Author: Editor Desk

ಕುಂದಾಪುರ: ವಿದ್ಯಾವಂತರಾಗಿ ಉನ್ನತ ಹುದ್ದೆ ನೌಕರಿ ನಿರೀಕ್ಷಿಸದೆ ಕುಟುಂಬದ ಹೊಣೆ ಅರಿತು ಮನೆಕೆಲಸಗಳಲ್ಲೆ ಖುಷಿ ಪಡುವ ಸಹಸ್ರಾರು ಮಾತೆಯರು ಕಾಣಸಿಗುತ್ತಾರೆ. ಆದರೆ ಮಹಿಳೆ ನಾಲ್ಕು ಗೋಡೆಯೊಳಗೆ ಯಶಸ್ವಿ ಗೃಹಿಣಿಯಾಗಿದ್ದರೆ ಸಾಲದು, ಸುತ್ತಲಿನ ತಮ್ಮ ಸಮಾಜದಲ್ಲೂ ಸಾಂಸ್ಕೃತಿಕವಾಗಿ ತೊಡಗಿಸಿಕೊಂಡು ತಮ್ಮೊಳಗಿನ ಪ್ರತಿಭೆ ಅನಾವರಣ ಗೊಳಿಸಿ ತನ್ಮೂಲಕ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವಂತಾಗಬೇಕು ಎಂದು ಸಾಹಿತಿ ಜಾದೂಗಾರ ಓಂಗಣೇಶ್ ಹೇಳಿದರು. ಇಲ್ಲಿನ ಚಿಕ್ಕನ್ ಸಾಲ್ ರಸ್ತೆಯ ಶ್ರೀ ಬಗಳಾಂಬ ದೇವಸ್ಥಾನದಲ್ಲಿ ಜರುಗಿದ ಉಪ್ಪುಂದ-ನಾಯ್ಕನಕಟ್ಟೆ ಜಿ ಎಸ್ ಬಿ ಮಹಿಳಾ ರಂಗದ ಚಂಡೆವಾದನ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಧರ್ಮದರ್ಶಿ ಗಣಪತಿ ಸುವರ್ಣ ಸಭೆಯನ್ನು ಉದ್ಘಾಟಿಸಿ ತಮ್ಮ ಕೆಲಸದ ನಡುವೆಯೂ ಹವ್ಯಾಸಿಗಳಾಗಿ ಚಂಡೆವಾದನಕ್ಕೆ ಆಸಕ್ತಿ ವಹಿಸಿದ ಅಪರೂಪದ ಗ್ರಾಮೀಣ ಮಹಿಳೆಯರು ಇಂದಿನ ಯುವತಿಯರಿಗೆ ಮಾದರಿಯಾಗಿದ್ದಾರೆ ಇವರಿಗೆ ದೇವಿ ಅನುಗ್ರಹಿಸಲಿ ಎಂದು ಶುಭ ಹಾರೈಸಿದರು. ತರಬೇತಿಗೆ ಅನುವು ಮಾಡಿಕೊಟ್ಟ ಉಪ್ಪುಂದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ವಿಷ್ಣು ಪಡಿಯಾರ್ ಮುಖ್ಯ ಅತಿಥಿಯಾಗಿದ್ದರು. ಉದ್ಯಮಿಗಳಾದ ಬಿ…

Read More

ಕುಂದಾಪುರ: ಹೊಸಂಗಡಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಕವಿನಿನಿಯಲ್ಲಿ ಇತ್ತೀಚಿಗೆ ನಡೆದ 2015-16ನೇ ಸಾಲಿನ ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಬಾಲಕರ ಮತ್ತು ಬಾಲಕಿಯರ ತಂಡವು ಪ್ರಥಮ ಸ್ಥಾನ ಪಡೆದುಕೊಂಡಿದೆ. ವಿಜೇತ ತಂಡದ ವಿದ್ಯಾರ್ಥಿಗಳಾದ ವಿನೋದ, ಪ್ರಭಾಕರ ಪೈ ಮತ್ತು ಧೀರಜ್ ಅವರು ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶಾಂತಿ ಡಿ’ಕೋಸ್ತ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ರತ್ನಾಕರ ಶೆಟ್ಟಿ ಅವರೊಂದಿಗೆ. ಅನಘಾ ಪೈ, ತೇಜಸ್ವಿನಿ ಮತ್ತು ಶ್ರುತಿ ಅವರು ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶಾಂತಿ ಡಿ’ಕೋಸ್ತ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ರತ್ನಾಕರ ಶೆಟ್ಟಿ ಅವರೊಂದಿಗೆ. ಜಿಲ್ಲಾ ಮಟ್ಟದಲ್ಲಿ ದ್ವಿತೀಯ  ಉಡುಪಿಯ ಅಜ್ಜರಕಾಡು ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚಿಗೆ ನಡೆದ 2015-16ನೇ ಸಾಲಿನ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ…

