Author: Editor Desk

ಮಂಗಳೂರು : ಇಂದೋರ್‌-ಕೊಚ್ಚುವೇಲಿ ನಡುವೆ ಬೇಸಗೆಯಲ್ಲಿ ಸೂಪರ್‌ಫಾಸ್ಟ್‌ ವಿಶೇಷ ರೈಲನ್ನು ಓಡಿಸಲಾಗುವುದು. ಇಂದೋರ್‌ನಿಂದ (09310) ಎ. 14, 21, 28, ಮೇ 5, 12, 19, 26, ಜೂ. 2ರ ಮಂಗಳವಾರ ರಾತ್ರಿ 9.05ಕ್ಕೆ ಹೊರಟು ಕೊಚ್ಚುವೇಲಿಯನ್ನು ಗುರುವಾರ ರಾತ್ರಿ 7.10ಕ್ಕೆ ತಲುಪಲಿದೆ. ಕೊಚ್ಚುವೇಲಿಯಿಂದ (09309) ಎ. 17, 24, ಮೇ 1, 8, 15, 22, 29, ಜೂ. 5ರ ಶುಕ್ರವಾರ ಪೂರ್ವಾಹ್ನ 11ಕ್ಕೆ ಹೊರಟು ಇಂದೋರ್‌ನ್ನು ರವಿವಾರ ಬೆಳಗ್ಗೆ 5.15ಕ್ಕೆ ತಲುಪಲಿದೆ. ರೈಲಿಗೆ ಕಾರವಾರ, ಉಡುಪಿ, ಮಂಗಳೂರು ಜಂಕ್ಷನ್‌, ಕಾಸರಗೋಡಿನಲ್ಲಿ ನಿಲುಗಡೆ ಇದೆ ಎಂದು ಪ್ರಕಟನೆ ತಿಳಿಸಿದೆ.

Read More

ಪಡುಬಿದ್ರಿ: ರಾ.ಹೆ.66ರ ಚತುಷ್ಪಥ ಕಾಮಗಾರಿಗಾಗಿ ರಸ್ತೆ ಡಿವೆಡರ್ ಅಳವಡಿಸಿದ ಹೆಜಮಾಡಿ ಶಿವನಗರ ಬಳಿ ಸೋಮವಾರ ಬೆಳಗ್ಗೆ ಮೀನಿನ ಕ್ಯಾಂಟರ್ ಮತ್ತು ಲಾರಿ ಮುಖಾಮುಖಿ ಢಿಕ್ಕಿಯಾಗಿ ಲಾರಿ ಚಾಲಕ ಗಂಭೀರ ಗಾಯಗೊಂಡಿದ್ದಾರೆ. ಗೋವಾದಿಂದ ಕೇರಳಕ್ಕೆ ಬೂತಾಯಿ ಮೀನು ಸಾಗಿಸುತ್ತಿದ್ದ ಕ್ಯಾಂಟರ್, ಬಲಭಾಗದ ರಸ್ತೆಯಿಂದ ಎಡಭಾಗದ ರಸ್ತೆಗೆ ತಿರುಗುವ ತಿರುವಿನಲ್ಲಿ ತಮಿಳುನಾಡಿನಿಂದ ಉಡುಪಿಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿಗೆ ಮುಖಾಮುಖಿ ಢಿಕ್ಕಿಯಾಗಿ ಈ ದುರಂತ ಸಂಭವಿಸಿತು. ಎರಡೂ ವಾಹನಗಳ ಮುಂಭಾಗ ಅಪ್ಪಚಿಯಾಗಿ ಒಂದಕ್ಕೊಂದು ಸಿಲುಕಿಕೊಂಡಿದ್ದು, ಲಾರಿ ಚಾಲಕ ತಮಿಳುನಾಡಿನ ಮುತ್ತು(55) ಎಂಬಾತನನ್ನು ಹೊರಕ್ಕೆಳೆಯಲು ಜೆಸಿಬಿ ಬಳಸಬೇಕಾಯಿತು. ತಲೆ, ಕಾಲಿಗೆ ಗಂಭೀರ ಗಾಯಗೊಂಡು ಅರೆಪ್ರಜ್ಞವಸ್ಥೆಯಲ್ಲಿದ್ದ ಅವರನ್ನು ಮಂಗಳೂರಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ರಭಸಕ್ಕೆ ಮೀನುಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಘಟನೆಯಲ್ಲಿ ಕ್ಯಾಂಟರ್ ಚಾಲಕ, ಕಂಡಕ್ಟರ್, ಲಾರಿ ಕಂಡಕ್ಟರ್ ಪಾರಾಗಿದ್ದಾರೆ. ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ರಸ್ತೆ ಸಂಚಾರ ಸುಗಮಗೊಳಿಸಿದರು. ಮಳೆಯ ಪ್ರಭಾವ: ಸೋಮವಾರ ಬೆಳಗ್ಗಿನಿಂದಲೇ ಮಳೆ ಪ್ರಾರಂಭವಾಗಿದ್ದು, ಅಪಘಾತ ಸಂದರ್ಭ ಎರಡೂ ವಾಹನಗಳ ಚಾಲಕರು…

Read More

ಹರಕೆಯ ರೂಪದಲ್ಲಿ ಬಹು ಪ್ರಸಿದ್ದಿಯನ್ನು ಕಂಡುಕೊಳ್ಳುತ್ತಿರುವ ಯಕ್ಷಗಾನ ಮೇಳಗಳು ಇತ್ತೀಚೆಗಿನ ದಿನಗಳಲ್ಲಿ ಇತರೆ ಕಲಾಪ್ರಕಾರಗಳಂತೆ ವಾಣಿಜ್ಯೀಕರಣದ ಹಾದಿಯಲ್ಲಿವೆ. ಇದರಿಂದ ಯಕ್ಷಗಾನವನ್ನೇ ನಂಬಿಕೊಂಡ ಕಲಾವಿದರು, ರಂಗತಂತ್ರಜ್ಞರಿಗೆ ಬದುಕಿನ ಬಗ್ಗೆ ಸಣ್ಣದೊಂದು ಭರವಸೆ ಮೂಡಿದೆ. ಆದರೂ ಕೂಡಾ ಪ್ರೇಕ್ಷಕರ ಕೊರತೆ ಎಲ್ಲಾ ಆಶಾಕಿರಣಗಳಿಗೂ ತಣ್ಣಿರೆರಚುತ್ತಿದೆ. ಪ್ರಸ್ತುತ ಕರಾವಳಿಯ ಯಕ್ಷಗಾನ ಪ್ರಪಂಚದಲ್ಲಿ ಸಾಕಷ್ಟು ಸುಧಾರಣೆಗಳು ಆವಿಷ್ಕಾರಗಳು ನಡೆದಿವೆ. ಉದಾಹರಣೆಗೆ ಹಿಂದೆ ಬಯಲಾಟ ಹಾ ಡೇರೆ ಮೇಳಗಳು ಮಾತ್ರ ಇದ್ದರೆ ಇವತ್ತು ಅವುಗಳು ಪಂಕ್ತಿಯಲ್ಲಿ ಪ್ರವಾಸಿ ಮೇಳಗಳು, ಸಣ್ಣಪುಟ್ಟ ಕಾರ್ಯಕ್ರಮ ನೀಡಲು ಕಾಲಮಿತಿ ಮೇಳಗಳು ಬಂದಿವೆ. ದೇವಸ್ಥಾನದ ಹೆಸರಿನ ಮೂಲಕ ಹೊರಡುವ ಮೇಳಗಳಿಂತ ತುಸು ಭಿನ್ನವಾಗಿರುವ ಪ್ರವಾಸಿ ಮೇಳ, ಕಾಲಮಿತಿ ಪ್ರದರ್ಶನ ನೀಡುವ ಸಿಮಿತ ತಂಡಗಳು ಯಾವುದೇ ಬಾಹ್ಯ ಒತ್ತಡವಿಲ್ಲದೇ ವರ್ಷವಿಡೀ ತಿರುಗಾಟ ಮಾಡುತ್ತವೆ. ಅಂತಹ ಒಂದು ಪ್ರವಾಸಿ ಮೇಳದ ಕಲ್ಪನೆ ಈ ವರ್ಷದ ಯಕ್ಷರಂಗದಲ್ಲಿ ಒಂದಿಷ್ಟು ಸಂಚಲನ ಮೂಡಿಸಿದೆ. ಉಮೇಶ ಸುವರ್ಣ ಪ್ರವಾಸಿ ಮೇಳಗಳು ರಾಜ್ಯವ್ಯಾಪಿಯಾಗಿ ತಿರುಗಾಟದ ಗುರಿಯನ್ನು ಹಾಕಿಕೊಂಡು ಯಕ್ಷರಂಗದ ಕಂಪನ್ನು ಎಲ್ಲ ಕಡೆಗಳಲ್ಲಿಯೂ…

