ಭಾರತ ಮಾತೆಗೆ ಜೈ ಅನ್ನದ ……ರಿಗೆ

Call us

Call us

Call us

ನರೇಂದ್ರ ಎಸ್. ಗಂಗೊಳ್ಳಿ | ಕುಂದಾಪ್ರ ಡಾಟ್ ಕಾಂ ಅಂಕಣ
ತಲೆಬರಹದಲ್ಲಿ ಒಂದಷ್ಟು ಖಾಲಿ ಜಾಗ ಯಾಕೆ ಬಿಟ್ಟಿರಬಹುದು ಎಂದು ತಲೆಕೆಡಿಸಕೊಳ್ಳಬೇಡಿ. ನಿಮಗೇನು ಇಷ್ಟವೋ ಆ ಶಬ್ದವನ್ನು ನೀವು ಅಲ್ಲಿ ಖಂಡಿತಾ ತುಂಬಿಕೊಳ್ಳಬಹುದು. ಅಭಿವ್ಯಕ್ತಿ ಸ್ವಾತಂತ್ರ್ಯ ಸ್ವಾಮಿ! ಜಗತ್ತಿಗೆ ಅಹಿಂಸೆಯನ್ನು ಭೋಧಿಸಿದ ದೇಶ ನಮ್ಮದು ಎಂದು ಮೈ ತುಂಬಾ ದೇಶದ್ರೋಹಿಗಳ ಮುಳ್ಳನ್ನು ಚುಚ್ಚಿಸಿಕೊಂಡು ತುಟಿಕಚ್ಚಿ ನೋವನ್ನು ಸೈರಿಸುವುದರಲ್ಲಿ ಅರ್ಥವಿಲ್ಲ. ನಮ್ಮದು ಹೇಡಿಗಳ ನಾಡಲ್ಲ. ಕದನಕಲಿಗಳ ಶೂರರ ಬೀಡು. ಅಂತಹ ಜಗಜಟ್ಟಿ ನೆಪೋಲಿಯನ್‌ನನ್ನೇ ಮಂಡಿಯೂರಿಸಿದ ತಾಕತ್ತು ಭಾರತದ್ದು. ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು ಎನ್ನುವುದು ಸುಮ್ಮನೇ ಹೇಳಿದ್ದಲ್ಲ.

