Author: Editor Desk

ಕುಂದಾಪುರದಲ್ಲಿ ಪತ್ರಿಕೆಗಳಿಗೆ ಬರವಿಲ್ಲ. ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ, ಮಾಸಿಕ, ತ್ರೈಮಾಸಿಕ, ಅರೆವಾರ್ಷಿಕ, ವಾರ್ಷಿಕ ಹೀಗೆ ಹತ್ತಾರು ಪತ್ರಿಕೆಗಳು ತಾಲೂಕಿನಿಂದ ಪ್ರಕಟಗೊಂಡು ಓದುಗನ ಹಸಿವನ್ನು ತಣಿಸಿ, ಜ್ಞಾನ ಭಂಡಾರವನ್ನು ಹೆಚ್ಷಿಸಿ ಸಾಮಾಜಿಕ ಕಾಳಜಿಯನ್ನು ಎತ್ತಿ ಹಿಡಿಯುತ್ತಿವೆ. ಪತ್ರಿಕೆಗಳು ಹತ್ತಾರಿರಬಹುದು, ಒಂದೊಂದು ಒಂದೊಂದು ವಿಚಾರಗಳನ್ನು ವೈಭವಿಕರಿಸಬಹುದು. ಆದರೆ ಎಲ್ಲಾ ಪತ್ರಿಕೆಗಳ ಹಿಂದಿನ ಉದ್ದೇಶ ಒಂದೇ. ಅದು ಸ್ವಸ್ಥ ಸಮಾಜದ ನಿರ್ಮಾಣ. ಆ ನಿಟ್ಟಿನಲ್ಲಿ ಸಂಪಾದಕನೆನಿಸಿಕೊಂಡವನ ಸಾಮಾಜಿಕ ಬದ್ಧತೆ ಪ್ರಮುಖವಾದುದು ‘ನಮ್ಮೂರ ಸಂಪಾದಕರ ಸಂದರ್ಶನ’ ಎಂಬ ಲೇಖನ ಮಾಲಿಕೆಯನ್ನು ಕುಂದಾಪ್ರ ಡಾಟ್ ಕಾಂ ಆರಂಭಿಸುತ್ತಿದ್ದು ತನ್ಮೂಲಕ ಸಮಾಜದ ಸ್ಥಿತಿ ಗತಿ, ಅಗತ್ಯತೆಗಳ ಕುರಿತಾಗಿ ಚರ್ಚಿಸುವ, ವಸ್ತುಸ್ಥಿತಿಯನ್ನು ಓದುಗರ ಮುಂದಿಡುವ ಸಣ್ಣ ಪ್ರಯತ್ನ ನಮ್ಮದು. ಮೊದಲ ಸಂದರ್ಶನದಲ್ಲಿ ಯುವ ಪತ್ರಕರ್ತ, ತಾಲೂಕಿನ ವಾರ ಪತ್ರಿಕೆಗಳಲ್ಲೊಂದಾದ ‘ಸುದ್ದಿಮನೆ’ಯ ಸಂಪಾದಕ ಸಂತೋಷ್ ಕೋಣಿ ಅವರನ್ನು ಕುಂದಾಪ್ರ ಡಾಟ್ ಕಾಂ ಸಂದರ್ಶಿಸಿತು. ಕುಂದಾಪ್ರ ಡಾಟ್ ಕಾಂ(*) ಕುಂದಾಪುರ ತಾಲೂಕನ್ನು ಸಂಪೂರ್ಣವಾಗಿ ಅವಲೋಕಿಸಿದಾಗ ಇಲ್ಲಿನ ಜನಜೀವನ ಹೇಗಿದೆ ಮತ್ತು ಯಾವ ದಿಕ್ಕಿನಲ್ಲಿ ಸಾಗಬೇಕಾಗಿದೆ…

