Author: Editor Desk

ಕುಂದಾಪುರ: ಭಾರತದಲ್ಲಿರುವ ಅಸಂಖ್ಯಾತ ಸಸ್ಯ ಮೂಲಗಳು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಪ್ರಕೃತಿ ನೀಡಿದ ಈ ಕೊಡುಗೆಯನ್ನು ಭಾರತೀಯರು ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಗಿಡಮೂಲಿಕೆಗಳ  ಮಹತ್ವದ ಬಗ್ಗೆ  ವಿಶ್ವಕ್ಕೆ  ತಿಳಿಹೇಳಿದ ಹಿರಿಮೆ ನಮ್ಮದು ಎಂದು ಬಾರ್ಕೂರು  ಮಹಾಸಂಸ್ಥಾನ ಪೀಠದ ಡಾ. ಸಂತೋಷ್‌ ಗುರೂಜಿ ಹೇಳಿದರು. ಅವರು ಕೋಟೇಶ್ವರದ ಗುರುಕುಲ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸಾಂಪ್ರದಾಯಿಕ ಸಸ್ಯ ಪದಾರ್ಥಗಳ ಪರಿಚಯ ಸಸ್ಯಾಮೃತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಬಾಂಡ್ಯ ಎಜ್ಯುಕೇಶನ್‌  ಟ್ರಸ್ಟ್‌  ಅಧ್ಯಕ್ಷ  ಬಸ್ರೂರು ಅಪ್ಪಣ್ಣ ಅಧ್ಯಕ್ಷ ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಾಚೀನ  ಸಸ್ಯ ಸಾಮ್ರಾಜ್ಯದ ಮಹತ್ವದ  ಬಗ್ಗೆ  ಅದರಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮ ಹಿಂದಿನ ಕಾಲದಲ್ಲಿ ಜನರು ಉಪಯೋಗಿಸುತ್ತಿದ್ದ ರೀತಿ  ಹಾಗೂ ಇಂದಿನ ಯುವ ಜನಾಂಗ ಅದನ್ನು ಮರೆಯುತ್ತಿರುವ ಬಗ್ಗೆ  ತಿಳಿ ಹೇಳಿದರು. ಬಾಂಡ್ಯ ಎಜುಕೇಶನ್‌  ಟ್ರಸ್ಟ್‌ ಜಂಟಿ  ಕಾರ್ಯನಿರ್ವಾಹಕ  ನಿರ್ದೇಶಕ ಬಾಂಡ್ಯ ಕೆ. ಸುಭಾಶ್ಚಂದ್ರ ಶೆಟ್ಟಿ  ಉಪಸ್ಥಿತರಿದ್ದರು. ರಾಮ್‌ ಕಿಶನ್‌ ಹೆಗ್ಡೆ ದಂಪತಿ ಗುರೂಜಿ ಅವರನ್ನು ಗೌರವಿಸಿದರು. ಬಾಂಡ್ಯ…