Call us

Click Here

ನಿಜ. ಆವತ್ತೊಬ್ಬ ಸವಾಲು ಎದುರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಹೇಡಿಯೊಬ್ಬನನ್ನು ಗುರುವೆಂದು ತಿಳಿದ ಕನ್ನಿಂಗ್ ಒಬ್ಬ ದೇಶದೊಳಗಡೆ ನನಗೆ ಅಜಾದಿ ಬೇಕು ಎಂದು ಕೂಗಾಡುತ್ತಿದ್ದ ರೀತಿಯನ್ನು ನೋಡಿದರೆ ಅವತ್ತೇ ಅವನನ್ನು ಎದುರುನಿಲ್ಲಿಸಿ ಕೇಳಬೇಕೆನಿಸಿತ್ತು. ನೀನು ಕೂಗಾಡುತ್ತಿರುವ ಅಜಾದಿ ನಿನಗೆಲ್ಲಿಂದ ಬಂದಿದೆ ಅಂತ. ಅಸಲಿಗೆ ಅವನ ಮಾತುಗಳಲ್ಲಿ ಅರ್ಥವೇ ಇರಲಿಲ್ಲ. ಇಷ್ಟು ಸರಳ ವಿಷಯ ಅರ್ಥ ಮಾಡಿಕೊಳ್ಳಲಾಗದ (ಕ್ಷಮಿಸಿ ಮಾಡಿಕೊಳ್ಳಲು ಇಷ್ಟ ಇಲ್ಲದ )ಒಂದಷ್ಟು ಮಾಧ್ಯಮಗಳು. ಢೋಂಗೀ ನಾಯಕರುಗಳು, ಬರಹಗಾರರು ಅವನನ್ನು ಹೀರೋ ಎನ್ನುವಂತೆ ಬಿಂಬಿಸಲು ಹೊರಟರಲ್ಲಾ ಇವರುಗಳ ತಲೆಯಲ್ಲಿ ಬುದ್ಧಿ ಇರಲು ಸಾಧ್ಯವೇ ಇಲ್ಲ ಎಂದು ಪ್ರತೀ ಸಾಮಾನ್ಯ ನಾಗರಿಕನಿಗೂ ಅನ್ನಿಸಿತ್ತು. ಅವನ ಲೊಳಲೊಟ್ಟೆ ಭಾಷಣ ಕೇಳಿ ಸ್ವಂತ ಭಾಷಣ ಮಾಡುವ ಯೋಗ್ಯತೆಯೂ ಇಲ್ಲದ ಪಕ್ಷವೊಂದರ ನಾಯಕನಾಗಿ ಗುರುತಿಕೊಳ್ಳುತ್ತಿರುವ ಒಬ್ಬ ವ್ಯಕ್ತಿ ಅಂತಹ ದೇಶದ್ರೋಹಿಗಳನ್ನು ಬೆಂಬಲಿಸಿಬಿಟ್ಟನಲ್ಲ ಅವತ್ತೇ ಅವರುಗಳ ದೇಶ ಪ್ರೇಮ ಎಂತಾದ್ದು ಎನ್ನುವುದು ಜಗತ್ತಿಗೆ ಮತ್ತೆ ಮತ್ತೆ ಜಾಹೀರಾಗಿ ಹೋಗಿತ್ತು. ಭಾಷಣ ಮಾಡೋರೆಲ್ಲಾ ನಾಯಕ ಆಗೋ ಹಾಗಿದ್ದರೆ ಗಲ್ಲಿಗಲ್ಲಿಗಳಲ್ಲಿ ಇವತ್ತು ನಾಯಕರೇ ಸೃಷ್ಟಿಯಾಗುತ್ತಿದ್ದರು. ಅಸಲಿಗೆ ದೇಶದ ಧನಾತ್ಮಕ ಬೆಳವಣಿಗೆಯನ್ನು ಸಹಿಸದೆ ಕಿರುಚಾಡುತ್ತಿರುವ ಇವರುಗಳ ವಿಕೃತಿಯನ್ನು ನಾವು ಹೀಗೆ ಬೆಳೆಯಗೊಡುತ್ತಿರುವುದು ನಿಜಕ್ಕೂ ವಿಪರ‍್ಯಾಸ. ಅವತ್ತೇ ನಾವೆಲ್ಲಾ ಸೇರಿಕೊಂಡು ದೇಶಬಿಟ್ಟು ತೊಲಗಿ ದೇಶದ್ರೋಹಿಗಳೇ ಅಂತ ಒಂದಾಗಿಬಿಟ್ಟಿದ್ದರೆ ಇವತ್ತು ಒಬ್ಬನೇ ಒಬ್ಬ ದೇಶದ ವಿರುದ್ಧ ಮಾತನಾಡುತ್ತಿರಲಿಲ್ಲ. ಇನ್ನೂ ಕಾಲ ಮಿಂಚಿಲ್ಲ.

