ನಿವೇಶನ ರಹಿತರ ಭೂಮಿ ಹಕ್ಕಿನ ಹೋರಾಟ ತೀವ್ರಗೊಳಿಸಲು ಕರೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೊಟೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೃಷಿ ಕೂಲಿಕಾರರ ಸಂಘ ಹಾಗೂ ನಿವೇಶನ ರಹಿತರ ಹೋರಾಟ ಸಮಿತಿಗಳ ನೇತೃತ್ವದಲ್ಲಿ ಕೊಟೇಶ್ವರ ಗ್ರಾಮದಲ್ಲಿ – ಸ್ವಂತ ಮನೆ, ಭೂಮಿ ಇಲ್ಲದ, ಬಾಡಿಗೆ ಮನೆಯಲ್ಲಿ ವಾಸವಾಗಿರುವ, ಒಂದೇ ಮನೆಯ ಸೂರಿನಡಿ ೨-೩ ಕುಟುಂಬ ಅನಿವಾರ‍್ಯ ಪರಿಸ್ಥಿತಿಯಲ್ಲಿ ವಾಸವಾಗಿರುವ ಬಡನಿವೇಶನ ರಹಿತರು ನಿವೇಶನ ಸ್ಥಳ ಸರಕಾರಿ ಭೂಮಿ ಗುರುತಿಸಿ – ಭೂಮಿ ಹಕ್ಕು ಪತ್ರ ಮಂಜೂರು ಮಾಡಲು ಒತ್ತಾಯಿಸಿ, ತಹಶೀಲ್ದಾರ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ಜಿಲ್ಲಾಧಿಕಾರಿ ಕಛೇರಿ ಎದುರು ಹಾಗೂ ಬೆಂಗಳೂರು ವಿಧಾನ ಸೌಧ ಚಲೋ ಮುಂತಾದ ವಿವಿದ ಹಂತದ ಸಮರಶೀಲ ಹೋರಾಟ ಸಂಘಟಿಸಿ ಹೋರಾಟ ಮಾಡಲಾಗಿದ್ದರೂ-ನಿವೇಶನ ರಹಿತರ ಅಂತಿಮ ಪಟ್ಟಿ ಸಿದ್ಧಪಡಿಸಿ ವರ್ಷ ೨ ಕಳೆದರೂ ಈ ತನಕ ಸರಕಾರಿ ಜಮೀನು ಗುರುತಿಸಿ ಹಕ್ಕು ಪತ್ರ ಕೊಡದ ಬಗ್ಗೆ ಕೃಷಿ ಕೂಲಿಕಾರರ ಸಂಘದ ತಾಲೂಕು ಉಪಾಧ್ಯಕ್ಷ ಕರಿಯ ದೇವಾಡಿಗರವರು ಸರಕಾರದ ವಿಳಂಭ ನೀತಿಯನ್ನು ಖಂಡಿಸಿದರು. ಈ ಹಿನ್ನಲೆಯಲ್ಲಿ ೨೮ ಸೆಪ್ಟೆಂಬರ್ ೨೦೧೬ ರಂದು ತಹಶೀಲ್ದಾರ್ ಕಛೇರಿ ಮುತ್ತಿಗೆ ಹೋರಾಟ ಯಶಸ್ವಿಗೊಳಿಸಬೇಕು ಎಂದು ಅವರು ಕೊಟೇಶ್ವರ ಶಾರದಾ ಕಲ್ಯಾಣ ಮಂಟಪದಲ್ಲಿ ಮನೆ ನಿವೇಶನ ರಹಿತ ಅರ್ಜಿದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

Call us

Click Here

Leave a Reply