Author: Editor Desk

ಕುಂದಾಪುರ: ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ. ಅಪಾರ ಮಳೆಯಿಂದಾಗಿ ಕುಂದಾಪುರ ತಾಲೂಕಿನ ಹಲವೆಡೆ ನದಿತೀರ ಹಾಗೂ ತಗ್ಗುಪ್ರದೇಶಗಳಲ್ಲಿ ಮೂರಕ್ಕಿಂತಲೂ ಹೆಚ್ಚು ಬಾರಿ ನೆರೆಹಾವಳಿ ಕಾಣಿಸಿಕೊಂಡಿದ್ದರಿಂದ ಈ ಪ್ರದೇಶಗಳಲ್ಲಿನ ಅಪಾರ ಭತ್ತಕೃಷಿ ನಲುಗಿಹೋಗಿದ್ದು, ರೈತರು ನಷ್ಟ ಭೀತಿಯಲ್ಲಿ ಸಿಲುಕಿದ್ದಾರೆ. ತಾಲೂಕಿನ ಪಂಚನದಿಗಳ ತೀರಪ್ರದೇಶಗಳಲ್ಲಿನ ಸಾವಿರಾರು ಎಕರೆ ಪ್ರದೇಶಗಳಲ್ಲಿ ಭತ್ತ ಕೃಷಿ ಮಾಡಲಾಗುತ್ತಿದ್ದು, ನಿರಂತರವಾಗಿ ಬಾಧಿಸಿದ ನೆರೆಹಾವಳಿಯಿಂದ ಇಲ್ಲಿನ ಭತ್ತ ಬೆಳೆ ನಾಮಾವಶೇಷಗೊಂಡಿದೆ. ಸೌಪರ್ಣಿಕಾ ನದಿತೀರದ ಅರೆಹೊಳೆ, ಸಾಲ್ಬುಡ, ಬಾಂಗಿನ, ಪಡುಕೋಣೆ, ಹಡವು, ಬಡಾಕೆರೆ-ಕಳಿನಬಾಗಿಲು, ನಾಡಾ-ಚಿಕ್ಕಳ್ಳಿ, ಕೋಣ್ಕಿ-ಕೂಡ್ಗಿತ್ಲು, ಸೇನಾಪುರ-ತೆಂಗಿನಗುಂಡಿ, ಪರಮಕಳಿ, ಹೊಸಾಡು-ಅರಾಟೆ, ಹೊಕ್ಕೊಳಿ, ಚಕ್ರಾನದಿ ತೀರದ ಹೆಮ್ಮಾಡಿ ಗ್ರಾಮದ ಕಟ್‍ಬೇಲ್ತೂರು, ಸುಳ್ಸೆ, ಮುವತ್ತುಮುಡಿ, ಹಕ್ಲಾಡಿ ಗ್ರಾಮದ ತೊಪ್ಲು, ಬಟ್ಟೆಕುದ್ರು, ಯಳೂರು, ರಾಜಾಡಿ ನದಿತೀರದ ಹರೆಗೋಡು, ಜಾಲಾಡಿ, ಹೊಸ್ಕಳಿ ಮೊದಲಾದೆಡೆ ಭತ್ತದ ಸಸಿಗಳು ನೆರೆನೀರಿನಲ್ಲಿ ಮುಳುಗಿ ಕೊಳೆತಿದ್ದು, ಕೃಷಿಕರು ಪುನಃ ಭತ್ತನಾಟಿ ಮಾಡುವಂತಾಗಿದೆ. ಕೂಲಿಯಾಳು ಸಮಸ್ಯೆ, ಅಧಿಕ ಖರ್ಚು, ಸಕಾಲದಲ್ಲಿ ಕೃಷಿ ಕಾಯಕ ನಡೆಸುವ ಅನಿವಾರ್ಯತೆ ಮತ್ತಿತರ ಕಾರಣಗಳಿಂದ ರೈತರು…