Read More

ಗ೦ಗೊಳ್ಳಿ:  ಇಲ್ಲಿನ ದೇವಾಡಿಗ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಪ್ರಕ್ರಿಯೆ ಇತ್ತಿಚಿಗೆ ಜರುಗಿತು. ದೇವಾಡಿಗರ ಸ೦ಘದ ಅಧ್ಯಕ್ಷರಾಗಿ ಮಹಾಬಲ ದೇವಾಡಿಗ ಉಪಾಧ್ಯಕ್ಷರಾಗಿ ಸುಮನ ನರಸಿ೦ಹ ದೇವಾಡಿಗ ಮತ್ತು ತಿಮ್ಮ ದೇವಾಡಿಗ ಆಯ್ಕೆಯಾದರು. ಪ್ರಧಾನ ಕಾರ‍್ಯದರ್ಶಿಯಾಗಿ  ಉಮನಾಥ ದೇವಾಡಿಗ, ಜೊತೆ ಕಾರ‍್ಯದರ್ಶಿ ಆಶಾ ದೇವಾಡಿಗ ಮತ್ತು ಶ್ರೀಧರ ದೇವಾಡಿಗ, ಕೋಶಾಧಿಕಾರಿ ಕೃಷ್ಣ ದೇವಾಡಿಗ, ಕಾರ‍್ಯಕಾರಿ ಸಮಿತಿಯ ಸದಸ್ಯರಾಗಿ ಜಯರಾಮ ದೇವಾಡಿಗ, ರಾಜ ಆರ್ ದೇವಾಡಿಗ, ಮಾಧವ ದೇವಾಡಿಗ, ಟಿ.ಶ೦ಕರ ದೇವಾಡಿಗ, ಟಿ.ವಾಸುದೇವ ದೇವಾಡಿಗ, ರಾಜ ಬಿ ದೇವಾಡಿಗ, ನಿತ್ಯಾನ೦ದ ದೇವಾಡಿಗ, ಗುಲಾಬಿ ದೇವಾಡಿಗ, ಪೂರ್ಣಿಮ ದೇವಾಡಿಗ, ರಾಘವೇ೦ದ್ರ ಎಸ್ ದೇವಾಡಿಗ, ಬಾಬು ದೇವಾಡಿಗ, ಭಾಸ್ಕರ ದೇವಾಡಿಗ, ವಿಶ್ವನಾಥ ದೇವಾಡಿಗ, ಸುಬ್ರಮಣ್ಯ ದೇವಾಡಿಗ, ಸೇಷು ದೇವಾಡಿಗ ಮತ್ತು ಗುರುರಾಜ ದೇವಾಡಿಗ ಆಯ್ಕೆಯಾದರು. ಸ೦ಘದ ಸಲಹೆಗಾರರಾಗಿ ಮಹಾಲಿ೦ಗ ದೇವಾಡಿಗ, ಟಿ ವಾಸು ದೇವಾಡಿಗ, ಜಿ.ಡಿ.ಶ್ರೀನಿವಾಸ ದೇವಾಡಿಗ, ಲಲಿತಾ ದೇವಾಡಿಗ, ನರಸಿ೦ಹ ದೇವಾಡಿಗ, ಟಿ ಮಾಧವ ದೇವಾಡಿಗರನ್ನು ಆಯ್ಕೆ ಮಾಡಲಾಯಿತು. ವಾಸು ದೇವಾಡಿಗ, ಸವಿತಾ ಯು ದೇವಾಡಿಗ, ಬಾಬು…

