Author: Editor Desk

ಕೊರೋನಾ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳ ಜೊತೆ ಇದೀಗ ತರಕಾರಿಗಳ ಬೆಲೆಯೂ ಏರಿಕೆಯಾಗಿದ್ದು, ಗ್ರಾಹಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಕೊರೋನಾದಿಂದ ಮಾರುಕಟ್ಟೆಯ ವಸ್ತುಗಳ ಬೆಲೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ದಿನ ನಿತ್ಯ ಬಳಕೆಯ ವಸ್ತುಗಳೊಂದಿಗೆ ಪ್ರತಿದಿನ ಏರುತ್ತಿರುವ ತರಕಾರಿಯ ಬೆಲೆಯಿಂದ ಖರೀದಿದಾರರಿಗೆ ತೊಂದರೆಯಾಗಿ, ಖರೀದಿ ಮಾಡದೇ ಬೇರೆದಾರಿಯಿಲ್ಲ ಎಂಬಂತಾಗಿದೆ. ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಕುಸಿದಿದ್ದ ತರಕಾರಿಗಳ ಬೆಲೆ, ಇದೀಗ ತುಂಬಾ ಏರಿಕೆಯನ್ನು ಕಂಡಿದೆ. ಕೊರೋನಾದಿಂದ ಸರಿಯಾದ ಸಂಚಾರ ವ್ಯವಸ್ಥೆಯಿಲ್ಲದೆ ಒಂದು ಸ್ಥಳದಿಂದ ಇನ್ನೊಂದು ಕಡೆಗೆ ರವಾನೆಯಾಗುತ್ತಿದ್ದ ತರಕಾರಿಗಳ ಸಾಗಾಣಿಕೆಯಲ್ಲೂ ಇಳಿಮುಖವಿದೆ. ಟೊಮ್ಯಾಟೊ ಕೆಜಿಗೆ 35ರೂ, ಈರುಳ್ಳಿ 80ರ ಆಸುಪಾಸಿಲ್ಲಿದ್ದರೆ, ಕ್ಯಾರೆಟ್, ಬೀಟ್ರೂಟ್ ಸಹ ಕೆಜಿಗೆ 40ರ ಸನಿಹದಲ್ಲಿದೆ. ಇನ್ನು ಬೀನ್ಸ್ 150ರ ಗಡಿ ದಾಟಿದೆ. ಜೊತೆಗೆ ಮಾಂಸ, ಮೊಟ್ಟೆಯ ಬೆಲೆಯಲ್ಲೂ ಭಾರಿ ಏರಿಕೆಯಾಗಿದ್ದು ಜನರಿಗೆ ಬಹಳ ಸಮಸ್ಯೆಯಾಗಿದೆ. ಅತೀಯಾದ ಮಳೆಯಿಂದ ಬೆಳೆ ನಾಶ, ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳ ಕೊರತೆ ಹಾಗೂ ಭಾರತದಿಂದ ರಫ್ತಾಗುತ್ತಿದ್ದ ವಸ್ತುಗಳ ವಹಿವಾಟು ನಿಂತಿರುವುದು ತರಕಾರಿಗಳ ಬೆಲೆ…