Read More

ಮೂಡುಬಿದಿರೆ: ಪತ್ರಿಕಾ ಅಕಾಡೆಮಿ ಪ್ರಶಸ್ತಿ ವಿಜೇತ ಪತ್ರಕರ್ತ ರಾಜೇಶ ಶಿಬಾಜೆ ಅವರ ಹೆಸರಲ್ಲಿ ನೀಡಲಾಗುವ ಪ್ರಶಸ್ತಿಯನ್ನು ವಿಜಯ ಕರ್ನಾಟಕ ಪತ್ರಿಕೆಯ ಕುಂದಾಪುರ ವರದಿಗಾರ ಜಾನ್ ಡಿಸೋಜಾ ಮತ್ತು ಜೈಕನ್ನಡಮ್ಮ ಪತ್ರಿಕೆಯಲ್ಲಿ ನಿರಂತರ ಕಲಾತ್ಮಕ ಛಾಯಾಚಿತ್ರಗಳನ್ನು ಪ್ರಕಟಿಸುತ್ತಿರುವ ಬೆಳ್ತಂಗಡಿಯ ಪಾಲಾಕ್ಷ ಸುವರ್ಣ ಅವರಿಗೆ ನೀಡಲಾಗುತ್ತಿದೆ ಎಂದು ಸಂಘಟಕ ಶೇಖರ ಅಜೆಕಾರು ತಿಳಿಸಿದ್ದಾರೆ.ಬೆಂಗಳೂರಿನ ಪತ್ರಕರ್ತರ ವೇದಿಕೆ ನೀಡುತ್ತಿರುವ ಈ ಪ್ರಶಸ್ತಿ ಗ್ರಾಮೀಣ ಪತ್ರಿಕೋದ್ಯಮ ಮತ್ತು ಪತ್ರಿಕೋದ್ಯಮ ಪ್ರಯೋಗಗಳಿಗಾಗಿ ನೀಡಲಾಗುತ್ತಿದ್ದು ಕನ್ನಡಪ್ರಭದ ಕುಂಟಾಡಿ ದಯಾನಂದ ಪೈ, ಪ್ರಜಾವಾಣಿಯ ಸುಕುಮಾರ ಮುನಿಯಾಲು, ಪ್ರಕಾಶಕ ಡಾಟ್ ಕಾಮ್‌ನ ಸಂಪಾದಕ ಪ್ರಕಾಶ ಶೆಟ್ಟಿ ಉಳೆಪಾಡಿ, ವಿಜಯಕರ್ನಾಟಕದ ವಿಲಾಸ್ ಕುಮಾರ್ ನಿಟ್ಟೆ ಮತ್ತು ಕುಂದಪ್ರಭದ ಸಂಪಾದಕ ಯು ಎಸ್ ಶೆಣೈ ಸಹಿತ ಐವರಿಗೆ ನೀಡಲಾಗಿದೆ. ಜಾನ್ ಡಿಸೋಜಾ ಕುಂದಾಪುರ ಕರಾವಳಿಯ ಗ್ರಾಮೀಣ ವರದಿಗಾರಿಯಲ್ಲಿ ಅಗ್ರಪಂಕ್ತಿಯಲ್ಲಿರುವ ಜಾನ್ ಡಿಸೋಜಾ ಕುಂದಾಪುರ ತಾಲೂಕಿನ ಮೂಲೆ ಮೂಲೆಗಳ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ, ಪ್ರತಿಭೆಗಳನ್ನು ಪರಿಚಯ ಮಾಡಿದ್ದಾರೆ, ಕಾಲಿಗೆ ಚಕ್ರಕಟ್ಟಿಕೊಂಡು ತಿರುಗಾಟ ನಡೆಸಿದ್ದಾರೆ. ಬಿಎಸ್ಸಿ ಪದವಿಧರರಾದ ಅವರು…

