ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೆಸಿಐ ಶಿರೂರು ಘಟಕ ಇದರ ವತಿಯಿಂದ ಕಾರ್ಗಿಲ್ ವಿಜಯ್ ದಿನದ ಅಂಗವಾಗಿ ಕಳೆದ ಹಲವು ವರ್ಷಗಳಿಂದ ಯೋಧರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶಿರೂರು ಗ್ರಾಮದ ಕರಿಕಟ್ಟೆ ಆರ್ಮಿ ನಿವಾಸಿ ಸುರೇಶ ಮೇಸ್ತಾ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜೆಸಿಐ ಶಿರೂರ್‌ನ ಅಧ್ಯಕ್ಷರರಾದ ವಿನೋದ್ ಮೇಸ್ತಾ. ಕಾರ್ಯದರ್ಶಿ ಪವನ್ ಪೂಜಾರಿ, ಪೂರ್ವ ಅಧ್ಯಕ್ಷರಾದ ನಾಗೇಂದ್ರ ಪ್ರಭು, ಪ್ರಕಾಶ್ ಮಾಕೋಡಿ, ನಾಗೇಶ್ ಕೆ., ಪಾಂಡುರಂಗ ಆಳ್ವಗೆದ್ದೆ, ಜಯಂತ್ ಪೂಜಾರಿ ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.