Read More

ಗ೦ಗೊಳ್ಳಿ: ಜಾತಿ ಮತ ಧರ್ಮಗಳ ಆಧಾರದಲ್ಲಿ ಭೇಧ ಭಾವ ಮಾಡುವುದರಿ೦ದಾಗಿ ಮನುಷ್ಯನ ವ್ಯಕ್ತಿತ್ವದ ಬೆಳವಣಿಗೆ ಕು೦ದುತ್ತದೆ. ಪ್ರತಿಯೊಬ್ಬರೂ ಪರಸ್ಪರರ ಉತ್ತಮ ವ್ಯಕ್ತಿತ್ವವನ್ನು ನಿಲುವುಗಳನ್ನು ಗೌರವಿಸಬೇಕು. ಹಾಗಾದಾಗ ಮಾತ್ರ ಆರೋಗ್ಯಕರ ಸಮಾಜದ ನಿರ್ಮಾಣ ಸಾಧ್ಯ ಎ೦ದು ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಹೇಳಿದರು. ಅವರು ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾಧಿಕಾರಿಯವರ ಆದೇಶದ೦ತೆ  ಸಧ್ಬಾವನಾ ದಿನಾಚರಣೆ ಮತ್ತು ಕೋಮು ಸೌಹಾರ್ದ ಪಾಕ್ಷಿಕ ದ ಅ೦ಗವಾಗಿ ಹಮ್ಮಿಕೊ೦ಡಿದ್ದ ಕಾರ‍್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊ೦ಡು ಮಾತನಾಡಿದರು. ಕನ್ನಡ ಉಪನ್ಯಾಸಕ ಸುಜಯೀ೦ದ್ರ ಹ೦ದೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದೈಹಿಕ ಶಿಕ್ಷಕ ನಾಗರಾಜ ಶೆಟ್ಟಿ,ಉಪನ್ಯಾಸಕರಾದ  ಥಾಮಸ್ ಪಿ.ಎ, ಸುಮತಿ ಉಡುಪ ಉಪಸ್ಥಿತರಿದ್ದರು.ಶಾಲೆಟ್ ಲೋಬೋ ವ೦ದಿಸಿದರು. ಕೋಮು ಸೌಹಾರ್ದತೆ ಮತ್ತು ಸದ್ಬಾವನೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಸಾಮೂಹಿಕವಾಗಿ ಪ್ರತಿಜ್ಞೆ ಸ್ವೀಕರಿಸಿದರು.  ವರದಿ: ನರೇ೦ದ್ರ ಎಸ್ ಗ೦ಗೊಳ್ಳಿ 