Read More

ಹೊಸದಿಲ್ಲಿ: ಮುಂಬಯಿ ದಾಳಿ ಸಂಚುಕೋರ ಝಕಿರ್ ರೆಹಮಾನ್ ಲಖ್ವಿ ಬಿಡುಗಡೆಯನ್ನು ಖಂಡಿಸಿರುವ ಭಾರತ, ಈತನ ಬಿಡುಗಡೆ ವಿರುದ್ಧ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಪಾಕಿಸ್ತಾನವನ್ನು ಒತ್ತಾಯಿಸಿದೆ. ಲಖ್ವಿ ವಿರುದ್ಧ ನಾವು ಸಾಕಷ್ಟು ಪುರಾವೆಗಳನ್ನು ಪಾಕ್‌ಗೆ ನೀಡಿದ್ದೇವೆ. ಆದರೆ ಅವುಗಳನ್ನು ಕೋರ್ಟ್ ಮುಂದೆ ಆ ದೇಶ ಇಟ್ಟಿಲ್ಲ. ಹೀಗಾಗಿಯೇ ಆ ಉಗ್ರನ ಬಿಡುಗಡೆಗೆ ಕೋರ್ಟ್ ಆದೇಶ ನೀಡಿತು. ಲಖ್ವಿಯನ್ನು ಶಿಕ್ಷಿಸಲು ನಾವು ನೀಡಿದ್ದ ಸಾಕ್ಷ್ಯಗಳನ್ನು ಪಾಕಿಸ್ತಾನವು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಗೃಹ ಖಾತೆ ಸಹಾಯಕ ಸಚಿವ ಕಿರಣ್ ರಿಜಿಜು ಆಗ್ರಹಿಸಿದ್ದಾರೆ.

Read More

ಮುಂಬಯಿ: ದೇವಾಡಿಗ ಸಂಘ ಮುಂಬಯಿ ಇದರ 90ನೇ ವಾರ್ಷಿಕೋತ್ಸವ ಸಮಾರಂಭವು ಎ. 18 ಮತ್ತು 19ರಂದು ನವಿಮುಂಬಯಿ ನೆರೂಲ್‌ನ ದೇವಾಡಿಗ ಭವನದಲ್ಲಿ ಅದ್ದೂರಿಯಾಗಿ ಜರಗಲಿದೆ. ಈ ಬಗ್ಗೆ ನಗರದ ದಾದರ್‌ನಲ್ಲಿರುವ ದೇವಾಡಿಗ ಸಂಘದ ಕಾರ್ಯಾಲಯದಲ್ಲಿ ಸಂಘದ ಗಣ್ಯರ ಉಪಸ್ಥಿತಿಯಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ದೇವಾಡಿಗ ಸಂಘದ ನಿಕಟ ಪೂರ್ವ ಅಧ್ಯಕ್ಷ ಹಿರಿಯಡ್ಕ ಮೋಹನ್‌ದಾಸ್‌ ಅವರು ಸಂಘದ ಸ್ಥಾಪಕರನ್ನು ಸ್ಮರಿಸಿದರಲ್ಲದೆ, 2007ರ ಸಮಯದಲ್ಲಿ ಧರ್ಮಪಾಲ… ದೇವಾಡಿಗರ ಅಧ್ಯಕ್ಷೀಯ ಅವಧಿಯಲ್ಲಿ ದೇವಾಡಿಗ ಭವನ ನಿರ್ಮಾಣಗೊಂಡಿದ್ದು ಸಂಘಟನೆಯಲ್ಲಿ ಒಂದು ಉತ್ತಮ ಬದಲಾವಣೆಯಾಗಿದೆ ಎಂದರು. ಮುಂಬಯಿಯಲ್ಲಿ ಮಾತ್ರವಲ್ಲದೆ ತವರೂರಲ್ಲೂ ಈ ಸಂಘದ ಮೂಲಕ ಆರೋಗ್ಯ ಮಾಹಿತಿ ಶಿಬಿರವನ್ನು ಪ್ರಾರಂಭಿಸಲಾಗಿದೆ. 2010 – 11ರಲ್ಲಿ ಅಲ್ಪಾವಧಿಯಲ್ಲೇ ಹತ್ತು ಸ್ಥಳೀಯ ಸಮಿತಿಯನ್ನು ಸ್ಥಾಪಿಸಿ ಸಂಘದ ಕಾರ್ಯಕರ್ತರು ಸದಸ್ಯರ ಮನೆಗೆ ತಲಪಿ ತಮ್ಮ ಸಮಸ್ಯೆಗೆ ಸ್ಪಂದಿಸುವಂತಾಗಿದೆ. ಪ್ರತೀ ವರ್ಷ ಸಮಾಜದ 5 – 6 ಅರ್ಹ ಮಕ್ಕಳನ್ನು ಈ ಸಂಸ್ಥೆ ಶಿಕ್ಷಣಕ್ಕಾಗಿ ದತ್ತು ಸ್ವೀಕರಿಸುತ್ತಿರುದನ್ನು ಪತ್ರಕರ್ತರ ಗಮನಕ್ಕೆ ತರಲಾಯಿತು. ನಮ್ಮ…