Read More

ಕುಂದಾಪುರ: ಮಾಡಬೇಡ ಎಂದರೆ ಅದನ್ನೇ ಮಾಡುವುದು. ಹೇಳಿದ ಮಾತು ಕೇಳದೆ ಇರುವುದು ಇದೆಲ್ಲಾ ಹಠ ಹಿಡಿವ ಚಿಕ್ಕ ಮಕ್ಕಳ ಸ್ವಭಾವ. ಆ ನೆಲೆಯಲ್ಲಿ ಅವರನ್ನು ಕ್ಷಮಿಸಬಹುದು. ಆದರೆ ದೊಡ್ಡವರೇ ಹಾಗೇ ಮಾಡಿದರೆ? ವಿಷಯ ಏನು ಅಂದ್ರಾ? ಸಾರ್ವಜನಿಕರಿಗೆ ಸೂಚನೆ: ಈ ಸ್ಥಳದಲ್ಲಿ ಕಸ ಎಸೆಯುವುದನ್ನು ನಿಷೇಧಿಸಲಾಗಿದೆ. ಕಸ ಹಾಕಿದವರಿಗೆ ದ0ಡ ವಿಧಿಸಲಾಗುವುದು ಹಾಗ0ತ ಕು0ದಾಪುರ ಪುರಸಭೆ ಎಲ್ಲರಿಗೂ ಕಾಣುವಂತೆ ದೊಡ್ಡದಾಗಿ ಬ್ಯಾನರೊಂದನ್ನು ಅಲ್ಲಿನ ಮರದಲ್ಲಿ ಕಟ್ಟಿದೆ. ಅದರ ಕೆಳಗಡೆಯೇ ಕಸಕಡ್ಡಿಗಳು ಮಾತ್ರವಲ್ಲ ತ್ಯಾಜ್ಯಗಳ ರಾಶಿಯನ್ನೇ ದಿನೇ ದಿನೇ ತಂದು ಸುರಿದು ಆ ಪ್ರದೇಶವನ್ನು ಗಬ್ಬೆಬ್ಬಿಸುವಲ್ಲಿ ಒಂದಿಷ್ಟು ಜನರು ತಮ್ಮ ಕಾಣಿಕೆ ನೀಡುತ್ತಿದ್ದಾರೆ. ಈ ದೃಶ್ಯ ಕಂಡು ಬಂದಿದ್ದು ಕುಂದಾಪುರದ ಮುಖ್ಯರಸ್ತೆಯಿಂದ ವ್ಯಾಸರಾಯಮಠಕ್ಕೆ ಹೋಗುವ ರಸ್ತೆಯಲ್ಲಿನ ಮೊದಲ ಬಲಭಾಗದ ರಸ್ತೆಯಲ್ಲಿ. ಇದೀಗ ಒಂದೆರಡು ಮಳೆ ಬಿದ್ದ ಬಳಿಕವಂತೂ ರಸ್ತೆಯ ಬದಿಯಲ್ಲಿನ ಈ ತ್ಯಾಜ್ಯಗಳ ರಾಶಿ ಕೆಟ್ಟ ವಾಸನೆ ಬೀರಲಾರಂಭಿಸಿದೆ. ಕೆಲವೊಂದಷ್ಟು ಜನರಿಗೆ ಮೂತ್ರಿಸಲು ಅದೇ ಖಾಯಂ ಜಾಗವಂತೆ. ಹಾಗಾಗಿ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ.…

