Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ತಾಲೂಕಿನಲ್ಲಿ ನಿಷೇಧಗೊಂಡಿದ್ದ ಮರಳುಗಾರಿಕೆ ಪುನರಾರಂಭ
    ವಿಶೇಷ ವರದಿ

    ತಾಲೂಕಿನಲ್ಲಿ ನಿಷೇಧಗೊಂಡಿದ್ದ ಮರಳುಗಾರಿಕೆ ಪುನರಾರಂಭ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪುರ: ಕಳೆದ ಒಂದು ತಿಂಗಳುಗಳಿಂದ ತಲೆದೂರಿದ್ದ ಮರಳಿನ ಅಭಾವ ಇನ್ನುಮುಂದೆ ಕೊನೆಗೊಳ್ಳಲಿದ್ದು, ತಾಲೂಕಿನಲ್ಲಿ ಅರ್ಧಕ್ಕೆ ನಿಂತಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತೆ ಚಾಲನೆ ದೊರಕುವ ಲಕ್ಷಣ ಕಂಡುಬಂದಿದೆ. ಮೀನುಗಳ ಸಂತಾನೋತ್ವತ್ತಿಯ ಕಾರಣವೊಡ್ಡಿ ಮರಳುಗಾರಿಕೆಯನ್ನು ನಿಷೇಧಿಸಿದ್ದರಿಂದ ವಿವಿಧ ಕಾಮಗಾರಿಗಳಿಗೆ ಅಗತ್ಯವಿರುವ ಮರಳಿಗೆ ಕೊರತೆ ಉಂಟಾಗಿ, ಸಂಗ್ರಹಿಸಿಟ್ಟ ಮರಳಿನ ಬೆಲೆಯೂ ಗಗನಕ್ಕೇರಿತ್ತು. ಇದೀಗ ಮರಳುಗಾರಿಕೆಯನ್ನು ಮತ್ತೆ ಆರಂಭಿಸಲು ಸಾರ್ವಜನಿಕ ವಲಯದಿಂದ ಯಾವುದೇ ಆಕ್ಷೇಪವಿಲ್ಲದಿರುವುದರಿಂದ ಮರಳುಗಾರಿಕೆಗೆ ಚಾಲನೆ ದೊರೆಯಲಿದೆ.

    Click Here

    Call us

    Click Here

    ಸ್ಥಳೀಯ ಪರಿಸ್ಥಿತಿಯನ್ನು ಮನಗಂಡು ಮಳೆಗಾಲ ಹಾಗೂ ಮೀನು ಸಂತಾನೋತ್ಪತ್ತಿ ಸಮಯದಲ್ಲಿ ಸಿಆರ್‌ಝಡ್‌ ಪ್ರದೇಶದಲ್ಲಿ ಮರಳುಗಾರಿಕೆಯಿಂದ ತೊಂದರೆಯಿಲ್ಲದಿದ್ದರೇ, ಮರಳುಗಾರಿಕೆಗೆ ಅವಕಾಶ ನೀಡಬಹುದೆಂದು ಜಿಲ್ಲಧಿಕಾರಿಗಳಿಗೆ ರಾಜ್ಯ ಪರಿಸರ ಆಘಾತ ಅಂದಾಜೀಕರಣ ಪ್ರಾಧಿಕಾರ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಸಿಆರ್‌ಝಡ್‌ ಮರಳು ಉಸ್ತುವಾರಿ ಸಮಿತಿ ಸಭೆ ಮಳೆಗಾಲದಲ್ಲಿ ಮರಳು ತೆಗೆಯುವುದನ್ನು ಜು.16ರಿಂದ ಆರಂಭಿಸಲು ನಿರ್ಧರಿಸಿತ್ತು. ಇದಕ್ಕೆ ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು ನಿರ್ದಿಷ್ಟ ಕಾರಣಗಳೊಂದಿಗೆ ಜು. 15ರೊಳಗೆ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಬಹುದು ಎಂದು ಸಮಿತಿ ಸದಸ್ಯ ಕಾರ್ಯದರ್ಶಿಯಾದ ಹಿರಿಯ ಭೂವಿಜ್ಞಾನಿಯವರ ಪ್ರಕಟನೆಯಲ್ಲಿ ತಿಳಿಸಲಾಗಿತ್ತು. ಆದರೆ ಈವರೆಗೆ ಯಾವುದೇ ಆಕ್ಷೇಪ ಬಂದಿಲ್ಲ ಎನ್ನಲಾಗಿದೆ.