Read More

ಈ ಸಾಧಕನಿಗೆ ಸವಾಲುಗಳೆಂದರೆ ಪ್ರೀತಿ. ಸವಾಲುಗಳನ್ನು ಎದುರಿಸುವುದೆಂದರೆ ಮೀನಿನಂತೆ ಮುನ್ನುಗ್ಗಿ ಬರುವ ಅಲೆಗಳ ವಿರುದ್ಧ ಈಜಿದಂತೆ. ಕೊನೆಯ ಕ್ಷಣದಲ್ಲಿ ಗಿನ್ನಿಸ್ ದಾಖಲೆ ಕೈತಪ್ಪಿದ್ದರಿಂದ ಒಂದಿಷ್ಟು ದಿನ ಹತಾಶೆಗೆ ಒಳಗಾಗಿ ಮತ್ತೆ ಮೈಕೊಡವಿ ನಿಂತರು. ಈಗ ಗಿನ್ನಿಸ್ ಸೇರುವ ಪ್ರಯತ್ನಕ್ಕೆ ಸಿದ್ಧರಾಗುತ್ತಿದ್ದಾರೆ. ಈಜಿ ವಿಶ್ವದ ಪುಟ ಸೇರುವೆ ಎನ್ನುವ ಪ್ರಬಲ ಆತ್ಮ ದಾಢ್ರ್ಯತೆಯೊಂದಿಗೆ ಮತ್ತೊಮ್ಮೆ ಶರಧಿಗೆ ಸವಾಲೆಸೆಯಲು ಸಿದ್ಧರಾಗಿದ್ದಾರೆ ಲಿಮ್ಕಾ ದಾಖಲೆಯ ಈಜುಗಾರ ಗೋಪಾಲ್ ಖಾರ್ವಿ. ಅಂದು ಜನವರಿ 8. 2012. ಕೋಡಿ ಕನ್ಯಾನದ ಮೀನುಗಾರ ಕುಟುಂಬದ ಸಾಹಸಿ ಪ್ರತಿಭೆ ಗಿನ್ನಿಸ್ ಪುಟ ಸೇರಲು ಹೊರಟ ಕ್ಷಣ. ಇನ್ನೆನೂ ಗೋಪಾಲ ಖಾರ್ವಿ ಗಿನ್ನಿಸ್ ಪುಟ ಸೇರಿ ಬಿಟ್ಟರೂ ಎನ್ನುವಷ್ಟರಲ್ಲಿ ಸಣ್ಣ ತಾಂತ್ರಿಕ ಅಡಚಣೆಯಿಂದ ಗಿನ್ನಿಸ್ ರೆಕಾರ್ಡ್ ಗೋಪಾಲ ಖಾರ್ವಿಯವರ ಕೈ ಜಾರಿ ಹೋಯಿತು. ಬಹಳಷ್ಟು ಶ್ರಮ, ಆರ್ಥಿಕ ಕ್ರೋಡೀಕರಣ, ಬೆಟ್ಟದಷ್ಟು ಅಭಿಮಾನಿಗಳ ನಂಬಿಕೆ ಎಲ್ಲವೂ ಧರಾಶಾಹಿಯಾಗಿ ಬಿಟ್ಟಿತ್ತು. ಸಾಧಕನಿಗೆ ಸವಾಲುಗಳೆಂದರೆ ಪ್ರೀತಿ. ಈ ಈಜು ಮೀನಿಗೂ ಅಷ್ಟೇ. ಸವಾಲೆಂದರೆ ಮುನ್ನುಗ್ಗಿ ಬರುವ ಅಲೆಯ…