Read More

ಕುಂದಾಪುರ: ತಾಲೂಕಿನ ಹಾಡ ಹಗಲೇ ಮನೆಯಲ್ಲಿ ತನ್ನ 4 ವರ್ಷದ ಮಗುವಿನೊಂದಿಗಿದ್ದ ಬಸುರಿ ಮಹಿಳೆಯನ್ನು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ಗೋಪಾಡಿ ಬೀಚ್ ರಸ್ತೆಯಲ್ಲಿ ಶನಿವಾರ ಸಂಜೆ ನಡೆದಿದೆ. ಮಹಿಳೆಯನ್ನು ಅತ್ಯಾಚಾರ ಯತ್ನಿಸಿ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಗೋಪಾಡಿಯ ಬೀಚ್ ರಸ್ತೆ ಒಂಟಿ ಮನೆಯ ನಿವಾಸಿ ಆರೂವರೆ ತಿಂಗಳ ಗರ್ಭಿಣಿ ಇಂದಿರಾ ಮೊಗವೀರ(೩೦) ಎಂಬಾಕೆಯೇ ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾದ ಮಹಿಳೆ. ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಯ ಹೆಸರನ್ನು ತನಿಖೆಯ ಕಾರಣದಿಂದ ಪೊಲೀಸರು ಬಹಿರಂಗಗೊಳಿಸಿಲ್ಲ. ಘಟನೆಯ ವಿವರ: ಬೀಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಪಾಡಿ ಎಂಬಲ್ಲಿ ಬೀಚ್ ರಸ್ತೆಯಲ್ಲಿ ಸಮುದ್ರ ಸಮೀಪವಿರುವ ಲಿಂಗಜ್ಜನ ಮನೆ ಎಂಬ ಒಂಟಿ ಮನೆಯಲ್ಲಿ ಕೊಲೆಗೀಡಾದ ಇಂದಿರಾ ಮೊಗವೀರ ವಾಸಿಸುತ್ತಿದ್ದರು. ಈಕೆಗೆ ಐದು…

