Author: Editor Desk

ಕುಂದಾಪುರ: ತಾಲೂಕಿನ ಹಳ್ಳಿಹೊಳೆ ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿಯ ನಿರ್ಲಕ್ಷ್ಯದಿಂದಾಗಿ, ರಾಷ್ಟ್ರಧ್ವಜ ರಾತ್ರಿ ತನಕ ಹಾರಾಡಿದ ಘಟನೆ ನಡೆದಿದೆ. ರಾತ್ರಿಯಾದರೂ ರಾಷ್ಟ್ರಧ್ವಜ ಕೆಳಗಿಳಿಸದ್ದನ್ನು ಕಂಡ ಸ್ಥಳೀಯರು, ಗ್ರಾ.ಪಂ. ಸದಸ್ಯರಿಗೆ, ತಾ.ಪಂ. ಕಾರ್ಯನಿರ್ವಾಣಾಧಿಕಾರಿ ಹಾಗೂ ಶಂಕರನಾರಾಯಣದ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಗ್ರಾ.ಪಂ. ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸಿದರು. ತಾ.ಪಂ. ಕಾರ್ಯನಿರ್ವಾಣಾಧಿಕಾರಿ ದೂರವಾಣಿಯ ಮೂಲಕ ಅಭಿವೃದ್ಧಿ ಅಧಿಕಾರಿ ಸುದರ್ಶನ್‌ ಅವರನ್ನು ಸಂಪರ್ಕಿಸಿ, ಕೂಡಲೇ ಧ್ವಜವನ್ನು ಕೆಳಗಿಳಿಸುವಂತೆ ಆದೇಶಿಸಿದರು. ಅಭಿವೃದ್ಧಿ ಅಧಿಕಾರಿ ಸುದರ್ಶನ್‌ ಅವರು ಸುಮಾರು 7.30ರ ವೇಳೆಗೆ ಗ್ರಾ.ಪಂ.ಗೆ ಆಗಮಿಸಿದರು. ಸ್ಥಳದಲ್ಲಿ ಉಪಸ್ಥಿತರಿದ್ದ ಗ್ರಾ.ಪಂ. ಸದಸ್ಯರಾದ ಮಾಧವ ಶೆಣೈ, ದಿನೇಶ್‌ ಯಡಿಯಾಳ, ಶಿವರಾಮ ಪೂಜಾರಿ, ರಾಘವೇಂದ್ರ ನಾಯ್ಕ, ಶ್ರೀಕರ ನಾಯ್ಕ, ಮಾಜಿ ಅಧ್ಯಕ್ಷ ರಾಮ ನಾಯ್ಕ, ಮುಖಂಡರಾದ ಪ್ರಭಾಕರ ನಾಯ್ಕ, ಉಮೇಶ್‌ ನಾಯ್ಕ ಅವರು ಅಭಿವೃದ್ಧಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಅನಂತರ ಧ್ವಜವನ್ನು ಕೆಳಗಿಳಿಸಿದರು. ಕುಂದಾಪುರ ತಾ.ಪಂ. ಕಾರ್ಯನಿರ್ವಾಣಾಧಿಕಾರಿ ಎನ್‌. ನಾರಾಯಣ ಸ್ವಾಮಿ ಶುಕ್ರವಾರ ಗ್ರಾ.ಪಂ.ಗೆ ಭೇಟಿ ನೀಡಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ…