Read More

ಖಾಸಗಿ ಶಾಲೆಗಳ ಪೈಪೋಟಿ, ಸರಕಾರಿ ಶಾಲೆಗಳ ಬಗೆಗಿನ ಪಾಲಕರ ನಿರಾಸಕ್ತಿ ಇವೆರಡರ ನಡುವೆಯೂ ಕುಂದಾಪುರ ತಾಲೂಕಿನ ಸರಕಾರಿ ಶಾಲೆಯೊಂದು ಗುಣಾತ್ಮಕ ಶಿಕ್ಷಣದ ಮೂಲಕ ಯಾವ ಖಾಸಗಿ ಶಾಲೆಗೂ ಕಮ್ಮಿಯಿಲ್ಲ ಎಂಬಂತೆ ಬೆಳೆದು ನಿಂತಿರುವುದು ಸೊಜಿಗವೇ ಸರಿ. ನಿಜಕ್ಕೂ ಇದು ಉಳಿದೆಲ್ಲಾ ಸರಕಾರಿ ಶಾಲೆಗಳಿಗೂ ಮಾದರಿ. ಆ ಶಾಲೆಯ ಒಳಹೊಕ್ಕರೆ ಇದು ಸರ್ಕಾರಿ ಶಾಲೆಯೋ ಎಂಬ ಸಂಶಯ ಒಮ್ಮೆ ಬಾರದಿರದು. ಗುಣಮಟ್ಟದ-ಪರಿಣಾಮಕಾರಿ ಬೋಧನೆಗೆ ವಿಭಿನ್ನ ಪರಿಕಲ್ಪನೆಗಳು, ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರದ ಜೊತೆ ಸಾರ್ವಜನಿಕ ಸಹಭಾಗಿತ್ವ. ಒಟ್ಟಿನಲ್ಲಿ ಒಂದು ಖಾಸಗಿ ಶಾಲೆಗಿಂತ ಮೇಲ್ಮಟ್ಟದಲ್ಲಿದೆ ಈ ಶಾಲೆಯ ವ್ಯವಸ್ಥೆ. ಹೌದು. ಇದು ಕುಂದಾಪುರ ತಾಲೂಕು ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಸ್ಕುತ್ತೂರು ಸ.ಹಿ.ಪ್ರಾ ಶಾಲೆ. ಸರ್ಕಾರಿ ಶಾಲೆಗಳನ್ನು ಹೀಗೂ ಅಭಿವೃದ್ಧಿ ಮಾಡಬಹುದು ಎನ್ನುವುದನ್ನು ಇಲ್ಲಿನ ಬೋಧಕರು ಹಾಗೂ ಪೋಷಕರು, ವಿದ್ಯಾಭಿಮಾನಿಗಳು ತೋರಿಸಿಕೊಟ್ಟಿದ್ದಾರೆ. ಕುಂದಾಪುರ ತಾಲೂಕಿನಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಈ ಶಾಲೆ ಉಡುಪಿ ಜಿಲ್ಲೆಯಲ್ಲಿಯೂ ಕೂಡಾ ಗಮನ ಸಳೆದಿದೆ. ತೀರಾ ಗ್ರಾಮೀಣ ಪ್ರದೇಶ ಹೆಸ್ಕುತ್ತೂರಲ್ಲಿ ಈ…

