ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಬ್ರಹ್ಮಾವರ ತಾಲೂಕಿನ ಮಣೂರು ಗ್ರಾಮದ ಪಡುಕರೆಯಲ್ಲಿ 6ರಿಂದ 7ಕಿಲೋ ಮೀಟರ್ ತನಕ ಕೃಷಿ ಭೂಮಿ ಮಧ್ಯ ಉಪ್ಪು ನೀರಿನ ಹೊಳೆ ಹರಿಯುತ್ತಿದ್ದು ಇಲ್ಲಿ ಎಲ್ಲೆಂದರಲ್ಲಿ ಕಾಂಡ್ಲ ಗಿಡದ ಸಮಸ್ಯೆಯಿಂದ ನೀರು ಸರಾಗ ಹರಿಯದೇ ಕೃತಕ ನೆರೆ ಸೃಷ್ಠಿಯಾಗುತ್ತಿದೆ .
ಈ ಹಿನ್ನಲ್ಲೆಯಲ್ಲಿ ಈ ಭಾಗದ ನೂರಾರು ರೈತರಿಗೆ ಕೃಷಿಗೆ ಸಂಕಷ್ಟವನ್ನು ತಂದೊಡ್ಡುತ್ತಿದ್ದು ಸರಕಾರ ಕಾಂಡ್ಲ ಗಿಡವನ್ನು ಸರಿಯಾಗಿ ನಿರ್ವಹಣೆ ಮತ್ತು ಹೊಸದಾಗಿ ಕಾಂಡ್ಲಾ ಪ್ಲಾಂಟೇಶನ್ ಮಾಡದೇ ಹೊಳೆ ಹೂಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಸಮುದ್ರಕ್ಕೆ ಹರಿಯುವಂತೆ ಅನುಕೂಲಕರ ವಾತಾವರಣ ನಿರ್ಮಿಸಿ ರೈತರಿಗೆ ನೆರವಾಗುವಂತೆ ಇಲ್ಲಿನ ರೈತಧ್ವನಿ ಸಂಘ ಕೋಟ ಸೋಮವಾರ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಈ ವೇಳೆ ರೈತಧ್ವನಿ ಸಂಘ ಕೋಟ ಅಧ್ಯಕ್ಷ ಜಯರಾಮ ಶೆಟ್ಟಿ, ಪ್ರಮುಖರಾದ ಟಿ. ಮಂಜುನಾಥ ಗಿಳಿಯಾರು, ಭಾಸ್ಕರ ಶೆಟ್ಟಿ ಮಣೂರು, ಜಿ. ತಿಮ್ಮ ಕಾಂಚನ್ ಹರ್ತಟ್ಟು ಇತರರು ಇದ್ದರು.











