ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಕೃಪೆಯಿಂದಾಗಿ ತಾಲೂಕಿನ ತೆಕ್ಕಟ್ಟೆಯಿಂದ ಆರಂಭಗೊಂಡು ಶಿರೂರಿನ ವರೆಗೂ ಮಳೆಗಾಲದಲ್ಲಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು ಕಾಮಗಾರಿ ಪೂರ್ಣಗೊಳ್ಳುವವರೆಗೆ ಪರಿತಪಿಸುವ ಸ್ಥಿತಿ ನಿರ್ಮಾಣಗೊಂಡಿದೆ. ಅಲ್ಲಲ್ಲಿ ನಡೆಯುತ್ತಿರುವ ಅರೆಬರೆ ಕಾಮಗಾರಿ ವಾಹನ ಸವಾರು ಅದರಲ್ಲಿಯೂ ದ್ವಿಚಕ್ರ ವಾಹನ ಸವಾರರ ನಿದ್ದೆಗೆಡಿಸಿದ್ದು, ಬೆಸಿಗೆಯ ಧೂಳು, ಮಳೆಗಾಲದ ಕೆಸರಿನಿಂದಾಗಿ ಕಂಗೆಟಿದ್ದಾರೆ. ಕುಂದಾಪುರ ಶಾಸ್ತ್ರೀ ವೃತ್ತದ ಬಳಿ ನಡೆಯುತ್ತಿರುವ ಮೇಲ್ಸೆತುವೆ ಕಾಮಗಾರಿಯಿಂದಾಗಿ ಒಂದೆಡೆ ಸಂಚಾರ ವ್ಯವಸ್ಥೆಯೇ ಅಸ್ಥವ್ಯಸ್ಥಗೊಂಡಿದ್ದರೇ, ಇನ್ನೊಂದಡೆ ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ನೀರು ನಿಂತು ವಾಹನ ಸವಾರರಿಗೆ ತೊಂದರೆಯನ್ನುಂಟುಮಾಡುತ್ತಿದೆ. ಪಾದಚಾರಿಗಳಂತೂ ಈ ಮಾರ್ಗದಲ್ಲಿ ಸಂಚರಿಸುವದೇ ಅಪಾಯ ಎಂಬ ಸ್ಥಿತಿ ನಿರ್ಮಾಣಗೊಂಡಿದೆ. ಕುಂದಾಪ್ರ ಡಾಟ್ ಕಾಂ ವರದಿ. ಕಳೆದ ಮುರು ವರ್ಷಗಳಿಂದ ಮಂದಗತಿಯಲ್ಲಿ ಸಾಗುತ್ತಿರುವ ಹೆದ್ದಾರಿ ಕಾಮಗಾರಿಯಿಂದಾಗಿ ಗಾಂಧಿ ಮೈದಾನದ ಎದುರು ಈ ಅವ್ಯವಸ್ಥೆ ತಲೆದೂರಿದ್ದು, ಜನಸಂದಣಿ ಇರುವ ಪ್ರದೇಶದಲ್ಲಾದರೂ ಶೀಘ್ರ ಕಾಮಗಾರಿ ಪೂರ್ಣಗೊಳಿಸಿದರೇ ನಿತ್ಯ ಎದುರಾಗುವ ಅಪಾಯಕ್ಕೆ ಕೊಂಚ ಮುಕ್ತಿ ದೊರೆಯಲಿದೆ ಎಂದು ಸಾರ್ವಜನಿಕರು ಅಭಿಪ್ರಾಯ ಪಡುತ್ತಾರೆ. ಕುಂದಾಪ್ರ…
Author: Editor Desk
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ/ಕತಾರ್: ಕರ್ನಾಟಕ ಸಂಘ ಕತಾರ್‌ನ ನೂತನ ಉಪಾಧ್ಯಕ್ಷರಾಗಿ ಬೈಂದೂರು ಮೂಲದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತಿಚಿಗೆ ಕತಾರ್‌ನ ಭಾರತೀಯ ಸಾಂಸ್ಕೃತಿಕ ಕಚೇರಿಯಲ್ಲಿ ಜರುಗಿದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಆಡಳಿತ ಮಂಡಳಿಯ ನಿರ್ಣಯವನ್ನು ಸದಸ್ಯರು ಸರ್ವಾನುಮತದಿಂದ ಸಮ್ಮತಿಸಿದ್ದಾರೆ. ಸ್ನೇಹಮಯಿ ಸುಬ್ರಹ್ಮಣ್ಯ: ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ದುಬೈನ ಕತಾರ್‌ನಲ್ಲಿ ಪಸರಿಸುತ್ತಿರುವ ಕತಾರ್‌ನ ಕರ್ನಾಟಕ ಸಂಘದಲ್ಲಿ ಸಕ್ರಿಯವಾಗಿ ತೊಡಗಿಕೊಂಡು ವಿವಿಧ ಪದವಿಗಳನ್ನು ಅಲಂಕರಿಸಿ ತಮ್ಮದೇ ಆದ ಛಾಪು ಮೂಡಿಸಿರುವ ಸುಬ್ರಹ್ಮಣ್ಯ ಅವರನ್ನು ಪ್ರಸಕ್ತ ಸಾಲಿನಲ್ಲಿ ಉಪಾಧ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಎಚ್.ಕೆ. ಮಧು ಹಾಗೂ ಪ್ರಧಾನ ಕಾರ್ಯದರ್ಶಿ ಸಂದೇಶ್ ಆನಂದ್ ಅವರ ಸಾರಥ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಮುನ್ನಡೆಯುತ್ತಿರುವ ಕತಾರ್‌ನ ಕರ್ನಾಟಕ ಸಂಘವು ಈವರೆಗೆ ಹತ್ತಾರು ಕನ್ನಡಪರ, ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಭಾರತೀಯರ ಸಂಘ-ಸಂಸ್ಥೆಗಳ ಪೈಕಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಇದೀಗ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಸುಬ್ರಹ್ಮಣ್ಯ ಹೆಬ್ಬಾಗಿಲು 2013-15ನೇ ಸಾಲಿನಲ್ಲಿ ಕರ್ನಾಟಕ ಸಂಘ ಕತಾರಿನ ಸದಸ್ಯತ್ವ ನೋಂದಣಿ ಸಂಚಾಲಕರಾಗಿ,…
ಹೈಕೋರ್ಟ್ ತಡೆಯಾಜ್ಞೆ ತೆರವಾದರೂ ಶ್ರೀಗಳನ್ನು ಪೂಜೆಗೆ ಆಹ್ವಾನಿಸದ ಜಿಲ್ಲಾಧಿಕಾರಿ ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲೊಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಜನ್ಮಾಷ್ಠಮಿಯಂದು ವಾಡಿಕೆಯಂತೆ ರಾಮಚಂದ್ರಪುರ ಮಠಾಧೀಶ ರಾಘವೇಶ್ವರ ಭಾರತಿ ಸ್ವಾಮೀಜಿ ಅವರಿಂದ ನಡೆಯಬೇಕಿದ್ದ ವಿಶೇಷ ಪೂಜೆ ಹಾಗೂ ಕುಂಭಾಭಿಷೇಕ ಅವರ ಅನುಪಸ್ಥಿತಿಯಲ್ಲಿ ಎರಡನೇ ವರ್ಷವೂ ನೆರವೇರಿದೆ. ದೇವಿಗೆ ಪೂಜೆ ನಡೆಸಲು ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿ ಮಧ್ಯಂತರ ಆದೇಶ ನೀಡಿದ ಹೊರತಾಗಿಯೂ ಶ್ರೀಗಳನ್ನು ದೇವಳಕ್ಕೆ ಆಹ್ವಾನಿಸದೇ ಜಾರಿಕೊಂಡಿರುವ ಜಿಲ್ಲಾಡಳಿತ ಬಗ್ಗೆ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2006ರಿಂದ ಶ್ರೀಗಳಿಂದ ದೇವರಿಗೆ ವಿಶೇಷ ಪೂಜೆ, ಕುಂಭಾಭಿಷೇಕ ನಡೆಯುತ್ತಿತ್ತು. ಆದರೆ ರಾಘವೇಶ್ವರ ಸ್ವಾಮೀಜಿಯ ಮೆಲೆ ಕಳಂಕ ಎದುರಾಗಿದ್ದರಿಂದ ಕಳೆದ ವರ್ಷ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ವಿಶೇಷ ಶ್ರೀಗಳಿಂದ ಪೂಜೆ ನಡೆಸಲು ತಡೆಯೊಡ್ಡಿದ್ದರು. ಇದನ್ನು ಪ್ರಶ್ನಿಸಿ ಕೊಲ್ಲೂರು ದೇವಸ್ಥಾನದ ಪ್ರಧಾನ ಅರ್ಚಕರಾದ ನರಸಿಂಹ ಅಡಿಗ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಅಬ್ದುಲ್ ನಜೀರ್ ಅವರ…
ತಾಪಂ-ಜಿಪಂ ಚುನಾವಣೆ. ಕುಂದಾಪುರ ತಾಲೂಕಿನಲ್ಲಿ ಯಾರಿಗೆ ಮಣೆ. ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಫೆ.20ರಂದು ನಡೆಯಲಿರುವ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗೆ ಭೂಮಿಕೆ ಸಿದ್ದಗೊಂಡಿದ್ದು ಟಿಕೆಟಿಗಾಗಿ ಭಾರಿ ಪೈಪೋಟಿ ನಡೆಯುತ್ತಿದೆ. ತಾಪಂ ಗಿಂತ ಜಿಪಂಗೆ ಸ್ವರ್ಧಿಸಲು ಹಲವೆಡೆ ಆಕಾಂಕ್ಷಿಗಳ ಬೇಡಿಕೆ ಇಟ್ಟಿರುವುದರಿಂದ ಯಾರಿಗೆ ನೀಡಿದರೆ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿ ಪಕ್ಷದ ನಾಯಕರುಗಳಿದ್ದಾರೆ. ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸಲು ಕೊನೆ ಕ್ಷಣದ ತಯಾರಿ ನಡೆಸಲಾಗಿದೆ ಎನ್ನಲಾಗಿದ್ದು, ಸದ್ಯದಲ್ಲಿ ಅಂತಿಮ ಪಟ್ಟಿ ಹೊರಬೀಳಲಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನು ಭೇದಿಸಿ ತಾಪಂ ಹಾಗೂ ಜಿಪಂ ನಲ್ಲಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಮತ್ತೆ ತನ್ನ ಪ್ರಾಬಲ್ಯ ಮೆರೆಯುವ ತವಕದಲ್ಲಿದ್ದರೇ, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಹಾಗೂ ಜಿಲ್ಲೆಯಲ್ಲಿ ತಮ್ಮದೇ ಪಕ್ಷದ ಶಾಸಕರು ಹಾಗೂ ಮಂತ್ರಿಗಳಿರುವುದರಿಂದ ಕುಂದಾಪುರ ತಾಲೂಕಿನ ಹೆಚ್ಚಿನ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುವುದು ಕಷ್ಟವಾಗಲಾರದು ಎಂದು ಕಾಂಗ್ರೆಸಿಗರು ಹೇಳುತ್ತಿದ್ದಾರೆ. ಈ ನಡುವೆ 10 ಜಿಲ್ಲಾ ಪಂಚಾಯತ್…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಕೋಡಿ ಸಮುದ್ರದ ತೆರೆಗಳಿಗೆ ಕಣ್ಣಾಗಿ, ತಂಪು ಗಾಳಿಗೆ ಮುಖವೊಡ್ಡುತ್ತಿದ್ದ ಪ್ರವಾಸಿಗರಿಗೆ ಈಗ ವೀಕ್ಷಿಸಲು ಮತ್ತೊಂದು ತಾಣ ಸಿದ್ದಗೊಂಡಿದೆ. ನೀವೊಮ್ಮೆ ಅಲ್ಲಿನ ಶ್ವೇತವರ್ಣದ ಕಟ್ಟಡದ ಒಳಹೊಕ್ಕು ವಾಸ್ತುಶಿಲ್ಪಕ್ಕೆ ಆಧುನಿಕ ಟಚ್ ನೀಡಿರುವುದನ್ನು ನೋಡಿದರೆ ಒಂದು ಬೆರಗು, ಸಣ್ಣ ಮನೊಲ್ಲಾಸ ದೊರಕದೆ ಇರದು. ಅಷ್ಟು ವಿನೂತನ, ವಿಶಿಷ್ಟವಾದ ಕಟ್ಟಡ ನಿಮ್ಮನ್ನೊಮ್ಮೆ ಅತ್ತ ಕಡೆ ಸೆಳೆಯುವಂತೆ ಮಾಡುತ್ತದೆ. ಅದು ಸಮುದ್ರದ ಅಲೆಗಳಿಗೆ ಅಭಿಮುಖವಾಗಿ ಕೊಡಿಯಲ್ಲಿ ನಿರ್ಮಾಣಗೊಂಡಿರುವ ಬದ್ರಿಯಾ ಜುಮಾ ಮಸೀದಿ. ಮಸೀದಿಯು ಬರಿಯ ಬೆರಗಿನ ಕಟ್ಟಡವಾಗಿರದೇ ಶೂನ್ಯ ವಿದ್ಯುತ್, ಪರಿಸರ ಸ್ನೇಹಿ ಹಸಿರು ಮಸೀದಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. [quote font_size=”15″ bgcolor=”#ffffff” bcolor=”#61d60e” arrow=”yes” align=”right”]* ಸರ್ವ ಸಮುದಾಯಗಳೊಳಗೆ ಸಾಮರಸ್ಯವನ್ನು ಕಾಣುವ ಇಸ್ಲಾಂನ ಆಧುನಿಕ ಪರಿಚಯವನ್ನು ಈ ಮಸೀದಿ ತೆರದಿಡಲಿದೆ. ಆಧುನಿಕ ತಂತ್ರಜ್ಞಾನಗಳ ಮೂಲಕ ನಿರ್ಮಾಣವಾಗಿರುವ ಮಸೀದಿಯ ವಿನ್ಯಾಸವು ಇಸ್ಲಾಮಿಕ್ ವಾಸುಶಿಲ್ಪದಲ್ಲೊಂದು ಕ್ರಾಂತಿಕಾರಕ ಹೆಜ್ಜೆ. ಅಭಿವೃದ್ಧಿಯೆಡೆಗೆ ಭಾರತದ ನಡಿಗೆಯಲ್ಲಿ ನಮ್ಮದೊಂದು ಪುಟ್ಟ ಕೊಡುಗೆ. – ಸೈಯ್ಯದ್ ಮಹಮ್ಮದ್ ಬ್ಯಾರಿ, ಬ್ಯಾರೀಸ್…
ವಿಶೇಷ ವರದಿ: ಚಂದ್ರ ಕೆ. ಹೆಮ್ಮಾಡಿ. || ಕುಂದಾಪ್ರ ಡಾಟ್ ಕಾಂ | ಕಣ್ಮನ ಸೆಳೆಯುವ ಬಣ್ಣ, ಘಮಘಮ ಸುವಾಸನೆ, ಮೋಹಕ ಚೆಲುವು, ಗಾತ್ರ ಚಿಕ್ಕದಾದರೂ ಹೆಚ್ಚು ಬಾಳಿಕೆಯ ಗುಣ-ವೈಶಿಷ್ಟ್ಯಗಳಿಂದಾಗಿ ಕರಾವಳಿ ಭಾಗದಲ್ಲಿ ಪ್ರಸಿದ್ಧವಾದ ವಾರ್ಷಿಕ ಬೆಳೆ ಹೆಮ್ಮಾಡಿ ಸೇವಂತಿ ಹೂವುಗಳು ಈ ಹಳ್ಳಿಯ ರೈತರ ಗದ್ದೆಗಳಲ್ಲಿ ಅರಳಿ ಊರೆಲ್ಲಾ ಘಮಘಮ ಪರಿಮಳ ಬೀರುತ್ತಿವೆ. ಹೆಮ್ಮಾಡಿ ಗ್ರಾಮದ ಆಸುಪಾಸಿನಲ್ಲಿ ಮಾತ್ರ ಬೆಳೆಯಲಾಗುವ ವಿಶಿಷ್ಟ ಪುಷ್ಪವೇ ಹೆಮ್ಮಾಡಿ ಸೇವಂತಿ. ಗ್ರಾಮದ ಕಟ್ಟು, ಹೊಸ್ಕಳಿ, ಹರೆಗೋಡು, ಮೂಡಾಡಿ ಮೊದಲಾದೆಡೆಯ ನೂರಾರು ಬೆಳೆಗಾರರು ತಮ್ಮ ಗದ್ದೆಗಳಲ್ಲಿ ಪಾರಂಪರಿಕವಾಗಿ ಸೇವಂತಿಯನ್ನು ಬೆಳೆಯುತ್ತಿದ್ದಾರೆ. ಜುಲೈ ತಿಂಗಳಿನಿಂದಲೇ ಸೇವಂತಿ ಸಸ್ಯ ಸಂವರ್ಧನೆಯ ಕಾಯಕ ಆರಂಭವಾಗುತ್ತದೆ. ನಂತರ ಹಂತಹಂತವಾಗಿ ಗೊಬ್ಬರ ಉಪಚಾರ, ಔಷಧೋಪಚಾರ, ಕಳೆನಿಯಂತ್ರಣ ಮೊದಲಾದ ಕಾರ್ಯಗಳು ಪೂರ್ಣಗೊಂಡು ನಳನಳಿಸುವ ಅಂದಗಾತಿ ಸೇವಂತಿ ಪುಷ್ಪವು ಕೃಷಿಕರ ಬುಟ್ಟಿಯನ್ನು ಹಾಗೂ ತುತ್ತಿನ ಬುತ್ತಿಯನ್ನು ತುಂಬುವುದು ದಶಂಬರ-ಜನವರಿ ತಿಂಗಳ ಸಮಯದಲ್ಲಿ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಮುಂದಿನ ಮೂರು ತಿಂಗಳು ಇಲ್ಲಿನ ರೈತರಿಗೆ ಸೇವಂತಿಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಳೆದ ಕೆಲವು ದಿನಗಳಿಂದ ಸಾಕಷ್ಟು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದ್ದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಅವರ ವರ್ಗಾವಣೆ ವಿಚಾರ ಒಂದು ತಾರ್ಕಿಕ ಅಂತ್ಯಕ್ಕೆ ಬಂದು ನಿಲ್ಲುವ ಲಕ್ಷಣಗಳು ಮೇಲ್ನೊಟಕ್ಕೆ ಗೋಚರಿಸುತ್ತಿದೆ. ಆದರೆ ಉಡುಪಿ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಎಸ್ಪಿ ವರ್ಗಾವಣೆ ವಿಚಾರನನ್ನು ಅಲ್ಲಗಳೆದಿದ್ದು ಸದ್ಯಕ್ಕೆ ಆ ಪ್ರಸ್ತಾಪವಿಲ್ಲವೆಂದಿದ್ದಾರೆ. ಡಿಸೆಂಬರ್ 31ರಂದು ಅಣ್ಣಾಮಲೈ ಅವರು ಉಡುಪಿಯಿಂದ ವರ್ಗಾವಣೆಗೊಳ್ಳಲಿದ್ದಾರೆ ಎಂಬ ಸಂದೇಶ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿ ಹರಿದಾಡಿ, ಜಿಲ್ಲಾದ್ಯಂತ ಸಾರ್ವಜನಿಕರು ಪ್ರತಿಭಟನೆ, ಮುಷ್ಕರ ನಡೆಸಲು ಮುಂದಾಗಿದ್ದರು. ಕೊನೆಗೆ ಸ್ವತಃ ಅಣ್ಣಾಮಲೈ ಅವರೇ ಇದು ಸರಕಾರದ ಆದೇಶದಂತೆ ನಡೆಯುವ ಪ್ರಕ್ರಿಯೆ. ಈ ವಿಚಾರಕ್ಕೆ ಸಾರ್ವಜನಿಕ ಸಂಘಟನೆಗಳು ಪ್ರತಿಭಟಿಸುವುದು ಸಮಂಜಸವಲ್ಲ ಎಂದು ವಿನಂತಿಸಿಕೊಂಡ ಮೇಲೆ ಎಲ್ಲವೂ ತಣ್ಣಗಾಗಿತ್ತು. ಆದರೆ ಮತ್ತೆ ಎಸ್ಪಿ ಅವರ ವರ್ಗಾವಣೆ ದೃಢ ಪಟ್ಟಿರುವ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಸಂದೇಶ ಹರಿದಾಡುತ್ತಿದೆ. ಅಣ್ಣಾಮಲೈ ಅವರು ಬೆಂಗಳೂರು ಪೂರ್ವ ವಿಭಾಗಕ್ಕೆ ಡಿಸಿಪಿಯಾಗಿ ಭಡ್ತಿ ಪಡೆದು ವರ್ಗಾವಣೆಗೊಂಡಿದ್ದಾರೆ ಎಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಒಂದಲ್ಲಾ ಒಂದು ಕಾರಣದಿಂದಾಗಿ ಕುಂದಾಪುರ ಸಮಸ್ಯೆಗಳ ಆಗರವಾಗುತ್ತಿದೆ. ಕೆಲಸ ಸಮಯದ ಹಿಂದೆ ಹೊಸ ಬಸ್ಸು ನಿಲ್ದಾಣದಲ್ಲಿರುವ ಶೌಚಾಲಯದ ಗುಂಡಿಯ ಹಾಸಿನ ಮೇಲೆ ಸರ್ಕಾರಿ ಬಸ್ಸೊಂದು ಚಲಿಸಿ ಟಾಂಕಿಯ ಮೇಲ್ಛಾವಣಿಯು ಒಡೆದು ಇಡೀ ಬಸ್ಸು ನಿಲ್ದಾಣವೇ ವಾಸನಾಮಯವಾಗಿ ಮಾರ್ಪಟ್ಟಿದೆ. ಸುಲಭ್ ಶೌಚಾಲಯದ ಯೋಜನೆಯಡಿ ಆರಂಭಿಸಿದರುವ ಈ ಶೌಚಾಲಯ ನಿರ್ವಹಣೆಗೆ ಎರಡು ಸಿಬ್ಭಂದಿಗಳಿದ್ದಾರೆ. ಅವರು ಈ ಸಮಸ್ಯೆಯನ್ನು ಕುಂದಾಪುರ ಪುರಸಭೆಯ ಗಮನಕ್ಕೆ ತಂದಿದ್ದರೂ ಯಾವುದೇ ಪ್ರತಿಕ್ರಿಯೆ ಬಾರದ್ದರಿಂದ ತಾತ್ಕಾಲಿಕವಾಗಿ ಟಾಂಕಿ ಒಡೆದ ಕಡೆ ಸಿಮೆಂಟ್ ಸೀಟ್ ಗಳನ್ನು ಹಾಕಿ ಮುಚ್ಚಿದ್ದಾರೆ. ಆದರೆ ವಾಸನೆ ಮಾತ್ರ ಸಂಪೂರ್ಣವಾಗಿ ನಿಂತಿಲ್ಲ (ಕುಂದಾಪ್ರ ಡಾಟ್ ಕಾಂ) ಇನ್ನೂ ಶೌಚಾಲಯದಲ್ಲಿ ಆಗಾಗ ತಲೆದೋರುವ ನೀರಿನ ಆಭಾವದಿಂದ ಸಾರ್ವಜನಿಕರ ರೋಷಕ್ಕೆ ತುತ್ತಾಗುವ ಮೇಲ್ವಿಚಾರಕರು ಈ ಪರಿಸರದಿಂದಲೇ ನಾಪತ್ತೆಯಾಗಿ ಬಿಡುವುದರಿಂದ ಪ್ರಯಾಣಿಕರ ತೊಂದರೆಯಾಗುತ್ತಿದೆ. ಪರವೂರಿನ ಮಹಿಳಾ ಪ್ರಯಾಣಿರಂತೂ ಸಾಕಷ್ಟು ಮುಜುಗರಕ್ಕೀಡಾಗುವ ಪ್ರಸಂಗಗಳೂ ಇಲ್ಲಿ ಸರ್ವೇ ಸಾಮಾನ್ಯ ಎಂಬಂತಾಗಿ ಹೋಗಿದೆ. ನೀರಿನ ಸಮಸ್ಯೆ ಪರಿಹಾರಕಾಣುವಷ್ಟರಲ್ಲಿ ಶೌಚಾಲಯದ ಗುಂಡಿ ತುಂಬಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ವಿಭಿನ್ನವಾದ ಯೋಚನೆ ಹಾಗೂ ಬರಹದ ಮೂಲಕ ಕನ್ನಡ ಪತ್ರಿಕೋದ್ಯಮಕ್ಕೊಂದು ಹೊಸ ಆಯಾಮ ದೊರಕಿಸಿಕೊಟ್ಟವರಲ್ಲಿ ಸ್ಟಾರ್ ಸಂಪಾದಕ ವಿಶ್ವೇಶ್ವರ ಭಟ್ ಅವರ ಹೆಸರು ದೊಡ್ಡದು. ತನ್ನ ನಡೆ ನುಡಿಯಿಂದಲೇ ಸದ್ದು ಮಾಡುವ ಭಟ್ಟರು ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಸುದ್ದಿಗೆ ಗುದ್ದು ನೀಡುವ ಹೊಸ ಸಾಹಸದೊಂದಿಗೆ! ಪತ್ರಿಕೆಗಳ ಬೆಲೆ ಗಗನಕ್ಕೇರುತ್ತಿದ್ದ ಕಾಲದಲ್ಲಿ, ಪತ್ರಿಕೆಗಳೆಂದರೆ ಹೀಗೆ ಮಾತ್ರ ಇರಬೇಕು ಎಂದು ಅಜ್ಜ ನೆಟ್ಟ ಆಲದ ಮರಕ್ಕೆ ನೇತು ಬಿದ್ದು ಹೊಸತನಕ್ಕೆ ಮಂಕು ಹಿಡಿಸಿ ಕುಳಿತಿದ್ದ ಹೊತ್ತಿನಲ್ಲಿ ಸಾಮಾನ್ಯನಿಗೂ ಪತ್ರಿಕೆ ದೊರಕುವ ಮತ್ತು ಓದುಗನಲ್ಲಿ ದಿನವೂ ಅಷ್ಟೇ ಪ್ರೀತಿಯಿಂದ ಪತ್ರಿಕೆಯನ್ನು ಸ್ವಾಗತಿಸುವ ಗುಣವನ್ನು ಬೆಳೆಸಿದರು ಭಟ್ಟರು. ವಿಜಯ ಕರ್ನಾಟಕ ಆರಂಭಗೊಂಡಾಗ ಅವರ ಪ್ರಯೋಗಶೀಲತೆಗೆ ತೆರೆದುಕೊಂಡ ರೀತಿ ಬೆರಗು ಮೂಡಿಸಿತ್ತು. ಅದು ಅಂಕಿಅಂಶಗಳಲ್ಲಿ ಮಾತ್ರವೇ ಆಗಿರದೇ ಜನರ ಮನಸ್ಸಿನಲ್ಲಿಯೂ ನಂ.1 ಪತ್ರಿಕೆಯಾಗಿ ಉಳಿದಿತ್ತು. ತಾನೇ ಕಟ್ಟಿಬೆಳೆಸಿದ ಪತ್ರಿಕೆಯಿಂದ ಹೊರಬಂದ ಮೇಲೆ, ಕನ್ನಡಪ್ರಭ ಹಾಗೂ ಸುವರ್ಣ ವಾಹಿನಿಯಲ್ಲಿ ಇದ್ದಷ್ಟೂ ದಿನ ಹೊಸ ಪ್ರಯೋಗಗಳಗೆ…
ಶ್ರೀನಿವಾಸ್. Orphan 11yo Harry=wizard! Off 2wizard skool. Temp defeats Lord Voldie (whohe?)+ 3 headed dog 2 bag the stone. ಇದೇನು ಎಂದೇನು ಎಂದು ಯೋಚಿಸುತ್ತಿದ್ದೀರಾ? ಇದು ಇಂಗ್ಲಿಷಿನ ಪ್ರಸಿದ್ಧ ‘ಹ್ಯಾರಿ ಪಾಟರ್ ಅಂಡ್ ದಿ ಫಿಲಾಸಫರ್ಸ್ ಸ್ಟೋನ್’ನ ಸಂಕ್ಷಿಪ್ತ ಸ್ವರೂಪ. ಲಂಡನ್‌ನಸೂತರ್‌ಲ್ಯಾಂಡ್ ವಿಶ್ವವಿದ್ಯಾನಿಲಯದ ಪ್ರೊ. ಜಾನ್ ಸುತರ್‌ಲ್ಯಾಂಡ್ ಅವರು ಸುಮಾರು 200 ಪುಟಗಳ ಕಥೆಯನ್ನು 140 ಅಕ್ಷರಗಳಿಗೂ ಕಡಿಮೆ ಗಾತ್ರಕ್ಕೆ ಇಳಿಸುವ ಸಾಹಸನಡೆಸಿದ್ದಾರೆ. ಇದೊಂದೇ ಅಲ್ಲ, ಹತ್ತಾರು ಕಾದಂಬರಿಗಳು ಈಗಾಗಲೇ ಟ್ವಿಟರ್ ಹಾಗೂ ಎಸ್ಎಂಎಸ್‌ಗಳಲ್ಲಿ ಹಿಡಿಸುವ ಜಾಗಕ್ಕೆ ಸಂಕುಚಿತಗೊಂಡಿವೆ. ಮೇಲಿನ ಸಾಲು ಏನೆಂದು ಅರ್ಥವಾದರೆ, ನೀವು ಯುವ ಪೀಳಿಗೆಯ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದೀರಿ ಎಂದರ್ಥ. ಅಭಿನಂದನೆಗಳು. ಇಲ್ಲವಾದಲ್ಲಿಒಂದಿಷ್ಟು ಕಲಿತುಕೊಳ್ಳುವುದು ಒಳ್ಳೆಯದು. ಇದ್ಯಾವ ಸೀಮೆ ಭಾಷೆರೀ, ಇದನ್ನು ಓದಿ ಯಾರಾದರೂ ಖುಷಿ ಪಡೋಕೆ ಆಗುತ್ತಾ ಎಂದು ಬೈಯ್ಯುವುದಕ್ಕೆ ಮುಂಚೆ,ಸುದರ್‌ಲ್ಯಾಂಡ್ ಅವರ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕಿದೆ. ಇತ್ತೀಚಿನ ಅಧ್ಯಯನಗಳಪ್ರಕಾರ 18ರಿಂದ 25ರ ವಯೋಮಾನದವರೆಗಿನ ಯುವ…