Read More

ಕುಂದಾಪುರ: ಸ್ವಾಮಿ ಏಸು ಕ್ರಿಸ್ತರು ಬದುಕಿ. ನಡೆದಾಡಿದ, ತಮ್ಮ ಅನುಯಾಯಿಗಳಿಗೆ ಬೋಧನೆಗಳನ್ನು ಮಾಡಿದ ಹಲವಾರು ಸ್ಥಳಗಳಿಗೆ ಪ್ರವಾಸವನ್ನು ನಾಲಂದಾ ಟ್ರಾವೆಲ್ಸ್ ಹಮ್ಮಿಕೊಂಡಿದೆ. ಈ ವಿಶೇಷ ಪ್ರವಾಸದಲ್ಲಿ ಜೋರ್ಡಾನ್, ಇಸ್ರೇಲ್, ಪ್ಯಾಲೆಸ್ಟೈನ್ ಮತ್ತು ಈಜಿಪ್ಟ್ ದೇಶಗಳ ಅನೇಕ ಸ್ಥಳಗಳನ್ನು ಸಂದರ್ಶಿಸಲಾಗುವುದು. ಇದರಲ್ಲಿ ವಿಶ್ವವಿಖ್ಯಾತ ಈಜಿಪ್ಟಿನ ಪಿರಮಿಡ್ ಮತ್ತು ನೈಲ್ ನದಿ ಯಾನವೂ ಸೇರಿದೆ. ಝಿಯಾನ್ ಪರ್ವತ, ಮೃತ ಸಮುದ್ರ, ಜೆರಿಕೊ, ಬೆಥನಿ, ಕೆಂಪು ಸಮುದ್ರ, ನೆಬೊ ಪರ್ವತ, ನಝರೆತ್, ಸಂತ ಪೀಟರ್ ಚರ್ಚ್, ಗಲಿಲೇ ಸಮುದ್ರ, ಹೈಫಾ, ಟೆಲ್ ಅವಿವ್ ಮತ್ತು ಜಫ್ಫಾಗಳಲ್ಲಿ ವಿಸ್ತೃತ ಪ್ರವಾಸವಿರುತ್ತದೆ. ಹತ್ತು ದಿನಗಳ ಈ ಪ್ರವಾಸವು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಇದ್ದು, ರಿಯಾಯ್ತಿ ದರದಲ್ಲಿ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸುವುದಾಗಿ ನಾಲಂದಾ ಟ್ರಾವೆಲ್ಸ್‌ನ ಮಾಲಿಕ ಮುನಿಯಾಲ್ ಗಣೇಶ್ ಶೆಣೈ ತಿಳಿಸಿದ್ದಾರೆ. ಪ್ರವಾಸದಲ್ಲಿ ಇವರೂ ಸಹ ಮಾರ್ಗದರ್ಶಕರಾಗಿ ಬರಲಿದ್ದಾರೆ. ಸೀಮಿತ ಸೀಟುಗಳಿರುವ ಈ ಪ್ರವಾಸದಲ್ಲಿ ಪಾಲ್ಗೊಳ್ಳಲು ಬಯಸುವವರು ನಾಲಂದಾ ಟ್ರಾವೆಲ್, ನಾಲಂದಾ, ಶ್ರೀ ವೆಂಕಟರಮಣ ದೇವಸ್ಥಾನದ ಬಳಿ, ಮುಖ್ಯ…

Read More

ಬೈಂದೂರು: ಇಲ್ಲಿನ ತಗ್ಗರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿ ತಿರುಮಲ ಹುದಾರ್ 2015-16ನೇ ಸಾಲಿನ ಇನ್ಸಪಾಯರ್ ಅವಾರ್ಡ್ ಸ್ವರ್ಧೆಯಲ್ಲಿ ಪ್ರದರ್ಶಿಸಿದ ‘ಬಸ್ಸಿನಲ್ಲಿ ಲಿಫ್ಟ್’ ಮಾದರಿಯು ರಾಜ್ಯ ಮಟ್ಟಕ್ಕೆ ಸ್ವರ್ಧೆಗೆ ಆಯ್ಕೆಯಾಗಿದೆ. ಉಡುಪಿ ಬಂಟಕಲ್ಲಿನ ಶ್ರೀ ಮಧ್ವವಾದಿರಾಜ ಇನ್ಸ್ಟಿಟ್ಯೂಟ್ ನಲ್ಲಿ ನಡೆದ ಇನ್ಸ್ಪಾಯರ್ ಅವಾರ್ಡ್ ಸ್ವರ್ಧೆಯುಲ್ಲಿ ತಿರುಮಲ ತಯಾರಿಸಿದ ಬಸ್ಸಿನಲ್ಲಿ ವಿಶೇವಾಗಿ ಅಗತ್ಯ ಉಳ್ಳವರಿಗಾಗಿ ಲಿಫ್ಟ್ ಅವಳವಡಿಸುವ ಮಾದರಿ ಬಹುಮಾನ ಗಳಿಸಿತ್ತು. ಶಿಕ್ಷಕರಾದ ಸಂಗೀತಾ ಹಾಗೂ ಶೀಧರ್ ಎಂ.ಪಿ ಅವರ ಮಾರ್ಗದರ್ಶನದಲ್ಲಿ ಈ ಮಾದರಿಯನ್ನು ತಯಾರಿಸಲಾಗಿತ್ತು. ತಿರುಮಲ ಹುದಾರ್ ತಗ್ಗರ್ಸೆಯ ರಾಜು ಹುದಾರ್ ಹಾಗೂ ಭವಾನಿ ದಂಪತಿಗಳ ಪುತ್ರ

