ಕುಂದಾಪುರ: ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ ಕಳೆದ ಐದು ವರ್ಷಗಳಿಂದ ಅತ್ಯಾಚಾರಗೈದು ಕೊನೆಗೆ ಕೈ ಕೊಟ್ಟ ಉಪ್ಪುಂದದ ನಿವಾಸಿ ನಾಗರಾಜ ಖಾರ್ವಿ ವಿರುದ್ಧ ಬಿಜೂರು ಗ್ರಾಮದ ಯುವತಿಯೋರ್ವಳು ಬೈಂದೂರು ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಯುವತಿಯ ಮನೆಯವರಲ್ಲಿ ಆಕೆಯನ್ನು ತಾನು ಮದುವೆಯಾಗುವುದಾಗಿ ತಿಳಿಸಿ ಆಗಾಗ ತನ್ನ ಮನೆಗೆ ಬರುತ್ತಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೋಡಿ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ. ಅತ್ಯಾಚಾರ ನಡೆಸಿರುವ ಈ ವಿಷಯವನ್ನು ಯಾರಿಗೂ ಹೇಳಬೇಡ ಎಂದು ಹೇಳಿದ್ದಲ್ಲದೇ ಒಂದು ವೇಳೆ ತಿಳಿಸಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Author: Editor Desk
ಕುಂದಾಪುರ: ರಕ್ತದಾನವೆಂಬುದು ಶ್ರೇಷ್ಠ ದಾನಗಳಲ್ಲೊಂದು. ನಮ್ಮ ಕರ್ನಾಟಕದಲ್ಲಿಯೇ ಯುನಿಟ್ ರಕ್ತಕ್ಕೆ ವರ್ಷವಿಡಿ ಬೇಡಿಕೆ ಇರುತ್ತದೆ. ಹಾಗಂತ ರಕ್ತದಾನಿಗಳಿಗೇನು ಬರವಿಲ್ಲ. ಆದರೂ ಒಟ್ಟು ಬೇಡಿಕೆಯ ಶೇಕಡಾ ಎಂಬತ್ತರಷ್ಟು ಮಾತ್ರ ರಕ್ತ ಪೂರೈಕೆಯಾಗುತ್ತದೆ ಎಂದರೆ ನಂಬಲೇಬೇಕು. ರಕ್ತದಾನದ ಬಗೆಗೆ ಸಾಕಷ್ಟು ಅರಿವೂ ಮೂಡಿಸುತ್ತಿದ್ದರೂ ಕೂಡ ಜನರಲ್ಲಿರುವ ತಪ್ಪ ಕಲ್ಪನೆಗಳಿಂದಾಗಿ ರಕ್ತಕ್ಕಾಗಿ ಪರದಾಡಬೇಕಾದ ಸ್ಥಿತಿ ಇದೆ. ಇದು ಬದಲಾಗಬೇಕು. ರಕ್ತವನ್ನು ಸ್ವಯಂ ಪ್ರೇರಿತರಾಗಿ ಎಲ್ಲರೂ ನೀಡುವಂತಾಗಬೇಕು. ಆ ಬಗ್ಗೆ ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸಬೇಕು ಎಂದು ಪಣತೊಟ್ಟಿರುವ ದಾವಣಗೆರೆಯ ಮಹಡಿ ಶಿವಕುಮಾರ್ ಎಂಬುವವರು ಕಳೆದ 20 ವರ್ಷಗಳಿಂದ ಊರೂರು ಸುತ್ತುತ್ತಾ ರಕ್ತದಾನದ ಬಗ್ಗೆ ಅರಿವು ಮೂಡಿಸುತ್ತಾ ಬರುತ್ತಿದ್ದಾರೆ. ಇತ್ತಿಚಿಗೆ ಕುಂದಾಪುರಕ್ಕೆ ಬಂದಿದ್ದಾಗ ‘ಕುಂದಾಪ್ರ ಡಾಟ್ ಕಾಂ’ ಭೇಟಿ ಮಾಡಿದ ಅವರು ತಮ್ಮ ಉದ್ದೇಶ, ಅನುಭವ-ಕನಸುಗಳನ್ನು ಬಿಚ್ಚಿಟ್ಟರು. ಸರ್ವಶಿಕ್ಷಣ ಅಭಿಯಾನದ ಪುಸ್ತಕ ವ್ಯಾಪಾರಿಯಾಗಿದ್ದ 45 ವರ್ಷ ವಯಸ್ಸಿನ ಶಿವಕುಮಾರ್ ರಕ್ತದಾನದ ಬಗ್ಗೆ ಅರಿವು ಮೂಡಿಸುವುದಕ್ಕಾಗಿಯೇ ತನ್ನ ಬದುಕನ್ನು ಮುಡಿಪಾಗಿಟ್ಟು ರಕ್ತದ ಕೊರತೆಯನ್ನು ನೀಗಿಸಲು ಪಣತೊಟ್ಟಿದ್ದಾರೆ. ದಾವಣಗೆರೆಯ ಡಾ|…