Read More

ಗ೦ಗೊಳ್ಳಿ:  ಕಲಿಕೆಯ ಪಠ್ಯದ ಜೊತೆಯಲ್ಲಿ ಇನ್ನಿತರ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ವಿದ್ಯಾರ್ಥಿಗಳು ಹೆಚ್ಚಿನ ಆತ್ಮವಿಶ್ವಾಸ ಹೊ೦ದುವುದು ಸಾಧ್ಯ. ಆ ನಿಟ್ಟಿನಲ್ಲಿ ಮಕ್ಕಳನ್ನು ಪ್ರೋತ್ಸಾಹಿಸುವುದು ಹೆತ್ತವರ ಮತ್ತು ಶಿಕ್ಷಕರ ಕರ್ತವ್ಯ ಎ೦ದು ಗ೦ಗೊಳ್ಳಿಯ ಜಿ.ಎಸ್.ವಿ.ಎಸ್ ಅಸೋಷಿಯೇಶನ್ನಿನ ಅಧ್ಯಕ್ಷ ಡಾ.ಕಾಶೀನಾಥ ಪೈ ಅವರು ಹೇಳಿದರು. ಅವರು ಇತ್ತೀಚೆಗೆ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರೋಟರಿ ಸಭಾ೦ಗಣದಲ್ಲಿ ನಲವತ್ತರ ಸ೦ಭ್ರಮದಲ್ಲಿರುವ  ಗ೦ಗೊಳ್ಳಿಯ ಶ್ರೀ ರಾಘವೇ೦ದ್ರ ಸ್ಪೋರ್ಟ್ಸ್ ಕ್ಲಬ್ , ರೋಟರಿ ಕ್ಲಬ್ ಗ೦ಗೊಳ್ಳಿ ಮತ್ತು ಜಿ.ಎಸ್.ವಿ.ಎಸ್ ಅಸೋಷಿಯೇಶನ್ನಿನ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ  ಶಾಲಾ ಮಟ್ಟದ ಪ್ರತಿಭಾ ವೃಷ್ಟಿ ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊ೦ಡು ಮಾತನಾಡಿದರು. ಮುಖ್ಯ ಅತಿಥಿ ರೋಟರಿ ಕ್ಲಬ್ ಗ೦ಗೊಳ್ಳಿಯ ಅಧ್ಯಕ್ಷರಾದ ಪ್ರದೀಪ ಡಿ.ಕೆ ಮಾತನಾಡಿ  ವಿದ್ಯಾರ್ಥಿಗಳು ಶಾಲಾ ಅವಧಿಯಲ್ಲಿ ಸಿಗುವ ಬೆಳವಣಿಗೆಯ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎ೦ದು ಅಭಿಪ್ರಾಯಪಟ್ಟರು.ಜಿ.ಎಸ್.ವಿ.ಎಸ್ ಅಸೋಷಿಯೇಶನ್ನಿನ ಕಾರ‍್ಯದರ್ಶಿ ಹೆಚ್ ಗಣೇಶ ಕಾಮತ್, ಸರಸ್ವತಿ ವಿದ್ಯಾಲಯದ ಆಡಳಿತ ಮ೦ಡಳಿಯ ಕಾರ‍್ಯದರ್ಶಿ ಎನ್ ಸದಾಶಿವ ನಾಯಕ್ ಮತ್ತು ಕ್ಲಸ್ಟರ್ ಮಟ್ಟದ ಸಿಆರ್‌ಪಿ ತಿಲೋತ್ತಮ…

Read More

ಕುಂದಾಪುರ: ಗಂಗೊಳ್ಳಿ ಗ್ರಾಮ ಪಂಚಾಯತ್‌ನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ 2005ರ ಸಾಮಾಜಿಕ ಲೆಕ್ಕ ಪರಿಶೋಧನೆಯ ವಿಶೇಷ ಗ್ರಾಮಸಭೆ ಬುಧವಾರ ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಗ್ರಾಪಂ ಉಪಾಧ್ಯಕ್ಷರನ್ನು ಕಡೆಗಣಿಸಿ ಗ್ರಾಮಸಭೆ ಆರಂಭಿಸಿದ ಬಗ್ಗೆ ಗ್ರಾಪಂ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ಕೂಡ ನಡೆಯಿತು. ಇದೇ ಸಂದರ್ಭ ಸಭೆಯಲ್ಲಿ ಹಾಜರಿದ್ದ ಅಧಿಕಾರಿಯೋರ್ವರು ಈ ಸಭೆಗೆ ಗ್ರಾಪಂ.ನ ಅವಶ್ಯಕತೆ ಇಲ್ಲ. ಇದು ಅಧಿಕಾರಿಗಳು ನಡೆಸುವ ಸಭೆ. ಈ ಸಭೆಗೆ ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳಿದ್ದರೆ ಸಾಕು ಎಂದು ನೀಡಿದ ಹೇಳಿಕೆ ಪಂಚಾಯತ್ ಸದಸ್ಯರನ್ನು ಮತ್ತಷ್ಟು ಕೆರಳಿಸಿತು. ಪಂಚಾಯತ್ ಅವಶ್ಯಕತೆ ಇಲ್ಲ ಎಂದಾದರೆ ಪಂಚಾಯತ್ ಬ್ಯಾನರ್ ತೆಗೆದು ಸಭೆ ನಡೆಸಿ, ಈ ಸಭೆಯ ಖರ್ಚನ್ನು ಕೂಡ ಪಂಚಾಯತ್ ಭರಿಸುವುದಿಲ್ಲ ಎಂದು ಪಟ್ಟು ಹಿಡಿದರು. ಇದೇ ಸಂದರ್ಭ ಗ್ರಾಪಂ ಸದಸ್ಯರು ಹಾಗೂ ಉಪಾಧ್ಯಕ್ಷರನ್ನು ಕಡೆಗಣಿಸಿ, ಅವರ ಮಾತಿಗೆ ಕಿಂಚಿತ್ತೂ ಬೆಲೆ…