Read More

ಕೆಲವೊಮ್ಮೆ ವೃತ್ತಿ ಕಲಾವಿದರಿಗಿಂಥ ಪ್ರವೃತ್ತಿ ಕಲಾವಿದರೆ ಸುದ್ದಿಯಾಗುತ್ತಾರೆ. ಅವರಲ್ಲಿ ಪರಿಪೂರ್ಣವಾಗಿ ಅಭ್ಯಿವ್ಯಕ್ತಿ ಪಡಿಸಬೇಕೆಂಬ ಅಮಿತ ತುಡಿತವಿರುತ್ತದೆ. ಅದೇ ಅವರನ್ನು ಪ್ರಸಿದ್ಧಿಯ ಪಥದತ್ತ ಕರೆದೊಯ್ಯುತ್ತದೆ. ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಟಿ. ಶ್ರೀಯಾನ್ ಅವರನ್ನು ಇಂಥಹ ಪ್ರವೃತ್ತಿಯನ್ನು ತನ್ನದಾಗಿಸಿಕೊಂಡ ಅಪರೂಪದ ಹವ್ಯಾಸಿ ಕಲಾವಿದ ಎನ್ನಬಹುದು.ಸಮಾಜ ಸೇವೆ, ರಾಜಕಾರಣ, ಅಚ್ಚು ಮೆಚ್ಚಿನ ವೃತ್ತಿ ಜೊತೆಗೆ ಬಿಡದ ಪ್ರವೃತ್ತಿ. ಗಣಪತಿ ಶ್ರೀಯಾನ್ ಈಗ ರಾಜಕಾರಣಿ. ಹಿಂದೆ ಕೋಟೇಶ್ವರ ಮೊಗವೀರ ಸಂಘಟನೆಯಲ್ಲಿ ಸಕ್ರಿಯ ಮುಂದಾಳು. ಅಧ್ಯಕ್ಷ, ಕಾರ್ಯದರ್ಶಿ ಹೀಗೆ ಹತ್ತಾರು ಜವಾಬ್ದಾರಿಯತ ಹುದ್ದೆಗಳನ್ನು ನಿರ್ವಹಿಸಿದ ವ್ಯಕ್ತಿ. ತನ್ನ ಬಿಡುವಿಲ್ಲದ ಸಮಯದಲ್ಲಿಯೂ ಕೂಡಾ ಸಂಘ ಸಂಸ್ಥೆಗಳ ಕಲಾ ಪ್ರದರ್ಶನಗಳಲ್ಲಿ ಶ್ರೀಯಾನ್ ವೇಷ ಹಾಕುತ್ತಾರೆ. ಪ್ರಬುದ್ಧ ಯಕ್ಷಗಾನ ಕಲಾವಿದನಿಗೆ ಇರಬೇಕಾದ ಎಲ್ಲಾ ಗುಣಲಕ್ಷಣ, ನಿಷ್ಣಾತತೆ ಕೂಡಾ ಇವರಲ್ಲಿದೆ. ಗಣಪತಿ ಶ್ರೀಯಾನ್ ಪಾತ್ರ ಇದೆ ಎಂದರೆ ಪ್ರೇಕ್ಷಕರು ಅವರ ಪಾತ್ರದ ನಿರೀಕ್ಷೆಯಲ್ಲಿ ಇರುತ್ತಾರೆ. ಅಂತಹ ಒಂದು ಅಭಿಮಾನಿತ್ವವನ್ನು ಶ್ರೀಯಾನ್ ತೆಕ್ಕಟ್ಟೆ ಭಾಗದಲ್ಲಿ ಪಡೆದಿದ್ದರು. ಯಕ್ಷಗಾನದ ಪುಂಡು ವೇಷ, ರಾಜವೇಷ, ಎರಡನೇ…

Read More

ಹೊಸದಿಲ್ಲಿ: ನಿರ್ದಿಷ್ಟು ರಾಜ್ಯಕ್ಕೆ ಕರ್ತವ್ಯಕ್ಕಾಗಿ ನಿಯೋಜನೆಗೊಂಡಿರುವ ರಾಜ್ಯಪಾಲರು ಆ ರಾಜ್ಯಗಳಿಗಿಂತ ಹೊರಗೆ ಹೆಚ್ಚಿನ ಕಾಲ ಕಳೆಯುತ್ತಿರುವುದು ನಿಯಂತ್ರಿಸುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರಾಜ್ಯಪಾಲರಿಗೆ ಅಂಕುಶ ಹಾಕಲು ಮುಂದಾಗಿದೆ. ರಾಜ್ಯಪಾಲರು ವರ್ಷದ 292 ದಿನ ಆಯಾ ರಾಜ್ಯಗಳಲ್ಲಿ ಇರಬೇಕು ಮತ್ತು ರಾಷ್ಟ್ರಪತಿಯವರ ಅನುಮತಿ ಪಡೆಯದೆ ರಾಜ್ಯ ತೊರೆಯುವಂತಿಲ್ಲ ಎಂದು ಕೇಂದ್ರ ನಿರ್ಬಂಧ ವಿಧಿಸಿದೆ. ಆದಾಗ್ಯೂ ಕೊನೆ ಕ್ಷಣದಲ್ಲಿ ಪ್ರಯಾಣ ಮಾಡಬೇಕಾಗಿ ಬಂದಲ್ಲಿ ಸೂಕ್ತ ಕಾರಣವನ್ನು ವಿವರಿಸಬೇಕಿದೆ. ಅತಿ ತುರ್ತು ಕಾರಣದ ಹೊರತಾಗಿ ರಾಷ್ಟ್ರಪತಿ ಸಮ್ಮತಿಸದೆ ರಾಜ್ಯಪಾಲರು ರಾಜ್ಯಗಳ ಹೊರಗೆ ಇರುವಂತಿಲ್ಲ ಎಂದು ಗೃಹ ಸಚಿವಾಲಯ ಆದೇಶ ಹೊರಡಿಸಿದ್ದು, ಇದು 18ಹೊಸ ಅಂಶಗಳನ್ನು ಒಳಗೊಂಡ ನಿಯಮಾವಳಿಯನ್ನೂ ಒಳಗೊಂಡಿದೆ.