ಕುಂದಾಪುರ: ಹೆಮ್ಮಾಡಿ ಶ್ರೀ.ವಿ.ವಿ.ವಿ.ಮಂಡಳಿ ಆಡಳಿತಕ್ಕೆ ಒಳಪಟ್ಟ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಏಳು ವರ್ಷ ಕಾಲ ಭೌತಶಾಸ್ತ್ರ ಉಪನ್ಯಾಸಕ ಹಾಗೂ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ ಸೀತಾರಾಮ ಮಧ್ಯಸ್ಥ ಅವರನ್ನು ಶುಕ್ರವಾರ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳಿಂದ ಸನ್ಮಾನಿಸಲಾಯಿತು. ಕಾಲೇಜಿನ ಸ್ಥಾಪಕ ಪ್ರಾಂಶುಪಾಲ ಎಸ್.ಜನಾರ್ದನ ಮರವಂತೆ ಮತ್ತು ಅವರ ಧರ್ಮಪತ್ನಿ ನಿವೃತ್ತ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಐ.ವಸಂತ ಕುಮಾರಿ ಮಧ್ಯಸ್ಥ ಅವರನ್ನು ಸನ್ಮಾನಿಸಿದರು. ಸನ್ಮಾನಿಸಿದ ಎಸ್.ಜನಾರ್ದನ ಮರವಂತೆ ಮಾತನಾಡಿ, ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಮಧ್ಯಸ್ಥರ ಶಿಸ್ತು ಬಧ್ಧ ಆಡಳಿತದಿಂದ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಗ್ರಾಮೀಣ ಬಡ ವಿಧ್ಯಾರ್ಥಿಗಳ ಬಗ್ಗೆ ಅತೀವ ಕಾಳಜಿ ಹೊಂದಿದ ಪ್ರಾಮಾಣಿಕ ವ್ಯಕ್ತಿ ಇಂದಿನ ಸಮಾಜದಲ್ಲಿ ಸಿಗುವುದು ಬಹಳ ಅಪರೂಪ. ಪ್ರಸ್ತುತ ಶಿಕ್ಷಣ ಸಂಸ್ಥೆಗಳಿಗೆ ಮಧ್ಯಸ್ಥರಂತಹ ವ್ಯಕ್ತಿಗಳ ಸೇವೆ ಇನ್ನೂ ಅವಶ್ಯಕತೆ ಇದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮಧ್ಯಸ್ಥರು ವೃತ್ತಿ ಜೀವನದಲ್ಲಿ ನನ್ನ ಪ್ರಾಮಾಣಿಕ ಸೇವೆ ಆತ್ಮ ಸಂತೃಪ್ತಿ ತಂದಿದೆ. ನನ್ನ ಸೇವೆಯಿಂದ ನಾಲ್ಕಾರು…
ಕುಂದಾಪುರ: ಗ್ರಾಮೀಣ ಭಾಗದ ಖಾದ್ಯಗಳು ಇಂದಿಗೂ ತನ್ನ ರುಚಿಯನ್ನು ಉಳಿಸಿಕೊಂಡಿರುವುದರಿಂದಾಗಿ ಹಲಸಿನ ಖಾದ್ಯ ಹಾಗೂ ಹಲಸಿನಿಂದ ಉತ್ಪಾದಿಸುವ ತಿಂಡಿ-ತಿನಿಸುಗಳು ಇಂದು ದೇಶವಲ್ಲದೆ ವಿದೇಶಗಳಲ್ಲಿಯೂ ಜನಪ್ರೀಯವಾಗಿದೆ ಎಂದು ಉಡುಪಿಯ ಭಾರತೀಯ ವಿಕಾಸ ಟ್ರಸ್ಟ್ನ ಆಡಳಿತ ಟ್ರಸ್ಟಿ ಕೆ.