Read More

ಮೂಡುಬಿದಿರೆ: ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ನ ಮೂಲಕ ಕಲೆ, ಸಾಹಿತ್ಯ, ಕೃಷಿ, ಜನಪದ, ಯುವಜನತೆ ಇವೆಲ್ಲವನ್ನೂ ಒಗ್ಗೂಡಿಸಿ ನಾಲ್ಕು ದಿನಗಳ ಕಾಲ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಮತ್ತು ಯಶಸ್ವಿಯಾಗಿ ಸಂಫಟಿಸಿ ಸೈ ಎನಿಸಿಕೊಂಡಿದ್ದಾರೆ ಆಳ್ವಾಸ್ ಎಜುಕೇಶನ್ ಫೌಂಡೆಶನ್ ನ ಆಧ್ಯಕ್ಷರಾದ ಡಾ. ಎಂ ಮೋಹನ ಆಳ್ವ. ವಿಚಾರವಾದಿಗಳ ಟೀಕೆಗಳ ನಡುವೆಯೂ ತನ್ನ ಅವಿರತ ಶ್ರಮ ಮತ್ತು ಸಂಸ್ಕೃತಿ ಪ್ರೀತಿಯಿಂದ ಅಂದುಕೊಂಡದ್ದನ್ನು ಸಾಧಿಸಿ ತೋರಿಸಿದ್ದಾರೆ. ಸಮ್ಮೇಳನದ ಮರುದಿನ ಕುಂದಾಪ್ರ ಡಾಟ್ ಕಾಂ ಆಳ್ವರನ್ನು ಸಂದರ್ಶಿಸಲು ತೆರಳಿದಾಗ ಬೆಳಿಗ್ಗೆಯೇ ತಮ್ಮ ಕಛೇರಿಯಲ್ಲಿ ಬಂದು ಕುಳಿತಿದ್ದ ಅವರ ಮೊಗದಲ್ಲಿ ಸಾರ್ಥಕತೆಯ ಭಾವವಿತ್ತು. ಸಮ್ಮೇಳನಕ್ಕೂ ಮೊದಲು ಸಂದರ್ಶಿಸುವುದು ಸಾಮಾನ್ಯ. ಆದರೆ ಸಮ್ಮೇಳನ ನಡೆದ ಬಳಿಕ ಸಂಫಟನೊಬ್ಬನನ್ನು ಮಾತನಾಡಿಸಿ ಅವರಲ್ಲಿ ಮೂಡಿದ ಸಾರ್ಥಕತೆಯ ಭಾವವನ್ನು ಸಾಹಿತ್ಯ, ಕಲಾಭಿಮಾನಿಗಳಿಗೆ ಹಂಚುವುದು ತರವೆನ್ನಿಸಿ ಕುಂದಾಪ್ರ ಡಾಟ್ ಕಾಂ ನಡೆಸಿದ ಕಿರು ಸಂದರ್ಶನದ ಪೂರ್ಣಪಾಠ ಇಲ್ಲಿದೆ.’ ಕುಂದಾಪ್ರ ಡಾಟ್ ಕಾಂ:* ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ನ್ನು ಯಶಸ್ವಿಯಾಗಿ ಸಂಫಟಿಸಿದ್ದಿರಿ. ಈ ಕ್ಷಣದಲ್ಲಿ…

Read More

ಕುಂದಾಪುರ ತಾಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನ. ಅಧ್ಯಕ್ಷರಾಗಿ ದಲಿತ ಸಾಹಿತಿ ಕೆ. ಕೆ. ಕಾಳಾವರ್ಕರ್. ಕುಂದಾಪುರ: ಡಿ.8ರಂದು ನಡೆಯಲಿರುವ ಕುಂದಾಪುರ ತಾಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ದಲಿತ ಸಾಹಿತಿ ಹರಿದಾಸ ಕೆ. ಕೃಷ್ಣ ಕಾಳಾವರ್ಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ದಲಿತ ಸಾಹಿತಿಯೊಬ್ಬರನ್ನು ಆಯ್ಕೆ ಮಾಡಿರುವ ಕುಂದಾಪುರ ತಾಲೂಕು ಸಾಹಿತ್ಯ ಪರಿಷತ್ ಬದಲಾವಣೆಗೆ ತೆರೆದುಕೊಂಡಿರುವುದು ಮಾತ್ರ ಸಕಾರಾತ್ಮಕ ಬೆಳವಣಿಗೆಯೇ ಸರಿ. ಅರ್ಹ ವ್ಯಕ್ತಿಯನ್ನೇ ಆಯ್ಕೆ ಮಾಡುವುದರ ಮೂಲಕ ಸಾಹಿತ್ಯ, ಸಂಸ್ಕ್ರತಿಗಳು ಜಾತಿ ಮತಗಳನ್ನು ಮೀರಿ ನಿಲ್ಲುವಂತವುಗಳು ಎಂಬುದನ್ನು ತೋರಿಸಿಕೊಟ್ಟಿದೆ. ಹರಿದಾಸ ಕೆ. ಕೃಷ್ಣ ಕಾಳಾವರ್ಕರ್ ಕುಂದಾಪುರ ತಾಲೂಕಿನ ಕಾಳಾವರದ ಗರಗದ್ದೆಯ ಬಡ ದಲಿತ ಕುಟುಂಬದಲ್ಲಿ ಕಾಳಪ್ಪ ಮತ್ತು ಚಿಕ್ಕು ದಂಪತಿಗಳ ಮಗನಾಗಿ 1943ರ ಜುಲೈ 1 ರಂದು ಜನಿಸಿದ ಹರಿದಾಸ ಕೆ. ಕೃಷ್ಣ ಕಾಳಾವರ್ಕರ್ ಸಾಹಿತಿಯಾಗಿ, ಜನಪದ ಹಾಡುಗಾರರಾಗಿ, ನಾಟಕ ರಚನಾಕಾರರಾಗಿ, ರಂಗ- ಚಿತ್ರ ನಟರಾಗಿ, ಕಲಾ ನಿರ್ದೇಶಕರಾಗಿ, ಯಕ್ಷಗಾನ ಪ್ರಸಂಗಕರ್ತರಾಗಿ, ಸಮಾಜ ಸೇವಕರಾಗಿ…