Read More

ಸುನಿಲ್ ಹೆಚ್. ಜಿ., ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಲಾಕ್‌ಡೌನ್ ಅವಧಿಯಲ್ಲಿ ಬೀದಿ ನಾಯಿಗಳ ಪಾಡು ಹೇಳತೀರದ್ದು. ಹೋಟೆಲ್ ಅಂಗಡಿ, ಮಾರ್ಕೆಟ್ ಎಲ್ಲವೂ ಬಂದ್ ಆದಾಗ ಅವುಗಳದ್ದು ಮೂಕರೋದನೆಯಾಗಿತ್ತು. ಇಂತಹ ಕಠಿಣ ಸಂದರ್ಭದಲ್ಲಿ ಕುಂದಾಪುರದ ಹಂಗಳೂರಿನ ಯುವತಿಯೋರ್ವಳು ಪ್ರತಿನಿತ್ಯವೂ ಬೀದಿ ನಾಯಿಗಳಿಗೆ ಆಹಾರ ನೀಡಿ ಅವುಗಳ ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಇಂದಿನ ತನಕವೂ ಅದನ್ನು ಮುಂದುವರಿಸಿದ್ದಾರೆ. ಮೋನಿಶಾ ಗೇಬ್ರಿಯಲ್ ಕರ್ವಾಲೋ ಎಂಬ ಯುವತಿ ಪ್ರತಿನಿತ್ಯವೂ ಸುಮಾರು 30-35 ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದು, ಒಂದು ದಿನವೂ ತಪ್ಪಿದಿಲ್ಲ. ಇವರ ಈ ಸೇವೆಗೆ ಸ್ನೇಹಿತ ಅರವಿಂದ್ ಫೆರ್ನಾಂಡಿಸ್ ಕೈ ಜೋಡಿಸಿದ್ದು, ನಿಶಾ ತಂದೆ-ತಾಯಿ ಕೂಡ ನೆರವಾಗುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ. 4 ತಿಂಗಳ ನಿರಂತರ ಕಾಯಕ: ಮಾರ್ಚ್ ತಿಂಗಳಿನಿಂದ ಆರಂಭಿಸಿ ಕಳೆದ 118 ದಿನಗಳಿಂದ ಪ್ರತಿನಿತ್ಯವೂ ಬೀದಿ ನಾಯಿಗಳಿಗೆ ಆಹಾರ ನೀಡಲಾಗುತ್ತಿದೆ. ಅನ್ನದ ಜೊತೆಗೆ ಕೋಳಿ ಹಾಗೂ ತರಕಾರಿ ಪ್ರತಿನಿತ್ಯ ಇದ್ದರೆ ವಾರದಲ್ಲಿ ಎರಡು ದಿನ ಮೀನು ಇರಲಿದೆ. ದಿನವೂ…

Read More

ಕುಂದಾಪ್ರ ಡಾಟ್ ಕಾಂ. ನಾಗಾರಾಧನೆ ಎಂಬುದು ಭಾರತೀಯ ಸಂಪ್ರದಾಯದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಸಾವಿರಾರು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ನಾಗಾರಾಧನೆ ಅತ್ಯಂತ ಪವಿತ್ರ ಹಾಗೂ ಪೂಜನೀಯವೇನಿಸಿದೆ. ನಾಗ ಮೂಲದ ಆಧಾರದಲ್ಲಿಯೇ ಪ್ರತಿಯೊಂದು ಕೌಟುಂಬಿಕ ಮೌಲ್ಯ, ಆಚರಣೆಗಳು, ಸಂಪ್ರದಾಯಗಳು ಚಾಲ್ತಿಯಲ್ಲಿವೆ. ನಮ್ಮ ಕರಾವಳಿ ಭಾಗದ ಮಾತೃ ಪ್ರಧಾನ ವ್ಯವಸ್ಥೆಯು ನಿಂತಿರುವುದೇ ಈ ನಾಗಾರಾಧನೆ ಮತ್ತು ನಾಗ ಮೂಲದ ಗುರುತಿಸುವಿಕೆಯ ಆಧಾರದಿಂದಾಗಿದೆ. ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸುವ ನಾಗರ ಪಂಚಮಿ ಹಿಂದೂಗಳಿಗೆ ತುಂಬಾ ವಿಶೇಷ ಹಬ್ಬ. ನಾಗರ ಹಾವಿನೆಡೆಗೆ ಮನುಷ್ಯನ ಸಹಜ ಭಯ, ಭಕ್ತಿಯನ್ನು ತೋರಿಸಿಕೊಳ್ಳುವ ನಾಗರಪಂಚಮಿ ದಿನದಂದು ಹುತ್ತಕ್ಕೆ ಹಾಲೆರೆದರೆ ಒಳಿತಾಗುವುದು ಎನ್ನುವುದು ಸಂಪ್ರದಾಯ. ಕುಂದಾಪ್ರ ಡಾಟ್ ಕಾಂ. ನಾಗರಪಂಚಮಿಯಂದು ವಿಷ್ಣುವಿನ ವಾಹನ ಶೇಷನಾಗನಿಗೆ ಸಲ್ಲಿಸುವ ಪೂಜೆ ಶ್ರೇಷ್ಠ. ಈ ದಿನ ನಾಗಪೂಜೆ ಮಾಡಿದರೆ ನಾಗದೋಷಕ್ಕೆ ಪರಿಹಾರ ಸಿಗುವುದು ಎಂಬ ನಂಬಿಕೆಯ ಮೂಲ ಈ ಹಬ್ಬ. ಇಂದು ಎಲ್ಲೆಡೆ ನಾಗಾರಾಧನೆ ಭರದಿಂದ ಸಾಗಿದೆ. ಪ್ರತಿಯೊಂದು ಕುಟುಂಬವೂ ತನ್ನ ನಾಗ ಮೂಲವನ್ನು ಅರಸಿಕೊಂಡು ನಾಗಾರಾಧನೆ…