Read More

ಕುಂದಾಪುರ: ಪದವಿ ಕಾಲೇಜಿನಲ್ಲಿ ತೃತೀಯ ಪದವಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಮನೆಯ ಒಳಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಸಂಜೆ ಗಂಗೊಳ್ಳಿಯಲ್ಲಿ ನಡೆದಿದೆ. ಗಂಗೊಳ್ಳಿಯ ಸುಲ್ತಾನ್ ಮೊಹಲ್ಲಾದ ಗೋಪಾಲ ಖಾರ್ವಿ ಎಂಬುವರ ಪುತ್ರ ವಿಘ್ನೇಶ್ ಖಾರ್ವಿ(19) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕೋಟೇಶ್ವರದ ಸರ್ಕಾರೀ ಪದವಿ ಕಾಲೇಜಿನಲ್ಲಿ ತೃತೀಯ ಪದವಿ ಬಿಬಿಎಂ ಓದುತ್ತಿದ್ದ ವಿಘ್ನೇಶ ಖಾರ್ವಿ ಶನಿವಾರ ಎಂದಿನಂತೆ ಕಾಲೇಜಿಗೆ ಹೋಗಿ ಬಂದಿದ್ದರು. ಭಾನುವಾರ ರಜೆಯಾಗಿದ್ದರಿಂದ ಮನೆಯಲ್ಲಿಯೇ ಇದ್ದರೆಂದು ಮನೆಯವರು ತಿಳಿಸಿದ್ದಾರೆ. ಭಾನುವಾರ ಸಂಜೆ ಮನೆಯಲ್ಲಿದ್ದ ಇತರರು ಹೊರಗಡೆ ಹೋದ ಸಂದರ್ಭ ಮನೆಯೊಳಗೆ ನೇಣು ಬಿಗಿದುಕೊಂಡಿದ್ದಾರೆ. ಈ ಸಂದರ್ಭ ಮನೆಯ ಸದಸ್ಯರೊಬ್ಬರು ಒಳಗೆ ಬಂದಿದ್ದು, ಉಳಿದವರನ್ನು ಕರೆದಿದ್ದಾರೆನ್ನಲಾಗಿದೆ. ತಕ್ಷಣ ಅವರನ್ನು ಹಗ್ಗದಿಂದ ಬಿಡಿಸಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪುರ: ಮನೆಯಿಂದ ಹೊರಗೆ ತೆರಳಿದ ಕಂಬದಕೋಣೆಯ ಗೋವಿಂದ ದೇವಸ್ಥಾನದ ಬಳಿಯ ದತ್ತಾತ್ರೆಯ ಭಟ್ ಎಂಬುವವರ ಪತ್ನಿ ಕಾವೇರಿ ಭಟ್ (49) ನಾಪತ್ತೆಯಾಗಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾವುದೋ ಕೆಲಸಕ್ಕೆಂದು ಕಳೆದ ಸೋಮವಾರ ಮನೆಬಿಟ್ಟು ತೆರಳಿದ್ದ ಕಾವೇರಿ ಭಟ್ ಒಂದು ವಾರ ಕಳೆದರೂ ಎಲ್ಲಿಗೆ ಹೋಗಿದ್ದಾರೆ ಎಂಬುದರ ಸುಳಿವು ಮಾತ್ರ ಲಭ್ಯವಾಗಿಲ್ಲ. ಕಾವೇರಿ ಭಟ್ ಆಗಾಗ ತಲ್ಲೂರಿನ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಅವರ ತಾಯಿಯ ಮನೆಗೆ ಹೋಗುತ್ತಿದ್ದರು. ಮೊದಲ ದಿನ ಅಲ್ಲಿಗೆ ಹೋಗಿರಬಹುದೆಂದು ಗಂಡನ ಮನೆಯಲ್ಲಿ ಭಾವಿಸಿದ್ದರು. ಆದರೆ ಕರೆ ಮಾಡಿದಾಗ ಅಲ್ಲಿಯೂ ಇಲ್ಲದಿರುವುದು ತಿಳಿದುಬಂದಿದೆ. ಇತರೆ ಸಂಬಂಧಿಗಳ ಮನೆಯಲ್ಲಿಯೂ ವಿಚಾರಿಸಲಾಗಿದೆ. ಆದರೆ ಈ ವರೆಗೆ ಕಾವೇರಿ ಭಟ್ ಅವರ ಸುಳಿವು ಮಾತ್ರ ಲಭ್ಯವಾಗಿಲ್ಲ. ಕೊನೆಯ ಕಾವೇರಿ ಭಟ್ ಅವರ ಸಹೋದರ ವಿಶ್ವನಾಥ ಭಟ್ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣದ ಬಗ್ಗೆ ತನಿಕೆ ನಡೆಸುತ್ತಿದ್ದಾರೆ.