Read More

ಕುಂದಾಪುರ: ನಿಮಗೆ ಧೂಳಿನಲ್ಲಿ ಸ್ನಾನ ಮಾಡಬೇಕೆಂಬ ಹರಕೆ ಅಥವಾ ಆಸೆಯೇನಾದರೂ ಇದ್ದರೆ ಅಥವಾ ಹಾಗೆಂದರೇನು ಎಂಬ ಬಗೆಗೆ ಕುತೂಹಲವಿದ್ದರೆ ನೀವು ತತ್ ಕ್ಷಣ ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆಯಿ0ದ ನೇರವಾಗಿ ಕುಂದಾಪುರಕ್ಕೆ ಸಾಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಒಮ್ಮೆ ಹಾಗೆ ಸುಮ್ಮನೆ ಬೈಕ್ ನಲ್ಲಿ ಒಂದು ರೈಡ್ ನಿಧಾನವಾಗಿ ಹೋಗಿಬನ್ನಿ. ಅದರ ಸಂಪೂರ್ಣ ಅರಿವು ನಿಮಗಾಗದಿದ್ದರೆ ಕೇಳಿ. ಇಲ್ಲಿನ ರಸ್ತೆಯಲ್ಲಿ ಪಯಣಿಸಿದ್ದೇ ಆದರೆ ನಿಮಗೆ ಒಂದು ಕೆ.ಜಿ ಧೂಳು ಫ್ರೀಯಾಗಿ ನಿಮ್ಮ ಬಟ್ಟೆ ದೇಹದೊಂದಿಗೆ ನಿಮ್ಮ ಮನೆಯನ್ನು ಸೇರುತ್ತದೆ. ಹೌದು. ರಾಷ್ಟ್ರೀಯ ಹೆದ್ದಾರಿ 66 ಎಂದು ಕರೆಯಲ್ಪಡುವ ಈ ಭಾಗದ ರಸ್ತೆಯನ್ನು ಕನಿಷ್ಠ ರಸ್ತೆ ಎಂದು ಕರೆಯಲೂ ಬೇಸರವಾಗುತ್ತದೆ. ಮುಳ್ಳಿಕಟ್ಟೆಯಿಂದ ಆರಾಟೆ, ಮುವತ್ತುಮುಡಿ ಸೇತುವೆ ಮುಗಿಯುವ ತನಕದ ರಸ್ತೆ ಅತ್ಯಂತ ಹದಗೆಟ್ಟು ಹೋಗಿದ್ದು ಕೆಲವು ಭಾಗಗಳಲ್ಲಂತೂ ಡಾಂಬರು ಸಂಪೂರ್ಣ ಕಿತ್ತುಹೋಗಿ ಕಲ್ಲು ಮಣ್ಣಿನ ಅಸ್ಥಿಗಳಷ್ಟೇ ಕಾಣಸಿಗುತ್ತಿವೆ. ರಸ್ತೆ ತುಂಬೆಲ್ಲಾ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿದ್ದು ಪ್ರತಿಯೊಬ್ಬ ವಾಹನಸವಾರರು ಜೀವವನ್ನು ಪಣಕ್ಕಿಟ್ಟೇ ವಾಹನ…

