Author: Editor Desk
ಕುಂದಾಪುರ: ಮಕ್ಕಳು ತಾಯಿಯ ಗರ್ಭದಲ್ಲಿರುವಾಗಲೇ ಎಲ್ಲವನ್ನೂ ಗ್ರಹಿಸುವ ಶಕ್ತಿ ಹೊಂದಿರುತ್ತಾರೆ. ಎಳೆಯ ವಯಸ್ಸಿನಲ್ಲಿಯೇ ವಿವಿಧ ಚಟುವಟಿಕೆ ಹಾಗೂ ವಸ್ತುಗಳ ಮೂಲಕ ಮಕ್ಕಳಲ್ಲಿ ಜ್ಞಾನವನ್ನು ಹೆಚ್ಚಿಸುವ ಕೆಲಸವನ್ನು ಮಾಂಟೆಸರಿ ಶಿಕ್ಷಣ ಮಾಡುತ್ತದೆ. ಮಕ್ಕಳಿಗೆ ನಾವು ಏನು ಕಲಿಸುತ್ತೆವೆ ಎನ್ನುವುದಕ್ಕಿಂತ ಅವರು ಏನನ್ನು ಕಲಿಯಲು ಉತ್ಸುಕರಾಗಿರುತ್ತಾರೆ ಎಂದು ತಿಳಿದು ಅದಕ್ಕೆ ತಕ್ಕಂತೆ ಸ್ಪಂದಿಸುವುದು ಮುಖ್ಯ ಎಂದು ಮಣಿಪಾಲ್ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ| ಸುನೀಲ್ ಸಿ ಮುಂದ್ಕೂರು ಹೇಳಿದರು. ಅವರು ಇಲ್ಲಿನ ಕೋಡಿ ಬ್ಯಾರೀಸ್ ಶಿಕ್ಷಣ ಸಂಸ್ಥೆಯ ನಾಲೆಜ್ಡ್ ಕ್ಯಾಂಪಸ್ ನಲ್ಲಿ ಉಡುಪಿ ಜಿಲ್ಲೆಯ ಪ್ರಪ್ರಥಮ ಹಿಸ್ ಗ್ರೇಸ್ ಮಾಂಟೆಸೊರಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು. ಇಂದು ಮಕ್ಕಳಿಗೆ ಹೇಗೆ ಬದುಕಬೇಕು ಎಂದು ಹೇಳುವ ಬದಲು, ಕಂಪ್ಯೂಟರ್, ಆ್ಯಪ್ ಮುಂತಾದ ಉಪಕರಣಗಳನ್ನು ಹೇಗೆ ಬಳಸಬೇಕು ಎಂದು ಹೇಳಿಕೊಡಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೊಂದು ದಿನ ಪರಪ್ಪರ ಮಾತನಾಡದೇ ಇರುವ ಸ್ಥಿತಿ ಬಂದರೂ ಅಚ್ಚರಿಪಡಬೇಕಾಗಿಲ್ಲ ಎಂದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಮ್ಯಾನೆಜಿಂಗ್ ಟ್ರಸ್ಟಿ ಸಯ್ಯದ್ ಮೊಹಮ್ಮದ್…
ಕುಂದಾಪುರ: ದೇವಳಕ್ಕೆ ಬರುವ ಆದಾಯವನ್ನು ಧಾರ್ಮಿಕ ಕಾರ್ಯಗಳಿಗೆ ಮಾತ್ರವೇ ವಿನಿಯೋಗಿಸದೇ, ಸಾಮಾಜಿಕ ಕಾರ್ಯಗಳಿಗೂ ವಿನಿಯೋಗಿಸುವುದರ ಮೂಲಕ ಈ ಭಾಗದ ಬಡ ಜನರ ಏಳಿಗೆಗಾಗಿ ಶ್ರಮಿಸಲು ನಾವು ಮುಂದಡಿಯಿಟ್ಟಿದ್ದು, ಆ ಕಾರಣದಿಂದ ಆರೋಗ್ಯ ಶಿಬಿರವನ್ನು ಆಯೋಜಿಸಿದ್ದೇವೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ. ಕೃಷ್ಣಪ್ರಸಾದ್ ಅಡ್ಯಂತಾಯ ಹೇಳಿದರು. ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಘಟಕ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಉಡುಪಿ ಘಟಕ, ಉಡುಪಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಹಾಗೂ ಮಣಿಪಾಲ ಕರ್ಸೂರ್ಬಾ ಆಸ್ಪತ್ರೆಯ ಸಹಯೋಗದೊಂದಿಗೆ ಕುಂದಾಪುರ ಜ್ಯೂನಿಯರ್ ಕಾಲೇಜಿನಲ್ಲಿ ಹಮ್ಮಿಕೊಂಡ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕುಂದಾಪುರ ಉಪವಿಭಾಗಾಧಿಕಾರಿ ಚಾರುಲತಾ ಸೋಮಲ್, ಶ್ರೀ ಮೂಕಾಂಬಿಕಾ ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಕುಮಾರ್.…
ಕುಂದಾಪುರ: ರಾಜೀವ್ ಗಾಂಧಿ ಪಂಚಾಯತ್ ವ್ಯವಸ್ಥೆಗೊಂದು ಆಯಾಮ ನೀಡಿದರೆ, ಸೋನಿಯಾ ಗಾಂಧಿ ಹಸಿವು ಮುಕ್ತ ಭಾರತಕ್ಕೆ ಸಂಕಲ್ಪ ಮಾಡಿದರು. ಹಸಿವು ಮುಕ್ತ ಭಾರತ ಹಾಗೂ ಕರ್ನಾಟಕ ಕಾಂಗ್ರೆಸ್ ಸಂಕಲ್ಪವಾಗಿದೆ. ಇದನ್ನು ಸಹಿಸದ ಬಿಜೆಪಿ ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತಿದೆ. ಆದರೆ ಇದು ಸಾಧ್ಯವಾಗದ ಮಾತು ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು. ಅವರು ಶನಿವಾರ ಕುಂದಾಪುರದ ಆರ್.ಎನ್. ಶೆಟ್ಟಿ ಸಭಾಭವನದಲ್ಲಿ ನಡೆದ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ದೇಶದಲ್ಲಿ ಪಂಚಾಯತ್‌ರಾಜ್ ವ್ಯವಸ್ಥೆಗೆ ಒಂದು ಸ್ವರೂಪ ಬಂದಿದ್ದು ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ. ಜನರಿಗೆ ಸಂವಿಧಾನಬದ್ಧ ಹಕ್ಕನ್ನು ಎತ್ತಿ ಹಿಡಿಯಲು ಅವರು ಅವಕಾಶ ಮಾಡಿಕೊಟ್ಟರು. ಇದರಿಂದ ಪಂಚಾಯತ್‌ಗಳ ಬಲವರ್ಧನೆಯಾಯಿತು. ಮೇ 29ರಂದು ನಡೆಯುವ ಗ್ರಾ. ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳನ್ನು ಆರಿಸಿ, ಹೊಸ ದಾಖಲೆ ನಿರ್ಮಾಣ ಮಾಡಬೇಕು. ಮತ್ತೂಮ್ಮೆ ಕಾಂಗ್ರೆಸ್ ಪಕ್ಷದ ನೇತೃತ್ವ ಎತ್ತಿ ಹಿಡಿಯಬೇಕು ಎಂದು ಅವರು ಹೇಳಿದರು. ಪ್ರಜಾಪ್ರಭುತ್ವದ ಬುನಾದಿ ಗ್ರಾ. ಪಂ. ವ್ಯವಸ್ಥೆ.…