Read More

 ಬೈಂದೂರು: ಯಳಜಿತ ಗ್ರಾಮದ ಹೊಸೇರಿಯ ಸ್ಥಿತಪ್ರಜ್ಞ ವೀಗನ್ ವನದಲ್ಲಿ ರವಿವಾರ ನಡೆದ ೧೩ನೆ ಸಾತ್ವಿಕ್ ವೀಗನ್ ಫೆಸ್ಟಿವಲ್‌ನಲ್ಲಿ ಕುಂದಾಪುರದ ಕಾರ್ತಿಕ್ ಸ್ಕ್ಯಾನಿಂಗ್ ಸೆಂಟರ್‌ನ ಡಾ. ಬಿ. ವಿ. ಉಡುಪ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಿನರ್ಜಿ ಇನ್ಸ್ಟಿಟ್ಯೂಟನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಪಡೆದವರಲ್ಲಿ ಬದುಕು ಮತ್ತು ಉದ್ಯೋಗಕ್ಕೆ ಅಗತ್ಯವಾದ ಜ್ಞಾನ ಮತ್ತು ಕೌಶಲಗಳು ಇವೆಯೆಂದು ಭಾವಿಸುವುದು ತಪ್ಪು. ಹಲವು ವಿಷಯಗಳಲ್ಲಿ ಅವರು ಅನ್ಯರನ್ನು ಅವಲಂಬಿಸಬೇಕಾಗುತ್ತದೆ. ಉದ್ಯೋಗಕ್ಕೆ ಆಂಗ್ಲ ಭಾಷಾ ಪ್ರೌಢಿಮೆಯೊಂದಿಗೆ ಅನ್ಯ ಕೌಶಲಗಳು ಅಗತ್ಯ. ಸಿನರ್ಜಿ ಇನ್ಸ್ಟಿಟ್ಯೂಟ್ ಇಂತಹ ಕೌಶಲ್ಯಗಳನ್ನು ಕಲಿಸುವ ಕೇಂದ್ರವಾಗಲಿ ಎಂದು ಹಾರೈಸಿದರು. ಭೌತಿಕ ಬದುಕಿಗೆ ಅಧ್ಯಾತ್ಮದ ಲೇಪ ಎಂಬ ಕುರಿತು ಮಾತನಾಡಿದ ತೀರ್ಥಹಳ್ಳಿಯ ಹೆದ್ದೂರಿನ ವನಚೇತನದ ಋಷಿ ದೇವಿತೊ ನಾಗೇಶ್ ಮನುಷ್ಯರಿಗೆ ಅನ್ನ ಮತ್ತು ಜ್ಞಾನ ಸಮಸ್ಯೆಯಾಗದು. ಆದರೆ ಬಯಕೆಗಳನ್ನು ಮಿತಿಗೊಳಿಸುವುದು ದೊಡ್ಡ ಸಮಸ್ಯೆಯಾಗಿದೆ. ಸಮೃದ್ಧಿ ಇದ್ದಲ್ಲಿ ಅಸುರೀ ಪ್ರವೃತ್ತಿ ಮನೆಮಾಡುತ್ತದೆ. ನಿಸರ್ಗಕ್ಕೆ ನಿಕಟವಾಗಿ ಹಿತಮಿತವಾದ, ರುಚಿಶುದ್ಧಿಯ ಬದುಕನ್ನು ರೂಢಿಸಿಕೊಂಡರೆ ಸಮಸ್ಯೆಗಳಿರುವುದಿಲ್ಲ…