Read More

ಕುಂದಾಪುರ: ಎಲ್ಲಿಯ ಮಾಮರ ಎಲ್ಲಿಯ ಕೋಗಿಲೆ. ಎಲ್ಲಿಯ ಹೆಣ್ಣೋ, ಎಲ್ಲಿಯ ಗಂಡೋ ಎಂತಹ ವಿಚಿತ್ರ ಗೊತ್ತಾ? 8ವರ್ಷದ ಹಿಂದೆ ತಬ್ಬಲಿಯಾಗಿ ಕುಂದಾಪುರ ಸ್ಫೂರ್ತಿಧಾಮ ಸೇರಿಕೊಂಡು ಈವರೆಗೂ ಆಶ್ರಮದ ಮಡಿಲಲ್ಲಿ ಬೆಳೆದ ಹೆಣ್ಣು ಮಗುವೊಂದು ಈ ದಿನ ಗೌರಿ ಬಿದನೂರಿನ ವೆಂಕಟೇಶ ಕಾಮತ್ ಎಂಬ 29ರ ಹರೆಯದ ಗಂಡಿನ ಕೈಹಿಡಿದು ಹೊರಟು ನಿಂತ ದೃಶ್ಯ ನಿಜಕ್ಕೂ ಆಶ್ಚರ್ಯ. ಕುಂದಾಪುರ ಉಪನೋಂದಾವಣಾಧಿಕಾರಿಗಳ ಕಛೇರಿಯಲ್ಲಿ ಕಾನೂನು ರೀತಿ ಸತಿ-ಪತಿಗಳಾದ 20ರ ಹರೆಯದ ಪೂಜಾ 29ರ ಹರೆಯದ ವೆಂಕಟೇಶ ಕಾಮತ್ ಕಛೇರಿಯಿಂದ ಹೊರಬಂದು ನಿಂತಾಗ ಕಾಣುಗರ ಕಣ್ಣಿಗೆ ಹೀರೋಗಳಾದರು. ಹೌದು ಅನಾಥೆಯೆಂದು ಹಣೆಪಟ್ಟಿ ಕಟ್ಟಿಕೊಂಡು ಉಡುಪಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ಸ್ಫೂರ್ತಿಧಾಮದ ಮಕ್ಕಳ ಆಶ್ರಮಕ್ಕೆ ದಾಖಲಾದ ಪೂಜಾ ಎಂಟು ವರ್ಷ ಕಳೆಯುವುದರ ಒಳಗೆ ಏರಿದ ಎತ್ತರವೆಷ್ಟು ಗೊತ್ತ? 5ನೇ ತರಗತಿಯಿಂದ 7ನೇ ತರಗತಿ, 7ನೇ ತರಗತಿಯಿಂದ ನೇರ 10ನೇ ತರಗತಿ ಈಗ ದ್ವೀತಿಯ ಪಿ.ಯು.ಸಿ. ವಿದ್ಯಾರ್ಥಿನಿ. ಆಗಲೇ ಕಂಕಣ ಭಾಗ್ಯ ಕೂಡಿ ಬಂತು. ಜೀವನದಲ್ಲಿ ಆದರ್ಶ…