    ಮರಳು ಸ್ಥಗಿತ-ಬಾರಿ ಹೊಡೆತ

    ಮರಳುಗಾರಿಕೆ ಸ್ಥಗಿತಗೊಂಡದ್ದರಿಂದ ಮರಳಿನ ಅಭಾವದಿಂದಾಗಿ ಹಲವು ಕಾಮಗಾರಿಗಳು ಸ್ಥಗಿತಗೊಂಡಿದ್ದವು. ಬೇರೆ ಬೇರೆ ಊರುಗಳಿಂದ ಬಂದಿದ್ದ ನೂರಾರು ಕೂಲಿ ಕಾರ್ಮಿಕರು ತಮ್ಮ ಸ್ವಸ್ಥಾನಗಳಿಗೆ ತೆರಳಿದ್ದರು. ನಿರ್ಮಾಣ ಕ್ಷೇತ್ರವೇ ಬಹುಪಾಲು ಸ್ಥಗಿತಗೊಂಡು ಇದಕ್ಕೆ ಸಂಬಂಧಿಸಿದ್ದ ಉದ್ಯಮಗಳಿಗೂ ಹಿನ್ನಡೆಯುಂಟಾಗಿತ್ತು. ಈಗ ಮರಳುಗಾರಿಕೆಗೆ ಮತ್ತೆ ಅನುಮತಿ ನೀಡಿರುವುದು ಉದ್ಯಮವನ್ನು ಚೇತರಿಸಿಕೊಳ್ಳುವಂತೆ ಮಾಡಿದೆ. ಮನೆ, ಸೇತುವೆ, ಕಟ್ಟಡ ಸೇರಿದಂತೆ ನೂರಾರು ಸರಕಾರಿ ಹಾಗೂ ಸರಕಾರೇತರ ಕಾಮಗಾರಿಗಳೂ ಮತ್ತೆ ಚುರುಕುಗೊಳ್ಳುವ ಸಾಧ್ಯತೆ ಇದೆ.

    ದುಪ್ಪಟ್ಟು ತೆತ್ತರು-ಮರಳು ಹೊತ್ತರು!

    ಮರಳುಗಾರಿಕೆ ನಿಷೇಧದಿಂದಾಗಿ ದಾಸ್ತಾನು ಮಾಡಲಾಗಿದ್ದ ಮರಳಿನ ಬೆಲೆ ಗಗನಕ್ಕೇರಿತ್ತು. ನಿಷೇಧದ ನಡುವೆಯೂ ಕೆಲವೆಡೆ ಪೊಲೀಸರ ಕಣ್ತಪ್ಪಿಸಿ ದೂರದ ಊರುಗಳಿಗೆ ಸಾಗಾಟವೂ ನಡೆಯುತ್ತಿತ್ತು. ಇದರಿಂದ ಸರಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿತ್ತು. ನಿಷೇಧ ತೆರವಿನಿಂದಾಗಿ ಬಿಲ್ ಪಾವತಿಸಿ ಕಾನೂನು ಬದ್ದವಾಗಿಯೇ ಮರಳು ಸಾಗಿಸಬಹುದಾಗಿದೆ.

    Click here

    Click here

    Click here

    Call us

    Call us

    ಅನಧಿಕೃತ ಹೊಯಿಗೆ ಕಡುವಿನ ಬಗ್ಗೆ ಆಕ್ಷೇಪದ ಹೊಗೆ

    ಕುಂದಾಪುರ ತಾಲೂಕಿನಲ್ಲಿರುವ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಮರಳಿನ ಕಡುವಿನ ಬಗ್ಗೆ ಜನರು ಆಕ್ಷೇಪ ವ್ಯಕ್ತಪಡಿಸಿದ್ದರು. ಎಲ್ಲೆಡೆಯೂ ಹಗಲು ರಾತ್ರಿಯೆನ್ನದೇ ಅವ್ಯಹತವಾಗಿ ಮರಳು ಸಾಗಾಟವಾಗುತ್ತಿತ್ತು. ತಾಲೂಕಿನ 4-5 ಹೊಯಿಗೆ ಕಡುವುಗಳು ಮಾತ್ರ ಅಧಿಕೃತವಾದದ್ದು ಎನ್ನಲಾಗಿದೆ. ಆದರೆ 10ಕ್ಕೂ ಹೆಚ್ಚು ಹೊಂಗೆ ಕಡಲು ಕುಂದಾಪುರದ ತಾಲೂಕಿನಲ್ಲಿದೆ. ಈ ಬಗ್ಗೆ ಕುಂದಾಪುರ ಪುಸಭೆಯ ಸಾಮಾನ್ಯ ಸಭೆಯಲ್ಲಿಯೂ ಕೋಲಾಹಲವೆದ್ದಿತ್ತು. ರಸ್ತೆ, ಜನಜೀವನಕ್ಕೆ ತೊಂದರೆಯಾಗುವ ಹಾಗೂ ಅನಧಿಕೃತವಾಗಿ ಬೇರೆ ಸರ್ವೆ ನಂಬರಿನಲ್ಲಿ ಮರಳುಗಾರಿಕೆ ನಡೆಸುತ್ತಿರುವ ಪ್ರದೇಶವನ್ನು ಗುರುತಿಸಿ ಅಲ್ಲಿ ನಿಷೇಧ ಹೇರಬೇಕೆಂದು ಪುರಸಭೆ ಸದಸ್ಯರು ಆಗ್ರಹಿಸಿದ್ದರು.