Read More

ಸಿನೆಮಾ ಕ್ಷೇತ್ರದಲ್ಲಿ ಏನಾದರೂ ಹೊಸತನವನ್ನು ಮಾಡುತ್ತಲೇ ಹೆಸರುವಾಸಿಯಾಗಿರುವ ಕರಾವಳಿ ಪ್ರದೇಶದ, ಮುಂಗಾರು ಮಳೆ ಖ್ಯಾತಿಯ ಯೋಗರಾಜ್ ಭಟ್ರ ಹೊಸ ಸಿನೆಮಾ `ಡ್ರಾಮಾ’ ಇನ್ನೇನು ಸೆಟ್ ಏರುವ ಹಂತದಲ್ಲಿದ್ದು, ಅಂತಿಮ ಹಂತದ ಚಿತ್ರೀಕರಣವಿದೀಗ ಕುಂದಾಪುರದ ಕಡಲ ತೀರದ ಹಲವು ಭಾಗಗಳಲ್ಲಿ ನಡೆಯುತ್ತಿದೆ.ಚಿತ್ರದ ಶೀಷರ್ಿಕೆ ಗೀತೆಯ ಚಿತ್ರೀಕರಣ ಬೀಜಾಡಿಯ ಸನ್ ಪೀಸ್ಟ್ ರೆಸಾರ್ಟ್  ಸಮೀಪದ ಕಡಲ ಕಿನಾರೆಯಲ್ಲಿ ನಡೆಯುತ್ತಿದೆ.ಇದಕ್ಕಾಗಿ ಸಂಪೂರ್ಣ ಚಿತ್ರತಂಡ ವಾರಗಳ ಕಾಲ ಇಲ್ಲಿ ಬೀಡುಬಿಟ್ಟಿದ್ದು ಚಿತ್ರದ ಕ್ಲೈಮ್ಯಾಕ್ಸ್ ಹಂತದ ಸಾಹಸ ದ್ರಶ್ಯಗಳನ್ನು ಈ ಭಾಗದಲ್ಲಿ ಚಿತ್ರೀಕರಿಸಲಿದೆ.ಕುಂದಾಪುರ ,ಮರವಂತೆ ಪ್ರದೇಶಗಳಲ್ಲೂ ಸಿನೇಮಾದ ಚಿತ್ರೀಕರಣ ನಡೆಯಲಿದೆ. * ಚಿತ್ರ: `ಡ್ರಾಮಾ’ * ಚಿತ್ರದ ನಾಯಕ ಯಶ್. * ಇನ್ನೋರ್ವ ನಾಯಕ ನೀನಾಸಂ ಸತೀಶ್ * ನಾಯಕಿ ರಾಧಿಕಾ ಪಂಡಿತ್ * ಇನ್ನೋರ್ವ ನಾಯಕಿ ಸಿಂಧು ಲೋಕನಾಥ್ * ನಿರ್ದೇಶಕ ಯೋಗರಾಜ್ ಭಟ್ಟ್ ಹಾಗೂ ಚಿನ್ನು ಪ್ರಕಾಶ್ ಮಾಸ್ಟರ್  * ಹಾಡಿನ ಚಿತ್ರೀಕರಣ ನಡೆಯುತ್ತಿರುವುದು ಚಿತ್ರೀಕರಣಕ್ಕೆ ಪೂರ್ವಭಾವಿಯಾಗಿ ನಿರ್ದೇಶಕ ಯೋಗರಾಜ್ ಭಟ್ಟರು ಕಳೆದ ಕೆಲ ದಿನಗಳ ಹಿಂದೆ ಕರಾವಳಿ ಭಾಗಕ್ಕೆ ಆಗಮಿಸಿ ಸ್ಥಳೀಯ ಸುಂದರ ಪ್ರದೇಶಗಳಿಗೆ ಭೇಟಿ…