Read More

ಇದ್ದಕ್ಕಿದ್ದಂತೆ ಹುಡುಗಿಯೊಬ್ಬಳು ಗತ ಜನ್ಮಕ್ಕೆ ಹೋಗುತ್ತಾಳೆ, ಕಬ್ಬಿಣದ ಮೊಳೆಯ ಮಂಚದ ಮೇಲೆ ಮಲಗುತ್ತಾರೆ. ತಲೆಯ ಮೇಲೆ ಒಂದಲ್ಲ ನಾಲ್ಕಾರು ತೆಂಗಿನ ಕಾಯಿಗಳನ್ನು ಒಂದರ ಹಿಂದೊಂದರಂತೆ ಒಡೆಯಲಾಗುತ್ತದೆ, ತೆಂಗಿನ ಕಾಯಿ ಜುಟ್ಟಿಗೆ ನೀರು ಬಿದ್ದಾಕ್ಷಣ ಬೆಂಕಿ ಹೊರ ಹೊಮ್ಮುತ್ತೆ, ಕುದಿಯುವ ಎಣ್ಣೆಗೆ ಕೈ ಹಾಕಿದರೆ ಕೈ ಸುಡಲ್ಲ, ತಲೆಗೆ ಹಿಗ್ಗಾಮುಗ್ಗಾ ಚಾಕು ಹಾಕಿದರೂ ವ್ಯಕ್ತಿಗೆ ಏನೂ ಆಗಲ್ಲ…. ನಿಜ ಇದೆಲ್ಲಾ ಕುಂದಾಪುರದಲ್ಲಿ ನಡೆದೇ ಹೋಯ್ತು. ಸ್ಥಳೀಯರೆ ಇಂಥಹ ಪವಾಡಗಳಿಗೆ ವಸ್ತುವಾದರು. ಸ್ವತಃ ಅನುಭವಿಸಿದರು. ಹಣ ಹಾಕಿದರೆ ಹೂ ಬರುವುದು, ತಲೆ ಮೇಲೆ ಕರ್ಪೂರ ಉರಿವುದು ಹೀಗೆ ಹತ್ತಾರು ಪವಾಡಗಳು ಕುಂದಾಪುರದ ಜನರ ಮುಂದೆಯೇ ಸಾಕ್ಷಾತ್ಕಾರವಾಯಿತು. ಮಾಟ, ಮಂತ್ರ ,ವಾಮಾಚಾರ ಅಂತ ಇರುವ ಜನರಿಗೆ ವೈಚಾರಿಕತೆ ಬಿತ್ತುವಲ್ಲಿ ಇದನ್ನು ಬಿತ್ತರ ಪಡಿಸಿದ್ದು ಪವಾಡ ಬಯಲು ಖ್ಯಾತಿಯ ಹುಲಿಕಲ್ ನಟರಾಜ್. ಸಮುದಾಯ ಕುಂದಾಪುರ ಇತ್ತಿಚೆಗೆ ಇಲ್ಲಿನ ಗಾಂಧಿ ಪಾರ್ಕ್‍ನ ಸಮುದಾಯ ಭವನದಲ್ಲಿ ಡಾ.ನರೇಂದ್ರ ದಾಬೊಲ್ಕರ್‍ಗೆ ಶೃದ್ಧಾಂಜಲಿಯಾಗಿ ಹಮ್ಮಿಕೊಂಡ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಹುಲಿಕಲ್ ನಟರಾಜ್…

Read More

ಕುಂದಾಪುರ: ಇಲ್ಲಿನ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸೆ.16 ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಸಿಪಿಎಂನ ಕಲಾವತಿ ಮತ್ತು ಉಪಾಧ್ಯಕ್ಷರಾಗಿ ಬಿಜೆಪಿಯ ನಾಗರಾಜ್‌ ಕಾಮಧೇನು ಆಯ್ಕೆಯಾಗಿದ್ದಾರೆ. ಪುರಸಭೆಯ 23 ಸ್ಥಾನಗಳ ಪೈಕಿ 12 ಸ್ಥಾನಗಳೊಂದಿಗೆ ಬಿಜೆಪಿ ಬಹುಮತ ಹೊಂದಿದ್ದು, ಕಾಂಗ್ರೆಸ್‌ ಹಾಗೂ ಸಿಪಿಎಂ ಮೈತ್ರಿಕೂಟ 11 ಸ್ಥಾನಗಳನ್ನು ಹೊಂದಿತ್ತು. ಸರಕಾರದ ನಿಗದಿಯಾದ ಮೀಸಲಾತಿಯಂತೆ ಅಧ್ಯಕ್ಷ ಸ್ಥಾನಕ್ಕೆ ಪರ್ಯಾಯ ಆಯ್ಕೆ ಇಲ್ಲದೇ ಇದ್ದುದರಿಂದ ಸಿಪಿಎಂನ ಅಭ್ಯರ್ಥಿ ಕಲಾವತಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಪದನಿಮಿತ್ತ ಸದಸ್ಯರಾಗಿರುವ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹಾಗೂ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ ಚಲಾಯಿಸಿದರು. ಹಿಂದುಳಿದ ವರ್ಗ ಎ. ಗೆ ಮೀಸಲಾಗಿದ್ದರಿಂದ ವಿಧಾನಸಭಾ ಚುನಾವಣೆಯಲ್ಲಾದ ಬಿಜೆಪಿಯಲ್ಲಿನ ಗೊಂದಲಗಳು ಮುಂದುವರಿದ್ದಲ್ಲಿ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸಿಗರ ಪಾಲಾಗಬಹುದು ಎನ್ನುವ ಕುತೂಹಲಗಳಿತ್ತು. ಆದರೆ ಸಂಸದ ಜಯಪ್ರಕಾಶ್‌ ಹೆಗ್ಡೆ ಕಾಂಗ್ರೆಸ್‌ ಅಭ್ಯರ್ಥಿ ಪರ ಮತ ಚಲಾಯಿಸಿದರೇ, ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಅಭ್ಯರ್ಥಿ ಪರ ಮತ…