Read More

ಕುಂದಾಪುರ: ಕಳೆದ ಮೂರು ವಾರಗಳಿಂದೀಚೆಗೆ ಉಡುಪಿ ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಣಿಕೆ, ಗೋ ಕಳ್ಳತನ ಪ್ರಕರಣಗಳು ಹೆಚ್ಚಾಗಿ ಸಂಭವಿಸುತ್ತಿದ್ದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ರಾತ್ರಿ ವೇಳೆ ರೌಂಡ್ಸ್‌ ನಡೆಸುವಂತೆ ಸೂಚಿಸಲಾಗಿದೆ. ಅಲ್ಲದೇ ಅಗಸ್ಟ್ 28ರ ಸಂಜೆ 4ಗಂಟೆಗೆ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆ ಅಕ್ರಮ ಗೋ ಸಾಗಾಣಿಕೆಗಳಲ್ಲಿ ಭಾಗಿಯಾಗಿದ್ದವರ ಪೆರೇಡನ್ನು ನಡೆಸುತ್ತಿದ್ದು, ಪ್ರಸ್ತುತ ಅವರ ಕಾರ್ಯಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಅಕ್ರಮ ಗೋ ಸಾಗಾಣಿಕೆ, ಗೋ ಕಳ್ಳತನ ಪ್ರಕರಣಗಳ ಬಗ್ಗೆ ಸಾರ್ವಜನಿಕರಿಗೆ ಏನಾದರೂ ಮಾಹಿತಿ ಇದ್ದಲ್ಲಿ, ಯಾವುದೇ ಸಮಯದಲ್ಲಾದರೂ ಜಿಲ್ಲಾ ನಿಯಂತ್ರಣ ಕೊಠಡಿಯ ದೂರವಾಣಿ  100 ಅಥವಾ 0820-2526444 ಗೆ ಕರೆ ಮಾಡಿ ತಿಳಿಸಿದರೇ, ಮಾಹಿತಿಗೆ ತಕ್ಷಣವೇ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ.

Read More

ಉಡುಪಿ: ಇಲ್ಲಿನ ಉಡುಪಿ ಪ್ರೆಸ್ ಫೋಟೋಗ್ರಾಫರ್ಸ್ ಅಸೋಸಿಯೇಶನ್ಸ್ (ಉಪ್ಪಾ) ಇದರ ನೂತನ ಅಧ್ಯಕ್ಷರಾಗಿ ವಿಜಯವಾಣಿ ಪತ್ರಿಕೆಯ ಹಿರಿಯ ಛಾಯಾಪತ್ರಕರ್ತ ಜನಾರ್ದನ್ ಕೊಡವೂರು ಆಯ್ಕೆಯಾಗಿದ್ದಾರೆ. ಜನಾರ್ಧನ್ ಮಲ್ಪೆ-ಕೊಡವೂರು ರೋಟರಿ ಕ್ಲಬ್ ಸೇರಿದಂತೆ ಹತ್ತಾರು ಸಂಘ-ಸಂಸ್ಥೆಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದಾರೆ. ಪ್ರತಿಭಾವಂತ ಛಾಯಾಪತ್ರಕರ್ತರಲ್ಲೊರ್ವರಾದ ಇವರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿ, ಗೌರವಗಳಿಗೂ ಅವರು ಭಾಜನರಾಗಿದ್ದಾರೆ. ಉಪ್ಪಾದ ಕಾರ್ಯದರ್ಶಿಯಾಗಿ ಗಣೇಶ್ ಕಲ್ಯಾಣಪುರ, ಕೋಶಾಧ್ಯಕ್ಷ ಆಸ್ಟ್ರೋಮೋಹನ್, ಪದಾಧಿಕಾರಿಗಳಾಗಿ ಹೇಮನಾಥ್ ಪಡುಬಿದ್ರೆ, ಶರತ್ ಕಾನಂಗಿ, ಉಮೇಶ್ ಕುಕ್ಕುಪಲ್ಕೆ, ಪ್ರಸನ್ನ ಕೊಡವೂರು ಆಯ್ಕೆಯಾಗಿರುತ್ತಾರೆ. ಕುಂದಾಪ್ರ ಡಾಟ್ ಕಾಂ- editor@kundapra.com