ಎಂ ಉಡುಪ ಹೇಳಿದರು. ಇಲ್ಲಿನ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾಲಯ ಶಿವಮೊಗ್ಗ, ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ, ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಬ್ರಹ್ಮಾವರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿ, ತೋಟಗಾರಿಕೆ ಮತ್ತು ಅರಣ್ಯ ಇಲಾಖೆ ಹಾಗೂ ಭಾರತೀಯ ಕಿಸಾನ್ ಸಂಘದ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆಯುವ ’ರಾಜ್ಯ ಮಟ್ಟದ ಹಲಸಿನ ಹಬ್ಬ 2015’ ನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಅರಣ್ಯ ಇಲಾಖೆ ಸಸಿಗಳನ್ನು ವಿತರಣೆ ಮಾಡುವ ಸಂದರ್ಭದಲ್ಲಿ ಹಣ್ಣು ಹಂಪಲುಗಳನ್ನು ಬೆಳೆಯುವ ಸಸಿಗಳನ್ನು ವಿತರಣೆ ಮಾಡಬೇಕು. ಹಲಸು, ಹೆಬ್ಬಲಸು…
ಕುಂದಾಪುರ: ಸಂವಿಂಧಾನದ ಆಶಯಗಳನ್ನು ಸಮಾಜದ ಕಟ್ಟಕಡೆಯ ಜನರಿಗೂ ತಲುಪಿಸುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಗ್ರಾಮ ಪಂಚಾಯಿತಿಗಳು ನಮ್ಮ ದೇಶದ ಆಡಳಿತ ವ್ಯವಸ್ಥೆಯ ಪಂಚಾಂಗಗಳಿದ್ದಂತೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು. ನಗರದ ಆರ್.ಎನ್ ಶೆಟ್ಟಿ ಸಭಾಭವನದಲ್ಲಿ ಶನಿವಾರ ಮಧ್ಯಾಹ್ನ ಕುಂದಾಪುರ ಬ್ಲಾಕ್ ಕಾಂಗ್ರೆಸ್ ನೇತ್ರತ್ವದಲ್ಲಿ ನಡೆದ ಪಂಚಾಯಿತಿ ಚುನಾವಣಾ ಸ್ಪರ್ಧಿಗಳ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಗ್ರಾಮ ಪಂಚಾಯಿತಿಯ ಜನರಿಗೆ ಎರಡು ರೀತಿಯಲ್ಲಿ ಎಂ.ಪಿ ಗಳು ದೊರಕುತ್ತಾರೆ. ಒಬ್ಬರು ಮೆಂಬರ್ ಆಫ್ ಪಾರ್ಲಿಮೆಂಟ್ ಆದರೆ ಇನ್ನೊಬ್ಬರು ಮೆಂಬರ್ ಪಂಚಾಯಿತ್. ಇಬ್ಬರಿಗೂ ಮತದಾನ ಮಾಡುವ ಸಮಾನ ಅಧಿಕಾರವನ್ನು ಹೊಂದಿರುವ ಮತದಾರರ ಆಶಯ ಹಾಗೂ ಭಾವನೆಗಳಿಗೆ ಪ್ರತಿ ಸ್ಪಂದನ ನೀಡುವ ಕೆಲಸಗಳು ಜನಪ್ರತಿನಿಧಿಗಳಿಂದ ಆಗಬೇಕು. ಸರ್ಕಾರಗಳು ನೀತಿ ರೂಪಿಸುವ ಹೊಣೆಯನ್ನು ಹೊಂದಿದ್ದರೆ ಅದನ್ನು ಸಮರ್ಥವಾಗಿ ಜಾರಿಗೊಳಿಸುವ ಹೊಣೆ ಗ್ರಾಮ ಪಂಚಾಯಿತಿಗಳದ್ದು. ರಾಜೀವ್ ಗಾಂಧಿ ಪ್ರಧಾನ ಮಂತ್ರಿಗಳಾಗಿದ್ದಾಗ ಇದೆ ಕಾರಣಕ್ಕಾಗಿ ಪಂಚಾಯತ್, ಸಹಕಾರಿ ಹಾಗೂ ಕೇಂದ್ರೀಯ ವಿದ್ಯಾಲಯಗಳನ್ನು ಸ್ಥಾಪಿಸುವ…