Read More

ಹೆಮ್ಮಾಡಿ ರಾ. ಹೆ. 66ರಿಂದ, ಗ್ರಾಮದ ಮಧ್ಯದಿಂದ ಪಶ್ಚಿಮಾಭಿಮುಖವಾಗಿರುವ ದೇಗುಲವು ಇತಿಹಾಸ ತಜ್ಞರ ಪ್ರಕಾರ 12-13ನೇ ಶತಮಾನಕ್ಕೆ ಸೇರಿದ್ದಾಗಿದೆ. ಬಸ್ರೂರಿನ ಬಸುವರಸನ ಸಾಮಂತನಾದ ಹೇಮಂತ ಎಂಬ ರಾಜನಿಂದ ಸ್ಥಾಪಿಸಲ್ಪಟ್ಟಿದೆ. ಹೇಮಂತ ರಾಜನಾಳಿದ ಊರಾದ ಈ ಗ್ರಾಮವು ಹೇಮಪುರ ಎಂದೂ ಹೆಸರಾಗಿದೆ. ಶ್ರೀಲಕ್ಷ್ಮೀನಾರಾಯಣ ದೇವಸ್ಥಾನವು ಹೆಮ್ಮಾಡಿ ಗ್ರಾಮದ ಹೆಗ್ಗುರುತಾಗಿದೆ. ದೇವಳದ ಚರಿತ್ರೆಯ ಮೂಲಗಳು ಗತಕಾಲಗರ್ಭದಲ್ಲಿ ಲೀನವಾಗಿದ್ದು, ಶ್ರೀಲಕ್ಷ್ಮೀನಾರಾಯಣ ಸ್ವಾಮಿಯ ಮೂಲವಿಗ್ರಹ ಪ್ರತಿಷ್ಠಾಪನೆಯ ಕಾಲ ಹಾಗೂ ಕೃತ್ಯದ ವಿವರಗಳನ್ನು ನಿಶ್ಚಿತವಾಗಿ ಹೇಳಲು ವಿಶ್ವಸನೀಯ ಚಾರಿತ್ರಿಕ ದಾಖಲೆಗಳಾಗಲೀ ಮತ್ತಿತರ ಮೂಲಾಧಾರಗಳು ಲಭ್ಯವಾಗಿಲ್ಲ. ಬಸ್ರೂರಿನ ಬಸುವರಸನ ಕಾಲದ ಸಾಮಂತನಾಗಿದ್ದ ಹೇಮಂತ ಎಂಬ ರಾಜನು ಸಂತಾನ ಪ್ರಾಪ್ತಿಗಾಗಿ ಈ ದೇವಳವನ್ನು ನಿರ್ಮಿಸಿದನು. ಇಲ್ಲಿನ ಶಿಲಾವಿಗ್ರಹವು ಊರಿನ ಪಶ್ಚಿಮದಲ್ಲಿ ಹರಿಯುವ ಚಕ್ರಾ ಮತ್ತು ಸೌಪರ್ಣಿಕಾ ನದಿ ಸಂಗಮ ಸ್ಥಳದ ಸಮೀಪದ ಮಡುವಿನಲ್ಲಿ ರಾಜನ ಭಟರಾದ ಮೊಗವೀರ ವೃತ್ತಿಯವರಿಗೆ ಬಲೆ ಬೀಸಿದಾಗ ದೊರಕಿದ್ದು, ರಾಜನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡಂತೆ ಮೂರ್ತಿಯನ್ನು ತರಿಸಿ ತನ್ನ ಅರಮನೆಯ ಅರಸುಕೆರೆಯ ಪಶ್ಚಿಮದಲ್ಲಿ ಸ್ಥಾನಿಕರಬೆಟ್ಟು ಎಂಬಲ್ಲಿ ಪಶ್ಚಿಮಾಭಿಮುಖವಾಗಿ ವಿಗ್ರಹವನ್ನು…