ಹೌದು. ಇವತ್ತು ಪರಿಸ್ಥಿತಿ ಹಾಗಿದೆ. ಸಹನೆಯ ಹೆಸರಲ್ಲಿ ನಾವುಗಳು ಸುಮ್ಮನಿರುವುದೇ ಕೆಲವೊಂದಷ್ಟು ಜನರಿಗೆ ಬಲ ನೀಡಿದಂತಿದೆ. ಅದಕ್ಕೆ ಒವೈಸಿ ಕುತ್ತಿಗೆಗೆ ಚೂರಿಯಿಟ್ಟರೂ ಭಾರತ್ ಮಾತಾ ಕೀ ಜೈ ಅನ್ನಲ್ಲ ಎನ್ನುತ್ತಾನೆ. ಅದರ ಬೆನ್ನಿಗೆ ಅವನನ್ನು ಬೆಂಬಲಸಿಕೊಂಡು ಒಂದಷ್ಟು ಗಣ್ಯರೆನ್ನಿಸಿಕೊಂಡವರು (ಎನ್ನಿಸಿಕೊಂಡದ್ದು ಮಾತ್ರ ನೆನಪಿರಲಿ) ಅದರಲ್ಲಿ ತಪ್ಪೇನು ಎಂದು ಹೇಳಿಕೆ ನೀಡುತ್ತಾರೆ. ಅಷ್ಟೂ ಸಾಲದೆಂಬಂತೆ ಲಕ್ನೋದ ದಾರುಲ್ ಊಲುಮ್ ದೇವೋಬಂದ್ ಎನ್ನುವ ಸೆಮಿನರಿಯ ಒಂದಷ್ಟು ಜನ ಸೇರಿಕೊಂಡು ಹಾಗೆ ಹೇಳಲೇಬಾರದು ಎಂದು ಫತ್ವಾ ಹೊರಡಿಸುತ್ತಾರೆ. ಅಮೃತಸರದ ಶಿರೋಮಣಿ ಅಕಾಲಿದಳದ ಅಧ್ಯಕ್ಷರೋರ್ವರು ಸಿಖ್ಖರು ಈ ಘೋಷಣೆಯನ್ನು ಕೂಗಬಾರದು ಎಂದು ಬೊಬ್ಬೆ ಹೊಡೆಯುತ್ತಾರೆ. ಇವರಿಗೆಲ್ಲಾ ಆಶ್ರಯ ಕೊಟ್ಟ ದುಸ್ಥಿತಿಗೆ ಭಾರತ ಮಾತೆ ಮೌನವಾಗಿ ಕಣ್ಣೀರು ಸುರಿಸುತ್ತಾಳೆ. | ಕುಂದಾಪ್ರ ಡಾಟ್ ಕಾಂ ಅಂಕಣ

ನಿಜ ಬೇಡ ಬೇಡವೆಂದರೂ ಕೋಪ ಬರುತ್ತದೆ. ಭಾರತ್ ಮಾತಾ ಕೀ ಜೈ ಅಂದರೆ ಮಾತ್ರ ದೇಶಭಕ್ತರು ಅಂತ ಅರ್ಥನಾ ಎಂದು ಕೇಳಿದರೆ ನನ್ನ ಉತ್ತರ ಖಂಡಿತಾ ಅಲ್ಲ. ಆದರೆ ಭಾರತ ಮಾತಾ ಕೀ ಜೈ ಅಂತ ಹೇಳಲು ಸಾಧ್ಯವೇ ಇಲ್ಲ ಅನ್ನೋ ಮನಸ್ಥಿತಿ ಇದೆಯಲ್ಲಾ ಅದು ಅಪ್ಪಟ ಈ ದೇಶಕ್ಕೆ ಮಾಡುತ್ತಿರುವ ಅವಮಾನವಲ್ಲದೆ ಬೇರೇನೂ ಅಲ್ಲ. ಮತ್ತು ಹಾಗೆ ಹೇಳೋದಿಲ್ಲ ಅನ್ನೋದಕ್ಕೆ ಧಾರ್ಮಿಕ ಕಾರಣಗಳನ್ನು ನೀಡುವುದು ಮೂರ್ಖತನವೇ ಸರಿ. ಹೇಳದಿದ್ದರೆ ಬೇಡ ಬಿಡಿ. ಹೇಳಿದವರೆಲ್ಲಾ ಮಹಾನ್ ದೇಶಭಕ್ತರು ಅಂತೇನೂ ಅಲ್ಲ. ಆದರೆ ಹಾಗನ್ನುವುದು ಧರ್ಮ ವಿರೋಧಿ ಅಂತ ಬಿಂಬಿಸುವುದು ಎಷ್ಟು ಸರಿ ಅನ್ನೋದು ನನ್ನ ಪ್ರಶ್ನೆ. ನಿಜಕ್ಕೂ ಫತ್ವಾಗಳಿಗೆ ಇಸ್ಲಾಂ ಧರ್ಮದಲ್ಲಿ ಮಹತ್ತರ ಸ್ಥಾನಮಾನವಿದೆ. ಅದನ್ನು ಹೊರಡಿಸುವವರು ಪಕ್ಕಾ ವಿದ್ವಾಂಸರಾಗಿದ್ದು ಒಂದು ವಿಷಯದ ಆಳ ಅರಿವು ಪರಿಣಾಮಗಳನ್ನು ಅಭ್ಯಸಿಸಿ ಫತ್ವಾಗಳನ್ನು ಹೊರಡಿಸಲಾಗುತ್ತೆ. ಆದರೆ ಭಾರತ ಮಾತಾ ಕೀ ಜೈ ಅಂತ ಹೇಳಬೇಡಿ ಅಂತ ಫತ್ವಾ ಹೊರಡಿಸಿರುವ ಹಿಂದೆ ಇಂತಹ ವಿದ್ವಂಸತನ ಇದೆಯೆಂದು ಒಪ್ಪಿಕೊಳ್ಳಲಾಗದು.

Bharath-mata-ki-jaiಅಸಲಿಗೆ ಭಾರತ ಮಾತೆ ಎನ್ನುವದು ಯಾವುದೇ ಒಂದು ನಿರ್ದಿಷ್ಠ ಧರ್ಮದ ತತ್ವವೂ ಅಲ್ಲ ಎನ್ನುವುದನ್ನು ಇಂತಹ ಜನರು ಮನಗಾಣಬೇಕಿದೆ. ನನಗೆ ಆಶ್ರಯವನ್ನು ನೀಡಿದ ಮಣ್ಣನ್ನು ನೆಲವನ್ನು ಗೌರವಿಸುವ ನಿಟ್ಟಿನಲ್ಲಿ ಈ ದೇಶದ ಪರಮೋಚ್ಛ ಸಂಸ್ಕೃತಿ ನಮಗೆ ಕಲಿಸಿದ ಗೌರವದ ಪ್ರತೀಕವದು. ದೇಶಕ್ಕಿಂತ ಯಾವ ಧರ್ಮವೂ ದೊಡ್ಡದಲ್ಲ. ದೇಶವೇ ಇಲ್ಲದಿದ್ದರೆ ಯಾವ ಧರ್ಮ ಎಲ್ಲಿ ಇರುತಿತ್ತು? ಅಸಲಿಗೆ ಇದೇನು ಇವತ್ತು ನಿನ್ನೆಯ ವಿಚಾರವೂ ಅಲ್ಲ. ದಾಸ್ಯದಲ್ಲಿದ್ದ ದೇಶವನ್ನು ಹೋರಾಟದ ನಿಟ್ಟಿನಲ್ಲಿ ಪ್ರೇರೆಪಿಸಿ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳುವಲ್ಲಿ ಸಮಸ್ತ ಭಾರತೀಯರನ್ನು ಪ್ರೇರೆಪಿಸಿದ ಪ್ರೇರಣಾಶಕ್ತಿಗಳಲ್ಲಿ ಒಂದಾದ ಭಾರತ ಮಾತಾ ಕೀ ಜೈ ಅನ್ನುವ ಘೋಷ ವಾಕ್ಯ ಇವರಿಗೆ ಅದು ಹೇಗೆ ಧರ್ಮ ವಿರೋಧಿಯಾಯಿತೋ! ಧಿಕ್ಕಾರವಿರಲಿ ಇವರ ಹುಂಬತನಕ್ಕೆ. | ಕುಂದಾಪ್ರ ಡಾಟ್ ಕಾಂ ಅಂಕಣ