Read More

 ಕುಂದಾಪುರ: ಪ್ರಸಿದ್ದ ಸಾಹಸಿಗ ವಾಲ್ ಕ್ಲೈಂಬಿಂಗ್ ಚತುರ ಚಿತ್ರದುರ್ಗದ ಜ್ಯೋತಿರಾಜ್ ಯಾನೆ ಕೋತಿರಾಮ ನಗರದ ಶಾಸ್ತ್ರಿ ವೃತ್ತದ ಸಮೀಪದಲ್ಲಿರುವ 6 ಮಹಡಿಯ ಕಟ್ಟಡ ಜೆ.ಕೆ. ಟವರ್ಸ್‌ನ್ನು ಕೇವಲ 15 ನಿಮಿಷಗಳಲ್ಲೇ ಏರಿ ನೆರೆದಿದ್ದ ಸಹಸ್ರ ಸಂಖ್ಯೆಯ ನಾಗರಿಕರಲ್ಲಿ ಬೆರಗು ಮೂಡಿಸಿದರು. ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಶಿಯೇಶನ್ ನ ಪದಗ್ರಹಣ ಸಮಾರಂಭಕ್ಕೆ ಕುಂದಾಪುರಕ್ಕೆ ಆಗಮಿಸಿದ ಅವರು ಸಂಘದ ಆಶ್ರಯದಲ್ಲಿ ಸಾಹಸ ಕಾರ್ಯ ನೆಡೆಸಿದರು. ಸಂಜೆ 4.15ರ ವೇಳೆಗೆ ಕೈಗೆ ಒಂದಿಷ್ಟು ಸುಣ್ಣ ಹಚ್ಚಿಕೊಂಡು ನೆಲ ಅಂತಸ್ತಿನಿಂದ ಏರಿದ ಜ್ಯೋತಿರಾಜ್ ನೋಡ ನೋಡುತ್ತಿದ್ದಂತೆ 6 ಮಹಡಿಗಳ ಜೆ.ಕೆ. ಟವರ್ಸ್‌ ಏರಿ 4.30ಕ್ಕೆ ಕೆಳಕ್ಕಿಳಿದರು. ಮಂಗ ಮರ ಏರಿದಷ್ಟೇ ಸಲೀಸಾಗಿ ಕಟ್ಟಡ ಏರಿದ ಕೋತಿರಾಮ ಅವರು ಅದೇ ವೇಗದಲ್ಲಿ ಕೆಳಗಿಳಿದು ಅಚ್ಚರಿ ಮೂಡಿಸಿದರು. ಅವರ ಈ ಸಾಹಸ ಕಾರ್ಯ ನೋಡಲೆಂದು ಶಾಸ್ತ್ರೀ ವೃತ್ತದ ಸುತ್ತಮುತ್ತ ಅಪಾರ ಜನಸಂದಣಿ ನೆರೆದಿತ್ತು. ಕಟ್ಟಡದಿಂದ ಕೆಳಗಿಳಿಯುತ್ತಿದ್ದಂತೆ ಜನರು ಅಭಿನಂದನೆಯ ಮಹಾಪೂರವನ್ನೇ ಹರಿಸಿದರು. ಜ್ಯೋತಿರಾಜ್ ಅವರ ಸಾಹಸ ಕಾರ್ಯ ವೀಕ್ಷಿಸಲೆಂದು ಬಂದ…

