ಬಸ್ರೂರಿನಲ್ಲಿ ಆಮ್ಗೆಲೆ ಟ್ರೋಫಿ-2017

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಸ್ರೂರು ಜಿ.ಎಸ್.ಬಿ ಸಭಾ ಆಶ್ರಯದಲ್ಲಿ ಹಾಗೂ ಚಿತ್ತಾರ ಕ್ಯಾಶ್ಯೂ ವಂಡಾರ ಇವರ ಪ್ರಾಯೋಜಕತ್ವದಲ್ಲಿ ಜಿ.ಎಸ್.ಬಿ ಸಮಾಜ ಬಾಂಧವರಿಗೆ ಸೀಮಿತ ಓವರುಗಳ 30 ಗಜಗಳ ಕ್ರಿಕೆಟ್ ಪಂದ್ಯಾಟ ಆಮ್ಗೆಲೆ ಟ್ರೋಫಿ-2017 ಬಸ್ರೂರಿನ ಸರಕಾರಿ ಪ್ರೌಡಶಾಲೆಯ ಮೈದಾನದಲ್ಲಿ ನಡೆಯಿತು.

Call us

Click Here

ಪಂದ್ಯಾಟದ ಉದ್ಘಾಟನೆಯನ್ನು ಬಸ್ರೂರು ಬಿ.ನರಸಿಂಹ ಪ್ರಭು ನೇರವೇರಿಸಿದರು. ನಂತರ ಮಾತನಾಡಿದ ಅವರು ಸಮಾಜದ ಸರ್ವರೂ ಪಂದ್ಯಾಟದಲ್ಲಿ ಪಾಲ್ಗೊಂಡು ಒಗ್ಗಟ್ಟನ್ನು ಪ್ರದರ್ಶಿಸಬೇಕು. ಇಂತಹ ಪಂದ್ಯಾಟಗಳು ನಿರಂತರ ಆಯೋಜಿಸಲು ಕರೆನೀಡಿದರು. ಅಲ್ಲದೇ ಸಮಾಜದ ಉದಯೋನ್ಮುಕ ಆಟಗಾರರಿಗೆ ಇಂತಹ ಪಂದ್ಯಾಟಗಳು ವೇದಿಕೆಯಾಗಲಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸ್ರೂರು ಜಿ.ಎಸ್.ಬಿ. ಸಭಾದ ಆದ್ಯಕ್ಷರಾದ ಬಿ.ರಘುವೀರ ಆಚಾರ್ಯ ವಹಿಸಿ ಪ್ರಾಸ್ತಾವಿಕ ಮಾತನಾಡುತ್ತಾ ಪಂದ್ಯಾಟದ ಸಮಗ್ರ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಬಾಲಕೃಷ್ಣ ಕಿಣಿ ಜಪ್ತಿ, ಬಿ.ನರಸಿಂಹರಾಜ ಪ್ರಭು ಹಾಗೂ ರಾಘವೇಂದ್ರ ಪ್ರಭು ಉಪಸ್ಥಿತರಿದ್ದರು. ಬಸ್ರೂರು ಜಿ.ಎಸ್.ಬಿ ಸಭಾದ ಕಾರ್ಯದರ್ಶಿ ರಂಗನಾಥ ಪಡಿಯಾರ ಆಮ್ಗೆಲೆ ಟ್ರೋಫಿ-೨೦೧೭ನ್ನು ಅನಾವರಣಗೊಳಿಸಿದರು. ಗಣೇಶ ಕಾಮತ್ ಸ್ವಾಗತಿಸಿ ಸತೀಶ ಆಚಾರ್ಯ ಧನ್ಯವಾದವಿತ್ತರು. ಮಂಜುನಾಥ ಪಾಳ್ ಮತ್ತು ಬಿ.ಎಸ್. ದಾಮೋದರ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.

Leave a Reply