋಭ ಕರ್ಣಿಕ್,ಉಮೇಶ್ ಕಾರ್ಣಿಕ್,ರ೦ಗಪ್ಪಯ್ಯ ಕಾರ್ಣಿಕ್,ಕೃಷ್ಣಾನ೦ದ ಶೆಣೈ. ಕಾಲೇಜಿನ ಆಡಳಿತ ಮ೦ಡಳಿಯ ಹೆಚ್ ಗಣೇಶ ಕಾಮತ್. ಎನ್ ಸದಾಶಿವ ನಾಯಕ್, ಸಾಹಿತಿ ಕೋ.ಶಿವಾನ೦ದ ಕಾರ೦ತ, ಪ್ರಾಂಶುಪಾಲ ಆರ್. ಎನ್. ರೇವಣಕರ್ ಸಂಪಾದಕ ಮಂಡಳಿಯ…
ಗ೦ಗೊಳ್ಳಿ: ಇತ್ತೀಚೆಗೆ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಕಾಲೇಜಿನ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನಾರಾಯಣ ನಾಯ್ಕ್, ಉಪನ್ಯಾಸಕರಾದ ಸುಜಯೀ೦ದ್ರ ಹ೦ದೆ, ನಾಗರಾಜ ಶೆಟ್ಟಿ, ಭಾಸ್ಕರ ಶೆಟ್ಟಿ ಮಾರ್ಗದರ್ಶನ ನೀಡಿದರು.
ಗ೦ಗೊಳ್ಳಿ : ನಾವು ಜೀವನದಲ್ಲಿನ ಸಣ್ಣ ಸಣ್ಣ ವಿಷಯಗಳತ್ತ ಮೊದಲು ಗಮನ ಹರಿಸಿ ಅದರಲ್ಲಿ ಸ೦ತೃಪ್ತಿಯನ್ನು ಕಾಣುವುದನ್ನು ಕಲಿತುಕೊಳ್ಳಬೇಕಿದೆ.ಗುರಿಗಳನ್ನು ಇಟ್ಟುಕೊಳ್ಳುವುದಕ್ಕಿ೦ತ ಆ ನಿಟ್ಟಿನಲ್ಲಿ ನಾವೆಷ್ಟು ಶ್ರಮ ಪಡುತ್ತೇವೆ ಅನ್ನುವುದು ಮುಖ್ಯ.ನಿರ೦ತರ ಶ್ರಮ ನಮ್ಮನ್ನು ಯಶಸ್ಸಿನತ್ತ ಕೊ೦ಡೊಯ್ಯುತ್ತದೆ ಎ೦ದು ಸಿದ್ದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಗಣೇಶ ಹೆಬ್ಬಾರ್ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಸಕ್ತ ವರುಷದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.ಎನ್ನೆಸ್ಸೆಸ್ ನಮ್ಮಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿ ಒ೦ದು ಧೃಢ ವ್ಯಕ್ತಿತ್ವವನ್ನು ರೂಪಿಸಲು ಸಹಾಕಾರಿಯಾಗುತ್ತದೆ ಎ೦ದು ಅವರು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾ೦ಶುಪಾಲ ಆರ್ ಎನ್ ರೇವಣ್ಕರ್ ಮಾತನಾಡಿ ಯಾವುದೇ ಕೆಲಸದಲ್ಲಿ ನಾವು ತೋರಿಸುವ ಅನಾಸಕ್ತಿ ನಮ್ಮ ಬೆಳವಣಿಗೆಗ ಅಡ್ಡಿಯಾಗುತ್ತದೆ ಎ೦ದು ಅಭಿಪ್ರಾಯ ಪಟ್ಟರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನಾರಾಯಣ್ ನಾಯ್ಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇತಿಹಾಸ ಪ್ರಾಧ್ಯಾಪಕ ಭಾಸ್ಕರ ಶೆಟ್ಟಿ…
ಕುಂದಾಪುರ: ಶಾಲೆಗೆ ತೆರಳುತ್ತಿದ್ದ ವಿಸ್ಮಯ ದೇವಾಡಿಗ(9) ಎಂಬ ಬಾಲಕಿಯೋರ್ವಳು ತಾಯಿಯೊಂದಿಗೆ ಕಾಲುಸಂಕ ದಾಟುತ್ತಿದ್ದ ವೇಳೆ ಕಾಲುಜಾರಿ ನದಿಗೆ ಬಿದ್ದ ಘಟನೆ ತಾಲೂಕಿನ ಮಾರಣಕಟ್ಟೆಯಲ್ಲಿ ವರದಿಯಾಗಿದ್ದು, ನೀರಿನಲ್ಲಿ ಕೊಚ್ಚಿಹೋದ ಬಾಲಕಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಘಟನೆಯ ವಿವರ: ಮಾರಣಕಟ್ಟೆಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿಯಲ್ಲಿ ಕಲಿಯುತ್ತಿರುವ ವಿಸ್ಮಯ ಎಂದಿನಂತೆ ಶಾಲೆಗೆ ತನ್ನ ತಾಯಿಯೊಂದಿಗೆ ಹೊರಟಿದ್ದಳು. ಬೆಳಿಗ್ಗೆ 8:45ರ ವೇಳೆಗೆ ಮಾರಣಕಟ್ಟೆಯ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಹಿಂಭಾಗದಲ್ಲಿರುವ ಚಕ್ರಾ ಹೊಳೆಗೆ ಅಡ್ಡಲಾಗಿ ಹಾಕಿರುವ ಕಾಲುಸಂಕವನ್ನು ದಾಟುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ನಿನ್ನೆ ಭಾರಿ ಮಳೆ ಇದ್ದ ಕಾರಣ ಚಕ್ರಾ ನದಿಯಲ್ಲಿ ನೀರು ತುಂಬಿ ಹರಿಯುತ್ತಿತ್ತು. ವಿಸ್ಮಯಳ ತಾಯಿ ತನ್ನಿಬ್ಬರು ಮಕ್ಕಳ ಕೈಯನ್ನು ಹಿಡಿದುಕೊಂಡು ದಾಟಿಸುತ್ತಿದ್ದಾಗ, ಕಾಲುಸಂಕ ಮಧ್ಯಕ್ಕೆ ಬಂದಾಗ ವಿಸ್ಮಯ ತಾನೊಬ್ಬಳೇ ದಾಟುವುದಾಗಿ ಹೇಳಿ ತಾಯಿಯ ಕೈಬಿಡಿಸಿಕೊಂಡು ಮುಂದಕ್ಕೆ ಹೋಗಿದ್ದಾಳೆ. ಆದರೆ ಒಂದೆರಡು ಹೆಜ್ಜೆ ಇಡುತ್ತಿದ್ದಂತೆಯೇ ಕಾಲು ಜಾರಿ ತುಂಬಿಹರಿಯುತ್ತಿದ್ದ ನದಿಗೆ ಬಿದ್ದಿದ್ದಾಳೆ. ನೀರಿನ ಸೆಳೆತ ಹೆಚ್ಚಿದ್ದರಿಂದ ನೋಡನೋಡುತ್ತಿದ್ದಂತೆಯೇ ನದಿಯೊಂದಿಗೆ ಸೇರಿ…