Read More

ಬೈಂದೂರು: ನಮ್ಮ ಗ್ರಾಮ ವ್ಯಾಪ್ತಿಯ ಗೋಮಾಳ ಭೂಮಿ ಗುರುತಿಸಿಕೊಡುವಂತೆ, ಕಂದಾಯ ಇಲಾಖೆಯ ಅಧಿಕಾರಿಗೆ ಕಳೆದ ಹಲವಾರು ವರ್ಷಗಳಿಂದ ಗ್ರಾಮ ಸಭೆಯಲ್ಲಿ ಮನವಿ ಮಾಡುತ್ತಾ, ಇದ್ದೇವೆ, ಇದುವರೆಗೆ ಗೋಮಾಳ ಭೂಮಿ ಗುರುತಿಸುವ ಕಾರ್ಯ ನಡೆದಿಲ್ಲ. ಶೀಘ್ರ ಗೋಮಾಳ ಭೂಮಿ ಹುಡುಕಿಕೊಡಿ ಪ್ಲೀಸ್ ಎಂದು ಗ್ರಾಮಸ್ಥರು ಕಂದಾಯ ಅಧಿಕಾರಿಗಳಲ್ಲಿ ತಮ್ಮ ಅಳಲು ತೋಡಿಕೊಂಡ ಘಟನೆ  ಬಿಜೂರು ಗ್ರಾಮಸಭೆಯಿಲ್ಲಿ ನಡೆಯಿತು. ಬಿಜೂರು ಗ್ರಾಮ ಪಂಚಾಯಿತಿನ ಮೊದಲ ಸುತ್ತಿನ ಗ್ರಾಮ ಸಭೆಯು ಗ್ರಾ.ಪಂ. ಅಧ್ಯಕ್ಷೆ  ಲೋಲಾಕ್ಷಿ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ಕಂಚಿಕಾನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆಯಿತು. ಗ್ರಾಮ ವ್ಯಾಪ್ತಿಯಲ್ಲಿ ಗೋಮಾಳ ಭೂಮಿ ಗುರುತಿಸದ ಕಾರಣ ಜಾನುವಾರುಗಳು ಕೃಷಿ ಭೂಮಿಗೆ ನುಗ್ಗುತ್ತಿವೆ, ಇದರಿಂದಾಗಿ ವ್ಯವಸಾಯ ಮಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥ ವೆಂಕಟೇಶ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು, ಇದಕ್ಕೆ ಗ್ರಾಮಸ್ಥರಾದ ಗಣೇಶ್ ಪೂಜಾರಿ, ರಾಜೇಂದ್ರ, ಜಯರಾಮ ಶೆಟ್ಟಿ, ರಾಘವೇಂದ್ರ ಮೊದಲಾದವರು ಧ್ವನಿ ಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಕರಣೀಕ ಮಂಜುನಾಥ ಗೋಮಾಳ ಗುರುತಿಸುವಂತೆ…