Read More

ಉಡುಪಿ: ಉಡುಪಿಯಲ್ಲಿ ಸೆ. 5 ಮತ್ತು 6ರಂದು ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಹಬ್ಬದ ಅಂಗವಾಗಿ ಉಡುಪಿ ಪ್ರಸ್‌ ಫೊಟೋಗ್ರಾಫ‌ರ್ ಅಸೋಸಿಯೇಶನ್‌ (ಉಪ್ಪಾ) ನೇತೃತ್ವದಲ್ಲಿ ಪರ್ಯಾಯ ಕಾಣಿಯೂರು ಶ್ರೀಕೃಷ್ಣ ಮಠ ಪ್ರಾಯೋಜಕತ್ವದಲ್ಲಿ “ಉಪ್ಪಾಮೂಡ್ಸ್‌ ಆಫ್ ಶ್ರೀಕೃಷ್ಣ ಜನ್ಮಾಷ್ಟಮಿ’ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ ಆಯೋಜಿಸಿದೆ. ಯಾವುದೇ ಶುಲ್ಕ ಇಲ್ಲ. ಒಬ್ಬರು ಗರಿಷ್ಠ 4 ಚಿತ್ರಗಳನ್ನು ಕಳಿಸಬಹುದು. ಚಿತ್ರದ ಅಗಲ 1,800 ಪಿಕ್ಸೆಲ್‌ನಲ್ಲಿದ್ದು, ಗರಿಷ್ಠ 2 ಮೆಗಾ ಬೈಟ್‌ (ಎಂಬಿ) ಒಳಗಿರಬೇಕು. ಚಿತ್ರಗಳನ್ನು uppaudupi@gmail.com ಗೆ ಸೆ. 20ರೊಳಗೆ ಕಳಿಸಬೇಕು. ಆಯ್ಕೆಯಾದ ಚಿತ್ರಗಳಿಗೆ 5,555 ರೂ., 3,333 ರೂ., 2,222 ರೂ. ನಗದು, 5 ಸಮಾಧಾನಕರ ಬಹುಮಾನ, ಸ್ಮರಣಿಕೆ ನೀಡಲಾಗುವುದು. ಚಿತ್ರಗಳು ಉಡುಪಿಯ ಈ ಬಾರಿಯ ಜನ್ಮಾಷ್ಟಮಿ – ವಿಟ್ಲಪಿಂಡಿ ಮಹೋತ್ಸವಕ್ಕೆ ಮಾತ್ರ ಸಂಬಂಧಪಟ್ಟದ್ದಾಗಿರಬೇಕು ಎಂದು ಉಪ್ಪಾ ಅಧ್ಯಕ್ಷ ಜನಾರ್ದನ ಕೊಡವೂರು ತಿಳಿಸಿದ್ದಾರೆ.

Read More

ಕುಂದಾಪುರ: ತಾಲೂಕಿನ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಮಹಾದ್ವಾರದ ಎದುರು ರಾ.ಹೆ 66ರಲ್ಲಿ ರಾಜ್ಯ ಸರಕಾರಿ ಬಸ್ಸೊಂದು ಪಿಕ್‌ಅಪ್‌ ವ್ಯಾನ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ವ್ಯಾನ್‌ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಆಯಾ ತಪ್ಪಿ ಬಿದ್ಧ ಘಟನೆ ನಡೆದಿದೆ. ಬಸ್ಸು ಧರ್ಮಸ್ಥಳದಿಂದ ಶಿರಸಿ ಕಡೆಗೆ ಸಾಗುತ್ತಿದ್ದು, ವ್ಯಾನ್‌ ಕುಂಭಾಸಿಯಿಂದ ಕುಂದಾಪುರಡೆಗೆ ಸಾಗುತ್ತಿತ್ತು. ಪಿಕ್‌ಅಪ್‌ ವ್ಯಾನ್‌ಗೆ ಹಿಂದಿನಿಂದ ನೇರವಾಗಿ ಡಿಕ್ಕಿ ಹೊಡೆದ ಪರಿಣಾಮ ವ್ಯಾನ್‌ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಆಯಾ ತಪ್ಪಿ ಬಿದ್ದಿದೆ. ಘಟನೆಯ ತೀವ್ರತೆಗೆ ವ್ಯಾನ್‌ ನುಜ್ಜುಗುಜ್ಜಾಗಿದೆ. ಘಟನೆಯ ತೀವ್ರತೆಗೆ ವ್ಯಾನ್‌ ನೇರವಾಗಿ ಬಂದು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಬ ತುಂಡಾಗಿದ್ದು ಹಾಗು ಜನ ನಿಬಿಡ ಪ್ರದೇಶವಾದ್ದರಿಂದ ಸಂಭವನಿಯ ಭಾರೀ ಅಪಘಾತವೊಂದು ತಪ್ಪಿದಂತಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Read More