ಬೈಂದೂರು: ಭಾರತೀಯ ಜನತಾ ಪಕ್ಷ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಕೇಂದ್ರದಲ್ಲಿ ಅಧಿಕಾರಗಳಿಸಿದೆ.ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿದೆ.ಮಾತ್ರವಲ್ಲದೇ ಪ್ರತಿ ಕುಟುಂಬಕ್ಕೂ ಅವ ಕಾಶ ದೊರೆಯುವ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು.ಅವರು ಬೈಂದೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ರೋಟರಿ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ ಬಡವರಿಗೆ ನೀಡುವ ಅಕ್ಕಿ ಯೋಜನೆಯನ್ನು ನಿಲ್ಲಿಸಲು ಬಿ.ಜೆ.ಪಿ. ಷಡ್ಯಂತ್ರ ಮಾಡುತ್ತಿದೆ.ಅಭಿವೃದ್ಧಿ ಮಾಡಿದ್ದೇನೆ ಎನ್ನುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರಾಯ ಚೂರಿಗೆ ಐ.ಐ.ಟಿ. ಶಿಕ್ಷಣ ಸಂಸ್ಥೆ ಬೇಕೆಂದು ಕೇಳುತ್ತಿದ್ದಾರೆ. ಉದ್ದಿಮೆದಾರರಿಗೆ ಅನುಕೂಲವಾಗುವ ಯೋಜನೆಗಳು ಹೊರತುಪಡಿಸಿದರೆ ಬಿಜೆಪಿಯಿಂದ ಪ್ರಗತಿ ಶೂನ್ಯ ಎಂದರು. ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ ಸರಕಾರ ಪಂಚಾಯತ್‌ಗಳಿಗೆ ಹೆಚ್ಚಿನ ಬಲ ನೀಡುವ ಯೋಜನೆ ರೂಪಿಸಿದೆ. ವಸತಿ ಯೋಜನೆ, ಸಾಲಮನ್ನ ಯೋಜನೆ ಮುಂತಾದ ಯೋಜನೆಗಳು ಬಡ ಜನರಿಗೆ ಅನುಕೂಲವಾಗಿದೆ. ಆಧಾರ್ ಕಾರ್ಡ್‌ನ್ನುರದ್ದು…
ಕುಂದಾಪುರ: ಜಗತ್ತಿನ ಹಲವು ಸಂಸ್ಕೃತಿಗಳು ನಾಶವಾದರೂ ಭಾರತೀಯ ಸಂಸ್ಕೃತಿ ನಿರಂತರವಾಗಿ ಉಳಿದು ಬೆಳೆದಿದೆ. ಭಾರತೀಯ ಸಂಸ್ಕೃತಿಗೆ ಸನಾತನ ಧರ್ಮದ ತಳಹದಿ ಇರುವುದರಿಂದಲೇ ಅದು ಸುಭದ್ರವಾಗಿ ಉಳಿದಿದೆ ಎಂದು ಬಸೂÅರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಅವರು ಹೇಳಿದರು. ಇಡೂರಿನ ಪುರಾಣಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವರ ನವೀಕೃತ ಶಿಲಾದೇಗುಲ ಸಮರ್ಪಣೆ, ಶ್ರೀ ಮಹಾಲಿಂಗೇಶ್ವರ ಮತ್ತು ಪರಿವಾರ ದೇವರುಗಳ ಬಿಂಬ ಪುನಃ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಾರಂಭದ ಅಂಗವಾಗಿ ಮೇ 21ರಂದು ಜರಗಿದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆತ್ಮನಿವೇದನೆಯೇ ಭಗವಂತನಿಗೆ ಸಲ್ಲಿಸುವ ಅರ್ಥಪೂರ್ಣವಾದ ಪ್ರಾರ್ಥನೆ. ಏಕಾಗ್ರತೆ, ಬದ್ಧತೆ, ನಿರ್ಲಿಪ್ತತೆಯ ಪ್ರಾರ್ಥನೆಯಿಂದ ದೇವರ ಅನುಗ್ರಹ ಲಭಿಸುತ್ತದೆ. ಧಾರ್ಮಿಕ ಶ್ರದ್ಧೆಯಿಂದ ಕೂಡಿದ ಸುಸ್ಥಿರ, ಸ್ವಸ್ಥ ಹಾಗೂ ಪರಿಪೂರ್ಣ ಸಮಾಜ ನಿರ್ಮಾಣ ಎಲ್ಲರ ಗುರಿಯಾಗಬೇಕು ಎಂದರು. ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಜಗತ್ತಿನ ಎಲ್ಲಾ ಧರ್ಮಗಳಿಗಿಂತ ಹೆಚ್ಚು ಉದಾತ್ತ ವಿಚಾರಗಳನ್ನು…
ಕುಂದಾಪುರ: ಹಂಗಳೂರು ಪ್ರಸನ್ನ ಆಂಜನೇಯ ದೇವಸ್ಥಾನದಲ್ಲಿ 11ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ದೇವಸ್ಥಾನದ ವಠಾರದಲ್ಲಿ ಮಂಗಳವಾರ ಜರಗಿತು. ಜಿ.ಪಂ. ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ಕಾರ್ಯಕ್ರಮವನ್ನು ಉದ್ಘಾಟಿಸಿ ದರು. ದೇವಸ್ಥಾನದ ಸ್ತಾಪಕ ಮುಂಬೈ ಉದ್ಯಮಿ ಸುರೇಶ್ ಡಿ.ಪಡುಕೋಣೆ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಸದಸ್ಯ ಮಂಜು ಬಿಲ್ಲವ, ವಿದ್ಯುತ್ ಗುತ್ತಿಗೆದಾರರ ಕೆ.ಆರ್.ನಾಯ್ಕ, ಪ್ರಕಾಶ್ ಪಡಿಯಾರ್, ಕುಂದಾಪುರ ದೇವಾಡಿಗರ ಸಂಘದ ಅಧ್ಯಕ್ಷ ನಾರಾಯಣ ದೇವಾಡಿಗ ಉಪಸ್ಥಿತರಿದ್ದರು. ನಿವೃತ್ತ ಉಪನ್ಯಾಸಕ ಎಸ್.ಜನಾರ್ದನ್ ಮರವಂತೆ, ವಸಂತ ಕುಮಾರಿ, ಸಮಾಜ ಸೇವಕ ಕೇಶವ ಕೋಟೇಶ್ವರ, ಪ್ರಮೀಳಾ ವಾಜ್, ಕಾರ್ಪೋರೇಶನ್ ಬ್ಯಾಂಕಿನ ಮಹಾಲಿಂಗ ದೇವಾಡಿಗ, ರಾಷ್ಟ್ರೀಯ ವೈಟ್ ಲಿಫ್ಟರ್ ಜಾಕ್ಸ್‌ನ್ ಅವರನ್ನು ಸಮ್ಮಾನಿಸಲಾಯಿತು. ನಾರಾಯಣ ದೇವಾಡಿಗ ಸ್ವಾಗತಿಸಿದರು. ಸತೀಶ್ ಖಾರ್ವಿ ಕ್ರೀಡಾಕೂಟದ ವಿಜೇತರ ಪಟ್ಟಿ ವಾಚಿಸಿದರು. ಗುರುರಾಜ ಗಾಣಿಗ ಹಂಗಳೂರು ಕಾರ್ಯಕ್ರಮ ನಿರ್ವಹಿ ಸಿದರು. ನಾಗರಾಜ ರಾಯಪ್ಪನಮಠ ವಂದಿಸಿದರು.
ಕುಂದಾಪುರ: ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿ ಸಾಹಿತ್ಯಕ್ಕಿದೆ. ಕಲೆ ಮತ್ತು ಸಾಹಿತ್ಯ ಎಲ್ಲೆಡೆಯಲ್ಲಿಯೂ ಮಿಳಿತವಾಗಿರುತ್ತವೆ. ಅದನ್ನು ಗುರುತಿಸುವ ಕಣ್ಣು ನಮಗಿರಬೇಕು.ಎಲ್ಲ ಶಬ್ದ ಸಂಯೋಜನೆಯಲ್ಲಿಯೂ ಸಾಹಿತ್ಯ ಇದೆ. ಇವುಗಳಿಂದ ಹೊರತಾದ ಜೀವನವಿಲ್ಲ ಎಂದು ಸಾಹಿತಿ, ನ್ಯಾಯವಾದಿ ಆತ್ರಾಡಿ ಪೃಥ್ವೀರಾಜ್ ಹೆಗ್ಡೆ ಹೇಳಿದರು. ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಕಾರದಲ್ಲಿ ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಪ್ಪಿನಕುದ್ರುವಿನ ಗೊಂಬೆಯಾಟ ಅಕಾಡೆಮಿ ಕಟ್ಟಡದ ಕೊಗ್ಗ ದೇವಣ್ಣ ಕಾಮತ್ ವೇದಿಕೆಯಲ್ಲಿ ನಡೆದ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ತಲ್ಲೂರು ಗ್ರಾ.ಪಂ.ನ ನಿಕಟಪೂರ್ವ ಅಧ್ಯಕ್ಷ ರಘು ಪೂಜಾರಿ ದೀಪ ಬೆಳಗಿ ಸಮಾರಂಭವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ ಕೊಗ್ಗ ಕಾಮತ್, ಉಡುಪಿ ತಾಲೂಕು ಕ.ಸಾ.ಪ. ಅಧ್ಯಕ್ಷ ಪ್ರೊ| ಉಪೇಂದ್ರ ಸೋಮಯಾಜಿ ಮುಖ್ಯ ಅತಿಥಿಯಾಗಿ ಆಗಮಿಸಿ ಶುಭ ಹಾರೈಸಿದರು. ಜಿಲ್ಲಾ ಕ.ಸಾ.ಪ. ಗೌರವ ಕೋಶಾಧ್ಯಕ್ಷ ಸುಬ್ರಹ್ಮಣ್ಯ ಬಾಸ್ರಿ ಉಪಸ್ಥಿತರಿದ್ದರು. ಹಿರಿಯ ಗೊಂಬೆಯಾಟ ಕಲಾವಿದ ಯು. ವಾಮನ ಪೈ…
ಇದು ವಾಟ್ಸ್ಆ್ಯಪ್ ಕಿಡಿಗೇಡಿಗಳು ಹರಿಬಿಟ್ಟ ಸುಳ್ಳಿನ ಕಂತೆ! ಒಂದೆರಡು ದಿನಗಳಿಂದಿಚೆಗೆ ಕುಂದಾಪುರದ ಹಲವು ಮಂದಿಯ ವಾಟ್ಸ್ಆ್ಯಪ್ ನಲ್ಲಿ ಆಘಾತಕಾರಿಯಾದ ಸುದ್ದಿಗಳು ಹರಿದಾಡುತ್ತಿದೆ. ಘಟನೆ ನಡೆದದ್ದು ಯಾವಾಗ, ಯಾವ ಏರಿಯಾದಲ್ಲಿ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದ್ದರೂ ಅದಕ್ಕೊಂದು ಉತ್ತರ ಕಂಡುಕೊಳ್ಳುವ ಮೊದಲೇ ಆ ಸಂದೇಶ ಮತ್ತೊಬ್ಬರಿಗೆ ರವಾನಿಯಾಗುತ್ತಿದೆ. ಆದರೆ ಯಾರೋಬ್ಬರಿಗೂ ಆ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಪೋಟೋ ನೋಡಿದವರು ಒಂದು ಕ್ಷಣವೂ ಯೋಚಿಸದೆ ಪತ್ರಕರ್ತರು, ಪೊಲೀಸರುಗಳಿಗೆ ಪೋನಾಯಿಸುತ್ತಿದ್ದಾರೆ. ಅದು ಕುಂದಾಪುರದಲ್ಲಿ ನಡೆದ ಪ್ರಕರಣವಲ್ಲ ಎಂದು ಮನವರಿಕೆ ಮಾಡುವಲ್ಲಿ ಕೆಲವು ಪತ್ರಕರ್ತರು ಸುಸ್ತಾಗಿದ್ದಾರೆ. ಹೌದು. ವಾಟ್ಸ್ಆ್ಯಪ್ ನಲ್ಲಿ ಬಂದ ಈ ಸುಳ್ಳು ಸಂದೇಶ ಕುಂದಾಪುರಿಗರನ್ನು ಕೆಲಹೊತ್ತು ಗೊಂದಲಕ್ಕೀಡು ಮಾಡಿದ್ದಂತೂ ಸತ್ಯ. ಒಬ್ಬರಿಂದ ಮತ್ತೋಬ್ಬರಿಗೆ, ಒಂದು ಗ್ರೂಫ್ ನಿಂದ ಮತ್ತೊಂದು ಗ್ರೂಫಿಗೆ ಕ್ಷಣ ಮಾತ್ರದಲ್ಲಿ ಶೇರ್ ಆಗಿರುವುದನ್ನು ಗಮನಿಸಿದರೆ ಘಟನೆಯ ಮೂಲವನ್ನು ಅರಿಯದವರು ಇದನ್ನು ಗಂಭೀರವಾಗಿ ತೆಗೆದುಕೊಂಡದ್ದು ಸ್ಪಷ್ಟವಾಗುತ್ತದೆ. ಹೆಚ್ಚಿನ ಮಂದಿ ಅದನ್ನು ಓದಲೂ ಇಲ್ಲ. ಲ್ಯಾಂಡ್ ಮಾರ್ಕ್ ಗಳನ್ನು ನೋಡಿಯೂ ಇಲ್ಲ. ಚಿತ್ರಗಳನ್ನು…
ಕುಂದಾಪುರ: ರೋಟರಿ ಕ್ಲಬ್, ಕುಂದಾಪುರದ ವತಿಯಿಂದ ಚಿತ್ತೂರು ಗ್ರಾಮದ ನೈಕಂಬಳಿ ಗುಡ್ಡಿಮನೆ ಶ್ರೀಧರ ಆಚಾರ್ಯ ಮತ್ತು ಶ್ರೀಮತಿ ಮಾಲಿನಿ ಆಚಾರ್ಯ ದಂಪತಿಗಳ ಮನೆಗೆ ಸೋಲಾರ್ ದೀಪಗಳನ್ನು ರೋಟರಿ ಜಿಲ್ಲಾ ಅನುದಾನದಲ್ಲಿ ಮೇ. ೨೨ರಂದು ಅಳವಡಿಸಲಾಯಿತು. ವಿದ್ಯುತ್ ದೀಪದ ಸೌಲಭ್ಯವಂಚಿತ ಗ್ರಾಮೀಣ ಭಾಗದ ಮನೆಗೆ ನಾಲ್ಕು ದೀಪಗಳನ್ನೊಳಗೊಂಡ ಸುಸಜ್ಜಿತ ಸೋಲಾರ್ ದೀಪಗಳ ಘಟಕವನ್ನು ೫ ವರ್ಷಗಳ ವಾರಂಟಿಯೊಂದಿಗೆ ರೋಟರಿ ಕ್ಲಬ್, ಕುಂದಾಪುರದ ಅಧ್ಯಕ್ಷ ಮನೋಜ್ ನಾಯರ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ| ಅತುಲ್‌ಕುಮಾರ್ ಶೆಟ್ಟಿ, ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರ ಕಲ್ಯಾಣ ಮಂಟಪದ ಮಾಲಕ ರಾಮಚಂದ್ರ ಮಂಜ, ಇಡೂರಿನ ಮಹಾಗಣಪತಿ ಐಸ್‌ಕ್ರೀಮ್ ಸಂಸ್ಥೆಯ ಮಾಲಕ ಮಂಜುನಾಥ ಮಡಿವಾಳ, ನಿಯೋಜಿತ ಅಧ್ಯಕ್ಷ ಚಿತ್ತೂರು ಪ್ರಕಾಶ್ಚಂದ್ರ ಶೆಟ್ಟಿ, ಇಂಟರ‍್ಯಾಕ್ಟ್ ಕ್ಲಬ್‌ನ ಛೇರ್‌ಮೆನ್ ಎಚ್.ಎಸ್.ಹತ್ವಾರ್, ಕಾರ್ಯದರ್ಶಿ, ಕೆ. ವಿ. ನಾಯಕ್, ನಿಯೋಜಿತ ಕಾರ್ಯದರ್ಶಿ ಸಂತೋಷ ಕೋಣಿ ಇನ್ನಿತರರು ಉಪಸ್ಥಿತರಿದ್ದರು.