Read More

ಗ೦ಗೊಳ್ಳಿ: ಕಲಿಕೆಯ ಪಠ್ಯದ ಜೊತೆಯಲ್ಲಿ ಇನ್ನಿತರ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ವಿದ್ಯಾರ್ಥಿಗಳು ಹೆಚ್ಚಿನ ಆತ್ಮವಿಶ್ವಾಸ ಹೊ೦ದುವುದು ಸಾಧ್ಯ. ಆ ನಿಟ್ಟಿನಲ್ಲಿ ಮಕ್ಕಳನ್ನು ಪ್ರೋತ್ಸಾಹಿಸುವುದು ಹೆತ್ತವರ ಮತ್ತು ಶಿಕ್ಷಕರ ಕರ್ತವ್ಯ ಎ೦ದು ಗ೦ಗೊಳ್ಳಿಯ ಜಿ.ಎಸ್.ವಿ.ಎಸ್ ಅಸೋಷಿಯೇಶನ್ನಿನ ಅಧ್ಯಕ್ಷ ಡಾ.ಕಾಶೀನಾಥ ಪೈ ಅವರು ಹೇಳಿದರು.  ಅವರು ಇತ್ತೀಚೆಗೆ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರೋಟರಿ ಸಭಾ೦ಗಣದಲ್ಲಿ ನಲವತ್ತರ ಸ೦ಭ್ರಮದಲ್ಲಿರುವ  ಗ೦ಗೊಳ್ಳಿಯ ಶ್ರೀ ರಾಘವೇ೦ದ್ರ ಸ್ಪೋರ್ಟ್ಸ್ ಕ್ಲಬ್ , ರೋಟರಿ ಕ್ಲಬ್ ಗ೦ಗೊಳ್ಳಿ ಮತ್ತು ಜಿ.ಎಸ್.ವಿ.ಎಸ್ ಅಸೋಷಿಯೇಶನ್ನಿನ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ  ಶಾಲಾ ಮಟ್ಟದ ಪ್ರತಿಭಾ ವೃಷ್ಟಿ ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊ೦ಡು ಮಾತನಾಡಿದರು.   ಮುಖ್ಯ ಅತಿಥಿ ರೋಟರಿ ಕ್ಲಬ್ ಗ೦ಗೊಳ್ಳಿಯ ಅಧ್ಯಕ್ಷರಾದ ಪ್ರದೀಪ ಡಿ.ಕೆ ಮಾತನಾಡಿ  ವಿದ್ಯಾರ್ಥಿಗಳು ಶಾಲಾ ಅವಧಿಯಲ್ಲಿ ಸಿಗುವ ಬೆಳವಣಿಗೆಯ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎ೦ದು ಅಭಿಪ್ರಾಯಪಟ್ಟರು.ಜಿ.ಎಸ್.ವಿ.ಎಸ್ ಅಸೋಷಿಯೇಶನ್ನಿನ ಕಾರ‍್ಯದರ್ಶಿ ಹೆಚ್ ಗಣೇಶ ಕಾಮತ್, ಸರಸ್ವತಿ ವಿದ್ಯಾಲಯದ ಆಡಳಿತ ಮ೦ಡಳಿಯ ಕಾರ‍್ಯದರ್ಶಿ ಎನ್ ಸದಾಶಿವ ನಾಯಕ್ ಮತ್ತು ಕ್ಲಸ್ಟರ್ ಮಟ್ಟದ ಸಿಆರ್‌ಪಿ…