ಶಾಸಕ, ಸಂಸದರಿಗಿಲ್ಲದ ಅಧಿಕಾರ ಗ್ರಾ.ಪಂ ಸದಸ್ಯನಿಗಿದೆ: ಸಂಸದೆ ಶೋಭಾ ಕರಂದ್ಲಾಜೆ ಕುಂದಾಪುರ: ಪ್ರಜಾಪ್ರಭುತ್ವದ ಆಶಯಗಳ ಅಡಿಯಲ್ಲಿ ನಡೆಯುವ ಜನಪ್ರತಿನಿಧಿಗಳ ಆಯ್ಕೆಯ ಪ್ರಥಮ ಅಡಿಪಾಯವಾಗಿರುವ ಗ್ರಾಮ ಪಂಚಾಯಿತಿಗಳು ಸುಭದ್ರವಾಗಿದ್ದಲ್ಲಿ ದೇಶದ ಒಟ್ಟಾರೆ ವ್ಯವಸ್ಥೆಗಳು ಸುಭದ್ರವಾಗಿರುತ್ತದೆ ಎನ್ನುವ ಸಿದ್ದಾಂತವನ್ನು ಗ್ರಾಮ ಪಂಚಾಯಿತಿ ಸದಸ್ಯರುಗಳು ರೂಢಿಸಿಕೊಳ್ಳಬೇಕು ಎಂದು ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ನುಡಿದರು. ಇಲ್ಲಿಗೆ ಸಮೀಪದ ಹೆಮ್ಮಾಡಿಯ ಜಯಶ್ರೀ ಸಭಾಭವನದಲ್ಲಿ ಬೈಂದೂರು ಬಿಜೆಪಿ ಕ್ಷೇತ್ರ ಸಮಿತಿಯ ಆಶ್ರಯದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣಾ ಅಭ್ಯರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಎಂ.ಪಿ ಹಾಗೂ ಎಂ.ಎಲ್.ಎ ಗಳಿಗೆ ಇಲ್ಲದ ಕೆಲವೊಂದು ಅಧಿಕಾರಗಳು ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಇದೆ. ಸರ್ಕಾರದ ನೀಡುವ ಮನೆ ಹಾಗೂ ಶೌಚಾಲಯಗಳ ಫಲಾನುಭವಿಗಳನ್ನು ಆಯ್ಕೆ ಮಾಡುವ ಅಧಿಕಾರವಿರುವುದು ಗ್ರಾಮ ಪಂಚಾಯಿತಿಗಳಿಗೆ ಮಾತ್ರ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನಗಳು ನೇರವಾಗಿ ಗ್ರಾಮ ಪಂಚಾಯಿತಿಗಳನ್ನು ತಲುಪುವ ವ್ಯವಸ್ಥೆಗಳಿವೆ. ಪಂಚಾಯಿತಿ ಸದಸ್ಯರುಗಳು ಸಂವಿಂಧಾನದ ಆಶಯಗಳನ್ನು ಅನುಷ್ಠಾನಗೊಳಿಸಲು ಕಾನೂನಿನ ಕಾವಲು ನಾಯಿಗಳಂತೆ ಕೆಲಸ…
ಕುಂದಾಪುರ: ರಾಜ್ಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಆಡಳಿತ) ಆಲೋಕ್ಮೋಹನ್ ಅವರು ಕುಂದಾಪುರದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಕಾರ್ಯ ವೈಖರಿ, ನಕ್ಸ್ಲ್ ಚಟುವಟಿಕೆ ಹಾಗೂ ಕಾನೂನು ಸುವಸ್ಥೆಯ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿದರು. ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕರಾದ ಅಮ್ರೀತ್ಪಾಲ್, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಂತೋಷ್ಕುಮಾರ, ಕುಂದಾಪುರ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಎಂ.ಮಂಜುನಾಥ ಶೆಟ್ಟಿ, ಉಡುಪಿ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಚಂದ್ರಶೇಖರ, ಸರ್ಕಲ್ ಇನ್ಸ್ಪೆಕ್ಟರ್ಗಳಾದ ಗಿರೀಶ್, ದಿವಾಕರ ಪಿ.ಎಂ, ಶ್ರೀಕಾಂತ್, ಸುದರ್ಶನ್, ಸುನೀಲ್ ನಾಯಕ್ ಹಾಗೂ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಕೊಲ್ಲೂರಿಗೆ ಭೇಟಿ: ಪತ್ನಿ ಸಮೇತರಾಗಿ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದ ರಾಜ್ಯದ ಪೊಲೀಸ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆಲೋಕ್ಮೋಹನ್ ದೇವರ ದರ್ಶನ ಪಡೆದು, ಅರ್ಚಕರ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಇದೆ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೃಷ್ಣಪ್ರಸಾದ…
ಕುಂದಾಪುರ: ಲಯನ್ಸ್ ಕ್ಲಬ್, ಹಂಗಳೂರಿನ 2015-16ನೇ ಸಾಲಿನ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ಸಾಹೇಬ್ ಕೋಟ ಆಯ್ಕೆಯಾಗಿದ್ದಾರೆ. ಕುಂದಾಪುರ ಹಾಗೂ ಬ್ರಹ್ಮಾವರದಲ್ಲಿ ಕಾರ್ಯಾಚರಿಸುತ್ತಿರುವ ಪ್ಲೆಸೆಂಟ್ ಪೀಠೋಪಕರಣ ಮಳಿಗೆಯ ಪಾಲುದಾರರಾದ ಇವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜಮಾಯಿತುಲ್ ಫಲಾಹ್ನ ಅಧ್ಯಕ್ಷರಾಗಿ, ಅಲ್ಪಸಂಖ್ಯಾತರ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದು, ಜುಮ್ಮಾ ಮಸೀದಿ ಕೋಟದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಹಂಗಳೂರಿನ ಲಯನ್ಸ್ ಕ್ಲಬ್ನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಎಚ್. ಬಾಲಕೃಷ್ಣ ಶೆಟ್ಟಿ, ಖಜಾಂಚಿಯಾಗಿ ಸ್ಟ್ಯಾನಿ ಡಿ’ಮೆಲ್ಲೊ ಆಯ್ಕೆಯಾದರು. ಲಯನ್ಸ್ ಕ್ಲಬ್, ಹಂಗಳೂರಿನ 2015-16ನೇ ಸಾಲಿನ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜೂನ್. 13ರಂದು ರಾತ್ರಿ ೭.೩೦ಕ್ಕೆ ಕುಂದಾಪುರದ ಹೋಟೆಲ್ ಶರೋನ್ ಸಭಾಂಗಣದಲ್ಲಿ ನಡೆಯಲಿದೆ.