    ಹೊರಜಿಲ್ಲೆಗೆ ಮರಳು ಸಾಗಾಟ ಬೇಡವೇ?

    ಕುಂದಾಪುರ ತಾಲೂಕಿನ ಮರಳು ಸ್ಥಳೀಯರಿಗಿಂತ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಹೆಚ್ಚು ಸಾಗಿಸಲ್ಪಡುತ್ತಿದೆ. ಇದರಿಂದ ಮರಳಿನ ಬೆಲೆಯೂ ಗಗನಕ್ಕೇರಿದೆ. ಕಟ್ಟಡ  ಮಾಲಕರು ಹಾಗೂ ಸಾರ್ವಜನಿಕರಿಗೆ ಮರಳಿನ ಅಭಾವ ಉಂಟಾಗಿ ದುಪ್ಪಟ್ಟು ಹಣವನ್ನು ನೀಡಿ ಮರಳು ಖರೀದಿಸಬೇಕಾದ ಸ್ಥಿತಿ ಇದೆ.  ಹೊರ ಜಿಲ್ಲೆಗಳಿಗೆ ಹೋಗುವ ಮರಳನ್ನು ನಿಷೇಧಿಸಿ ಇಲ್ಲಿನವರಿಗೇ ಮರಳು ದೊರೆಯುವಂತೆ ಮಾಡಬೇಕು ಹಾಗೂ ಮರಳಿಗೆ ಸರಕಾರವೇ ದರ ನಿಗದಿ ಮಾಡಬೇಕು ಎಂದು ಪ್ರತಿಭಟಿಸಿ ಆಗ್ರಹಿಸಿದ್ದರು. ಆದರೆ ಹೊರಜಿಲ್ಲೆಗಳಲ್ಲಿ ಮರಳಿನ ಅಭಾವವಿರುವುದರಿಂದ ಸಹಜವಾಗಿ ಇಲ್ಲಿನ ಮರಳಿಗೆ ಬೇಡಿಕೆ ಹೆಚ್ಚಿದೆ. ಅನ್ಯಜಿಲ್ಲೆಯವರಿಗೆ ಮರಳು ನಿಷೇಧಿಸುವುದಕ್ಕಿಂತ ಹೊರ ಜಿಲ್ಲೆಯವರಿಗೆ ಹಾಗೂ ಜಿಲ್ಲೆಯವರಿಗೆ ಬೇರೆ ಬೇರೆ ದರ ನಿಗದಿ ಮಾಡುವುದಲ್ಲದೇ, ಹೊರಜಿಲ್ಲೆಗೆ ಸಾಗಾಟವಾಗುವ ಮರಳಿನ ಪ್ರಮಾಣದಲ್ಲಿ ಸ್ಪಲ್ಪ ಕಡಿಮೆ ಮಾಡಿದರೆ ಎಲ್ಲರಿಗೂ ನ್ಯಾಯ ದೊರೆತಂತಾಗುವುದು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

    ಕುಂದಾಪ್ರ ಡಾಟ್ ಕಾಂ- editor@kundapra.com

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    Editor Desk
    • Website
    • Facebook
    • X (Twitter)

    Related Posts

    ಸೈಕಲ್‌ನಲ್ಲಿ 3,300 ಕಿಮೀ ಕ್ರಮಿಸಿ ಲಡಾಕ್ ಯಾತ್ರೆ ಪೂರೈಸಿದ ಹಳ್ಳಿಹೊಳೆಯ ಯುವಕ ದಿನೇಶ್‌ ಬೋವಿ

    30/09/2025

    ಶಿಥಿಲ ಮನೆಯಲ್ಲಿಯೇ 12 ಮಂದಿ ವಾಸ. ಇದು ಅಸಹಾಯಕ ಕುಟುಂಬದ ಕಣ್ಣೀರ ಕಥೆ

    03/08/2024

    ಹುಲ್ಕಡಿಕೆ ಜನರ ಬದುಕಿಗಿಲ್ಲ ಭರವಸೆ! ಅಪಾಯಕಾರಿ ಹೊಳೆದಾಟಿ ಶಿಕ್ಷಣ ಪಡೆಯುತ್ತಿರುವ ವಿಶೇಷ ಚೇತನ ಮಕ್ಕಳು

    02/07/2024

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಎಸ್‌ಸಿಡಿಸಿಸಿ ಬ್ಯಾಂಕ್ ತೆಕ್ಕಟ್ಟೆ ಶಾಖೆ: ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ
    • ಬೈಂದೂರು ಉತ್ಸವ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಗಂಟಿಹೊಳೆ ನೇತೃತ್ವದಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಸಭೆ
    • ರಾಜ್ಯ ಮಟ್ಟದ ಐಡಿಯಾಥಾನ್ ಸ್ಪರ್ಧೆಯಲ್ಲಿ ಎಂಐಟಿ ಕುಂದಾಪುರದ ಅಧ್ಬುತ ಸಾಧನೆ
    • ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜು: ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d