Read More

ವರದಿ : ಯೋಗೀಶ್ ಕುಂಭಾಸಿ ಕುಂದಾಪುರ: ಕಳೆದ ನಾಲ್ಕೈದು ತಿಂಗಳುಗಳಿಂದ ಕುಂದಾಪುರ ನಗರದಲ್ಲಿ ಸಿನೆಮಾ ವಿಕ್ಷಣೆಗಾಗಿ ಯಾವುದೇ ಚಿತ್ರಮಂದಿರಗಳು ಇರಲಿಲ್ಲ.ಈ ಹಿಂದೆ ಇದ್ದ 2-3 ಸಿನೆಮಾ ಮಂದಿರಗಳನ್ನು ನಷ್ಟದ ಕಾರಣದಿಂದ ಮುಚ್ಚಲಾಯಿತು.ಇದರಿಂದ ಸಿನೆಮಾ ಪ್ರಿಯರಿಗಂತೂ ನಷ್ಟ ಮಾತ್ರವಲ್ಲದೇ ಬೇಸರದ ಸ್ಥಿತಿ ನಿಮರ್ಾಣವಾಯಿತು. ತಮ್ಮ-ತಮ್ಮ ಇಷ್ಟದ ನಾಯಕರ ಹಾಗೂ ತಮ್ಮ ನೆಚ್ಚಿನ ಸಿನೇಮಾಗಳನ್ನು ಸಿನೇಮಾ ಮಂದಿರದಲ್ಲಿ ವೀಕ್ಷಣೆ ಮಾಡುತ್ತಿದ್ದ ಚಿತ್ರ ಪ್ರೇಮಿಗಳು ಕುಂದಾಪುರದಲ್ಲೊಂದು ಉತ್ತಮ ಚಿತ್ರಮಂದಿರವಾಗಬಹುದೆಂಬ ಬಾರಿ ನಿರಿಕ್ಷೆಯಲ್ಲಿಯೇ ಇದ್ದರು. ಚಿತ್ರ ರಸಿಕರ ಅಭಿರುಚಿಗೆ ತಕ್ಕಂತೆ ಈಗ ಕುಂದಾಪುರದಲ್ಲೊಂದು ನೂತನ ತಂತ್ರಜ್ಞಾನವುಳ್ಳ ಡಿಜಿಟಲ್ ಸಿನೇಮಾ ಮಂದಿರ ಜನರ ಸೇವೆಗೆ ಸಿದ್ದಗೊಂಡು ಜೂನ್ 15 ರಂದು ಅಧಿಕ್ರತವಾಗಿ ಆರಂಭಗೊಂಡಿದೆ. ಕುಂದಾಪುರದ ಜನತೆಗೆ ಈ ಹಿಂದೆ ಸಾಮಾನ್ಯ ಚಿತ್ರಮಂದಿರ ನೋಡಿದ ಅನುಭವ ಮಾತ್ರ ಇತ್ತು.ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವ ಮಂದಿ ಈ ರೀತಿಯ ಹೊಚ್ಚ ಹೊಸ ಸೌಲಭ್ಯಗಳನ್ನು ನೋಡಿದ್ದರು. ಉತ್ತಮ ತಂತ್ರಜ್ನಾನವನ್ನೋಳಗೊಂಡಿರುವ ಈ ಥೀಯೇಟರ್ನಲ್ಲಿ ಪ್ರಥಮವಾಗಿ ಶುಕ್ರವಾರ ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ ಅಭಿನಯದ ಅಣ್ಣಾಬಾಂಡ್ ಚಿತ್ರವನ್ನು ಡಿ.ಟಿ.ಎಸ್.…