Read More

ಮಧುರಾಣಿ ಎಚ್. ಎಸ್, ಮೈಸೂರು | ಕುಂದಾಪ್ರ ಡಾಟ್ ಕಾಂ. ಕೋವಿಡ್‌ನ ದುರಿತ ಕಾಲದಲ್ಲಿ ಶಾಲೆಗಳು ದೀರ್ಘ ಕಾಲದವರೆಗೂ ಮುಚ್ಚಲ್ಪಟ್ಟ ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಶಿಕ್ಷಣವನ್ನು ಹೊರತುಪಡಿಸಿ ಮಕ್ಕಳಿಗೆ ಬೇರೇನು ನೀಡಬಹುದು ಎನ್ನುವಂತಹ ಪ್ರಶ್ನೆ ಒಂದು ಸಮರ್ಥ ಶಿಕ್ಷಕ ವೃಂದದ ಮುಂದೆ ಬಂದಾಗ ನಮ್ಮ ’ಮಕ್ಕಳ ವಾಣಿ’ಯಂತಹ ಕನಸಿನ ಕೂಸಿನ ಹುಟ್ಟಿಗೆ ಕಾರಣವಾಯಿತು. ಶಾಲೆಗೂ ಶಿಕ್ಷಕರಿಗೂ – ಪುಸ್ತಕಕ್ಕೂ ದೂರವಾಗಿ, ಕಲಿಕಾ ವಾತಾವರಣಕ್ಕೆ ದೂರವಾಗಿ, ಬಟಾಬಯಲಿನಲ್ಲಿ ನಟ್ಟನಡುವೆ ನಿಂತ ಪಯಣಿಗನಂತಾಗಿದ್ದ ಪುಟ್ಟ ಮಗುವಿಗೆ ಬೇಕಾಗಿದ್ದು ಖಂಡಿತವಾಗಿಯೂ ಪಠ್ಯದ ತರಗತಿಗಳಲ್ಲ. ಮಗುವಿಗೆ ಆ ಕ್ಷಣ ಬೇಕಾಗಿದ್ದು ಉಳಿಯಬೇಕಾಗಿದ್ದು ಕಲಿಕೆಯಲ್ಲಿ ನಿರಂತರ ಆಸಕ್ತಿ ಹಾಗೂ ಬತ್ತದ ಉತ್ಸಾಹ. ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಮ್ಮೆಯ ಪ್ರಸ್ತುತಿ ’ಮಕ್ಕಳ ವಾಣಿ’ಯು ಈ ಅಗತ್ಯವನ್ನು ಅತ್ಯಂತ ಯಶಸ್ವಿಯಾಗಿ ಮೋಜು ಮಸ್ತಿಗಳ ಸಹಿತ ನೀಗಿಸಿತ್ತು. ಕೇವಲ ಮಕ್ಕಳೇ ಅಲ್ಲದೇ ದೊಡ್ಡವರೂ ಸಹ ಮಕ್ಕಳ ಜೊತೆಯಲ್ಲಿ ಮಕ್ಕಳಾಗಿ ಕೂತು ಜಡ್ಡು ಹಿಡಿದ ಲಾಕ್ ಡೌನ್ ಸಮಯವನ್ನು ಸಂಭ್ರಮದಲ್ಲಿ ಕಳೆಯುವಂತೆ ಮಾಡಿತು. ಪ್ರತಿ ದಿನದ ಸ್ವಲ್ಪ…