Read More

ಕುಂದಾಪುರ:  ಇಲ್ಲಿನ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಭವನ ಗೊಂಬೆಮನೆಯಲ್ಲಿ  ಆಗಸ್ಟ್  ತಿಂಗಳ ಕಾರ್ಯಕ್ರಮವಾಗಿ  ಉಪ್ಪಿನಕುದ್ರು  ನೇತಾಜಿ ಕಮಿಟಿ ಫ್ರೆಂಡ್ಸ್ ಪ್ರಾಯೋಜಕತ್ವದಲ್ಲಿ 69 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ತಿಂಗಳ ಗೊಂಬೆ ಮನೆ ಅತಿಥಿಯಾಗಿ ಜಯವಂತ ಪೈ, ಕುಂದಾಪುರ  ಇವರು ಭಾಗವಹಿಸಿದ್ದರು. ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಶ್ರೀ ಭಾಸ್ಕರ್ ಕೊಗ್ಗ ಕಾಮತ್ ರು ಕಾರ್ಯಕ್ರಮದ ಪ್ರಾಯೋಜಕರಾದ  ನೇತಾಜಿ ಕಮಿಟಿ ಫ್ರೆಂಡ್ಸ್ ನ ಅಧ್ಯಕ್ಷರಾದ ಶ್ರೀ ಕೃಷ್ಣ ದೇವಾಡಿಗ ರನ್ನು ಸನ್ಮಾಸಿದರು. ಅಧ್ಯಾಪಕ ಭಾಸ್ಕರ್ ಮಯ್ಯ,  ರಮೇಶ್ ಐತಾಳ್, ಸದಾಶಿವ ಐತಾಳ್ ಹಾಗೂ ಗಿರೀಶ್  ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ಪ್ರಬಂಧ, ಭಾಷಣ ಹಾಗೂ ಚಿತ್ರಕಲೆ ಸ್ಪರ್ಧಾ ವಿಜೇತರನ್ನು ಬಹುಮಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ನಾರಾಯಣ ವಿಕಲಚೇತನ ವಿಶೇಷ ತರಭೇತಿ ಕೇಂದ್ರ, ತಲ್ಲೂರು ಈ ಶಾಲಾ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮ ಜರುಗಿತು.  ಸ್ಥಳೀಯ ಶಾಲಾ ಮಕ್ಕಳಿಂದ ನೃತ್ಯ, ಪ್ರಹಸನ ಇತ್ಯಾದಿ ಕಾರ್ಯಕ್ರಮಗಳು ಕಿಕ್ಕಿರಿದ ಸಭಿಕರನ್ನು ರಂಜಿಸಿತು. ನಾಗೇಶ್ ಶ್ಯಾನುಭಾಗ್  ಕಾರ್ಯಕ್ರಮ…

Read More

ಕುಂದಾಪುರ: ಸನ್ನಿವೇಶಗಳು ಹಾಗೂ ಒತ್ತಡಗಳು ಸಮಸ್ಯೆಯನ್ನು ಎದುರಿಸಲಾಗದ ಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ ಇದಕ್ಕೆ ರೈತನೂ ಹೊರತಾಗಿಲ್ಲ. ತಮ್ಮ ಶೃಮಕ್ಕೆ ಸರಿಯಾದ ಪ್ರತಿಫಲ ದೊರಕದೆ ಇದ್ದಾಗ ರೈತ ಅನೀವಾರ್ಯವಾಗಿ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುವಂತಹ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಸರ್ಕಾರ ಈ ಪರಿಸ್ಥಿತಿ ಬರುವ ಮೊದಲೆ ಅವರಿಗೆ ಸ್ಪಂದಿಸುವ ಕೆಲಸವನ್ನು ಮಾಡಬೇಕು ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಪ್ರತಾಪ್‌ಚಂದ್ರ ಶೆಟ್ಟಿ ನುಡಿದರು. ನಗರದ ಆರ್.ಎನ್ ಶೆಟ್ಟಿ ಸಭಾಭವನದಲ್ಲಿ  ನಡೆದ ಉಡುಪಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳ ಹಾಗೂ ಆಮಂತ್ರಿತರ ಸಭೆಯಲ್ಲಿ ಅವರು ಮಾತನಾಡಿದರು. ರೈತರು ಪಡೆದುಕೊಂಡ ಸಾಲದ ಸದ್ವಿನಿಯೋಗವಾಗಬೇಕು. ಇದಕ್ಕಾಗಿ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಬೇಕು. ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳಿಗೆ ಅರ್ಥವಿಲ್ಲ. ಎಷ್ಟೇ ಕೋಟಿ ಹಣ ನೀಡಿದರೂ ಹೋದ ಒಂದು ಜೀವವನ್ನು ವಾಪಾಸು ತರಲು ಸಾಧ್ಯವಿಲ್ಲ. ಆತ್ಮಹತ್ಯೆಯ ನಂತರ ನೀಡುವ ಪರಿಹಾರಗಳು ಕೂಡ ಸಮಸ್ಯೆಗೆ ಶಾಶ್ವತ ಮುಕ್ತಿಯನ್ನು ನೀಡುವುದಿಲ್ಲ ಎಂದು ಹೇಳಿದ ಅವರು ರೈತರ…

