ಮಣೂರು ಫ್ರೆಂಡ್ಸ್: ಗರಿಕೆಮಠ ವೇ.ಮೂ ರಾಮಪ್ರಸಾದ ಅಡಿಗ ಅವರಿಗೆ ಸನ್ಮಾನ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ದೇವಳಗಳು ಉನ್ನತಿಯಾಗಬೇಕಾದರೆ ಕಾಲಕ್ಕನುಗುಣವಾಗಿ ಬ್ರಹ್ಮಕಲಶದಂತಹ ಕಾರ್ಯಗಳು ನಡೆಯುತ್ತಿರಬೇಕು ಆಗ ಮಾತ್ರ ದೇವಳ ಪಾವಿತ್ರತೆ ಹೊಂದಿ ಭಕ್ತರ ಇಷ್ಠಾರ್ಥ ಪ್ರಾಪ್ತಿಯಾಗುತ್ತದೆ ಎಂದು ಗರಿಕೆಮಠ ವೇ.ಮೂ ರಾಮಪ್ರಸಾದ ಅಡಿಗ ಹೇಳಿದರು.

Call us

Click Here

ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವ ಕಾರ್ಯಕ್ರಮದ ಅಂಗವಾಗಿ ಮಣೂರು ಫ್ರೆಂಡ್ಸ್ ಮಣೂರು ಹಮ್ಮಿಕೊಂಡ ಸಾಂಸ್ಕೃತಿಕ ಸಭಾಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ ದೇವಳಗಳ ಕಲೆ ಏರಿಸುವ ಪ್ರಕ್ರೀಯೆಯಿಂದ ದೇವರು ಸದಾಕಾಲ ಸಂತುಷ್ಟನಾಗಿ ನೆಲೆಯೂರುತ್ತಾನೆ ಇಲ್ಲವಾದಲ್ಲಿ ನಾವುಗಳು ಕಾಣುವಂತೆ ದೇವಳಗಳ ಪ್ರಸಿದ್ಧಿ ಕುಂಠಿತಗೊಳ್ಳುತ್ತದೆ.

ಕಾಲ ಬಂದಾಗ ಅಂತಹ ದೇವಳಗಳು ತನ್ನ ಧಾರ್ಮಿಕ ಕಾರ್ಯಗಳ ಮೂಲಕ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತದೆ ಇದಕ್ಕೆ ಮಣೂರು ಶ್ರೀ ಮಹಾಲಿಂಗೇಶ್ವರ ಹಾಗೂ ಹೇರಂಬ ಗಣಪತಿಯೇ ಸಾಕ್ಷಿ ಎಂದು ದೇವಳದ ಆಡಳಿತ ಕಾರ್ಯವೈಕರಿಯನ್ನು ಪ್ರಶಂಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಹಿರಿಯ ಕೃಷಿಕ ಸುಧಾಕರ ಶೆಟ್ಟಿ ಕಾಸನಗುಂದು,ನಿವೃತ್ತ ಮುಖ್ಯ ಶಿಕ್ಷಕ ಉದಯ್ ಮಯ್ಯ,ನಿವೃತ್ತ ಯೋಧ ರವಿಚಂದ್ರ ಶೆಟ್ಟಿ ತೆಕ್ಕಟ್ಟೆ ಇವರುಗಳನ್ನು ಸನ್ಮಾನಿಸಲಾಯಿತು. ಅನಾರೋಗ್ಯ ಪೀಡಿತರಿಗೆ ಸಹಾಯಹಸ್ತ ವಿತರಿಸಲಾಯಿತು.

ಅಧ್ಯಕ್ಷತೆಯನ್ನು ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಸತೀಶ್ ಹೆಚ್ ಕುಂದರ್,ಕೋಟ ಅಮೃತೇಶ್ವರಿ ಆಡಳಿತ ಮಂಡಳಿಯ ಟ್ರಸ್ಟಿ ಎಂ.ಸುಬ್ರಾಯ ಆಚಾರ್ಯ, ಮಣೂರು ದೇವಳದ ಟ್ರಸ್ಟಿ ಅಶೋಕ್ ಶೆಟ್ಟಿ, ಕೇದಾರ ಕ್ಲಿನಿಕ್ ಕೋಟ ಇದರ ವೈದ್ಯೆ ವಿದ್ಯಾ ಹಂದೆ, ಭಾರತೀಯ ದೂರಸಂಪರ್ಕ ಕೇಂದ್ರ ಇದರ ನಿವೃತ್ತ ಅಧಿಕಾರಿ ವಿಷ್ಣುಮೂರ್ತಿ ಮಯ್ಯ,ನಿವೃತ್ತ ಉಪನ್ಯಾಸಕ ಅರುಣಾಚಲ ಮಯ್ಯ,ನಿವೃತ್ತ ಮುಖ್ಯ ಶಿಕ್ಷಕ ಎಂ ಎನ್ ಮಧ್ಯಸ್ಥ, ಭಾರತೀಯ ಜೀವವಿಮಾ ನಿಗಮದ ಅಧಿಕಾರಿ ದಿನೇಶ್ ಹೆಗ್ಡೆ, ಒಡಗಿನ ನಂದಿಕೇಶ್ವರ ದೇವಳದ ಪಾತ್ರಿ ಪ್ರಕಾಶ್ ಶೆಟ್ಟಿ, ಕೋಟದ ನೋಟರಿ ವಕೀಲ ಕರುಣಾಕರ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ನಾಗರತ್ನ ಹೇರ್ಳೆ ಸ್ವಾಗತಿಸಿ ನಿರೂಪಿಸಿದರು.

Click here

Click here

Click here

Click Here

Call us

Call us

ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವ ಕಾರ್ಯಕ್ರಮದ ಅಂಗವಾಗಿ ಮಣೂರು ಫ್ರೆಂಡ್ಸ್ ಮಣೂರು ಹಮ್ಮಿಕೊಂಡ ಸಾಂಸ್ಕೃತಿಕ ಸಭಾಕಾರ್ಯಕ್ರಮದಲ್ಲಿ ಗರಿಕೆಮಠ ವೇ.ಮೂ ರಾಮಪ್ರಸಾದ ಅಡಿಗ ಇವರನ್ನು ಸನ್ಮಾನಿಸಲಾಯಿತು. ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಸತೀಶ್ ಹೆಚ್ ಕುಂದರ್, ಕೋಟ ಅಮೃತೇಶ್ವರಿ ಆಡಳಿತ ಮಂಡಳಿಯ ಟ್ರಸ್ಟಿ ಎಂ. ಸುಬ್ರಾಯ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Leave a Reply