Read More

ಕುಂದಾಪ್ರ ಡಾಟ್ ಕಾಂ ವರದಿ. ಗಂಗೊಳ್ಳಿ: ಸರಕಾರ ಗುಡಿಸಲು ರಹಿತ ರಾಜ್ಯ ನಿರ್ಮಾಣಕ್ಕೆ ಪಣತೊಟ್ಟಿರುವ ಈ ಹೊತ್ತಿನಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಂಗೊಳ್ಳಿ ಗ್ರಾಮದಲ್ಲಿ ಹರಕಲು ಮನೆಯಲ್ಲಿ ಕುಟುಂಬವೊಂದು ವಾಸಿಸುತ್ತಿರುವುದು ವ್ಯವಸ್ಥೆಯನ್ನೇ ನಾಚಿಸುವಂತಿದೆ. ಗಂಗೊಳ್ಳಿ ಗ್ರಾಮದ ಬಂದರು ಬೇಲಿಕೇರಿ ಪ್ರದೇಶದಲ್ಲಿ ಕಡಲ ತೀರದಲ್ಲಿ ಕಳೆದ ೧೪ ವರ್ಷಗಳಿಂದ ವಾಸಿಸುತ್ತಿರುವ ಕೃಷ್ಣ ಖಾರ್ವಿ ಕುಟುಂಬ ಬಡತನದಲ್ಲೇ ಜೀವನ ನಡೆಸುತ್ತಿದೆ. ಮೀನುಗಾರಿಕೆಯನ್ನೇ ನಂಬಿರುವ ಈ ಬಡ ಕುಟುಂಬಕ್ಕೆ ವಾಸಿಸಲು ಸರಿಯಾದ ಮನೆಯಿಲ್ಲ. ಈ ಬಡ ಕುಟುಂಬ ನಿರ್ಮಿಸಿಕೊಂಡಿರುವ ಮನೆ ಜಾಗ ಸರಕಾರಿಯಾಗಿದ್ದು, ಇವರಿಗೆ ಹಕ್ಕುಪತ್ರ ಇಲ್ಲದಿರುವುದರಿಂದ ಸರಕಾರದ ಯಾವುದೇ ಸವಲತ್ತು ಈ ಬಡ ಕುಟುಂಬಕ್ಕೆ ದೊರೆಯುತ್ತಿಲ್ಲ. ಬೀಳುವ ಸ್ಥಿತಿಯಲ್ಲಿರುವ ಈ ಮನೆಯಲ್ಲಿ ಕೃಷ್ಣ ಖಾರ್ವಿ ಸಹಿತ ನಾಲ್ವರು ವಾಸಿಸುತ್ತಿದ್ದು ಮನೆಗೆ ವಿದ್ಯುತ್ ಸಂಪರ್ಕ ಕೂಡ ಇಲ್ಲ. ಇಬ್ಬರು ಪುಟ್ಟ ಪ್ರತಿಭಾನ್ವಿತ ಮಕ್ಕಳಿಗೆ ಶಿಕ್ಷಣ ನೀಡುವ ಮಹತ್ತರ ಜವಾಬ್ದಾರಿ ಕೂಡ ಹೆತ್ತವರ ಮೇಲಿದೆ. ಮಳೆಗಾಲದಲ್ಲಿ ಮಳೆಗೆ ಅಲ್ಲಲ್ಲಿ ಸೋರುತಿರುವ ಮನೆಯ ಮಾಡು, ಎಲ್ಲಿ ಮನೆ…