Click here

Click here

Click here

Click Here

Call us

Call us

ದೇಶವನ್ನು ತಾಯಿಯ ರೂಪದಲ್ಲಿ ಕಾಣುವಂತ ವಿಶಾಲವಾದ ಉದಾತ್ತ ಮತ್ತು ಉತ್ಕೃಷ್ಠ ಮನೋಭಾವ ನಮ್ಮದು. ಅಂತಹ ವಿಶಾಲತೆಗೆ ವಿಶ್ವವೇ ತಲೆಬಾಗಿದೆ. ತಾಯಿಗೆ ಜೈಕಾರ ಕೂಗುವುದರಲ್ಲಿ ಅದೇನು ತಪ್ಪು ಕಾಣಿಸಲು ಸಾಧ್ಯ. ಯಾವ ಧರ್ಮ ತಾನೇ ಅದನ್ನು ವಿರೋಧಿಸೀತು? ನನ್ನ ಹೆತ್ತ ತಾಯಿಗೆ ನನ್ನ ಪೊರೆವ ತಾಯಿಗೆ ನಾನು ಜೈ ಅನ್ನ ಬಾರದಾ? ಜೈ ಅಂದರೆ ಬೇರೆ ದೇವರನ್ನು ಆರಾಧಿಸಿದಂತೆ ಅನ್ನುವ ಸಂಕುಚಿತ ಮನೋಭಾವ ಇವರಿಗೆ ಹುಟ್ಟಿದ್ದಾದರೂ ಹೇಗೆ? ಉಪಕಾರ ಸ್ಮರಣೆ ತಪ್ಪು ಎಂದು ಅದಾವ ಧರ್ಮ ತಾನೇ ಹೇಳುತ್ತದೆ? ಜೈ ಹಿಂದ್ ಎನ್ನಲು ಸಾಧ್ಯವಾಗುವುದಾದರೆ ಜೈ ಭಾರತ ಮಾತೆ ಎನ್ನಲೇನಡ್ಡಿ? ತಾಯಿಯನ್ನು ದೇವ ಸ್ವರೂಪಿ ಎನ್ನಲು ನಾವು ತಯಾರಿಲ್ಲ ಎಂದಾದರೆ ನಾವು ಮಹಿಳೆಯರನ್ನು ಗೌರವಿಸುತ್ತಿರುವ ಪರಿ ಇದೇನಾ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳದೆ? ಒಂದು ದೇಶದ ಮೂಲ ಸಂಸ್ಕೃತಿಯನ್ನೇ ನೀವು ಅವಮಾನಿಸುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತೀರಿ ಎಂದಾದರೆ ಈ ದೇಶದಲ್ಲಿ ನೀವು ವಾಸಿಸಲಿಕ್ಕೆ ಎಷ್ಟು ಅರ್ಹ ಎಂದು ಜೈಕಾರ ವಿರೋಧಿಗಳನ್ನು ಕೇಳಬೇಕಲ್ಲವೆ?

ನೀವು ಹೇಳೋದಿಲ್ಲವಾದರೆ ಹೋಗಲಿ ಎಂದು ಸುಮ್ಮನಿರಬಹುದಿತ್ತಲ್ಲಾ! ಅದು ಬಿಟ್ಟು ಅದನ್ನೇ ದೊಡ್ಡ ಸಾಧನೆ ಅನ್ನೋ ರೀತಿಯಲ್ಲಿ ಶೂರರ ತರಹ ಫೋಸು ನೀಡಿ ಅಪ್ಪಟ ಅಹಂಕಾರದ ಮಾತುಗಳನ್ನಾಡುವುದು ಮತ್ತು ಆ ಮೂಲಕ ಕೋಟ್ಯಂತರ ಭಾರತೀಯರ ಶ್ರೇಷ್ಠ ನಂಬಿಕೆಯನ್ನು ಅವಮಾನಿಸುವುದನ್ನು ನಾವು ಅದು ಹೇಗೆ ನೋಡಿ ಸುಮ್ಮನಿರಲು ಸಾಧ್ಯ? ಜೈ ವಿರೋಧಿಗಳೇ ನಿಮ್ಮ ಧಿಮಾಕು ನಿಮ್ಮ ಬಳಿಯೇ ಇರಲಿ. ಅದಕ್ಕೆ ಧಾರ್ಮಿಕ ಲೇಪನ ಹಚ್ಚಿ ಧರ್ಮವನ್ನು ಅವಮಾನಿಸದಿರಿ. ಇದು ಭಾರತ. ಇಲ್ಲಿ ಸಹಕಾರ ಸಹಬಾಳ್ವೆಗೆ ಮಾತ್ರ ಜಾಗ. ಅಹಂಕಾರ ಕುತಂತ್ರಗಳಿಗಲ್ಲ. | ಕುಂದಾಪ್ರ ಡಾಟ್ ಕಾಂ ಅಂಕಣ

[quote font_size=”16″ bcolor=”#ef7700″]ಕೊನೇ ಮಾತು: ಒಂದಂತೂ ಸತ್ಯ. ಜೈ ವಿರೋಧಿ ದುರುಳರಿಂದ ಭಾರತ ಮಾತೆಗೆ ಜೈಕಾರ ಹಾಕಿಸುವ ಅವಶ್ಯಕತೆ ಯಾರಿಗೂ ಇಲ್ಲ. ಪ್ರೀತಿ ಅಭಿಮಾನ ಹೃದಯದಿಂದ ಬರಬೇಕು. ಅದೇ ಇಲ್ಲ ಅಂದರೆ.?[/quote]

Leave a Reply

Your email address will not be published. Required fields are marked *

2 × five =