ಉಡುಪಿ: ಬಿಜೆಪಿ ಸದಸ್ಯತ್ವ ಅಭಿಯಾನದ ಎರಡನೇ ಹಂತವಾಗಿ “ಮಹಾಸಂಪರ್ಕ ಅಭಿಯಾನ’ ಹಮ್ಮಿಕೊಳ್ಳಲಾಗಿದ್ದು ಈಗಾಗಲೇ ಸದಸ್ಯತ್ವ ಪಡೆದಿರುವವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಮಾಹಿತಿ ಪಡೆಯುವ ಕಾರ್ಯಕ್ರಮ ಈ ಅಭಿಯಾನದಲ್ಲಿ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ. ಜೂ.12ರಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾ ಡಿದ ಅವರು, ದೇಶದಲ್ಲಿ 11 ಕೋಟಿಗೂ ಅಧಿಕ ಮಂದಿ ಬಿಜೆಪಿ ಸದಸ್ಯತ್ವ ಪಡೆದಿದ್ದಾರೆ. ಇದರಿಂದಾಗಿ ವಿಶ್ವದಲ್ಲೇ ಅಧಿಕ ಸದಸ್ಯತ್ವ ಪಡೆದಿರುವ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಉಡುಪಿ ಜಿಲ್ಲೆಯಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ನವೀಕರಿಸಲ್ಪಟ್ಟ/ಹೊಸ ಸದಸ್ಯರ ನೋಂದಣಿಯಾಗಿದೆ. ಇವರೆಲ್ಲರನ್ನೂ ನೇರವಾಗಿ ಸಂಪರ್ಕಿಸುವ ಕೆಲಸ ಅಭಿಯಾನದಲ್ಲಿ ನಡೆಯಲಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ ಮತ್ತು ಸಂಧ್ಯಾ ರಮೇಶ್, ಉಪಾಧ್ಯಕ್ಷೆ ಗೀತಾಂಜಲಿ ಸುವರ್ಣ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೀಣಾ ಶೆಟ್ಟಿ, ಕಾಪು ಕ್ಷೇತ್ರಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಕುಂದಾಪುರ: ನಮಗೆ ಯಾವುದೇ ಕಷ್ಟ ಬಂದರು ದೇವರ ಮೊರೆಹೋಗಿ ಅವನ ಮೇಲೆ ಭಾರ ಹೇರುತ್ತೇವೆ. ಭಗವಂತನ ಮೇಲೆ ಹೊಣೆ ಹಾಕಿ ನಾವು ಶಾಂತಿಯಿಂದ ನೆಮ್ಮದಿಯಿಂದ ಇರುತ್ತೇವೆ. ಇದಕ್ಕೆಲ ದೇವರ ಮೇಲೆ ಇರುವ ದೃಢವಾದ ನಂಬಿಕೆಯೇ ಕಾರಣ. ಎಲ್ಲರಿಗೂ ದೇವರು ಸದ್ಗತಿಯನ್ನು ಕರುಣಿಸಲಿ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆಯವರು ಹೇಳಿದರು. ಅವರು ಹಂಗಳೂರಿನ ಶ್ರೀ ಚಿಕ್ಕ ಮಹಾಲಿಂಗೇಶ್ವರ ಹಾಗೂ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಧಾರ್ಮಿಕ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಡುಪಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಎ.ಎಸ್.ಎನ್.ಹೆಬ್ಟಾರ್ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ನಿವೃತ್ತ ವಿಜಯ ಬ್ಯಾಂಕ್ ಉದ್ಯೋಗಿ ನಡೂರು ಸದಾನಂದ ಶೆಟ್ಟಿ, ಲಕ್ಷ್ಮಣ ಶೇರಿಗಾರ ಹಂಗಳೂರು, ದೇವಸ್ಥಾನದ ಅರ್ಚಕ ಸೂರ್ಯನಾರಾಯಣ ಐತಾಳ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ.ಆರ್.ನಾಯ್ಕ, ಗೀತಾಂಜಲಿ ಕೆ.ಆರ್. ನಾಯ್ಕ ಉಪಸ್ಥಿತರಿದ್ದರು. ವಕ್ವಾಡಿ ರಂಜಿತ್ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗುರುರಾಜ್ ಗಾಣಿಗ ವಂದಿಸಿದರು.