Read More

ಉನ್ನತ ಶಿಕ್ಷಣವೆಂಬುದು ಕನಸಿನ ಮಾತಾಗಿದ್ದ ಕಾಲಘಟ್ಟದಲ್ಲಿ ಕುಂದಾಪುರದ ನಾಗರಿಕರಲ್ಲೊಂದು ಕಾಲೇಜೊಂದನ್ನು ಆರಂಭಿಸುವ ಬಯಕೆ ಹುಟ್ಟಿ, ಅಂದು ಅಕಾಡೆಮಿ ಆಫ್ ಜನರಲ್ ಎಜುಕೆಶನ್ನ ಡಾ| ಟಿ.ಎಂ.ಎ.ಪೈ ಹಾಗೂ ಕುಂದಾಪುರದಲ್ಲಿ ಹುಟ್ಟಿ ಬಹ್ರೇನಿನಲ್ಲಿ ವೈದ್ಯರಾಗಿದ್ದ ಡಾ| ಎ.ಎಸ್.ಭಂಡಾರ್ಕರ್ ರವರ ಸಹಕಾರದೊಂದಿಗೆ ಸಾಕಾರಗೊಂಡು, 1963 ರ ಜುಲೈ 11 ರಂದು ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ನಾನ ಕಾಲೇಜು ಅಸ್ತಿತ್ವಕ್ಕೆ ಬಂದಿತು. ಫಲವಾಗಿ ನೂರಾರು ಶಿಕ್ಷಾಣಾಕಾಂಕ್ಷಿಗಳ ಬಯಕೆ ಸಾಕಾರಗೊಂಡು ಕುಂದಾಪುರದ ಚಿತ್ರಣವನ್ನೇ ಅದು ಬದಲಿಸಿತು. ಮುಂದೆ ಡಾ| ಎಚ್.ಶಾಂತರಾಮ್ ಅವರು ಪ್ರಾಂಶುಪಾಲರಾಗಿ ಆಡಳಿತ ಸೂತ್ರವನ್ನು ಹಿಡಿದಾಗಿನಿಂದ ಕಾಲೇಜು ಮತ್ತಷ್ಟು ಬೆಳೆಯಿತು. ಈಗ ಕಾಲೇಜಿಗೆ ನಾಡಿನಲ್ಲೇ ಮನ್ನಣೆಯಿದೆ, ಗೌರವದ ಸ್ಥಾನ ಮಾನವಿದೆ. ಇದೀಗ ಕಾಲೇಜು ಸುವರ್ಣ ಮಹೋತ್ಸವದ ಸಿದ್ದತೆಯಲ್ಲಿ ತೊಡಗಿದೆ. ಶಿಕ್ಷಣಾಕಾಂಕ್ಷಿಗಳ ಕನಸನ್ನು ಸಾಕಾರಗೊಳಿಸಿ ಸಾವಿರ, ಸಾವಿರ ರತ್ನಗಳನ್ನು ನಾಡಿಗೆ ನೀಡಿರುವ, ನಾವು ಕಲಿತ ನಮ್ಮ ಹೆಮ್ಮೆಯ ಭಂಡಾರ್ಕಾರ್ಸ್ ಕಾಲೇಜು ಮತ್ತಷ್ಟು ಕೀತರ್ಿ ಗಳಿಸಲಿ ಎಂಬುದೇ ನಮ್ಮೆಲ್ಲರ ಆಶಯ.

Read More

ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಎಂಬುದು ಸಾಹಿತ್ಯ ಲೋಕದ ಪ್ರಾತಿನಿಧಿಕ ಸಂಸ್ಥೆ. ಅದು ಕನ್ನಡಿಗರ ಅಭಿಮಾನದ ಸಂಕೇತ, ಕನ್ನಡಿಗರ ಹೃದಯದಲ್ಲಿ ಅದಕ್ಕೊಂದು ವಿಶೇಷ ಸ್ಥಾನಮಾನವಿದೆ. ಹೆಚ್ಚಾಗಿ ಅದನ್ನು ನಾವೇ, ನಮ್ಮ ಭಾಷೆಗಾಗಿ ಹುಟ್ಟಿಹಾಕಿದ ಸಂಸ್ಥೆ ಎಂಬ ಪ್ರೀತಿ- ಗೌರವಿದೆ. 1915ರಲ್ಲಿ ಸ್ಥಾಪನೆಗೊಂಡ ಕಸಾಪ ಮೈಸೂರಿನ ನಾಲ್ವಡಿ ಕೃಷ್ಣರಾಜ ಅರಸರಿಂದ ಚಾಲನೆ ಪಡೆದಿತ್ತು. 2015ರ ವೇಳೆಗೆ ಅದು ನೂರು ವರುಷಗಳನ್ನು ಪೂರೈಸಲಿದೆ. ಶತಮಾನದ ಹೊಸ್ತಿಲಿನಲ್ಲಿರುವ ಕಸಾಪಗೆ 24ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪುಂಡಲೀಕ ಹಾಲಂಬಿ ನಮ್ಮ ಕುಂದಾಪುರದವರು. ಅಚ್ಚ ಕನ್ನಡದೂರಿನ ವ್ಯಕ್ತಿ ಕನ್ನಡಮ್ಮನ ತೇರನೆಳೆಯಲು ಸಾರಥ್ಯ ವಹಿಸಿಕೊಂಡಿರುವುದು ಉಡುಪಿ ಜಿಲ್ಲೆಗೆ ಹೆಮ್ಮೆಯ ವಿಚಾರ. ಸಾಹಿತ್ಯ ಪರಿಚಾರಿಕೆಯ ಮೂಲಕ ಗುರುತಿಸಿಕೊಂಡಿರುವ ಹಾಗೂ ಸಂಘಟನೆ, ಆಡಳಿತ ನಿರ್ವಹಣೆಯ ಮೂಲಕ ಹೆಸರು ಮಾಡಿರುವ ಹಾಲಂಬಿಯವರ ಮೇಲೆ ಕನ್ನಡ ನಾಡು-ನುಡಿಗೆ ಎದುರಾಗಿರುವ ಸಂದಿಗ್ಧ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬೇಕಾದ ಗುರುತರ ಜವಾಬ್ದಾರಿ ಇದೆ. ಅವರು ನಾಡು ನುಡಿಯ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಬೇಕಾಗಿದೆ. ಅವರು ಕೈಗೊಳ್ಳುವ ಎಲ್ಲಾ ಯೋಜನೆಗಳು ಯಶಸ್ವಿಯಾಗಿ…

