ಸೆಲ್ಯೂಟ್ ಟು ಸೈಲೆಂಟ್ ವರ್ಕರ್: ಬೈಂದೂರು ಸಿಟಿ ಜೆಸಿಐನಿಂದ ಇಬ್ಬರಿಗೆ ಸನ್ಮಾನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು:
ಜೆಸಿಐ ಬೈಂದೂರು ಸಿಟಿಯ ಸೆಲ್ಯೂಟ್ ಟು ಸೈಲೆಂಟ್ ವರ್ಕರ್ ಕಾರ್ಯಕ್ರಮವು ದೊಂಬೆ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ಇತ್ತೀಚಿಗೆ ನಡೆಯಿತು.

Click Here

Call us

Click Here

ಈ ಕಾಯಕ್ರಮದ ಅಧ್ಯಕ್ಷತೆಯನ್ನು ಸಿಟಿ ಜೆಸಿಐ ಅಧ್ಯಕ್ಷ ನರೇಂದ್ರ ಶೇಟ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಂಜು ಡಿ., ಅಧ್ಯಕ್ಷರು ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘ ಉಪ್ಪುಂದ ವಹಿಸಿ ಜೆಸಿಐ ಬಗ್ಗೆ ಮೆಚ್ಚುಗೆಯ ಮಾತನಾಡಿದರು

ಈ ಕಾರ್ಯಕ್ರಮದಲ್ಲಿ ಸೆಲ್ಯೂಟ್ ಟು ಸೈಲೆಂಟ್ ವರ್ಕರ್ ಆಗಿ ಸಮಾಜ ಸೇವಕಿ ಹಾಗೂ ಎಸ್.ಎಲ್.ಆರ್.ಎಂ ಘಟಕದ ಮೇಲ್ವಿಚಾರಕಿ ಸುನೀತಾ ಮರವಂತೆ ಹಾಗೂ ಪೌರಕಾರ್ಮಿಕ ಹರೀಶ ಗಣಪ ಕೊರಗ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅದ್ಯಕ್ಷೆ ಸವಿತಾ ದಿನೇಶ್ ಗಾಣಿಗ ಹಾಗೂ ಪೂರ್ವಧ್ಯಕ್ಷರು. ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಸತೀಶ್ ಎಂ ಧನ್ಯವಾದಗೈದರು.

Leave a Reply