ಹಂಗಳೂರು ಶ್ರೀ ಪ್ರಸನ್ನ ಆಂಜನೇಯ ದೇವಸ್ಥಾನದ 12ನೇ ವಾರ್ಷಿಕೋತ್ಸವ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರತಿಯೊಬ್ಬ ಮನುಷ್ಯರಲ್ಲಿ ಎರಡು ರೀತಿಯ ವ್ಯಕ್ತಿತ್ವವಿರುತ್ತದೆ. ಕೆಲವರು ನೋಡಲು ಸುಂದರವಾಗಿ ಕಂಡರು ಮನಸ್ಸು ಕುಟಿಲತೆಯಿಂದ ತುಂಬಿರುತ್ತದೆ. ಒಳ್ಳೆಯ ಮನಸ್ಸು ಉಳ್ಳವರು ಕೆಲವೊಮ್ಮೆ ನೋಡಲು ಸುಂದರವಾಗಿರುವುದಿಲ್ಲಾ. ಒಳ್ಳೆತನ ಹಾಗೂ ಬಾಹ್ಯ ಸೌಂದರ್ಯ ಎರಡು ಗುಣಗಳಿರುವ ಕೆಲವೇ ಮನುಷ್ಯರಲ್ಲಿ ಸುರೇಶ ಡಿ ಪಡುಕೋಣೆ ಓರ್ವರು. ಯಾರಿಗೂ ನೋಯಿಸದ ಮುಗ್ದ ಮನಸ್ಸಿನವರು. ಎಲ್ಲರಿಗೂ ಒಳಿತನ್ನು ಬಯಸುವ, ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿರುವ ಮಹಾನ್ ವ್ಯಕ್ತಿ ಎಂದು ಉದ್ಯಮಿ ದತ್ತಾನಂದ ಗಂಗೊಳ್ಳಿ ಹೇಳಿದರು

Call us

Click Here

ಅವರು ಕುಂದಾಪುರ ಹಂಗಳೂರಿನ ಶ್ರೀ ಪ್ರಸನ್ನ ಆಂಜನೇಯ ದೇವಸ್ಥಾನದ ೧೨ ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಸದಸದ್ಯರಾದ ಲಕ್ಷ್ಮೀ ಎಂ.ಬಿಲ್ಲವ ವಹಿಸಿದ್ದರು. ತಾಲೂಕು ಪಂಚಾಯತ್ ಸದಸ್ಯರಾದ ರಾಜು ದೇವಾಡಿಗ, ಸೇವಾಕರ್ತರಾದ ಸುರೇಶ ಡಿ ಪಡುಕೋಣೆ ದಂಪತಿಗಳು ಹಾಗೂ ಹಂಗಳೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಲಜ ಆರ್ ಚಂದನ್, ಮುಂಬೈನ ಉದ್ಯಮಿ ನಾಗರಾಜ ಪಡುಕೋಣೆ, ಪತ್ರಕರ್ತ ಕೆ.ಸಿ.ರಾಜೇಶ್, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

Leave a Reply