ಕುಂದಾಪುರ: ಭಂಡಾರ್‌ಕಾರ್ಸ್‌ ಕಾಲೇಜಿನ ಯೂತ್‌ ರೆಡ್‌ಕ್ರಾಸ್‌ ಘಟಕ ಹಾಗೂ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ, ಕುಂದಾಪುರ ತಾಲೂಕು ಘಟಕದ ಸಹಭಾಗಿತ್ವದೊಂದೊಗೆ ಪ್ರಥಮ ಚಿಕಿತ್ಸೆ ಮಾಹಿತಿ ಕಾರ್ಯಾಗಾರ ಜರಗಿತು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಮಣಿಪಾಲ ವಿಶ್ವ ವಿದ್ಯಾನಿಲಯದ ಸಾರ್ವಜನಿಕ ಆರೋಗ್ಯ ವಿಭಾಗದ  ಮುಖ್ಯಸ್ಥ  ಡಾ| ರಾಮಚಂದ್ರ ಕಾಮತ್‌ ಉಪಸ್ಥಿತರಿದ್ದು,  ಪ್ರಥಮ ಚಿಕಿತ್ಸೆ ಮಾಡುವುದರಿಂದ ಹಲವಾರು ಜೀವಗಳನ್ನು ಉಳಿಸ ಬಹುದೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ| ಎನ್‌.ಪಿ. ನಾರಾಯಣ ಶೆಟ್ಟಿ ವಹಿಸಿದ್ದರು.ಕಾರ್ಯಕ್ರಮದಲ್ಲಿ  ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ, ಕುಂದಾಪುರ ತಾಲೂಕು ಘಟಕದ ಸಭಾಪತಿ ಎಸ್‌. ಜಯಕರ ಶೆಟ್ಟಿ, ಸಂಯೋಜಕ ಮುತ್ತಯ್ಯ ಶೆಟ್ಟಿ, ಕಾರ್ಯಕ್ರಮದ ಸಂಚಾಲಕ ಸತ್ಯ ನಾರಾಯಣ ಹಾಗೂ ವಿದ್ಯಾರಾಣಿ ಉಪಸ್ಥಿತರಿದ್ದರು. ರಕ್ಷಿತಾ  ಸ್ವಾಗತಿಸಿ, ಸ್ವಸ್ತಿಕ ವಂದಿಸಿ ಮತ್ತು  ಗೀತಾ ನಿರೂಪಿಸಿದರು.

Read More

ಅಮಾಸೆಬೈಲು: ಸಮಾಜದ ಅಭಿವೃದ್ಧಿಯಲ್ಲಿ ಸಂಘಟನೆಗಳ ಪಾತ್ರ ಮಹತ್ವದ್ದು. ಯುವ ಜನತೆ ಉತ್ತಮ ಧ್ಯೇಯೋದ್ದೇಶದೊಂದಿಗೆ ಸಂಘಟನೆ ಗಳಲ್ಲಿ ತೊಡಗಿಸಿಕೊಂಡು ಗುರುತಿಸಿಕೊಳ್ಳಬೇಕು. ಸಂಘಟನೆಗಳು ಸಮಾಜದ ಅಭಿವೃದ್ಧಿಯಾ ಗಲು ಮುಖ್ಯವಾಗಿ ಕಾರ್ಯನಿರ್ವಹಿಸಬೇಕು. ಸಂಘಟನೆಗಳು ಬಲಗೊಂಡಾಗ ಗ್ರಾಮಗಳು ಅಭಿವೃದ್ಧಿಯಾಗುತ್ತವೆ ಎಂದು ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಆಡಳಿತ ಧರ್ಮದರ್ಶಿ ಎಸ್‌. ಸಚ್ಚಿದಾನಂದ ಚಾತ್ರ ಅವರು ಹೇಳಿದರು. ಅವರು ಸಿದ್ದಾಪುರದ ಶ್ರೀ ರಂಗನಾಥ ಸಭಾಭವನದಲ್ಲಿ ಕುಂದಾಪುರ ತಾಲೂಕು ವಿಶ್ವಕರ್ಮ ಕಾರ್ಪೆಂಟರ್ ಯೂನಿಯನ್‌ ಸಿದ್ದಾಪುರ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಕುಂದಾಪುರ ತಾಲೂಕು ವಿಶ್ವಕರ್ಮ ಕಾರ್ಪೆಂಟರ್ ಯೂನಿಯನ್‌ ಅಧ್ಯಕ್ಷ ಕೆ. ರುದ್ರಯ್ಯ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವಕರ್ಮರು ಸಂಘಟಿತರಾಗಿ ಸಮಾಜದ ಅಭಿವೃದ್ಧಿಗೆ ಹೋರಾಡ ಬೇಕು. ಕಾರ್ಪೆಂಟರ್ ಕೆಲಸದಲ್ಲಿ ವಿಶ್ವಕರ್ಮರು ಇಂದು ಅನೇಕ ಸವಾಲುಗಳನ್ನು ಎದುರಿಸುತ್ತಿ ದ್ದಾರೆ. ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕಾದರೆ ಸಂಘಟನೆಯಾಗಬೇಕಾಗಿದೆ ಎಂದು ಹೇಳಿದರು. ಈ ಸಂದರ್ಭ ಕೊಲ್ಲೂರು ವಲಯ ಅರಣ್ಯಾಧಿಕಾರಿ ಶಿವರಾಮ ಆಚಾರ್ಯ, ಸಿದ್ದಾಪುರ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಸರೋಜಿನಿ…

Read More

ಕುಂದಾಪುರ: ಪಠ್ಯವಸ್ತುವಿನ ಕಲಿಕೆಯ ಜತೆಗೆ ಪಠ್ಯೇತರ ವಿಷಯಗಳ ಕಲಿಕೆಗೂ ಆದ್ಯತೆ ನೀಡಬೇಕು. ಎರಡರ ಸಮನ್ವಯದಿಂದ ಮಾತ್ರ ಸಮತೋಲನದ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಕೆ. ಬಾಬು ಶೆಟ್ಟಿ ಹೇಳಿದರು. ಮರವಂತೆ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ನಾವುಂದ ಸಮೂಹ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಮತ್ತು ಬೈಂದೂರು ವಲಯ ಮಟ್ಟದ ಕಬಡ್ಡಿ ಪಂದ್ಯವನ್ನು ಅವರು ಉದ್ಘಾಟಿಸಿ ಮಾತನಾಡಿದರು.    ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಎಸ್. ಜನಾರ್ದನ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಚಂದ್ರಶೇಖರ ಶೆಟ್ಟಿ ಸ್ವಾಗತಿಸಿದರು. ವಲಯ ದೈಹಿಕ ಶಿಕ್ಷಣ ಪರಿವೀಕ್ಷಕ ರಾಜು ಪೂಜಾರಿ ಪ್ರಸ್ತಾವನೆಗೈದರು. ಸಮೂಹ ಸಂಪನ್ಮೂಲ ವ್ಯಕ್ತಿ ಸುನಿಲ್‌ಕುಮಾರ ಶೆಟ್ಟಿ ವಂದಿಸಿದರು. ಗಣೇಶ ಶೆಟ್ಟಿ ನಿರೂಪಿಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ ಪೂಜಾರಿ, ಸದಸ್ಯರಾದ ಪ್ರಭಾಕರ ಖಾರ್ವಿ, ನಾಗರಾಜ ಖಾರ್ವಿ, ದೈಹಕ ಶಿಕ್ಷಕರ ಜಿಲ್ಲಾ ಸಂಘದ ಉಪಾಧ್ಯಕ್ಷ ಅರುಣಕುಮಾರ ಶೆಟ್ಟಿ, ತಾಲೂಕು ಸಂಘದ ಅಧ್ಯಕ್ಷ ರವಿಶಂಕರ ಹೆಗ್ಡೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರತಿನಿಧಿ ವಿಶ್ವನಾಥ…