Read More

ಬಾಲ ಭಿಕ್ಷಾಟನೆ ಸಮಾಜಕ್ಕೆ ಅಂಟಿದ ಶಾಪ. ಹೆತ್ತವರ ಅಸಡ್ಡೆಯಿಂದಾಗಿ ಮಕ್ಕಳು ಭಿಕ್ಷಾಟನೆಯನ್ನು ಮಾಡುವಂತಾಗಿದೆ. ಭಿಕ್ಷಾಟನೆ ನಿರತ ಸಣ್ಣ ಮಕ್ಕಳು ಹಾಗೂ ಅವರೊಂದಿಗೆ ಇದ್ದ ಮಹಿಳಾ ಭಿಕ್ಷುಕರ ರಕ್ಷಣೆ ಮತ್ತು ಪುನರ್ವಸತಿ ಅಂದೋಲನದ ಅಂಗವಾಗಿ ಕುಂದಾಪುರ ನಗರದಲ್ಲಿ ಕಾರ್ಯಚರಣೆ ನಡೆಯುತು. ದಿನ ನಿತ್ಯ ಬೆಳಗಾಯಿತೆಂದರೆ ನಗರದ ಪ್ರಮುಖ ಬೀದಿಗಳಲ್ಲಿ ಭಿಕ್ಷಾಟನೆ ನಿರತ ಮಕ್ಕಳು ಹಾಗೂ ಮಹಿಳೆಯರು ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದರು. ಹೆಣ್ಣು ಮಕ್ಕಳೇ ಬಹುತ್ತೇಕ ಸಂಖ್ಯೆಯಲ್ಲಿದ್ದು ಬಸ್ಸಿಗಾಗಿ ಕಾಯುವ ಪ್ರಯಾಣಿಕರ ಹಿಂದೆ ಬಿದ್ದು ಭಿಕ್ಷೆಗಾಗಿ ಪೀಡಿಸುತ್ತಿದ್ದರು. ಹಲವಾರು ಬಾರಿ ವಿವಿಧ ಇಲಾಖೆಗಳು ಇದನ್ನು ತಡೆಯುವ ಮತ್ತು ಜನರಿಗೆ ಭಿಕ್ಷೆ ನೀಡುವುದನ್ನು ತಡೆಯಲು ನಡೆಸಿದ ಪ್ರಯತ್ನಗಳು ಫಲಕಾರಿಯಾಗಲಿಲ್ಲ. ಇದನ್ನು ಮನಗಂಡ ಕೋಟೇಶ್ವರ ಸ್ಫೂರ್ತಿ ಗ್ರಾಮೀಣಾಭಿವೃದ್ದಿ ಮತ್ತು ತರಬೇತಿ ಸಂಸ್ಥೆ ಶಿಕ್ಷಣ ಸಂಪನ್ಮೂಲ ಕೇಂದ್ರ ಕುಂದಾಪುರ, ರೋಟರಿ ಕ್ಲಬ್ ತೆಕ್ಕಟ್ಟೆ, ಮಿಲಾಗ್ರಸ್ ಕಾಲೇಜು ಸಮಾಜ ಕಾರ್ಯ ವಿಭಾಗ ಕಲ್ಯಾಣಪುರ, ಮಣಿಪಾಲ ಯುನಿವರ್ಸಿಟಿ ಸಮಾಜ ಕಾರ್ಯ ವಿಭಾಗ, ಡಾ|| ಎ.ವಿ.ಬಾಳಿಗ ಕಾಲೇಜ್ ಆಫ್ ಸೋಶಿಯಲ್ ಸೈಸ್ಸ್ ಮತ್ತು…

Read More