Read More

ಚೈತ್ರ ಆಚಾರ್ಯ ಕೋಟ | ಕುಂದಾಪ್ರ ಡಾಟ್ ಕಾಂ ಲೇಖನ. ನಾವು ಪ್ರೀತಿಸಿದರೆ ನಮ್ಮನ್ನು ಪ್ರೀತಿಸುವ ಕೆಲವು ಹೃದಯಗಳಾದರು ನಮಗೆ ಸಿಗಬಹುದು. ಆದರೆ ನಾವು ಪ್ರೀತಿಸದಿದ್ದರೂ ನಮ್ಮನ್ನು ಪ್ರೀತಿಸುವ ನಿಶ್ಕಲ್ಮಶ ಹೃದಯವೊಂದಿದ್ದರೆ ಅದು ತಾಯಿ ಮಾತ್ರ. ನಿಜ, ಆ ನಿಶ್ಕಲ್ಮಶ ಪ್ರೀತಿಯನ್ನು ಬಗ್ಗೆ ಬರೆಯಲು ಹೊರಟರೆ ಭಾಷೆಯು ಬಡವಾಗುತ್ತದೆ. ಅಂತಹ ಅದ್ಬುತ ಶಕ್ತಿ ತಾಯಿ. ಬದುಕಿನ ಪುಸ್ತಕದ ಪುಟಗಳನ್ನು ಒಮ್ಮೆ ಹಿಂದೆ ತಿರುವಿ ಹಾಕಿ ನೋಡಿ, ಅದರಲ್ಲಿ ಪ್ರತೀ ಪುಟದಲ್ಲೂ ಕಾಣುವ ಹೆಸರೇ ಅಮ್ಮ. ಮೊದಲ ತೊದಲ ನುಡಿಯು ಅಮ್ಮ, ಹಸಿದಾಗ ತುತ್ತು ತಿನಿಸುವ ಕೈಗಳು ಅಮ್ಮ, ಕಣ್ಣೀರ ಒರೆಸುವ ಬೆರಳು ಅಮ್ಮ, ಒಡಲೊಳಗಿನ ಕರೆಗಳಿಗೆ ಕಿವಿಯು ಅಮ್ಮ. ಎಂದಿಗೂ ನಾವು ಮರಳಿ ಕೊಡಲಾಗದ ಪ್ರೀತಿ ಅಂದ್ರೆ ಅದು ತಾಯಿ ಪ್ರೀತಿ. ಅವಳ ಆ ಪ್ರೀತಿ- ತ್ಯಾಗಕ್ಕೆ ನಾವೇನು ಮಾಡಿದರು ಕಡಿಮೆಯೇ. ದಿನವೂ ಆ ಪ್ರೀತಿಯನ್ನು ನೆನೆಯುವುದು ನಮ್ಮ ಕರ್ತವ್ಯ, ಆದರೆ ಒಂದು ದಿನ ಮಾತ್ರ ನಾವೆಲ್ಲರೂ ವಿಶೇಷವಾಗಿ ಆ ತಾಯಿಯನ್ನು…