Read More

ಹೆಮ್ಮಾಡಿ: ಇಲ್ಲಿನಪುರಾತನ ಶ್ರೀಲಕ್ಷ್ಮೀನಾರಾಯಣ ದೇವಸ್ಥಾನವು ಉಡುಪಿ ಜಿಲ್ಲೆಯ ಧಾರ್ಮಿಕ, ಐತಿಹಾಸಿಕ ಮಹತ್ವದ ದೇವಾಲಯಗಳಲ್ಲೊಂದಾಗಿದೆ. ನಂಬಿದ ಭಕ್ತರ ರಕ್ಷಣೆ, ಬೆಳವಣಿಗೆ, ಸಂತಾನ ಪ್ರಾಪ್ತಿ ಮತ್ತು ಸಕಲ ಆಶೋತ್ತರಗಳನ್ನು ಈಡೇರಿಸುವ ಮಹಾನ್ ಚೈತ್ಯಮೂರ್ತಿ ಶ್ರೀಲಕ್ಷ್ಮೀನಾರಾಯಣ ದೇವರ ದಿವ್ಯ ಸನ್ನಿಧಿಯಲ್ಲಿ ಸಂಭ್ರಮದ ವಾರ್ಷಿಕ ಶ್ರೀಮನ್ಮಹಾರಥೋತ್ಸವ ಎಪ್ರಿಲ್ 13ರಂದು ಸಂಪನ್ನಗೊಳ್ಳುತ್ತಿದೆ. ಶ್ರೀಮನ್ಮಹಾರಥೋತ್ಸವದ ಅಂಗವಾಗಿ ಏಪ್ರಿಲ್ 8ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಎ. 12ರಂದು ಪ್ರಾಕಾರಶುದ್ಧಿ, ಕಲಶಾಭಿಷೇಕ, ಹೋಮ, ಮಹಾ ನೈವೇದ್ಯ, ಬ್ರಾಹ್ಮಣ ಸಂತರ್ಪಣೆ, ಸಂಜೆ ಹೆಮ್ಮಾಡಿ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ, ರಾತ್ರಿ ಹಿರೆರಂಗಪೂಜೆ. ಎ. 13ರಂದು ಪ್ರಾಕಾರಶುದ್ಧಿ, ಕಲಶಾಭಿಷೇಕ, ಹೋಮ, ರಥಶುದ್ಧ, ಮಹಾಮಂಗಳಾರತಿ, ರಥಬಲಿ, ಅಭಿಜಿನ್ ಸುಮುಹೂರ್ತದಲ್ಲಿ ರಥಾರೋಹಣ, ರಥಕಾಣಿಕೆ, ರಥಚಲನೆ ಹಾಗೂ ಮಹಾಅನ್ನಸಂತರ್ಪಣೆ. ಸಂಜೆ 5 ಗಂಟೆಗೆ ರಥ ಅವರೋಹಣ, ರಾತ್ರಿ ಭೂತಬಲಿ, ಶಯನೋತ್ಸವ. ಎ. 14ರಂದು ದೇವರನ್ನು ಏಳಿಸುವುದು, ಸಂಪೂರ್ಣ ಅಷ್ಟಾವಧಾನ, ಅಂಕುರ ಪ್ರಸಾದ ವಿತರಣೆ, ತುಲಾಭಾರ ಸೇವೆ, ರಾತ್ರಿ ಓಕುಳಿಸೇವೆ. ಎ. 15ರಂದು ಅವಭೃತ ಸ್ನಾನ, ಮೃಗಯಾನ, ಹೊಳೆಯಾನ, ಹೆಮ್ಮಾಡಿ ಗ್ರಾಮದಲ್ಲಿ ಕಟ್ಟೆ…

Read More