Read More

ಕುಂದಾಪುರ: ಕುಂಭಾಶಿ ಉಪ ಕೇಂದ್ರದ ವ್ಯಾಪ್ತಿಗೆ ಒಳಪಟ್ಟಿರುವ ಗೋಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಲೇರಿಯಾ ರೋಗವನ್ನು ಯಶಸ್ವಿಯಾಗಿ ನಿಯಂತ್ರಿಸಲಾಗಿದೆ. ಮೂರು ಡೆಂಗ್ಯೂ ಪ್ರಕರಣ, ಒಂದು ಎಚ್1ಎನ್1 ಪ್ರಕರಣ ಈ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದು, ಅವುಗಳ ಚಿಕಿತ್ಸೆ ಹಾಗೂ ಹರಡದಂತೆ ತಡೆಯಲು ಸೂಕ್ತ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಕುಂಭಾಶಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅರುಣ್‌ಕುಮಾರ್ ಹೇಳಿದರು. ಅವರು  ಹೊಸತಾಗಿ ರಚನೆಯಾದ ಗೋಪಾಡಿ ಗ್ರಾಮ ಪಂಚಾಯತಿಯ ಪ್ರಥಮ ಸುತ್ತಿನ ಗ್ರಾಮಸಭೆಯನ್ನುದ್ದೇಶಿಸಿ ಮಾತನಾಡಿದರು. ಗೋಪಾಡಿಗೆ ಸಮೀಪದ ಬೀಜಾಡಿ ಪಂಚಾಯತಿಯಲ್ಲಿ ಆರೋಗ್ಯ ಉಪಕೇಂದ್ರವಿದ್ದರೂ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿಲ್ಲ. ಮತ್ತು ಆರೋಗ್ಯ ಸಹಾಯಕರು ಮನೆಗಳಿಗೆ ಭೇಟಿ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದಾಗ ಅದಕ್ಕೆ ಉತ್ತರಿಸಿದ ವೈದ್ಯಾಧಿಕಾರಿಗಳು, ಗೋಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಬ್ಬರು ಆಶಾ ಕಾರ್ಯಕರ್ತೆರಯ ಅವಶ್ಯಕತೆ ಇದ್ದು, ಗ್ರಾಮ ಪಂಚಾಯತ್ ನಿಂದ ಆಶಾ ಕಾರ್ಯಕರ್ತೆಯನ್ನು ಶೀಘ್ರ ನೇಮಿಸಿದಲ್ಲಿ ಆರೋಗ್ಯ ಇಲಾಖೆಯಿಂದ ಕೂಡಲೇ ಅವರಿಗೆ ತರಬೇತಿ ನೀಡಲಾಗುವುದು ಎಂದರು. ಗ್ರಾ.ಪಂ ಅಧ್ಯಕ್ಷೆ ಸರಸ್ವತಿ ಪುತ್ರನ್ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿದ್ದರು.…

Read More

ಕುಂದಾಪುರ: ಮನುಷ್ಯ ಪರಿಸರ ಪ್ರೇಮಿಯಾಗಿ ಬದುಕಿದರೆ ಮಾತ್ರ ಭವಿಷ್ಯವಿದೆ. ಪರಿಸರವನ್ನು ಮನುಷ್ಯ ಅವಲಂಬಿಸಿದ್ದಾನೆಯೇ ಹೊರತು ಪರಿಸರ ಮನುಷ್ಯನನ್ನು ಅವಲಂಬಿಸಿಲ್ಲ. ನಮಗೆ ಜೀವನಾಧಾರವಾಗಿರುವ ಈ ಪರಿಸರವನ್ನು ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಜವಾಬ್ಧಾರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ್ ಚಂದ್ರ ಶೆಟ್ಟಿ ಯವರು ಹೇಳಿದರು. ಶಂಕರನಾರಾಯಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಹುಯ್ಯಾರು ಪಟೇಲ್ ಚಾರಿಟೇಬಲ್ ಟ್ರಸ್ಟ್(ರಿ), ಉಡುಪಿ ಜಿಲ್ಲಾ ರೈತ ಸಂಘ(ರಿ) ಅರಣ್ಯ ಇಲಾಖೆ ಶಂಕರನಾರಾಯಣ, ವನ್ಯ ಜೀವಿ ಉಪ ವಿಭಾಗ ಸಿದ್ಧಾಪುರ ಹಾಗೂ ಗ್ರಾಮ ಪಂಚಾಯತ್ ಶಂಕರನಾರಾಯಣ ಇವುಗಳ ಜಂಟಿ ಆಶ್ರಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಔಷಧಿ ವನವನ್ನು ಗಿಡ ನೆಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ನಮಗೆ ಗಿಡಮೂಲಿಕೆಗಳ ಹೆಸರು ಮತ್ತು ಉಪಯೋಗ ತಿಳಿದಿಲ್ಲದಿರುವುದರಿಂದ ಅವುಗಳ ಬಗ್ಗೆ ವಿದ್ಯಾರ್ಥಿಗಳು ಜ್ಞಾನಪಡೆದು ಭವಿಷ್ಯತ್ತಿನಲ್ಲಿ ಅವುಗಳನ್ನು ಬಳಸಿಕೊಂಡು ಆರೋಗ್ಯಕರವಾದ ಜೀವನ ಹೊಂದಬಹುದಾಗಿದೆ ಎಂದು ಅವರು…

Read More