Read More

ನಮ್ಮದು ದೇವಾಲಯಗಳ ನಾಡು; ನಮ್ಮಲ್ಲಿ ದೇವಸ್ಥಾನವಿಲ್ಲದ ಹಳ್ಳಿಯಿಲ್ಲ; ಊರಿಲ್ಲ. ಕುಂದಾಪುರವು ಇದಕ್ಕೆ ಹೊರತಾದುದಲ್ಲ. ಕುಂದಾಪುರ ಎಂದೊಡನೆ ಮೊದಲು ನೆನಪಿಗೆ ಬರುವುದು ಊರಿನ ಅಧಿದೇವತೆ ಶ್ರೀ ಕುಂದೇಶ್ವರ. ಶತ-ಶತಮಾನಗಳ ಇತಿಹಾಸವುಳ್ಳ ಶ್ರೀ ಕುಂದೇಶ್ವರ ಸಹಸ್ರ – ಸಹಸ್ರ ಭಕ್ತಾದಿಗಳ ಹೃದಯದಲ್ಲಿ ನೆಲೆ ನಿಂತಿದ್ದಾನೆ. ತಲೆ-ತಲಾಂತರಗಳಿಂದ ಬಂದ ಅಭಿಪ್ರಾಯದಂತೆ ಕುಂದೇಶ್ವರನಿಂದಾಗಿ ಈ ಊರು ಕುಂದಾಪುರ ಎಂದು ಹೆಸರು ಪಡೆಯಿತು. ಹಲವಾರು ಶಾಸನ, ಪುಸ್ತಕಗಳಲ್ಲಿ ಈ ಅಂಶ ಸ್ಪಷ್ಟವಾಗಿ ದಾಖಲಾಗಿದೆ. *ಶ್ರೀ ಕುಂದೇಶ್ವರ ದೇವಸ್ಥಾನ- ರಚನೆ. *ಶೃಂಗೇರಿ ಧರ್ಮ ಸಂಸ್ಥಾನದ ಸಂಬಂಧ. *ಶ್ರೀ ಕುಂದೇಶ್ವರ ಪುಷ್ಕರಿಣಿ. *ಸಾಂಸ್ಕೃತಿಕ ಕೇಂದ್ರ. *ಲಕ್ಷ ದೀಪೋತ್ಸವ ಮತ್ತು ರಥೋತ್ಸವ. *ಭಕ್ತಾದಿಗಳಿಗೆ ಲಭ್ಯವಿರುವ ಸೌಕರ್ಯಗಳು. *ಸೇವಾ ವಿವರ. *ಸಂಪರ್ಕ. ಶ್ರೀ ಕುಂದೇಶ್ವರ ದೇವಸ್ಥಾನ- ರಚನೆ: ಕುಂದಾಪುರ ತಾಲೂಕಿನ ಪ್ರಾಚೀನ ದೇವಾಲಯಗಳಲ್ಲಿ ಕುಂದೇಶ್ವರವೂ ಒಂದು. ಸಮುದ್ರ ತೀರದಿಂದ ಪೂರ್ವಕ್ಕೆ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಸಾಕಷ್ಟು ವಿಶಾಲವಾದ ಹೊರಪ್ರಾಕಾರ; ಮಹಾದ್ವಾರಕ್ಕೆ ಎದುರಾಗಿ ಬಲಿಪೀಠ; ಒಳ ಪ್ರಾಕಾರದಲ್ಲಿ ಒಂದು ನಂದಿ ಮಂಟಪ ಮತ್ತು ಪ್ರದಕ್ಷಿಣಾಪಥದ ಸುತ್ತಲೂ…

Read More

ಬೈಂದೂರು ಚಂದ್ರಶೇಖರ ನಾವಡ | ಕುಂದಾಪ್ರ ಡಾಟ್ ಕಾಂ ಲೇಖನ. ‘ನಿಸಾರ್ ಕವಿತಗಳ್’ ಎನ್ನುವ ಹೆಸರಲ್ಲಿ ನಿಸಾರ್ ಅವರ 75 ಕವನಗಳನ್ನು ಇತ್ತೀಚೆಗೆ ಮಲಯಾಳಮ್ ಭಾಷೆಗೆ ಭಾಷಾಂತರ ಮಾಡುವುದರ ಮೂಲಕ ಮಲಯಾಳಿಗರಿಗೆ ‘ನಿತ್ಯೋತ್ಸವ’ ಕವಿಯ ಉತ್ಕೃಷ್ಟ ಕವಿತೆಗಳ ರಸಸ್ವಾದನೆ ಮಾಡುವ ಸದವಕಾಶ ದೊರಕಿಸಿಕೊಟ್ಟ ಕುಂದಾಪುರದ ಲೇಖಕಿ ಡಾ. ಪಾರ್ವತಿ ಜಿ ಐತಾಳ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2018 ನೇ ಸಾಲಿನ ‘ಸಾಹಿತ್ಯ ಶ್ರೀ’ ಸಮ್ಮಾನ ಸಂದಿದೆ. ಮಕ್ಕಳ ನಾಟಕ ರಚನೆ, ತೀರ್ಪುಗಾರ್ತಿ ಹಾಗೂ ವಿಮರ್ಶಾ ಬರವಣಿಗೆಗಳ ಮೂಲಕ ರಂಗಭೂಮಿಯಲ್ಲಿಯೂ ಸಕ್ರಿಯವಾಗಿರುವ ಡಾ. ಪಾರ್ವತಿಯವರಿಗೆ ಅನುವಾದ ಕ್ಷೇತ್ರದಲ್ಲಿನ ಅನುಪಮ ಸೇವೆಗಾಗಿ 2011 ರಲ್ಲಿ ಕರ್ನಾಟಕ ಸರ್ಕಾರದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ (ಅನುವಾದ ಅಕಾಡೆಮಿ) ಶ್ರೇಷ್ಠ ಅನುವಾದಕಿ ಪ್ರಶಸ್ತಿ ಸಂದಿದೆ. ಮಾತೃ ಭಾಷೆಯಾಗಿ ಮಾಧ್ಯಮಿಕ ಶಿಕ್ಷಣವನ್ನು ಕನ್ನಡದಲ್ಲೇ ಪಡೆದ ಡಾ. ಪಾರ್ವತಿಯವರು ಮಲೆಯಾಳಂ ಭಾಷೆಯ ಸಾಹಿತ್ಯಿಕ ಕೃತಿಗಳ ಅನುವಾದ ಮಾಡುವಷ್ಟರ ಮಟ್ಟಿಗೆ ಸ್ವಯಂಪ್ರೇರಿತರಾಗಿ ಕಲಿತು ಅಲ್ಲಿಂದ ಜ್ಞಾನ ಪೀಠ ವಿಜೇತರ ಉತ್ಕೃಷ್ಟ…