Read More

ಕುಂದಾಪುರ: ಕೆನರಾ ಗೂಡ್ಸ್ ಟ್ರಾನ್ಸ್ ಪೋರ್ಟ್ ಮ೦ಗಳೂರು ಗ೦ಗೊಳ್ಳಿ ವತಿಯಿ೦ದ ಗ೦ಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಮಧ್ಯಾಹ್ನದ ಉಚಿತ ಭೋಜನ ನಿಧಿಗೆ ದೇಣಿಗೆಯಾಗಿ ಹತ್ತು ಸಾವಿರ ರೂಪಾಯಿಗಳನ್ನು ನೀಡಲಾಯಿತು. ಸ೦ಬ೦ಧಿತ ಮೊಬಲಗನ್ನು ಉದ್ಯಮಿ ನಾಗೇ೦ದ್ರ ಪೈ ಅವರು ಕಾಲೇಜಿನ ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಅವರಿಗೆ ಹಸ್ತಾ೦ತರಿಸಿದರು. ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಪ್ರಸ್ತುತ ಚಿಕ್ಕಮಗಳೂರಿನಲ್ಲಿ ವೈದ್ಯೆಯಾಗಿ ಕಾರ‍್ಯನಿರ್ವಹಿಸುತ್ತಿರುವ ಡಾ.ಸೌಮ್ಯ ಭಟ್ ಅವರು ದೇಣಿಗೆಯಾಗಿ ಹತ್ತು ಸಾವಿರ ರೂಪಾಯಿಗಳನ್ನು ನೀಡಿದರು. ಸೌಮ್ಯರ ತಾಯಿ ಕೆನರಾ ಬ್ಯಾ೦ಕ್ ಗ೦ಗೊಳ್ಳಿಯ ಉದ್ಯೋಗಿ ಇ೦ದಿರಾ ಭಟ್ ಅವರು ಸ೦ಬ೦ಧಿತ ಮೊಬಲಗನ್ನು ಕಾಲೇಜಿನ ಆಡಳಿತ ಮ೦ಡಳಿಯ ಸದಸ್ಯ ಹೆಚ್ ಗಣೇಶ್ ಕಾಮತ್ ಅವರಿಗೆ ಹಸ್ತಾ೦ತರಿಸಿದರು.ಪ್ರಾ೦ಶುಪಾಲ ಆರ್ ಎನ್ ರೇವಣ್ ಕರ್ ಉಪಸ್ಥಿತರಿದ್ದರು  ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ

Read More

ಗ೦ಗೊಳ್ಳಿ: ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಯಕ್ಷಗಾನಗಳು ಸಮಾಜಿಕ ಕಳಕಳಿ ಮೂಡಿಸುವ ಅ೦ಶಗಳನ್ನು ಹೆಚ್ಚುಹೆಚ್ಚಾಗಿ ಆಳವಡಿಸಿಕೊಳ್ಳುತ್ತಿರುವುದು ಅಭಿನ೦ದನೀಯ ಸ೦ಗತಿ ಎ೦ದು ಗ೦ಗೊಳ್ಳಿ ಗ್ರಾಮ ಪ೦ಚಾಯತ್ ಸದಸ್ಯೆ ಶ್ರೀಮತಿ ಚೆ೦ದು ಅವರು ಹೇಳಿದರು. ಅವರು ಇತ್ತೀಚೆಗೆ ಮೇಲ್ ಗ೦ಗೊಳ್ಳಿಯ ಡಾ.ಅ೦ಬೇಡ್ಕರ್ ಭವನದಲ್ಲಿ ಕೇ೦ದ್ರ ಸ೦ಗೀತ ಮತ್ತು ನಾಟಕ ವಿಭಗ, ನೆಹರು ಯುವ ಕೇ೦ದ್ರ ಉಡುಪಿ, ರೋಟರಿ ಮಿಡ್ ಟೌನ್ ಕು೦ದಾಪುರ ಮತ್ತು ಡಾ.ಬಿ.ಆರ್ ಅ೦ಬೇಡ್ಕರ್ ಯುವಕ ಮ೦ಡಲ ಮೇಲ್ ಗ೦ಗೊಳ್ಳಿ ಇವರ ಸ೦ಯುಕ್ತ ಆಶ್ರಯದಲ್ಲಿ ಯಕ್ಷ ದೇಗುಲ ಬೆ೦ಗಳೂರು ತ೦ಡದವರಿ೦ದ  ನಡೆದ ಸ್ವಚ್ಛಭಾರತ ವಿಚಾರವನ್ನೊಳಗೊ೦ಡ ಪ್ರಕೃತಿ ಸ೦ಧಾನ ಯಕ್ಷಗಾನ ಪ್ರದರ್ಶನದ ಪೂರ್ವಭಾವಿ ಸಭಾಕಾರ‍್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿಕೊ೦ಡು ಹೇಳಿದರು. ಮುಖ್ಯ ಅತಿಥಿಗಳಾಗಿ ದಿನೇಶ್ ಜಿ, ಭಾಗವತ ಲ೦ಬೋದರ ಹೆಗ್ಡೆ ಉಪಸ್ಥಿತರಿದ್ದರು. ಯುವಕ ಮ೦ಡಲದ ಸ್ಥಾಪಕ ಅಧ್ಯಕ್ಷರಾದ ಭಾಸ್ಕರ್ ಎಚ್ ಜಿ ಕಾರ‍್ಯಕ್ರಮ ನಿರೂಪಿಸಿದರು.ರ೦ಜಿತ್ ವ೦ದಿಸಿದರು. ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

Read More

ಕುಂದಾಪುರ: ರೋಟರ‍್ಯಾಕ್ಟ್ ಕ್ಲಬ್ ಕುಂದಾಪುರ ಇದರ 2015-16ನೇ ಸಾಲಿನ ಪದಪ್ರದಾನ ಸಮಾರಂಭ ಕುಂದಾಪುರದ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಜರುಗಿತು. ನೂತನ ಅಧ್ಯಕ್ಷ ರಾಘವೇಂದ್ರ ಕೆ.ಸಿ ಹಾಗೂ ಪದಾಧಿಕಾರಿಗಳಿಗೆ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಪದಗ್ರಹಣ ನೆರವೇರಿಸಿದರು. ಉದ್ಯಮಿ ಸುರೇಂದ್ರ ಶೆಟ್ಟಿ, ರೋಟರ‍್ಯಾಕ್ಟ್ ವಲಯಾಧಿಕಾರಿ ಮಂಜಪ್ಪ ಡಿ ಗೋಣಿ, ರೋಟರ‍್ಯಾಕ್ಟ್ ಛೇರ್‌ಮೆನ್ ಎಚ್. ಎಸ್. ಹತ್ವಾರ್ ಉಪಸ್ಥಿತರಿದ್ದರು. ಪೂರ್ವಾ ಸಭಾಪತಿ ರಾಘವೇಂದ್ರ ಚರಣ ನಾವಡ ರೋಟರ‍್ಯಾಕ್ಟ್ ಕಾರ್ಯಚಟುವಟಿಕೆ ಮಾಹಿತಿ ನೀಡಿದರು. ಹರ್ಷವರ್ಧನ ಖಾರ್ವಿ ಪರಿಚಯಿಸಿದರು. ಪೂರ್ವಾಧ್ಯಕ್ಷ ಸಾಯಿನಾಥ ಶೇಟ್ ಸ್ವಾಗತಿಸಿದರು. ಹುಸೇನ್ ಹೈಕಾಡಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಹರ್ಷ ಶೇಟ್ ವಂದಿಸಿದರು

Read More