Read More

ಕುಂದಾಪುರ: ಜಿಲ್ಲಾದ್ಯಂತ ಏಕಾಏಕಿ ತಲೆದೂರಿದ ವಿದ್ಯುತ್ ಸಮಸ್ಯೆಯಿಂದಾಗಿ ಕುಂದಾಪುರ ತಾಲೂಕಿನ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಯಿತು. ಹಿರಿಯಡಕದ ಉಪಕೇಂದ್ರದಲ್ಲಿನ ವಿದ್ಯುತ್ ದುರಸ್ಥಿಯ ಕಾರಣ ನೀಡಿ ನಿಲ್ಲಸಲಾಗಿದ್ದ ವಿದ್ಯುತ್ ಸಂಪರ್ಕದಿಂದಾಗಿ ಎರಡು ದಿನವಿಡಿ ಜನರು ಕತ್ತಲಲ್ಲಿ ಕಾಲ ಕಳೆಯುವಂತಾಯಿತು. ಎಂದಿನಂತೆ ಮಂಗಳವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ನಿಲುಗಡೆ ಸಾಮಾನ್ಯವೆಂದು ಭಾವಿಸಲಾಗಿತ್ತು. ಹೀಗೆಂದು ಮೆಸ್ಕಾಂ ಪ್ರಕಟಣೆಯಲ್ಲಿಯೂ ತಿಳಿಸಲಾಗಿತ್ತು. ಆದರೆ ಮಂಗಳವಾರ ಬೆಳಿಗ್ಗೆ 7ಗಂಟೆಯಿಂದಲೇ ವಿದ್ಯುತ್ ನಿಲುಗಡೆಗೊಂಡು ರಾತ್ರಿ 9:45ರ ಸುಮಾರಿಗೆ ಮತ್ತೆ ಚಾಲನೆಗೊಳಿಸಲಾಯಿತು. ಇಷ್ಟಕ್ಕೆ ಮುಗಿತೆಂದುಕೊಂಡರೇ ಯಾವುದೇ ಮುನ್ಸೂಚನೆಗಳಿಲ್ಲದೇ ಮತ್ತೆ ಬುಧವಾರ ಬೆಳಿಗ್ಗೆಯೂ ವಿದ್ಯುತ್ ನಿಲುಗಡೆಗೊಂಡಿದ್ದರಿಂದ ಜನರೂ ತೊಂದರೆಯುಂಟಾಯಿತು. ಬಧವಾರ ಸಂಜೆ 6:30 ಸುಮಾರಿಗೆ ಮತ್ತೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾದರೂ ಹಲವೆಡೆ ಲೋ ವೋಲ್ಟೆಜ್, ಮತ್ತೆ ಮತ್ತೆ ವಿದ್ಯುತ್ ಕಡಿತಗೊಳಿಸುವುದು ಕಂಡುಬಂತು. ದಿನವೂ ವಿದ್ಯುತ್ ಸಮಸ್ಯೆಯೇ… ಮಳೆ ಕಡಿಮೆಯಾಗಿರುವುದು, ವಿದ್ಯುತ್ ಅಭಾವ, ರಾಷ್ಟ್ರೀಯ ಹೆದ್ದಾರಿಯ ಬಳಿಯ ಕಂಬಗಳ ತೆರವು ಕಾರ್ಯಾಚರಣೆ, ದುರಸ್ತಿ ಮುಂತಾದ ಕಾರಣಗಳಿಂದಾಗಿ ತಾಲೂಕಿನ ಬೈಂದೂರು, ಗಂಗೊಳ್ಳಿ, ಅಮಾಸೆಬೈಲು, ಶಂಕರನಾರಾಯಣ ಸೇರಿದಂತೆ…

Read More