Read More

ದಿವ್ಯಾಧರ ಶೆಟ್ಟಿ ಕೆರಾಡಿ | ಕುಂದಾಪ್ರ ಡಾಟ್ ಕಾಂ ಲೇಖನ. ಕನ್ನಡ ಚಿತ್ರರಂಗದ ಯುವಪೀಳಿಗೆಯ ನಿರ್ದೇಶಕರಲ್ಲಿ ಮುಂಚೂಣಿಯಲ್ಲಿ ನಿಂತಿರುವ ಹೆಸರು ರಿಷಬ್ ಶೆಟ್ಟಿ. ಚಿತ್ರದಿಂದ ಚಿತ್ರಕ್ಕೆ ಹೊಸ ಪ್ರಯೋಗ, ವಿಭಿನ್ನ ಪ್ರಯತ್ನಗಳ ಮೂಲಕ ಚಿತ್ರ ರಸಿಕರ ನಾಡಿಮಿಡಿತ ಅರಿತು ಅವರನ್ನು ರಂಜಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ರಿಕ್ಕಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಎಂಟ್ರಿ ಕೊಟ್ಟ ರಿಷಬ್ ಕಿರಿಕ್ ಪಾರ್ಟಿಯಂತಹ ಭರ್ಜರಿ ಹಿಟ್ ಸಿನೆಮಾವನ್ನು ಕೊಟ್ಟವರು. ಸದಾ ಹೊಸತನ ಭಿನ್ನ ಪ್ರಯೋಗಗಳತ್ತ ಮನಮಾಡುವ ಅವರು ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಉದ್ದದ ಶೀರ್ಷಿಕೆಯ ಮಕ್ಕಳ ಚಿತ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಮೂಲಕ ಒಂದು ಹೊಸ ಕ್ರಾಂತಿಗೆ ಆರಂಭ ಹಾಡಿದವರು ಅನಂತನಾಗ್ ಒಬ್ಬರು ಬಿಟ್ಟು ಸ್ಟಾರ್ ನಟರ, ಹೀರೋಯಿಸಂನ ಹಿಂದೆ ಬೀಳದೆ ಸ್ಥಳೀಯ ಪ್ರತಿಭೆಗಳನ್ನಿಟ್ಟುಕೊಂಡು ಅದೂ ಕರ್ನಾಟಕ ಗಡಿನಾಡಿನ ಶಾಲೆಯ ಹಿನ್ನೆಲೆಯನ್ನಿಟ್ಟುಕೊಂಡು ಒಂದು ಸಂದೇಶ ಮುಟ್ಟಿಸುವ ಮೂಲಕ ಕನ್ನಡ ಜನ ಕನ್ನಡ ಶಾಲೆಗಳತ್ತ ನೋಡುವಂತೆ, ಕನ್ನಡ ಶಾಲೆಗಳ…