Read More

ಕುಂದಾಪುರ, 30/3: ಭಂಡಾರ್ಕಾರ್ಸ್ ಕಾಲೇಜು ಸುವರ್ಣ ಮಹೋತ್ಸವಕ್ಕೆ ಅಣಿಯಾಗುತ್ತಿರುವ ಸಂಧರ್ಭದಲ್ಲಿ ಕನ್ನಡ, ಸಾಹಿತ್ಯ, ಕುಂದಾಪುರದ ಭಾಷೆ, ಸಂಸ್ಕೃತಿಯನ್ನು ವೆಬ್ಸೈಟ್ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವಂತೆ ಮಾಡುತ್ತಿರುವ ಕಾಲೇಜು ವಿದ್ಯಾರ್ಥಿಯೊಬ್ಬನ ಈ ಕೆಲಸ ಪ್ರಶಂಸನಿಯವಾದದ್ದು ಎಂದು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ನ ಆಡಳಿತಾಧಿಕಾರಿ ಡಾ. ಹೆಚ್ ಶಾಂತರಾಮ್ ನುಡಿದರು. ಅವರು ಭಂಡಾರ್ಕಾರ್ಸ್ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ಕುಂದಾಪ್ರ ಡಾಟ್ ಕಾಂ ಅಂತರ್ಜಾಲ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಕಾಲೇಜು ಹಾಗೂ ಸುತ್ತಲಿನ ಪರಿಸರಕ್ಕೆ ಪೂರಕವಾಗುವಂತಹ ಇಂತಹ ಉತ್ತಮ ಕೆಲಸಗಳು ಇಲ್ಲಿಗೆ ಕೊನೆಗೊಳ್ಳದೆ ನಿರಂತರವಾದ ನಡೆದು ಪ್ರಗತಿಯನ್ನು ಸಾಧಿಸಿದಾಗ ಅದು ಉಳಿದವರಿಗೂ ಸ್ಪೂರ್ತಿಯಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಚಂದ್ರಶೇಖರ ದೋಮ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಪೂರ್ವಾಧ್ಯಕ್ಷರಾದ ಎ.ಎಸ್.ಎನ್ ಹೆಬ್ಬಾರ್ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಜಾದೂಗಾರ ಓಂ ಗಣೇಶ್ ಉಪ್ಪುಂದ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರವಿನಾಕುಮಾರಿ ನಿರೂಪಿಸಿದರು. ಕುಂದಾಪ್ರ ಡಾಟ್ ಕಾಂ ಸಂಪಾದಕ ಸುನಿಲ್ ಹೆಚ್. ಜಿ. ಪ್ರಾಸ್ತಾವಿಕ…

Read More