Read More

ಕುಂದಾಪ್ರ ಡಾಟ್ ಕಾಂ. ಮರಳಿ ಬಂದಿದೆ ಹೊಸವರುಷ. ತಂದಿದೆ ನವ ಹರುಷ. ಹೊಸ ಕನಸು, ಹೊಸ ನಿರೀಕ್ಷೆ, ತವಕ-ತಲ್ಲಣಗಳ ಮೂಟೆಯನ್ನೇ ಹೊತ್ತು ಹೊಸ ವರ್ಷವನ್ನು ಬರಮಾಡಿಕೊಂಡಿದ್ದೇವೆ. ಈ ಸುಸಂದರ್ಭದಲ್ಲಿಯೇ ಕಳೆದ ದಿನಗಳನ್ನು ಪರಾಮರ್ಶಿಸುವ, ಓರೆಗೆ ಹಚ್ಚುವ, ಮುಂದಿನ ಯೋಜನೆಗಳ ಕುರಿತು ಗಮನ ಹರಿಸುವ, ಸೂಕ್ತವೆನಿಸಿದ್ದನ್ನು ಕಾರ್ಯರೂಪಕ್ಕಿಳಿಸುವ ಕೆಲಸವನ್ನು ನಮ್ಮಿಂದಾಗಬೇಕಿದೆ. ಪ್ರಪಂಚ ಆಧುನಿಕತೆಯನ್ನು ತುಂಬಿಕೊಂಡು ಬೀಗಿದಂತೆ ಮರೆಯಾಗಬೇಕಿದ್ದ ಸಮಾಜದ ಅನಿಷ್ಟಗಳು ಹೊಸ ಹೊಸ ರೂಪದಲ್ಲಿ ಮತ್ತೆ ನಮ್ಮನ್ನು ತಳುಕು ಹಾಕಿಕೊಳ್ಳುತ್ತಿವೆ. ನಾಗರೀಕ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದು ಹೇಳುವ ಇನ್ನೊಂದು ಮಗ್ಗುಲಲ್ಲೇ ಅನಾಗರೀಕತೆ ತಾಂಡವಾಡುತ್ತಿದೆ. ಜೀವನ ಮೌಲ್ಯಗಳೆಂಬುದು ಉಪನ್ಯಾಸದ ವಿಷಯಗಳಾಗಿವೆಯೇ ಹೊರತು ಬದುಕಿನ ಭಾಗವಾಗಿಲ್ಲ. ಆದರ್ಶಪ್ರಾಯರನ್ನು ಹುಡುಕಿ ಹೊರಟಿದ್ದೇವೆಯೇ ಹೊರತು ನಮ್ಮಲ್ಲೊಂದು ಆದರ್ಶವನ್ನು ಗಟ್ಟಿಗೊಳಿಸಿಕೊಂಡಿಲ್ಲ. ಸಂಬಂಧಗಳ ಅಳಿವು ಉಳಿವುಗಳು ಬ್ರೇಕಿಂಗ್ ನ್ಯೂಸ್ಗಳಿಗಿಂತ ವೇಗವಾಗಿ ನಿರ್ಧರಿತಗೊಂಡು ಇತರರನ್ನು ತಲುಪಿ ಹರಟೆಯ ವಸ್ತುಗಳಾಗುತ್ತಿವೆ. ದೇಶವನ್ನು ಮುನ್ನಡೆಸಬೇಕಾದ ಯುವಶಕ್ತಿ ಕಾಲ-ಜ್ಞಾನಗಳ ಪರಿವೇ ಇಲ್ಲದಂತೆ ಇನ್ನೆಲ್ಲೋ ಮುಳುಗಿಹೋಗುತ್ತಿದ್ದಾರೆ. ಯಂತ್ರದ ತೆಕ್ಕೆಯೊಳಗೆ ಸಿಕ್ಕಿ ಒದ್ದಾಡುವ ಬದುಕು ನಮ್ಮದಾಗುತ್ತಿದೆ. ಸಮಾಜದ ಪರಿವರ್ತಕರೆನಿಕೊಂಡವರೆಲ್ಲರೂ ಮಲಗಿ…

Read More